Tag: ಎಲೆಕ್ಷನ್ ಫಂಡ್

  • ಓಲಾ ಬ್ಯಾನ್ ವಾಪಸ್ – ಎಲೆಕ್ಷನ್ ಫಂಡ್ ಬಂತಾ ಎಂದು ಖರ್ಗೆ ಕಾಲೆಳೆದ ಟ್ವೀಟಿಗರು!

    ಓಲಾ ಬ್ಯಾನ್ ವಾಪಸ್ – ಎಲೆಕ್ಷನ್ ಫಂಡ್ ಬಂತಾ ಎಂದು ಖರ್ಗೆ ಕಾಲೆಳೆದ ಟ್ವೀಟಿಗರು!

    ಬೆಂಗಳೂರು: ಓಲಾ ಸಂಚಾರ ನಿಷೇಧ ಆದೇಶ ವಾಪಸ್ ಪಡೆದುಕೊಂಡಿದೆ ಎಂದು ಟ್ವೀಟ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ನಯವಾಗಿಯೇ ಕಾಲೆಳೆಯುತ್ತಿದ್ದಾರೆ. ಚುನಾವಣೆಗೆ ಫಂಡ್ ಬಂದಿರಬೇಕು ಅದಕ್ಕಾಗಿ ಎರಡೇ ದಿನದಲ್ಲಿ ಆದೇಶ ವಾಪಸ್ ಆಗಿದೆ ಎಂದು ಟ್ವೀಟ್ ಗಳು ಶುರುವಾಗಿದೆ.

    ಆರು ತಿಂಗಳಿಗೆ ಓಲಾ ಸಂಚಾರವನ್ನು ನಿಷೇಧಿಸಿದ ಸಾರಿಗೆ ಇಲಾಖೆ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ನಿಷೇಧ ವಾಪಸ್ ಪಡೆದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿ, ಇಂದಿನಿಂದ ಎಂದಿನಂತೆ ಓಲಾ ಸಂಚರಿಸಲಿದೆ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಿಗೇ ಒಲಾ ಕ್ಯಾಬ್ ನಿಷೇಧ ವಾಪಸ್ ತೆಗೆದುಕೊಂಡ ಸರ್ಕಾರವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಶುರುವಾಯಿತು.

    https://twitter.com/girimm09/status/1109687565425074177

    ಎಲೆಕ್ಷನ್ ಫಂಡ್ ಗೆ ಈ ಡ್ರಾಮಾನಾ ಅಂತಾ ಖರ್ಗೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆಯಾಯಿತು. ನಿಷೇಧ ಹೇರಿದ ಎರಡೇ ದಿನದಲ್ಲಿ ಹೇಗೆ ಸಮಸ್ಯೆ ಬಗೆಹರಿದಿದೆ? ಓಲಾ ನಿಷೇಧವನ್ನು ಅಷ್ಟು ಸುಲಭವಾಗಿ ಎರಡು ದಿನದಲ್ಲಿ ಬಗೆಹರಿಸಿದ್ದು ಹೇಗೆ? ಇದು ಎಲೆಕ್ಷನ್ ಫಂಡ್ ಗೆ ಮಾಡಿರುವ ಗಿಮಿಕ್ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

    ಇನ್ನು ಕೆಲವರು ಪೀಕ್ ಹವರ್ ಶುಲ್ಕಕ್ಕೆ ಕಡಿವಾಣ ಹಾಕಿ. ಇಲ್ಲದಿದ್ದರೆ ಸರ್ಕಾರವೇ ಒಂದು ಹೊಸ ಆ್ಯಪ್ ಬಿಡುಗಡೆ ಮಾಡಲಿ ಎಂದು ಮನವಿ ಮಾಡಿದ್ದಾರೆ. ಫಸ್ಟ್ ಬ್ಯಾನ್ ಮಾಡಿದ್ರಿ, ಈಗ ಬ್ಯಾನ್ ವಾಪಸ್ ಪಡೆದ್ರಿ. ಆದರೆ ಇದಕ್ಕೆ ಸ್ಪಷ್ಟನೆ ಯಾಕೆ ಕೊಟ್ಟಿಲ್ಲ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

    ಏನ್ ಡೀಲ್ ಮಾಡಿದ್ರಿ.? ಈ ಆದೇಶದ ಮೂಲಕ ಎಷ್ಟು ಎಲೆಕ್ಷನ್ ಫಂಡ್ ಎತ್ತಿದ್ರಿ.? ಎರಡೇ ದಿನದಲ್ಲಿ ಬ್ಯಾನ್ ವಾಪಸ್ ಪಡೆಯುತ್ತೀರಿ ಎಂದರೆ ಬ್ಯಾನ್ ಮಾಡುವುದಕ್ಕೆ ಅಷ್ಟು ಅರ್ಜೆಂಟ್ ಏನಿತ್ತು ಎಂದು ಇನ್ನೊಬ್ಬರು ಟ್ವೀಟ್ ಮೂಲಕ ಪ್ರಿಯಾಂಕ್ ಖರ್ಗೆಯನ್ನು ಪ್ರಶ್ನಿಸಿದ್ದಾರೆ.

    ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಟ್ಯಾಕ್ಸಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದ ಹಿನ್ನೆಲೆಯಲ್ಲಿ ಓಲಾ ಕಂಪನಿಗೆ ನೀಡಿದ್ದ ಪರವಾನಿಗೆಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ಆದೇಶ ಪ್ರಶ್ನಿಸಿ ಸೋಮವಾರ ಕೋರ್ಟ್ ಗೆ ಹೋಗಲು ಓಲಾ ನಿರ್ಧರಿಸಿತ್ತು. ಆದರೆ ಇದಕ್ಕೂ ಮುನ್ನವೇ ಸಚಿವರ ಟ್ವೀಟ್ ಬಂದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.