Tag: ಎಲೆಕ್ಟ್ರಿಕ್ ಸ್ಕೂಟರ್

  • ಬೆಂಗಳೂರಿನ ನಡು ರಸ್ತೆಯಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್‌ ಸ್ಕೂಟರ್‌

    ಬೆಂಗಳೂರಿನ ನಡು ರಸ್ತೆಯಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್‌ ಸ್ಕೂಟರ್‌

    ಬೆಂಗಳೂರು: ನಡು ರಸ್ತೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ (Electric Scooter) ಹೊತ್ತಿ ಉರಿದ ಘಟನೆ ಆರ್‌ಆರ್‌ ನಗರದ (RR Nagara) ಬೆಮೆಲ್ ಲೇಔಟ್ ರಸ್ತೆಯಲ್ಲಿ ನಡೆದಿದೆ.

    ಶಿವಾನಂದ ಎಂಬುವರು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಆರ್‌ಆರ್‌ ನಗರದ ಕಚೇರಿಗೆ ಬಂದಿದ್ದರು. ನಂತರ ಕಚೇರಿಯಿಂದ ನಾಗರಭಾವಿಗೆ ತೆರಳಲು ಸ್ಕೂಟರ್‌ ತೆಗೆದು ಹೊರ ಬರುವಾಗ ಸಣ್ಣ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ಜನರ ಸಮಸ್ಯೆ ಕಂಡಾಗ ಮಾತೃ ಹೃದಯ ಇದ್ದವರಿಗೆ ಕಣ್ಣೀರು ಬರುತ್ತೆ, ಕಟುಕರಿಗಲ್ಲ: ಹೆಚ್‌ಡಿಕೆ

    ಹೊಗೆ ಬರುತ್ತಿರುವುದನ್ನು ನೋಡಿ ರಸ್ತೆ ಬದಿ ಶಿವಾನಂದ ಸ್ಕೂಟರ್‌ ನಿಲ್ಲಿಸಿದ್ದಾರೆ. ಈ ವೇಳೆ ಕ್ಷಣ ಮಾತ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‌ ಹೊತ್ತಿ ಉರಿದಿದೆ. ಸ್ಥಳೀಯರು ಬ್ಯಾಟರಿ ಹೊರ ತೆಗೆದು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಪಟಾಕಿ – ಪುಂಡರಿಂದ ವಾಹನಗಳಿಗೆ ಕಿರಿಕ್‌

    ಎಲೆಕ್ಟ್ರಿಕ್ ಬೈಕ್ ಸುಟ್ಟು ಕರಕಲಾಗಿದ್ದು ಸ್ಥಳಕ್ಕೆ ಆರ್ ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಇಲ್ಲದ್ದಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ದಂಡ

    ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಇಲ್ಲದ್ದಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ದಂಡ

    ತಿರುವನಂತಪುರಂ: ಕೇರಳ ಸಂಚಾರಿ ಪೊಲೀಸರು(Kerala Traffic Police) ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕರಿಗೆ ಮಾನ್ಯವಾದ ಮಾಲಿನ್ಯ ನಿಯಂತ್ರಣ (Pollution Under Control) ಪ್ರಮಾಣ ಪತ್ರವನ್ನು ಹೊಂದಿಲ್ಲದ ಕಾರಣಕ್ಕೆ ದಂಡ ಹಾಕಿ ಸುದ್ದಿಯಾಗಿದ್ದಾರೆ.

    ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಚೇರಿಯಲ್ಲಿ ಸೆಪ್ಟೆಂಬರ್ 6ರಂದು ಏಥರ್ 450X (Ather 450X) ಸ್ಕೂಟರ್‌ ಮಾಲೀಕರಿಗೆ 250 ರೂ. ದಂಡ ವಿಧಿಸಿದ್ದಾರೆ. ಪೊಲೀಸರು ನೀಡಿದ ಚಲನ್‌ ಪ್ರತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 213 (5) (ಇ) ಅಡಿ ದಂಡ ವಿಧಿಸಲಾಗಿದೆ. ನೆಟ್ಟಿಗರು ಈಗ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ(Nitin Gadkari) ಅವರಿಗೆ ಟ್ಯಾಗ್‌ ಮಾಡಿ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬೇಕೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಳ ಉಡುಪು ಖರೀದಿಸಲು ದೆಹಲಿಗೆ ಹೋಗಿದ್ದೆ- ಜಾರ್ಖಂಡ್ ಸಿಎಂ ಸಹೋದರನ ವಿವಾದಾತ್ಮಕ ಹೇಳಿಕೆ

    ಪೊಲೀಸರು ಇಂತಹ ವಿಚಿತ್ರ ಚಲನ್ ನೀಡುತ್ತಿರುವುದು ಇದೇ ಮೊದಲಲ್ಲ. ಜುಲೈನಲ್ಲಿ ಕೇರಳದ ವ್ಯಕ್ತಿಯೊಬ್ಬರು ಸಾಕಷ್ಟು ಇಂಧನವಿಲ್ಲದೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಚಲಾಯಿಸಿದ್ದಕ್ಕಾಗಿ ದಂಡವನ್ನು ಹಾಕಿದ್ದರು.

    ಏಥರ್ ಸ್ಕೂಟರ್ 5.4 kW ಬ್ರಶ್‌ಲೆಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 2.4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ. ಸ್ಕೂಟರ್ 3.9 ಸೆಕೆಂಡುಗಳಲ್ಲಿ ಝೀರೋದಿಂದ 40 ಕಿಮೀ/ಗಂಟೆಗೆ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 80 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿರುವ ಸ್ಕೂಟರ್‌ ಒಂದು ಬಾರಿ ಚಾರ್ಜ್‌ ಮಾಡಿದರೆ 75 ಕಿ.ಮೀವರೆಗೆ ಸಂಚರಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

    ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

    ಹೈದರಾಬಾದ್: ಮನೆಯಲ್ಲಿ ಚಾರ್ಜ್‍ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ತೆಲಂಗಾಣದ ನಿಜಾಮಾಬಾದ್‍ನಲ್ಲಿ ಬುಧವಾರ ನಡೆದಿದೆ.

    ಬಿ ರಾಮಸ್ವಾಮಿ (80) ಮೃತ ವ್ಯಕ್ತಿ. ಟೈಲರ್ ಆಗಿರುವ ಅವರ ಮಗ ಬಿ ಪ್ರಕಾಶ್ ಒಂದು ವರ್ಷದಿಂದ ಇವಿ ಸ್ಕೂಟರ್ ಬಳಸುತ್ತಿದ್ದರು. ಘಟನೆ ಕುರಿತು ಮಾತನಾಡಿದ ನಿಜಾಮಾಬಾದ್‍ನ ಸಹಾಯಕ ಪೊಲೀಸ್ ಕಮಿಷನರ್ ಎ ವೆಂಕಟೇಶ್ವರಲು, ಸ್ಕೂಟರ್ ತಯಾರಕ ಮತ್ತು ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    ತ್ರೀ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಯಿನಾಥ್ ಹೇಳಿಕೆ ಪ್ರಕಾರ, ಪ್ರಕಾಶ್ ಅವರು 12:30 ರ ಸುಮಾರಿಗೆ ಸ್ಕೂಟರ್‌ನಿಂದ ಬ್ಯಾಟರಿಯನ್ನು ತೆಗೆದು ಚಾರ್ಜ್ ಮಾಡಲು ಇಟ್ಟುಕೊಂಡಿದ್ದರು. ಅವರ ತಂದೆ ರಾಮಸ್ವಾಮಿ, ತಾಯಿ ಕಮಲಮ್ಮ ಮತ್ತು ಮಗ ಕಲ್ಯಾಣ್ ಲಿವಿಂಗ್ ರೂಮಿನಲ್ಲಿ ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಮತ್ತು ಅವರ ಪತ್ನಿ ಕೃಷ್ಣವೇಣಿ ಕೂಡ ಬೆಂಕಿಯನ್ನು ನಂದಿಸುವಾಗ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಮಸ್ವಾಮಿ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಸಾಗಿಸುವಾಗ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • 1 ದಿನದಲ್ಲೇ 600 ಕೋಟಿ ಮೌಲ್ಯದ 80 ಸಾವಿರ ಓಲಾ ಸ್ಕೂಟರ್ ಮಾರಾಟ

    1 ದಿನದಲ್ಲೇ 600 ಕೋಟಿ ಮೌಲ್ಯದ 80 ಸಾವಿರ ಓಲಾ ಸ್ಕೂಟರ್ ಮಾರಾಟ

    ನವದೆಹಲಿ: ಮಾರಾಟ ಪ್ರಕ್ರಿಯೆ ಆರಂಭಗೊಂಡ ಮೊದಲ ದಿನವೇ 600 ಕೋಟಿ ರೂ. ಮೌಲ್ಯದ 80 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಗೊಂಡಿದೆ ಎಂದು ಓಲಾ ಹೇಳಿದೆ.

    ಎಸ್1 ಮಾದರಿಯ ಸ್ಕೂಟರ್ ಅನ್ನು ಸೆ.15 ಮತ್ತು 16 ರಂದು ಆನ್‍ಲೈನ್ ಮೂಲಕ ಖರೀದಿಸಲು ಗ್ರಾಹಕರಿಗೆ ಅವಕಾಶ ನೀಡಿತ್ತು. ಈ ಮೊದಲು 499 ರೂ. ಮುಂಗಡ ಪಾವತಿಸಿದವರು
    20 ಸಾವಿರ ರೂ. ಪಾವತಿಸಿ ಸ್ಕೂಟರ್ ಖರೀದಿ ಮಾಡಿದ್ದಾರೆ.

    ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೆಕೆಂಡಿಗೆ 4 ಸ್ಕೂಟರ್ ಗಳು ಮಾರಾಟಗೊಂಡಿದೆ ಎಂದು ಓಲಾ ಸಿಇಒ ಭವೀಶ್ ಅಗರವಾಲ್ ತಿಳಿಸಿದ್ದಾರೆ.

    ಭಾರತ ಎಲೆಕ್ಟ್ರಿಕ್ ವಾಹನಗಳಿಗೆ ಬದ್ಧವಾಗಿದೆ ಮತ್ತು ಪೆಟ್ರೋಲ್ ಅನ್ನು ತಿರಸ್ಕರಿಸಿದೆ. 4 ಸೆಕೆಂಡಿಂಗ್ ಒಂದು ಸ್ಕೂಟರ್ ಮಾರಾಟ ಮಾಡಿದ್ದೇವೆ ಮತ್ತು 600 ಕೋಟಿ ರೂ. ಮೌಲ್ಯದ ಸ್ಕೂಟರ್ ಅನ್ನು ಒಂದೇ ದಿನದಲ್ಲಿ ಮಾರಾಟ ಮಾಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಓಲಾ ಕಂಪನಿ ಎರಡು ಮಾದರಿಯಲ್ಲಿ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಎಸ್ 1 ಬೆಲೆ 99,999 ರೂ., ಎಸ್ 1 ಪ್ರೊ ಬೆಲೆ 1.29 ಲಕ್ಷ ರೂ. ದರವನ್ನು ನಿಗದಿ ಮಾಡಿದೆ. ಇದನ್ನೂ ಓದಿ: ಭಾರತದಲ್ಲಿ ಬಾಗಿಲು ಮುಚ್ಚಲಿದೆ ಫೋರ್ಡ್ 

    ಬುಕ್ಕಿಂಗ್ ಮಾಡಿ ಖರೀದಿ ಮಾಡಿದ ಗ್ರಾಹಕರಿಗೆ ಅಕ್ಟೋಬರ್ ತಿಂಗಳಿನಿಂದ ಡೆಲಿವರಿ ಮಾಡಲಾಗುವುದು. ಯಾರು ಮೊದಲು ಬುಕ್ಕಿಂಗ್ ಮಾಡಿದ್ದಾರೋ ಅವರಿಗೆ ಮೊದಲು ಡೆಲಿವರಿ ಮಾಡಲಾಗುತ್ತದೆ ಎಂದು ಮುಖ್ಯ ಮಾರುಕಟ್ಟೆ ಅಧಿಕಾರಿ ವರುಣ್ ದುಬೆ ತಿಳಿಸಿದ್ದಾರೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ

    ಮೊದಲ ಹಂತದಲ್ಲಿ ವರ್ಷಕ್ಕೆ 20 ಲಕ್ಷ ಸ್ಕೂಟರ್ ಉತ್ಪಾದನೆ ಮಾಡುವ ಗುರಿಯನ್ನು ಓಲಾ ಹಾಕಿಕೊಂಡಿದೆ. ಘಟಕ ಪೂರ್ಣವಾಗಿ ಆರಂಭಗೊಂಡರೆ ವರ್ಷಕ್ಕೆ 1 ಕೋಟಿ ಸ್ಕೂಟರ್ ಉತ್ಪಾದನೆ ಮಾಡಲಾಗುವುದು. ಇದು ವಿಶ್ವದ ದೊಡ್ಡ ದ್ವಿಚಕ್ರ ವಾಹನ ಫ್ಯಾಕ್ಟರಿ ಎಂದು ಕಂಪನಿ ಹೇಳಿಕೊಂಡಿದೆ.

    \

  • ಬಿಡುಗಡೆಯಾಗಲಿದೆ 50 ಸಾವಿರ ರೂ. ಮೌಲ್ಯದ ಬರ್ಡ್‌ ಎಲೆಕ್ಟ್ರಿಕ್‌ ಸ್ಕೂಟರ್‌

    ಬಿಡುಗಡೆಯಾಗಲಿದೆ 50 ಸಾವಿರ ರೂ. ಮೌಲ್ಯದ ಬರ್ಡ್‌ ಎಲೆಕ್ಟ್ರಿಕ್‌ ಸ್ಕೂಟರ್‌

    ನವದೆಹಲಿ: ದೇಶದ ಮಾರುಕಟ್ಟೆಗೆ ಬರ್ಡ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಲಗ್ಗೆ ಇಡಲಿದೆ. ಇಎಸ್‌1+ ಹೆಸರಿನ ಸ್ಕೂಟರ್‌ ಅನ್ನು 2021ರ ಮಧ್ಯ ಭಾಗದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಇದರ ದೆಹಲಿ ಎಕ್ಸ್‌ ಶೋರೂಮ್‌ ಬೆಲೆ 50 ಸಾವಿರ ಇರಲಿದೆ ಎಂದು ಅಂದಾಜಿಸಲಾಗಿದೆ.

    ಬರ್ಡ್‌ ಗ್ರೂಪ್‌ ಆಸ್ಟ್ರೇಲಿಯಾದ ವಿಮೋಟೋ ಜೊತೆ ಪರಸ್ಪರ ಒಡಂಬಡಿಕೆ ಮಾಡಿಕೊಂದ್ದು ಮಾರಾಟ ಹಕ್ಕನ್ನು ಪಡೆದುಕೊಂಡಿದೆ.ಈ ಒಪ್ಪಂದ ಅನ್ವಯ ವಿಮೋಟೋ ಅಭಿವೃದ್ಧಿ ಪಡಿಸಿದರುವ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಭಾರತದಲ್ಲಿ ಮಾರಾಟ ಮಾಡಲಿದೆ.

    ಆರಂಭದಲ್ಲಿ ದೆಹಲಿ ಎನ್‌ಸಿಆರ್‌ನಲ್ಲಿ ಬಿಡುಗಡೆಯಾಗಲಿದ್ದು ಬಳಿಕ ಟಯರ್‌ 1, ಟಯರ್‌ 2 ನಗರದಲ್ಲಿ ಸ್ಕೂಟರ್‌ ಬಿಡುಗಡೆಯಾಗಲಿದೆ.

    ಗುಣ ವೈಶಿಷ್ಟತೆ ಏನು?
    ಎಲ್‌ಇಡಿ ಹೆಡ್‌ಲ್ಯಾಂಪ್‌, ಎಲ್‌ಇಡಿ ಟೇಲ್‌ ಲ್ಯಾಂಪ್‌, ಸ್ಪ್ಪಿಟ್‌ ಸೀಟರ್‌ ಮತ್ತು ಎಲ್‌ಸಿಡಿ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌, 1782 ಮೀ.ಮೀ ಉದ್ದ, 727 ಮಿ.ಮೀ ಅಗಲ, 1087 ಮಿ.ಮೀ ಎತ್ತರವನ್ನು ಹೊಂದಿದೆ. 140 ಮಿ.ಮೀ ಗ್ರೌಂಡ್‌ ಕ್ಲಿಯರನ್ಸ್‌ ಇದ್ದು ಒಟ್ಟು 62 ಕೆಜಿ ತೂಕವನ್ನು ಹೊಂದಿದೆ.

    ಬ್ಯಾಟರಿ  3ಎಎಚ್‌ ಲಿಥಿಯಾನ್‌ ಐಯಾನ್‌ ಬ್ಯಾಟರಿ ಮತ್ತು 1.6 ಕೆಡಬ್ಲ್ಯೂ ಎಲೆಕ್ಟ್ರಿಕ್‌ ಬ್ಯಾಟರಿ ಒಳಗೊಂಡಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 55 ಕಿ.ಮೀ ದೂರದವರೆಗೆ ಸಂಚರಿಸಬಹುದು. ಗಂಟೆಗೆ 45 ಕಿ.ಮೀ ವೇಗದಲ್ಲಿ ಈ ಸ್ಕೂಟರ್‌ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

  • ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್: ವಿಡಿಯೋ ವೈರಲ್

    ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್: ವಿಡಿಯೋ ವೈರಲ್

    ಬೀಜಿಂಗ್: ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆದ ಘಟನೆಯೊಂದು ಚೀನಾದಲ್ಲಿ ನಡೆದಿದೆ.

    ಮನೆಯೊಳಗೆ ಎಲೆಕ್ಟ್ರಿಕ್ ಸ್ಕೂಟರೊಂದು ಚಾರ್ಜ್‌ಗೆ ಇಟ್ಟಿದ್ದರು. ಆ ಸ್ಕೂಟರ್ ಬ್ಲಾಸ್ಟ್ ಆಗುವ ಮೊದಲು ಹೊಗೆ ಕಾಣಿಸಿಕೊಂಡಿದೆ. ಈ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯಲ್ಲಿ ತಂದೆ, ಮಗಳು ಹಾಗೂ ನಾಯಿ ಅಲ್ಲಿಂದ ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಈ ಘಟನೆ ಚೀನಾದ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಈ ಘಟನೆ ಭಾನುವಾರ ಸಂಜೆ ಸುಮಾರು 5.30ಕ್ಕೆ ನಡೆದಿದೆ. ಸದ್ಯ ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ವಿಡಿಯೋದಲ್ಲಿ ತಂದೆ, ಮಗಳು ಹಾಗೂ ನಾಯಿ ಸ್ಕೂಟರ್ ಬಳಿ ಇದ್ದರು. ಆಗ ಚಾರ್ಜ್ ಹಾಕಿದ ಸ್ಕೂಟರ್ ನಿಂದ ಜೋರಾಗಿ ಶಬ್ಧವೊಂದು ಕೇಳಿಸಿದೆ. ತಂದೆ ಶಬ್ಧ ಏನೆಂದು ನೋಡಲು ಹೋದಾಗ ಸ್ಕೂಟರ್ ನಿಂದ ಹೊಗೆ ಬರುತ್ತಿತ್ತು. ಅದನ್ನು ಕಂಡ ತಂದೆ ತನ್ನ ಮಗಳು ಹಾಗೂ ನಾಯಿಯನ್ನು ಕರೆದುಕೊಂಡು ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡರು.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಹಾನಿ ಆಗಿಲ್ಲ. ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.