Tag: ಎಲೆಕ್ಟ್ರಿಕ್ ಬೈಕ್

  • ಓಲಾ ಉದ್ಯೋಗಿ ಆತ್ಮಹತ್ಯೆ – ಸಿಇಓ ಭವಿಶ್‌ ಅಗರ್‌ವಾಲ್‌ ಮೇಲೆ ಎಫ್‌ಐಆರ್‌

    ಓಲಾ ಉದ್ಯೋಗಿ ಆತ್ಮಹತ್ಯೆ – ಸಿಇಓ ಭವಿಶ್‌ ಅಗರ್‌ವಾಲ್‌ ಮೇಲೆ ಎಫ್‌ಐಆರ್‌

    – ಸಂಬಳ ನೀಡದೇ ಕಿರುಕುಳ
    – ಡೆತ್‌ ನೋಟ್‌ ಬರೆದು ಆತ್ಮಹತ್ಯೆ

    ಬೆಂಗಳೂರು: ಪ್ರಸಿದ್ಧ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಕಂಪನಿ ಓಲಾ (OLA) ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಓ ಭವಿಶ್‌ ಅಗರ್‌ವಾಲ್‌ (Bhavish Aggarwal), ಓಲಾ ಸಂಸ್ಥೆ ಮತ್ತು ಎಂಜಿನಿಯರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ.

    ಕಂಪನಿಯ ಹೋಮೋಲೋಗೇಷನ್ ವಿಭಾಗದ ಅರವಿಂದ್ ಕೆ(38) ಅವರು ಚಿಕ್ಕಲಸಂದ್ರದಲ್ಲಿರುವ ಮಂಜುನಾಥನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸೆ.28 ರಂದು ವಿಷ ಸೇವಿಸಿ ಆತ್ಮಹತ್ಯೆ (Sucidde) ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಎರಡು ದಿನದ ಬಳಿಕ ಅರವಿಂದ್ ಅಕೌಂಟ್ 17.46 ಲಕ್ಷ ರೂ. ಹಣ ಜಮೆಯಾಗಿತ್ತು.

    ಹಣ ಜಮೆಯಾದ ಬಗ್ಗೆ ಅನುಮಾನದಿಂದ ಕಂಪನಿಯವರನ್ನ ಕುಟುಂಬಸ್ಥರು ಪ್ರಶ್ನಿಸಿದ್ದರು. ಆದರೆ ಕಂಪನಿಯಿಂದ ಸರಿಯಾದ ಸ್ಪಷ್ಟನೆ ಸಿಕ್ಕಿರಲಿಲ್ಲ. ಹೀಗಾಗಿ ಅನುಮಾನ ಹೆಚ್ಚಾದ ನಂತರ ಮನೆಯನ್ನು ಪರಿಶೀಲಿಸಿದಾಗ 28 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ಡೆತ್‌ ನೋಟ್‌ ಆಧಾರದ ಮೇಲೆ ಅರವಿಂದ್ ಅವರ ಸಹೋದರ ಅಶ್ವಿನ್‌ ಅವರು ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಸುಬ್ರತ್ ಕುಮಾರ್ ದಾಸ್(ಎ1),ಭವೀಶ್ ಅಗರ್ವಾಲ್ (ಎ2),ಓಲಾ ಎಲೆಕ್ಟ್ರಿಕ್ ಕಂಪನಿ(ಎ3) ಆರೋಪಿಗಳನ್ನಾಗಿ ಮಾಡಲಾಗಿದೆ.

     ಆತ್ಮಹತ್ಯೆಗೆ ಶರಣಾದ ಅರವಿಂದ್ ಕೆ
    ಆತ್ಮಹತ್ಯೆಗೆ ಶರಣಾದ ಅರವಿಂದ್ ಕೆ

    ದೂರಿನಲ್ಲಿ ಏನಿದೆ?
    ನನ್ನ ತಮ್ಮ ಅರವಿಂದ್ ಕೋರಮಂಗಲದಲ್ಲಿರುವ ಓಲಾ ಎಲೆಕ್ಟ್ರಿಕ್‌ ಕಂಪನಿಯಲ್ಲಿ 2022 ರಿಂದ ಹೋಮೋ ಲೋಗೇಷನ್ ಎಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದ. ಸೆ.28ರ ಬೆಳಗ್ಗೆ 10:45 ರಂದು ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆತನ ಕೋಣೆಯಲ್ಲಿ ಡೆತ್‌ನೋಟ್‌ ಸಿಕ್ಕಿದ್ದರೂ ಸಾವಿನ ಬಗ್ಗೆ ಸರಿಯಾದ ವಿವರ ತಿಳಿಯದ ಕಾರಣ ಅಸಹಜ ಸಾವಿನ ಅಡಿ ಪ್ರಕರಣ ದಾಖಲಾಗಿತ್ತು.  ಇದನ್ನೂ ಓದಿ:  ಬೆಂಗಳೂರು | ಜಿಟಿ ಮಾಲ್‌ನ 3ನೇ ಫ್ಲೋರ್‌ನಿಂದ ಬಿದ್ದು ವ್ಯಕ್ತಿ ಸಾವು

    ಅರವಿಂದ್‌ ಮೃತಪಟ್ಟ ಎರಡು ದಿನದ ನಂತರ ಅಂದರೆ ಸೆ.30 ರಂದು ಸಹೋದರನ  ಖಾತೆಗೆ 17,46,313 ರೂ. ಹಣವನ್ನು NEFT ಮೂಲಕ ಓಲಾ ಕಂಪನಿ ಜಮೆ ಮಾಡಿದೆ. ಅನುಮಾನಾಸ್ಪದವಾಗಿ ಹಣ ಜಮೆಯಾದ ಬಗ್ಗೆ ಕಂಪನಿ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಮಗೆ ಯಾವುದೇ ಸರಿಯಾದ ಉತ್ತರ ನೀಡಲಿಲ್ಲ.

    ನಂತರ ಕಂಪನಿಯ ಪ್ರತಿನಿಧಿಗಳಾದ ಕೃತೇಶ್ ದೇಸಾಯಿ ಪರಮೇಶ್ ಮತ್ತು ರೋಷನ್ ಎಂಬುವರು ತಮ್ಮ ಮನೆಗೆ ಬಂದು ಹಣಕಾಸಿನ ವ್ಯವಹಾರದ ಬಗ್ಗೆ, ಅಸ್ಪಷ್ಟವಾಗಿ ಮಾಹಿತಿ ನೀಡಿದ್ದು ಇದು ಕಂಪನಿಯವರ ತಪ್ಪುಗಳನ್ನು ಮರೆಮಾಚುವ ಪ್ರಯತ್ನದಂತೆ ಕಂಡುಬಂದಿದ್ದು ನಮಗೆ ಅನುಮಾನ ಮೂಡಿಸಿದೆ.

    ಡೆತ್ ನೋಟ್‌ನಲ್ಲಿ ಕಂಪನಿಯ ಹೆಡ್ ಆಫ್ ಹೋಮೋರೋಗೇಷನ್ ಎಂಜಿನಿಯರ್ ಸಂಬ್ರತ್ ಕುಮಾರ್ ದಾಸ್ ಮತ್ತು ಕಂಪನಿ ಮಾಲೀಕ ಬಾವೀಶ್ ಅಗರ್‌ವಾಲ್‌ ಕೆಲಸದಲ್ಲಿ ಒತ್ತಡ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ತನಗೆ ನೀಡಬೇಕಾಗಿರುವ ವೇತನ ಮತ್ತು ಇತರೆ ಭತ್ಯೆ ನೀಡದೇ ಕಿರುಕುಳ ನೀಡುತ್ತಿದ್ದರಿಂದ ತಾನು ಬೇಸತ್ತು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾನೆ. ಹೀಗಾಗಿ ತನ್ನ ತಮ್ಮನ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ದೂರು ನೀಡುತ್ತಿದ್ದೇನೆ.

  • ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ

    ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ

    ಮಂಡ್ಯ: ಮನೆಯಲ್ಲಿ ಎಲೆಕ್ಟ್ರಿಕ್ ಚಾರ್ಜ್‌ ಹಾಕಿದ್ದ ಬೈಕ್‌ವೊಂದು (Electric Bike) ಇದ್ದಕ್ಕಿದ್ದಂತೆ ಸ್ಫೋಟಗೊಂಡು ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು (Madduru) ತಾಲೂಕಿನ ವಳೆಗೆರೆಹಳ್ಳಿಯಲ್ಲಿ ಜರುಗಿದೆ.

    ವಳೆಗೆರೆಹಳ್ಳಿಯ ಮುತ್ತುರಾಜ್ ಎಂಬುವವರ ಮನೆಯ ಒಳ ಭಾಗದಲ್ಲಿ ಬೈಕ್ ಚಾರ್ಜ್ ಹಾಕಿದ್ದ ವೇಳೆ ಈ ಘಟನೆ ಜರುಗಿದೆ. ಬೈಕ್ ಚಾರ್ಜ್ ಹಾಕಿದ್ದ ವೇಳೆ ಇದಕ್ಕಿದ್ದ ಹಾಗೆ ಸ್ಫೋಟಗೊಂಡಿದ್ದು, ಈ ವೇಳೆ‌ ಮನೆಯ ಒಳಭಾಗದಲ್ಲಿ ಇದ್ದ 5 ಮಂದಿ ಬೆಚ್ಚಿ ಬಿದ್ದಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ

    ಅದೃಷ್ಟವಶಾತ್ ಎಲ್ಲರೂ ಬೈಕ್‌ನಿಂದ ದೂರವಿದ್ದರಿಂದ ಪ್ರಾಣಾಪಾಯದಿಂದ ಪಾರಗಿದ್ದಾರೆ. ಇನ್ನೂ ಈ ಸ್ಫೋಟದಿಂದ ಪಕ್ಕದಲ್ಲಿ‌ ಇದ್ದ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್ ಸೇರಿದಂದೆ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಬಳಿಕ ಸ್ಫೋಟದ ಬೆಂಕಿಯನ್ನು‌ ಕುಟುಂಬಸ್ಥರು ನಂದಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಇದನ್ನೂ ಓದಿ: ಹೇ ನಡೀಯಪ್ಪ ನೀನು, ನಮಗೆ ತಲೆ ಬಿಸಿಯಾಗಿದೆ: ಸಿದ್ದರಾಮಯ್ಯ ಇನ್ ಟೆನ್ಶನ್

  • ದಂಪತಿ ತೆರಳುತ್ತಿದ್ದ ಎಲೆಕ್ಟ್ರಿಕ್ ಬೈಕ್‍ಗೆ ಕಾರು ಡಿಕ್ಕಿ – ಚಾಲಕ ಎಸ್ಕೇಪ್

    ದಂಪತಿ ತೆರಳುತ್ತಿದ್ದ ಎಲೆಕ್ಟ್ರಿಕ್ ಬೈಕ್‍ಗೆ ಕಾರು ಡಿಕ್ಕಿ – ಚಾಲಕ ಎಸ್ಕೇಪ್

    ಚಿಕ್ಕಬಳ್ಳಾಪುರ: ಇ-ಬೈಕ್‍ಗೆ ಸ್ಯಾಂಟ್ರೋ ಕಾರು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬೆಮೆಲ್ ಶೋ ರೂಂ ಮುಂಭಾಗ ನಡೆದಿದೆ.

    ಚಿಕ್ಕಬಳ್ಳಾಪುರ ನಗರದಿಂದ ಸ್ವಗ್ರಾಮ ಕುಪ್ಪಹಳ್ಳಿ ಬಳಿ ಇ-ಬೈಕ್‍ನಲ್ಲಿ ಮಮತಾ ಹಾಗೂ ಆನಂದ್ ದಂಪತಿ ಬರುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ಬರ್ತಿದ್ದ ಸ್ಯಾಂಟ್ರೋ ಕಾರು, ಬೈಕ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಇ-ಬೈಕ್ ಮುಂಭಾಗ ಜಖಂಗೊಂಡಿದ್ದು, ಕಾರಿನ ಗಾಜು ಸಹ ಜಖಂ ಆಗಿ ಮುಂಭಾಗ ಹಾನಿಯಾಗಿದೆ. ಇದನ್ನೂ ಓದಿ: ಪ.ಬಂಗಾಳದ 11 ಜಿಲ್ಲೆಗಳಲ್ಲಿ ಕಾಡುತ್ತಿದೆ ಕಪ್ಪು ಜ್ವರ ಅಥವಾ ‘ಕಾಲಾ-ಅಜರ್’ – ಲಕ್ಷಣವೇನು? 

    ಬೈಕ್‍ನಲ್ಲಿದ್ದ ಆನಂದ್ ಕಾಲು ಮುರಿದಿದ್ದು, ಮಮತಾಗೂ ಗಾಯಗಳಾಗಿವೆ. ಇಬ್ಬರನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದಂಪತಿ ಚಿಕ್ಕಬಳ್ಳಾಪುರದಲ್ಲಿ ಸ್ವಗ್ರಾಮ ಕುಪ್ಪಹಳ್ಳಿಗೆ ಹೋಗುತ್ತಿದ್ದರು. ಅಪಘಾತ ನಂತರ ಕಾರು ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ.

    ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಪಘಾತದ ನಂತರ ಟ್ರಾಫಿಕ್ ಜಾಮ್ ಉಂಟಾದ ಕಾರಣ ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದನ್ನೂ ಓದಿ:  ಅಹ್ಮದ್ ಪಟೇಲ್ ಸೂಚನೆ ಮೇರೆಗೆ ಮೋದಿ ವಿರುದ್ಧ ತೀಸ್ತಾ ಸೆಟಲ್ವಾಡ್ ಸಂಚು: ತನಿಖಾ ತಂಡ 

    Live Tv
    [brid partner=56869869 player=32851 video=960834 autoplay=true]

  • ಲಾಕ್‌ಡೌನ್‌ ಸಮಯದಲ್ಲಿ ಎಲೆಕ್ಟ್ರಿಕ್‌ ಬೈಕ್‌ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

    ಲಾಕ್‌ಡೌನ್‌ ಸಮಯದಲ್ಲಿ ಎಲೆಕ್ಟ್ರಿಕ್‌ ಬೈಕ್‌ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

    ಚಿಕ್ಕೋಡಿ: ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ವಿದ್ಯುತ್‌ ಚಾಲಿತ ಬೈಕ್‌ ತಯಾರಿಸಿ ಸುದ್ದಿಯಾಗಿದ್ದಾನೆ.

    ನಿಪ್ಪಾಣಿ ನಗರದ ನಿವಾಸಿ ಪ್ರಥಮೇಶ ಸುತಾರ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಚಾರ್ಜಿಂಗ್ ನಿಂದ ಬೈಕ್‌ ಅನ್ನು ಮನೆಯಲ್ಲಿ ತಯಾರಿಸಿದ್ದಾನೆ. ಕುಟುಂಬಸ್ಥರ ಸಹಕಾರದಿಂದ ಹಳೆಯ ನಿರುಪಯುಕ್ತ ಬೈಕ್‌ಗಳ ಬಿಡಿ ಭಾಗಗಳನ್ನು ಉಪಯೋಗಿಸಿ ಈ ಬೈಕ್‌ ನಿರ್ಮಿಸಿದ್ದಾನೆ.

    ಲೆಡ್ ಆಸಿಡ್ 48 ವೋಲ್ಟೇಜ್ ಬ್ಯಾಟರಿ, 48 ವೋಲ್ಟ್‌ ಮೋಟಾರ್‌, 750 ವ್ಯಾಟ್ ಮೋಟಾರ್‌ ಬಳಕೆ ಮಾಡಿದ್ದಾನೆ. ಮೋಟಾರ್‌ ಮತ್ತು ಬ್ಯಾಟರಿ ನಿಯಂತ್ರಣ ಯಂತ್ರ ಬಳಸಿ 25 ಸಾವಿರ ರೂ. ವೆಚ್ಚದಲ್ಲಿ ಬೈಕ್ ತಯಾರಾಗಿರುವುದು ವಿಶೇಷ.

    ಒಮ್ಮೆ ಫುಲ್ ಚಾರ್ಜಿಂಗ್ ಮಾಡಿದರೆ ಬೈಕ್‌ ಸುಮಾರು 35 ಕಿ.ಮೀ ಕ್ರಮಿಸುತ್ತದೆ. ಗಂಟೆಗೆ 40 ಕಿಮೀ ವೇಗದಲ್ಲಿ ಓಡುವ ಈ ಬೈಕ್‌ನ ವಿಶೇಷ ಎಂದರೆ ರಿವರ್ಸ್ ಕೂಡ ಚಲಿಸುತ್ತದೆ.

    ಪ್ರಥಮೇಶನ ಈ ಸಾಧನೆಗೆ ಕುಟುಂಬಸ್ಥರು ಸಹಕಾರ ನೀಡಿದ್ದು ಇವರ ತಂದೆ ಪ್ರಕಾಶ ಸುತಾರ ಕೂಡ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ಲಾಕ್‌ಡೌನ ವೇಳೆ ತಮ್ಮ ಮಗ ಈ ಎಲೆಕ್ಟ್ರಿಕ್ ಬೈಕ್ ತಯಾರಿಸಿದ್ದು, ಮಗನ ಸಾಧನೆಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

  • ಬೆಂಗಳೂರಿನ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

    ಬೆಂಗಳೂರಿನ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

    – ಅಲ್ಟ್ರಾವೈಲೆಟ್ ಕಂಪನಿಯಿಂದ ಸ್ಫೋರ್ಟ್ಸ್ ಬೈಕ್
    – ಒಂದು ಬಾರಿ ಚಾರ್ಜ್ ಮಾಡಿದ್ರೆ 140 ಕಿ.ಮೀ ಸಂಚರಿಸುತ್ತೆ

    ಬೆಂಗಳೂರು: ಎಲೆಕ್ಟ್ರಿಕ್ ಬೈಕ್‍ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ಈಗ ಬೆಂಗಳೂರು ಮೂಲದ ಕಂಪನಿಯೊಂದು ಸ್ಫೋರ್ಟ್ಸ್ ಬೈಕನ್ನು ಬಿಡುಗಡೆ ಮಾಡಿದೆ.

    ಅಲ್ಟ್ರಾವೈಲೆಟ್ ಕಂಪನಿ ಎಫ್777 ಹೆಸರಿನಲ್ಲಿ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದೆ. ಏರ್ ಕೂಲ್ಡ್ ಬ್ರಷ್‍ಲೆಸ್ ಡಿಸಿ(ಬಿಎಲ್‍ಡಿಸಿ) ಮೋಟಾರ್ ಹೊಂದಿರುವ ಬೈಕ್ 25 ಕಿಲೋ ವ್ಯಾಟ್ (33.5 ಬಿಎಚ್‍ಪಿ) ಸಾಮರ್ಥ್ಯ 450 ಎನ್‍ಎಂ ಟಾರ್ಕ್ ಹೊಂದಿದ್ದು ಆನ್ ರೋಡ್ 3 ಲಕ್ಷ ರೂ. ದರವನ್ನು ನಿಗದಿ ಪಡಿಸಿದೆ.

    ಗಂಟೆಗೆ 147 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಬೈಕ್ ಹೊಂದಿರುವುದು ವಿಶೇಷ. 0-60 ಕಿ.ಮೀ ವೇಗವನ್ನು 2.9 ಸೆಕೆಂಡಿನಲ್ಲಿ, 0-100 ಕಿ.ಮೀ ವೇಗವನ್ನು 7.5 ಸೆಕೆಂಡಿನಲ್ಲಿ ಕ್ರಮಿಸುತ್ತದೆ ಎಂದು ಕಂಪನಿ ತಿಳಿಸಿದೆ. ಬುಧವಾರದಿಂದಲೇ ಬುಕ್ಕಿಂಗ್ ಅವಕಾಶ ಆರಂಭಿಸಿದ್ದು 2020ರ ಮೂರನೇ ತ್ರೈಮಾಸಿಕದಲ್ಲಿ ಬೈಕ್ ಗ್ರಾಹಕರಿಗೆ ಸಿಗಲಿದೆ.

     

    ಮೂರು ಸ್ಲಿಮ್ ಮತ್ತು ಮಾಡ್ಯುಲರ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ 130-140 ಕಿ.ಮೀ ಸಂಚರಿಸಬಹುದು ಎಂದು ಹೇಳಿಕೊಂಡಿದೆ. ಸ್ಟಾಂಡರ್ಡ್ ಚಾರ್ಜರ್ ಬಳಸಿದರೆ ಪೂರ್ಣವಾಗಿ ಚಾರ್ಜ್ ಆಗಲು 5 ಗಂಟೆ ಬೇಕು. ಪೋರ್ಟೆಬಲ್ ಫಾಸ್ಟ್ ಚಾರ್ಜರ್ ಬಳಸಿದರೆ 50 ನಿಮಿಷದಲ್ಲಿ ಶೇ.80 ರಷ್ಟು ಚಾರ್ಜ್ ಆದರೆ 90 ನಿಮಿಷದಲ್ಲಿ ಪೂರ್ಣವಾಗಿ 8.5 ಕೆಜಿ ತೂಕದ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ತಿಳಿಸಿದೆ.

    ಡ್ಯುಯಲ್ ಎಬಿಎಸ್, ಫುಲ್ ಕಲರ್ ಟಿಎಫ್‍ಟಿ ಸ್ಕ್ರೀನ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ಏರ್ ಅಪ್‍ಡೇಟ್ ಮಾಡಲು ಅಪ್ಲಿಕೇಶನ್, ಬೈಕ್ ಲೊಕೇಟರ್, ರೈಡ್ ಅನಾಲಿಸಿಸ್, ಸ್ಪೀಡ್ ಲಿಮಿಟ್ ಗಳೊಂದಿಗೆ ಈ ಬೈಕ್ ಬಿಡುಗಡೆಯಾಗಿದೆ.

    ಬೆಂಗಳೂರಿನ ಬಿಎಂಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ನಿರಾಜ್ ರಾಜ್‍ಮೋಹನ್ ಮತ್ತು ನಾರಾಯಣ್ ಸುಬ್ರಮಣಿಯನ್ ಅವರು 2015ರಲ್ಲಿ ಅಲ್ಟ್ರಾವೈಲೆಟ್ ಕಂಪನಿಯನ್ನು ಆರಂಭಿಸಿದ್ದಾರೆ. ದೇಶದ ಪ್ರಸಿದ್ಧ ದ್ವಿಚಕ್ರ ವಾಹನ ಕಂಪನಿ ಟಿವಿಎಸ್ 11 ಕೋಟಿ ರೂ. ಹೂಡಿಕೆ ಮಾಡಿ ಕಂಪನಿಯಲ್ಲಿ ಶೇ.25.76 ಪಾಲನ್ನು ಪಡೆದುಕೊಂಡಿದ್ದಾರೆ.

  • ಕನ್ನಡಿಗನ ಅನ್ವೇಷಣೆಯ ಆಟೋ ರೀಚಾರ್ಜೆಬಲ್ ಬೈಕ್- ಒಮ್ಮೆ ಚಾರ್ಜ್ ಮಾಡಿದ್ರೆ ಓಡುತ್ತೆ 200 ಕಿ.ಮೀ

    ಕನ್ನಡಿಗನ ಅನ್ವೇಷಣೆಯ ಆಟೋ ರೀಚಾರ್ಜೆಬಲ್ ಬೈಕ್- ಒಮ್ಮೆ ಚಾರ್ಜ್ ಮಾಡಿದ್ರೆ ಓಡುತ್ತೆ 200 ಕಿ.ಮೀ

    ನವದೆಹಲಿ: ಎಲೆಕ್ಟ್ರಿಕ್ ಬೈಕ್ ಇಷ್ಟಪಡೋರಿಗೆ ಒಂದು ಗುಡ್ ನ್ಯೂಸ್. ಜಾರ್ಜ್ ಖಾಲಿಯಾಗಿ ನಡು ರೋಡ್ ನಲ್ಲಿ ಇನ್ಮುಂದೆ ಬೈಕ್ ನಿಲ್ಲೋದಿಲ್ಲ ಯಾಕೆಂದರೆ ಆಟೋ ರಿಚಾರ್ಜ್ ಬೈಕ್ ಒಂದು ಅನ್ವೇಷಣೆ ಆಗಿದೆ.

    ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಮಹೇಶ್ ಮಹಾಜನ್ ಎಂಬವರು ಈ ಬೈಕನ್ನು ಅನ್ವೇಷಣೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಈಗಿರುವ ಎಲೆಕ್ಟ್ರಿಕ್ ಬೈಕ್ ಗಳಿಗಿಂತ ಇದು ಭಿನ್ನ. ಈಗಿರುವ ಬೈಕ್ ಗಳು ಮನೆಯಲ್ಲಿ ವಿದ್ಯುತ್ ನಿಂದ ಪ್ರತಿ ದಿನ ಚಾರ್ಜ್ ಮಾಡಿ ಓಡಿಸಬೇಕು. ಆದರೆ ಮಹಾಜನ್ ರೆಡಿ ಮಾಡಿರೋ ಈ ಬೈಕ್ ಆಟೋ ರಿಚಾರ್ಜ್ ಆಗುತ್ತೆ. ಪ್ರತಿದಿನ ನೀವೂ ಬೈಕ್ ಓಡಿಸುತ್ತಿದ್ದರೆ ಆಟೋ ರಿಜಾರ್ಜ್ ಆಗುತ್ತೆ ಹಾಗಾಗೀ ಹೆಚ್ಚು ವಿದ್ಯುತ್ ಬಳಕೆ ಮಾಡೋ ಅವಶ್ಯಕತೆ ಇಲ್ಲ.

    26,000 ಎಂಪೇರ್ ಬ್ಯಾಟರಿ ಈ ಬೈಕ್ ಗೆ ಅವಳಡಿಸಿದ್ದು ಬ್ಯಾಟರಿ ಪೂರ್ಣ ಖಾಲಿಯಾದ್ರೆ ಮಾತ್ರ ವಿದ್ಯುತ್ ನಿಂದ ರಿಚಾರ್ಜ್ ಮಾಡಬೇಕು. ಅದನ್ನು ಹೊರತು ಪಡಿಸಿದರೆ ಆಟೋ ರಿಜಾರ್ಜ್ ಮೂಲಕ ನಿಮ್ಮ ಪ್ರಯಾಣ ಆರಾಮಾದಾಯಕವಾಗಿ ಸಾಗುತ್ತದೆ. ಹೆಚ್ಚು ವಿದ್ಯುತ್ ಖರ್ಚು ಮಾಡಬೇಕು, ಜಾರ್ಜ್ ಖಾಲಿಯಾದ್ರೆ ನಡು ರೋಡ್ ನಲ್ಲಿ ಬೈಕ್ ನಿಲ್ಲುತ್ತೆ ಎಂಬ ಚಿಂತೆಯೇ ಇರುವುದಿಲ್ಲ.

    ಈಗ ಅನ್ವೇಷಣೆಯಾಗಿರೊ ಈ ಬೈಕ್ ನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಅಭಿವೃದ್ಧಿಗೊಳಿಸಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ. ನವದೆಹಲಿಯ ತಮ್ಮ ನಿವಾಸದಲ್ಲಿ ಬೈಕ್ ನೋಡಿದ ಗಡ್ಕರಿ ತಜ್ಞರ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ಸಲಹೆ ನೀಡಿದ್ದು ಬೈಕ್ ಮೇಕ್ ಇನ್ ಇಂಡಿಯಾ ಯೋಜನೆಗೆ ಸೇರಿಸಲು ಸಂಸದ ಸುರೇಶ್ ಅಂಗಡಿ ಸಹಾಯ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ಈ ಬೈಕ್ ಬೇಗ ಮಾರುಕಟ್ಟೆಗೆ ಬಂದರೆ ವಿದ್ಯುತ್ ಹೆಚ್ಚು ಖರ್ಚಾಗುತ್ತೆ, ಜಾರ್ಜ್ ಖಾಲಿಯಾದ್ರೆ ಬೈಕ್ ನಡು ರೋಡ್ ನಲ್ಲಿ ನಿಲ್ಲುತ್ತೆ ಅನ್ನೊ ಸಮಸ್ಯೆ ಇರಲ್ಲ.