Tag: ಎಲೆಕ್ಟ್ರಾನಿಕ್ಸ್

  • ಮುಂದಿನ ದಿನಗಳಲ್ಲಿ ಭಾರೀ ಇಳಿಕೆಯಾಗಲಿದೆ ಟಿವಿ, ಫ್ರಿಡ್ಜ್‌, ಮೊಬೈಲ್‌ ಬೆಲೆ!

    ಮುಂದಿನ ದಿನಗಳಲ್ಲಿ ಭಾರೀ ಇಳಿಕೆಯಾಗಲಿದೆ ಟಿವಿ, ಫ್ರಿಡ್ಜ್‌, ಮೊಬೈಲ್‌ ಬೆಲೆ!

    ನವದೆಹಲಿ: ಮುಂದಿನ ದಿನಗಳಲ್ಲಿ ಮೊಬೈಲ್‌, ಟಿವಿ, ಫ್ರಿಡ್ಜ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಬೆಲೆ ಭಾರತದಲ್ಲಿ (India) ಭಾರೀ ಇಳಿಕೆಯಾಗುವ ಸಾಧ್ಯತೆಯಿದೆ.

    ಹೌದು. ಡೊನಾಲ್ಡ್‌ ಟ್ರಂಪ್‌ (Donald Trump) ಆರಂಭಿಸಿದ ಸುಂಕ ಸಮರ ಚೀನಾದ (China) ಮೇಲೆ ಭಾರೀ ಪರಿಣಾಮ ಬೀಳಲಿದೆ. ವ್ಯಾಪಾರ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಹಲವಾರು ಚೀನೀ ಎಲೆಕ್ಟ್ರಾನಿಕ್ (China Electronics) ಘಟಕ ತಯಾರಕರು ಭಾರತೀಯ ಕಂಪನಿಗಳಿಗೆ 5% ರಷ್ಟು ರಿಯಾಯಿತಿಗಳನ್ನು ನೀಡಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

    ಚೀನಾ ತಯಾರಕರು ಹೆಚ್ಚುವರಿ ದಾಸ್ತಾನುಗಳನ್ನು ಹೊಂದಿದ್ದಾರೆ. ಆ ಉತ್ಪನ್ನಗಳನ್ನು ಮಾರಾಟ ಮಾಡಲು ಚೀನಾ ರಿಯಾಯಿತಿ ನೀಡಲು ಮುಂದಾಗಿದೆ. ಈ ನಿರ್ಧಾರದಿಂದ ಭಾರತದಲ್ಲಿ ಫೋನ್‌, ಟಿವಿ, ಗ್ರಾಹಕ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಬೆಲೆ ಬಹಳ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: 75 ದೇಶಗಳಿಗೆ 90 ದಿನ ಬ್ರೇಕ್‌ – ಚೀನಾಗೆ 125% ಟ್ಯಾಕ್ಸ್‌ ಸಮರ

    ಸುಂಕ ಸಮರ ಆರಂಭಿಸುವ ಮೊದಲು ಚೀನಾ ಅಮೆರಿಕದ ವಸ್ತುಗಳಿಗೆ 67% ತೆರಿಗೆ ವಿಧಿಸುತ್ತಿತ್ತು. ಟ್ರಂಪ್‌ ಅವರು ಏ.2 ರಂದು ಚೀನಾ ವಸ್ತುಗಳಿಗೆ 34% ತೆರಿಗೆ ಹಾಕುವುದಾಗಿ ಘೋಷಣೆ ಮಾಡಿದ್ದರು. ಇದರಿಂದಾಗಿ ಮೊದಲಿದ್ದ 20% ಸೇರಿ 54% ತೆರಿಗೆ ಏರಿಕೆಯಾಗಿತ್ತು.

    ಅಮೆರಿಕದ ನಿರ್ಧಾರದಿಂದ ಸಿಟ್ಟಾದ ಚೀನಾ ಮತ್ತೆ 34% ಏರಿಕೆ ಮಾಡಿತ್ತು. ಇದಕ್ಕೆ ಸಿಟ್ಟಾದ ಟ್ರಂಪ್‌ ತೆರಿಗೆಯನ್ನು 104% ಏರಿಕೆ ಮಾಡುತ್ತಾರೆ. ಅಮೆರಿಕದ ನಿರ್ಧಾರದಿಂದ ಮತ್ತೆ ಸಿಟ್ಟಾದ ಚೀನಾ ಅಮೆರಿಕದ ವಸ್ತುಗಳ ಮೇಲೆ 84% ತೆರಿಗೆ ಹಾಕಿತು. ಚೀನಾ ನಿರ್ಧಾರದಿಂದ ಆಕ್ರೋಶಗೊಂಡ ಟ್ರಂಪ್‌ ಈಗ ಚೀನಾದ ವಸ್ತುಗಳ ಮೇಲೆ 125% ತೆರಿಗೆ ಹಾಕಿದ್ದಾರೆ.

  • ಕಿಯೋನಿಕ್ಸ್ ಸಂಸ್ಥೆಯನ್ನು ಪ್ರಸ್ತುತತೆಗೆ ಅನುಗುಣವಾಗಿ ಸಜ್ಜುಗೊಳಿಸಲು ಪ್ರಿಯಾಂಕ್ ಖರ್ಗೆ ನಿರ್ದೇಶನ

    ಕಿಯೋನಿಕ್ಸ್ ಸಂಸ್ಥೆಯನ್ನು ಪ್ರಸ್ತುತತೆಗೆ ಅನುಗುಣವಾಗಿ ಸಜ್ಜುಗೊಳಿಸಲು ಪ್ರಿಯಾಂಕ್ ಖರ್ಗೆ ನಿರ್ದೇಶನ

    ಬೆಂಗಳೂರು: ದಶಕಗಳ ಕಾಲ ಕರ್ನಾಟಕದ ಎಲೆಕ್ಟ್ರಾನಿಕ್ಸ್ (Electronics) ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿದ್ದ ಕಿಯೋನಿಕ್ಸ್ ಸಂಸ್ಥೆಯನ್ನು (Keonics Institute) ಮತ್ತೊಮ್ಮೆ ಪ್ರಸ್ತುತತೆಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶುಕ್ರವಾರ ವಿಸ್ತ್ರತವಾಗಿ ಚರ್ಚಿಸಲಾಯಿತು.

    ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ಈ ಹಿಂದೆ ಇದ್ದ ಮಾನ್ಯತೆಯನ್ನು ಮರಳಿ ತರಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ವಿವರಿಸಿದರು.

    ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ನೂತನ ಅಭೇದ್ಯ ಸುರಕ್ಷತಾ ಕ್ರಮಗಳು ಹಾಗೂ ಪಾರದರ್ಶಕ ನೀತಿಯನ್ನು ಜಾರಿಗೊಳಿಸಲು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು. ಕಿಯೋನಿಕ್ಸ್ ಸಂಸ್ಥೆಯ ವಹಿವಾಟಿನ ಅಧಿಕೃತ ಪಟ್ಟಿಯಲ್ಲಿರುವ ಎಲ್ಲಾ ಖಾಸಗಿ ಸರಬರಾಜುದಾರರು ಹಾಗೂ ಸೇವಾದಾರರ ಸಮಗ್ರ ಪರಿಷ್ಕರಣೆ ನಡೆಸಲು ಸಚಿವರು ನಿರ್ದೇಶನ ನೀಡಿದರು. ಇದನ್ನೂ ಓದಿ: ಶಿವಕುಮಾರ್ ಅಣ್ಣ.. ಭರವಸೆ ಕೊಟ್ಟಿರೋದು ನೀವು, ಮೋದಿ ಅಲ್ಲ: ಅಶೋಕ್ ಕಿಡಿ

    ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಭವಿಷ್ಯದಲ್ಲಿ ಕಿಯೋನಿಕ್ಸ್ ಮಹತ್ತರ ವಹಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯನ್ನು ಸಜ್ಜುಗೊಳಿಸಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ ಸಚಿವರು ಐಟಿ ಶಿಕ್ಷಣ, ಐಟಿ ಪಾರ್ಕ್ ಕುರಿತು ವಿಶೇಷ ನೀಲನಕ್ಷೆ ತಯಾರಿಸಿ ಪ್ರಸ್ತುತಪಡಿಸುವಂತೆ ನಿರ್ದೇಶಿಸಿದರು.

    ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ ಡಿ ಚನ್ನಣ್ಣನವರ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಚಿವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಬಡವರಿಗೆ ಕೇಂದ್ರದಿಂದ ದ್ರೋಹ – ಜೂ.20ಕ್ಕೆ ಕಾಂಗ್ರೆಸ್‌ನಿಂದ ರಾಜ್ಯವ್ಯಾಪಿ ಪ್ರತಿಭಟನೆ: ಡಿಕೆಶಿ

  • 67 ಪೋರ್ನ್ ವೆಬ್‌ಸೈಟ್‌ಗಳು ಬ್ಲಾಕ್ – ಕೇಂದ್ರ ಆದೇಶ

    67 ಪೋರ್ನ್ ವೆಬ್‌ಸೈಟ್‌ಗಳು ಬ್ಲಾಕ್ – ಕೇಂದ್ರ ಆದೇಶ

    ನವದೆದಲಿ: 2021ರ ಐಟಿ ನಿಯಮ (IT Rules) ಉಲ್ಲಂಘಿಸಿದ್ದಕ್ಕಾಗಿ 67 ಪೋರ್ನ್ ವೆಬ್‌ಸೈಟ್‌ಗಳನ್ನು (Pornographic Websites) ಬ್ಲಾಕ್ ಮಾಡಿವಂತೆ ಕೇಂದ್ರ ಸರ್ಕಾರ (Central Government) ಇಂರ್ಟರ್‌ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ.

    ಭಾರತದಲ್ಲಿ ಅಶ್ಲೀಲ ಅಥವಾ ಪೋರ್ನ್ ವೆಬ್‌ಸೈಟ್‌ಗಳನ್ನು ಪ್ರಕಟಿಸುವುದು ಅಥವಾ ವೀಕ್ಷಿಸುವುದು ಕಾನೂನು ಬಾಹಿರ. ಆದರೂ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಪೋರ್ನ್ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಪುಣೆ ನ್ಯಾಯಾಲಯದ (Pune Court) ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳು ಹಾಗೂ ಉತ್ತರಾಖಂಡ ಹೈಕೋರ್ಟ್ (Uttarakhand High court) ಆದೇಶದ ಆಧಾರದ ಮೇಲೆ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಟೆಲಿಕಾಂ ಸಂಸ್ಥೆ (DOT) ಇಮೇಲ್ ಮೂಲಕ ಇಂಟರ್ನೆಟ್ ಸೇವಾ ಪೂರೈಕೆದಾರ ಕಂಪೆನಿಗಳಿಗೆ ಸೂಚಿಸಿದೆ. ಇದನ್ನೂ ಓದಿ: ದೇಗುಲಕ್ಕೆ 8 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ – ಗೋಡೆ, ನೆಲದಲ್ಲೆಲ್ಲ ನೋಟಿನ ದರ್ಬಾರ್

    ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಮತ್ತು 2021ರಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊಸ ಐಟಿ ನಿಯಮಗಳ ಉಲ್ಲಂಘನೆಗಾಗಿ ಒಟ್ಟು 67 ಪೋರ್ನ್ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸರ್ಕಾರ ಆದೇಶಿಸಿದ್ದು, ಈ ಕುರಿತು ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳಿಗೆ ವೆಬ್‌ಸೈಟ್‌ಗಳ ಮಾಹಿತಿ, ಯೂಆರ್‌ಎಲ್ ನೀಡಿರುವ ಸರ್ಕಾರ, ಈ ವೆಬ್‌ಸೈಟ್‌ನಲ್ಲಿ ಮಹಿಳೆಯರ ಘನತೆಗೆ ಕಳಂಕ ತರುವ ಅಶ್ಲೀಲ ವೀಡಿಯೋಗಳು ಇವೆ. ಈ ವೀಡಿಯೋಗಳು ಮಾರ್ಫ್ ಮಾಡಲಾಗಿರುವ ವೀಡಿಯೋಗಳಾಗಿವೆ ಎಂದು ನೋಟಿಸ್‌ನಲ್ಲಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರ ಹಾಕಿದ ಮಾಲೀಕ

    ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರ ಹಾಕಿದ ಮಾಲೀಕ

    ದಿಸ್ಪುರ: ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ಮುಸ್ಲಿಂ ಯುವತಿಯನ್ನು ಅಂಗಡಿಯ ಮಾಲೀಕ ಹೊರ ಹಾಕಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಮುಸ್ಲಿಂ ಸಮುದಾಯದ ಯುವತಿ ಜೀನ್ಸ್ ಪ್ಯಾಂಟ್ ಧರಿಸಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯನ್ನು ಅಂಗಡಿಯಿಂದ ಮಾಲೀಕ ಹೊರಹಾಕಿದ್ದಾನೆ. ಬುರ್ಕಾ ಏಕೆ ಧರಿಸಿಲ್ಲ, ಜೀನ್ಸ್ ಪ್ಯಾಂಟ್ ಯಾಕೆ ಹಾಕಿಕೊಂಡಿದ್ದೀಯ ಎಂದು ಆಕೆಗೆ ಅಂಗಡಿಯ ಮಾಲೀಕ ಪ್ರಶ್ನೆ ಮಾಡಿದ್ದಾನೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

    ಅಸ್ಸಾಂನ ಬಿಸ್ವನಾಥ್ ಚರಿಯಾಲಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಗೆ 22 ವರ್ಷದ ಯುವತಿ ಇಯರ್‌ಫೋನ್ ಖರೀದಿಸಲು ಎಲೆಕ್ಟ್ರಾನಿಕ್ಸ್ ಅಂಗಡಿಗೆ ಹೋಗಿದ್ದಾರೆ. ಆದರೆ ಆಕೆಗೆ ಇಯರ್‌ಫೋನ್ ಮಾರಾಟ ಮಾಡಲು ಅಗಂಗಡಿ ಮಾಲೀಕ ಮಾಲೀಕ ನೂರುಲ್ ಅಮೀನ್ ನಿರಾಕರಿಸಿದ್ದಾನೆ. ಆಕೆ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕಾಗಿ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ಬುರ್ಕಾ ಧರಿಸುವಂತೆ ಅಂಗಡಿಯ ಮಾಲೀಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆಯ ನಂತರ, ಯುವತಿಯ ತಂದೆ ತನ್ನ ಮಗಳೊಂದಿಗೆ ತೋರಿದ ವರ್ತನೆಯನ್ನ ಪ್ರಶ್ನಿಸಿಲು ಎಲೆಕ್ಟ್ರಾನಿಕ್ಸ್ ಸ್ಟೋರ್‌ಗೆ ಭೇಟಿ ನೀಡಿದ್ದರು. ಆದರೆ ಅವರೊಂದಿಗೂ ಅಂಗಡಿಯ ಮಾಲೀಕ ನೂರುಲ್‍ನ ಪುತ್ರ ರಫಿಕುಲ್ ಇಸ್ಲಾಂ ಅಮಾನುಷವಾಗಿ ನಡೆಸಿಕೊಂಡಿದ್ದು, ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಈ ಸಂಬಂಧ, ಯುವತಿಯ ತಂದೆ ಹಾಗೂ ಸಂತ್ರಸ್ತೆ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಿಸ್ವನಾಥ್ ಪೊಲೀಸರು ಆರೋಪಿ ನೂರುಲ್ ಅಮೀನ್ ಮತ್ತು ಅವರ ಮಗ ರಫಿಕುಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.