Tag: ಎರ್ ಇಂಡಿಯಾ ಎಕ್ಸ್ ಲಕ್ನೋ

  • ವಿಮಾನಯಾನದ ವೇಳೆ ಬೆತ್ತಲಾದ ಪ್ರಯಾಣಿಕ..!- ನೋಡಿ ದಂಗಾದ್ರು ಸಹಪ್ರಯಾಣಿಕರು

    ವಿಮಾನಯಾನದ ವೇಳೆ ಬೆತ್ತಲಾದ ಪ್ರಯಾಣಿಕ..!- ನೋಡಿ ದಂಗಾದ್ರು ಸಹಪ್ರಯಾಣಿಕರು

    ಲಕ್ನೋ: ವಿಮಾನದಲ್ಲಿ ದುಬೈನಿಂದ ಲಕ್ನೋಗೆ ತೆರಳುತ್ತಿದ್ದ ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ತನ್ನ ಬಟ್ಟೆ ಬಿಚ್ಚಿ ವಿಮಾನದಲ್ಲಿ ಓಡಾಡಿರುವ ವಿಚಿತ್ರ ಘಟನೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಶನಿವಾರದಂದು ನಡೆದಿದೆ.

    ದುಬೈನಿಂದ ಲಕ್ನೋಗೆ ತೆರಳುತ್ತಿದ್ದ ಐಎಕ್ಸ್-194 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ವಿಮಾನಯಾನದ ವೇಳೆ ಇದ್ದಕ್ಕಿದ್ದ ಹಾಗೆ ಬಟ್ಟೆ ಬಿಚ್ಚಿ ಬೆತ್ತಲಾಗಿ ವಿಮಾನದ ಉದ್ದಕ್ಕೂ ಓಡಾಡಿದ್ದಾನೆ. ಆತನ ವಿಚಿತ್ರ ವರ್ತನೆಯನ್ನು ಕಂಡ ಇತರೇ ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದಾರೆ. ತಕ್ಷಣ ವಿಮಾನದಲ್ಲಿದ್ದ ಸಿಬ್ಬಂದಿ ಆತನಿಗೆ ಕಂಬಳಿ ಹೊದಿಸಿದ್ದಾರೆ. ಈ ಒಬ್ಬ ಪ್ರಯಾಣಿಕನಿಂದ ವಿಮಾನದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

    ಒಟ್ಟು 150 ಮಂದಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಲಕ್ನೋದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದಂತೆ ದುರ್ವರ್ತನೆ ತೋರಿದ್ದ ವ್ಯಕ್ತಿಯನ್ನು ಏರ್‌ಲೈನ್‌ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆದ್ರೆ ಆತ ಯಾಕೆ ಹಾಗೆ ವರ್ತಿಸಿದ ಎಂಬ ಕಾರಣ ತಿಳಿದು ಬಂದಿಲ್ಲ.

    ವಿಮಾನದ ಕ್ಯಾಪ್ಟನ್‍ನ ಮಾಹಿತಿ ಮೇರೆಗೆ ಪ್ರಯಾಣಿಕನನ್ನು ವಶಕ್ಕೆ ಪಡೆದ ಏರ್‌ಲೈನ್‌ ಭದ್ರತಾ ಸಿಬ್ಬಂದಿ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಕ್ತಾರರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv