Tag: ಎರಡು ತಲೆ

  • ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು- ವಿಚಿತ್ರ ನೋಡಿ ಬೆರಗಾದ ಜನ

    ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು- ವಿಚಿತ್ರ ನೋಡಿ ಬೆರಗಾದ ಜನ

    ಮೈಸೂರು: ಇಂದು ಜಿಲ್ಲೆಯ ದಟ್ಟಗಹಳ್ಳಿಯ ರೈತರೊಬ್ಬರ ಮನೆಯಲ್ಲಿ ಜರ್ಸಿ ಹಸುವೊಂದು ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದೆ.

    ದಟ್ಟಗಹಳ್ಳಿಯ ರೈತ ಚಂದ್ರು ಎಂಬುವವರ ಮನೆಯಲ್ಲಿ ಇಂದು ಬೆಳಗ್ಗೆ ಎರಡು ತಲೆ ಹೊಂದಿರುವ ಕರುವೊಂದು ಜನಿಸಿದೆ. ಚಂದ್ರು ಅವರು ಸಾಕಿದ್ದ ಜರ್ಸಿ ಹಸುವೊಂದು ಎರಡು ತಲೆ, ನಾಲ್ಕು ಕಣ್ಣು, ಎರಡು ನಾಲಿಗೆ ಇರುವ ವಿಚಿತ್ರ ಗಂಡು ಕರುವಿಗೆ ಜನ್ಮ ನೀಡಿದೆ. ಈ ವಿಚಿತ್ರ ಕರುವನ್ನು ಕಂಡ ಜನರು ಬೆರಗಾಗಿದ್ದಾರೆ

    ಸದ್ಯ ಹಸು ಮತ್ತು ಕರು ಆರೋಗ್ಯವಾಗಿದ್ದು, ಚೊಚ್ಚಲ ಕರು ವಿಶೇಷವಾಗಿ ಜನಿಸಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv