Tag: ಎರಡನೇ ಮಗು

  • ಖ್ಯಾತ ಜ್ಯೋತಿಷಿ ಭವಿಷ್ಯ : 3 ವರ್ಷದಲ್ಲಿ 2ನೇ ಮಗುವಿನ ತಾಯಿ ಆಗ್ತಾರಂತೆ ಅನುಷ್ಕಾ ಶರ್ಮಾ

    ಖ್ಯಾತ ಜ್ಯೋತಿಷಿ ಭವಿಷ್ಯ : 3 ವರ್ಷದಲ್ಲಿ 2ನೇ ಮಗುವಿನ ತಾಯಿ ಆಗ್ತಾರಂತೆ ಅನುಷ್ಕಾ ಶರ್ಮಾ

    ಬಾಲಿವುಡ್ ಸಿನಿಮಾ ರಂಗದಲ್ಲಿ ಖ್ಯಾತಿ ಜ್ಯೋತಿಷಿ ಎಂದೇ ಗುರುತಿಸಿಕೊಂಡಿರುವ ಸಂಜಯ್ ಬಿ ಜುಮ್ಮಾನಿ ಇದೀಗ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಕೇಲವ ಮೂರೇ ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎರಡನೇ ಮಗುವಿನ ಪಾಲಕರಾಗಲಿದ್ದಾರಂತೆ. ನಿನ್ನೆಯಷ್ಟೇ 34ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಅನುಷ್ಕಾ ತಮ್ಮ 37 ಅಥವಾ 38ನೇ ವಯಸ್ಸಿನಲ್ಲಿ ತಾಯಿಯಾಗಲಿದ್ದಾರೆ ಎಂದು ಈ ಸಂಖ್ಯಾ ಶಾಸ್ತ್ರಜ್ಞ ತಿಳಿಸಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ಅನುಷ್ಕಾ ಮದುವೆಯಾದರು. ಮದುವೆಯ ನಂತರವೂ ಅವರು ಸಿನಿಮಾಗಳಲ್ಲಿ ಬ್ಯುಸಿಯಾದರು. ಈ ವೇಳೆಯಲ್ಲಿ ಅನುಷ್ಕಾ ಶರ್ಮಾ ತಾಯಿಗೆ ಇದೇ ಸಂಖ್ಯಾಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದರಂತೆ. ಅನುಷ್ಕಾ ಕೆರಿಯರ್ ನಲ್ಲಿ ಬ್ಯುಸಿ ಆಗಿರುವಾಗ ಮಗು ಮಾಡಿಕೊಳ್ಳಲು ಸಾಧ್ಯವೇ ಇಲ್ಲವೆಂದು ಅನುಷ್ಕಾ ತಾಯಿ ಹೇಳಿದ್ದರಂತೆ. ಆದರೆ, ಜ್ಯೋತಿಷಿ ಮಾತಿನಂತೆಯೇ ಅನುಷ್ಕಾ ಮಗು ಮಾಡಿಕೊಂಡರು ಎಂದು ಸಂಜಯ್ ಬಿ ಜುಮ್ಮಾನಿ ಮಾತನಾಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಈಗ ಹೇಳಿರುವ ಜ್ಯೋತಿಷ್ಯ ಕೂಡ ಯಾವುದೇ ಕಾರಣಕ್ಕೂ ಸುಳ್ಳಾಗದು. ಅವರು ಇನ್ನೂ ಮೂರು ವರ್ಷದಲ್ಲಿ ಎರಡನೇ ಮಗುವಿಗೆ ತಾಯಿ ಆಗಲಿದ್ದಾರೆ. ಅನುಷ್ಕಾ ಶರ್ಮಾ ನಂತರವೂ ತಮ್ಮ ಕೆರಿಯರ್ ನಲ್ಲೇ ಮುಂದುವರೆಯಲಿದ್ದಾರೆ ಎಂದು ಸಂಜಯ್ ಹೇಳಿದ್ದಾರೆ. ಈ ಮಾತು ಸುಳ್ಳಾಗದು ಎಂದೂ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ನಿನ್ನೆಯಷ್ಟೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಅನುಷ್ಕಾ ಶರ್ಮಾ, ಹೆಂಡತಿಯ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇಡೀ ಕುಟುಂಬ ಒಂದಾಗಿ ಸಂಭ್ರಮಿಸಿದೆ. ಆ ಫೋಟೋಗಳನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಇನ್ಸ್ಟಾ ಪೇಜ್ ನಲ್ಲಿ ಹಂಚಿಕೊಂಡಿದ್ದು. ‘ನೀನು ಹುಟ್ಟಿದಕ್ಕೆ ಆ ಭಗವಂತನಿಗೆ ಧನ್ಯವಾದ ಹೇಳುತ್ತೇನೆ. ನೀನಿಲ್ಲದಿದ್ದರೆ ನಾನು ಏನಾಗಿರುತ್ತಿದ್ದೆನೋ ಗೊತ್ತಿಲ್ಲ’ ಎಂದು ಭಾವುಕರಾಗಿಯೂ ವಿರಾಟ್ ಬರೆದುಕೊಂಡಿದ್ದಾರೆ.

  • ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

    ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಗಳ ಮುದ್ದಾದ ವಿಡಿಯೋದೊಂದಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ಯಶ್ ಈಗ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಯಶ್ ಅವರೇ ತಮ್ಮ ಮಗಳ ವಿಡಿಯೋ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಇದೇ 23ರಂದು ಯಶ್ ದಂಪತಿ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಯಶ್ ಅವರು ಎಲ್ಲರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ವೈಜಿಎಫ್ ಚಾಪ್ಟರ್ 2, ಮತ್ತೊಂದು ಸಿಹಿ ಸುದ್ದಿ ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಮಗಳ ವಿಡಿಯೋ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಭಾನುವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನಡೆದ ಅದ್ಧೂರಿ ನಾಮಕರಣ ಸಮಾರಂಭದಲ್ಲಿ ಯಶ್ ರಾಧಿಕಾ ದಂಪತಿ ತಮ್ಮ ಮುದ್ದಾದ ಮಗಳಿಗೆ `ಐರಾ’ ಎಂದು ಹೆಸರಿಟ್ಟಿದ್ದರು. ಯಶ್ ಹಾಗೂ ರಾಧಿಕಾ ಹೆಸರಿನ ಅಕ್ಷರಗಳನ್ನು ಜೋಡಿಸಿ ಈ ಹೆಸರಿಟ್ಟಿರುವುದು ಒಂದು ವಿಶೇಷವಾದರೆ ಇದರ ಅರ್ಥ ಇನ್ನೊಂದು ವಿಶೇಷತೆ ಹೊಂದಿದೆ.

    ಸೋಶಿಯಲ್ ಮಿಡಿಯಾದಲ್ಲಿ ಮಗಳ ಫೋಟೋ ಅಪ್ಲೋಡ್ ಮಾಡುತ್ತಿದ್ದಾಗ `Baby YR’ ಎಂದೇ ಕರೆಯುತ್ತಿದ್ದರು. ಈಗ ಮಗಳಿಗೆ AYRA ಎಂದು ಹೆಸರನ್ನಿಟ್ಟಿದ್ದಾರೆ. ನಡುವಿನಲ್ಲಿ YR ಎಂದಿದೆ. ಅಷ್ಟೇ ಅಲ್ಲ ರಾ (ರಾಧಿಕಾ) ಹಾಗೂ ಯ (ಯಶ್) ಅಕ್ಷರಗಳೂ ಇದೆ.

    ಅರೇಬಿಕ್‍ನಲ್ಲಿ ‘ಐರಾ’ ಎಂದರೆ `ಕಣ್ಣು ತೆರೆಸುವವರು’ ಅಥವಾ `ಗೌರವಾನ್ವಿತರು’ ಎನ್ನುವ ಅರ್ಥ ಬರುತ್ತದೆ. ಕನ್ನಡದಲ್ಲಿ ‘ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ’ ಎನ್ನುವ ಅರ್ಥ ಬರುತ್ತದೆ.