Tag: ಎಮ್ ಎಸ್ ಧೋನಿ

  • ಐಪಿಎಲ್ 2022 – ಧೋನಿಯ ಹೊಸ ಮೀಸೆ ಲುಕ್ ವೈರಲ್

    ಐಪಿಎಲ್ 2022 – ಧೋನಿಯ ಹೊಸ ಮೀಸೆ ಲುಕ್ ವೈರಲ್

    ಚೆನ್ನೈ: ಐಪಿಎಲ್ 2022ಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಮ್ ಎಸ್ ಧೋನಿಯ ಹೊಸ ಮೀಸೆ ನೋಟವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಧೋನಿಯ ಈ ಹೊಸ ಲುಕ್‍ಗೆ ‘ತಲೈವರ್ ಸೂಪರ್ ಸ್ಟಾರ್’ ನಂತೆ ಕಾಣುತ್ತೀರಾ ಎಂದು ಬರೆದುಕೊಂಡಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಯವರು ತಮ್ಮ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಕೌಶಲ್ಯಗಳಿಂದಲೇ ಹೆಸರುವಾಸಿಯಾದವರು. ಆದರೆ ಅವರು ಪ್ರತೀ ಐಪಿಎಲ್ ಸೀಸನ್‍ಗಳ ಜಾಹೀರಾತಿನಲ್ಲಿ ವಿಭಿನ್ನ ರೀತಿಯ ಗೆಟಪ್‍ಗಳನ್ನು ಧರಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಈ ಗೆಟಪ್‍ಗಳಿಗೆ ಅಭಿಮಾನಿಗಳು ಸಹ ಹೆಚ್ಚಾಗಿ ಪ್ರಶಂಸುತ್ತಿರುತ್ತಾರೆ. ಇದನ್ನೂ ಓದಿ: ಅಲಿಯಾಗೆ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

    ಧೋನಿಯವರು ಮುಂಬರುವ ಐಪಿಎಲ್ 2022ರ ಪ್ರೋಮೋಗಳ ಟೀಸರ್‌ಗಳಲ್ಲಿ ಒಂದಕ್ಕೆ ಅವರು ಮತ್ತೊಂದು ಹೊಸ ನೋಟವನ್ನು ಪ್ರದರ್ಶಿಸಿಸುತ್ತಿದ್ದಾರೆ. ಅವರ ಈ ಹೊಸ ಅವತಾರದಲ್ಲಿ ಮೀಸೆಯನ್ನು ಬಿಟ್ಟು ಬಹುತೇಕ ಗುರುತಿಸಲಾಗದಂತೆ ಕಾಣುತ್ತಿದ್ದಾರೆ.

    ಧೋನಿಯ ಅವರು ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಅವರ ಈ ಹೊಸ ಅವತಾರಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 12 ಕೋಟಿ ರೂ.ಗೆ ಬೀಡ್ ಮಾಡಿ ಧೋನಿ ಅವರನ್ನು ಚೆನ್ನೈ ತಂಡದಲ್ಲಿಯೇ ಉಳಿಸಿಕೊಂಡಿದೆ. ಮುಂಬರುವ ಐಪಿಎಲ್‍ನಲ್ಲಿ ಅವರು ಸಿಎಸ್‍ಕೆ ತಂಡದ ನಾಯಕನಾಗಿ ಹಾಲಿ ಚಾಂಪಿಯನ್ನ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ನಾಯಕನಾಗಿ ಅವರು ಈಗಾಗಲೇ ಚೆನ್ನೈ ತಂಡಕ್ಕೆ 4 ಪ್ರಶಸ್ತಿಗಳನ್ನು ಸಹ ತಂದುಕೊಟ್ಟಿದ್ದಾರೆ.

    ಐಪಿಎಲ್‍ನ ಹೊಸ ಸ್ವರೂಪದ ಪ್ರಕಾರ ಈ ಬಾರಿ ಸಿಎಸ್‍ಕೆ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಮತ್ತು ಗುಜರಾತ್ ಟೈಟನ್ಸ್ ತಂಡಗಳ ಜೊತೆಗೆ ಬಿ ಗುಂಪಿನಲ್ಲಿ ಇರಿಸಲಾಗಿದೆ. ಚೆನ್ನೈ ತಂಡವು ಮೇಲೆ ತಿಳಿಸಿದ ಎಲ್ಲಾ ತಂಡಗಳ ವಿರುದ್ಧ 2 ಪಂದ್ಯಗಳನ್ನು ಆಡುತ್ತದೆ. ಆದರೆ ಎ ಗುಂಪಿನ ಮುಂಬೈ ತಂಡದ ವಿರುದ್ಧ ಮಾತ್ರ 2 ಬಾರಿ ಸೆಣಸಾಡಲಿದ್ದು, ಇತರ ಎ ಗುಂಪಿನ ಎಲ್ಲಾ ತಂಡಗಳ ವಿರುದ್ಧ ಕೇವಲ 1 ಬಾರಿ ಮಾತ್ರ ಆಡಲಿದೆ.

    ಐಪಿಎಲ್ 2022 ಸ್ವರೂಪದ ವೇಳಾಪಟ್ಟಿಯ ಗುಂಪು ವಿವರಗಳು:
    ಪ್ರತಿ ತಂಡವು ಒಟ್ಟು 14 ಪಂದ್ಯಗಳನ್ನು ಆಡುತ್ತದೆ – ಐದು ತಂಡಗಳ ವಿರುದ್ಧ ಎರಡು ಬಾರಿ ಅವರ ಗುಂಪಿನಿಂದ 4 ತಂಡಗಳು ಮತ್ತು ಇತರ ಗುಂಪಿನಿಂದ 1 ತಂಡ, ಒಮ್ಮೆ ಇತರ ಗುಂಪಿನ ನಾಲ್ಕು ತಂಡಗಳ ವಿರುದ್ಧ ಆಡಲಿವೆ.

    ಗುಂಪು ಎ – ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ದೆಹಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್

    ಗುಂಪು ಬಿ – ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್

    ಪಂದ್ಯಾವಳಿಯು ಮಾರ್ಚ್ 26 ರಂದು ಪ್ರಾರಂಭಗೊಳ್ಳುತ್ತದೆ. ಮೇ 29 ರಂದು ಕೊನೆಗೊಳ್ಳುತ್ತದೆ. ಕೋವಿಡ್ -19 ಸೋಂಕಿನ ಹಿಂದಿನ ಪ್ರಮುಖ ಕಾರಣವೆಂದು ಪರಿಗಣಿಸಲಾದ ವಿಮಾನ ಪ್ರಯಾಣವನ್ನು ತಪ್ಪಿಸಲು ಎಲ್ಲಾ ಪಂದ್ಯಗಳನ್ನು ಒಂದೇ ಹಬ್‍ನಲ್ಲಿ ಜೈವಿಕ-ಸುರಕ್ಷಿತ ವಾತಾವರಣದಲ್ಲಿ ಮಹಾರಾಷ್ಟ್ರದಲ್ಲಿ ಆಡಲಾಗುತ್ತದೆ.

    ಐಪಿಎಲ್ 2022ಗಾಗಿ ಸಿಎಸ್‍ಕೆ ತಂಡ ಪ್ರಕಟವಾಗಿದ್ದು, ಎಂಎಸ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಾಹರ್, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್‍ಗೇಕರ್, ಡಿ ಪ್ರೇಮ್‍ಜೀತ್ ಸಿಂಗ್, ಡಿ ಪ್ರೇಮ್‍ಜೀತ್ ಸಿಂಗ್ , ಮಿಚ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಭಗತ್ ವರ್ಮಾ