Tag: ಎಮ್ಯಾನುಯೆಲ್ ಮ್ಯಾಕ್ರೋನ್

  • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

    ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸುವಂತೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಒತ್ತಾಯಿಸಿದ್ದಾರೆ. ಯುಎನ್‌ಎಸ್‌ಸಿಯನ್ನು (UNSC) ಹೆಚ್ಚು ಒಳಗೊಳ್ಳಲು ಮತ್ತು ಪ್ರತಿನಿಧಿಸಲು ಬ್ರೆಜಿಲ್, ಜಪಾನ್, ಜರ್ಮನಿ ಮತ್ತು ಆಫ್ರಿಕಾದ ಎರಡು ದೇಶಗಳ ಉಮೇದುವಾರಿಕೆಯನ್ನು ಬೆಂಬಲಿಸಬೇಕು ಎಂದು ಹೇಳಿದರು.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಯುಎನ್ ಅನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕಿದೆ. ಅದಕ್ಕಾಗಿಯೇ ಫ್ರಾನ್ಸ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸುವ ಪರವಾಗಿದೆ. ಜರ್ಮನಿ, ಜಪಾನ್, ಭಾರತ (India) ಮತ್ತು ಬ್ರೆಜಿಲ್ ಖಾಯಂ ಸದಸ್ಯರಾಗಿರಬೇಕು. ಜೊತೆಗೆ ಆಫ್ರಿಕಾ ನಿರ್ಧರಿಸುವ ಎರಡು ದೇಶಗಳು ಅವರನ್ನು ಪ್ರತಿನಿಧಿಸಲು ಅವಕಾಶ ನೀಡಬೇಕು ಎಂದರು. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿ – ಹಿಬ್ಜುಲ್ಲಾ ಡ್ರೋನ್ ಘಟಕದ ಮುಖ್ಯಸ್ಥನ ಹತ್ಯೆ

    ಸದ್ಯ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್ ಮತ್ತು ಬ್ರಿಟನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿವೆ. ಅಮೆರಿಕಾ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳು ಭಾರತವನ್ನು ಈ ಪ್ರಬಲ ಗುಂಪಿನ ಭಾಗವಾಗಬೇಕೆಂದು ಪ್ರತಿಪಾದಿಸಿವೆ. ಆದರೆ, ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ನಾಯಕರು ವಿಶ್ವಸಂಸ್ಥೆಯನ್ನು ಹೆಚ್ಚು ಪ್ರತಿನಿಧಿಸಲು ಸುಧಾರಣೆಯ ಅಗತ್ಯವಿದೆ ಎಂದು ಹೇಳಿದರು. ಶೃಂಗಸಭೆಯ ನಂತರ ನೀಡಿದ ಜಂಟಿ ಹೇಳಿಕೆಯಲ್ಲಿ ಹೆಚ್ಚಿನ ದೇಶಗಳ ಪ್ರಾತಿನಿಧ್ಯವನ್ನು ಸೇರಿಸಲು ಅದರ ವಿಸ್ತರಣೆಗೆ ಕರೆ ನೀಡಿದರು. ಇದನ್ನೂ ಓದಿ: ಕದನ ವಿರಾಮಕ್ಕೆ ಕ್ಯಾರೇ ಎನ್ನದ ಇಸ್ರೇಲ್‌ – ಪೂರ್ಣಪ್ರಮಾಣದ ಯುದ್ಧಕ್ಕೆ ಬೆಂಜಮಿನ್ ನೆತನ್ಯಾಹು ಕರೆ

    ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಸಂಪೂರ್ಣ ಖಂಡಗಳನ್ನು ನಿರ್ಲಕ್ಷಿಸಿದಾಗ ನಾವು ಅದನ್ನು ಜಾಗತಿಕ ದೇಹದ ಪ್ರಾಥಮಿಕ ಅಂಗವೆಂದು ಹೇಗೆ ಮಾತನಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಪ್ರಶ್ನಿಸಿದ್ದರು. ಪ್ರಮುಖ ಪ್ರದೇಶಗಳನ್ನು ಕೈ ಬಿಟ್ಟು ಪ್ರಪಂಚದ ಪರವಾಗಿ ಮಾತನಾಡಲು ಹೇಗೆ ಸಾಧ್ಯ ಎಂದು ಕೇಳಿದ್ದರು. ಭಾರತವು ಎಂಟು ಬಾರಿ ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ಶಾಶ್ವತವಲ್ಲದ ಸದಸ್ಯರಾಗಿ ಆಯ್ಕೆಯಾಗಿದೆ.

  • ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ

    ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ

    ಪ್ಯಾರಿಸ್: ಎರಡು ದಿನಗಳ ಫ್ರಾನ್ಸ್ (France) ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಯುಎಇಯತ್ತ (UAE) ತಮ್ಮ ಪ್ರಯಾಣವನ್ನು ಬೆಳೆಸಿದರು.

    ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಅವರೊಂದಿಗೆ ಮಾತುಕತೆ ನಡೆಸಿದ ಮೋದಿ, ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್  (Grand Cross of the Legion) ಅನ್ನು ಗೌರವಪೂರ್ವಕವಾಗಿ ಸ್ವೀಕರಿಸಿದರು. ಇದನ್ನೂ ಓದಿ: Chandrayaan-3: ಚಂದ್ರನೂರಿಗೆ ಹಾರಿದ ರಾಕೆಟ್‌

    ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), ಭಾರತ ಮತ್ತು ಫ್ರಾನ್ಸ್ ಬಾಂಧ್ಯವ್ಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿ ಯಶಸ್ವಿ ಭೇಟಿಯ ನಂತರ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ಗೆ ವಿದಾಯ ಹೇಳಿದ್ದಾರೆ. ಮುಂದಿನ ಹಂತದ ಭೇಟಿಗಾಗಿ ಅವರು ಅಬುಧಾಬಿಗೆ (Abu Dhabi) ಪ್ರಯಾಣಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಫ್ರಾನ್ಸ್‌ನ ಅತ್ಯುನ್ನತ ಗೌರವ

    ಯುಎಇಗೆ ಪ್ರಯಾಣಿಸಿದ ಮೋದಿ ಅಲ್ಲಿನ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed Al Nahyan) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಫಿನ್‌ಟೆಕ್, ರಕ್ಷಣೆ, ಭದ್ರತೆ ಮತ್ತು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಇ ತೊಡಗಿಸಿಕೊಂಡಿವೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ 1 ನಿರ್ಧಾರ – ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾದ ಭಾರತ

    ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಫ್ರಾನ್ಸ್ ಪ್ರವಾಸಕ್ಕೆ ತೆರಳಿದ್ದ ಮೋದಿ ಶುಕ್ರವಾರ ನಡೆದ ಬಾಸ್ಟಿಲ್ ಡೇ ಆಚರಣೆಯಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸ್ಪೆಷಲ್ ಟೊಮೆಟೋ ಫೋರ್ಸ್ ರಚಿಸಿ: ಅಖಿಲೇಶ್ ಯಾದವ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]