ಬಾಗಲಕೋಟೆ: ನಕಲಿ ವೈದ್ಯನ ಎಡವಟ್ಟಿನಿಂದ ಗರ್ಭಧರಿಸಿದ್ದ ಎಮ್ಮೆ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕನಸಗೇರಿ ಗ್ರಾಮದಲ್ಲಿ ನಡೆದಿದೆ.
ಜುಲೈ 26ರಂದು ಈ ಘಟನೆ ನಡೆದಿದ್ದು, ಬಂಧಿತ ನಕಲಿ ವೈದ್ಯನನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದ ಶಿವಾನಂದ ಮಲ್ಲಪ್ಪ ರುದ್ರಪ್ಪ ಎಂದು ಗುರುತಿಸಲಾಗಿದೆ. 10 ತಿಂಗಳ ಎಮ್ಮೆಗೆ ಶಿವಾನಂದ ಮಲ್ಲಪ್ಪ ರುದ್ರಪ್ಪ ಬ್ಲೇಡ್‍ನಿಂದ ಶಸ್ತ್ರಚಿಕಿತ್ಸೆ ಮಾಡಿದ್ದನು. ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿದ್ದು ಎಮ್ಮೆ ಮತ್ತು ಕರು ದುರ್ಮರಣ ಹೊಂದಿತ್ತು. ಇದನ್ನೂ ಓದಿ: ಗಂಗೆಗೂ ಜಲ ದಿಗ್ಬಂಧನ – ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ವಿಸ್ಮಯ ರೀತಿಯಲ್ಲಿ ಜಲೋಧ್ಬವ
ರಾಯಚೂರು: ರಸ್ತೆಯಲ್ಲಿ ಅಡ್ಡ ಬಂದ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿ ಹೊಡೆದಿರುವ ಘಟನೆ ರಾಯಚೂರು-ತೆಲಂಗಾಣ ಗಡಿಯ ಕೃಷ್ಣಾ ಸೇತುವೆ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ಹೈದ್ರಾಬಾದ್‍ಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿ ಹೊಡೆದು ಜಖಂಗೊಂಡಿದೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ
ರಸ್ತೆಗೆ ಅಡ್ಡ ಬಂದ ಎಮ್ಮೆಗೆ ಬಸ್ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಸಾಧ್ಯವಾಗದ ಹಿನ್ನೆಲೆ ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ಅಕ್ರಮವಾಗಿ ಹಸು ಮತ್ತು ಎಮ್ಮೆಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಹಿಂದೂ ಸಂಘಟನೆಗಳು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೈಸ್ ರಸ್ತೆಯಲ್ಲಿ ವಾಹನವೊಂದರಲ್ಲಿ ಹಸು ಮತ್ತು ಎಮ್ಮೆಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿಯನ್ನು ಆಧರಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ವಾಹನ ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ಎಂಟಕ್ಕೂ ಹೆಚ್ಚು ಎಮ್ಮೆಗಳು ಒದ್ದಾಡುತ್ತಿರುವುದು ಪತ್ತೆಯಾಗಿದೆ. ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದು, ಹಸುಗಳನ್ನು ತುಂಬಿದ್ದ ಮತ್ತೊಂದು ವಾಹನ ಕೂಡಾ ಪರಾರಿಯಾಗಿದೆ. ಇದನ್ನೂ ಓದಿ: ದಾವೂದ್ ಇಬ್ರಾಹಿಂ ಸಹೋದರಿ ಮನೆಯಲ್ಲಿ ED ಶೋಧ
ಅಕ್ರಮವಾಗಿ ನೈಸ್ ರೋಡ್ ಮತ್ತು ನೆಲಮಂಗಲಕ್ಕೆ ಸಂಪರ್ಕಿಸುವ ರಸ್ತೆಯ ಮೂಲಕ ಸಾಗಿಸಲಾಗುತ್ತಿತ್ತು. ಸದ್ಯ ವಾಹನವನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದು ಎಂಟು ಎಮ್ಮೆಗಳನ್ನು ರಕ್ಷಿಸಿದ್ದಾರೆ. ಹಸುಗಳನ್ನು ತುಂಬಿದ್ದ ಮತ್ತೊಂದು ವಾಹನ ಕೂಡ ಪರಾರಿಯಾಗಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳೆದ 15 ದಿನಗಳ ಹಿಂದೆಯಷ್ಟೇ ಕ್ಯಾಂಟೇನರ್ ಮೂಲಕ 30ಕ್ಕೂ ಹೆಚ್ಚು ಹಸುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಕೆಂಗೇರಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಹಿಂದೂಗಳು ಹಣೆಗೆ ಕುಂಕುಮ ಇಡುತ್ತಾರೆ, ನಾವು ಅದನ್ನು ಪ್ರಶ್ನೆ ಮಾಡುತ್ತೇವಾ: ಮುಸ್ಲಿಂ ವಿದ್ಯಾರ್ಥಿಗಳು
ತಿರುವನಂತಪುರಂ: ರೈತರೊಬ್ಬರು ತಾವು ಸ್ವಂತ ಮಕ್ಕಳಂತೆ ಸಾಕಿದ ಎಮ್ಮೆಯ ಹಟ್ಟುಹಬ್ಬವನ್ನು ಆಚರಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಕೇರಳದ ಮಲಪ್ಪುರಂನಲ್ಲಿ ರೈತ ತೊಡಿಕಾಪುಲಂನ ಬಶೀರ್ ಅವರು ಬರೋಬ್ಬರಿ ಸಾವಿರ ಕೆಜಿಗೂ ಅಧಿಕ ತೂಕದ ಎಮ್ಮೆಯನ್ನು ಸಾಕಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮಾರುಕಟ್ಟೆಯಿಂದ ಈ ಎಮ್ಮೆಯನ್ನು ಖರೀದಿ ಮಾಡಿದ್ದಾರೆ. ಇವರ ಮುದ್ದಿನ ಎಮ್ಮೆ ರಾಜಮಾಣಿಕ್ಯನ್‍ಗೆ ನಾಲ್ಕನೇ ವರ್ಷದ ಬರ್ತ್‍ಡೇ ಇದಾಗಿದೆ. ಕೇಕ್ ಕತ್ತರಿಸಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.
ಈಗಾಗಲೇ ಅನೇಕರು 10 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು. ಬಶೀರ್ ಈ ಆಫರ್ ತಿರಸ್ಕರಿಸಿದ್ದಾರೆ. ಪಶು ವೈದ್ಯರು ತಿಳಿಸಿರುವ ಪ್ರಕಾರ ಈ ಎಮ್ಮೆ ಮುರ್ರಾ ತಳಿಗೆ ಸೇರಿದೆ. ಇದರ ಪರೀಕ್ಷೆ ನಡೆಸಲು ವೈದ್ಯರು ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿ ಎಮ್ಮೆಯ ಆರೋಗ್ಯವನ್ನು ತಪಾಸಣೆ ಮಾಡುತ್ತಾರೆ.
ದಾವಣಗೆರೆ: ಪ್ರೀತಿಯಿಂದ ಸಾಕಿ ಸಲಹಿದ್ದ ಜಾನುವಾರುಗಳು ಶಾರ್ಟ್ ಸರ್ಕ್ಯೂಟ್ ಗೆ ಬಲಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ನವಲೇಹಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಹಸು ಹಾಗೂ ಎಮ್ಮೆ ಮಂಜುನಾಥ್ ಎಂಬವರಿಗೆ ಸೇರಿದ್ದಾಗಿವೆ.
ಮಂಜುನಾಥ್ ಕುಟುಂಬ ಹಸುಗಳನ್ನು ಕೊಟ್ಟಿಗೆಯಲ್ಲಿ ಬಿಟ್ಟು ಊರಿಗೆ ಹೋಗಿತ್ತು. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ 1 ಲಕ್ಷ 40 ಸಾವಿರ ಬೆಲೆಯ 2 ಜರ್ಸಿ ಆಕಳು, 10 ಸಾವಿರ 1 ಕರು, 50 ಸಾವಿರದ 1 ಎಮ್ಮೆ ಸಾವನ್ನಪ್ಪಿವೆ. ಇದನ್ನೂ ಓದಿ: ಇಂದಿನಿಂದ ಹಾಸನಾಂಬೆಯ ದರ್ಶನ ಆರಂಭ
ಊರಿಂದ ವಾಪಸ್ ಬರುವಷ್ಟರಲ್ಲಿ ಎಮ್ಮೆ ಹಾಗೂ ಹಸು ಕೊಟ್ಟಿಗೆಯಲ್ಲಿ ಸತ್ತು ಬಿದ್ದಿದ್ದವು. ಪ್ರೀತಿಯಿಂದ ಸಾಕಿದ್ದ ಜಾನುವಾರು ಸಾವು ಕಂಡು ಮಂಜುನಾಥ್ ಕುಟುಂಬ ಕಣ್ಣೀರಿಟ್ಟಿದೆ.
ಧಾರವಾಡ: ಇನ್ನು ಮುಂದೆ ಧಾರವಾಡ ಪೇಡ ಮಾತ್ರ ಫೇಮಸ್ ಅಂತಾ ತಿಳಿಯಬೇಡಿ. ಧಾರವಾಡ ಎಮ್ಮೆ ಕೂಡಾ ಅಷ್ಟೇ ಫೇಮಸ್. ಯಾಕಂದ್ರೆ ಧಾರವಾಡ ಎಮ್ಮೆಗೆ ‘ಧಾರವಾಡಿ ಎಮ್ಮೆ’ ಎಂದು ಮಾನ್ಯತೆ ಸಿಕ್ಕಿದೆ. ದೇಸೀ ತಳಿಯ ಈ ಎಮ್ಮೆಯನ್ನು 18ನೇ ತಳಿಯಾಗಿ ಘೋಷಣೆ ಮಾಡಲಾಗಿದೆ.
ಹೌದು. ಇಷ್ಟು ದಿನ ಧಾರವಾಡ ಎಂದರೆ ಎಲ್ಲರೂ ಪೇಡವನ್ನೇ ನೆನಪಿಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಧಾರವಾಡ ಎಮ್ಮೆಯಿಂದ ಕೂಡ ವಿದ್ಯಾಕಾಶಿಯನ್ನು ಗುರುತಿಸಬಹುದು. ಯಾಕಂದರೆ ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಸಾಧನ ಬ್ಯುರೋದಿಂದ, ಧಾರವಾಡ ಎಮ್ಮೆ ತಳಿಗೆ ಮಾನ್ಯತೆ ಸಿಕ್ಕಿದೆ. ಇನ್ನು ಮುಂದೆ ಈ ಎಮ್ಮೆಗೆ ‘ಧಾರವಾಡಿ ಎಮ್ಮೆ’ ಎಂದು ಕರೆಯಬೇಕಾಗಿದ್ದು, ಈ ರಾಷ್ಟ್ರೀಯ ಪಶು ಬ್ಯುರೋ ‘ಇಂಡಿಯಾ ಬಫೆಲ್ಲೋ 0800’ ಎಂದು ನೊಂದಣಿ ಸಂಖ್ಯೆಯೊಂದಿಗೆ 18 ನೇ ತಳಿಯನ್ನಾಗಿ ಮಾನ್ಯತೆ ಕೊಟ್ಟಿದೆ.
ಎಮ್ಮೆಯ ವಿಶೇಷತೆ ಏನು..?
ಇದು 140 ಸೆಂಟಿ ಮೀಟರ್ ಎತ್ತರ ಇರುತ್ತೆ, ಇದರ ಕೋಡುಗಳು ಅರ್ಧಚಂದ್ರಾಕೃತಿಯಲ್ಲಿ ಇರುತ್ತವೆ. ಇದನ್ನೇ ನೋಡಿ ಇದಕ್ಕೆ 18 ನೇ ತಳಿಯನ್ನಾಗಿ ಮಾನ್ಯತೆ ಕೊಡಲಾಗಿದೆ. ಅಲ್ಲದೇ ಈ ಎಮ್ಮೆ 17 ತಿಂಗಳಿಗೊಮ್ಮೆ ಕರು ಕೊಡುತ್ತೆ. ಒಮ್ಮೆ ಕರು ಕೊಟ್ಟರೆ 10 ತಿಂಗಳವರೆಗೆ 1 ಸಾವಿರ ಲೀಟರ್ ಹಾಲನ್ನ ಕೊಡಬಲ್ಲದು. ಇದರ ಮಾನ್ಯತೆಗಾಗಿ ಉತ್ತರ ಕರ್ನಾಟಕದ 4 ಜಿಲ್ಲೆಗಳಲ್ಲಿ ಸಂಶೋಧನೆ ಮಾಡಿಯೇ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಗೆ ಕಳಿಸಿಕೊಡಲಾಗಿತ್ತು. ಈ ಹಿನ್ನೆಲೆ ಈ ವರ್ಷ ಇದಕ್ಕೆ ಮಾನ್ಯತೆ ಸಿಕ್ಕಿದೆ. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಂಡಿಲ್ಲ, 12 ಕೋಟಿ ಮನೆ ಇಲ್ಲ, ಈಗಲೂ ವಿಚಾರಣೆಗೆ ಸಿದ್ಧ: ಅನುಶ್ರೀ
ಸಭಾಪತಿ ಬಸವರಾಜ್ ಹೊರಟ್ಟಿಯವರು, ಈ ತಳಿಗೆ ಮಾನ್ಯತೆ ಕೊಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಬಹಳ ದಿನಗಳ ಹಿಂದೆಯೇ ಇದಕ್ಕೆ ಮಾನ್ಯತೆ ಸಿಗಬೇಕಿತ್ತು ಎನ್ನುವ ಹೊರಟ್ಟಿ, ಮೂರ್ರಾ ಎಮ್ಮೆಯೆಂತೆಯೇ ನಮ್ಮ ಎಮ್ಮೆ ಕೂಡಾ ಈಗ ಪ್ರಸಿದ್ಧಿ ಪಡೆದಿದ್ದು, ಬಹಳ ಸಂತೋಷದ ವಿಷಯ ಎಂದಿದ್ದಾರೆ.
ಒಟ್ಟಾರೆಯಾಗಿ ಧಾರವಾಡ ಎಮ್ಮೆ ಎಂದರೆನೇ ಮೊದಲು ಫೇಮಸ್ ಆಗಿತ್ತು. ಈಗ ಅದಕ್ಕೆ ಮಾನ್ಯತೆ ಸಿಕ್ಕ ಮೇಲೆ ಮತ್ತಷ್ಟು ಪ್ರಸಿದ್ಧಿ ಪಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಯಾರಾದರೂ ರಸ್ತೆಯ ನಡುವೆ ಹೋಗುತ್ತಿದ್ದರೆ, ಅವರಿಗೆ ಧಾರವಾಡ ಎಮ್ಮೆ ಎಂದು ನಗೆಚಟಾಕಿ ಹಾರಿಸುತ್ತಿದ್ದೆವು.. ಆದರೆ ಈಗ ಅದೇ ಎಮ್ಮೆ ದೇಸಿ ತಳಿಯ ಸಾಲಿನಲ್ಲಿ ಸೇರಿಕೊಂಡಿದೆ. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ
ಹಾವೇರಿ: ಕೊರೊನಾ ಲಾಕ್‍ಡೌನ್ ಅನ್‍ಲಾಕ್‍ಗೊಳಿಸಿದ ಹಿನ್ನೆಲೆ ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯಲ್ಲಿ ಜಾನುವಾರುಗಳ ಮಾರಾಟ ಜೋರಾಗಿ ನಡೆದಿದೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಸರ್ಕಾರ ಅನ್ ಲಾಕ್ ಘೋಷಣೆ ಮಾಡಿದೆ. ಇನ್ನು ಅನ್ ಲಾಕ್ ಘೋಷಣೆ ಮಾಡಿ ಹನ್ನೇರಡು ದಿನಗಳು ಆಗಿಲ್ಲ, ಜನರು ಮಾಸ್ಕ್ ಧರಿಸದೇ ಓಡಾಡುವ ಸಂಖ್ಯೆ ಹೆಚ್ಚಾಗಿದೆ.
ಇಂದು ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯ ಮುಂದೆ ಎತ್ತು, ಎಮ್ಮೆ ಹಾಗೂ ಹಸುಗಳ ಮಾರಾಟ ಜೋರಾಗಿತ್ತು. ಕೊರೊನಾ ಎರಡನೇ ಅಲೆಯಿಂದಾಗಿ ಬಂದ್ ಆಗಿದ್ದ ಮಾರುಕಟ್ಟೆಯನ್ನು ಎಪಿಎಂಸಿ ಸಿಬ್ಬಂದಿ ಇಂದು ಬೆಳಗ್ಗೆ ಓಪನ್ ಮಾಡಿರಲಿಲ್ಲ. ಹೀಗಾಗಿ ಎತ್ತು, ಎಮ್ಮೆ ಹಾಗೂ ಹಸು ಮಾರಾಟಕ್ಕೆ ಬಂದ ಜನರು ಮಾರುಕಟ್ಟೆಯ ಮುಂದೆ ನಿಲ್ಲಿಸಿ ವ್ಯಾಪಾರ ವಹಿವಾಟು ನಡೆಸಿದ್ದರು.
ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಕೆಲವು ಜನರು ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ, ಇನ್ನೂ ಕೆಲವರು ಮೈಮರೆತು ಓಡಾಡಿದವರ ಸಂಖ್ಯೆ ಹೆಚ್ಚಾತ್ತು. ವ್ಯಾಪಾರಸ್ಥರನ್ನು ಹಾಗೂ ರೈತರನ್ನು ನಿಯಂತ್ರಣ ಮಾಡಲು ಪೊಲೀಸ್ ಸಿಬ್ಬಂದಿ ಕೂಡ ಇರಲಿಲ್ಲ. ಇದನ್ನೂ ಓದಿ: ಕೆಐಎಡಿಬಿ ಕಚೇರಿ ಮೇಲೆ ಎಸಿಬಿ ದಾಳಿ – 70 ಸಾವಿರ ನಗದು, ದಾಖಲೆ ಜಪ್ತಿ
ಹಾವೇರಿ: ದನ ಮೇಯಿಸಲು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಕಾಮುಕರನ್ನ ಎಮ್ಮೆ ಅಟ್ಟಿಸಿಕೊಂಡು ಹೋಗುವ ಮೂಲಕ ಮಹಿಳೆಯನ್ನ ಪಾರು ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಆರೋಪಿಗಳನ್ನ ಹಿರೇಮರಳಿಹಳ್ಳಿ ಗ್ರಾಮದ ಬಸವರಾಜ ಗಾಳೆಪ್ಪ ದಂಡಿನ್ ಹಾಗೂ ಪರಶುರಾಮ ತಮ್ಮಣ್ಣ ಹಟ್ಟಿ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಹಿರೇಮರಳಿಹಳ್ಳಿ ಗ್ರಾಮದ ತಮ್ಮ ಜಮೀನಿನ ಬದುವಿನ ಹತ್ತಿರವಿರುವ ನೀಲಗಿರಿ ತೋಪಿನಲ್ಲಿ ದನ ಮೇಯಿಸುತ್ತಿದ್ದಾಗ ದಂಡಿನ್ ಅಸಭ್ಯವಾಗಿ ವರ್ತಿಸಿದ್ದಾನೆ.
ಈತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮಹಿಳೆಗೆ ಇನ್ನೋರ್ವ ಆರೋಪಿ ಪರಶುರಾಮ ಹಟ್ಟಿ ಎದುರಿನಿಂದ ಬಂದು ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪ್ರತಿರೋಧ ಒಡ್ಡಿದ ಮಹಿಳೆಯ ಕತ್ತನ್ನು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಮಹಿಳೆ ಚೀರಾಡುತ್ತಿರುವುದನ್ನು ಗಮನಿಸಿದ ಎಮ್ಮೆ ತನ್ನ ಪೋಷಕಿ ಸಂಕಷ್ಟದಲ್ಲಿದ್ದಾಳೆ ಓಡಿಬಂದು ಆರೋಪಿಯಲ್ಲೊಬ್ಬನನ್ನು ಅಟ್ಟಿಸಿಕೊಂಡು ಹೋಗಿದೆ.
ಮಹಿಳೆ ಇನ್ನೋರ್ವನಿಂದ ತಪ್ಪಿಸಿಕೊಂಡು ಓಡಿಹೋಗುವ ಸಂದರ್ಭದಲ್ಲಿ ಎಮ್ಮೆ ಇಬ್ಬರು ಆರೋಪಿಗಳ ಬೆನ್ನಟ್ಟಿ ಹೋಗಿದೆ. ಪ್ರಾಣಾಪಾಯದಿಂದ ಪಾರಾಗಿ ಬಂದ ಮಹಿಳೆ ಗ್ರಾಮದ ಹಿರಿಯರಿಗೆ ಘಟನೆಯನ್ನು ವಿವರಿಸಿದ್ದಾಳೆ. ಪ್ರಕರಣವು ಸವಣೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ಪರಶುರಾಮ ಹಟ್ಟಿಯನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆನ್ನಲಾಗಿದೆ. ಇದನ್ನೂ ಓದಿ: ಯತ್ನಾಳ್ ಪರ ಸದಾ ಕಾಲ ಇರುತ್ತೇನೆ: ಸಿ.ಪಿ ಯೋಗೇಶ್ವರ್
ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಭಾರತದಲ್ಲಿ ಪ್ರತಿಭಾವಂತರಿಗೇನು ಕೊರತೆಯಿಲ್ಲ. ನಾವು ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ವಿಶೇಷವಾದ ಪ್ರತಿಭೆ ಅಡಗಿರುತ್ತದೆ. ಸಾಮಾಜಿಕ ಮಾಧ್ಯಮ ಇಲ್ಲದಿದ್ದರೆ ಜನರಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ವೇದಿಕೆಗಳೇ ಸಿಗುತ್ತಿರಲಿಲ್ಲ.
ಅಂದಹಾಗೇ ಚಿಕ್ಕ ಬಾಲಕನೊರ್ವ ಎಮ್ಮೆ ಮೇಲೆ ಕುಳಿತು ಬಾಲಿವುಡ್ ಹಾಡೊಂದನ್ನು ಹಾಡಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ. ಆಟ ಆಡುವ ವಯಸ್ಸಿನಲ್ಲಿ ಈ ಬಾಲಕ ಎಮ್ಮೆ ಮೇಲೆ ಆರಾಮವಾಗಿ ಕುಳಿತುಕೊಂಡು ಸಲ್ಮಾನ್‍ಖಾನ್ ಅಭಿನಯದ ‘ಮುಜ್ಸೆ ಶಾದಿ ಕರೋಗಿ’ ಎಂಬ ಹಾಡನ್ನು ಇಂಪಾಗಿ ಹಾಡಿದ್ದಾನೆ.
ವೀಡಿಯೋ ಎಲ್ಲಿಯದು ಎಂಬುವುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬಾಲಕನ ಧ್ವನಿಯನ್ನು ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಈ ಹಾಡು 2004ರಲ್ಲಿ ಹಿಟ್ ಪಡೆದುಕೊಂಡಿತ್ತು. ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದ ಎಲ್ಲರೂ ಬಾಲಕನ ಧ್ವನಿಗೆ ಮಾರುಹೋಗುತ್ತಿದ್ದಾರೆ.
ಡೇವಿಡ್ ಧವನ್ ನಿರ್ದೇಶಿಸಿ, ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿರುವ 2004ರ ರೊಮ್ಯಾಂಟಿಕ್ ಸಿನಿಮಾ ‘ಮುಜ್ಸೆ ಶಾದಿ ಕರೋಗಿ’ ಆಗಿದ್ದು, ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.
ಮುಂಬೈ: ಕೋವಿಡ್-19 ನಿರ್ಬಂಧಗಳ ನಡುವೆಯೂ ಎಮ್ಮೆಯ ಹುಟ್ಟುಹಬ್ಬವನ್ನು ಆಚರಿಸಿದ್ದ ವ್ಯಕ್ತಿ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಿರಣ್ ಮಾತ್ರೆ(30) ಎಂಬ ವ್ಯಕ್ತಿ ಗುರುವಾರ ತಮ್ಮ ಥಾಣೆಯಲ್ಲಿರುವ ಮನೆಯಲ್ಲಿ ಎಮ್ಮೆಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದ್ದರೂ, ಬರ್ತ್‍ಡೇಗೆಂದು ಹಾಜರಾಗಿದ್ದವರು ಮಾಸ್ಕ್ ಧರಿಸಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಪೊಲೀಸರು ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 269 (ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕೃತ್ಯ)ದ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.