Tag: ಎಮ್ಮೆ ಕಳ್ಳ

  • 22ರ ಹರೆಯದಲ್ಲಿ ಎಮ್ಮೆ ಕದ್ದವ 80ನೇ ವಯಸ್ಸಿನಲ್ಲಿ ಸಿಕ್ಕಿ ಬಿದ್ದ!

    22ರ ಹರೆಯದಲ್ಲಿ ಎಮ್ಮೆ ಕದ್ದವ 80ನೇ ವಯಸ್ಸಿನಲ್ಲಿ ಸಿಕ್ಕಿ ಬಿದ್ದ!

    ಬೀದರ್: 58 ವರ್ಷಗಳಿಂದ ಪೊಲೀಸರ (Police) ಕೈಗೇ ಸಿಗದೇ ನ್ಯಾಯಾಲಯಕ್ಕೂ (Court) ಹಾಜರಾಗದೇ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳ್ಳನನ್ನು ಬೀದರ್ ಪೊಲೀಸರು (Bidar Police) ಬಂಧಿಸಿದ್ದಾರೆ.

    ಮಹಾರಾಷ್ಟ್ರದ ಮೂಲದ ಕಿಶನ್ ಚಂದರ್ ಹಾಗೂ ಗಣಪತಿ ವಿಠಲ್ ವಾಗ್ಮೋರೆ 1965ರಲ್ಲಿ 2 ಎಮ್ಮೆ, 1 ಕರು ಕದ್ದಿದ್ದರು. ಎಮ್ಮೆ ಮಾಲೀಕ ಮರಳೀಧರಾವ್ ಕುಲಕರ್ಣಿ ಎಂಬುವರು ಭಾಲ್ಕಿಯ ಮಹಕರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದನ್ನೂ ಓದಿ: ಎಂಜಿನಿಯರ್‌ ಮಿದುಳು ನಿಷ್ಕ್ರಿಯ –ಬೆಂಗಳೂರಿನಿಂದ ತಮಿಳುನಾಡಿಗೆ ಜೀವಂತ ಹೃದಯ ರವಾನೆ

     

    ಜಾಮೀನು ಸಿಕ್ಕಿದ ಬಳಿಕ ಇಬ್ಬರು ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಸಮನ್ಸ್, ನೋಟಿಸ್, ವಾರೆಂಟ್ ನೀಡಿದ್ದರೂ ಆರೋಪಿಗಳು ಕ್ಯಾರೇ ಅಂದಿರಲಿಲ್ಲ. ಈ ಪೈಕಿ 2006 ರಲ್ಲಿ ಮೊದಲ ಆರೋಪಿ ಕಿಶನ್ ಚಂದರ್ ಮೃತ ಪಟ್ಟಿದ್ದು, ಈ ಪ್ರಕರಣದ ಎರಡನೇ ಆರೋಪಿ ಪತ್ತೆಗಾಗಿ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ವಿಶೇಷ ತಂಡ ರಚನೆ ಮಾಡಿದ್ದರು.

    ಈಗ ಮಹಾರಾಷ್ಟ್ರದ ಲಾತೂರಿನ ಟಾಕಳಗಾಂವ್ ಗ್ರಾಮದಲ್ಲಿ ಬೀದರ್ ಪೊಲೀಸರು ಎರಡನೇ ಆರೋಪಿ ಗಣಪತಿ ವಿಠಲ್ ವಾಗ್ಮೋರೆಯನ್ನು ಬಂಧಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]