Tag: ಎಮ್ಮೆಮಾಡು

  • ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅರೆಸ್ಟ್

    ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅರೆಸ್ಟ್

    ಮಡಿಕೇರಿ: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಜಮಾಅತ್ ಅಧ್ಯಕ್ಷನನ್ನು ಕೊಡಗು  ಪೊಲೀಸರು ಬಂಧಿಸಿದ್ದಾರೆ.

    ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡುವಿನ ಜಮಾಅತ್ ಅಧ್ಯಕ್ಷ ಖಾದರ್ ಹಾಜಿ ಬಂಧಿತ ಆರೋಪಿ. ಖಾದರ್ ಹಾಜಿಯ ಮನೆಯಲ್ಲೇ ಬಾಡಿಗೆಗೆ ಇರುವ ಸಂತ್ರಸ್ತ ಮಹಿಳೆ ಫೆ.12 ರಂದು ಊಟಕೊಡಲು ಹೋಗಿದ್ದಾರೆ.

    ಈ ವೇಳೆ ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಖಾದರ್ ಹಾಜಿ ಮಹಿಳೆಯನ್ನು ಹಿಡಿದು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಕ್ಷಣವೇ ಮಹಿಳೆ ಚೀರಾಡಿ ಅಲ್ಲಿಂದ ತಪ್ಪಿಸಿಕೊಂಡು ಹೊರ ಬಂದಿದ್ದಾರೆ.

    ಬಳಿಕ ಆರೋಪಿ ಖಾದರ್ ಹಾಜಿ ಈ ವಿಷಯವನ್ನು ಯಾರಿಗಾದ್ರೂ ತಿಳಿಸಿದ್ರೆ ನಿನ್ನನ್ನು ಊರಿನಿಂದ ಬಹಿಷ್ಕರಿಸುವುದಾಗಿ, ಜೊತೆಗೆ ಕೊಲೆ ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

    ಸಂತ್ರಸ್ತ  ಮಹಿಳೆ ಜಮಾಅತ್‍ಗೆ ವಿಷಯ ತಿಳಿಸಿದ್ರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಪೊಲೀಸ್  ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಾಪೋಕ್ಲು ಪೊಲೀಸರು ಖಾದರ್ ಹಾಜಿಯನ್ನು ಬಂಧಿಸಿದ್ದು ಕೋರ್ಟ್ ನ್ಯಾಯಾಂಗ ವಶಕ್ಕೆ ನೀಡಿದೆ.