Tag: ಎಮೆರಿಟಸ್ ರತನ್ ಟಾಟಾ

  • ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರತನ್ ಟಾಟಾ

    ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರತನ್ ಟಾಟಾ

    ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ, ಖ್ಯಾತ ಉದ್ಯಮಿ ಎಮೆರಿಟಸ್ ರತನ್ ಟಾಟಾ ಇತ್ತೀಚೆಗೆ ತಮ್ಮ 84ನೇ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಂಡಿದ್ದಾರೆ.

    ಡಿ.28 ರಂದು ರತನ್ ಟಾಟಾ ಅವರ ಹುಟ್ಟುಹಬ್ಬದ ಹಿನ್ನೆಲೆ ಎಲ್ಲ ಕಡೆಯಿಂದ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬಂದವು. ಎಲ್ಲರೂ ಹುಟ್ಟುಹಬ್ಬ ಎಂದರೆ ಅದ್ದೂರಿ ಪಾರ್ಟಿ ಮಾಡಿ ಆಚರಿಸಿಕೊಂಡರೆ ರತನ್ ಅವರು ಕಪ್‍ಕೇಕ್ ಮೇಲೆ ಇದ್ದ ಕ್ಯಾಂಡೆಲ್ ಅನ್ನು ಊದಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದವರಿಗೆ ಜನ ಉತ್ತರ ನೀಡಿದ್ದಾರೆ: ಹೆಚ್‍ಡಿಕೆ

    ರತನ್ ಅವರು ಹುಟ್ಟುಹಬ್ಬ ಆಚರಿಸಿಕೊಂಡ ವೀಡಿಯೋವನ್ನು ವೈಭವ್ ಭೋರ್ ಅವರು ಲಿಂಕ್ಡ್ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ವೀಡಿಯೋದಲ್ಲಿ ರತನ್ ಅವರ ಸರಳತೆ ನೋಡಿ ಖುಷ್ ಆಗಿದ್ದಾರೆ.

    ಪ್ರಮುಖ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸಹ ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

    ಈ ವೀಡಿಯೋ 30-ಸೆಕೆಂಡ್ ಕ್ಲಿಪ್ ಇದ್ದು, ರತನ್ ಟಾಟಾ ಅವರ ಜೊತೆಗೆ 27 ವರ್ಷದ ಸಹಾಯಕ ಶಂತನು ನಾಯ್ಡು ಇದ್ದಾರೆ. ನಾಯ್ಡು ರತನ್ ಅವರಿಗಾಗಿ ಹುಟ್ಟುಹಬ್ಬದ ಹಾಡನ್ನು ಹಾಡುತ್ತಿದ್ದು, ಆಗ ರತನ್ ಅವರು ವೆನಿಲ್ಲಾ ಕಪ್‍ಕೇಕ್ ಮೇಲಿಂದ ಮೇಣದಬತ್ತಿಯನ್ನು ಊದುತ್ತಾರೆ. ನಂತರ ನಾಯ್ಡು ಅವರು ರತನ್ ಪಕ್ಕದಲ್ಲಿ ಬಂದು ಕುಳಿತುಕೊಂಡು ಅವರಿಗೆ ಕೇಕ್ ತಿನ್ನಿಸುತ್ತಾರೆ. ಈ ವೀಡಿಯೋ ನೋಡಿದರೆ ಅವರಿಬ್ಬರಲ್ಲೂ ಸಂತೋಷ ಎದ್ದು ಕಾಣಿಸುತ್ತೆ. ಇದನ್ನೂ ಓದಿ: ಗ್ಯಾಂಗ್ ವಾರ್ ದ್ವೇಷಕ್ಕೆ ಇಬ್ಬರು ಮಕ್ಕಳು ಸೇರಿ 8 ಮಂದಿ ಬಲಿ

    ಈ ವೀಡಿಯೋ ನೋಡಿದ ನೆಟ್ಟಿಗರು ರತನ್ ಟಾಟಾ ಅವರನ್ನು ಪ್ರಶಂಸಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ನಂತರವೂ ಎಷ್ಟೋಂದು ಸರಳತೆ ಇದೆ. ಇದು ಇತರರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.