Tag: ಎಮರ್ಜೆನ್ಸಿ ಸಿನಿಮಾ

  • ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಚಿತ್ರದ ಟ್ರೈಲರ್ ರಿಲೀಸ್

    ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಚಿತ್ರದ ಟ್ರೈಲರ್ ರಿಲೀಸ್

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ನಟನೆಯ ‘ಎಮರ್ಜೆನ್ಸಿ’ ಚಿತ್ರದ (Emergency) ಟ್ರೈಲರ್ ರಿಲೀಸ್ ಮಾಡಲಾಗಿದೆ. ಮಾಜಿ ಪಿಎಂ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಜೀವ ತುಂಬಿದ್ದಾರೆ. ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ:ಮತ್ತೆ ಮನೆ ರಣರಂಗ- ಚೈತ್ರಾ ಸುಳ್ಳಿ ಎಂದು ಗುಡುಗಿದ ರಜತ್

    ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಕೇಂದ್ರವಾಗಿಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾ ಮಾಡಲಾಗಿದೆ. ಈ ಚಿತ್ರದ 2ನೇ ಟ್ರೈಲರ್ ಇದಾಗಿದ್ದು, ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಪರಕಾಯ ಪ್ರವೇಶ ಮಾಡಿದ್ದಾರೆ. ಖಡಕ್ ಆಗಿ ನಟಿ ಡೈಲಾಗ್ ಹೊಡೆದಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    1975ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ಐತಿಹಾಸಿಕ ಸನ್ನಿವೇಶದ ಚಿತ್ರಣ ಹೊಂದಿರುವ ಸಿನಿಮಾ ಇದಾಗಿದೆ. ರಾಜಕೀಯ ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು ಇಂದಿರಾ ಗಾಂಧಿ ಅವರು ಎದುರಿಸಿದ ರೀತಿಯನ್ನು ಟ್ರೈಲರ್ ಮೂಲಕ ಝಲಕ್ ತೋರಿಸಲಾಗಿದೆ.‌

    ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ರಾಷ್ಟ್ರ ವ್ಯಾಪಿ ನಡೆದ ಪ್ರತಿಭಟನೆಗಳು, ಕರ್ಫ್ಯೂ, ರಾಜಕೀಯ ವಿರೋಧ ಹೀಗೆ ಹಲವು ಸನ್ನಿವೇಶಗಳನ್ನು ಟ್ರೈಲರ್‌ನಲ್ಲಿ ಹೈಲೆಟ್ ಮಾಡಲಾಗಿದೆ. ಕಂಗನಾ ‘ಇಂದಿರಾ ಗಾಂಧಿ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಎಂದಿದ್ದಾರೆ ಕಂಗನಾ.

     

    View this post on Instagram

     

    A post shared by Kangana Ranaut (@kanganaranaut)

    ಕಂಗನಾ ಜೊತೆ ಶ್ರೇಯಸ್ ತಲ್ಪಡೆ, ಅನುಪಮ್ ಖೇರ್, ಮಹಿಮಾ ಚೌದರಿ, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಮುಂತಾದವರು ನಟಿಸಿದ್ದಾರೆ. ಜನವರಿ 17ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ಲ್ಯಾನ್ ಪ್ರಕಾರ ಆಗಿದ್ದರೆ  ಈ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಆಗೋದು ತಡವಾಗಿತ್ತು. ಈಗ ಕಂಗನಾ ಸಿನಿಮಾ ಅಬ್ಬರಿಸಲು ದಿನಗಣನೆ ಶುರುವಾಗಿದೆ.‌ ನಟನೆಯ ಜೊತೆ ನಿರ್ದೇಶಕಿ, ನಿರ್ಮಾಪಕಿಯಾಗಿ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಟಿಗೆ ಗೆಲುವು ಸಿಗುತ್ತಾ? ಕಾಯಬೇಕಿದೆ.

  • ‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್

    ‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ಎಮರ್ಜೆನ್ಸಿ’ (Emergency) ಚಿತ್ರ ಥಿಯೇಟರ್‌ಗೆ ಲಗ್ಗೆಯಿಡಲು ಸಿದ್ಧವಾಗಿದೆ. ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದೆ. ಇದನ್ನೂ ಓದಿ:ದರ್ಶನ್‌ ನಟನೆಯ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರ ನ.22ಕ್ಕೆ ರೀ ರಿಲೀಸ್‌

    ಈ ಹಿಂದೆ ಟ್ರೈಲರ್ ಮೂಲಕ ರಿಲೀಸ್ ಡೇಟ್‌ನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸೆಪ್ಟೆಂಬರ್ 6ರಂದು ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾಕ್ಕೆ ಸೆನ್ಸಾರ್ ಸಿಗದೆ ರಿಲೀಸ್‌ಗೆ ವಿಳಂಬವಾಗಿತ್ತು. 2025ರ ಜನವರಿ 17ರಂದು ‘ಎಮರ್ಜೆನ್ಸಿ’ ಚಿತ್ರ ರಿಲೀಸ್ ಆಗಲಿದೆ ಎಂದು ಕಂಗನಾ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಇನ್ನೂ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನುಪಮ್ ಖೇರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕಂಗನಾ ನಟನೆಯ ಈ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

  • ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸಿಕ್ತು ಪ್ರಮಾಣಪತ್ರ

    ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸಿಕ್ತು ಪ್ರಮಾಣಪತ್ರ

    ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ (Emergency Film) ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಪ್ರಮಾಣಪತ್ರ (CBFC) ವಿತರಿಸಿದೆ. ಈ ಮೂಲಕ ಕಂಗನಾ ನಟನೆಯ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಲೋಗೊ ಲಾಂಚ್ ಮಾಡಿದ ನಿರ್ಮಾಪಕ ಭಾ.ಮ ಹರೀಶ್

    ‘ಎಮರ್ಜೆನ್ಸಿ’ ಚಿತ್ರಕ್ಕೆ ಪ್ರಮಾಣಪತ್ರ ನೀಡಿರುವ ಕುರಿತು ಖುದ್ದು ಕಂಗನಾ (Kangana Ranaut) ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ನಮ್ಮ ಎಮರ್ಜೆನ್ಸಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸ್ವೀಕರಿಸಿದ್ದೇವೆ ಎಂದು ತಿಳಿಸಲು ಖುಷಿಯಾಗುತ್ತಿದೆ. ಶೀಘ್ರದಲ್ಲಿಯೇ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡುತ್ತೇವೆ. ನಿಮ್ಮೆಲ್ಲರ ತಾಳ್ಮೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಎಂದಿದ್ದಾರೆ ನಟಿ.

    ಅಂದಹಾಗೆ, ಎಮರ್ಜೆನ್ಸಿ ಸಿನಿಮಾ ಜೂನ್‌ನಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಸದ್ಯದಲ್ಲೇ ಹೊಸ ರಿಲೀಸ್ ಡೇಟ್ ಘೋಷಣೆ ಮಾಡುತ್ತೇವೆ ಎಂದು ನಟಿ ಗುಡ್ ನ್ಯೂಸ್ ನೀಡಿದ್ದಾರೆ.

    ಇನ್ನೂ ಇಂದಿರಾ ಗಾಂಧಿ (Indira Gandhi) ಜೀವನ ಆಧರಿಸಿದ ಸಿನಿಮಾ ಇದಾಗಿದೆ. ಕಂಗನಾ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರೇ ನಟಿಸುವುದರ ಜೊತೆ ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡಿದ್ದಾರೆ.

  • ಸಿಖ್ಖರ ಅವಹೇಳನ ಆರೋಪ – ಚಂಡೀಗಢ ಕೋರ್ಟ್‌ನಿಂದ ಕಂಗನಾಗೆ ʻಎಮರ್ಜೆನ್ಸಿʼ ನೋಟಿಸ್‌!

    ಸಿಖ್ಖರ ಅವಹೇಳನ ಆರೋಪ – ಚಂಡೀಗಢ ಕೋರ್ಟ್‌ನಿಂದ ಕಂಗನಾಗೆ ʻಎಮರ್ಜೆನ್ಸಿʼ ನೋಟಿಸ್‌!

    ಚಂಡೀಗಢ: ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ಸದ್ಯ ಟೆನ್ಶನ್‌ನಲ್ಲಿದ್ದಾರೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ‘ಎಮರ್ಜೆನ್ಸಿ’ ಸಿನಿಮಾವನ್ನು (Emergency cinema) ನಟಿ ಕಂಗನಾ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಜೊತೆಗೆ ಇದರಲ್ಲಿ ಇಂದಿರಾ ಗಾಂಧಿ  ಪಾತ್ರವನ್ನು ಕೂಡ ಅವರೇ ನಿಭಾಯಿಸಿದ್ದಾರೆ. ಆದರೆ ಅಂದುಕೊಂಡ ಸಮಯಕ್ಕೆ ಈ ಸಿನಿಮಾ ಬಿಡುಗಡೆ ಮಾಡಲು ಆಗಿಲ್ಲ. ಒಂದಿಲ್ಲೊಂದು ವಿವಾದಗಳ ಸುಳಿಗೆ ಸಿನಿಮಾ ಸಿಲುಕುತ್ತಲೇ ಇದೆ. ಈ ನಡುವೆ ಹೊಸದೊಂದಿ ಟೆನ್ಶನ್‌ ಶುರುವಾಗಿದೆ.

    ವಿವಾದಾತ್ಮಕ ಚಿತ್ರ ʻಎಮರ್ಜೆನ್ಸಿʼಗೆ ಸಂಬಂಧಿಸಿದಂತೆ ಕಂಗನಾ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ (Chandigarh Court) ನೋಟಿಸ್ ಜಾರಿ ಮಾಡಿದೆ. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ರವೀಂದರ್ ಸಿಂಗ್ ಬಸ್ಸಿ ಅವರು, ಈ ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಖ್ಖರ ಚಿತ್ರಣವನ್ನು ತಪ್ಪಾಗಿ ಪ್ರದರ್ಶಿಸಲಾಗಿದೆ. ಜೊತೆಗೆ ಸಿಖ್‌ ಸಮುದಾಯದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಹಾಗಾಗಿ ಕಂಗನಾ ವಿರುದ್ಧ ಕೇಸ್‌ ದಾಖಲಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಇದನ್ನೂ ಓದಿ: Bigg Boss Kannada 11: ವೈರಲ್‌ ಆಗ್ತಿದೆ ದೊಡ್ಮನೆ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

    ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್‌ ಕಂಗನಾ ಅವರಿಗೆ ನೋಟಿಸ್‌ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ಮುಂದೂಡಿದೆ. ಇದನ್ನೂ ಓದಿ: ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಿನಾ ಖಾನ್ ರ‍್ಯಾಂಪ್ ವಾಕ್- ಮದುಮಗಳಂತೆ ಮಿಂಚಿದ ನಟಿ

    ಸಿಖ್‌ ಸಂಘಟನೆಗಳಿಂದಲೂ ವ್ಯಾಪಕ ವಿರೋಧ:
    ʻಎಮರ್ಜೆನ್ಸಿʼ ಸಿನಿಮಾ ಆರಂಭದಿಂದಲೂ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ನಡುವೆ ಶಿರೋಮಣಿ ಅಕಾಲಿ ದಳ ಸೇರಿದಂತೆ ಅನೇಕ ಸಿಖ್‌ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಆರಂಭದಿಂದಲೂ ಸಿಖ್ ಸಮುದಾಯವನ್ನು (Sikh Community) ತಪ್ಪಾಗಿ ಬಿಂಬಿಸಲಾಗಿದೆ, ಸಿಖ್ಖರ ಸಮುದಾಯಗಳ ಬಗೆಗಿನ ನೈಜತೆಯನ್ನು ತಿರುಚಲಾಗಿದೆ ಎಂದು ಆರೋಪಿಸಿವೆ. ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ – ಇನ್ನೂ 14 ದಿನ ಜೈಲೇ ಗತಿ

    ‘ಎಮರ್ಜೆನ್ಸಿ’ ಸಿನಿಮಾ ಪೋಸ್ಟ್‌ಪೋನ್‌
    ‘ಎಮರ್ಜೆನ್ಸಿ’ ಚಿತ್ರವನ್ನು ಸೆ.6ರಂದು ರಿಲೀಸ್ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಡುಗಡೆಗೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ. ಸೆನ್ಸಾರ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆ ಸಿಲುಕಿಕೊಂಡಿರುವ ಈ ಸಿನಿಮಾಗೆ ಇನ್ನೂ ಕೂಡ ಪ್ರಮಾಣ ಪತ್ರ ಸಿಕ್ಕಿಲ್ಲ. ಹಾಗಾಗಿ, ಕಂಗನಾ ಸಂಕಷ್ಟಕ್ಕೆ ಈಡಾಗಿದ್ದಾರೆ. ಅದೇ ಬೇಸರದಲ್ಲಿ ಅವರು ಒಂದಿಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆ ಸೆನ್ಸಾರ್ ಸಮಸ್ಯೆಗೆ ಸಿಲುಕಿದ್ದ ದೀಪಿಕಾ ಪಡುಕೋಣೆ ಅವರ ‘ಪದ್ಮಾವತ್’ ಮತ್ತು ಆಲಿಯಾ ಭಟ್ ಅವರ ‘ಉಡ್ತಾ ಪಂಜಾಬ್’ ಸಿನಿಮಾಗಳನ್ನು ಕಂಗನಾ ನೆನಪು ಮಾಡಿದ್ದಾರೆ.

    ಇತ್ತೀಚೆಗೆ ನಟಿ ಕಂಗನಾ ಸಿನಿಮಾಗಾಗಿ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ತಮ್ಮ ಬಂಗಲೆಯನ್ನೇ 32 ಕೋಟಿ ರೂ.ಗೆ ಮಾರಾಟ ಮಾಡಿರುವ ಬಗ್ಗೆ ವರದಿಯಾಗಿತ್ತು. ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯ – ಕಲಬುರಗಿ ಜೈಲಿಗೆ ವಿಲ್ಸನ್‌ ಗಾರ್ಡನ್‌ ನಾಗ ಶಿಫ್ಟ್‌

  • ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

    ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಸದ್ಯ ‘ಎಮರ್ಜೆನ್ಸಿ’ (Emergency Film) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂದರ್ಶನದ ವೇಳೆ, ಎಲ್ಲರಿಗೂ ಸಂಗಾತಿ ಇರಬೇಕು. ನಾನು ಕೂಡ ಮದುವೆಯಾಗುತ್ತೇನೆ (Wedding) ಎಂದು ನಟಿ ಮಾತನಾಡಿದ್ದಾರೆ.

    ಸಂದರ್ಶನದಲ್ಲಿ ಮದುವೆ ಕುರಿತು ಎದುರಾದ ಪ್ರಶ್ನೆಗೆ ಎಲ್ಲರಿಗೂ ಸಂಗಾತಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಸಂಗಾತಿ ಇಲ್ಲದೆ ಬದುಕೋದು ಕಷ್ಟ ಎಂದಿದ್ದಾರೆ ಕಂಗನಾ. ಆದರೆ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸವಾಲು. ನಾನು ಕೂಡ ಮದುವೆಗೆ ಸಿದ್ಧವಾಗಿದ್ದೇನೆ. ಆದರೆ ಆರ್ಗೆನಿಕ್ ಆಗಿ ಲವ್ ಆಗಲಿ ಎಂದು ಭವಿಷ್ಯದ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಪುತ್ರನ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ

    ಈ ವೇಳೆ, ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಪ್ರಯೋಜನಗಳನ್ನು ವಿವರಿಸಿದ್ದಾರೆ. ನೀವು ವಯಸ್ಸಾದಂತೆ, ಪರಸ್ಪರ ಹೊಂದಿಕೊಳ್ಳಲು ನಿಮಗೆ ಹೆಚ್ಚು ಕಷ್ಟವಾಗುತ್ತದೆ ಎಂದಿದ್ದಾರೆ. ನೀವು ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಹೊಂದಿಕೊಳ್ಳೋದು ಅದು ತುಂಬಾ ಸುಲಭ. ಹಳ್ಳಿಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಆ ಸಮಯದಲ್ಲಿ ನಿಮ್ಮ ಉತ್ಸಾಹವು ತುಂಬಾ ತೀವ್ರವಾಗಿರುತ್ತದೆ ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, ಕಂಗನಾ ನಟಿಸಿ, ನಿರ್ದೇಶನ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಇದೇ ಸೆ.6ರಂದು ರಿಲೀಸ್ ಆಗ್ತಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಜೀವ ತುಂಬಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಜನರ ಮನಗೆದ್ದಿದೆ.‌ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

  • ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸಿದ ಕಂಗನಾ ರಣಾವತ್

    ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸಿದ ಕಂಗನಾ ರಣಾವತ್

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಈಗ ಬಿಜೆಪಿ ಸಂಸದೆಯಾಗಿದ್ದಾರೆ. ಮಂಡಿ ಕ್ಷೇತ್ರದಲ್ಲಿ ಗೆದ್ದು ರಾಜಕೀಯ ಕ್ಷೇತ್ರದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ಇದೀಗ ಇಂದಿರಾ ಗಾಂಧಿ (Indira Gandhi) ಕುರಿತ ಸಿನಿಮಾ ‘ಎಮರ್ಜೆನ್ಸಿ’ (Emergency Film) ಬರೋದು ಯಾವಾಗ? ಎಂದು ಕಾಯುತ್ತಿದ್ದವರಿಗೆ ಸಿಹಿಸುದ್ದಿ ಸಿಕ್ಕಿದೆ.

    ಕಳೆದ ಕೆಲವು ತಿಂಗಳುಗಳಿಂದ ಚುನಾವಣೆ ಕೆಲಸ ಎಂದು ಕಂಗನಾ ಬ್ಯುಸಿಯಾಗಿದ್ದರು. ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಿತ್ತು. ಈಗ ಸೆಪ್ಟೆಂಬರ್ 6ರಂದು ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ಮಾಡೋದಾಗಿ ಕಂಗನಾ ಘೋಷಿಸಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಭಾರತದ ಪ್ರಜಾಪ್ರಭುತ್ವದ ಕರಾಳ ಅಧ್ಯಾಯಕ್ಕೆ 50 ವರ್ಷವಾದ ಹಿನ್ನೆಲೆಯಲ್ಲಿ ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸುತ್ತಿದ್ದೇನೆ. ಸ್ವಾತಂತ್ರ್ಯ ಭಾರತದ ಅತ್ಯಂತ ವಿವಾದಾತ್ಮಕ ನಿರ್ಣಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಲಂಡನ್ ಟ್ರಿಪ್ ಮುಗಿಸಿ ಮುಂಬೈಗೆ ಬಂದಿಳಿದ ದೀಪಿಕಾ ದಂಪತಿ

    ಅಂದಹಾಗೆ, ಇಂದಿರಾ ಗಾಂಧಿ ಪಾತ್ರಕ್ಕೆ ಕಂಗನಾ ಜೀವ ತುಂಬಿದ್ದು, ಈ ಚಿತ್ರಕ್ಕೆ ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡ್ತಿದ್ದಾರೆ. ಈ ಸಿನಿಮಾದ ನಂತರ ಕಂಗನಾ ಬಾಲಿವುಡ್‌ಗೆ ಗುಡ್‌ ಬೈ ಹೇಳ್ತಾರಾ? ಕಾದುನೋಡಬೇಕಿದೆ.