Tag: ಎಮರ್ಜನ್ಸಿ

  • ಬದ್ಧವೈರಿ ಕಂಗನಾ ಚಿತ್ರ ನೋಡುವ ಆಸೆ ಇದೆ ಎಂದ ಕರಣ್ : ಭಯವಾಗುತ್ತಿದೆ ಅಂತಾರೆ ನಟಿ

    ಬದ್ಧವೈರಿ ಕಂಗನಾ ಚಿತ್ರ ನೋಡುವ ಆಸೆ ಇದೆ ಎಂದ ಕರಣ್ : ಭಯವಾಗುತ್ತಿದೆ ಅಂತಾರೆ ನಟಿ

    ಬಾಲಿವುಡ್ (Bollywood) ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut) ಮತ್ತು ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ (Karan Johar) ಬದ್ಧವೈರಿಗಳು ಎಂದೇ ಗುರುತಿಸಿಕೊಂಡವರು. ಕರಣ್ ಬಗ್ಗೆ ಕಂಗನಾ ಈವರೆಗೂ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ನೇರಾನೇರ ವಾಗ್ದಾಳಿಯನ್ನೂ  ನಡೆಸಿದ್ದಾರೆ. ಬಾಲಿವುಡ್ ರಾಜಕಾರಣದ ಬಗ್ಗೆ ಮಾತನಾಡುವಾಗೆಲ್ಲ ಕರಣ್ ಹೆಸರು ಎಳೆತಂದಿದ್ದಾರೆ. ಈ ನಡುವೆಯೂ ಅಚ್ಚರಿ ಎನ್ನುವಂತಹ ಹೇಳಿಕೆ ನೀಡಿದ್ದಾರೆ ಕರಣ್.

    ಸದ್ಯ ಕಂಗನಾ ತಮ್ಮದೇ ನಿರ್ದೇಶನ, ನಟನೆ ಹಾಗೂ ನಿರ್ಮಾಣ ಮಾಡಿ ತಯಾರು ಮಾಡಿರುವ ಎಮರ್ಜನ್ಸಿ (Emergency) ಸಿನಿಮಾದ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇಂದಿರಾ ಗಾಂಧಿ ಅವರ ಎಮರ್ಜನ್ಸಿ ಕುರಿತಾದ ಸಿನಿಮಾ ಇದಾಗಿದ್ದು, ಹಲವು ಕಾರಣಗಳಿಂದ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾವನ್ನು ನೋಡಲು ತಾವು ಕಾತರದಿಂದ ಕಾಯುತ್ತಿರುವುದಾಗಿ ಕರಣ್ ಜೋಹಾರ್ ಹೇಳಿಕೊಂಡಿದ್ದಾರೆ. ಇದಕ್ಕೆ ಕಂಗನಾ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಇದನ್ನೂ ಓದಿ:ಚಿಕ್ಕಬಳ್ಳಾಪುರ ಇಶಾ ಫೌಂಡೇಶನ್‌ನಲ್ಲಿ ನಾಗ ಪಂಚಮಿ- ತಮನ್ನಾ, ಶ್ರೀನಿಧಿ ಶೆಟ್ಟಿ ಭಾಗಿ

    ‘ಕರಣ್ ಜೋಹಾರ್ ಅವರು ಈ ಹಿಂದೆ ಮಣಿಕರ್ಣಿಕಾ ಸಿನಿಮಾವನ್ನು ನೋಡುವ ಆಸೆ ವ್ಯಕ್ತ ಪಡಿಸಿದ್ದರು. ಅವರು ಹಾಗೆ ಹೇಳುತ್ತಿದ್ದಂತೆಯೇ ವಿವಾದವೇ ಜಾಸ್ತಿ ಆಯಿತು. ಹಲವರು ಸಿನಿಮಾ ಬಗ್ಗೆ ನೆಗೆಟಿವ್ ಮಾತನಾಡಿದರು. ಏನೆಲ್ಲ ಹಿಂಸೆ ನೀಡಿದರು. ಈಗ ಎಮರ್ಜನ್ಸಿ ಸಿನಿಮಾ ನೋಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ ನನಗೆ ಭಯವಾಗುತ್ತಿದೆ’ ಎಂದಿದ್ದಾರೆ ಕಂಗನಾ.

     

    ತಮ್ಮ ಮತ್ತು ತಮ್ಮಂಥವರು ಸಿನಿಮಾಗಳು ಸೋಲುವುದಕ್ಕೆ ಕರಣ್ ಜೋಹಾರ್ ಕಾರಣ ಎಂದು ಈ ಹಿಂದೆ ಕಂಗನಾ ಹೇಳಿಕೊಂಡಿದ್ದರು. ಸ್ಟಾರ್ ಮಕ್ಕಳನ್ನು ಮಾತ್ರ ಕರಣ್ ಬೆಳೆಸುತ್ತಾರೆ. ಅವರದ್ದೇ ಆದ ಗುಂಪು ಇದೆ. ಅದಕ್ಕಷ್ಟೇ ಅವರು ಸಿನಿಮಾ ಮಾಡುತ್ತಾರೆ ಎಂದೆಲ್ಲ ಆರೋಪ ಮಾಡಿದ್ದರು. ಈಗ ಮತ್ತೆ ಕರಣ್‍ ಬಗೆಗಿನ ಆತಂಕವನ್ನು ಕಂಗನಾ ಹಂಚಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಸತ್ ಭವನವನ್ನು ಶೂಟಿಂಗ್ ಗಾಗಿ ಕೊಡುವಂತೆ ಕೇಳಿದ ಕಂಗನಾ ರಣಾವತ್

    ಸಂಸತ್ ಭವನವನ್ನು ಶೂಟಿಂಗ್ ಗಾಗಿ ಕೊಡುವಂತೆ ಕೇಳಿದ ಕಂಗನಾ ರಣಾವತ್

    ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ಎಮರ್ಜನ್ಸಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಅವರೇ ನಿರ್ದೇಶಿಸಿ, ನಟಿಸುತ್ತಿರುವುದರಿಂದ ಸಾಕಷ್ಟು ಜವಾಬ್ದಾರಿಗಳನ್ನೂ ಅವರು ತಗೆದುಕೊಂಡಿದ್ದಾರೆ. ಇದು ಇಂದಿರಾ ಗಾಂಧಿ ಅವರ ಹೇರಿದ್ದ ತುರ್ತುಪರಿಸ್ಥಿತಿಯ ಕುರಿತಾಗಿ ಮಾಡುತ್ತಿರುವ ಸಿನಿಮಾವಾಗಿದ್ದರಿಂದ ಸಂಸತ್ ಭವನ್ನು ಶೂಟಿಂಗ್ ಗೆ ಕೊಡುವಂತೆ ಅವರು ಕೇಳಿಕೊಂಡಿದ್ದಾರೆ.

    ಸಿನಿಮಾ ಆದಷ್ಟು ನೈಜವಾಗಿಯೇ ಮೂಡಿ ಬರುಬೇಕು ಎನ್ನುವುದು ಅವರ ಕನಸು. ಇಂದಿರಾ ಗಾಂಧಿ ಕಾಲದಲ್ಲಿ ಸಂಸತ್ ನಲ್ಲಿ ನಡೆದ ಘಟನೆಗಳನ್ನು ದೃಶ್ಯವಾಗಿಸುವ ಆಸೆ ಅವರದ್ದು ಹಾಗಾಗಿಯೇ ಸಂಸತ್ ಭವನವನ್ನು ಅವರು ಶೂಟಿಂಗ್ ಮಾಡಲು ಕೇಳಿದ್ದಾರೆ. ಮತ್ತು ತಾವು ಯಾವೆಲ್ಲ ಭಾಗದಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಹೊಂದಲಾಗಿದೆ ಎನ್ನುವ ವಿವರವನ್ನೂ ಅವರು ಕೇಳುಹಿಸಿದ್ದಾರಂತೆ.ಇದನ್ನೂ ಓದಿಗುರೂಜಿನ ಕಳಪೆ ಎಂದ ಅಮೂಲ್ಯಗೆ ಕಿಚ್ಚನ ಖಡಕ್ ಕ್ಲಾಸ್

    ನಿಯಮಗಳ ಪ್ರಕಾರ ಸರಕಾರಿ ಸ್ವಾಮ್ಯದ ಟಿವಿಗಳ ಕ್ಯಾಮೆರಾಗಳನ್ನು ಮಾತ್ರ  ಒಳಗೆ ಬಿಡಲಾಗುತ್ತದೆ. ಅಲ್ಲದೇ, ಶೂಟಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ವೇಳೆಯಲ್ಲಿ ಕಂಗನಾ ಬೇಡಿಕೆಯನ್ನು ಸರಕಾರ ನಿರಾಕರಿಸುವ ಸಾಧ್ಯತೆಯೇ ಹೆಚ್ಚಿದೆ. ಬಿಜೆಪಿ ಪರ ಮತ್ತು ಮೋದಿ ಪರ ಕಂಗನಾ ಹಲವಾರು ಬಾರಿ ಮಾತನಾಡಿದ್ದಾರೆ. ಹಾಗಾಗಿ ಕಂಗನಾಗಾಗಿ ನಿಯಮ ಬದಲಿಸಿ, ಅನುಮತಿ ಕೊಡಲಾಗುತ್ತಾ ಎನ್ನುವ ಚರ್ಚೆ ಕೂಡ ನಡೆದಿದೆ. ಈವರೆಗೂ ಸಂಸತ್ ಒಳಗೆ ಸಿನಿಮಾಗಾಗಿ ಶೂಟಿಂಗ್ ಮಾಡಲು ಅನುಮತಿ ಕೊಟ್ಟಿಲ್ಲವಾದ್ದರಿಂದ ಕಂಗನಾ ಆಸೆ ನಿರಾಸೆ ಆಗುವ ಸಾಧ್ಯತೆಯೇ ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಸಾವರ್ಕರ್’ ಸಿನಿಮಾದ ಶೂಟಿಂಗ್ ಶುರು: ನಿರ್ದೇಶನದ ಜೊತೆ ನಟಿಸಲಿರುವ ರಣದೀಪ್

    ‘ಸಾವರ್ಕರ್’ ಸಿನಿಮಾದ ಶೂಟಿಂಗ್ ಶುರು: ನಿರ್ದೇಶನದ ಜೊತೆ ನಟಿಸಲಿರುವ ರಣದೀಪ್

    ಕೆಲವು ತಿಂಗಳ ಹಿಂದೆ ವೀರ ಸಾವರ್ಕರ್ (Savarkar) ಬದುಕಿನ ಕುರಿತಾದ ಸಿನಿಮಾವೊಂದು ಬಾಲಿವುಡ್ ನಲ್ಲಿ ಮೂಡಿ ಬರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಮಾಡಿತ್ತು. ಈ ಸಿನಿಮಾದಲ್ಲಿ ಸಾವರ್ಕರ್ ಪಾತ್ರವನ್ನು ಬಾಲಿವುಡ್ ನಟ ರಣದೀಪ್ ಹೂಡ ಮಾಡಲಿದ್ದಾರೆ ಎಂದೂ ಹೇಳಲಾಗಿತ್ತು. ಇದೀಗ ಆ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಸಿನಿಮಾದ ಮುಹೂರ್ತ ಮುಗಿಸಿಕೊಂಡು ಶೂಟಿಂಗ್ ಶುರು ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ.

    ಈ ಸಿನಿಮಾ (Cinema) ತಂಡದಿಂದ ಸಿಕ್ಕಿರುವ ಮತ್ತೊಂದು ಅಪ್ ಡೇಟ್ ಏನೆಂದರೆ, ಸಾವರ್ಕರ್ ಅವರ ಪಾತ್ರವನ್ನು ನಿರ್ವಹಿಸುತ್ತಿರುವ ರಣದೀಪ್ ಹೂಡಾ (Randeep Hooda) ಅವರೇ ಈ ಸಿನಿಮಾದ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ರಣದೀಪ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ಈ ಕುರಿತು ಸ್ವತಃ ಹೂಡಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಾವು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ನಿಜ ಎಂದು ಖಚಿತ ಪಡಿಸಿದ್ದಾರೆ.

    ಕೈಯಲ್ಲಿ ಕ್ಲಾಪ್ ಬೋರ್ಡ್ ಹಿಡಿದುಕೊಂಡು ನಿರ್ಮಾಪಕರ ಜೊತೆ ಫೋಟೋ ತಗೆಸಿಕೊಂಡಿರುವ ರಣದೀಪ್, ಸಾವರ್ಕರ್ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಿದೆ ಎಂದೂ ಬರೆದುಕೊಂಡಿದ್ದಾರೆ. ಈ ಸಿನಿಮಾ ನನ್ನಷ್ಟೇ ಎಲ್ಲರನ್ನೂ ಪ್ರಭಾವಿಸಲಿದೆ ಎಂದೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಬಾಲಿವುಡ್ ಸಿನಿಮಾ ರಂಗದಲ್ಲಿ ಅನೇಕ ಬಯೋಪಿಕ್ ಗಳು ಬರುತ್ತಿವೆ. ಒಂದು ಕಡೆ ಸಾವರ್ಕರ್ ಸಿನಿಮಾ ಸೆಟ್ಟೇರಿದ್ದರೆ, ಮತ್ತೊಂದು ಕಡೆ ಕಂಗನಾ ರಾಣಾವತ್ (Kangana Ranaut) ಎಮರ್ಜನ್ಸಿ (Emergency) ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಆಗಿ ಅವರು ನಟಿಸುತ್ತಿದ್ದಾರೆ. ರಾಜಕೀಯ ನಾಯಕರ ಬದುಕನ್ನೇ ಆಧಾರಾವಾಗಿಟ್ಟುಕೊಂಡು ಹಲವು ಸಿನಿಮಾಗಳು ಬರುತ್ತಿವೆ. ಈ ಎಲ್ಲದರ ನಡುವೆ ಸದ್ಯ ಸಾವರ್ಕರ್ ಸಿನಿಮಾ ಸೆಟ್ಟೇರಿದೆ.

    Live Tv
    [brid partner=56869869 player=32851 video=960834 autoplay=true]

  • ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಟೀಸರ್ ಗೆ ಭಾರೀ ವಿರೋಧ

    ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಟೀಸರ್ ಗೆ ಭಾರೀ ವಿರೋಧ

    ಒಂದಿಲ್ಲೊಂದು ಕಾರಣಕ್ಕಾಗಿ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ ಬಾಲಿವುಡ್ ನಟಿ ಕಂಗನಾ ರಣಾವತ್. ಅವರ ಬಹುತೇಕ ವಿವಾದಗಳು ಸಿದ್ಧಾಂತ ಮತ್ತು ನಿಲುವುಗಳ ತಳಹದಿಯಲ್ಲೇ ಹುಟ್ಟಿಕೊಂಡಿರುತ್ತವೆ. ಆದರೂ, ಅವುಗಳನ್ನು ಎದುರಿಸುತ್ತಲೇ ಮತ್ತೊಂದು ವಿವಾದಕ್ಕೆ ಜಂಪ್ ಆಗಿರುತ್ತಾರೆ. ಈಗ ಆಗಿರುವುದು ಅದೇ, ಅವರ ಧಾಕಡ್ ಸಿನಿಮಾ ಮಕಾಡೆ ಮಲಗಿದೆ. ನಿರ್ಮಾಪಕರನ್ನು ಅವರು ಆರ್ಥಿಕ ಸಂಕಷ್ಟಕ್ಕೀಡು ಮಾಡಿದ್ದಾರೆ ಎನ್ನುವ ಆರೋಪವಿದೆ. ಅದೆಲ್ಲವನ್ನೂ ಬಿಟ್ಟು ಕಂಗನಾ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.

    ಹೌದು, ಮೊನ್ನೆಯಷ್ಟೇ ಕಂಗನಾ ರಣಾವತ್ ನಟನೆಯ ಹೊಸ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಎಮರ್ಜೆನ್ಸಿ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಹೀಗಾಗಿಯೇ ಚಿತ್ರಕ್ಕೆ ಎಮರ್ಜೆನ್ಸಿ ಎಂದೇ ಹೆಸರಿಟ್ಟಿದ್ದಾರೆ. ಹಾಗಾಗಿ ಈ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟೀಸರ್ ನೋಡಿ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ಎಮರ್ಜೆನ್ಸಿ ಕುರಿತಾಗಿ ಸಿನಿಮಾ ಮಾಡುತ್ತಿದ್ದರು, ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಅದರಲ್ಲೂ ಸಮಾಜಕ್ಕೆ ತಪ್ಪು ಸಂದೇಶಗಳನ್ನು ಕೊಡುವ ಸಿನಿಮಾಗಳಿದ್ದರೆ, ಮೊದಲು ಅದರಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ಕಂಗನಾ ಪಾತ್ರವು ಇಂದಿರಾ ಗಾಂಧಿ ಅವರನ್ನು ಅವಮಾನಿಸುವಂತ ರೀತಿಯಲ್ಲಿ ಇದೆ ಎಂದು ಆರೋಪಿಸಿ, ಟೀಸರ್ ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಕೂಡಲೇ ಈ ಸಿನಿಮಾವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]