Tag: ಎಬಿ ಡೆವಿಲಿಯರ್ಸ್

  • ಆರ್​ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ ಕೊಹ್ಲಿ, ಎಬಿಡಿ

    ಆರ್​ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ ಕೊಹ್ಲಿ, ಎಬಿಡಿ

    ಬೆಂಗಳೂರು: 2019ರ ಐಪಿಎಲ್ ಟೂರ್ನಿಯಲ್ಲಿ ನಿರಾಸೆ ಮೂಡಿಸಿದ್ದ ಆರ್ ಸಿಬಿ ತಂಡದ ನಾಯಕ ವಿರಾಟ್‍ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಧನ್ಯವಾದ ತಿಳಿಸಿ ಭಾವನಾತ್ಮಕ ಸಂದೇಶ ನೀಡಿದ್ದಾರೆ.

    ಈ ಬಾರಿಯ ಟೂರ್ನಿಯ ಆರಂಭದಿಂದಲೂ ತಂಡಕ್ಕೆ ಅಭಿಮಾನಿಗಳು ನೀಡಿದ ಬೆಂಬಲಕ್ಕೆ ಥ್ಯಾಂಕ್ಸ್. ಕಳೆದ ಪಂದ್ಯದಲ್ಲಿ ಮಳೆಯಿಂದ ಆಟ ತಡವಾಗಿ ಆರಂಭವಾಗಿತ್ತು. ಆದರೆ ನೀವು ಕಾದುಕುಳಿತು ನಮಗೆ ಬೆಂಬಲ ನೀಡಿದ್ದೀರಿ. ಇದು ನನ್ನ ಜೀವನದ ಸ್ಮರಣೀಯ ಕ್ಷಣವಾಗಿರುತ್ತದೆ ಎಂದು ಎಬಿಡಿ, ಕೊಹ್ಲಿ ತಿಳಿಸಿದ್ದಾರೆ.

    ಟೂರ್ನಿಯಲ್ಲಿ ಇನ್ನು ಒಂದು ಪಂದ್ಯ ಮಾತ್ರ ಉಳಿದಿದೆ. ಈ ಬಾರಿಯ ಟೂರ್ನಿ ಸಾಕಷ್ಟು ನಿರಾಸೆ ಮೂಡಿಸಿದೆ. ಆದರೆ ನಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದು, ಮುಂದಿನ ಟೂರ್ನಿಯಲ್ಲಿ ಮತ್ತಷ್ಟು ಉತ್ತಮವಾಗಿ ಕಮ್ ಬ್ಯಾಕ್ ಮಾಡುತ್ತೇವೆ ಎಂದು ಕೊಹ್ಲಿ ತಿಳಿಸಿದರು.

    ಟೂರ್ನಿಯಲ್ಲಿ ಸಾಕಷ್ಟು ಏರಿಳಿತಗಳ ಪ್ರದರ್ಶನವನ್ನು ನೀಡಿದ್ದು. ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇವೆ. ಆದರೆ ನಮಗೆ ನೀವು ನೀಡುವ ಬೆಂಬಲ ಮುಂದುವರಿಯಲಿ, ಅಂತಿಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ನಿಮ್ಮಂತಹ ಅಭಿಮಾನಿಗಳು ಇರುವುದು ನಮಗೆ ಸಾಕಷ್ಟು ಖುಷಿ ಕೊಡುತ್ತದೆ. ನಮ್ಮನ್ನು ಸದಾ ಬೆಂಬಲಿಸುತ್ತೀರಿ ಎಂದು ಎಬಿಡಿ ಮನವಿ ಮಾಡಿದ್ದಾರೆ.

    ಟೂರ್ನಿಯ ಆರಂಭದ 6 ಪಂದ್ಯಗಳಲ್ಲಿ ಆರ್ ಸಿಬಿ ಸೋತಿದ್ದ ಆರ್ ಸಿಬಿ, ಇದುವರೆಗೂ ಆಡಿರುವ 13 ಪಂದ್ಯಗಳ ಪೈಕಿ 4 ರಲ್ಲಿ ಗೆದ್ದು, ಒಂದು ಪಂದ್ಯದಲ್ಲಿ ಅಂಕಗಳನ್ನು ಹಂಚಿಕೊಂಡಿರುವ ಪರಿಣಾಮ 9 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.