Tag: ಎಬಿಡಿ

  • ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ

    ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ

    ಮುಂಬೈ: ಲೆಜೆಂಡರಿ ಕ್ರಿಕೆಟಿಗರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲ್ ಆಫ್ ಫೇಮ್‍ಗೆ ಸೇರ್ಪಡೆಗೊಂಡ ಮೊದಲ ಇಬ್ಬರು ಆಟಗಾರರಾಗಿದ್ದಾರೆ.

    CHRIS GAYLE

    ಈ ಕುರಿತು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಇಬ್ಬರು ಆತ್ಮೀಯ ಸ್ನೇಹಿತರ ಸೇರ್ಪಡೆಯ ಬಗ್ಗೆ ಮಾತನಾಡಿ, ಆರ್‌ಸಿಬಿ ಪ್ಲೇ ಬೋಲ್ಡ್ ತತ್ವವನ್ನು ನಿಜವಾಗಿಯೂ ತಂದಿದ್ದು ಅವರೇ. ಕ್ರೀಡಾಮನೋಭಾವದಿಂದ ಎಬಿಡಿ ಕ್ರಿಕೆಟ್ ಆಟವನ್ನು ನಿಜವಾಗಿಯೂ ಬದಲಾಯಿಸಿದ್ದಾರೆ ಎಂದು ಫ್ರಾಂಚೈಸಿಯ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ.

    ಇಬ್ಬರೂ ಆಟಗಾರರನ್ನು ಹಾಲ್ ಆಫ್ ಫೇಮ್‍ನಲ್ಲಿ ಸೇರ್ಪಡೆ ಮಾಡಿರುವುದು ಹೆಮ್ಮೆಯ ವಿಷಯ. ಅವರ ಆಟದ ವೀಡಿಯೊಗಳನ್ನು ನೋಡುವಾಗ ರೋಮಾಂಚನವಾಗುತ್ತದೆ. ಐಪಿಎಲ್ ಯಶಸ್ವಿಯಾಗಿ ಬೆಳೆಯುವಲ್ಲಿ ಇವರಿಬ್ಬರ ಕಾಣಿಕೆ ದೊಡ್ಡದು ಎಂದು ಕೊಹ್ಲಿ ಹೇಳಿದ್ದಾರೆ.

    2011 ರಿಂದ 2017 ರವರೆಗೆ ಆರ್‌ಸಿಬಿ ಪರ ಆಡಿರುವ ಗೇಲ್ ಮಾತನಾಡಿ, ನನಗೆ ತಂಡದಲ್ಲಿ ಅವಕಾಶ ನೀಡಿದ್ದಕ್ಕಾಗಿ ಆರ್‌ಸಿಬಿ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಇದು ನಿಜಕ್ಕೂ ವಿಶೇಷವಾಗಿತ್ತು. ಹಾಲ್ ಆಫ್ ಫೇಮ್‍ಗೆ ಸೇರ್ಪಡೆಗೊಂಡಿರುವುದು ನಿಜಕ್ಕೂ ಅದ್ಭುತವಾಗಿದೆ. ನಾನು ಯಾವಾಗಲೂ ಬೆಂಗಳೂರು ತಂಡವನ್ನು ನನ್ನ ಹೃದಯಕ್ಕೆ ಹತ್ತಿರ ಇಡುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

    ABD

    ದಕ್ಷಿಣ ಆಫ್ರಿಕಾದ ದೈತ್ಯ ಆಟಗಾರ ಡಿವಿಲಿಯರ್ಸ್ 2011 ರಿಂದ 2021 ರವರೆಗೆ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದರು. ವೆಸ್ಟ್ ಇಂಡೀಸ್‍ನ ಎಡಗೈ ಬ್ಯಾಟ್ಸ್‌ಮ್ಯಾನ್ ಗೇಲ್ ಆರು ವರ್ಷಗಳ ಕಾಲ ಫ್ರಾಂಚೈಸಿಯಲ್ಲಿದ್ದರು.

  • ಈ ಬಾರಿಯ ಐಪಿಎಲ್‍ನಲ್ಲಿ ಕಾಣಸಿಗಲ್ಲ ಈ ಜೋಡಿ ಆಟಗಾರರ ಕಮಾಲ್

    ಈ ಬಾರಿಯ ಐಪಿಎಲ್‍ನಲ್ಲಿ ಕಾಣಸಿಗಲ್ಲ ಈ ಜೋಡಿ ಆಟಗಾರರ ಕಮಾಲ್

    ಮುಂಬೈ: 15ನೇ ಆವೃತ್ತಿ ಐಪಿಎಲ್‍ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಈ ಬಾರಿ ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿ ಆಟಗಾರರ ಆಟವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

    ಈವರೆಗಿನ ಐಪಿಎಲ್‍ನಲ್ಲಿ ಕೆಲ ಆಟಗಾರರು ಜೊತೆಯಾಗಿ ಆಡಿ ತಂಡಕ್ಕೆ ಅದೆಷ್ಟೋ ಗೆಲುವನ್ನು ತಂದುಕೊಟ್ಟಿರುವ ಪಂದ್ಯಗಳಿವೆ. ಅದರಲ್ಲೂ ಕೆಲ ಸ್ಟಾರ್ ಜೋಡಿ ಅಭಿಮಾನಿಗಳನ್ನು ರಂಜಿಸುತ್ತಿತ್ತು. ಆದರೆ ಈ ಬಾರಿ ಪ್ರಮುಖ ಮೂರು ಸ್ಟಾರ್ ಜೋಡಿಗಳು ಬೇರ್ಪಟ್ಟಿದೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    ಐಪಿಎಲ್‍ನಲ್ಲಿ ಆಟಗಾರರ ನಡುವೆ ಉತ್ತಮ ಸಂಬಂಧ ವಿರುತ್ತದೆ. ಹಲವು ದೇಶದ ಆಟಗಾರರು ಒಂದೇ ತಂಡಕ್ಕಾಗಿ ಆಡುತ್ತಾರೆ. ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಇವರಿಬ್ಬರು ಜೊತೆಯಾಟ ಆರಂಭಿಸಿದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು. ಈ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದರು. ಇವರಿಬ್ಬರು ಐಪಿಎಲ್‍ನಲ್ಲಿ ಎರಡು ಬಾರಿ 200 ರನ್‍ಗಳ ಜೊತೆಯಾಟವಾಡಿ ಮಿಂಚಿದ್ದರು. ಆದರೆ ಈ ಬಾರಿ ಕೊಹ್ಲಿ ಜೊತೆ ಎಬಿಡಿ ಕಾಣಿಸುವುದಿಲ್ಲ. ಈಗಾಗಲೇ ಎಬಿಡಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವುದರಿಂದಾಗಿ ಆರ್​ಸಿಬಿ ತಂಡದಲ್ಲಿ ಎಬಿಡಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಕೊಹ್ಲಿ ಮಾತ್ರ ಆರ್​ಸಿಬಿ ತಂಡದಲ್ಲಿದ್ದಾರೆ.

    ಎಬಿಡಿ, ಕೊಹ್ಲಿಯಂತೆ ಉತ್ತಮ ಸಂಬಂಧ ಹೊಂದಿರುವ ಇನ್ನೊಂದು ಸ್ಟಾರ್ ಜೋಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಜೋಡಿ ಇವರಿಬ್ಬರು ಸಿಎಸ್‍ಕೆ ತಂಡದ ಶಕ್ತಿಯಾಗಿದ್ದರು. ಅದರಲ್ಲೂ ರೈನಾ ಸಿಎಸ್‍ಕೆ ತಂಡದ ರನ್ ಮೆಷಿನ್ ಆದರೆ, ಧೋನಿ ತಂಡದ ನಾಯಕನಾಗಿ ಜೊತೆಯಾಗಿರುತ್ತಿದ್ದರು. ಮಿಡಲ್ ಆರ್ಡರ್‌ನಲ್ಲಿ ಅಬ್ಬರಿಸುತ್ತಿದ್ದ ಈ ಜೋಡಿಯ ಆಟ ಈ ಬಾರಿ ಅಭಿಮಾನಿಗಳಿಗೆ ಕಣ್ತುಂಬಿಕೊಳ್ಳಲು ಸಿಗುವುದಿಲ್ಲ. ಧೋನಿ ಸಿಎಸ್‍ಕೆ ತಂಡದಲ್ಲಿದ್ದರೂ ಕೂಡ, ರೈನಾ ತಂಡದಲ್ಲಿಲ್ಲ. ಹಾಗಾಗಿ ಈ ಸ್ಟಾರ್ ಜೋಡಿ ಇನ್ಮುಂದೆ ಸಿಎಸ್‍ಕೆ ತಂಡದಲ್ಲಿ ಜೊತೆಯಾಗಿ ಕಾಣಿಸುವುದು ಕನಸಿನ ಮಾತಾಗಿದೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ

    ಈ ಎರಡು ಜೋಡಿಗಳ ಮಧ್ಯೆ ಗಮನ ಸೆಳೆದ ಇನ್ನೊಂದು ಜೋಡಿ ಕನ್ನಡಿಗರ ಜೋಡಿ. ಹೌದು ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್‌ವಾಲ್‌ ಕಳೆದ ಎರಡು ವರ್ಷ ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಆಡುವ ಜೊತೆಯಾಟ ನೋಡುವುದೇ ಹಬ್ಬದಂತಿತ್ತು. ಕರ್ನಾಟಕ ತಂಡದಿಂದ ಹಿಡಿದು ಆರಂಭವಾಗಿದ್ದ ಈ ಜೋಡಿಯ ಆಟ ಟೀಂ ಇಂಡಿಯಾ ಮತ್ತು ಐಪಿಎಲ್‍ನಲ್ಲೂ ಅಭಿಮಾನಿಗಳು ನೋಡಿದ್ದರು. ಆದರೆ ಈ ಬಾರಿ ಈ ಜೋಡಿ ಬೇರೆ, ಬೇರೆಯಾಗಿದೆ. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾದರೆ, ಮಯಾಂಕ್ ಪಂಜಾಬ್ ತಂಡದ ನಾಯಕರಾಗಿ ಪರಸ್ಪರ ಎದುರುಬದುರಾಗಲಿದ್ದಾರೆ.

  • ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

    ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

    ದಕ್ಷಿಣ ಆಫ್ರಿಕಾ ತಂಡದ ಮಾಜಿ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತಿದ್ದ ಎಬಿಡಿ ಆರ್‌ಸಿಬಿ ಸಹಿತ ಎಲ್ಲಾ ಮಾದರಿಯ ಕ್ರಿಕೆಟ್ ವಿದಾಯ ಘೋಷಿಸಿದ್ದಾರೆ. ಈ ಬಗ್ಗೆ ಪ್ರಕಟನೆ ಹೊರಡಿಸಿದ ಎಬಿಡಿ, ನಾನು ಅದ್ಭುತವಾದ ಕ್ರಿಕೆಟ್ ಜರ್ನಿ ಕಳೆದಿದ್ದೇನೆ. ಇದೀಗ ಕ್ರಿಕೆಟ್ ಪಯಣಕ್ಕೆ ನಿವೃತ್ತಿ ಘೋಷಿಸಲು ಮುಂದಾಗಿದ್ದೇನೆ. ನಾನು ಪ್ರತಿ ಪಂದ್ಯವನ್ನು ಕೂಡ ತುಂಬಾ ಎಂಜಾಯ್ ಮಾಡಿಕೊಂಡು ಆಡಿದ್ದೇನೆ. ಇದೀಗ ನನ್ನ ವಯಸ್ಸು 37 ಇಲ್ಲಿಗೆ ಆಟ ನಿಲ್ಲಿಸುತ್ತಿದ್ದು, ನನ್ನ ಕ್ರಿಕೆಟ್ ವೃತ್ತಿ ಜೀವನಕ್ಕೆ ಸಹಾಯ ಮಾಡಿದ ನನ್ನ ಕುಟುಂಬದೊಂದಿಗೆ ಮುಂದಿನ ಜೀವನ ಕಳೆಯಲು ಬಯಸುತ್ತೇನೆ ಎಂದು ಭಾವುಕ ವಿದಾಯ ಘೋಷಿಸಿದ್ದಾರೆ.

    ಎಬಿಡಿ 2018ರಲ್ಲಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ನಂತರ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಫ್ರಾಂಚೈಸಿ ಟಿ20 ಲೀಲ್‍ಗಳಲ್ಲಿ ಆಡುತ್ತಿದ್ದರು ಅದರಲ್ಲೂ ಐಪಿಎಲ್‍ನಲ್ಲಿ ಆರ್‌ಸಿಬಿ ಪರ 2011 ರಿಂದ 10 ಸೀಸನ್‍ಗಳಲ್ಲಿ ಆಡುತ್ತಿರುವ ಎಬಿಡಿ 156 ಪಂದ್ಯಗಳಿಂದ 4,491 ರನ್ ಸಿಡಿಸಿ ಮಿಂಚಿದ್ದರು.

    2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದ ಎಬಿಡಿ, 114 ಟೆಸ್ಟ್‌ಗಳಿಂದ 8,765 ರನ್, 228 ಏಕದಿನ ಪಂದ್ಯಗಳಿಂದ 9,577 ರನ್ ಮತ್ತು 184 ಟಿ20 ಪಂದ್ಯದಿಂದ 5,162 ರನ್ ಸಿಡಿಸಿದ್ದರು. ನಿವೃತ್ತಿ ಬಳಿಕ ಫ್ರಾಂಚೈಸಿ ಲೀಗ್‍ಗಳಲ್ಲಿ ಭರ್ಜರಿ ಪ್ರದರ್ಶನ ಕೊಡುತ್ತಿದ್ದರು. ಇದನ್ನು ಗಮನಿಸಿ 2021 ಟಿ20 ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಪುನಾರಾಗಮನ ಮಾಡುವ ವದಂತಿ ಹರಿದಾಡುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

    ಇದೀಗ ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ದೂರ ಸರಿಯುವ ಮೂಲಕ ಇನ್ನೂ ಎಬಿಡಿ ಆಟವನ್ನು ಮೈದಾನದಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

  • ಅರಬ್ ನಾಡಲ್ಲಿ ಘರ್ಜಿಸುತ್ತಾ ಆರ್​ಸಿಬಿ..? – ಇಂದು RCB-KKR ಮುಖಾಮುಖಿ 

    ಅರಬ್ ನಾಡಲ್ಲಿ ಘರ್ಜಿಸುತ್ತಾ ಆರ್​ಸಿಬಿ..? – ಇಂದು RCB-KKR ಮುಖಾಮುಖಿ 

    ದುಬೈ: ಐಪಿಎಲ್‍ನ 31ನೇ ಪಂದ್ಯದಲ್ಲಿ ಇಂದು ಬಲಿಷ್ಟ ತಂಡಗಳಾದ ಆರ್​ಸಿಬಿ ಹಾಗೂ ಕೆಕೆಆರ್ ಮುಖಾಮುಖಿಯಾಗಲಿದೆ. ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬೆಂಗಳೂರು ತಂಡ ದ್ವಿತೀಯಾರ್ಧದಲ್ಲೂ ಗೆಲುವಿನ ಓಟ ಮುಂದುವರಿಸಲು ಕಾತರದಿಂದ ಕಾಯುತ್ತಿದೆ. ಮೊದಲಾರ್ಧದಲ್ಲಿ ಸೋತು ಸೊರಗಿರುವ ಕೆಕೆಆರ್ ತಂಡ ಗೆಲುವಿನ ಲಯಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ.

    ಈವರೆಗೂ ನಡೆದಿರುವ ಎಲ್ಲಾ ಪಂದ್ಯಗಳನ್ನು ಗಮನಿಸಿದರೆ ಕೆಕೆಆರ್ ಅಂಕಿ ಅಂಶಗಳಲ್ಲಿ ಆರ್​ಸಿಬಿ ತಂಡಕ್ಕಿಂತ ಮುಂದಿದೆ. ಉಭಯ ತಂಡಗಳು ಒಟ್ಟು 27 ಬಾರಿ ಐಪಿಎಲ್‍ನಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಕೆಕೆಆರ್ 14 ಬಾರಿ ಜಯ ದಾಖಲಿಸಿದೆ. ಇದನ್ನೂ ಓದಿ: ಗಾಯಕ್ವಾಡ್ ಘರ್ಜನೆ – ಚೆನ್ನೈ ಸೂಪರ್ ಕಿಂಗ್ಸ್‌ಗೆ 20 ರನ್‍ಗಳ ಜಯ

    ಐಪಿಎಲ್ ಮೊದಲಾರ್ಧದಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ಒಂದು ಪಂದ್ಯದಲ್ಲಿ ಸೆಣೆಸಿವೆ. ಬೆಂಗಳೂರು ರಾಯಲ್ ಚಾಲೆಂರ್ಜರ್ಸ್ ತಂಡದ ಆಟಗಾರ ಗ್ಲೆನ್ ಮಾಕ್ಸ್‍ವೆಲ್ (78) ಹಾಗೂ ಎಬಿ ಡಿವಿಲಿಯರ್ಸ್ ಬಿರುಸಿನ (76) ರನ್‍ಗಳೊಂದಿಗೆ 204 ರನ್‍ಗಳ ಬಹೃತ್ ಟಾರ್ಗೆಟ್ ಅನ್ನು ಆರ್​ಸಿಬಿ, ಕೆಕೆಆರ್ ತಂಡಕ್ಕೆ ನೀಡಿತ್ತು. ಈ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ಕೇವಲ 166 ರನ್‍ಗಳಿಸಿ ಆರ್​ಸಿಬಿ ಎದುರು ಮಂಡಿಯೂರಿತ್ತು. ಇದನ್ನೂ ಓದಿ: ಆರ್​ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‍ ಬೈ!

    ಉಭಯ ತಂಡಗಳ ಬಲಾಬಲವನ್ನು ನೋಡುವುದಾದರೆ, ಮೆಲ್ನೋಟಕ್ಕೆ ಆರ್​ಸಿಬಿ ಕೆಕೆಆರ್ ವಿರುದ್ಧ ಕಳೆದ ಸೀಸನ್‍ನಿಂದ ಕೊಂಚ ಮೇಲುಗೈ ಸಾಧಿಸುತ್ತಾ ಬಂದಿದೆ. ಆರ್​ಸಿಬಿ ಪರ ನಾಯಕ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಗ್ಲೆನ್ ಮಾಕ್ಸ್‍ವೆಲ್, ಎಬಿ ಡಿವಿಲಿಯರ್ಸ್, ಬ್ಯಾಟಿಂಗ್‍ನಲ್ಲಿ ಅಬ್ಬರಿಸಬಲ್ಲರು. ಬೌಲಿಂಗ್ ವಿಭಾಗವನ್ನು ನೋಡುವುದಾದರೆ ಹರ್ಷಲ್ ಪಟೇಲ್, ಮಹಮದ್ ಸಿರಾಜ್, ಚಾಹಲ್, ಜೇಮೀಸನ್ ಎದುರಾಳಿ ತಂಡದ ಆಟಗಾರರನ್ನು ಕಟ್ಟಿಹಾಕುವ ಸಾಮಥ್ರ್ಯ ಹೊಂದಿದ್ದಾರೆ.

    ಕೆಕೆಆರ್ ಕೂಡ ಆರ್​ಸಿಬಿಯಷ್ಟೇ ಬಲಿಷ್ಟವಾಗಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಶುಭಮನ್ ಗಿಲ್, ನೀತೀಶ್ ರಾಣ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್ ರನ್‍ಗಳ ಹೊಳೆಯನ್ನೆ ಹರಿಸಬಲ್ಲರು. ವೆಸ್ಟ್ ಇಂಡೀಸ್ ಆಲ್‍ರೌಂಡರ್ ಆಂಡ್ರೆ ರಸೆಲ್ ತಂಡದಲ್ಲಿರುವುದು ಬ್ಯಾಟಿಂಗ್ ವಿಭಾಗ ಮತ್ತಷ್ಟು ಶಕ್ತಿಶಾಲಿಯಾಗಿದೆ. ಇನ್ನು ಬೌಲಿಂಗ್ ವಿಭಾಗವನ್ನು ನೋಡುವುದಾದರೆ ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಎದುರಾಳಿ ತಂಡವನ್ನು ಕಟ್ಟಿಹಾಕಬಲ್ಲರು.

    ಉಭಯ ತಂಡಗದಲ್ಲೂ ಸ್ಟಾರ್ ಆಟಗಾರರಿದ್ದು, ಎಬಿ ಡಿವಿಲಿಯರ್ಸ್ ಆರ್​ಸಿಬಿಯ ಟ್ರಾಂಪ್ ಕಾರ್ಡ್ ಪ್ಲೇಯರ್ ಎನಿಸಿಕೊಂಡಿದ್ದಾರೆ. ಕೆಕೆಆರ್ ಪರ ಆಂಡ್ರೆ ರಸೆಲ್ ಟ್ರಾಂಪ್ ಕಾರ್ಡ್ ಪ್ಲೇಯರ್ ಎನ್ನಬಹುದು. ಇಂದು ರಾತ್ರಿ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು ಎರಡು ತಂಡಗಳ ಅಭಿಮಾನಿಗಳು ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ.

  • ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್​ಸಿಬಿ ಬೌಲರ್ಸ್

    ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್​ಸಿಬಿ ಬೌಲರ್ಸ್

    ದುಬೈ: ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಆರ್​ಸಿಬಿಯ ಬಿ ತಂಡದ ಬೌಲರ್​ಗಳನ್ನು ಬೆಂಡೆತ್ತಿ ಎಬಿ ಡಿವಿಲಿಯರ್ಸ್ ಶತಕ ಸಿಡಿಸಿ ಮಿಂಚಿದ್ದಾರೆ.

    ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲಾ ತಂಡಗಳು ದುಬೈನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಆರ್​ಸಿಬಿ ಆಟಗಾರರು ತಮ್ಮಲ್ಲೆ ಎರಡು ತಂಡಗಳನ್ನು ಮಾಡಿಕೊಂಡು ಅಭ್ಯಾಸ ಪಂದ್ಯವಾಡಿದ್ದಾರೆ. ಹರ್ಷಲ್ ಪಟೇಲ್ ಎ ತಂಡದ ನಾಯಕಾಗಿ ಹಾಗೂ ದೇವದತ್ ಪಡಿಕ್ಕಲ್ ಬಿ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದನ್ನೂ ಓದಿ:ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಲಸಿತ್ ಮಾಲಿಂಗ ಗುಡ್ ಬೈ

    ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಎ ತಂಡಕ್ಕೆ ಎಬಿ ಡಿವಿಲಿಯರ್ಸ್ 10 ಸಿಕ್ಸರ್, 7 ಬೌಂಡರಿ ಸಹಿತ ಕೇವಲ 46 ಎಸೆತಗಳಲ್ಲಿ ಸ್ಪೋಟಕ 104 ರನ್ ಗಳನ್ನು ಸಿಡಿಸಿದ್ದಾರೆ. ಇದನ್ನೂ ಓದಿ:ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ

    ನಿಗದಿತ 20 ಓವರ್‍ನಲ್ಲಿ ಎ ತಂಡ 213 ರನ್ ಗಳಿಸಿ ಬೃಹತ್ ಟಾರ್ಗೆಟ್ ನೀಡಿದೆ. ಈ ಮೊತ್ತವನ್ನು ಬೆನ್ನತ್ತಿದ ಎ ತಂಡಕ್ಕೆ ನಾಯಕ ದೇವದತ್ ಪಡಿಕ್ಕಲ್ 21 ಎಸೆತಗಳಲ್ಲಿ 36 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದಾರೆ. ಬಿರುಸಿನ ಬ್ಯಾಟಿಂಗ್ ಮಾಡಿದ ಕೆ.ಎಸ್ ಭರತ್ 47 ಎಸೆತಗಳಲ್ಲಿ ಭರ್ಜರಿ 95 ರನ್‍ಗಳನ್ನು ಚಚ್ಚಿ ಬಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

    ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿ ಆಟಗಾರರು ಉತ್ತಮ ಫಾರ್ಮ್ ಕಂಡುಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದೆ.

    ಸೆ.19 ರಂದು ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯೊಂದಿಗೆ ಎರಡನೇ ಹಂತದ ಐಪಿಎಲ್ ಗೆ ಚಾಲನೆ ದೊರೆಯಲಿದ್ದು, ಸೆ.20 ರಂದು ಆರ್​ಸಿಬಿ, ಕೆಕೆಆರ್ ತಂಡವನ್ನು ಎದುರಿಸಲಿದೆ.

  • ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

    ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

    ಸಿಡ್ನಿ: ಭಾರತದ ತಂಡದ ಮಾಜಿ ಅಟಗಾರ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆಸ್ಟ್ರೇಲಿಯಾದ ಕ್ರಿಕೆಟ್ ಕ್ಲಬ್ ಪರ ಒಂದೇ ತಂಡದಲ್ಲಿ ಆಡುವ ಕುರಿತು ವರದಿಯಾಗಿದೆ.

    ಸ್ಟಾರ್ ಕ್ರಿಕೆಟರ್‍ ಗಳಾಗಿ ಮಿಂಚಿರುವ ಈ ಮೂರು ಆಟಗಾರರಲ್ಲಿ ಯುವರಾಜ್ ಸಿಂಗ್ ಮತ್ತು ಎಬಿಡಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡಿದ್ದಾರೆ. ಗೇಲ್ ಮಾತ್ರ ಸದ್ಯ ವೆಸ್ಟ್ ಇಂಡೀಸ್ ತಂಡದ ಪರ ಆಡುತ್ತಿದ್ದಾರೆ. ಇದೀಗ ಈ ಮೂರು ಆಟಗಾರರು ಕೂಡ ಆಸ್ಟ್ರೇಲಿಯಾದ ಮೆಲ್ಬರ್ನ್‍ನ ಕ್ರಿಕೆಟ್ ಕ್ಲಬ್ ಪರ ಜೊತೆಯಾಗಿ ಆಡುವ ಸಾಧ್ಯತೆಗಳಿವೆ ಎಂದು ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಮಿಲನ್ ಪುಲ್ಲನಾಯೆಗಮ್ ಹೇಳಿಕೆ ನೀಡಿದ್ದಾರೆ. ದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಸನತ್ ಜಯಸೂರ್ಯ ಕ್ಲಬ್ ತಂಡದಲ್ಲಿ ಕಾರ್ಯನಿರ್ವಹಿಸುವುದು ಈಗಾಗಲೇ ಖಚಿತವಾಗಿದ್ದು, ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ಉಪುಲ್ ತರಂಗಾ ಸೇರಿದಂತೆ ನಾವು ಇತರ ಕೆಲವು ಪ್ರಮುಖ ಆಟಗಾರರೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಕ್ಲಬ್ ಪರ ಆಡಲು ಕೆಲ ಆಟಗಾರರನ್ನು ಕರೆತರಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದು ಪುಲ್ಲೆನಾಯಗಮ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಐಪಿಎಲ್ ಬಳಿಕ ಯುಎಇನಲ್ಲಿ ಟಿ20 ವಿಶ್ವಕಪ್ ಫಿಕ್ಸ್?

    ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಈಗಾಗಲೇ ಶ್ರೀಲಂಕಾದ ದಿಲ್ಶನ್ ಮತ್ತು ತರಂಗಾ ಅವರನ್ನು ಕ್ಲಬ್ ಪರ ಆಡಲು ಸಂಪರ್ಕಿಸಿದೆ. ಮುಂದಿನ ಬೇಸಿಗೆಯಲ್ಲಿ ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಕ್ಲಬ್ ತಂಡ ರೂಪುಗೊಳ್ಳಲಿದೆ. ಜಯಸೂರ್ಯ ಈ ಕ್ಲಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಬ್ರಿಯಾನ್ ಲಾರಾ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ಸುದ್ದಿ ಬಿತ್ತರಿಸಿದೆ.