Tag: ಎಪಿಜೆ ಅಬ್ದುಲ್ ಕಲಾಂ

  • ಎಪಿಜೆ ಅಬ್ದುಲ್ ಕಲಾಂ ಬಯೋಪಿಕ್‌ನಲ್ಲಿ ಧನುಷ್

    ಎಪಿಜೆ ಅಬ್ದುಲ್ ಕಲಾಂ ಬಯೋಪಿಕ್‌ನಲ್ಲಿ ಧನುಷ್

    ಟ ಧನುಷ್ (Dhanush) ಅವರು ಇತ್ತೀಚೆಗೆ ಇಳಯರಾಜ ಅವರ ಬಯೋಪಿಕ್‌ನಲ್ಲಿ ನಟಿಸುವ ಬಗ್ಗೆ ಅನೌನ್ಸ್ ಆಗಿತ್ತು. ಈ ಬೆನ್ನಲ್ಲೇ ಎಪಿಜೆ ಅಬ್ದುಲ್ ಕಲಾಂ ಜೀವನ ಚರಿತ್ರೆಯಲ್ಲೂ ಧನುಷ್ ನಟಿಸುವ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದರ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದನ್ನೂ ಓದಿ:ಮೊದಲ ಸಿನಿಮಾ ರಿಲೀಸ್‌ಗೂ ಮುನ್ನವೇ 2ನೇ ಪ್ರಾಜೆಕ್ಟ್ ಬಗ್ಗೆ ಯಶ್ ತಾಯಿ ಗುಡ್ ನ್ಯೂಸ್

    ಕಾಲಿವುಡ್ ಸ್ಟಾರ್ ಧನುಷ್ ಅವರು ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಪಾತ್ರವನ್ನು ಮಾಡಲಿದ್ದಾರೆ. ಅವರ ಜೀವನಗಾಥೆಯನ್ನು ಸಿನಿಮಾ ರೂಪದಲ್ಲಿ ತರಲು ಪ್ಲ್ಯಾನ್ ಮಾಡಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಈ ಚಿತ್ರಕ್ಕೆ ‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಅಂತ ಟೈಟಲ್ ಇಡಲಾಗಿದೆ. ಈ ಚಿತ್ರಕ್ಕೆ ‘ಆದಿಪುರುಷ್’ ಡೈರೆಕ್ಟರ್ ಓಂ ರಾವುತ್ ನಿರ್ದೇಶನ ಮಾಡಲಿದ್ದಾರೆ.

     

    View this post on Instagram

     

    A post shared by Dhanush (@dhanushkraja)

    ಈ ಸಿನಿಮಾ ಬಗ್ಗೆ ಧನುಷ್ ರಿಯಾಕ್ಟ್ ಮಾಡಿ, ನಮ್ಮ ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತಹ ಸ್ಪೂರ್ತಿದಾಯಕ ಮತ್ತು ಉದಾತ್ತ ನಾಯಕನ ಜೀವನವನ್ನು ತೆರೆಮೇಲೆ ತರಲು ನಾನು ನಿಜವಾಗಿಯೂ ಧನ್ಯ ಮತ್ತು ಅತ್ಯಂತ ವಿನಮ್ರನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ರಶ್ಮಿಕಾ ಮಂದಣ್ಣ ಜೊತೆಗಿನ ಕುಬೇರ, ಇಳಯರಾಜ ಬಯೋಪಿಕ್ ಸೇರಿದಂತೆ ಹಲವು ಸಿನಿಮಾಗಳು ಧನುಷ್ ಕೈಯಲ್ಲಿವೆ.

  • ಅಬ್ದುಲ್‌ ಕಲಾಂ ಹೇರ್‌ ಸ್ಟೈಲ್‌ ಬಗ್ಗೆ ಮಾತನಾಡಿದ್ದಾರಾ? – ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕೆಂಡಾಮಂಡಲ

    ಅಬ್ದುಲ್‌ ಕಲಾಂ ಹೇರ್‌ ಸ್ಟೈಲ್‌ ಬಗ್ಗೆ ಮಾತನಾಡಿದ್ದಾರಾ? – ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕೆಂಡಾಮಂಡಲ

    ಮೈಸೂರು: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ (APJ Abdul Kalam) ಹೇರ್ ಸ್ಟೈಲ್ ಬಗ್ಗೆ ಬಿಜೆಪಿಯವರು (BJP) ಮಾತಾನಾಡಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿರುಗೇಟು ನೀಡಿದ್ದಾರೆ.

    ತಾನು ತಲೆಕೂದಲು ತೆಗೆಯದ್ದಕ್ಕೆ ವ್ಯಂಗ್ಯ ಮಾಡಿದ ಬಿಜೆಪಿ  ನಾಯಕರ ವಿರುದ್ಧ ಕೆಂಡಾಮಂಡಲವಾದ ಅವರು,  ಮೋದಿ ಅವರು ಕೋವಿಡ್ ಸಮಯದಲ್ಲಿ ಗಡ್ಡ ಬಿಟ್ಟಿದ್ರು ಅದನ್ನು ಯಾಕೆ ಪ್ರಶ್ನಿಸಲಿಲ್ಲ? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತನಾಡುವುದು ಒಂದು ವಿಷಯವೇ? ನನ್ನ ವಿಚಾರ ಅವರಿಗೆ ಯಾಕೆ? ಕೆಲ ಮಕ್ಕಳು ನಮ್ಮ ಶಿಕ್ಷಣ ಸಚಿವರು ಒಳ್ಳೇ ಸ್ಟೈಲ್‌ನಲ್ಲಿದ್ದಾರೆ. ನಮಗೆ ಅ ರೀತಿ ಹೇರ್‌ ಸ್ಟೈಲ್‌ ಬಿಡಲು ಅವಕಾಶ ಯಾಕಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿತ್ತನೆ ಬೀಜದ ಬೆಲೆ ಏರಿಕೆ – ಕೃಷಿ ಸಚಿವರೇ ಎಲ್ಲಿದಿರಪ್ಪಾ?: ಜೆಡಿಎಸ್ ಆಕ್ರೋಶ

    ಬಿಜೆಪಿ ಯುವ ಮೋರ್ಚಾ ಹೇರ್ ಕಟ್‌ಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದ್ದಿದ್ದಕ್ಕೆ, 40% ಕಮೀಷನ್ ಹಣದಲ್ಲಿ ನನ್ನ ಹೇರ್‌ ಕಟ್‌ ಮಾಡುವುದು ಬೇಡ. ನನ್ನ ಕೂದಲು ಚೆನ್ನಾಗಿದೆ ತಲೆ ಒಳಗಿನ ಮೆದುಳು ಚೆನ್ನಾಗಿದೆ. ಬಿಜಿಪಿಗರಂತೆ ನನಗೆ ಯಾವ ದುರ್ಬುದ್ದಿ ಇಲ್ಲ. ಅವರಂತೆ ಚೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆ ನನಗೆ ಒಳ್ಳೆ ಬುದ್ದಿ ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನಾನು ಹೇರ್ ಕಟ್ ಮಾಡಿಸಿದ್ದಕ್ಕೆ ಮೂರು ದಿನ ಅವರು ನನ್ನ ಜೊತೆ ಮಾತನಾಡಿರಲಿಲ್ಲ. ನಮ್ಮ ತಂದೆಯೇ ನನಗೆ ಆದರ್ಶ ಹೊರತು ವಿಜಯೇಂದ್ರ ಅಲ್ಲ. ಜೂನ್‌ 4ರ ನಂತರ ವಿಜಯೇಂದ್ರಗೆ (Vijayendra) ಬೇರೆಯದ್ದೇ ಕೆಲಸ ಕೊಡುತ್ತೇನೆ ಎಂದು ತಿಳಿಸಿದರು.

     

    ವಿಧಾನಸಭೆ ಚುನಾವಣೆ ವೇಳೆ ಡಿಕೆ ಶಿವಕುಮಾರ್ ಗಡ್ಡದ ಬಗ್ಗೆ ಮಾತನಾಡಿದ್ದಕ್ಕೆ ಬಿಜೆಪಿ 130 ರಿಂದ 60ಕ್ಕೆ ಬಂದಿತ್ತು. ಈಗ ನನ್ನ ಕೂದಲು ಬಗ್ಗೆ ಮಾತಾಡಿ 26 ರಿಂದ 6 ಕ್ಕೆ ಬರುತ್ತಾರೆ ನೋಡಿ ಎಂದು ಹೇಳಿದರು.

    ನು ಸವಿತಾ ಸಮಾಜಕ್ಕೆ ಅವಮಾನ ಆಗುವ ರೀತಿ ಮಾತನಾಡಿಲ್ಲ. ನಾನು ವಿಜಯೇಂದ್ರ ಗೆ ಉತ್ತರ ಕೊಟ್ಟಿದ್ದಕ್ಕೆ ಇವರು ಯಾಕೆ ಪ್ರತಿಭಟನೆ ಮಾಡಬೇಕು. ಯಾವುದೇ ಸಮಾಜಕ್ಕೆ ಅವಮಾನ ಮಾಡುವ ರೀತಿ ನಡವಳಿಕೆಯನ್ನು ನನ್ನ ತಂದೆ ಅವರು ನನಗೆ ಹೇಳಿ ಕೊಟ್ಟಿಲ್ಲ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿರಬೇಕು ಎಂದರು.

  • ಅಗ್ನಿ 5 ಪ್ರಯೋಗ ಯಶಸ್ವಿ – ಚೀನಾಗೆ ಸಂದೇಶ ರವಾನಿಸಿದ ಭಾರತ

    ಅಗ್ನಿ 5 ಪ್ರಯೋಗ ಯಶಸ್ವಿ – ಚೀನಾಗೆ ಸಂದೇಶ ರವಾನಿಸಿದ ಭಾರತ

    ಭುವನೇಶ್ವರ: ರಕ್ಷಣಾ ವಲಯದಲ್ಲಿ ಭಾರತ ಇಂದು ಅತ್ಯದ್ಭುತ ಸಾಧನೆ ಮಾಡಿದೆ. ಅಣ್ವಸ್ತ್ರ ಸಿಡಿತಲೆಯ ಖಂಡಾಂತರ ಕ್ಷಿಪಣಿ ಅಗ್ನಿ-5ರ ಯಶಸ್ವಿ ಪ್ರಯೋಗವನ್ನು ನಡೆಸಿದೆ.

    ಭೂಮಿಯಿಂದ ಭೂಮಿಗೆ ಚಿಮ್ಮುವ ಬರೋಬ್ಬರಿ 5 ಸಾವಿರ ಕಿಲೋಮೀಟರ್ ದೂರ ಕ್ರಮಿಸಬಲ್ಲ ಕ್ಷಿಪಣಿಯನ್ನು ಒಡಿಶಾದ ಬಾಲಸೋರ್ ಜಿಲ್ಲೆಯ ಎಪಿಜೆ ಅಬ್ದುಲ್ ಕಲಾಂ ದ್ವೀಪ(ವೀಲರ್)ದಲ್ಲಿ ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದೆ. ಮೂರು ಹಂತಗಳ ಘನ ಇಂಧನ ಎಂಜಿನ್ ಅನ್ನು ಇದಕ್ಕೆ ಬಳಸಲಾಗಿದೆ. ಈ ಪ್ರಯೋಗದ ಯಶಸ್ಸಿನಿಂದ ಪಾಕಿಸ್ತಾನ ಮತ್ತು ಚೀನಾಗೆ ನಡುಕ ಶುರುವಾಗಿದೆ. ಇದನ್ನೂ ಓದಿ: ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್

    ಚೀನಾದ ಯಾವುದೇ ಭಾಗವನ್ನು ಈ ಕ್ಷಿಪಣಿ ಮೂಲಕ ಭಾರತ ಟಾರ್ಗೆಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಏಷ್ಯಾದ ಎಲ್ಲಾ ಭಾಗವನ್ನು, ಆಫ್ರಿಕಾದ ಕೆಲ ಭಾಗಗಳನ್ನು, ಯುರೋಪ್ ಖಂಡವನ್ನು ತಲುಪಬಲ್ಲ ಸಾಮರ್ಥ್ಯ ಇದಕ್ಕಿದೆ. ಕಳೆದ ಸೆಪ್ಟೆಂಬರ್ 23 ರಂದು ಇದರ ಯಶಸ್ವಿ ಪ್ರಯೋಗ ನಡೆಸಲಾಗಿತ್ತು. 17.5 ಮೀಟರ್ ಎತ್ತರದ ಈ ಕ್ಷಿಪಣಿ, 50 ಟನ್ ತೂಕ ಇದೆ. 1.5 ಟನ್ ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಇದನ್ನೂ ಓದಿ: ಈ ಬಾರಿಯ T20 ವಿಶ್ವಕಪ್‍ನಲ್ಲಿ ಕಂಡು ಬಂದ ವಿಶೇಷತೆಗಳಿವು 

    ಅಗ್ನಿ-5 ಎಂದರೇನು?
    ಇದು ಖಂಡಾಂತರ ಬ್ಯಾಲಸ್ಟಿಕ್ ಕ್ಷಿಪಣಿ. ಇವುಗಳ ಸಾಮರ್ಥ್ಯ ಸುಮಾರು 5 ಸಾವಿರದಿಂದ 6 ಸಾವಿರ ಕಿ.ಮೀ ವ್ಯಾಪ್ತಿ ಹೊಂದಿರುತ್ತದೆ. ಇದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಎರಡೂ ರೀತಿಯ ಸಿಡಿತಲೆಗಳನ್ನು ಕೊಂಡುಯ್ಯುವ ಸಾಮರ್ಥ್ಯವನ್ನು ಹೊಂದಿದೆ. 1989ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಲಾಗಿತ್ತು. ಇದನ್ನೂ ಓದಿ: ಭಾರತದಲ್ಲಿ ಆರಂಭ, ಅಮೆರಿಕದಲ್ಲಿ ಕೊನೆ – ಸ್ಪೆಷಲ್ ಆಗಿ ಹುಟ್ಟುಹಬ್ಬ ಆಚರಿಸಿದ ರಮಿಕಾ ಸೇನ್‍

    ಬ್ಯಾಲಸ್ಟಿಕ್ ಕ್ಷಿಪಣಿ ಎಂದರೇನು?
    ಬ್ಯಾಲಸ್ಟಿಕ್ ಕ್ಷಿಪಣಿ ಪ್ರಕ್ಷೇಪಗಳ ರೀತಿಗಳಲ್ಲಿ ಚಲಿಸುವ ಕ್ಷಿಪಣಿಗಳು ಇವು ತಮ್ಮದೇ ಆದ ಚೋದನ ಕ್ರಮಗಳಿಂದ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ, ಮತ್ತೆ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸಿ ಭೂಮಿಯನ್ನು ಅಪ್ಪಳಿಸುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ. ಈ ಕ್ಷಿಪಣಿಗಳು ವೇಗವಾಗಿ ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಅತಿ ಹೆಚ್ಚಿನ ತಾಪಮಾನ ಬಿಡುಗಡೆಯಿಂದ ಶತ್ರುಗಳ ಕ್ಷಿಪಣಿಗಳನ್ನು ನಾಶ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ನಿಗದಿತ ಗುರಿಯನ್ನು ತಲುಪಲು ಜಿಪಿಎಸ್ ಅಳವಡಿಸಲಾಗಿರುತ್ತದೆ.

    ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತರ್ಗಾಮಿ ಅಲ್ಲದೇ ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು.

  • ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಸುಷ್ಮಾ ಸ್ವರಾಜ್

    ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಸುಷ್ಮಾ ಸ್ವರಾಜ್

    ನವದೆಹಲಿ: ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 2003ರಲ್ಲಿ ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    2003ರಲ್ಲಿ ಕೇಂದ್ರ ಆರೋಗ್ಯ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಹೆಚ್‍ಐವಿ ರೋಗದ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು, ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದರು. ಈ ಮೂಲಕ ಮುಟ್ಟುವುದು ಮತ್ತು ತಬ್ಬಿಕೊಳ್ಳುವುದರಿಂದ ಹೆಚ್‍ಐವಿ ಹರಡುವುದಿಲ್ಲ ಎಂದು ಜನರಿಗೆ ಸಂದೇಶ ನೀಡಿದ್ದರು.

    ಈಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಪಿಯೂ ನಾಯರ್ ಎಂಬುವರು ಈ ಫೋಟೋವನ್ನು ಟ್ವಿಟ್ಟರ್‍ ನಲ್ಲಿ ಹಾಕಿ “ಹಳೇಯ ಫೋಟೋ, ಸುಷ್ಮಾ ಜೀ ಹೆಚ್‍ಐವಿ ಪೀಡಿತ ಇಬ್ಬರು ಕೇರಳದ ಮಕ್ಕಳನ್ನು ಅಪ್ಪಿಕೊಂಡಿದ್ದಾರೆ. ಅ ಮಕ್ಕಳಿಗೆ ತಮ್ಮ ತಾಯಿಯಿಂದ ಕಾಯಿಲೆ ಬಂದಿದೆ (ಮಕ್ಕಳ ಪೋಷಕರು ಹೆಚ್‍ಐವಿ ಕಾರಣದಿಂದ ಮೃತ ಪಟ್ಟಿದ್ದರು) ಈ ಮಕ್ಕಳಿಂದ ಹೆಚ್‍ಐವಿ ಹರಡುತ್ತದೆ ಎಂಬ ಕಾರಣಕ್ಕೆ ಶಾಲೆಯಿಂದ ಹೊರಹಾಕಲಾಗಿತ್ತು” ಎಂದು ಬರೆದುಕೊಂಡಿದ್ದಾರೆ.

    ಈ ಮಕ್ಕಳನ್ನು ಭೇಟಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಯೋಚನೆಗಳನ್ನು ಪ್ರಸ್ತಾಪ ಮಾಡಿದ್ದರು. ನಂತರ ಅ ಮಕ್ಕಳನ್ನು ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಭೇಟಿಯಾಗಿ ಅ ಇಬ್ಬರು ಹೆಚ್‍ಐವಿ ಪೀಡಿತ ಮಕ್ಕಳನ್ನು ಶಾಲೆ ಸೇರಿಸುವ ವ್ಯವಸ್ಥೆ ಮಾಡಿದ್ದರು.

    ಇದಾದ ನಂತರ ಸುಷ್ಮಾ ಸ್ವರಾಜ್ ಅವರು ಅ ಇಬ್ಬರು ಮಕ್ಕಳ ಶಿಕ್ಷಣದ ಬಗ್ಗೆ ಖಚಿತಪಡಿಸಿಕೊಂಡು. ಈ ರೀತಿಯ ಮಕ್ಕಳಿಗಾಗಿ ವಿಶೇಷ ಬೋಧಕರನ್ನು ನೇಮಿಸಬೇಕು. ದೇಶದ ವಿವಿಧ ಭಾಗಗಳಲ್ಲಿ ಈ ರೀತಿ ಹೆಚ್‍ಐವಿ ಪೀಡಿತ ಮಕ್ಕಳು ಇದ್ದಾರೆ. ಅವರಿಗೂ ಶಿಕ್ಷಣ ಕೊಡಿಸಬೇಕು ಎಂದು ಹೇಳಿದ್ದರು.

    ಇಂದು ಈ ವಿಚಾರದ ಬಗ್ಗೆ ಮಾತನಾಡಿರುವ ಹೆಚ್‍ಐವಿ ಪೀಡಿತ ಮಕ್ಕಳ ಅಜ್ಜಿ ಸಲ್ಲಮ್ಮ “ಸುಷ್ಮಾ ಸ್ವರಾಜ್ ಅವರ ಅಪ್ಪುಗೆಯಿಂದ ನನ್ನ ಮೊಮ್ಮಕ್ಕಳ ಜೀವನ ಸಂಪೂರ್ಣ ಬದಲಾಗಿದೆ. ಅವರ ವಿದ್ಯಾಭ್ಯಾಸಕ್ಕೆಂದು ನಮಗೆ ತಿಂಗಳಿಗೊಮ್ಮೆ ಬೆಂಬಲ ರೂಪದಲ್ಲಿ ಹಣ ಬರುತ್ತಿದೆ. ನಾವು ಅವಳನ್ನು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದ್ದಾರೆ.

    ಇಂದು ಅವರ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದ ಸಲ್ಲಮ್ಮ, ನನ್ನ ಇಬ್ಬರು ಹೆಚ್‍ಐವಿ ಪೀಡಿತ ಮೊಮ್ಮಕ್ಕಳ ಮೇಲೆ ಅವರು ದಯೆ ತೋರಿಸದೆ ಇದ್ದರೆ 2003ರಲ್ಲೆ ನನ್ನ ಮತ್ತು ನನ್ನ ಮೊಮ್ಮಕ್ಕಳ ಜೀವನ ಮುಗಿದು ಹೋಗುತಿತ್ತು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಹೆಚ್‍ಐವಿ ಪೀಡಿತ ಈ ಇಬ್ಬರು ಮಕ್ಕಳಲ್ಲಿ ಹೆಣ್ಣು ಮಗು 2010ರಲ್ಲಿ ಸಾವನ್ನಪ್ಪಿದ್ದು. ಯುವಕನಿಗೆ 23 ವರ್ಷವಾಗಿದೆ.