Tag: ಎಪಿಎಲ್

  • ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ

    ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ

    ಬೆಂಗಳೂರು: ಎಪಿಎಲ್‌ಗೆ (APL) ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌ (BPL Card) ಭಾಗ್ಯ ಸಿಗಲಿದೆ. ಹೌದು, ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆ ಮಧ್ಯೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಅರ್ಹತೆ ಇದ್ರೂ ಎಪಿಎಲ್‌ಗೆ ಬದಲಾಗಿ ವಂಚಿತರಾದವರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ‌.

    45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರ ಆಹಾರ ಇಲಾಖೆಗೆ ಗಡುವು ಕೊಟ್ಟಿದೆ. ಎಪಿಎಲ್‌ಗೆ ಬದಲಾದವರು ಪೂರಕ ದಾಖಲೆ ಇದ್ದರೆ ಮತ್ತೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಒಂದು ಕಡೆ ಅನರ್ಹ ಬಿಪಿಎಲ್‌ ಕಾರ್ಡ್‌ದಾರರನ್ನು ಪತ್ತೆ ಮಾಡಿ ಎಪಿಎಲ್‌ ಕಾರ್ಡ್‌ ನೀಡಲು ಆಹಾರ ಇಲಾಖೆ ಮುಂದಾಗಿದೆ. ಇನ್ನೊಂದು ಕಡೆ ಅರ್ಹ ಬಿಪಿಎಲ್‌ ಕಾರ್ಡ್‌ದಾರರು ಎಪಿಎಲ್‌ಗೆ ಬದಲಾಗಿದ್ರೆ ಅಂಥವರಿಗೆ ನ್ಯಾಯ ಕೊಡಲು ಮುಂದಾಗಿದೆ. ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ – ಪರಿಶೀಲಿಸಿ ಕ್ರಮಕ್ಕೆ ಸೂಚನೆ: ಪರಮೇಶ್ವರ್

    7,76,206 ಪಡಿತರ ಚೀಟಿಗಳು ರಾಜ್ಯದಲ್ಲಿ ಅನರ್ಹವೆಂದು ಕೇಂದ್ರ ಸರ್ಕಾರ ಗುರುತು ಮಾಡಿದೆ. ಆದರೆ, ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳಿವೆ. ಇಂತಹ ಅನರ್ಹ ಚೀಟಿಗಳನ್ನು ಬಿಪಿಎಲ್‌ ಬದಲಿಗೆ ಎಪಿಎಲ್‌ ಆಗಿ ಪರಿವರ್ತಿಸುವ ಕೆಲಸ ನಡೀತಿದೆ.‌‌ ಇದರ ಮಧ್ಯೆ ಒಂದು ವೇಳೆ ಅರ್ಹರ ಕಾರ್ಡ್‌ ಎಪಿಎಲ್‌ಗೆ ಬದಲಾಗಿದ್ದಲ್ಲಿ ಅಂಥವರಿಗೆ ಬ್ಯಾಕ್ ಟು ಬಿಪಿಎಲ್‌ ಭಾಗ್ಯವೂ ಸಿಗಲಿದೆ. ಇದಕ್ಕಾಗಿ 45 ದಿನದೊಳಗೆ ಅಗತ್ಯ ದಾಖಲೆ ಸಹಿತ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಿ ಅರ್ಹರಿದ್ದಲ್ಲಿ ಅಂಥವರಿಗೆ ಬಿಪಿಎಲ್‌ ಕಾರ್ಡ್‌ ನೀಡಲು ಸರ್ಕಾರ ಸೂಚನೆ ಕೊಟ್ಟಿದೆ.

    ಇದೇ ವೇಳೆ ಬಿಎಪಿಎಲ್‌ಗೆ ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವವರಿಗೂ ಗುಡ್ ನ್ಯೂಸ್ ಇದೆ. ಹೊಸದಾಗಿ ಪಡಿತರ ಚೀಟಿಗೆ ಈಗಾಗಲೇ 2.96 ಲಕ್ಷ ಅರ್ಜಿ ಸಲ್ಲಿಕೆ ಆಗಿವೆ. ಈ ಅರ್ಜಿಗಳ ವಿಲೇವಾರಿ ಮಾಡುವವರೆಗೆ ಬಿಪಿಎಲ್‌ಗೆ ಹೊಸದಾಗಿ ಅರ್ಜಿ ಆಹ್ವಾನಿಸಬಾರದು ಎಂದು ಸರ್ಕಾರ ನಿರ್ದೇಶಿಸಿದೆ. ಸದ್ಯದಲ್ಲೇ ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆಗೂ ಕ್ರಮದ ಭರವಸೆ ಕೊಡಲಾಗಿದೆ. ಇದನ್ನೂ ಓದಿ: ನನ್ನ ಮರ್ಯಾದೆ ಉಳಿಸಿಕೊಳ್ಳಲು ಕೆಲವು ಬೆದರಿಕೆ ಕರೆ ವಿಡಿಯೋ ರಿಲೀಸ್ ಮಾಡಿಲ್ಲ: ಪ್ರಿಯಾಂಕ್ ಖರ್ಗೆ

    ಎಪಿಎಲ್‌ಗೆ ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌ ಭಾಗ್ಯ!
    * ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
    * ಬಿಪಿಎಲ್ ಕಾರ್ಡ್ ವಂಚಿತ ಅರ್ಹರಿಗೆ ಗುಡ್ ನ್ಯೂಸ್!
    * 45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್!
    * ಎಪಿಎಲ್‌ಗೆ ಬದಲಾದವರಿಗೆ ಪೂರಕ ದಾಖಲೆ ಇದ್ದರೆ ಮತ್ತೆ ಬಿಪಿಎಲ್ ಕಾರ್ಡ್
    * ಕೇಂದ್ರದ ಪ್ರಕಾರ ರಾಜ್ಯದಲ್ಲಿ 7,76,206 ಪಡಿತರ ಚೀಟಿಗಳಿವೆ
    * ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳು
    * 45 ದಿನದೊಳಗೆ ಅಗತ್ಯ ದಾಖಲೆ ಸಹಿತ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು
    * ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆ ಪರಿಶೀಲಿಸಿ ಅರ್ಹರಿದ್ದಲ್ಲಿ ಬಿಪಿಎಲ್‌ ಕಾರ್ಡ್
    * ಹೊಸದಾಗಿ ಪಡಿತರ ಚೀಟಿಗೆ ಸಲ್ಲುಸಿರೋ 2.96 ಲಕ್ಷ ಅರ್ಜಿಗಳ ವಿಲೇವಾರಿಗೂ ಕ್ರಮ
    * ಹಳೆಯ ಅರ್ಜಿಗಳ ವಿಲೇವಾರಿವರೆಗೂ ಬಿಪಿಎಲ್‌ಗೆ ಹೊಸಗಿ ಅರ್ಜಿ ಆಹ್ವಾನವಿಲ್ಲ

  • ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ನ.25 ಡೆಡ್‌ಲೈನ್

    ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ನ.25 ಡೆಡ್‌ಲೈನ್

    – ಎರಡು ದಿನಗಳಲ್ಲಿ ಕಾರ್ಡ್ ಸಮಸ್ಯೆ ಬಗೆಹರಿಸಲು ಸೂಚನೆ

    ಬೆಂಗಳೂರು: ಬಿಪಿಎಲ್ ಕಾರ್ಡ್ (BPL Card) ಸಮಸ್ಯೆ ಪರಿಹರಿಸಲು ನವೆಂಬರ್ 25ರ ವರೆಗೆ ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ರದ್ದಾದ ಬಿಪಿಎಲ್ ಕಾರ್ಡ್‌ಗಳನ್ನ ಮೂಲ ಸ್ಥಾನಕ್ಕೆ ತರಲು ಆಹಾರ ಸಚಿವರು ಸೂಚಿಸಿದ್ದಾರೆ. ಆದ್ರೆ 6 ದಿನಗಳಲ್ಲಿ ರದ್ದಾದ ಬಿಪಿಎಲ್ ಕಾರ್ಡ್‌ಗಳನ್ನ ಮೂಲ ಸ್ಥಾನಕ್ಕೆ ತರುವುದು ಕಷ್ಟ ಕಷ್ಟ ಅಂತಿದ್ದಾರೆ.

    ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಗೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಅರ್ಹರಿದ್ದರೂ ಕಾರ್ಡ್ ರದ್ದಾಗಿ ಸಮಸ್ಯೆ ಆಗಿರೋದ್ರಿಂದ ಸಮಸ್ಯೆ ಆಗಿರುವ ಕಾರ್ಡ್‌ಗಳನ್ನ ಸರಿಪಡಿಸಿ ಮೂಲ ಸ್ಥಾನಕ್ಕೆ ತರಲು ಆಹಾರ ಸಚಿವ ಮುನಿಯಪ್ಪ (KH Muniyappa) ಗಡುವು ನೀಡಿದ್ದಾರೆ. ನವೆಂಬರ್ 25ರ ಒಳಗಡೆ ಸಮಸ್ಯೆ ಬಗೆಹರಿಸಿ ಅಕ್ಕಿ ವಿತರಣೆ ಮಾಡೋದಕ್ಕೆ ಸೂಚಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎನ್‌ಡಿಎ ‘ಮಹಾ’ ಸುನಾಮಿ- ಕಾಂಗ್ರೆಸ್ ‘ಆಘಾಡಿ’ ಕೂಟ ಛಿದ್ರ ಛಿದ್ರ – ಯಾರಿಗೆ ಎಷ್ಟು ಸ್ಥಾನ?

    ಅಧಿಕಾರಿಗಳು ಇದು ಕಷ್ಟ ಎಂದು ಹೇಳುತ್ತಿದ್ದಾರೆ. ಬಿಪಿಎಲ್‌ನಿಂಎ ಎಪಿಎಲ್‌ಗೆ ಬದಲಾವಣೆ ಆಗಿರುವ ಕಾರ್ಡ್‌ಗಳನ್ನ ಮತ್ತೆ ಬದಲಾಯಿಸಬೇಕಾದ್ರೆ ದೊಡ್ಡ ಪ್ರಕ್ರಿಯೆ ಇದೆ ಅಂತಾ ಹೇಳಲಾಗ್ತಿದೆ. 15 ದಿನಗಳ ಕಾಲ ಪ್ರಕ್ರಿಯೆ ನಡೆಯಲಿದೆ. ಆದ್ರೆ 6 ದಿನಗಳಲ್ಲಿ ಹೇಗೆ ಮೂಲ ಸ್ಥಾನಕ್ಕೆ ತರುತ್ತಾರೆ ಎಂಬುದು ಪ್ರಶ್ನೆ ಆಗಿದೆ. ಹಾಗಾದ್ರೆ ಬಿಪಿಎಲ್‌ನಿಂದ ಎಪಿಎಲ್‌ಗೆ ಶಿಫ್ಟ್‌ ಮಾಡೋ ಪ್ರಕ್ರಿಯೆ ಹೇಗೆ ನಡೆಯುತ್ತೆ? ಯಾವ್ಯಾವ ಹಂತಗಳಿವೆ ಅನ್ನೋದನ್ನ ಮುಂದೆ ಓದಿ ತಿಳಿಯಿರಿ…

    ಬಿಪಿಎಲ್ ಕಾರ್ಡ್ ಪ್ರಕ್ರಿಯೆ ಹೇಗೆ?
    ಬಿಪಿಎಲ್‌ನಿಂದ ಎಪಿಎಲ್‌ಗೆ ಶಿಫ್ಟ್ ಆದ ಕಾರ್ಡ್‌ಗಳನ್ನ ಮೂಲ ಸ್ಥಾನಕ್ಕೆ ತರಲು ಸ್ಥಳ ಪರಿಶೀಲನೆ ಮಾಡಬೇಕು. ಬಡವರು ಇದ್ದಾರಾ? ಶ್ರೀಮಂತರು ಇದ್ದಾರಾ? ಅಂತ ಮನೆ ಪರಿಶೀಲಿಸಬೇಕು. ಆರ್‌ಡಿ ನಂಬರ್ ಪರಿಶೀಲನೆ ಮಾಡಬೇಕು. ಸ್ಥಳ ಪರಿಶೀಲನೆ ಜೊತೆಗೆ ದಾಖಲೆ ಪರಿಶೀಲನೆ ಮಾಡಬೇಕು. ಆಹಾರ ನಿರೀಕ್ಷಕರು ಒನ್ ಬೈ ಒನ್ ಆಗಿ ಕಾರ್ಡ್‌ಗಳನ್ನ ಕನ್ವರ್ಟ್ ಮಾಡಬೇಕು. ಏಕಾಏಕಿ ಮೂಲ ಸ್ಥಾನಕ್ಕೆ ಶಿಫ್ಟ್ ಮಾಡೋಕೆ ಆಗಲ್ಲ. ಎನ್‌ಐಸಿ ಸಾಫ್ಟ್‌ವೇರ್‌ ಮೂಲಕ ಕಾರ್ಡ್ ಕನ್ವರ್ಟ್ ಮಾಡಬೇಕು. ಕಾರ್ಡ್ ಕನ್ವರ್ಟ್ ಮಾಡಬೇಕು ಅಂದರೆ 10 ರಿಂದ 15 ದಿನ ಸಮಯಬೇಕು ಎನ್ನಲಾಗ್ತಿದೆ. ಇದನ್ನೂ ಓದಿ: ಯೋಗೇಶ್ವರ್‌ಗೆ ಗೆಲುವು – ಮದ್ದೂರಿನ ಹೊಳೆ ಆಂಜನೇಯನಿಗೆ ಹರಕೆ ತೀರಿಸಿದ ಸಿಪಿವೈ ಪತ್ನಿ

    ಇನ್ನೂ ರದ್ದಾದ ಕಾರ್ಡ್ ನಿಂದ ಅಕ್ಕಿ ಬರದೇ ಜನ ಕಚೇರಿಯಿಂದ ಕಚೇರಿಗೆ ಅಲೆಯುತ್ತಾ ಇದ್ದಾರೆ. ಎರಡ್ಮೂರು ತಿಂಗಳಾದ್ರು ಸಮಸ್ಯೆ ಬಗೆಹರಿಯುತ್ತಿಲ್ಲ. ಜನರು ಮಾತ್ರ ಸಮಸ್ಯೆ ಬಗೆಹರಿಸದಿದ್ದರೂ ಅಕ್ಕಿ ಕೊಡೋ ವ್ಯವಸ್ಥೆ ಮಾಡಲಿ ಅಕ್ಕಿ ಸಿಗ್ತಿಲ್ಲ ಅಂತಿದ್ದಾರೆ.

    ಒಟ್ಟಾರೆ ಸಮಸ್ಯೆ ಆಗಿರುವ ಕಾರ್ಡ್‌ಗಳನ್ನ ಮೂಲ ಸ್ಥಾನಕ್ಕೆ ತರಲು 25ನೇ ತಾರೀಖಿನವೆರೆಗೂ ಸಮಯ ನೀಡಿದ್ದಾರೆ. ಅಷ್ಟರ ಒಳಗಡೆ ಮಾಡ್ತಾರಾ ಮತ್ತೆ ಸಮಯ ತೆಗೆದುಕೊಳ್ಳುತ್ತಾರಾ ? ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ:  ನಿನ್ನ ನೋಡ್ಬೇಕು ಬಾ ಅಂತ ಕರೆಸಿ ಪ್ರಿಯತಮೆಯಿಂದ್ಲೇ ಪ್ರಿಯಕರನ ಕಿಡ್ನ್ಯಾಪ್‌, 5 ಲಕ್ಷ ಸುಲಿಗೆ!

  • ಬಿಪಿಎಲ್, ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ: ಕೆ.ಹೆಚ್.ಮುನಿಯಪ್ಪ

    ಬಿಪಿಎಲ್, ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ: ಕೆ.ಹೆಚ್.ಮುನಿಯಪ್ಪ

    ಬೆಂಗಳೂರು: ಬಿಪಿಎಲ್ (BPL Card) ಹಾಗೂ ಎಪಿಎಲ್ (APL Card )ಯಾವ ಕಾರ್ಡ್ ರದ್ದಾಗಲ್ಲ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ (K.H Muniyappa) ಹೇಳಿದ್ದಾರೆ,

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, 20-25% ಅರ್ಹರಲ್ಲದವರು ಬಿಪಿಎಲ್ ಗೆ ಸೇರಿಕೊಂಡಿದ್ದಾರೆ. ಬಡವರಲ್ಲದವರು ಹಾಗೂ ಅರ್ಹರಲ್ಲದವರೂ ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ. 80% ರಾಜ್ಯದಲ್ಲಿ ಬಡವರ ಪ್ರಮಾಣ ಇದೆ. ಇದು ಸಾಧ್ಯವಾ? ಕರ್ನಾಟಕ ರಾಜ್ಯದಲ್ಲಿ 80% ಬಡವರಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

    ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಯಾರು ಮೇಲಿದ್ದಾರೆ ಸತ್ಯವಾದ ಮಾಹಿತಿ ಹೊರಗೆ ಬಿಡುತ್ತೇನೆ. ಬಿಜೆಪಿಯವರು (BJP) ಸುಮ್ಮನೆ ತರಲೆ ಮಾಡ್ತಿದ್ದಾರೆ. ಬಿಪಿಎಲ್‌ನವರು ಯಾರೂ ಕೂಡ ಭಯ ಪಡಬೇಕಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

    ನಿಜವಾದ ಬಿಪಿಎಲ್‌ನವರಿಗೆ ಯಾರಿಗೂ ತೊಂದರೆ ಆಗುವುದಿಲ್ಲ. ಅಕಸ್ಮಾತ್ ಅರ್ಹರಿದ್ದು ಬಿಪಿಎಲ್‌ನಿಂದ ಕೈ ಬಿಟ್ಟರೆ, ಅಂತವರಿಗೆ ಪುನಃ ಬಿಪಿಎಲ್ ಕಾರ್ಡ್ ಸಿಗುವ ವ್ಯವಸ್ಥೆ ಮಾಡುತ್ತೇವೆ. 15-20 ದಿನಗಳಲ್ಲಿ ಸಂಪೂರ್ಣ ಪರಿಷ್ಕರಣೆ ಆಗುತ್ತದೆ. ಈ ಬಗ್ಗೆ ಬುಧವಾರ ಮಾತಾಡುತ್ತೇನೆ. ಈ ಬಗ್ಗೆ ಅಂಕಿ ಅಂಶ ಕೊಡುತ್ತೇನೆ. ಹೊಸ ಕಾರ್ಡ್ ಕೂಡ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

  • ಏಕಾಏಕಿ 60,000ಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಶಿಫ್ಟ್‌ – ಅರ್ಹ ಫಲಾನುಭವಿಗಳು ಕಣ್ಣೀರು

    ಏಕಾಏಕಿ 60,000ಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಶಿಫ್ಟ್‌ – ಅರ್ಹ ಫಲಾನುಭವಿಗಳು ಕಣ್ಣೀರು

    ಬೆಂಗಳೂರು: ಗ್ಯಾರಂಟಿ ಯೋಜನೆಗಳ ಭಾರದಿಂದ ಕಾಂಗ್ರೆಸ್ ಸರ್ಕಾರ (Congress Government) ಆರ್ಥಿಕವಾಗಿ ಕಂಗೆಟ್ಟಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಷ್ಟು ದಿನ ಶಕ್ತಿ ಯೋಜನೆ, ಗೃಹಲಕ್ಷ್ಮಿ ಗೊಂದಲದಲ್ಲಿ ಮುಳುಗಿದ್ದ ಸರ್ಕಾರ ಇದೀಗ ಬಿಪಿಎಲ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ಏಕಾಏಕಿ 60 ಸಾವಿರಕ್ಕೂ ಹೆಚ್ಚು ಬಿಪಿಎಲ್ (BPL Card) ಪಡಿತರದಾರರನ್ನು ಎಪಿಎಲ್‌ಗೆ (APL Card) ಶಿಫ್ಟ್ ಮಾಡಿದೆ.

    ಈ ಪರಿಷ್ಕರಣೆಯ ವೇಳೆ ಅಧಿಕಾರಿಗಳು ಸರಿಯಾದ ಮಾನದಂಡಗಳನ್ನು ಬಳಸಿಲ್ಲ. ಪರಿಣಾಮ ಅರ್ಹ ಫಲಾನುಭವಿಗಳು ಕೂಡ ಈಗ ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಲ ಪಡೆಯಲು ITR (ಆದಾಯ ತೆರಿಗೆ ರಿಟರ್ನ್ಸ್‌) ಫೈಲ್ ಮಾಡಿದ್ದ ಬಡ ಕಾರ್ಮಿಕರ ಬಿಪಿಎಲ್ ಕಾರ್ಡ್‌ಗಳೂ ರದ್ದಾಗಿದ್ದು, ಅವರು ತಿಂಗಳ ಅಕ್ಕಿ ಸಿಗದೇ ಒದ್ದಾಡ್ತಿದ್ದಾರೆ. ಆರೋಗ್ಯ ಸೌಲಭ್ಯ ಸಿಗದೇ ಪರದಾಡ್ತಿದ್ದಾರೆ. ಇದನ್ನೂ ಓದಿ: ಅರ್ಹರ ರೇಷನ್‌ ಕಾರ್ಡ್‌ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ

    ಬಿಪಿಎಲ್ ಕಾರ್ಡ್ ಶಾಕ್!
    * ಕೇಸ್ ಸ್ಟಡಿ 1 – ರೇಣುಕಾ, ರಾಜಗೋಪಾಲನಗರ, ಬೆಂಗಳೂರು – ಆದಾಯದ ಮೂಲವಿಲ್ಲ – ಐಟಿಆರ್ ಫೈಲ್ ಆರೋಪ

    * ಕೇಸ್ ಸ್ಟಡಿ 2 – ಕಲ್ಪನಾ, ನೆಲಗದರಹಳ್ಳಿ, ಬೆಂಗಳೂರು – ಕುಟುಂಬದ ಆದಾಯ 12,000 – ಐಟಿಆರ್ ಫೈಲ್ ಆರೋಪ

    * ಕೇಸ್ ಸ್ಟಡಿ 3 – ಶೋಭಾ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು – ಪತಿ ಗಾರ್ಮೆಂಟ್ಸ್ ನೌಕರ – ಐಟಿಆರ್ ಫೈಲ್ ಆರೋಪ

    * ಕೇಸ್ ಸ್ಟಡಿ 4 – ಮಹಾಲಕ್ಷ್ಮಮ್ಮ, ಮಲ್ಲರಬಾಣವಾಡಿ-ನೆಲಮಂಗಲ – ವಯೋವೃದ್ಧರು.. ಆರೋಗ್ಯ ಸಮಸ್ಯೆಯಿಂದ ಬಳಲ್ತಿದ್ದಾರೆ – ಕಾರಣವೇ ಗೊತ್ತಿಲ್ಲ

    * ಕೇಸ್ ಸ್ಟಡಿ 5 – ಬೋರಯ್ಯ, ಪಾಲಯ್ಯ, ಚಿತ್ರದುರ್ಗ – 8 ಎಕರೆ ಜಮೀನು ಮಾಲೀಕ – ಆದರೆ, ಇದು ಪಾಳು ಭೂಮಿ (ಇಬ್ಬರು ಮಕ್ಕಳಿಗೆ ಜಮೀನು ರಿಜಿಸ್ಟರ್ ಮಾಡಿಸಲು ಹಣವಿಲ್ಲ)

    * ಕೇಸ್ ಸ್ಟಡಿ 6 – ಅನ್ವರ್‌ಬಿ ಗಿರಗಾಂವ, ವಿಜಯಪುರ – ಬಟ್ಟೆ ಅಂಗಡಿಯಲ್ಲಿ ಮಗನ ಕೆಲಸ – ಜಿಎಸ್‌ಟಿ ಪಾವತಿ ಆರೋಪ

    ವಿಪಕ್ಷಗಳಿಗೆ ಅಸ್ತ್ರವಾದ ರೇಷನ್‌ ಕಾರ್ಡ್‌ ವಿವಾದ:
    ಬಿಪಿಎಲ್ ಕಾರ್ಡ್ ಗೊಂದಲ, ಯಡವಟ್ಟು, ಬಡ ಜನರ ಆಕ್ರೋಶ ಸಹಜವಾಗಿಯೇ ವಿಪಕ್ಷಗಳಿಗೆ ಆಹಾರವಾಗಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಗೊಂದಲ ಜನರ ಬಿಪಿ ಏರಿಸಿದೆ. ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿವೆ. ಆದ್ರೆ, ಸರ್ಕಾರ ಮಾತ್ರ ಕಾರ್ಡ್ ರದ್ದು ಮಾಡ್ತಿಲ್ಲ. ಪರಿಷ್ಕರಣೆ ಮಾಡ್ತಿದ್ದೇವೆ. ಅರ್ಹರಿಗೆ ಮಾತ್ರ ನೀಡುತ್ತೇವೆ ಎಂಬ ಸಮರ್ಥನೆಗೆ ಇಳಿದಿದೆ. ಯಾವುದೇ ಅರ್ಹರ ರೇಷನ್ ಕಾರ್ಡ್ ರದ್ದಾಗಲ್ಲ ಅಂತ ಇಂದೂ ಸಿಎಂ ಸ್ಪಷ್ಟನೆ ಕೊಟ್ರು. ಬಿಪಿಎಲ್‌ಗೆ ಅರ್ಹರಲ್ಲದವರನ್ನು ಎಪಿಎಲ್‌ಗೆ ಹಾಕ್ತೇವೆ ಅಂತಾ ಮುನಿಯಪ್ಪ ಹೇಳಿದ್ರು. ಬಿಜೆಪಿಯವರಿಗೆ ಮಾಡೋಕೆ ಕೆಲಸ ಇಲ್ಲ ಎಂದು ಡಿಸಿಎಂ ಹರಿಹಾಯ್ದರು.  ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ನಮ್ಮ ಗ್ಯಾರಂಟಿಗಳಿಗೂ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೂ ಸಂಬಂಧ ಇಲ್ಲ ಎಂದು ಪರಮೇಶ್ವರ್ ವ್ಯಾಖ್ಯಾನಿಸಿದ್ರು. ಆದ್ರೂ, ಟೀಕೆಗಳು ಮುಂದುವರೆದಿರುವ ಕಾರಣ ಸಂಜೆ ತುರ್ತು ಸಭೆ ನಡೆಸಿದ ಸಿಎಂ, ಬಿಪಿಎಲ್ ಗೊಂದಲ ಬಗೆಹರಿಸಿ.. ಅರ್ಹರ ಕಾರ್ಡ್ ರದ್ದಾಗಿದ್ರೆ ಅದನ್ನು ಸರಿಪಡಿಸಿಕೊಡಿ.. ಬಿಪಿಎಲ್, ಎಪಿಎಲ್ ಯಾವುದೂ ರದ್ದಾಗಲ್ಲ. ವಿಪಕ್ಷಗಳಿಗೆ ಅಂಕಿ ಅಂಶ ಸಮೇತ ಉತ್ತರ ಕೊಡಿ ಎಂದು ಸಚಿವ ಮುನಿಯಪ್ಪಗೆ ಸೂಚನೆ ನೀಡಿದ್ದಾರೆ.  ಇದನ್ನೂ ಓದಿ: ಕರ್ನಾಟಕ ಸೇರಿದಂತೆ 22 ರಾಜ್ಯಗಳಲ್ಲಿ ಇ.ಡಿ ದಾಳಿ – ಕೋಟಿ ಕೋಟಿ ಹಣ ಸೀಜ್

  • ಅರ್ಹರ ರೇಷನ್‌ ಕಾರ್ಡ್‌ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ

    ಅರ್ಹರ ರೇಷನ್‌ ಕಾರ್ಡ್‌ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ

    ಬೆಂಗಳೂರು: ಅರ್ಹರ ಬಿಪಿಎಲ್‌, ಎಪಿಎಲ್‌ ಕಾರ್ಡ್‌ಗಳು ರದ್ದಾಗಿದ್ದರೆ, ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ ಎಂದು ಸಚಿವ ಕೆ.ಹೆಚ್‌. ಮುನಿಯಪ್ಪ (KH Muniyappa) ಹೇಳಿದ್ದಾರೆ.

    ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿಂದು ನಡೆದ ಸಭೆಯಲ್ಲಿ ಸಚಿವ ರಾಜಣ್ಣ, ಪರಮೇಶ್ವರ್, ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಹೆಚ್‌ ಮುನಿಯಪ್ಪ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು. ಉನ್ನತ ಮಟ್ಟದ ಸಭೆಯಲ್ಲಿ ವಕ್ಫ್ ವಿವಾದ, ರೇಷನ್ ಕಾರ್ಡ್ (Ration Card) ವಿವಾದ, ಗ್ಯಾರಂಟಿ ಗದ್ದಲ, ಆಪರೇಷನ್ ಕಮಲ ಆರೋಪ-ಪ್ರತ್ಯಾರೋಪ, ಅಧಿವೇಶನ, ಉಪಚುನಾವಣೆ, ಸಚಿವರ ಹೇಳಿಕೆಗಳ ಕುರಿತು ಚರ್ಚೆ ನಡೆಯಿತು. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕರಿಗೆ ಮಂಪರು ಪರೀಕ್ಷೆ ಮಾಡಿಸಿದ್ರೆ ಸತ್ಯ ಹೊರ ಬರುತ್ತೆ: ಕೋರ್ಟ್‌ಗೆ ಸಿ.ಟಿ ರವಿ ಮನವಿ

    ಸಭೆ ಪ್ರಾರಂಭವಾಗುತ್ತಿದ್ದಂತೆ ರೇಷನ್ ಕಾರ್ಡ್ ಗೊಂದಲದ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚೆ ಶುರು ಮಾಡಿದರು. ಎಪಿಎಲ್‌-ಬಿಪಿಎಲ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಗೊಂದಲ ನಿವಾರಣೆ ಮಾಡುವಂತೆ ಸಚಿವ ಮುನಿಯಪ್ಪಗೆ ಸಿಎಂ ಸೂಚನೆ ನೀಡಿದರು. ಬಿಪಿಎಲ್ ಕಾರ್ಡ್ ರದ್ದಾಗಿದೆ ಅಂತ ವಿಪಕ್ಷಗಳು ವಿವಾದ ಮಾಡ್ತಿವೆ. ಇದಕ್ಕೆ ಅಂಕಿ-ಅಂಶಗಳ ಸಮೇತ ಉತ್ತರ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ನಾವು ಜಾತಿ ಸಮೀಕ್ಷೆ ನಡೆಸುತ್ತೇವೆ, ಅವಕಾಶ ವಂಚಿತರಿಗೆ ಇದರಿಂದ ಲಾಭವಾಗಲಿದೆ: ರಾಹುಲ್ ಗಾಂಧಿ

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಯಾವುದೂ ರದ್ದಾಗಿಲ್ಲ. ಆದಾಯ ತೆರಿಗೆ ಪಾವತಿ ಮಾಡೋರು ಮತ್ತು ಸರ್ಕಾರಿ ನೌಕರರಿಗೆ ಮಾತ್ರ ಕಡಿತ ಮಾಡಿದ್ದೇವೆ. ಬಿಪಿಎಲ್ ಕಾರ್ಡ್‌ಗೆ ಅರ್ಹತೆ ಇಲ್ಲದೇ ಇರೋರನ್ನ ಎಪಿಎಲ್ ಕಾರ್ಡ್‌ಗೆ ಶಿಫ್ಟ್ ಮಾಡ್ತಿದ್ದೇವೆ. ಕಾರ್ಡ್ ರದ್ದು ಮಾಡ್ತಿಲ್ಲ. 11 ಲಕ್ಷ ಕಾರ್ಡ್ ರದ್ದಾಗಿದೆ ಅನ್ನೋದು ಬಿಜೆಪಿ ಸುಳ್ಳಿನ ಆರೋಪ ಅಂತ ಸಿಎಂಗೆ ಮಾಹಿತಿ ನೀಡಿದರು.

    ಇದೇ ವೇಳೆ ಅಧಿಕಾರಿಗಳ ಸಭೆ ಮಾಡಿ ಗೊಂದಲ ನಿವಾರಣೆ ಮಾಡುವಂತೆ ಮುನಿಯಪ್ಪಗೆ ಸಿಎಂ ಮತ್ತೆ ಸೂಚನೆ ನೀಡಿದರು, ಇದಕ್ಕೆ ಪ್ರತಿಕ್ರಿಯಿಸಿ, ಒಂದು ವೇಳೆ ಅರ್ಹರ ಕಾರ್ಡ್ ರದ್ದಾಗಿದ್ದರೆ ಮರು ಅರ್ಜಿ ಹಾಕೋ ವ್ಯವಸ್ಥೆ ಮಾಡ್ತೀವಿ. ಅದು ಯಾವ ರೀತಿ ಮಾಡಬೇಕು ಅಂತ ಅಧಿಕಾರಿಗಳ ಜೊತೆ ಸಭೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿಮಾನ ಪ್ರಯಾಣದಲ್ಲಿ ದಾಖಲೆ – ನ.17 ರಂದು ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ

  • ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿದ ಯಜಮಾನಿಗೆ ಮಾತ್ರ 2 ಸಾವಿರ ರೂ.

    ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿದ ಯಜಮಾನಿಗೆ ಮಾತ್ರ 2 ಸಾವಿರ ರೂ.

    ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಮಾರ್ಗಸೂಚಿ ಪ್ರಕಟವಾಗಿದ್ದು ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ (BPL, APL, Antyodaya) ಹೊಂದಿದ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ.

    ಕಾರ್ಡ್​ನಲ್ಲಿ ನಮೂದಾಗಿರುವ ಯಜಮಾನಿಗೆ ಮಾತ್ರ 2 ಸಾವಿರ ರೂ. ಸಿಗಲಿದ್ದು ಒಂದು ಕುಟುಂಬದ ಓರ್ವ ಮಹಿಳೆಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ.

     

    ಜೂನ್ 15 ರಿಂದ ಜುಲೈ 15ರ ವರೆಗೆ ಸೇವಾಸಿಂಧು (Seva Sindhu) ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್‌ 15 ರಂದು ಅವರ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇದನ್ನೂ ಓದಿ: ಬಾಡಿಗೆದಾರರೇ ನಿಮಗೆ ಉಚಿತ ವಿದ್ಯುತ್‌ ಬೇಕೇ – ಷರತ್ತುಗಳನ್ನು ಪೂರ್ಣಗೊಳಿಸಿದ್ರೆ ಮಾತ್ರ ಫ್ರೀ

     

    ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಯಜಮಾನಿ ಅಥವಾ ಪತಿ ಜಿಎಸ್​​ಟಿ ರಿಟರ್ನ್ ಸಲ್ಲಿಸುವವರರಾಗಿದ್ದಲ್ಲಿ ಈ ಯೋಜನೆಯ ಲಾಭ ಸಿಗುವುದಿಲ್ಲ.

    ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದಲ್ಲಿ ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುತ್ತದೆ ಮತ್ತು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿ ಎಚ್ಚರಿಕೆಯನ್ನು ನೀಡಲಾಗಿದೆ.

  • ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದ ಅಂತ್ಯೋದಯ, ಬಿಪಿಎಲ್ ಪಡಿತರದಾರರ ಮೇಲಿನ ಕ್ರಮಕ್ಕೆ ಬ್ರೇಕ್

    ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದ ಅಂತ್ಯೋದಯ, ಬಿಪಿಎಲ್ ಪಡಿತರದಾರರ ಮೇಲಿನ ಕ್ರಮಕ್ಕೆ ಬ್ರೇಕ್

    ಬೆಂಗಳೂರು: ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬ್ರೇಕ್‌ ನೀಡಿದೆ.

    ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದು ಬಡವರ ʼಅನ್ನಭಾಗ್ಯʼಕ್ಕೆ ಕನ್ನ ಹಾಕಿದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಆಹಾರ ಇಲಾಖೆ ಆರಂಭಿಸಿತ್ತು. ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಪ್ರಕ್ರಿಯೆ ನಡೆಸಿತ್ತು. ಇದನ್ನೂ ಓದಿ: ಮದರಸಾಗಳಿಗಾಗಿ ವಿಶೇಷ ಮಂಡಳಿ ರಚನೆಗೆ ಪ್ಲಾನ್- ತಜ್ಞರ ವರದಿ ಕೇಳಿದ ಸಚಿವ ನಾಗೇಶ್

    ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದವರು, 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು ಮತ್ತು ನಾಲ್ಕು ಚಕ್ರದ ವೈಯಕ್ತಿಕ ವಾಹನ ಇರುವವರು ಅಂತ್ಯೋದಯ ಅಥವಾ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅರ್ಹರಲ್ಲ ಎಂದು ಇಲಾಖೆ ಪಟ್ಟಿ ಮಾಡಿತ್ತು.

    ಈ ಸಂಬಂಧ ಕ್ರಮ ಕೈಗೊಳ್ಳಲು ಎಲ್ಲ ಡಿಸಿಗಳು ಮತ್ತು ಇಲಾಖೆ ಜಂಟಿ/ಉಪನಿರ್ದೇಶಕರಿಗೂ ಈ ಹಿಂದೆ ಆಹಾರ ಇಲಾಖೆ ಸೂಚನೆ ನೀಡಿತ್ತು. ಆದರೆ ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರನ್ನು ಅನರ್ಹ ಪಟ್ಟಿಗೆ ಸೇರಿಸಿರುವುದಕ್ಕೆ ಸರ್ಕಾರ ಹಾಗೂ ಪಕ್ಷದವರಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದೇಶ ವಾಪಸ್‌ ತೆಗೆದುಕೊಳ್ಳಲು ಸಿಎಂ ಮೇಲೆ ಒತ್ತಡ ಕೂಡ ಹೇರಲಾಗಿತ್ತು. ಇದನ್ನೂ ಓದಿ: ಶಾಸಕ ಪ್ರೀತಂಗೌಡ ಭರ್ಜರಿ ಗಿಫ್ಟ್ – ಗೌರಿ ಹಬ್ಬಕ್ಕೆ ಸೀರೆ, ಬಳೆ, ಕುಂಕುಮ ಭಾಗ್ಯ

    ಇದೀಗ ತನ್ನ ಸುತ್ತೋಲೆಯನ್ನು ಮುಂದಿನ ಆದೇಶದವರೆಗೆ ಆಹಾರ ಇಲಾಖೆ ತಡೆ ಹಿಡಿದಿದೆ. ಆ ಸಂಬಂಧ ಆದೇಶವನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • T20 ವಿಶ್ವಕಪ್‍ಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ

    T20 ವಿಶ್ವಕಪ್‍ಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ

    ಮುಂಬೈ: ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ದಿನಗಣನೇ ಆರಂಭವಾಗಿದೆ. ಈ ನಡುವೆ ಟೀಂ ಇಂಡಿಯಾ ಟಿ20 ವಿಶ್ವಕಪ್‍ಗೆ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದು, ಇಂದು ನೂತನ ಜೆರ್ಸಿ ಅನಾವರಣಗೊಂಡಿದೆ.

    ವಿಶ್ವಕಪ್‍ನಂತಹ ಮಹತ್ವದ ಟೂರ್ನಿಗಳಲ್ಲಿ ಭಾಗವಹಿಸುವ ಮುನ್ನ ನೂತನ ಜೆರ್ಸಿಯೊಂದಿಗೆ ಕಣಕ್ಕಿಳಿಯುವುದು ವಾಡಿಕೆ ಅದರಂತೆ ಈ ಬಾರಿಯೂ ಟೀ ಇಂಡಿಯಾ ನೂತನ ಜೆರ್ಸಿತೊಟ್ಟು ಮೈದಾನಕ್ಕೆ ಇಳಿಯಲಿದೆ. ಭಾರತ ತಂಡ ತೊಡುವ ನೂತನ ಜೆರ್ಸಿಯನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದ ಮೂಲಕ ಅನಾವರಣಗೊಳಿಸಿದ್ದು, ಕೋಟ್ಯಂತರ ಜನರ ಚೀಯರ್ಸ್‍ನಿಂದ ಪ್ರೇರಿತಗೊಂಡು ಸಿದ್ಧವಾದ ಜೆರ್ಸಿ ಎಂದು ಬರೆದುಕೊಂಡಿದೆ. ಜೆರ್ಸಿ ಕಡು ನೀಲಿ ಬಣ್ಣ ಮಿಶ್ರಿತವಾಗಿದ್ದು, ಈ ಹಿಂದಿನ ಜೆರ್ಸಿ ಶೈಲಿಯನ್ನು ಹಾಗೆ ಮುಂದುವರಿಸಿದಂತಿದೆ. ತಂಡದ ನೂತನ ಜೆರ್ಸಿ ಕಿಟ್‍ಗಳನ್ನು ಪ್ರಯೋಜಕತ್ವ ಹೊಂದಿರುವ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಸಿದ್ಧಪಡಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ – ಗೇಮ್‍ಪ್ಲೇ ಘೋಷಣೆ

    ಟಿ20 ವಿಶ್ವಕಪ್ ಅಕ್ಟೋಬರ್ 17ರಿಂದ ಆರಂಭಗೊಂಡು, ನವೆಂಬರ್ 14ರಂದು ಮುಕ್ತಾಯಗೊಳ್ಳಲಿದೆ. ಭಾರತ ತಂಡ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಯಸಿದರೆ ಪಾಕ್‌ ಕ್ರಿಕೆಟ್‌ ಕತೆ ಮುಗಿದಂತೆ: ರಮೀಝ್‌ ರಾಜಾ

  • ಎಪಿಎಲ್ ಕಾರ್ಡ್‍ನ್ನು ಬಿಪಿಎಲ್‍ಗೆ ಪರಿವರ್ತಿಸುತ್ತಿದ್ದ ಆರೋಪಿಗಳ ಬಂಧನ

    ಎಪಿಎಲ್ ಕಾರ್ಡ್‍ನ್ನು ಬಿಪಿಎಲ್‍ಗೆ ಪರಿವರ್ತಿಸುತ್ತಿದ್ದ ಆರೋಪಿಗಳ ಬಂಧನ

    ರಾಯಚೂರು: ಎಪಿಎಲ್ ಪಡಿತರ ಕಾರ್ಡ್‍ನ್ನು ಬಿಪಿಎಲ್‍ಗೆ ಪರಿವರ್ತಿಸುತ್ತಿದ್ದ ಆರೋಪಿಗಳನ್ನು ಸಿಂಧನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಸಿಂಧನೂರು ನಗರದ ಕಂಪ್ಯೂಟರ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಎಪಿಎಲ್ ಕಾರ್ಡ್ ಅನ್ನು ಬಿಪಿಎಲ್ ಆಗಿ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಬಸವರಾಜ್ ಹಾಗೂ ಕಾರ್ಡ್ ಹೊಂದಿದ್ದ ಮಹಿಳೆ ಪತಿ ಬಸಪ್ಪ ಬಂಧಿತ ಆರೋಪಿಗಳು. ಬಾದರ್ಲಿ ಗ್ರಾಮದ ಹುಲಿಗೆಮ್ಮಳ ಎಪಿಎಲ್ ಕಾರ್ಡನ್ನ ಬಿಪಿಎಲ್ ಗೆ ಪರಿವರ್ತಿಸಲಾಗಿತ್ತು. ಈ ಕುರಿತು ಸಿಂಧನೂರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಹಾರ ನಿರೀಕ್ಷಕ ಅಮರೇಶ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

    ತಪ್ಪಿನಲ್ಲಿ ಭಾಗಿಯಾದ ಎಪಿಎಲ್ ಕಾರ್ಡದಾರಳಾದ ಹುಲಿಗೆಮ್ಮ ಹಾಗೂ ಪತಿ ಬಸಪ್ಪ ವಿರುದ್ಧವೂ ದೂರು ದಾಖಲಾಗಿದೆ. ಎಪಿಎಲ್ ಕಾರ್ಡ್ ಅನ್ನು fcjsdit ಲಾಗಿನ್ ನಿಂದ ಬಿಪಿಎಲ್ ಕಾರ್ಡ್ ಆಗಿ ಆರೋಪಿಗಳು ಪರಿವರ್ತಿಸಿದ್ದಾರೆ. ಪರಿವರ್ತನೆಯಾದ ಕಾರ್ಡ್‍ಗಳ ಬಗ್ಗೆ ತನಿಖೆ ಮುಂದುವರೆದಿದೆ.

  • ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಸಿಗುತ್ತೆ ರೇಷನ್

    ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಸಿಗುತ್ತೆ ರೇಷನ್

    ಬೆಂಗಳೂರು: ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡುವ ಮಹತ್ವದ ಘೋಷಣೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

    ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೂ ಏಪ್ರಿಲ್‍ನಿಂದ ಜೂನ್‍ವರೆಗೆ ಅಕ್ಕಿ ವಿತರಣೆ ಮಾಡಲು ಸರ್ಕಾರ ಆದೇಶ ನೀಡಿದೆ. ಈ ಮೂಲಕ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಸಿಗಲಿದೆ. ಆದರೆ ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರ ಹಣ ನಿಗದಿ ಮಾಡಿದೆ. ಹೀಗಾಗಿ ಎಪಿಎಲ್ ಕಾರ್ಡ್ ಅರ್ಜಿದಾರರು ಪ್ರತಿ ಕೆಜಿಗೆ 15 ರೂ.ರಂತೆ 10 ಕೆಜಿ ಅಕ್ಕಿ ಖರೀದಿಸಬಹುದಾಗಿದೆ.

    ಈವರೆಗೂ ಬಿಪಿಎಲ್ ಕಾರ್ಡ್‍ಗೆ 1,88,152 ಕುಟುಂಬ ಹಾಗೂ ಎಪಿಎಲ್ ಕಾರ್ಡ್‍ಗೆ 61,333 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.