ಚಾಮರಾಜನಗರ: ಕೊತ್ತೂರು ಮಂಜುನಾಥ್ ಒಬ್ಬ ಅಬ್‌ನಾರ್ಮಲ್ ಪರ್ಸನ್ ಅಂತ ಅನಿಸುತ್ತೆ ಎಂದು ಬಿಜೆಪಿ ನಾಯಕ ಎನ್.ಮಹೇಶ್ ಗುಡುಗಿದರು.
ಮಂಜುನಾಥ್‌ಗೆ ತಲೆ ನೆಟ್ಟಗಿಲ್ಲ. ಒಂದು ಬಾರಿ ನಿಮ್ಹಾನ್ಸ್ಗೆ ಹೋಗಿ ತಲೆ ರಿಪೇರಿ ಮಾಡಿಸಿಕೊಂಡು ಬರ್ಬೇಕು. ಇದು ದೇಶದ ಸಂಕಷ್ಟ ಸಂದರ್ಭ. 147 ಕೋಟಿ ಜನರು ಪಕ್ಷಬೇಧ, ಜಾತಿಬೇಧ, ಧರ್ಮಬೇಧ ಮರೆತು ಸೈನಿಕರ ಜೊತೆ ನಿಲ್ಲಬೇಕು, ಆತ್ಮ ವಿಶ್ವಾಸ ತುಂಬಬೇಕು ಎಂದು ತಿಳಿಸಿದರು.
ಓರ್ವ ಶಾಸಕನಾಗಿದ್ದು, ಆ ಸ್ಥಾನಕ್ಕೆ ಅವಮಾನವಿದು. ಎಐಸಿಸಿ, ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡ್ತೀನಿ. ಕೊತ್ತೂರು ಮಂಜುನಾಥ್‌ನ ಅಮಾನತು ಮಾಡ್ಬೇಕು. ಆತ ಓರ್ವ ಲೂಸ್.. ಲೂಸ್ ಟಾಕ್ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸಚಿವರೊಬ್ಬರು ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಈಗಾಗ್ಲೆ ನಾವು ಅವರನ್ನು ಅಮಾನತು ಮಾಡಿದ್ದೇವೆ. ನಾವು ಅವರ ಮಾತನ್ನ ಖಂಡಿಸಿದ್ದೇವೆ. ದೇಶದ ಸೈನಿಕರ ವಿರುದ್ಧ ಯಾರೇ ಮಾತನಾಡಿದ್ರು ನಾನು ಅದನ್ನ ಖಂಡಿಸುತ್ತೇನೆ ಎಂದರು.
ಚಾಮರಾಜನಗರ: ಮಾಜಿ ಸಚಿವ ಎನ್ ಮಹೇಶ್ (N Mahesh) ಮನೆಯಲ್ಲಿ ಕಳ್ಳತನ ನಡೆದಿದೆ. ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲದ ಆದರ್ಶ ಬಡಾವಣೆಯಲ್ಲಿರುವ ಮಹೇಶ್ ಮನೆಗೆ ನುಗ್ಗಿ ಕಳ್ಳರು ಹಣ ದೋಚಿದ್ದಾರೆ.
ಚಾಮರಾಜನಗರ: ಚಾಮರಾಜನಗರ (Chamarajanagara) ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕೊಳ್ಳೇಗಾಲ (Kollegala). ಗಡಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವೂ ಹೌದು. ಇದೀಗ ಕೊಳ್ಳೇಗಾಲದಲ್ಲಿ ಚುನಾವಣೆ ಕಾವು ರಂಗೇರಿದೆ. ಬಿಜೆಪಿ-ಕಾಂಗ್ರೆಸ್ ನಡುವೆಯೇ ನೇರಾ ಹಣಾಹಣಿಯಿದೆ. ಬಿಎಸ್‌ಪಿಯಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿರುವ ಎನ್.ಮಹೇಶ್ ವಿರುದ್ಧ ವಿರೋಧಿ ಬಣಗಳು ಒಂದಾಗಿದ್ದು, ಸೋಲಿಸುವ ಹಠ ತೊಟ್ಟಿದ್ದಾರೆ. ಆದರೆ ವಿರೋಧಿಗಳಿಗೆ ಸೆಡ್ಡು ಹೊಡೆಯುವ ಮೂಲಕ ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸಲು ತಮ್ಮದೇ ತಂತ್ರಗಾರಿಕೆ ರೂಪಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು, ಸೀರೆ ಗಿಫ್ಟ್..!
ಜಾತಿವಾರು ಲೆಕ್ಕಾಚಾರ ಏನು?
ಕೊಳ್ಳೇಗಾಲ ಕ್ಷೇತ್ರದಲ್ಲಿ 2,16,602 ಒಟ್ಟು ಜನಸಂಖ್ಯೆ ಇದೆ. ಅವರ ಪೈಕಿ ಪುರುಷರು- 1,06,979 ಹಾಗೂ ಮಹಿಳೆಯರು – 1,09,604 ಇದ್ದಾರೆ.
ದಲಿತರು- 65,000
ಲಿಂಗಾಯತರು- 38,000
ವಾಲ್ಮೀಕಿ ನಾಯಕರು- 31,000
ಉಪ್ಪಾರ-32,000
ಕುರುಬ- 9,000
ದೇವಾಂಗ- 8,000
ಅಲ್ಪಸಂಖ್ಯಾತ- 11,000
ಬಿಜೆಪಿ ಪ್ಲಸ್: ಬಿಜೆಪಿ ಮತ ಬ್ಯಾಂಕ್ ಭದ್ರವಾಗಿರುವ ನಂಬಿಕೆ. ಗೆದ್ದು ಸರ್ಕಾರ ಬಂದರೆ ಸಚಿವನಾಗುವ ಅವಕಾಶ. ಕಳೆದ ಬಾರಿ ಬಿಜೆಪಿ ಸರ್ಕಾರ ಬರಲು ಮಹೇಶ್ ಕೊಡುಗೆಯೂ ಕಾರಣವೆಂಬ ನಂಬಿಕೆ. ಬಿಜೆಪಿ ಮೈನಸ್: ಯುವ ಸಮುದಾಯಕ್ಕೆ ಬಿಎಸ್‌ಪಿಯಿಂದ ಬಿಜೆಪಿಗೆ ಹೋಗಿರುವ ಅಸಮಾಧಾನ. ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದು ಸ್ಪರ್ಧೆ ಮಾಡಿರುವ ಕಿನಕಹಳ್ಳಿ ರಾಚಯ್ಯ. ಎನ್.ಮಹೇಶ್ ಸೋಲಿಸಲು ಒಗ್ಗೂಡಿರುವ ವಿರೋಧಿ ಬಣ. ಬಿಎಸ್‌ಪಿಯಿಂದಲೂ ಕಾಂಗ್ರೆಸ್‌ಗೆ ಬೆಂಬಲ.
ಕಾಂಗ್ರೆಸ್ ಪ್ಲಸ್: ಸತತ ಸೋಲಿನಿಂದ ಕಂಗೆಟ್ಟ ಎ.ಆರ್.ಕೃಷ್ಣಮೂರ್ತಿಗೆ ಒಂದು ಅವಕಾಶ ಕೊಡಬೇಕೆಂಬ ಚರ್ಚೆ. ಬಿಎಸ್‌ಪಿ ಅಭ್ಯರ್ಥಿ ನಾಮಪತ್ರ ವಾಪಸ್ ತೆಗೆದುಕೊಂಡು ‘ಕೈ’ಗೆ ಬೆಂಬಲ ಕೊಟ್ಟಿರುವುದು. ಎನ್.ಮಹೇಶ್ ವಿರೋಧಿ ಬಣದಿಂದ ಕೃಷ್ಣಮೂರ್ತಿ ಪರ ಕೆಲಸ. ಮೈನಸ್: ಹೊಸ ಮತದಾರರನ್ನು ತಲುಪದಿರುವುದು. ‘ಕೈ’ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಬಾಲರಾಜು ಬಿಜೆಪಿಗೆ ಹೋಗಿರುವುದು. ಲಿಂಗಾಯತ ಸಮುದಾಯ ಸ್ವಲ್ಪ ಅಸಮಾಧಾನವಾಗಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್
ಬಿಎಸ್‌ಪಿ ಹೋರಾಟದ ಮೂಲಕ ಹೆಸರುವಾಸಿಯಾಗಿದ್ದ ಎನ್.ಮಹೇಶ್ ಬದಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಕಮಲ ಮುಡಿದಿರುವುದಿಂದ ಬಿಎಸ್‌ಪಿ, ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ. ಜೊತೆಗೆ ಎನ್.ಮಹೇಶ್ ಸೋಲಿಸುವ ಅಜೆಂಡಾ ಇಟ್ಟುಕೊಂಡು ವಿರೋಧಿ ಬಣಗಳು ಒಗ್ಗಟ್ಟಿನ ಮಂತ್ರ ಜಪಿಸಿ ಕೆಲಸ ಮಾಡುತ್ತಿವೆ. ಆದರೆ ಎನ್.ಮಹೇಶ್ ಅವರು, ನನಗೆ ಬಿಜೆಪಿ, ಯಡಿಯೂರಪ್ಪ ಶ್ರೀರಕ್ಷೆಯಿದೆ ಎಂದು ಅಖಾಡ ಫೇಸ್ ಮಾಡ್ತಿದ್ದಾರೆ.
ಚಾಮರಾಜನಗರ: ಸಚಿವ ವಿ. ಸೋಮಣ್ಣ (V Somanna) ವರುಣಾ ಬಳಿಕ ಬುಧವಾರ ಚಾಮರಾಜನಗರದಲ್ಲಿ (Chamarajanagar Constituency) ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಆಸ್ತಿ ವಿವರಗಳನ್ನ ಘೋಷಣೆ ಮಾಡಿದ್ದಾರೆ.
ಚರಾಸ್ತಿ ವಿಚಾರ ಗಮನಿಸಿದರೇ ಸೋಮಣ್ಣಗಿಂತ ಪತ್ನಿ ಶೈಲಜಾ ಶ್ರೀಮಂತರಾಗಿದ್ದು ಸೋಮಣ್ಣ (V Somanna) ಬಳಿ ಚರಾಸ್ತಿ 3.61 ಕೋಟಿ ಅಷ್ಟಿದ್ದರೇ, ಪತ್ನಿ ಶೈಲಜಾ 13.01 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತಿಗಿಂತ ಶೈಲಜಾ ಶ್ರೀಮಂತರಾದರೂ ಯಾವುದೇ ವಾಹನ ಹೊಂದಿಲ್ಲ. ಆದರೆ ಸೋಮಣ್ಣ 3 ಕಾರುಗಳ ಮಾಲೀಕರಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ಮಾರಿಕೊಂಡ ವೀಡಿಯೋ ಇದ್ರೆ, ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ: ಅಶೋಕ್ ಖೇಣಿ
ಸೋಮಣ್ಣ ಅವರ ಬಳಿ 4.1 ಲಕ್ಷ ರೂ. ನಗದು ಇದ್ದರೇ, ಅವರ ಪತ್ನಿ 9.99 ಲಕ್ಷ ರೂ. ನಗದನ್ನ ಹೊಂದಿದ್ದಾರೆ. ಇನ್ನೂ ಪತಿ- ಪತ್ನಿ ಇಬ್ಬರೂ ಸಾಲ ಹೊಂದಿದ್ದು ಸೋಮಣ್ಣಗೆ 2.9 ಕೋಟಿ ರೂ.ನಷ್ಟು ಸಾಲ ಇದ್ದರೇ ಪತ್ನಿ ಶೈಲಜಾ ಅವರಿಗೆ 4.5 ಕೋಟಿ ರೂ. ಸಾಲ ಇದ್ದು, ಪತ್ನಿ ಶೈಲಜಾ ಅವರ ಬಳಿಯೇ ಸೋಮಣ್ಣ 20 ಲಕ್ಷ ಸಾಲ ಪಡೆದಿದ್ದಾರೆ. ಸೋಮಣ್ಣ ಬಳಿ 10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೇ, ಪತ್ನಿ 21 ಕೋಟಿಯಷ್ಟು ಸ್ಥಿರಾಸ್ತಿ ಹೊಂದಿದ್ದಾರೆ. ಇಬ್ಬರದೂ ಸ್ವಯಾರ್ಜಿತ ಆಸ್ತಿಯಾಗಿದ್ದು ಪಿತ್ರಾರ್ಜಿತವಾಗಿ ಯಾವುದೂ ಬಂದಿಲ್ಲ.
ವಾಟಾಳ್ ಕೋಟ್ಯಾಧೀಶ:
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಮಂಗಳವಾರ ನಾಮಪತ್ರ ಸಲ್ಲಿಸಿದ್ದು 5.3 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಚಿನ್ನಾಭರಣ ಹಾಗೂ ಸಾಲ ತಮಗಿಲ್ಲ ಎಂದು ವಾಟಾಳ್ ತಿಳಿಸಿದ್ದು 50 ಸಾವಿರ ರೂ. ನಗದು ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಬಹುತೇಕ ಆಸ್ತಿ ಪತ್ನಿಯಿಂದ ಬಂದದ್ದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗದಿದ್ದಕೆ 5 ವರ್ಷಗಳ ಬಳಿಕ ಮತ್ತೆ ಹುದ್ದೆಯನ್ನೇರಿದ ಪೊಲೀಸ್ ಅಧಿಕಾರಿ: ಸಾರ್ವಜನಿಕ ವಲಯದಲ್ಲಿ ಚರ್ಚೆ
ಶಾಸಕ ಎನ್. ಮಹೇಶ್‌ಗೆ ಸ್ಥಿರಾಸ್ತಿಯೇ ಇಲ್ಲ:
ಶಾಸಕ ಎನ್. ಮಹೇಶ್ (N Mahesh) ಅವರು ಕೊಳ್ಳೇಗಾಲದಲ್ಲಿ ನಾಮಪತ್ರ ಸಲ್ಲಿಸಿದ್ದು ಆಸ್ತಿ ವಿವರವನ್ನ ಘೋಷಣೆ ಮಾಡಿಕೊಂಡಿದ್ದು ತಮ್ಮ ಹೆಸರಲ್ಲಿ ಯಾವುದೇ ಸ್ಥಿರಾಸ್ತಿಗಳಿಲ್ಲ ಎಂದು ತಿಳಿಸಿದ್ದಾರೆ. ಚರಾಸ್ತಿಗಳು ಮಾತ್ರ ತಮ್ಮಲ್ಲಿ ಇದ್ದು ಅವುಗಳ ಮೌಲ್ಯ ಒಟ್ಟು 1.83 ಕೋಟಿ ಎಂದು ತಿಳಿಸಿದ್ದಾರೆ. ಇದರಲ್ಲಿ 1 ಕಾರು, 150 ಗ್ರಾಂ ಚಿನ್ನ ಮತ್ತು ಚಿಗುವೆರಾ ಎಂಬವರಿಗೆ 50 ಲಕ್ಷ ರೂ. ಸಾಲ ಕೊಟ್ಟಿರುವುದು ಸೇರಿದೆ.
ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್‌ಗೆ (N Mahesh) ಎದೆನೋವು ಕಾಣಿಸಿಕೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ (Mysuru Private Hospital) ದಾಖಲಿಸಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎನ್.ಮಹೇಶ್‌ಗೆ ಆ್ಯಂಜಿಯೋಗ್ರಾಮ್ (Angiogram) ಮಾಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಸದ್ಯ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನನ್ನ ಸಮಾಧಿ ಮಾಡುವ ಕನಸು ಕಾಣುತ್ತಿದೆ: ಮೋದಿ ವಾಗ್ದಾಳಿ
ಈ ಸಂಬಂಧ ಶಾಸಕ ಎನ್.ಮಹೇಶ್ ಪುತ್ರ ಅರ್ಜುನ್ ಮಾತನಾಡಿದ್ದು, ನಮ್ಮ ತಂದೆ ಆರೋಗ್ಯವಾಗಿದ್ದಾರೆ. ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ವೈದ್ಯರು ಆ್ಯಂಜಿಯೋಗ್ರಾಮ್ ಮಾಡಿದ್ದು, ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ಎರಡು ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ, ಯಾವುದೇ ಆತಂಕವಿಲ್ಲ ಎಂದು ಹೇಳಿದ್ದಾರೆ.
ಏನಿದು ಆ್ಯಂಜಿಯೋಗ್ರಾಮ್?
ದೇಹದ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಹಾಗೂ ಉತ್ತಮ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲು ನಡೆಸುವ ಚಿಕಿತ್ಸಾ ಕ್ರಮ. ಹೃದಯದಿಂದ ರಕ್ತನಾಳಗಳ ಮೂಲಕ ರಕ್ತ ಹೇಗೆ ಹರಿಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಈ ಚಿಕಿತ್ಸಾ ವಿಧಾನ ಬಳಸುತ್ತಾರೆ.
ಮೈಸೂರು: ಒತ್ತಡದ ರಾಜಕಾರಣಕ್ಕೆ ಮಾಜಿ ಸಂಸದ ಆರ್.ಧ್ರುವನಾರಾಯಣ್ (R.Dhruvanarayan) ಬಲಿಯಾಗಿದ್ದಾರೆ ಎಂದು ಕೊಳ್ಳೇಗಾಲ (Kollegala) ಶಾಸಕ ಎನ್.ಮಹೇಶ್ (N.Mahesh) ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ (KPCC) ರಾಜ್ಯಾಧ್ಯಕ್ಷ ಧ್ರುವನಾರಾಯಣ್ ಅವರ ಅಂತಿಮ ದರ್ಶನ ಪಡೆದು ಬಳಿಕ ಮಾತನಾಡಿದ ಎನ್.ಮಹೇಶ್, ದಲಿತ ಸಮುದಾಯಕ್ಕೆ ಒತ್ತಡ ತಡೆಯುವ ಶಕ್ತಿ ಇಲ್ಲ. ಎರಡು ಬಾರಿ ಎಂಪಿ (MP) ಆಗಿದ್ದವರು. ಶಾಸಕರಾಗಲು ಇಷ್ಟೊಂದು ಒತ್ತಡ ತಗೋಬೇಕಿತ್ತಾ? ಅವರು ಕೇಳಿದ ಕಡೆ ಟಿಕೆಟ್ ಕೊಡಬೇಕಿತ್ತು ಎಂದು ಕಾಂಗ್ರೆಸ್‌ಗೆ ಪರೋಕ್ಷವಾಗಿ ಟಾಂಗ್ (Tong) ಕೊಟ್ಟರು. ಇದನ್ನೂ ಓದಿ: ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ
ಅವರ ಪಕ್ಷದವರು ಆ ಸ್ಥಾನವನ್ನು ಅವರಿಗೆ ಬಿಟ್ಟುಕೊಡಬೇಕಿತ್ತು. ದಲಿತ ಸಮುದಾಯಕ್ಕೆ ಒತ್ತಡ ತಡೆದುಕೊಳ್ಳುವ ಶಕ್ತಿ ಇರಲ್ಲ. ಒಂದು ಎಂಎಲ್‌ಎ (MLA) ಸ್ಥಾನಕ್ಕೆ ಧ್ರುವನಾರಾಯಣ್ ಇಷ್ಟು ಒತ್ತಡ ತಗೊಂಡ್ರಾ ಎಂದು ಎನ್.ಮಹೇಶ್ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ನೆನೆದು ಕಣ್ಣೀರಿಟ್ಟ ಪ್ರತಾಪ್ ಸಿಂಹ
ಇದೇ ವೇಳೆ ಮಾಜಿ ಸಚಿವೆ ಗೀತಾ ಮಹದೇವ ಪ್ರಸಾದ್ (Geetha Mahadeva Prasad) ಸೇರಿದಂತೆ ಅನೇಕರು ಆರ್.ಧ್ರುವನಾರಾಯಣ್ ಅವರ ಅಂತಿಮ ದರ್ಶನ ಪಡೆದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ಶನಿವಾರ ಹೃದಯಾಘಾತದಿಂದ (Heart Attack) ನಿಧನರಾದರು. ಹೃದಯಾಘಾತವಾದಾಗ ಅವರನ್ನು ಮೈಸೂರಿನ (Mysuru) ಡಿಆರ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು. ಇದನ್ನೂ ಓದಿ: ಮಹಿಳೆಯರ ಮನ ಗೆಲ್ಲಲು ಹೊರಟ ಬಿಜೆಪಿ – ಕಮಲ್ ಮಿತ್ರ ಹೆಸರಿನಲ್ಲಿ ಹೊಸ ಅಭಿಯಾನ
ಚಾಮರಾಜನಗರ: 2023ರ ಚುನಾವಣಾ ಕಾವು ರಾಜ್ಯಾದ್ಯಂತ ಜೋರಾಗಿದೆ. ಗಡಿಜಿಲ್ಲೆ ಚಾಮರಾಜನಗರದಲ್ಲೂ (Chamarajanagar) ರಾಜಕೀಯ ಆಟ ಶುರುವಾಗಿದ್ದು, ಕೊಳ್ಳೇಗಾಲ (Kollegala) ನಗರಸಭೆ ಉಪಚುನಾವಣೆ ರಿಸಲ್ಟ್ ಹಾಲಿ ಮತ್ತು ಮಾಜಿ ಶಾಸಕರ ಮುಸುಕಿನ ಗುದ್ದಾಟಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮೂಲಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.
ಬಿಎಸ್‌ಪಿಯಿಂದ (BSP) ಉಚ್ಚಾಟನೆಗೊಂಡು ಇದೀಗ ಕೇಸರಿ ಪಡೆ ಸೇರಿರುವ ಶಾಸಕ ಎನ್.ಮಹೇಶ್ (N.Mahesh) ವಿರುದ್ಧ ಪಕ್ಷದಲ್ಲೇ ವಿರೋಧಿಗಳು ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ನಗರಸಭೆ ಉಪಚುನಾವಣೆ. ಬಿಎಸ್ಪಿ ತ್ಯಜಿಸಿ ಬಂದಿದ್ದ ಕಮಲ ಹಿಡಿದ ಆರು ಸದಸ್ಯರ ಗೆಲುವು. 6 ಬಾರಿ ಚುನಾವಣೆ ಎದುರಿಸಿ ಎರಡು ಬಾರಿ ಶಾಸಕರಾಗಿರುವ ಜಿ.ಎನ್.ನಂಜುಂಡಸ್ವಾಮಿ (G.N.Nanjundaswamy) ತಾವೇ ಅಭ್ಯರ್ಥಿ ಎಂಬ ಉಮೇದಿನಲ್ಲಿದ್ದರು. ಆದರೆ ಉಪಚುನಾವಣೆಯ ಗೆಲುವು ಶಾಸಕ ಮಹೇಶ್ ಪಾಲಿಗೆ ವರವಾಗಿದೆ. ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Yediyurappa), ಸಚಿವ ಸೋಮಣ್ಣ ಅವರು ಎನ್.ಮಹೇಶ್ ಅವರನ್ನು ಗೆಲ್ಲಿಸಬೇಕೆಂದು ಬಹಿರಂಗ ಹೇಳಿಕೆ ನೀಡಿರುವುದು ನಂಜುಂಡಸ್ವಾಮಿ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹೀಗಾಗಿ ಅವರು ಎನ್.ಮಹೇಶ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯಲ್ಲಿ ಯಾರಿಗೂ ಟಿಕೆಟ್ ಘೋಷಣೆಯಾಗಿಲ್ಲ. ನಾನು ಕೂಡ ಪ್ರಬಲ ಆಕಾಂಕ್ಷಿ ಅಂತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಕಮಿಷನ್ ಆರೋಪ
ಬಿಎಸ್ಪಿ ತ್ಯಜಿಸಿ ಬಿಜೆಪಿ ಸೇರಿರುವ ಎನ್.ಮಹೇಶ್ 2023ರ ಅದೃಷ್ಟ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನಗರಸಭೆ ಉಪಚುನಾವಣೆ ಫಲಿತಾಂಶ ಬಿಜೆಪಿ ಪರ ಬಂದಿರುವುದು ಮಾತ್ರವಲ್ಲದೆ ರಾಜ್ಯ ಮಟ್ಟದ ನಾಯಕರು ಹೋದಲ್ಲಿ ಬಂದಲ್ಲಿ ಕೊಳ್ಳೇಗಾಲ ಗೆಲುವನ್ನು ಪುನರುಚ್ಛರಿಸುತ್ತಿರುವುದು ಮಹೇಶ್ ಸಂತಸಕ್ಕೆ ಕಾರಣವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಎದ್ದಿರುವ ಭಿನ್ನಮತವನ್ನು ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ. ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲವಾದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಇದರ ಜೊತೆಗೆ ತಾನು ಸಹ ಟಿಕೆಟ್ ಆಕಾಂಕ್ಷಿ ಎಂದು ಜಾಣ್ಮೆಯ ನಡೆ ಅನುಸರಿಸ್ತಿದ್ದಾರೆ.
ಸದ್ಯ ಗಡಿ ಜಿಲ್ಲೆಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಕಚ್ಚಾಟ ಆಂತರಿಕವಾಗಿದೆಯಾದರೂ ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿ ಹೈಕಮಾಂಡ್ ಈಗಲೇ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡದಿದ್ರೆ ಮುಂದೆ ಬಂಡಾಯ ಸ್ಪೋಟವಾಗುವ ಸಾಧ್ಯತೆಯೇ ಹೆಚ್ಚಿದೆ. ಇದನ್ನೂ ಓದಿ: ಮಹೇಶ್ ಕಮಾಲ್, ಬಿಜೆಪಿಗೆ ಭರ್ಜರಿ ಗೆಲುವು – 7 ಅನರ್ಹರಲ್ಲಿ 6 ಮಂದಿ ಜಯಭೇರಿ
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಶಾಸಕ ಎನ್.ಮಹೇಶ್(N Mahesh) ಜೊತೆಗೆ ಗುರುತಿಸಿಕೊಂಡು ಅನರ್ಹಗೊಂಡಿದ್ದ 7 ಮಂದಿ ನಗರಸಭೆ ಸದಸ್ಯರಲ್ಲಿ 6 ಮಂದಿ ಬಿಜೆಪಿ(BJP) ಜಯಭೇರಿ ಬಾರಿಸಿದ್ದು ಶಾಸಕರ ನಾಯಕತ್ವಕ್ಕೆ ಜಯಮಾಲೆ ದಕ್ಕಿದೆ.
ಕೊಳ್ಳೇಗಾಲ(Kollegal) ನಗರಸಭೆಯ 7 ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು 7 ಮಂದಿ ಅನರ್ಹರಲ್ಲಿ 6 ಮಂದಿ ಗೆಲ್ಲುವ ಮೂಲಕ ಶಾಸಕ ಎನ್.ಮಹೇಶ್ ಕ್ಷೇತ್ರದಲ್ಲಿ ಹಿಡಿತ ಬಿಗಿಗೊಳಿಸಿದ್ದು ವಿರೋಧಿ ಗುಂಪುಗಳಿಗೆ ತಿರುಗೇಟು ಕೊಟ್ಟಿದ್ದಾರೆ.
2ನೇ ವಾರ್ಡ್ ನಲ್ಲಿ ಕಾಂಗ್ರೆಸ್(Congress) ಅಭ್ಯರ್ಥಿ ಭಾಗ್ಯ ಅವರ ಗೆಲುವು ಬಿಟ್ಟರೇ ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಪ್ರಕಾಶ್, ಮಾನಸ, ರಾಮಕೃಷ್ಣ, ನಾಸಿರ್ ಷರೀಫ್, ಪವಿತ್ರಾ, ನಾಗಸುಂದ್ರಮ್ಮ ವಿಜಯ ಸಾಧಿಸಿದ್ದಾರೆ.
ಬಿಎಸ್‌ಪಿಯಿಂದ ಉಚ್ಚಾಟನೆಯಾಗಿ ಎನ್.ಮಹೇಶ್ ಬಿಜೆಪಿ ಸೇರಿದ್ದ ವೇಳೆ ಬಿಎಸ್‌ಪಿ ವಿಪ್ ಉಲ್ಲಂಘಿಸಿ ಮತ ನೀಡಿದ ಹಿನ್ನೆಲೆಯಲ್ಲಿ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ 7 ಮಂದಿ ಅನರ್ಹಗೊಂಡಿದ್ದರು.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ನನಗೆ ಜ್ವರ ಇದ್ದ ಕಾರಣದಿಂದ ತೆಪ್ಪದಲ್ಲಿ ಪ್ರವಾಹ(Flood) ವೀಕ್ಷಣೆಗೆ ಹೋಗಿದ್ದೆ ಎಂದು ಶಾಸಕ ಎನ್. ಮಹೇಶ್(N Mahesh) ಸ್ಪಷ್ಟನೆ ನೀಡಿದ್ದಾರೆ
ತೆಪ್ಪದಲ್ಲಿ ಕುಳಿತು ವೀಕ್ಷಣೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅಂದು ನನಗೆ ಜ್ವರ(Fever) ಇತ್ತು. ಸೊಂಟದ ಮಟ್ಟದವರೆಗೆ ನೀರಿತ್ತು. ನೀರಿನಲ್ಲಿ ಹೋಗಬಾರದು ಎಂಬ ಕಾರಣಕ್ಕೆ ತೆಪ್ಪ ಹತ್ತಿದ್ದೆ ಎಂದು ತಿಳಿಸಿದರು.
ಏನಿದು ಘಟನೆ?
ಪ್ರವಾಹ ಬಂದ ಹಿನ್ನೆಲೆಯಲ್ಲಿ ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ನಾಲ್ಕು ದಿನಗಳ ಹಿಂದೆ ಮಹೇಶ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ತೆಪ್ಪದಲ್ಲಿ ಕುಳಿತು ಮಹೇಶ್ ನೆರೆ ವೀಕ್ಷಣೆ ಮಡಿದ್ದರು.
ಒಂದುವರೆ ಅಡಿ ನೀರಿನಲ್ಲಿ ಮಹೇಶ್ ಅವರಿಗೆ ನಡೆಯಬಹುದಿತ್ತು. ಆದರೂ ಅವರು ತೆಪ್ಪದಲ್ಲಿ ಕುಳಿತು ಗ್ರಾಮಸ್ಥರಿಂದ ದೋಣಿ ತಳ್ಳಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ಸಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ತಂಗಳು ಬಿರಿಯಾನಿ ತಿಂದು ಸುಮಾರು 25 ಮಂದಿ ಕೂಲಿ ಕಾರ್ಮಿಕರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅರೇಪಾಳ್ಯದಲ್ಲಿ ನಡೆದಿದೆ.
ಇಲ್ಲಿನ ಸಂತೋಷ್ ಎಂಬ ವ್ಯಕ್ತಿಯೊಬ್ಬ ಜುಲೈ 18ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಹುಟ್ಟುಹಬ್ಬದ ಪ್ರಯುಕ್ತ ಚಿಕನ್ ಬಿರಿಯಾನಿ ಮಾಡಿಸಿದ್ದ. ಮಾರನೇ ದಿನ ಬೆಳಗ್ಗೆ ಕಬ್ಬು ಬೆಳೆ ಕಟಾಬಿಗೆ ಬಂದಿದ್ದ ಕೂಲಿ ಕಾರ್ಮಿಕರಿಗೆ ಅದೇ ಚಿಕನ್ ಬಿರಿಯಾನಿ ವಿತರಿಸಿದ್ದಾನೆ. ಇದನ್ನೂ ಓದಿ: ಚಾಕ್ಲೆಟ್ ಕವರ್ ನುಂಗಿ 6 ವರ್ಷದ ಬಾಲಕಿ ಸಾವು
ಕಾರ್ಮಿಕರು ಕೆಲಸ ಮುಗಿದ ಬಳಿಕ ತಮ್ಮ ಮನೆಗಳಿಗೂ ಬಿರಿಯಾನಿ ತೆಗೆದುಕೊಂಡು ಹೋಗಿದ್ದಾರೆ. ಇದೀಗ ಇದ್ದಕ್ಕಿದ್ದಂತೆ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ಕಾರ್ಮಿಕರನ್ನು ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜ್ಯೂನಿಯರ್ ‘ರೆಬಲ್ ಸ್ಟಾರ್’ ಅಭಿಷೇಕ್ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕ
ಶಾಸಕ ಎನ್.ಮಹೇಶ್ ಕೊಳ್ಳೇಗಾಲ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]