Tag: ಎನ್.ಬಿರೇನ್ ಸಿಂಗ್

  • ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    – ದಾಳಿಯಲ್ಲಿ ಹಲವರಿಗೆ ಗಾಯ, ಮರ‍್ನಾಲ್ಕು ಜಿಲ್ಲೆಗಳಲ್ಲಿ ಕರ್ಫ್ಯೂ

    ಇಂಫಾಲ: ಮಣಿಪುರದಲ್ಲಿ 2024ರ ನೂತನ ವರ್ಷದ ಮೊದಲ ದಿನವೇ ಮತ್ತೆ ಹಿಂಸಾಚಾರ (Manipur Violence) ಭುಗಿಲೆದ್ದಿದೆ. ಘಟನೆಯಲ್ಲಿ ಗುಂಡು ಹಾರಿಸಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂಸಾಚಾರದಿಂದಾಗಿ ಕಣಿವೆ ಜಿಲ್ಲೆಗಳಲ್ಲಿ ಮತ್ತೆ ಕರ್ಫ್ಯೂ (Curfew) ಹೇರಿರುವುದಾಗಿ ಮೂಲಗಳು ತಿಳಿಸಿವೆ.

    ಹಿಂಸಾಚಾರದ ವೇಳೆ ಅಪರಿಚಿತರ ಗುಂಪೊಂದು ಸುಲಿಗೆಗಾಗಿ ಆಟೊಮೆಟಿಕ್ ವೆಪನ್ಸ್‌ಗಳೊಂದಿಗೆ (ಸ್ವಯಂಚಾಲಿತ ಶಸ್ತ್ರಾಸ್ತ್ರ) (Automatic Weapons) ದಾಳಿ ಮಾಡಿತು ಎಂದು ತೌಬಲ್ ಜಿಲ್ಲೆಯ ಸ್ಥಳೀಯರು ಹೇಳಿದ್ದಾರೆ. ಈ ಹಿಂಸಾಚಾರವನ್ನು ಸಿಎಂ ಎನ್.ಬಿರೇನ್ ಸಿಂಗ್ ಅವರು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ಅಮಾಯಕ ಜನರ ಹತ್ಯೆಯಿಂದ ಅಪಾರ ದುಃಖವಾಗಿದೆ. ನಾವು ಆರೋಪಿಗಳನ್ನು ಹಿಡಿಯಲು ವಿಶೇಷ ಪೊಲೀಸ್ ಪಡೆಗಳನ್ನ ಸಜ್ಜುಗೊಳಿಸಿದ್ದೇವೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾರ್ವಜನಿಕರು ಸಹ ಸಹಕಾರ ನೀಡಬೇಕೆಂದು ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

    ಅಲ್ಲದೇ 2024ರ ಹೊಸ ವರ್ಷದ ಮೊದಲ ದಿನವೇ ನಡೆದಿರುವ ಹಿಂಸಾಚಾರವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿದೆ. ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಆಡಳಿತ ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರ ತುರ್ತು ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಕೆಲ ಜಲ್ಲೆಗಳಲ್ಲಿ ಕರ್ಫ್ಯೂ: ಹೊಸ ಹಿಂಸಾಚಾರದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಣಿಪುರದ ಕಣಿವೆ ಪ್ರದೇಶಗಳಾದ ತೌಬಲ್, ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2023ರ ವರ್ಷದಲ್ಲಿ ಮೇ 3ರಂದು ದೊಡ್ಡ ಪ್ರಮಾಣದಲ್ಲಿ ಜನಾಂಗೀಯ ಸಂಘರ್ಷ ಏರ್ಪಟ್ಟಿತ್ತು. ಈ ಘಟನೆ ಬಳಿಕ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿತ್ತು. ಈ ಸಂಘರ್ಷದ ಪರಿಣಾಮ 180ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಸುಮಾರು 60,000 ಜನ ನಿರಾಶ್ರಿತರಾದರು. ಇಷ್ಟಾದರೂ ಮಣಿಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವರ್ಷಾರಂಭದ ಮೊದಲ ದಿನವೇ ನಾಲ್ವರು ಗುಂಡಿನ ದಾಳಿಗೆ ಬಲಿಯಾಗಿರುವುದು ಸ್ಥಳೀಯಲ್ಲಿ ಆತಂಕ ಹೆಚ್ಚಿಸಿದೆ.

  • ಜನಾಂಗೀಯ ಸಂಘರ್ಷದ ಹಿಂದೆ ವಿದೇಶಗಳ ಹಸ್ತಕ್ಷೇಪ – ಮಣಿಪುರ ಸಿಎಂ ಬಿರೇನ್ ಸಿಂಗ್ ಅನುಮಾನ

    ಜನಾಂಗೀಯ ಸಂಘರ್ಷದ ಹಿಂದೆ ವಿದೇಶಗಳ ಹಸ್ತಕ್ಷೇಪ – ಮಣಿಪುರ ಸಿಎಂ ಬಿರೇನ್ ಸಿಂಗ್ ಅನುಮಾನ

    ಇಂಫಾಲಾ: ಮಣಿಪುರದಲ್ಲಿ (Manipur) ನಡೆದ ಜನಾಂಗೀಯ ಸಂಘರ್ಷದ ಹಿಂದೆ ವಿದೇಶಗಳ ಹಸ್ತಕ್ಷೇಪ ಇರಬಹುದು ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ (N Biren Singh) ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಭಂಗವಾಗಲು ಚೀನಾ (China) ಕಾರಣ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೇ 3 ರಿಂದ ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜನೆಯ ನಂತರ ರಾಜ್ಯದಲ್ಲಿ ಹಿಂಸಾಚಾರ ಶುರುವಾಗಿದೆ. ಇದು ಪೂರ್ವ ನಿಯೋಜಿತ ಇರಬಹುದು ಎಂದು ಹೇಳಿದರು.

    ಮಣಿಪುರವು ಮ್ಯಾನ್ಮಾರ್‌ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಚೀನಾ ಕೂಡ ಹತ್ತಿರದಲ್ಲಿದೆ. ನಮ್ಮ ಗಡಿಗಳಲ್ಲಿ 398 ಕಿಮೀ ಕಾವಲುರಹಿತವಾಗಿದೆ. ನಮ್ಮ ಗಡಿಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಆದರೆ ದೃಢವಾದ ಮತ್ತು ವ್ಯಾಪಕವಾದ ಭದ್ರತಾ ನಿಯೋಜನೆಯು ಸಹ ಅಂತಹ ವಿಶಾಲತೆಯನ್ನು ಆವರಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಈ ತಿಂಗಳ ಉಚಿತ ವಿದ್ಯುತ್‌ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ

    ಈ ಆರೋಪವನ್ನು ನಾವು ನಿರಾಕರಿಸಲು ಅಥವಾ ದೃಢೀಕರಿಸಲು ಸಾಧ್ಯವಿಲ್ಲ. ಇದು ಪೂರ್ವ ಯೋಜಿತವೆಂದು ತೋರುತ್ತದೆ ಆದರೆ ಕಾರಣ ಸ್ಪಷ್ಟವಾಗಿಲ್ಲ. ರಾಜ್ಯದಲ್ಲಿ ಶಾಂತಿ ನೆಲೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದರು. ಮಾತ್ರವಲ್ಲದೆ ರಾಹುಲ್ ಗಾಂಧಿ ಭೇಟಿ ರಾಜಕೀಯ ಪ್ರೇರಿತ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಕಾಂಗ್ರೆಸ್ ತಲೆ ಕೆರೆದುಕೊಳ್ಳುವುದನ್ನು ಬಿಡಲಿ: ಬಿಜೆಪಿ ತಿರುಗೇಟು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಪತ್ರವನ್ನು ಹರಿದು ಹಾಕಿದ ಮಹಿಳೆ

    ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಪತ್ರವನ್ನು ಹರಿದು ಹಾಕಿದ ಮಹಿಳೆ

    ಇಂಫಾಲ: ಕಳೆದ 2 ತಿಂಗಳಿನಿಂದ ಮಣಿಪುರದಲ್ಲಿ (Manipur) ನಡೆಯುತ್ತಿರುವ ಹಿಂಸಾಚಾರವನ್ನು ನಿಭಾಯಿಸುವಲ್ಲಿ ವಿಫಲವಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh) ಅವರು ಶುಕ್ರವಾರ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ವೇಳೆ ರಾಜೀನಾಮೆಯನ್ನು ವಿರೋಧಿಸಿದ ಮಹಿಳೆಯೊಬ್ಬರು ಅವರ ಪತ್ರವನ್ನು (Resignation Letter) ಹರಿದು ಹಾಕಿರುವ ಘಟನೆ ನಡೆದಿದೆ.

    ಬಿರೇನ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ಹಿಡಿದು ರಾಜ್ಯಪಾಲರ ಭವನಕ್ಕೆ ಹೊರಟಿದ್ದರು. ಆದರೆ ಇಂಫಾಲದಲ್ಲಿರುವ ಸಿಎಂ ನಿವಾಸದ ಹೊರಗಡೆ ಅವರ ಬೆಂಬಲಿಗರು ಜಮಾಯಿಸಿ ರಾಜೀನಾಮೆಯನ್ನು ವಿರೋಧಿಸಿದ್ದಾರೆ. ಇಬ್ಬರು ಸಚಿವರು ನಿವಾಸದಿಂದ ಹೊರಗೆ ಬಂದಾಗ ಅವರ ರಾಜೀನಾಮೆ ಪತ್ರವನ್ನು ಮಹಿಳೆಯೊಬ್ಬರು ಕಸಿದುಕೊಂಡು ಅದನ್ನು ಹರಿದು ಹಾಕಿದ್ದಾರೆ.

    ಇದೀಗ ರಾಜೀನಾಮೆ ಅಂಚಿನಲ್ಲಿದ್ದ ಬಿರೇನ್ ಸಿಂಗ್ ಸಾರ್ವಜನಿಕರ ಒತ್ತಡಕ್ಕೆ ಮಣಿದು ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 3 ವಲಯ, 3 ಪ್ರತ್ಯೇಕ ಸಭೆ – ಲೋಕಸಭಾ ಚುನಾವಣೆಗೆ ತಯಾರಾದ ಬಿಜೆಪಿ

    ಕಳೆದ 2 ತಿಂಗಳಿನಿಂದ ಮಣಿಪುರದಲ್ಲಿ ಎಸ್‌ಟಿ ಮೀಸಲಾತಿ ವಿಚಾರವಾಗಿ ಮೇಟಿ ಹಾಗೂ ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಎರಡು ಸಮುದಾಯಗಳ ಜನಾಂಗೀಯ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 100ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆ ರದ್ದು ಮಾಡಿ- ಸಿಎಂಗೆ ಆಟೋ ಚಾಲಕರ ಮನವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಭೂಕುಸಿತ – 3 ದಿನಗಳಿಂದ 24 ಸಾವು, 38 ಜನ ನಾಪತ್ತೆ

    ಮಣಿಪುರದಲ್ಲಿ ಭೂಕುಸಿತ – 3 ದಿನಗಳಿಂದ 24 ಸಾವು, 38 ಜನ ನಾಪತ್ತೆ

    ಇಂಫಾಲ: ಮಣಿಪುರದ ನೋನಿ ಜಿಲ್ಲೆಯ ಟೆರಿಟೋರಿಯಲ್ ಆರ್ಮಿ ಕ್ಯಾಂಪ್‌ನಲ್ಲಿ ಬುಧವಾರ ಭಾರೀ ಭೂಕುಸಿತ ಉಂಟಾಗಿ, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. 38 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಕಳೆದ 3 ದಿನಗಳಿಂದ ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್, ಟೆರಿಟೋರಿಯಲ್ ಆರ್ಮಿ, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇಲ್ಲಿಯವರೆಗೆ 13 ಸೇನಾ ಸಿಬ್ಬಂದಿ ಹಾಗೂ ಐವರು ನಾಗರಿಕರನ್ನು ರಕ್ಷಿಸಲಾಗಿದೆ ಎಂದು ಹೇಳಿವೆ. ಘಟನೆಯಲ್ಲಿ ಸಾವನ್ನಪ್ಪಿದ 24 ಜನರ ಪೈಕಿ 18 ಮಂದಿ ಹಾಗೂ ನಾಪತ್ತೆಯಾಗಿರುವ 38 ಜನರ ಪೈಕಿ 12 ಮಂದಿ ಸೇನಾ ಸಿಬ್ಬಂದಿಯೇ ಸೇರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ದಾಖಲೆಯ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ವರ್ಗಾವಣೆ

    ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಶುಕ್ರವಾರ ಸಂಜೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ 9 ಯೋಧರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಭಾರತದ ಗಡಿ ಪ್ರವೇಶಿಸಿದ ಪಾಕ್‍ನ 3 ವರ್ಷದ ಮಗು

    Live Tv

  • ಇನ್ಮುಂದೆ ಮಣಿಪುರದ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನವಷ್ಟೇ ಕೆಲಸ

    ಇನ್ಮುಂದೆ ಮಣಿಪುರದ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನವಷ್ಟೇ ಕೆಲಸ

    ಇಂಫಾಲ್: ಮಣಿಪುರದ ಸರ್ಕಾರಿ ಕಚೇರಿಗಳಿಗೆ ವಾರದ ಐದು ದಿನಗಳು ಮಾತ್ರ ಕೆಲಸ ದಿನವಾಗಿ ಘೋಷಿಸಿದ್ದು, ಇದರ ಹೊರೆ ಅಗತ್ಯ ಸೇವೆಗಳ ಮೇಲೆ ಬೀಳದಂತೆ ಕೆಲಸದ ಸಮವನ್ನು ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

    ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್. ಬಿರೇನ್ ಸಿಂಗ್ ಅವರು ಮೊದಲ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಸಮಯ ಬದಲಾವಣೆಗೊಂಡಿದ್ದು, ಬೆಳಗ್ಗೆ 9ರಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

    ಇದರ ಜೊತಗೆ ಶಾಲೆಯ ಸಮಯವನ್ನು ಬದಲಾವಣೆ ಮಾಡಲಾಗಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಕೈಗೊಂಡಿದ್ದು, ಬೆಳಗ್ಗೆ 8 ಗಂಟೆಗೆ ಎಲ್ಲಾ ತರಗತಿಗಳು ಪ್ರಾರಂಭವಾಗುತ್ತವೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಸಮಯ ಸಾಕಷ್ಟು ಸಮಯ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್

    ಹೊಸ ಅಸೆಂಬ್ಲಿಯ ಮೊದಲ ಅಧಿವೇಶನವನ್ನು ಕರೆಯಲು ಮತ್ತು ಮಾರ್ಚ್ 24ರಂದು ಸ್ಪೀಕರ್ ಚುನಾವಣೆಯನ್ನು ನಿಗದಿಪಡಿಸಲು ರಾಜ್ಯಪಾಲರನ್ನು ಕ್ಯಾಬಿನೆಟ್ ವಿನಂತಿಸಿತು. ನಿರ್ಮಾಣ ಕಾರ್ಯಗಳು ಸೇರಿದಂತೆ 100 ದಿನಗಳಲ್ಲಿ 100 ಕಾರ್ಯಗಳ ಕಾರ್ಯಕ್ರಮವನ್ನು ತಿಳಿಸಿದರು. ಇದನ್ನೂ ಓದಿ: ಹೀರೋ ಮೋಟೋಕಾರ್ಪ್ ಎಂಡಿ ಕಚೇರಿ, ನಿವಾಸದ ಮೇಲೆ ಐಟಿ ರೇಡ್!

  • ಎರಡನೇ ಅವಧಿಗೂ ಬಿರೇನ್ ಸಿಂಗ್ ಮಣಿಪುರಕ್ಕೆ ಸಿಎಂ

    ಎರಡನೇ ಅವಧಿಗೂ ಬಿರೇನ್ ಸಿಂಗ್ ಮಣಿಪುರಕ್ಕೆ ಸಿಎಂ

    ಇಂಫಾಲ: ಮಣಿಪುರದಲ್ಲಿ ಎರಡನೇ ಬಾರಿಗೆ ಬಿಜೆಪಿ ನಾಯಕ ಎನ್ ಬಿರೇನ್ ಸಿಂಗ್‌ರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.

    ಮಣಿಪುರದ ಇಂಫಾಲದಲ್ಲಿ ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿರೇನ್ ಸಿಂಗ್ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

    ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಣಿಪುರದ 60 ಸದಸ್ಯ ಸ್ಥಾನಗಳಲ್ಲಿ 32 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಮತ್ತೆ ಅಧಿಕಾರಕ್ಕೆ ಮರಳಿದೆ. ಚುನಾವಣೆ ಫಲಿತಾಂಶದ 10 ದಿನಗಳ ಬಳಿಕ ಇದೀಗ ಬಿಜೆಪಿ ಪಕ್ಷ ಬೀರೆನ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ಇದನ್ನೂ ಓದಿ: ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

    ಹೀಂಗಾಂಗ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಬಿರೇನ್ ಸಿಂಗ್ ಬಹುಮತದಿಂದ ಗೆದ್ದಿದ್ದರು. ಫಲಿತಾಂಶದ ಬಳಿಕ ಮಣಿಪುರದ ಮುಂದಿನ ಸಿಎಂ ಯಾರಾಗಬಹುದು ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಈ ಪಟ್ಟಿಯಲ್ಲಿ ಬಿರೇನ್ ಸಿಂಗ್‌ರೊಂದಿಗೆ ಎರಡು ಬಾರಿ ಶಾಸಕರಾಗಿದ್ದ ಹಾಗೂ ಕ್ಯಾಬಿನೆಟ್ ಸಚಿವ ಟಿ ಬಿಶ್ವಜಿತ್ ಸಿಂಗ್ ಹೆಸರು ಕೂಡಾ ಕೇಳಿ ಬಂದಿತ್ತು. ಇದನ್ನೂ ಓದಿ: 4 ರಾಜ್ಯ ಗೆದ್ದರೂ ಬಿಜೆಪಿ ಇನ್ನೂ ಸರ್ಕಾರ ಮಾಡಿಲ್ಲ: ಕೇಜ್ರಿವಾಲ್‌

    ಮಣಿಪುರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಎನ್ ಬಿರೇನ್ ಸಿಂಗ್ 2017 ರಲ್ಲಿ ಮಣಿಪುರ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾದರು. ಇದೀಗ ಮತ್ತೆ ಬಿರೇನ್ ಸಿಂಗ್ ಅವರನ್ನೇ ಬಿಜೆಪಿ ಸತತ 2ನೇ ಬಾರಿ ಸಿಎಂ ಮಾಡಲು ಮುಂದಾಗಿದೆ.

  • ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಚಂಡೀಗಢ: ಪಂಜಾಬ್‍ನಲ್ಲಿ ಹೀನಾಯ ಸೋಲನುಭವಿಸಿದ ಕಾರಣ ಚರಣ್‍ಜಿತ್ ಸಿಂಗ್ ಚನ್ನಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಅಲ್ಲದೇ ತಾವೂ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಚರಣ್‍ಜಿತ್ ಸಿಂಗ್ ಚನ್ನಿ ರಾಜೀನಾಮೆ ನೀಡಿದ್ದಾರೆ. ಇಂದು ಚನ್ನಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ರಾಜೀನಾಮೆ ಸಲ್ಲಿಸಿದ್ದಾರೆ.

    ಪಂಜಾಬ್ ಚುನಾವಣೆ: ಸಿಎಂ ಚನ್ನಿ ಎರಡು ಕ್ಷೇತ್ರಗಳಿಂದ ಕಣಕ್ಕೆ | Punjab Poll: Chief Minister Channi To Contest From 2 Seats - Kannada Oneindia

    ರಾಜೀನಾಮೆ ನೀಡಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಜನರ ನಡುವೆಯೇ ಇದ್ದು, ದುಡಿಯುತ್ತಲೇ ಇರುತ್ತೇನೆ. ಈ ವೇಳೆ ತಮ್ಮ ಸರ್ಕಾರ ಕೈಗೊಂಡಿರುವ ನಿರ್ಧಾರಗಳನ್ನು ಮುಂದೆ ಬರುವ ಸರ್ಕಾರ ನಡೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೋಲಿನ ನಂತರ, ಪಂಜಾಬ್‍ನ ಉನ್ನತ ಸರ್ಕಾರಿ ವಕೀಲರು ರಾಜೀನಾಮೆ! 

    ಪಂಜಾಬ್‍ನ ಜನರು ಬದಲಾವಣೆಯನ್ನು ಬಯಸಿದ್ದು, ಬೇರೆ ಪಕ್ಷಕ್ಕೆ ಮತ ಹಾಕಿದ್ದಾರೆ. ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾಗಲಿದೆ. ಅವರ ಸರ್ಕಾರವನ್ನು ನಾವು ಬೆಂಬಲಿಸುತ್ತೇವೆ. 111 ದಿನಗಳ ನಮ್ಮ ಕೆಲಸ, ನಿರ್ಧಾರಗಳನ್ನು ಹೊಸ ಸರ್ಕಾರ ಮುಂದುವರಿಸಲಿ ಎಂದಿದ್ದಾರೆ.

    N. Biren Singh

    ಮಣಿಪುರ ಸಿಎಂ ರಾಜೀನಾಮೆ
    ಮಣಿಪುರದಲ್ಲಿ ಬಿಜೆಪಿ ಸತತವಾಗಿ ಎರಡನೇ ಬಾರಿಗೆ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೆ ಸೋಲನುಭವಿಸಿದ ಎನ್.ಬಿರೇನ್ ಸಿಂಗ್ ಅವರು ಸಿಎಂ ಸ್ಥಾನಕ್ಕೆ ಶುಕ್ರವಾರ ರಾಜ್ಯಪಾಲ ಲಾ ಗಣೇಶನ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು. ಆದರೆ ರಾಜ್ಯಪಾಲರು, ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಕೇಳಿಕೊಂಡಿದ್ದು, ಅದಕ್ಕೆ ಬಿರೇನ್ ಸಿಂಗ್ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕೆಲಸ ಬಿಟ್ಟು ಬಿರಿಯಾನಿ ಸ್ಟಾಲ್ ತೆರೆದ ಇಂಜಿನಿಯರಿಂಗ್ ಯುವಕರು