Tag: ಎನ್ ಬಿರೆನ್ ಸಿಂಗ್

  • ಮಣಿಪುರ ಸಿಎಂ ಬಿರೆನ್ ಸಿಂಗ್, ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್‍ಗೆ ಕೊರೊನಾ ಸೋಂಕು ದೃಢ

    ಮಣಿಪುರ ಸಿಎಂ ಬಿರೆನ್ ಸಿಂಗ್, ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್‍ಗೆ ಕೊರೊನಾ ಸೋಂಕು ದೃಢ

    – ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಪಟೇಲ್

    ನವದೆಹಲಿ: ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್(59) ಹಾಗೂ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಬಿರೆನ್ ಸಿಂಗ್ ಅವರು ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದು, ತಮ್ಮ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಬರೆದಿರುವ ಅವರು, ನನ್ನ ಕೊರೊನಾ ವರದಿಯು ಪಾಸಿಟಿವ್ ಬಂದಿದ್ದು, ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಸೆಲ್ಫ್ ಐಸೋಲೇಟ್ ಆಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಬಿಜೆಪಿ ನಾಯಕ ಬಿರೆನ್ ಸಿಂಗ್ ಅವರು ಸದ್ಯ ಹೋಮ್ ಐಸೋಲೇಶನ್‍ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕಾಂಗ್ರೆಸ್‍ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಹ್ಮದ್ ಪಟೇಲ್ ಅವರು ಗುರುಗ್ರಾಮದ ಮೆಡಂತಾ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ವಾರಗಳ ಹಿಂದಷ್ಟೇ ಅವರಿಗೆ ಕೊರೊನಾ ಸೋಂಕು ತಗುಲಿತ್ತು.

    ಅಹ್ಮದ್ ಪಟೇಲ್ ಮಗ ಫೈಸಲ್ ಅವರು ತಂದೆಯ ಆರೋಗ್ಯ ಸ್ಥಿತಿಗತಿ ಕುರಿತು ಹೇಳಿಕೆ ನೀಡಿದ್ದು, ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ. ಆದರೆ ವೈದ್ಯಕೀಯ ನಿಗಾದಲ್ಲಿ ಮುಂದುವರಿಯಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅವರು ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸಿ ಎಂದು ಮನವಿ ಮಾಡುತ್ತೇನೆ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಫೈಸಲ್ ಅವರು ಸ್ಪಷ್ಟಪಡಿಸಿದ್ದಾರೆ.

  • ನೆರೆ ಸಂತ್ರಸ್ತರ ರಕ್ಷಣೆಗೆ ನೀರಿಗಿಳಿದ ಐಎಎಸ್ ಅಧಿಕಾರಿ-ಟ್ವಿಟ್ಟರ್ ನಲ್ಲಿ ಭಾರೀ ಮೆಚ್ಚುಗೆ

    ನೆರೆ ಸಂತ್ರಸ್ತರ ರಕ್ಷಣೆಗೆ ನೀರಿಗಿಳಿದ ಐಎಎಸ್ ಅಧಿಕಾರಿ-ಟ್ವಿಟ್ಟರ್ ನಲ್ಲಿ ಭಾರೀ ಮೆಚ್ಚುಗೆ

    ನವದೆಹಲಿ: ಮಣಿಪುರದ ಐಎಎಸ್ ಅಧಿಕಾರಿ ದಿಲೀಪ್ ಸಿಂಗ್ ನೆರೆ ಸಂತ್ರಸ್ತ ಪರಿಹಾರ ಕಾರ್ಯದಲ್ಲಿ ಸ್ವತಃ ತಾವೇ ಸೊಂಟದವರೆಗಿನ ನೀರಿಗಿಳಿದು ಸಾರ್ವಜನಿಕರ ರಕ್ಷಣೆಗೆ ಮುಂದಾಗಿದ್ದರು. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸತತ 48 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ಮಣಿಪುರದ ಇಂಫಾಲ್ ನಲ್ಲಿ ಜನವಾಸ ಸ್ಥಳಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ನೆರೆ ಪರಿಹಾರ ಕಾರ್ಯಕ್ಕೆ ಸ್ವತಃ ನೆರೆ ನಿಯಂತ್ರಣ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ದಿಲೀಪ್ ಸಿಂಗ್ ಅವರಿಗೆ ಸೊಂಟದವರಿಗೆ ನೀರಿತ್ತು. ಈ ನೀರಿಗಿಳಿದು ಜನರ ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು.

    ಸಿಂಗ್ ಅವರ ಈ ಕಾರ್ಯವನ್ನು ಸ್ವತಃ ವೀಕ್ಷಿಸುತ್ತಿದ್ದ ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ದಿಲೀಪ್ ಸಿಂಗ್ ನೆರೆ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿರುವ ಈ ಫೋಟೊ ಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದರು. ಹೀಗಾಗಿ ಸದ್ಯ ಐಎಎಸ್ ಅಧಿಕಾರಿ ನೀರಿಗಿಳಿದು ರಕ್ಷಣೆ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೇ ದೇಶದಾದ್ಯಂತ ಅವರ ಈ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಗಳ ಹೊಳೆಯೇ ಹರಿದುಬರುತ್ತಿದೆ.

    ದಿಲೀಪ್ ಸಿಂಗ್ ಈ ಕಾರ್ಯಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ದೇಶಕ್ಕೆ ಇಂತಹ ಅಧಿಕಾರಿಗಳು ಬೇಕು. ಇವರು ಯುವಕರಿಗೆ ಮಾದರಿಯಾಗಿದ್ದಾರೆ ಅಂತಾ ಟ್ವೀಟ್ ಮಾಡುವ ಮೂಲಕ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.