Tag: ಎನ್.ಟಿ.ಆರ್

  • ಬ್ರಹ್ಮಾಸ್ತ್ರ ಇವೆಂಟ್ ಕ್ಯಾನ್ಸಲ್: ನಟ ಜ್ಯೂ.ಎನ್.ಟಿ.ಆರ್ ಗೆ ಈಗಿನಿಂದಲೇ ಅಡ್ಡಗಾಲು ಹಾಕುತ್ತಿದ್ದಾರಾ ತೆಲಂಗಾಣ ಸಿಎಂ ಕೆಸಿಆರ್

    ಬ್ರಹ್ಮಾಸ್ತ್ರ ಇವೆಂಟ್ ಕ್ಯಾನ್ಸಲ್: ನಟ ಜ್ಯೂ.ಎನ್.ಟಿ.ಆರ್ ಗೆ ಈಗಿನಿಂದಲೇ ಅಡ್ಡಗಾಲು ಹಾಕುತ್ತಿದ್ದಾರಾ ತೆಲಂಗಾಣ ಸಿಎಂ ಕೆಸಿಆರ್

    ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಫ್ಯಾನ್ಸ್ ಗರಂ ಆಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಕೆಸಿಆರ್ ಸುಖಾಸುಮ್ಮನೆ ತೊಂದರೆ ಕೊಡುತ್ತಿದ್ದಾರೆ ಎಂದು ಫ್ಯಾನ್ಸ್ ಆರೋಪ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಕೂಡ ನಡೆದಿದ್ದು, ಕೆಸಿಆರ್ ನಡೆಯನ್ನು ವ್ಯಾಪಕವಾಗಿ ಖಂಡಿಸುತ್ತಿದ್ದಾರೆ. ಜ್ಯೂನಿಯರ್ ಫ್ಯಾನ್ಸ್ ಸಿಎಂ ಮೇಲೆ ಗರಂ ಆಗಿರುವುದಕ್ಕೆ ಕಾರಣವೂ ಇದೆ.

    ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾದ ಬೃಹತ್ ಇವೆಂಟ್ ಹೈದರಾಬಾದ್ ನಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜ್ಯೂನಿಯರ್ ಎನ್.ಟಿ.ಆರ್ ಆಗಮಿಸಬೇಕಿತ್ತು. ಜ್ಯೂನಿಯರ್ ಫ್ಯಾನ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಂತಿದ್ದರು. ಈ ಕಾರ್ಯಕ್ರಮದಿಂದ ಜ್ಯೂನಿಯರ್ ಗೆ ಮತ್ತಷ್ಟು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಪೊಲೀಸರನ್ನು ಬಳಸಿಕೊಂಡು ಇವೆಂಟ್ ಕ್ಯಾನ್ಸಲ್ ಮಾಡಿಸಿದ್ದಾರಂತೆ ಸಿಎಂ. ಹಾಗಂತ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಇತ್ತೀಚೆಗಷ್ಟೇ ಜ್ಯೂನಿಯರ್ ಎನ್.ಟಿ.ಆರ್ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಅಮಿತ್ ಶಾ ಕೂಡ ಜ್ಯೂನಿಯರ್ ಬಗ್ಗೆ ಹಾಡಿ ಹೊಗಳಿದ್ದರು. ರಾಜಕೀಯ ಕುಟುಂಬದ ಹಿನ್ನೆಲೆಯಿಂದಲೇ ಬಂದಿರುವ ಜ್ಯೂನಿಯರ್ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಕೂಡ ತೆಲಂಗಾಣದಲ್ಲಿ ಜೋರಾಗಿದೆ. ಇದು ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ನಿದ್ದೆಗೆಡಿಸಿದೆ ಎಂದು ಹೇಳಲಾಗುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಗೆ ಸಿಲ್ಲಿ ಕಾರಣ ಕೊಟ್ಟು ಕ್ಯಾನ್ಸಲ್ ಆಗುವಂತೆ ಮಾಡಲಾಗಿದೆ.

    ಸದ್ಯ ಗಣಪತಿ ಹಬ್ಬವೂ ಇರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಅವಶ್ಯಕತೆಯಿದ್ದು, ಲಕ್ಷಾಂತರ ಜನರು ಸೇರುವ ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಗೆ ಭದ್ರತೆ ನೀಡುವುದು ಕಷ್ಟ. ಹಾಗಾಗಿ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ಪೊಲೀಸರು ಸೂಚಿಸಿದ್ದಾರೆ. ಇವೆಂಟ್ ಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದ ತಂಡಕ್ಕೆ ಈ ನಡೆಯಿಂದ ಬೇಸರವುಂಟಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎನ್‌ಟಿಆರ್ ಮಗಳು ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣು

    ಎನ್‌ಟಿಆರ್ ಮಗಳು ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣು

    ಟಾಲಿವುಡ್‌ನ ಹೆಸರಾಂತ ನಟ ನಂದಮೂರಿ ತಾರಕ್ ರಾಮ ರಾವ್ ಅವರ ಕಿರಿಯ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲಿ ನೇಣಿಗೆ ಉಮಾ ಶರಣಾಗಿದ್ದಾರೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿರುವ ನಟ ಎನ್‌ಟಿಆರ್ ಅವರ ಕಿರಿಯ ಪುತ್ರಿ ಉಮಾ, ಕೆಲ ತಿಂಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಇದೀಗ ಮುಂಬೈನ ಜುಬ್ಲಿ ಹಿಲ್ಸ್ನ ತಮ್ಮ ನಿವಾಸದಲ್ಲಿ ಉಮಾ ಮಹೇಶ್ವರಿ ಸಾವಿಗೆ ಶರಣಾಗಿದ್ದಾರೆ. ಇದನ್ನೂ ಓದಿ:ರಾಕಿ ಭಾಯ್‌ನ ಗುಣಗಾನ ಮಾಡಿದ ಸುದೀಪ್: ಯಶ್ ಬಗ್ಗೆ ಕಿಚ್ಚ ಹೇಳಿದ್ದು ಹೀಗೆ

    ಎನ್‌ಟಿಆರ್ ಕಿರಿಯ ಪುತ್ರಿ ಕೆಲ ತಿಂಗಳುಗಳಿಂದ ಅನಾರೋಗ್ಯದ ಬಳಲುತ್ತಿದ್ದರು. ಇದಕ್ಕಾಗಿ ಸೂಕ್ತ ಕಡೆಯಲ್ಲಿ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉಮಾ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಇದೀಗ ಉಮಾ ಅವರ ಸಾವಿಗೆ ರಾಜಕೀಯ ಗಣ್ಯರು, ಚಿತ್ರರಂಗದ ಕಲಾವಿದರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ದಿವಂಗತ ಎನ್‌ಟಿಆರ್ ಅವರಿಗೆ 12 ಜನ ಮಕ್ಕಳು ಎಂಟು ಮಂದಿ ಗಂಡು ಮಕ್ಕಳು, 4 ಜನ ಹೆಣ್ಣು ಮಕ್ಕಳಿದ್ದರು. ಉಮಾ ಮಹೇಶ್ವರಿ ಅವರು ಇವರಲ್ಲಿ ಕೊನೆಯ ಮಗಳಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ನೀಲ್ ಕನ್ನಡಕ್ಕೆ ಸಿಗುವುದು ಅನುಮಾನ?: ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ 6ನೇ ಸಿನಿಮಾ

    ಪ್ರಶಾಂತ್ ನೀಲ್ ಕನ್ನಡಕ್ಕೆ ಸಿಗುವುದು ಅನುಮಾನ?: ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ 6ನೇ ಸಿನಿಮಾ

    ಕೆಜಿಎಫ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ಬಹುಬೇಡಿಕೆಯ ನಿರ್ದೇಶಕರಾಗುತ್ತಿದ್ದಾರೆ. ಇದರ ಜೊತೆಗೆ ಅವರು ಕನ್ನಡ ಸಿನಿಮಾಗಳಿಗೆ ಸಿಗುವುದು ಅನುಮಾನ ಎನ್ನುವಂತಹ ಸುದ್ದಿಗಳು ತೆಲುಗು ಸಿನಿಮಾ ರಂಗದಿಂದ ಕೇಳಿ ಬರುತ್ತಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ಅವರು ಇನ್ನೂ ಆರೇಳು ವರ್ಷಗಳ ಕಾಲ ಕನ್ನಡ ಸಿನಿಮಾವನ್ನೇ ಮಾಡುವುದಿಲ್ಲ ಎನ್ನುವುದು ಆಘಾತಕಾರಿ ಬೆಳವಣಿಗೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

    ಸದ್ಯ ತೆಲುಗಿನ ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ನಾಯಕನಾದರೆ, ಕನ್ನಡದ್ದೇ ಆದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಷ್ಟರ ಮಟ್ಟಿಗೆ ಪ್ರಶಾಂತ್ ನೀಲ್ ಕನ್ನಡದವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಪ್ರಶಾಂತ್ ನೀಲ್ ಚಿತ್ರ ಮಾಡಲಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಈ ಎರಡೂ ಚಿತ್ರಗಳ ನಂತರ ಅವರು ಕನ್ನಡ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾಹಿತಿ ಇತ್ತು. ಅದಕ್ಕೂ ಇದೀಗ ಕಲ್ಲು ಬಿದ್ದಿದೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ಇದೀಗ ತೆಲುಗಿನಲ್ಲಿ ಭಾರೀ ಸುದ್ದಿ ಆಗಿದ್ದು ಪ್ರಶಾಂತ್ ನೀಲ್, ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವುದು. ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಮುಗಿಯುತ್ತಿದ್ದಂತೆಯೇ ನಾನಿಗಾಗಿ ಅವರು ಸಿನಿಮಾ ಮಾಡಲಿದ್ದಾರಂತೆ. ಇದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ತೆಲುಗು ಸಿನಿಮಾ ರಂಗದಲ್ಲಿ ಮಾತ್ರ ಈ ಸುದ್ದಿ ಭಾರೀ ಗಿರಿಕಿಯಂತೂ ಹೊಡೆಯುತ್ತಿದೆ. ಇದನ್ನೂ ಓದಿ: ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

    ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಅವರು ಮತ್ತೆರಡು ಕನ್ನಡ ಸಿನಿಮಾಗಳನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಒಂದು ಸಿನಿಮಾವನ್ನು ಶ್ರೀಮುರುಳಿಗೆ ಮಾಡಿದರೆ, ಮತ್ತೊಂದು ಸಿನಿಮಾವನ್ನು ಯಶ್ ಗಾಗಿಯೇ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿ ಇತ್ತು. ಆದರೆ, ಈ ನಡುವೆ ನಾನಿ ಅವರ ಸಿನಿಮಾ ಸೇರ್ಪಡೆಗೊಂಡಿದೆ. ಸುದ್ದಿಗಳು ಏನೇ ಹರಿದಾಡಿದರೂ, ನಿಜ ಏನು ಅನ್ನುವ ಕುರಿತು ಪ್ರಶಾಂತ್ ನೀಲ್ ಅವರೇ ಉತ್ತರಿಸಬೇಕು.

  • ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ತಮ್ಮ ದಾಖಲೆಗಳನ್ನು ಮುರಿದುಕೊಂಡು ನಿರಾತಂಕವಾಗಿ ಮುನ್ನುಗ್ಗುತ್ತಿದ್ದಾರೆ ರಾಜಮೌಳಿ.  ಈ ಹಿಂದಿನ ಬಾಹುಬಲಿ ಚಿತ್ರಕ್ಕಿಂತಲೂ ಈ ಬಾರಿ ಕಲೆಕ್ಷನ್ ವೇಗ ಜೋರಾಗಿದೆಯಂತೆ. ಹಾಗಾಗಿ ರಿಲೀಸ್ ಆದ ಮೂರೇ ಮೂರು ದಿನಕ್ಕೆ 500 ಕೋಟಿ ಹಣ ಹರಿದು ಬಂದಿದೆ ಎನ್ನುತ್ತಾರೆ ಸಿನಿ ಲೆಕ್ಕಚಾರ ಪಂಡಿತರು. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ, ವೀಕೆಂಡ್ ನಲ್ಲಿ ವಿದೇಶದಲ್ಲೂ ಸಖತ್ ಕಮಾಯಿ ಮಾಡಿದೆಯಂತೆ. ಇದೇ ವೇಗದಲ್ಲೇ ಒಂದು ವಾರ ಪ್ರದರ್ಶನ ಕಂಡರೆ, ಒಂದು ವಾರದಲ್ಲಿ ಸಾವಿರ ಕೋಟಿ ಹಣ ಗಳಿಸಿದ ಮೊದಲ ಚಿತ್ರ ಇದಾಗಲಿದೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 14.5 ಕೋಟಿ ಗಳಿಕೆ ಮಾಡಿದ್ದರೆ, ಆಂಧ್ರ ಪ್ರದೇಶದಲ್ಲಿ 75 ಕೋಟಿ ಗಳಿಸಿತ್ತು. ತಮಿಳು ನಾಡಿನಲ್ಲಿ 10 ಕೋಟಿ, ಕೇರಳದಲ್ಲಿ 4 ಕೋಟಿ, ಹಿಂದಿಯಲ್ಲಿ 14 ಕೋಟಿ, ಉತ್ತರ ಭಾರತದಲ್ಲಿ 25 ಕೋಟಿ, ಹೀಗೆ ಭಾರತದಲ್ಲೇ ಮೊದಲ ದಿನ ಆರ್.ಆರ್.ಆರ್ ಗಳಿಸಿದ ಒಟ್ಟು ಮೊತ್ತ 156 ಕೋಟಿ ಆಗಿತ್ತು. ವಿದೇಶದಲ್ಲೂ ಕೂಡ ಹಿಂದೆ ಬಿದ್ದಿರಲಿಲ್ಲ. ಯುಎಸ್ ನಲ್ಲೇ 42 ಕೋಟಿ ಕಲೆಕ್ಷನ್ ಮಾಡಿತ್ತು. ಬೇರೆ ಬೇರೆ ದೇಶಗಳಿಂದ 25 ಕೋಟಿ ಬಂದಿತ್ತು. ವಿಶ್ವದಾದ್ಯಂತ ಮೊದಲ ದಿನದ ಒಟ್ಟು ಕಲೆಕ್ಷನ್ 223 ಕೋಟಿ ಆಗಿತ್ತು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಹಿಂದಿ ವರ್ಷನ್ ಒಂದರಲ್ಲೇ ಶುಕ್ರವಾರ 19 ಕೋಟಿ, ಶನಿವಾರ 24 ಕೋಟಿ ಹಾಗೂ ಭಾನುವಾರ 31.50 ಕೋಟಿ ಏರಿಕೆ ಕಂಡಿದೆ. ಹೀಗಾಗಿ ಶನಿವಾರ ಮತ್ತು ಭಾನುವಾರ ಎರಡನೇ ದಿನದ ಗಳಿಕೆ ವೀಕೆಂಡ್ ಕಾರಣಕ್ಕಾಗಿ ಮತ್ತಷ್ಟು ಏರಿಕೆ ಕಂಡು ಮೂರೇ ದಿನದಲ್ಲಿ 500 ಕೋಟಿ ರೂಪಾಯಿಗಳನ್ನು ಈ ಸಿನಿಮಾ ಬಾಚಿದೆ.

  • ಆರ್.ಆರ್.ಆರ್. ಬೆಂಗಳೂರು ಒಂದರಲ್ಲೇ 700ಕ್ಕೂ ಅಧಿಕ ಶೋಗಳು : ಬಾಕ್ಸ್ ಆಫೀಸೂ ಉಡಿಸ್

    ಆರ್.ಆರ್.ಆರ್. ಬೆಂಗಳೂರು ಒಂದರಲ್ಲೇ 700ಕ್ಕೂ ಅಧಿಕ ಶೋಗಳು : ಬಾಕ್ಸ್ ಆಫೀಸೂ ಉಡಿಸ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ದಾಖಲೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಕೇವಲ ಬೆಂಗಳೂರು ಒಂದರಲ್ಲೇ ಇಂದು 700ಕ್ಕೂ ಅಧಿಕ ಶೋಗಳು ನಡೆದಿವೆ. ಹಾಗಾಗಿ ಇಂದು ಗಾಂಧಿನಗರದಲ್ಲಿ ಬರೀ ಆರ್.ಆರ್.ಆರ್ ಸಿನಿಮಾದ್ದೇ ಮಾತು ಕೇಳಿ ಬರುತ್ತಿದೆ.

    ಮಧ್ಯರಾತ್ರಿ 12.45 ರಿಂದ ಶುರುವಾದ ಶೋಗಳು ನಿರಂತರವಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಬಾಕ್ಸ್ ಆಫೀಸು ತುಂಬಿ ತುಳುಕುತ್ತಿದೆ. ಟಿಕೆಟ್ ದರದಲ್ಲೂ ಭಾರೀ ಏರಿಕೆ ಕಂಡಿದ್ದರೂ, ಅಭಿಮಾನಿಗಳು ಮಾತ್ರ ತಲೆಕೆಡಿಸಿಕೊಳ್ಳದೇ ಸಿನಿಮಾ ನೋಡುತ್ತಿದ್ದಾರೆ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

    700 ಸ್ಕ್ರೀನ್ ಗಳಲ್ಲಿ 600ಕ್ಕೂ ಹೆಚ್ಚು ತೆಲುಗು ಆರ್.ಆರ್.ಆರ್ ಪ್ರದರ್ಶನ  ಕಾಣುತ್ತಿದ್ದರೆ, 28 ಸ್ಕ್ರೀನ್ ಗಳಲ್ಲಿ ಕನ್ನಡ ಆರ್.ಆರ್.ಆರ್ ರಿಲೀಸ್ ಆಗಿದೆ. ಉಳಿದಂತೆ ಬೆರಳೆಣಿಕೆಯಲ್ಲಿ ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಆರ್.ಆರ್.ಆರ್ ರಿಲೀಸ್ ಆಗಿದೆ. ಅಂದಾಜು ಒಂದೇ ದಿನಕ್ಕೆ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿದೆ.