Tag: ಎನ್.ಚಂದ್ರಬಾಬು ನಾಯ್ಡು

  • ಅಮರಾವತಿ ಡ್ರೋನ್ ಸಮ್ಮೇಳನ 2024 | ಆಕಾಶವನ್ನೇ ಬೆಳಗಿದ 5,500 ಡ್ರೋನ್, 5 ಗಿನ್ನಿಸ್ ರೆಕಾರ್ಡ್

    ಅಮರಾವತಿ ಡ್ರೋನ್ ಸಮ್ಮೇಳನ 2024 | ಆಕಾಶವನ್ನೇ ಬೆಳಗಿದ 5,500 ಡ್ರೋನ್, 5 ಗಿನ್ನಿಸ್ ರೆಕಾರ್ಡ್

    ಅಮರಾವತಿ/ಹೈದರಾಬಾದ್: ಅ.22 ರಂದು ನಡೆದ `ಅಮರಾವತಿ ಡ್ರೋನ್ ಸಮ್ಮೇಳನ 2024′ (Amaravati Drone Summit 2024) ರಲ್ಲಿ 5,500 ಡ್ರೋನ್‌ಗಳಿಂದ ಲೈಟಿಂಗ್ಸ್ ಶೋ ನಡೆಸುವ ಮೂಲಕ 5 ಗಿನ್ನಿಸ್ ದಾಖಲೆಗಳನ್ನು (Guinness records) ನಿರ್ಮಿಸಲಾಯಿತು.

    ಆಂಧ್ರಪ್ರದೇಶದ (Andhra Pradesh) ಪೂರ್ಣಿಮಾ ಘಾಟ್‌ನ ಕೃಷ್ಣಾ ನದಿಯ ದಡದಲ್ಲಿ ನಡೆದ `ಅಮರಾವತಿ ಡ್ರೋನ್ ಸಮ್ಮೇಳನ 2024’ರಲ್ಲಿ 5,500 ಡ್ರೋನ್‌ಗಳನ್ನು ಹಾರಿಸಿ, ರಾಷ್ಟ್ರಧ್ವಜ, ಭಗವಾನ್ ಬುದ್ಧ ಹೀಗೆ ಹಲವಾರು ರೀತಿಯ ಆಕೃತ್ತಿಗಳನ್ನು ಆಕಾಶದಲ್ಲಿ ರಚಿಸಲಾಯಿತು. ಡ್ರೋನ್ ಪ್ರದರ್ಶನದಲ್ಲಿ ಅತೀ ದೊಡ್ಡ ಸೌರಮಂಡಲ, ಅತೀ ದೊಡ್ಡ ವೈಮಾನಿಕ ಲಾಂಛನ, ಅತೀ ದೊಡ್ಡ ಧ್ವಜ ಪ್ರದರ್ಶನ, ಅತೀ ದೊಡ್ಡ ವಿಮಾನದ ವಿನ್ಯಾಸ ಹಾಗೂ ಅತೀ ದೊಡ್ಡ ಭಾರತದ ಪ್ರಮುಖ ಮೈಲುಗಲ್ಲುಗಳನ್ನು ಪ್ರದರ್ಶಿಸಲಾಯಿತು. ಈ ಮೂಲಕ 5 ಗಿನ್ನಿಸ್ ದಾಖಲೆಗಳನ್ನು ನಿರ್ಮಿಸಲಾಯಿತು.ಇದನ್ನೂ ಓದಿ: ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಆರಗ ಜ್ಞಾನೇಂದ್ರ

    ಡ್ರೋನ್ ಪದರ್ಶನದ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಸೇರಿದಂತೆ ಸಾವಿರಾರು ಜನರು ಭಾಗಿಯಾಗಿ, ಡ್ರೋನ್ ಪದರ್ಶನವನ್ನು ಕಣ್ತುಂಬಿಕೊಂಡರು.

    ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಎನ್.ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದಲ್ಲಿ ಇದೊಂದು ಡ್ರೋನ್ ಮುಸ್ಸಂಜೆಯಾಗಿದೆ. ಅದ್ಭುತ ಡ್ರೋನ್ ಪ್ರದರ್ಶನದ ಮೂಲಕ ನಿರ್ಮಾಣಗೊಂಡ 5 ಗಿನ್ನಿಸ್ ವಿಶ್ವ ದಾಖಲೆಗಳನ್ನು ವೀಕ್ಷಿಸಿದ್ದೇನೆ. ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಎಲ್ಲಾ ಸಂಘಟಕರು ಮತ್ತು ಭಾಗವಹಿಸುವವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

    ಇನ್ನೂ ಡ್ರೋನ್ ಪದರ್ಶನದ ಬಳಿಕ ಮಾತನಾಡಿದ ಅವರು, ಡ್ರೋನ್ ಉದ್ಯಮದ ಬೆಳವಣಿಗೆಗೆ ಅನುಕೂಲವಾಗುವಂತೆ, ಕರ್ನೂಲ್ ಜಿಲ್ಲೆಯ ಓರ್ವಕಲ್ಲುನಲ್ಲಿ 300 ಎಕರೆ ಭೂಮಿಯನ್ನು ಘೋಷಿಸಿದ್ದೇನೆ. ಆ ಪ್ರದೇಶದಲ್ಲಿ 35,000 ಡ್ರೋನ್ ಪೈಲಟ್‌ಗಳಿಗೆ ತರಬೇತಿ ನೀಡುವ ಗುರಿ ಹೊಂದಿದ್ದೇವೆ. 15 ದಿನಗಳಲ್ಲಿ ಆಂಧ್ರ ಪ್ರದೇಶ ಸರ್ಕಾರವು ಡ್ರೋನ್‌ಗಳು ಹಾಗೂ ತಂತ್ರಜ್ಞಾನಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿಕೊಡುವಲ್ಲಿ ಮುಂದಾಗಿದೆ ಎಂದು ಭರವಸೆ ನೀಡಿದರು.

    ಇತ್ತೀಚಿಗಷ್ಟೇ ಮುಕ್ತಾಯಗೊಂಡ ಮೈಸೂರು ದಸರಾ ಮಹೋತ್ಸವದಲ್ಲಿಯೂ ಏಕಕಾಲಕ್ಕೆ 3,000 ಡ್ರೋನ್‌ಗಳಿಂದ ಲೈಟಿಂಗ್ಸ್ ಶೋ ನಡೆಸಲಾಗಿತ್ತು.ಇದನ್ನೂ ಓದಿ: ಬೈರೂತ್‌ ಮೇಲೆ ಇಸ್ರೇಲ್‌ ಮತ್ತೊಂದು ದಾಳಿ; ಮೂರೇ ಸೆಕೆಂಡುಗಳಲ್ಲಿ ದೈತ್ಯ ಕಟ್ಟಡಗಳು ಧ್ವಂಸ

  • ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನ: ರಾಮಲಿಂಗಾ ರೆಡ್ಡಿ

    ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನ: ರಾಮಲಿಂಗಾ ರೆಡ್ಡಿ

    – ದೇಶದ ಎಲ್ಲಾ ದೇವಸ್ಥಾನಗಳ ಪ್ರಸಾದವನ್ನೂ ಟೆಸ್ಟ್ ಮಾಡಲಿ
    – ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಎಚ್ಚೆತ್ತ ಮುಜರಾಯಿ ಇಲಾಖೆ

    ಬೆಂಗಳೂರು: ತಿರುಪತಿ ಲಡ್ಡು (Tirupathi Laddu) ವಿವಾದವಾದ ಬೆನ್ನಲ್ಲೇ, ರಾಜ್ಯ ಎಚ್ಚೆತ್ತಿದೆ. ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಲ್ಲೇಶ್ವರಂ ಟಿಟಿಡಿ (Malleshwaram TTD) ದೇವಸ್ಥಾನದ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಗ್ರಾಮ ತೊರೆದು ಬಂಧನ ಭೀತಿಯಲ್ಲಿ ಯುವಕ ಸಾವು

    ದೇಶದ ಎಲ್ಲಾ ದೇವಸ್ಥಾನಗಳ ಪ್ರಸಾದ ಟೆಸ್ಟ್ ಮಾಡಲಿ:
    ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಿಸುತ್ತೇನೆ. ನಮ್ಮ ರಾಜ್ಯ 99% ದೇವಾಲಯಗಳು ನಂದಿನಿ ತುಪ್ಪವನ್ನೆ ಬಳಸಿಕೊಳ್ಳುತ್ತಾ ಇದ್ದಾರೆ. ಜನರಿಗೆ ಸಂಶಯ ಬೇಡ ಅಂತಾ ನಂದಿನಿ ತುಪ್ಪ ಬಳಕೆ ಮಾಡಬೇಕು ಅಂತಾ ಆದೇಶ ಮಾಡಿದ್ದೇವೆ. ಕೇಂದ್ರದ ಮಂತ್ರಿ ಒಬ್ಬರು ಪ್ರಸಾದ ಟೆಸ್ಟ್ ಮಾಡಬೇಕು ಅಂತಾ ಹೇಳಿದ್ದಾರೆ. ನನ್ನ ಅಭಿಪ್ರಾಯ ದೇಶದ ಎಲ್ಲಾ ದೇವಸ್ಥಾನಗಳ ಪ್ರಸಾದ ಟೆಸ್ಟ್ ಮಾಡಲಿ ಎಂದಿದ್ದಾರೆ.

    ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ಎಲ್ಲಿಯೂ ಅಂತಹ ಘಟನೆ ಆಗಿಲ್ಲ. ತಿರುಪತಿ ಲಡ್ಡು ಪ್ರಸಾದದ ಸಂಶಯದ ಬಗ್ಗೆ ತೀರ್ಮಾನ ಆಗೋವರೆಗೂ ಬಳಸಬಾರದು ಅಂತಾ ಚರ್ಚೆ ಆಗ್ತಿರೋ ವಿಷಯ. ನಮ್ಮ ರಾಜ್ಯದ ವಿಚಾರ ಅಲ್ಲ ಇದು ಆಂಧ್ರಪ್ರದೇಶ ವಿಚಾರ ಅಲ್ಲಿನ ಸರ್ಕಾರ ತೀರ್ಮಾನ ಮಾಡಬೇಕು. ಜನ ಬಳಸದೇ ಇದ್ರೆ ಮುಗಿದೇ ಹೋಯ್ತು ಎಂದಿದ್ದಾರೆ.

    ಏನಿದು ವಿವಾದ?
    ಬುಧವಾರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಜಗನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನವು ಪ್ರಸಾದವಾಗಿ ನೀಡುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದರು.

    ಆಂಧ್ರಪ್ರದೇಶದ (Andhrapradesh) ಸಿಎಂ ಎನ್.ಚಂದ್ರಬಾಬು ನಾಯ್ಡು (N Chandrababu Naidu) ಅವರ ಆರೋಪದ ಕುರಿತು ಈಗಾಗಲೇ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಅವರಿಗೆ ವಿವರವಾದ ವರದಿ ಕೇಳಿದ್ದಾರೆ.ಇದನ್ನೂ ಓದಿ: ಮೀಸಲಾತಿ ಕುರಿತ ಹೇಳಿಕೆಗೆ ಆಕ್ಷೇಪ – ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ದೂರು

    ಇದರ ಬೆನ್ನಲ್ಲೇ ರಾಜ್ಯ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮುಜರಾಯಿ ಇಲಾಖೆ ಎಚ್ಚೆತ್ತಿದೆ. ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ಚಂದ್ರಬಾಬು ನಾಯ್ಡು ಜಾಮೀನು ಅರ್ಜಿ ವಿಚಾರಣೆ ಸೆ.21ಕ್ಕೆ ಮುಂದೂಡಿಕೆ

    ಚಂದ್ರಬಾಬು ನಾಯ್ಡು ಜಾಮೀನು ಅರ್ಜಿ ವಿಚಾರಣೆ ಸೆ.21ಕ್ಕೆ ಮುಂದೂಡಿಕೆ

    ಅಮರಾವತಿ: ಆಂಧ್ರಪ್ರದೇಶ (Andhra Pradesh) ಮಾಜಿ ಮುಖ್ಯಮಂತ್ರಿ, ಟಿಡಿಪಿ (TDP) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು (N.Chandrababu Naidu) ಅವರ ಜಾಮೀನು (Bail) ಅರ್ಜಿ ವಿಚಾರಣೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ಮಂಗಳವಾರ ಸೆಪ್ಟೆಂಬರ್ 21ಕ್ಕೆ ಮುಂದೂಡಿದೆ.

    ಟಿಡಿಪಿ ಕಾನೂನು ತಂಡವು ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದೆ. ಟಿಡಿಪಿ ಕಾನೂನು ಸಲಹೆಗಾರ ಸುಪ್ರೀಮ್ ಸಿದ್ದಾರ್ಥ್ ಲೂತ್ರಾ ಅವರು ತಮ್ಮ ವಾದವನ್ನು ವಾಸ್ತವಿಕವಾಗಿ ಮಂಡಿಸಿದರು. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣಗೆ ರಿಲೀಫ್‌ – ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ

    ಕೌಶಲ್ಯಾಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ವಿಜಯವಾಡದ ಭ್ರಷ್ಟಾಚಾರ ನಿಗ್ರಹ ದಳ (ACB) ನ್ಯಾಯಾಲಯವು ಸೆಪ್ಟೆಂಬರ್ 23ರವರೆಗೆ ಚಂದ್ರಬಾಬು ನಾಯ್ಡುವನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯ ಧರ್ಮದ ವಿರುದ್ಧ ದ್ವೇಷ ಭಾಷಣ ಆಗಬಾರದು: ಮದ್ರಾಸ್ ಹೈಕೋರ್ಟ್

    ನಾಯ್ಡು ಅವರನ್ನು ಬಂಧಿಸಿರುವ ಪ್ರಕರಣವು ಆಂಧ್ರಪ್ರದೇಶದಲ್ಲಿರುವ ಸೆಂಟರ್ಸ್ ಆಫ್ ಎಕ್ಸಲೆನ್ಸ್ (COE) ಕ್ಲಸ್ಟರ್‌ಗಳ ಸ್ಥಾಪನೆಗೆ ಸಂಬಂಧಿಸಿದ್ದು, ಒಟ್ಟು ಅಂದಾಜು ಯೋಜನಾ ಮೌಲ್ಯ 3,300 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಕ್ರಮದಿಂದ ರಾಜ್ಯ ಸರ್ಕಾರಕ್ಕೆ 300 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಸಚಿವ ಡಿ.ಸುಧಾಕರ್‌ಗೆ ರಿಲೀಫ್ – ಜಾತಿ ನಿಂದನೆ ಆರೋಪ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ತಡೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ನವದೆಹಲಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ತೆಲುಗು ದೇಶಂ ಪಕ್ಷದ(ಟಿಡಿಪಿ) ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ ಮಾಡಿದರು.

    ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಮಹಿಳಾ ಸಬಲೀಕರಣ ಕುರಿತು ಚರ್ಚೆ ನಡೆಯುತ್ತಿದ್ದು, ಅದನ್ನು ನಾಯ್ದು ಅವರು ಅರ್ಧದಲ್ಲಿಯೇ ಬಿಟ್ಟು ವಿಧಾನಸಭೆಯಿಂದ ಹೊರನಡೆಯುವ ಮೊದಲು ಕಣ್ಣೀರು ಹಾಕಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಅವರು, ಚುನಾವಣೆಯಲ್ಲಿ ನಾವು ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಅವರು ತಮ್ಮ ಮುಖವನ್ನು ಮುಚ್ಚಿಕೊಂಡು, ಕೆಲವು ನಿಮಿಷಗಳ ಕಾಲ ಮಾತನಾಡಲು ಸಾಧ್ಯವಾದೆ ಭಾವುಕರಾದರು. ಇದನ್ನೂ ಓದಿ: ಈಗಲೂ ರೈತರು ಪ್ರತಿಭಟನೆ ಮಾಡುತ್ತಿರುವುದು ಯಾಕೆ – ಅಮರಿಂದರ್ ಪ್ರಶ್ನೆ

    ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ(ವೈಎಸ್‌ಆರ್‌ಸಿಪಿ) ಶಾಸಕರು ತಮ್ಮ ಪತ್ನಿ ಭುವನೇಶ್ವರಿ ಅವರ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ತಮ್ಮನ್ನು ಅವಮಾನಿಸಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಅವಮಾನವನ್ನು ಎದುರಿಸಿಲ್ಲ ಎಂದು ಆರೋಪಿಸಿ ನಾಯ್ಡು ಭಾವುಕರಾಗಿ ಹರಿಹಾಯ್ದರು.

    ನನ್ನ ಪತ್ನಿ ಎಂದಿಗೂ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಆದರೆ ವೈಎಸ್‍ಆರ್‍ಸಿಪಿ ನಾಯಕರು ಅವರ ಹೆಸರನ್ನು ಎಳೆದುಕೊಂಡು ಚಾರಿತ್ರ್ಯವಧೆಗೆ ಮುಂದಾಗಿದ್ದಾರೆ. ನನ್ನ ತಂದೆ ಎನ್‍ಟಿ ರಾಮರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ನಾನು ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದಾಗಲೂ ನನ್ನ ಪತ್ನಿ ಎಂದಿಗೂ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಎಂದು ತಿಳಿಸಿದ ಅವರು, ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.

    ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಎಲ್ಲ ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಆಡಳಿತ ಪಕ್ಷವು ಎಲ್ಲ ಮಿತಿಗಳನ್ನು ಮೀರಿದೆ. ಯಾವುದೇ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದು ಮಾತನಾಡುವ ವ್ಯಕ್ತಿಯ ಗುಣವನ್ನು ಮಾತ್ರ ಪ್ರತಿಬಿಂಬಿಸುತ್ತದೆ. ಅದು ಅಲ್ಲದೇ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ತಂದೆ ಮತ್ತು ಅಂದಿನ ಸಿಎಂ ವೈ.ಎಸ್.ರಾಜಶೇಖರ್ ರೆಡ್ಡಿ ಅವರು ನನ್ನ ತಾಯಿಗೂ ಅವಮಾನ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:  ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ

    ವೈಎಸ್‌ಆರ್‌ಸಿಪಿ ಶಾಸಕರು ನನ್ನ ಪತ್ನಿಯ ವಿರುದ್ಧ ಚಾರಿತ್ರ್ಯವಧೆ ನಡೆಸಿದ್ದಕ್ಕಾಗಿ ನಾವು ಪೊಲೀಸರಿಗೆ ದೂರು ನೀಡಲಿದ್ದೇವೆ. ಇದನ್ನು ಮಹಿಳಾ ಆಯೋಗದ ಮುಂದೆಯೂ ತರಬೇಕು. ಧರ್ಮದ ಈ ಹೋರಾಟದಲ್ಲಿ ಜನರು ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

  • ನಾವೆಲ್ಲರೂ ಮಹಾಘಟಬಂಧನದ ಮುಂದಾಳುಗಳು: ಮಮತಾ ಬ್ಯಾನರ್ಜಿ

    ನಾವೆಲ್ಲರೂ ಮಹಾಘಟಬಂಧನದ ಮುಂದಾಳುಗಳು: ಮಮತಾ ಬ್ಯಾನರ್ಜಿ

    ಕೋಲ್ಕತಾ: ಬಿಜೆಪಿ ವಿರುದ್ಧ ಮೈತ್ರಿಗೆ ನಾವೆಲ್ಲರೂ ಮುಂದಾಳುಗಳೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಕೋಲ್ಕತಾದಲ್ಲಿ ಆಂಧ್ರ ಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಜೊತೆಗೆ ಮಮತಾ ಬ್ಯಾನರ್ಜಿ ಇಂದು ಮಹಾಘಟ ಬಂಧನ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಯಾರು ಮಹಾಮೈತ್ರಿಯ ನಾಯಕರು ಅಂತಾ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಪಕ್ಷಗಳ ವರಿಷ್ಠರೇ ಮಹಾಮೈತ್ರಿಯ ನಾಯಕರು. ನಾವೆಲ್ಲರೂ ಸೇರಿ ಮುಂದಾಳತ್ವ ವಹಿಸಲಿದ್ದೇವೆ ಎಂದು ತಿಳಿಸಿದರು.

    ನಂತರ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಿಬಿಐ ಹಾಗೂ ಆರ್ ಬಿಐ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಬಿಜೆಪಿ ದುರಾಡಳಿತದ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ನಡೆದಿದೆ. ಈ ಕುರಿತು ಚರ್ಚೆ ನಡೆಸಲು ನವೆಂಬರ್ 22ರಂದು ವಿವಿಧ ಪಕ್ಷಗಳ ನಾಯಕರ ಸಭೆ ಕರೆಯಲಾಗಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಅವರನ್ನು ಸಭೆಗೆ ಆಹ್ವಾನಿಸಲು ಬಂದಿರುವೆ ಎಂದು ತಿಳಿಸಿದರು.

    ಏನಿದು ಮಹಾಘಟಬಂಧನ?
    ಮುಂಬರುವ ಲೋಕಸಭಾ ಚುನಾವಣಾ ಮಹಾಮೈತ್ರಿಗೆ ಆಂಧ್ರ ಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಬಿಜೆಪಿಯನ್ನು ಎದುರಿಸಲು ಪ್ರಬಲ ಸಿದ್ಧತೆ ನಡೆಸಿದ್ದು, ಈ ಮೈತ್ರಿಯೇ ಮಹಾಘಟಬಂಧನವಾಗಿದೆ.

    ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸಲು ಚಂದ್ರ ಬಾಬು ನಾಯ್ಡು ಅವರು, ನವೆಂಬರ್ 22ರಂದು ದೆಹಲಿಯಲ್ಲಿ ಪ್ರತಿಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ಇದಕ್ಕೆ ಮಮತಾ ಬ್ಯಾನರ್ಜಿ ಅವರನ್ನು ಇಂದು ಆಹ್ವಾನಿಸಿದ್ದಾರೆ. ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ತಮಿಳುನಾಡಿನ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ಪ್ರತಿಪಕ್ಷಗಳ ವರಿಷ್ಠರನ್ನು ಭೇಟಿ ಮಾಡಿ, ಸಭೆಗೆ ಆಹ್ವಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews