Tag: ಎನ್.ಆರ್ ರಮೇಶ್

  • ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದ ಎನ್.ಆರ್.ರಮೇಶ್

    ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದ ಎನ್.ಆರ್.ರಮೇಶ್

    ಬೆಂಗಳೂರು: ಬಿಬಿಎಂಪಿ ಆಯಕಟ್ಟಿನ ಅವಶ್ಯಕತೆಗಿಂತ ಅಧಿಕ ಇಂಜಿನಿಯರ್‍ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷರು ಮತ್ತು ಮಾಜಿ ಆಡಳಿತಪಕ್ಷದ ನಾಯಕರಾದ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯ ಆಯಕಟ್ಟಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಇಂಜಿನಿಯರ್‍ಗಳು ಇದ್ದಾರೆ. ಅವರಿಂದ ಸಾರ್ವಜನಿಕ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಅವರನ್ನು ವಾಪಸ್ ಕಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ರಮೇಶ್ ದೂರು ನೀಡಿದ್ದಾರೆ. ಬಿಬಿಎಂಪಿ ಆಯಕಟ್ಟಿನ ಪ್ರಮುಖ 4 ಇಲಾಖೆಗಳಲ್ಲಿ ಅವಶ್ಯಕತೆಗಿಂತ 136 ಆಧಿಕ ಇಂಜಿನಿಯರ್ ಗಳು ಇಲಾಖೆಯಲ್ಲಿ ಇದ್ದು, ಬಿಬಿಎಂಪಿಗೆ ವ್ಯರ್ಥವಾಗಿ ಹಣ ವೆಚ್ಚ ಆಗುತ್ತಿದೆ. ಈ ಕುರಿತು ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ:ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಬಿ.ಸಿ.ಪಾಟೀಲ್

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಗರ ಯೋಜನೆ, ರಸ್ತೆಗಳ ಮೂಲಭೂತ ಸೌಕರ್ಯ ಕೇಂದ್ರ, ಬೃಹತ್ ನೀರುಗಾಲುವೆಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ಮಂದಿ ಇದ್ದಾರೆ. ಪ್ರಸ್ತುತ 136 ಮಂದಿ ಇಂಜಿನಿಯರ್‍ಗಳು ಇದ್ದಾರೆ. 2005 ರಿಂದ 2007ರಲ್ಲಿ ನೇಮಕವಾದ ಇಂಜಿನಿಯರ್‍ಗಳು ಇಲ್ಲೆ ಇದ್ದಾರೆ. ಇವರಿಗೆ ಪ್ರತಿ ತಿಂಗಳಿಗೆ 3 ಕೋಟಿಯಂತೆ ವರ್ಷಕ್ಕೆ 36 ಕೋಟಿ ರೂ. ಸಾರ್ವಜನಿಕ ಹಣ ವ್ಯರ್ಥ ಆಗ್ತಾ ಇದೆ. ಮುಖ್ಯ ಆಯುಕ್ತರು ಎಚ್ಚೆತ್ತು ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಕಾಮಗಾರಿ ವಿಚಾರಕ್ಕೆ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರನ ಮೇಲೆ ಹಲ್ಲೆ

    ಬಿಬಿಎಂಪಿಯಲ್ಲಿ 2005, 2009ರಲ್ಲಿ ನಿಯೋಜನೆಗೊಂಡ ಇಂಜಿನಿಯರ್ ಗಳು ಇನ್ನೂ ಹಾಗೇ ಇದ್ದಾರೆ. ಅವರನ್ನು 2 ವರ್ಷಕ್ಕೊಮ್ಮೆ ಬದಲಾವಣೆ ಮಾಡಬೇಕು. ಆದರೆ ಈ ಕ್ರಮ ಇನ್ನೂ ಜರುಗಿಸಿಲ್ಲ. ಜೊತೆಗೆ ಅವಶ್ಯಕತೆಗಿಂತ ಹೆಚ್ಚು ಇಂಜಿನಿಯರ್ ಇದ್ದಾರೆ ಅವರನ್ನು ವಾಪಸ್ ಕಳಿಸಬೇಕು ಎಂದು ಮುಖ್ಯ ಆಯುಕ್ತರಿಗೆ ದೂರು ನೀಡಿದ್ದೇನೆ ಎಂದರು. ಇನ್ನೂ ಬಿಬಿಎಂಪಿ ಮುಖ್ಯ ಆಯುಕ್ತರ ಅನುಪಸ್ಥಿತಿ ಹಿನ್ನೆಲೆ ದೂರನ್ನು ವಿಶೇಷ ಆಯುಕ್ತ ದಯಾನಂದ್ ಸ್ವೀಕರಿಸಿದ್ದಾರೆ.

  • ಎನ್.ಆರ್.ರಮೇಶ್‍ ಕನಸಲ್ಲೂ ನಾನೇ ಬರತ್ತೀನಿ ಅನ್ನಿಸುತ್ತೆ: ಜಮೀರ್ ಅಹ್ಮದ್ ತಿರುಗೇಟು

    ಎನ್.ಆರ್.ರಮೇಶ್‍ ಕನಸಲ್ಲೂ ನಾನೇ ಬರತ್ತೀನಿ ಅನ್ನಿಸುತ್ತೆ: ಜಮೀರ್ ಅಹ್ಮದ್ ತಿರುಗೇಟು

    – ಬಿಜೆಪಿಯೇ ಲೆಕ್ಕದಲ್ಲಿ ರೋಲ್‍ಕಾಲ್ ಎನ್.ಆರ್.ರಮೇಶ್ ಇಲ್ಲ
    – ರೇಖಾ ಕದಿರೇಶ್ ನನ್ನ ತಂಗಿಯಂತಿದ್ರು

    ಬೆಂಗಳೂರು: ಬಿಜೆಪಿ ನಾಯಕ ಎನ್.ಆರ್.ರಮೇಶ್ ಗೂ ಕನಸಲ್ಲೂ ನಾನೇ ಬರುತ್ತಿದ್ದೀನಿ ಅನ್ನಿಸುತ್ತೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. ಮಾಜಿ ಕಾರ್ಪೋರೇಟ್ ರೇಖಾ ಕದಿರೇಶ್ ಕೊಲೆಗೆ ಜಮೀರ್ ಅಹ್ಮದ್ ಖಾನ್ ಬೆಂಬಲ ಇದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದರು.

    ರೇಖಾ ಕದಿರೇಶ್ ಕೊಲೆಯ ವಿಷಯ ಕೇಳಿ ಶಾಕ್ ಆಯ್ತು. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳು ರೇಖಾ ಅವರ ವಾರ್ಡ್ ನಲ್ಲಿದ್ರೆ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿತ್ತು. 2018 ರಲ್ಲಿ ಗಂಡನನ್ನು ಕಳೆದುಕೊಂಡಿದ್ರು, ಇದೀಗ ಅವರ ಕೊಲೆಯಾಗಿದೆ. ನನ್ನ ತಂಗಿಯಂತಿದ್ದ ರೇಖಾ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣ ಇಲ್ಲದಂತಾಗಿದ್ದು, ಪೊಲೀಸರು ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಶಾಸಕ ಜಮೀರ್ ಅಹ್ಮದ್ ಆಗ್ರಹಿಸಿದರು. ಇದನ್ನೂ ಓದಿ: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ

    ರೇಖಾ ಕದಿರೇಶ್ ಬಿಜೆಪಿ ಪಕ್ಷದವರು. ಆದ್ರೆ ಅವರ ಪಕ್ಷದವರೂ ಇಂದು ಯಾರೂ ಬಂದಿಲ್ಲ. ಎಲ್ಲಿಯೋ ಕುಳಿತು ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನದು ಚುನಾವಣೆ ವೇಳೆ ಮಾತ್ರ ರಾಜಕೀಯ. ನಂತರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ಎನ್.ಆರ್.ರಮೇಶ್ ಬಿಜೆಪಿ ಲೆಕ್ಕದಲ್ಲಿಲ್ಲ: ಬಿಜೆಪಿ ಮತ್ತು ಎನ್.ಆರ್.ರಮೇಶ್ ಗೂ ಕನಸಿನಲ್ಲಿಯೂ ನಾನೇ ಬರುತ್ತಿರಬೇಕು. ಏನೇ ಆದ್ರೂ ನನ್ನ ವಿರುದ್ಧವೇ ಆರೋಪ ಮಾಡ್ತಾರೆ. ಕದಿರೇಶ್ ಕೊಲೆ ನಡೆದಾಗಲೂ ಇದೇ ರೀತಿಯ ಆರೋಪಗಳನ್ನ ಮಾಡಿದ್ದರು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ತನಿಖೆ ಸರಿಯಾಗಿ ನಡೆದಿಲ್ಲ ಅಂದ್ರೆ, ಈಗ ನಿಮ್ಮದೇ ಸರ್ಕಾರ ಇದೆ, ಮತ್ತೊಮ್ಮೆ ತನಿಖೆ ನಡೆಸಿ ಎಂದು ವಾಗ್ದಾಳಿ ನಡೆಸಿದರು.

    ಎನ್.ಆರ್.ರಮೇಶ್ ಅವರನ್ನು ಬಿಜೆಪಿ ಲೆಕ್ಕದಲ್ಲಿಯೇ ಇಟ್ಟುಕೊಂಡಿಲ್ಲ. ರಮೇಶ್ ಎಲ್ಲಿ ಏನು ಮಾಡುತ್ತಿದ್ದಾರೆ ಅನ್ನೋ ವಿಷಯ ಎಲ್ಲ ಗೊತ್ತು. ರೇಖಾ ನಿಮ್ಮದೇ ಪಕ್ಷದವರಾಗಿದ್ರೂ, ಇಲ್ಲಿಗೆ ಏಕೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದ ಜಮೀರ್ ಅಹ್ಮದ್, ನಿಮ್ಮ ರೋಲ್‍ಕಾಲ್ ವಿಷಯ ತಿಳಿದಿದೆ ಎಂದು ಆರೋಪಿಸಿದರು.

    ಎನ್.ಆರ್.ರಮೇಶ್ ಹೇಳಿದ್ದೇನು?:
    ರೇಖಾ ಕದಿರೇಶ್ ಕೊಲೆಗೆ ಚಾಮರಾಜಪೇಟೆ ಶಾಸಕ ಜಮೀರ್ ಆಹ್ಮದ್ ಖಾನ್ ಬೆಂಬಲ ಇದೆ. ಎರಡು ವರ್ಷದ ಹಿಂದೆ ಪತಿ ಕಳೆದುಕೊಂಡಿದ್ದರು. ಆದಾದನಂತರ ಸಹ ರೇಖಾ ಸಾರ್ವಜನಿಕವಾಗಿ ಬಹಳ ಕೆಲಸ ಮಾಡುತ್ತಿದ್ದರು. ನಿನ್ನೆ ಸಹ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಿಸೋ ಕೆಲಸ ಮಾಡಿದ್ದರು. ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್ ಯಾವ ರೀತಿಯ ಆಡಳಿತ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಇನ್ನೂ ಐದಾರು ತಿಂಗಳಿನಲ್ಲಿ ಪಾಲಿಕೆ ಚುನಾವಣೆ ಬರಲಿದೆ. ಮತ್ತೆ ಚುನಾವಣೆಯಲ್ಲಿ ಅವರೆ ಗೆಲ್ತಾರೆ ಅನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು.

    ಜಮೀರ್ ಅವರು ಇದಕ್ಕೆ ಬೆಂಬಲ ಮಾಡಿರೋದು ಸತ್ಯ. ಕದಿರೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರೋ ವ್ಯಕ್ತಿಯ ತನಿಖೆ ಸರಿಯಾಗಿ ನಡೆದಿದ್ರೆ ಮತ್ತೊಂದು ಜೀವ ಹೋಗುತ್ತಿರಲಿಲ್ಲ. ಅವತ್ತು ಸಿದ್ದರಾಮಯ್ಯನವರ ಸರ್ಕಾರ ಇತ್ತು. ಅತೂಶ್ ಅನ್ನುವ ವ್ಯಕ್ತಿಯ ಬಗ್ಗೆ ತನಿಖೆಯಾಗಬೇಕಿತ್ತು. ಜಮೀರ್ ಬೆಂಬಲದಿಂದ ತನಿಖೆಯಿಂದ ಅತೂಶ್ ತಪ್ಪಿಸಿಕೊಂಡಿದ್ದನು. ಈ ಕೊಲೆಗೂ ಆತನೇ ಕಾರಣ, ಅತೂಶ್ ನನ್ನು ವಿಚಾರಣೆಗೆ ಒಳಪಡಿಸಿದ್ರೆ ಎಲ್ಲ ಸತ್ಯ ಹೊರಬರಲಿದೆ ಎಂದು ಎನ್.ಆರ್.ರಮೇಶ್ ಹೇಳಿದ್ದರು.

  • ಇನ್ನು ಒಂದು ದಿನ ಕಾದು ನೋಡು: ಎನ್‍ಆರ್ ರಮೇಶ್‍ಗೆ ಬಿಎಸ್‍ವೈ ಅಭಯ

    ಇನ್ನು ಒಂದು ದಿನ ಕಾದು ನೋಡು: ಎನ್‍ಆರ್ ರಮೇಶ್‍ಗೆ ಬಿಎಸ್‍ವೈ ಅಭಯ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಹಲವು ಟಿಕೆಟ್ ವಂಚಿತ ನಾಯಕರು ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಹಲವು ನಾಯಕರು ಇಂದು ಸಂಜೆಯೇ ಬಿಎಸ್‍ವೈ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ನಗರದ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್‍ವೈ ರನ್ನು ಭೇಟಿ ಮಾಡಿದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್. ಆರ್ ರಮೇಶ್ ಬಳಿಕ ಸುದ್ದಿಗಾರರರ ಜೊತೆ ಮಾತನಾಡಿದರು.

    ಟಿಕೆಟ್ ಕೈ ತಪ್ಪಿರುವ ಕುರಿತು ಕೋಪ ಮಾಡಿಕೊಳ್ಳಬೇಡ. ಸದ್ಯ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇನೆ. ಇನ್ನು ಒಂದು ದಿನ ಕಾದು ನೋಡು ಎಂದು ಹೇಳಿದ್ದಾರೆ. ರಾಜ್ಯಾಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ನನ್ನ ಮೇಲೆ ರಾಜ್ಯಾಧ್ಯಕ್ಷರಿಗೆ ಪ್ರೀತಿ ಇದೆ. ಹಾಗಾಗಿ ಅವರ ಮೇಲೆ ನನಗೆ ಗೌರವವಿದೆ ಎಂದು ತಿಳಿಸಿದರು.

    ಇದೇ ವೇಳೆ ಕೊಡಗು ಜಿಲ್ಲಾ ಮುಖಂಡರ ಜೊತೆ ಬಿಎಸ್‍ವೈ ಮಾತುಕತೆ ನಡೆಸಿದರು. ಬಳಿಕ ಟಿಕೆಟ್ ವಂಚಿತ ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಅವರು ಬಿಎಸ್‍ವೈ ಜೊತೆ ಮಹತ್ವದ ಚರ್ಚೆ ನಡೆಸಿದರು.

  • ಟಿಕೆಟ್ ಕೈತಪ್ಪೋದಕ್ಕೆ ಅನಂತ್ ಕುಮಾರ್ ನೇರ ಹೊಣೆ: ರಮೇಶ್ ಆರೋಪ

    ಟಿಕೆಟ್ ಕೈತಪ್ಪೋದಕ್ಕೆ ಅನಂತ್ ಕುಮಾರ್ ನೇರ ಹೊಣೆ: ರಮೇಶ್ ಆರೋಪ

    ಬೆಂಗಳೂರು: ಅಕ್ರಮಗಳ ವಿರುದ್ಧ ಹೋರಾಟ ನನ್ನ ಮೊದಲ ಆದ್ಯತೆಯಾಗಿದ್ದು ಕಳೆದ 10 ವರ್ಷಗಳಿಂದ ಹಲವು ಅಕ್ರಮ ಬಯಲಿಗೆಳೆದಿದ್ದೇನೆ. ನನಗೆ ಟಿಕೆಟ್ ಕೈ ತಪ್ಪುವುದಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ನೇರ ಹೊಣೆಗಾರರು ಎಂದು ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್‍ಆರ್ ರಮೇಶ್ ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಯಡಿಯೂರು ವಾರ್ಡ್ ಅನ್ನು ಮಾದರಿ ವಾರ್ಡ್ ಆಗುವ ರೀತಿ ಅಭಿವೃದ್ಧಿಗೊಳಿಸಿದ್ದೇನೆ. 2018 ರ ಚುನಾವಣೆಯಲ್ಲಿ ಚಿಕ್ಕಪೇಟೆ ಟಿಕೆಟ್ ಆಕಾಕ್ಷಿಯಾಗಿದ್ದೆ. ನಮ್ಮ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯ ಆಯ್ಕೆಗಾಗಿ ನಡೆಸಿದ ಸರ್ವೆಯಲ್ಲಿಯೂ ನನಗೆ ಮತದಾರರು ಒಲವು ತೋರಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಸರ್ವೆಯಲ್ಲೂ ಪಕ್ಷದ ಎಲ್ಲ ವರಿಷ್ಠರೂ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎಂದು ತಿಳಿಸಿದರು.

    ಸುಮಾರು 17 ಬಾರಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಎದೆಗುಂದದೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಂದ್ರ ಸಚಿವರು, ಸಂಸದರೂ ಆಗಿರುವ ಅನಂತ್ ಕುಮಾರ್ ಅವರಿಗೆ, ನಾನು ಚಿಕ್ಕಪೇಟೆ ಕ್ಷೇತ್ರದ ಆಕಾಂಕ್ಷಿ ಎಂದು ಗೊತ್ತಿದೆ. ಉದಯ್ ಗರುಡಾಚಾರ್ ಹೆಸರು ಪಟ್ಟಿಯಲ್ಲಿ ಬರುವುದಕ್ಕೆ ಹಾಗೂ ನನಗೆ ಟಿಕೆಟ್ ಕೈತಪ್ಪುವುದಕ್ಕೆ ಅನಂತ್ ಕುಮಾರ್ ನೇರ ಹೊಣೆಗಾರರು. ಅನಂತ್ ಕುಮಾರ್ ಹೊರತು ಪಡಿಸಿದರೆ ಬೇರೆ ಯಾವ ನಾಯಕರು ಇದರಲ್ಲಿ ಭಾಗಿಯಾಗಿಲ್ಲ ಎಂದು ದೂರಿದರು.

    ಉದಯ್ ಗರುಡಾಚಾರ್ ಕಳೆದ ಬಾರಿ ಸೋತ ನಂತರ ಇದುವರೆಗೂ ಚಿಕ್ಕಪೇಟೆಗೆ ಕಾಲಿಟ್ಟಿಲ್ಲ. ಅನಂತ್ ಕುಮಾರ್ ಭ್ರಷ್ಟಾಚಾರ ಹೊತ್ತಿರುವ ಉದ್ಯಮಿಗೆ ಸಾಥ್ ನೀಡಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ ಎಂದರು.

    ಹಲವು ದಿನಗಳ ಹಿಂದೆಯೇ ಫೇಸ್‍ಬುಕ್‍ನಲ್ಲಿ ಬ್ಲಾಕ್ ಕಾಂಗ್ರೆಸ್‍ನ ಕಾರ್ಯಕರ್ತರು ಬಿಜೆಪಿ ಟಿಕೆಟ್ ಸೇಲ್ ಆಗಿದೆ ಅನ್ನುವುದಾಗಿ ಹಾಕಿದ್ದರು. 8 ದಿನಗಳ ಹಿಂದೆಯೇ ಉದಯ್ ಗರುಡಾಚಾರ್ ಗೆ ಟಿಕೆಟ್ ಕನ್ಫರ್ಮ್ ಆಗಿರುವ ಕುರಿತು ವಿಷಯ ಲೀಕ್ ಆಗಿದ್ದು ಹೇಗೆ ಎಂದು ಪ್ರಶ್ನಿಸಿದರು.

    ಅನಂತ್ ಕುಮಾರ್ ಗೆ ಬುದ್ಧಿವಂತ ಹೋರಾಟಗಾರರು ಬೇಕಾಗಿಲ್ಲ ಹಾಗಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಪಕ್ಷ ಬಿಡಬೇಕಾ ಅಥವಾ ಇರಬೇಕೋ ಅನ್ನುವ ತೀರ್ಮಾನ ನಾಳೆ ನನ್ನ ಅಭಿಮಾನಿಗಳ ಜೊತೆ ಸಭೆ ಮಾಡಿ ತೀರ್ಮಾನಿಸುತ್ತೇನೆ. ರಾಜ್ಯಾಧ್ಯಾಕ್ಷರ ಜೊತೆ ಮಾತನಾಡ ಬೇಕಿದೆ ಎಂದರು.

    ಅಶೋಕ್ ಅವರು ನನ್ನ ಹೋರಾಟ, ಸಂಘಟನೆ, ಅಭಿವೃದ್ಧಿಯನ್ನು ಕಂಡವರು. ಅವರು ನನಗೆ ಸಹಕಾರ ನೀಡಬೇಕಿತ್ತು. ನಾಳೆ ಸಂಜೆಯೊಳಗೆ ನನಗೆ ಆಗಿರುವ ಅನ್ಯಾಯ ಸರಿ ಪಡಿಸುವ ಆಕಾಂಕ್ಷೆ ಇದೆ. ಆರ್ ಅಶೋಕ್ ಅವರು ಬ್ಲಾಕ್ ಮೇಲ್ ಮಾಡುವಂತವರಿಗೆ ಮಣಿಯುತ್ತಾರೆ. ನಮ್ಮಂಥಹ ಪ್ರೀತಿ ವಿಶ್ವಾಸ ಇರುವಂತವರಿಗೆ ಮಣಿಯುವುದಿಲ್ಲ. ಮುರಳೀಧರ್ ಹಾಗೂ ಜಾವಡೇಕರ್ ಅವರು ಇವತ್ತು ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

    ಎನ್.ಆರ್. ರಮೇಶ್ ಅಸಮಾಧಾನ ವಿಚಾರ ಎಲ್ಲವೂ ಸುಳ್ಳು ಸುದ್ದಿ. ಯಾವುದೇ ಸಮಸ್ಯೆ ಇಲ್ಲ. ನಾನು ಕರೆದು ಮಾತನಾಡುತ್ತೇನೆ. ರಮೇಶ್ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ರಮೇಶ್ ಅವರಿಗೆ ಎಲ್ಲಾದರೂ ವಿಧಾನಸಭಾ ಟಿಕೆಟ್ ಕೊಡುತ್ತೇವೆ, ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

  • ಬಿಜೆಪಿ ಚಿಕ್ಕಪೇಟೆ ಟಿಕೆಟ್ 2 ಕೋಟಿ ರೂ.ಗೆ ಸೇಲಂತೆ – ವೈರಲ್ ಆಯ್ತು ಮೆಸೇಜ್

    ಬಿಜೆಪಿ ಚಿಕ್ಕಪೇಟೆ ಟಿಕೆಟ್ 2 ಕೋಟಿ ರೂ.ಗೆ ಸೇಲಂತೆ – ವೈರಲ್ ಆಯ್ತು ಮೆಸೇಜ್

    ಬೆಂಗಳೂರು: ಭಾನುವಾರ ನವದೆಹಲಿಯಲ್ಲಿ ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 72 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಭಿನ್ನಮತ ಸ್ಫೋಟಗೊಂಡಿದೆ.

    ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್ ಬದಲಾಗಿ ಉದಯ್ ಗರುಡಾಚಾರ್ ಟಿಕೆಟ್ ಸಿಕ್ಕಿದೆ. ತ್ತ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಲಭಿಸದ ಹಿನ್ನೆಲೆಯಲ್ಲಿ ಕಾರ್ಯಕರ್ತರೆಲ್ಲಾ ಮಾಜಿ ಡಿಸಿಎಂ ಆರ್.ಅಶೋಕ್ ಮನೆ ಮುಂದೆ ಧರಣಿ ನಡೆದಿದ್ದಾರೆ. ಟಿಕೆಟ್‍ಗಾಗಿ ಭಿನ್ನಮತ ಸ್ಫೋಟಗೊಳ್ಳುತ್ತಿದ್ದಂತೆ ಫೇಸ್‍ಬುಕ್ ಮತ್ತು ವಾಟ್ಸಪ್ ಗಳಲ್ಲಿ ಕೆಲವು ಮೆಸೇಜ್ ಗಳು ಹರಿದಾಡಲು ಆರಂಭವಾಗಿವೆ. ಇದನ್ನೂ ಓದಿ: ಎನ್‍ಆರ್ ರಮೇಶ್‍ಗೆ ಟಿಕೆಟ್ ಸಿಗದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

    ವೈರಲ್ ಮೇಸೆಜ್‍ನಲ್ಲಿ ಏನಿದೆ?
    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಆರ್.ವಿ.ದೇವರಾಜ್ ಅವರೇ ತಮ್ಮ ಎದುರಾಳಿಯನ್ನು ನಿರ್ಧರಿಸಿಕೊಂಡಿದ್ದು, 2 ಕೋಟಿ ರೂ. ಹಣವನ್ನ ನೀಡಿ ಗೆಲವನ್ನು ಸುಲಭ ಮಾಡಿಕೊಂಡಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿವೆ. ಟಿಕೆಟ್ ಗಾಗಿ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ 2 ಕೋಟಿ ರೂ. ನೀಡಲಾಗಿದೆ ಎಂಬ ಮೆಸೇಜ್‍ಗಳು ಹರಿದಾಡುತ್ತಿವೆ. ಇದನ್ನೂ ಓದಿ: ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

    ಬಿಜೆಪಿ ವಿರುದ್ಧ ಮೆಸೇಜ್‍ಗಳು ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 2 ಕೋಟಿಗೆ ಟಿಕೆಟ್ ಸೇಲ್ ಆಗಿದೆ ಎಂಬ ಆರೋಪಗಳೆಲ್ಲಾ ಸುಳ್ಳು. ಎನ್.ಆರ್.ರಮೇಶ್ ಹಾಗೆಲ್ಲಾ ಮಾತನಾಡಲ್ಲ. ಅವರನ್ನು ಕರೆಸಿಕೊಂಡು ನಾನು ಮಾತನಾಡಿ ತಪ್ಪು ಗ್ರಹಿಕೆಯಾಗಿದ್ರೆ ಅದನ್ನ ಸರಿಪಡಿಸುತ್ತೇನೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

  • ಸಿಎಂ ವಿರುದ್ಧ ಮಾನನಷ್ಟ ಕೇಸ್ ದಾಖಲು

    ಸಿಎಂ ವಿರುದ್ಧ ಮಾನನಷ್ಟ ಕೇಸ್ ದಾಖಲು

    ಬೆಂಗಳೂರು: ಎನ್ ಆರ್ ರಮೇಶ್ ಒಬ್ಬ ಮನೆಹಾಳ ಎಂದು ಸಿಎಂ ನಿಂದಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಗರದ 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ  ಪ್ರಕರಣ ದಾಖಲಾಗಿದೆ.

    ಬೆಂಗಳೂರು ನಗರದ ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ಅವರು ಸಿಎಂ ವಿರುದ್ಧ ಮಾನನಷ್ಟ  ಕೇಸ್ ದಾಖಲು ಮಾಡಿದ್ದಾರೆ.

    ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮರೆತು, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನನ್ನನ್ನು ಒಬ್ಬ ಮನೆಹಾಳ ಎಂದು ಅವಾಚ್ಯವಾಗಿ ನಿಂದಿಸಿದ್ದರು. ಹೀಗಾಗಿ ಅಸಂವಿಧಾನಿಕ ಪದಗಳನ್ನು ಆಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಯ ಅನ್ವಯದಲ್ಲಿ ನಗರದ 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಎನ್.ಆರ್ ರಮೇಶ್ ಹೇಳಿದ್ದಾರೆ.