Tag: ಎನ್‍ಐಎ

  • ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು

    ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು

    ನವದೆಹಲಿ: ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ (Chief Election Commission) ಡಿಎಂಕೆ (DMK) ದೂರು ನೀಡಿದೆ.

    ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣದ ಹಿಂದೆ ತಮಿಳುನಾಡಿನ (Tamil Nadu) ಜನರಿದ್ದಾರೆ. ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ದಳ (NIA) ಯಾರನ್ನೂ ಬಂಧನ ಮಾಡಿಲ್ಲ. ಹೀಗಾಗಿ ಪ್ರಜಾಪತ್ರಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಿದೆ. ಇದನ್ನೂ ಓದಿ: ನಾನು ಸ್ಪರ್ಧಿಸೋದು ಖಚಿತ, ವಿಜಯೇಂದ್ರ ರಾಜೀನಾಮೆ ಕೊಡೋದು ನಿಶ್ಚಿತ: ಈಶ್ವರಪ್ಪ ಭವಿಷ್ಯ

     

    ತಮಿಳುನಾಡಿನಲ್ಲಿ ಟ್ರೈನಿಂಗ್ ಪಡೆದು, ಬಾಂಬ್ ಇಡಲು ಬೆಂಗಳೂರಿಗೆ (Bengaluru) ರಾಮೇಶ್ವರಂ ಕೆಫೆಗೆ ಶಂಕಿತ ಬಂದಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಎನ್‌ಐಎ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಎನ್‌ಐಎ ಇಲ್ಲಿಯವರೆಗೆ ಯಾರನ್ನೂ ಬಂಧಿಸಿದಲ್ಲ ಎಂದು ಡಿಎಂಕೆ ದೂರಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ 2ನೇ ಪಟ್ಟಿ ಇಂದು ಬಿಡುಗಡೆ – ಸಂಭಾವ್ಯ ಅಭ್ಯರ್ಥಿಗಳು ಯಾರು?

    ಶೋಭಾ ಕರಂದ್ಲಾಜೆ ಹೇಳಿದ್ದೇನು?
    ಮಂಗಳವಾರ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದುಕೊಂಡು ಬಾಂಬ್ ಇಡುತ್ತಾರೆ ಎಂದು ಹೇಳಿಕೆ ನೀಡಿದ್ದರು.

    ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಎಕ್ಸ್‌ನಲ್ಲಿ ಕರಂದ್ಲಾಜೆ ಕ್ಷಮೆ ಕೇಳಿದ್ದರು. ನನ್ನ ತಮಿಳು ಸಹೋದರ ಸಹೋದರಿಯರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ತಿಳಿಸಿದ್ದರು.

  • RSS ಮುಖಂಡ ಶ್ರೀನಿವಾಸನ್ ಹತ್ಯೆಯ ಪ್ರಮುಖ ಆರೋಪಿಯ ಬಂಧಿಸಿದ NIA

    RSS ಮುಖಂಡ ಶ್ರೀನಿವಾಸನ್ ಹತ್ಯೆಯ ಪ್ರಮುಖ ಆರೋಪಿಯ ಬಂಧಿಸಿದ NIA

    ನವದೆಹಲಿ: 2022ರಲ್ಲಿ ಕೇರಳದಲ್ಲಿ ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸನ್ ಅವರ ಭೀಕರ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯನಾಗಿರುವ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಬಂಧಿಸಿದೆ.

    ಆರೋಪಿಯನ್ನು ಶಫೀಖ್‌ ಎಂದು ಗುರುತಿಸಲಾಗಿದೆ. ಮಲಪ್ಪುರಂ ಜಿಲ್ಲೆಯ ನಿವಾಸಿಯಾಗಿರುವ ಈತ 2022ರ ಏಪ್ರಿಲ್‌ 16ರಂದು ಪಾಲಕ್ಕಾಡ್‌ನಲ್ಲಿ ಶ್ರೀನಿವಾಸನ್‌ ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ. ಇದೀಗ ಎನ್‌ಐಎ ಅಧಿಕಾರಿಗಳ ತಂಡ ಕೊಲ್ಲಂ ಜಿಲ್ಲೆಗೆ ಪತ್ತೆಹಚ್ಚಿದೆ. ಇದನ್ನೂ ಓದಿ: ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

    ಒಟ್ಟು 71 ಮಂದಿ ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ NIA ಈಗಾಗಲೇ 2023 ರ ಮಾರ್ಚ್‌ 17 ಮತ್ತು 2023ರ ನವೆಂಬರ್‌ 6 ರಂದು ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಆರೋಪಿಗಳಲ್ಲಿ ಒಬ್ಬನನ್ನು ಅಬ್ದುಲ್ ನಾಸರ್ ಎಂದು ಗುರುತಿಸಲಾಗಿದ್ದು, ಈತ ಜನವರಿ 2 ರಂದು ಸಾವನ್ನಪ್ಪಿದ್ದಾನೆ. ಸಹೀರ್ ಕೆವಿ ಮತ್ತು ಜಾಫರ್ ಭೀಮಂತವಿಡ ಎಂಬಿಬ್ಬರು ಪರಾರಿಯಾಗಿದ್ದು, ಬಳಿಕ ಇಬ್ಬರನ್ನು ಬಂಧಿಸಲಾಯಿತು.

  • ಮಸೀದಿ, ಮದರಸಾಗಳಲ್ಲಿ ಎನ್‍ಐಎ ದಾಳಿ ನಡೆಸಿದ್ರೆ ರಾಮೇಶ್ವರಂ ಕೆಫೆ ಸ್ಫೋಟ ಆರೋಪಿ ಪತ್ತೆಯಾಗಬಹುದು: ಶರಣ್ ಪಂಪ್‍ವೆಲ್

    ಮಸೀದಿ, ಮದರಸಾಗಳಲ್ಲಿ ಎನ್‍ಐಎ ದಾಳಿ ನಡೆಸಿದ್ರೆ ರಾಮೇಶ್ವರಂ ಕೆಫೆ ಸ್ಫೋಟ ಆರೋಪಿ ಪತ್ತೆಯಾಗಬಹುದು: ಶರಣ್ ಪಂಪ್‍ವೆಲ್

    ಮಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಸ್ಫೋಟ ಪ್ರಕರಣದಲ್ಲಿ ಆರೋಪಿ ಪತ್ತೆಗೆ ವಿಶ್ವ ಹಿಂದೂ ಪರಿಷತ್ ಸಾಥ್ ಕೊಡಲಿದೆ ಎಂದು ಪರಿಷತ್‍ನ (Vishwa Hindu Parishad) ಕಾರ್ಯದರ್ಶಿ ಶರಣ್ ಪಂಪ್‍ವೆಲ್ (Sharan Pumpwell) ಹೇಳಿದ್ದಾರೆ.

    ಮಂಗಳೂರಿನಲ್ಲಿ (Mangaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಆರೋಪಿಯ ಪತ್ತೆಗಾಗಿ ಪೊಲೀಸರಿಗೆ ಸಹಕಾರ ನೀಡಲಿದೆ. ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಆರೋಪಿ ಫೋಟೊ ಪ್ರಕಟಿಸುತ್ತೇವೆ. ಈ ಮೂಲಕ ಅಧಿಕಾರಗಳ ಕೆಲಸಕ್ಕೆ ನಾವು ಸಹಕಾರ ನೀಡಲಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA

    ಆರೋಪಿ ಬಳ್ಳಾರಿಗೆ ಹೋಗಿ ಮಸೀದಿಗೆ ಹೋಗಿರುವುದು ಪತ್ತೆಯಾಗಿದೆ. ಮಸೀದಿ ಬಳಿ ಬಟ್ಟೆ ಬದಲಿಸಿ ಬಳಿಕ ಭಟ್ಕಳಕ್ಕೆ ಬಂದಿರುವುದು ಪತ್ತೆಯಾಗಿದೆ. ಹೀಗಾಗಿ ಭಟ್ಕಳ ಸೇರಿ ರಾಜ್ಯದಾದ್ಯಂತ ಮದರಸಾ, ಮಸೀದಿಗಳಲ್ಲಿ ತನಿಖೆ ನಡೆಸಿ ಶೋಧ ನಡೆಸಬೇಕು. ಭಟ್ಕಳದ ಮಸೀದಿಗಳಲ್ಲಿ ತನಿಖೆ ಮಾಡಿದರೆ ಬಾಂಬರ್ ಬಗ್ಗೆ ಮಾಹಿತಿ ಸಿಗಬಹುದು. ಭಟ್ಕಳದಲ್ಲಿ ಭಯೋತ್ಪಾದಕರಿಗೆ ಸಂಪರ್ಕ ಇರುವುದು ಬಹಳಷ್ಟು ಬಾರಿ ದೃಢವಾಗಿದೆ ಎಂದಿದ್ದಾರೆ.

    ಭಯೋತ್ಪಾದಕರಿಗೆ ಮಸೀದಿ, ಮದರಸಾಗಳೇ ತಾಣವಾಗುತ್ತಿದೆ. ಮದರಸಾ, ಮಸೀದಿಗಳಿಗೆ ಎನ್‍ಐಎ ದಾಳಿ ನಡೆಸಿದರೆ ಆರೋಪಿ ಪತ್ತೆಯಾಗಬಹುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ

  • ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA

    ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA

    ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್ (Rameshwaram Cafe Blast) ಪ್ರಕರಣದ ತನಿಖೆ ಚುರುಕುಗೊಂಡಿದೆ. ಘಟನೆ ನಡೆದು 10 ದಿನಗಳು ಕಳೆದರೂ ಆರೋಪಿಯ ಸುಳಿವು ಸಿಕ್ಕಿಲ್ಲ.

    ರಾಮೇಶ್ವರಂ ಕಫೆ ಬ್ಲಾಸ್ಟ್ ಬಳಿಕ ಕಲಬುರಗಿಗೆ ಬಂದಿರುವ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿದ್ದರಿಂದ ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಅಧಿಕಾರಿಗಳು ಕಲಬುರಗಿಯಲ್ಲಿ ಬೀಡು ಬಿಟ್ಟಿದ್ದಾರೆ. ಶನಿವಾರದಿಂದಲೂ ಎನ್‍ಐಎ ತಂಡ ಕಲಬುರಗಿಯಲ್ಲಿ ಬಾಂಬರ್ ನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

    ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ಬಾಂಬರ್ ಬಸ್ಸಿನಿಂದ ಇಳಿದಿರುವ ಬಗ್ಗೆ ತಂಡ ಮಾಹಿತಿ ಪಡೆದಿದೆ. ಹೀಗಾಗಿ ರಾಮ ಮಂದಿರ ಸರ್ಕಲ್ ನಿಂದ ಬಾಂಬರ್ ಎಲ್ಲಿ ಹೋಗಿದ್ದಾನೆ ಅನ್ನೋ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಕಲಬುರಗಿಯ ರೋಜಾ ಪ್ರದೇಶದಲ್ಲೇ ನಿನ್ನೆ ಅಧಿಕಾರಿಗಳು ಅರ್ಧ ದಿನ ಕಳೆದಿದ್ದಾರೆ. ರೋಜಾ ಪ್ರದೇಶದ ಹಲವು ಏರಿಯಾಗಳಲ್ಲಿ ಪಿಎಫ್‍ಐ, ಎಸ್‍ಡಿಪಿಐ ಜೊತೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ತಲಾಶ್ ನಡೆಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ – ಕಲಬುರಗಿಗೆ ಆಗಮಿಸಿದ ಎನ್‌ಐಎ ತಂಡ

    ಈ ಹಿಂದೆ ಎನ್‍ಐಎ ಅಧಿಕಾರಿಗಳಿಂದ ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಬಂಧನವಾಗಿತ್ತು. ಹೀಗಾಗಿ ಕಲಬುರಗಿಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ (SDPI) ಸದಸ್ಯರ ಮೇಲೆ ನಿಗಾ ಇಟ್ಟಿದ್ದಾರೆ. ಪಿಎಫ್‍ಐ ಸದಸ್ಯರ ಜೊತೆ ಸಂಪರ್ಕಕ್ಕೆ ಬಂದಿರುವ ಶಂಕೆಯ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಂದು ಕೂಡ ಕಲಬುರಗಿಯಲ್ಲೇ ಅಧಿಕಾರಿಗಳು ತನಿಖೆ ಮುಂದುವರಿಸಲಿದ್ದಾರೆ.

    ಮತ್ತೆ ಫೋಟೋ ಬಿಡುಗಡೆ: ಬಾಂಬರ್‌ ಫೋಟೋಗಳನ್ನು ಶನಿವಾರ ಎನ್‌ಐಎ ಮತ್ತೆ ಬಿಡುಗಡೆ ಮಾಡಿದೆ. ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರನ್ನು ಗುರುತಿಸುವಲ್ಲಿ ಎನ್‌ಐಎಯು ನಾಗರಿಕರ ಸಹಕಾರವನ್ನು ಕೋರುತ್ತದೆ. ಆರೋಪಿಯ ಸುಳಿವು ಸಿಕ್ಕಲ್ಲಿ 08029510900, 8904241100 ಗೆ ಕರೆ ಮಾಡಿ ಅಥವಾ ಯಾವುದೇ ಮಾಹಿತಿಯೊಂದಿಗೆ info.blr.nia@gov.in ಗೆ ಇಮೇಲ್ ಮಾಡಿ. ನಿಮ್ಮ ಗುರುತು ಗೌಪ್ಯವಾಗಿ ಉಳಿಯುತ್ತದೆ ಎಂದು NIA ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

  • ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಾಂಬರ್ ಓಡಾಟ- NIAಯಿಂದ ಮತ್ತೆರಡು CCTV ದೃಶ್ಯ ಬಿಡುಗಡೆ

    ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಾಂಬರ್ ಓಡಾಟ- NIAಯಿಂದ ಮತ್ತೆರಡು CCTV ದೃಶ್ಯ ಬಿಡುಗಡೆ

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಇಂದು ಮತ್ತೆರಡು ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಗೆ ಶಂಕಿತನ ಎಕ್ಸ್‌ಕ್ಲೂಸೀವ್‌ ವೀಡಿಯೋ ಸಿಕ್ಕಿದೆ. 2.04 ನಿಮಿಷಕ್ಕೆ ಬಿಬಿಎಂಟಿಸಿ ಬಸ್ ಹತ್ತಿರುವ ಶಂಕಿತ, 3.40 ಕ್ಕೆ ಗೊರಗುಂಟೆಪಾಳ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಇಲ್ಲಿಂದ ಹುಮ್ನಾಬಾದ್ ಬಸ್‍ನಲ್ಲಿ ಬಳ್ಳಾರಿ ಕಡೆ ಶಂಕಿತ ಪಯಣ ಮಾಡಿದ್ದಾನೆ. ರಾತ್ರಿ 9 ಗಂಟೆಗೆ ಬಳ್ಳಾರಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ, ಓರ್ವ ವಶಕ್ಕೆ – ಏನಿದು ಐಸಿಸ್‌ ಬಳ್ಳಾರಿ ಮಾಡ್ಯೂಲ್‌?

    ಬಳ್ಳಾರಿ ಬಸ್‍ನಿಲ್ದಾಣದಲ್ಲೂ ಬಾಂಬರ್ ಓಡಾಡಿದ್ದಾನೆ. ಬಸ್‌ ನಿಲ್ದಾಣದಲ್ಲಿ ಶಂಕಿತ ಆ ಕಡೆಯಿಂದ ಈ ಕಡೆಗೆ ಸಿಸಿಟಿವಿಯನ್ನು ಗಮನಿಸಿಕೊಂಡು ಓಡಾಡಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಬಳ್ಳಾರಿಯ ಪೊಲೀಸ್ ಚೌಕಿ ಮುಂದೆಯೇ ಶಂಕಿತ ಓಡಾಟ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ- ನಾಲ್ವರನ್ನು ವಶಕ್ಕೆ ಪಡೆದ NIA

  • ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ- ನಾಲ್ವರನ್ನು ವಶಕ್ಕೆ ಪಡೆದ NIA

    ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ- ನಾಲ್ವರನ್ನು ವಶಕ್ಕೆ ಪಡೆದ NIA

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ (Rameshwara, Cafe) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ಅಧಿಕಾರಿಗಳು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.

    ರಾಮೇಶ್ವರಂ ಕೆಫೆ ಸ್ಪೋಟದಲ್ಲಿ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಜೈಲಲ್ಲಿದ್ದ ಬಳ್ಳಾರಿ ಮಾಡ್ಯುಲ್ ಸಂಸ್ಥಾಪಕ ಮಿನಾಜ್ ನನ್ನು ಬಾಡಿ ವಾರೆಂಟ್ ಮೂಲಕ ಮಾರ್ಚ್ 9 ರವರೆಗೂ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆತನನ್ನು ಅಜ್ಞಾತ ಸ್ಥಳದಲ್ಲಿಟ್ಟು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಹಾನಗಲ್ ಗ್ಯಾಂಗ್‌ರೇಪ್ ಕೇಸ್ – 58 ದಿನಗಳ ನಂತ್ರ 873 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಮಿನಾಜ್ ಸುಲೈಮನ್ ಜೊತೆ ಮುಂಬೈನ ಅನಾಸ್ ಇಕ್ಬಾಲ್, ದೆಹಲಿಯ ಶಯಾನ್ ರೆಹ್ಮಾನ್, ಬಳ್ಳಾರಿಯ ಸೈಯ್ಯದ್ ಸಮೀರ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿಯ ಸೈಯ್ಯದ್‌ನಿಂದ ತರಬೇತಿ ಪಡೆದವರಲ್ಲಿ ಒಬ್ಬ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ. ಕೆಫೆಯಲ್ಲಿ ಬಾಂಬ್ ಇಟ್ಟವನು ಅವನೇ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ನಾನಾ ಆಯಾಮಗಳಲ್ಲಿ ತನಿಖಾತಂಡಗಳು ತನಿಖೆ ನಡೆಸುತ್ತಿವೆ ಎಂಬುದಾಗಿ ತಿಳಿದುಬಂದಿದೆ.

  • ಬಾಂಬ್ ಸ್ಫೋಟ ಕೇಸ್; ಬಂಡೆಗಳನ್ನು ಸಿಡಿಸಲು ಬಳಸುವ ಪೌಡರ್ ಬಳಸಿದ್ದ ಶಂಕಿತ ಉಗ್ರ!

    ಬಾಂಬ್ ಸ್ಫೋಟ ಕೇಸ್; ಬಂಡೆಗಳನ್ನು ಸಿಡಿಸಲು ಬಳಸುವ ಪೌಡರ್ ಬಳಸಿದ್ದ ಶಂಕಿತ ಉಗ್ರ!

    – ಅಮೋನಿಯಂ ನೈಟ್ರೇಟ್ ಪೌಡರ್ ಸಾರ್ವಜನಿಕ ಮಾರಾಟಕ್ಕೆ ನಿಷೇಧ
    – ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ – ಬಗೆದಷ್ಟು ರಹಸ್ಯ ಬಯಲು

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿದ್ದು, ಎನ್‌ಐಎ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ.

    ಕೆಫೆಯಲ್ಲಿ ಸ್ಫೋಟಿಸಿದ್ದ ಬಾಂಬ್‌ಗೆ ಅಮೋನಿಯಂ ನೈಟ್ರೇಟ್ (Ammonium Nitrate Powder) ಬಳಸಿದ್ದಾನೆ ಅನ್ನೋದು ತನಿಖೆಯಲ್ಲಿ ದೃಢಪಟ್ಟಿರುವುದಾಗಿ NIA ಅಧಿಕಾರಿಗಳು ತಿಳಿಸಿದ್ದಾರೆ. ಅಮೋನಿಯಂ ನೈಟ್ರೇಟ್ ಅನ್ನು ಹೆಚ್ಚಾಗಿ ಕಲ್ಲು ಗಣಿಗಾರಿಕೆಯಲ್ಲಿ ಬಂಡೆಗಳನ್ನು ಸಿಡಿಸಲು ಬಳಸಲಾಗುತ್ತದೆ. ಇದೇ ಶಂಕಿತ ಉಗ್ರ ಬಳಸಿದ್ದ ಬಾಂಬ್‌ಗೆ ಇದೇ ಪೌಡರ್ ಅನ್ನು ಬಳಸಿದ್ದಾನೆ. ಆದ್ದರಿಂದ ಸದ್ಯಕ್ಕೆ ಅಮೋನಿಯಂ ನೈಟ್ರೇಟ್ ಸಾರ್ವಜನಿಕವಾಗಿ ಮಾರಟ ಮಾಡಲು ನಿಷೇಧಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಬಟ್ಟೆ ಬದಲಾಯಿಸಿ ಟೋಪಿ ಬಿಟ್ಟು ಹೋದ ಬಾಂಬರ್‌

    ಈ ಹಿಂದೆ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆದಿದ್ದ ಬಾಂಬ್ ಸ್ಫೋಟ (Mangaluru, Shivamogga Blast) ಪ್ರಕರಣಗಳಲ್ಲಿ ಸಲ್ಫರಿಕ್ ಗನ್‌ ಪೌಡರ್ ಮತ್ತು ಪೊಟ್ಯಾಶಿಯಂ ನೈಟ್ರೇಟ್ ಕೆಮಿಕಲ್‌ಗಳನ್ನು ಬಳಸಿರುವುದು ಕಂಡುಬಂದಿತ್ತು. ಹಾಗಾಗಿ ಶಂಕಿತ ಉಗ್ರನನ್ನು ಪತ್ತಹೆಚ್ಚಲು ತನಿಖೆ ಚುರುಕುಗೊಳಿಸಿರುವ ಎನ್‌ಐಎ ಹೊರ ರಾಜ್ಯಗಳಿಂದ ಅಮೋನಿಯಂ ನೈಟ್ರೇಟ್ ಪೂರೈಕೆದಾರರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದೆ ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ

    ಕ್ಷಣಕ್ಕೊಂದು ಬಸ್ ಬದಲಿದ್ದಾನೆ:
    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಚುರುಕು ಪಡೆದಿದ್ದು, ಬಾಂಬರ್ ಚಲನವಲನದ ಬಗ್ಗೆ ಮತ್ತಷ್ಟು ದೃಶ್ಯಸಾಕ್ಷ್ಯ ಸಿಕ್ಕಿದೆ. ಇದನ್ನು ಆಧರಿಸಿ ತನಿಖಾಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ. ಕೆಫೆಯಲ್ಲಿ ಬಾಂಬ್ ಇದ್ದ ಬ್ಯಾಗ್ ಇರಿಸಿದ್ದ ಬಾಂಬರ್ ಅಲ್ಲಿಂದ ಹಲವು ಬಸ್ ಬದಲಿಸಿದ್ದಾನೆ. ಸಮೀಪದ ಪ್ರಾರ್ಥನಾ ಮಂದಿರ ಬಳಿ ಹೋಗಿ ಅಲ್ಲಿ ಬಟ್ಟೆ ಬದಲಿಸಿದ್ದ. ಈ ಮೊದಲು ಬಳಸಿದ್ದ ಟೋಪಿ ಬಿಸಾಡಿ ಬೇರೊಂದು ಟೋಪಿ ಧರಿಸಿದ್ದ. ಮತ್ತೆ ಬಿಎಂಟಿಸಿ ಬಸ್ ಹತ್ತಿದ ಬಾಂಬರ್ ನೇರವಾಗಿ ಮಧ್ಯಾಹ್ನ 3 ಗಂಟೆಗೆ ಓಕಳಿಪುರಂನ ಸುಜಾತಾ ಬಸ್ ನಿಲ್ದಾಣದ ಬಳಿ ಬಂದಿದ್ದ. ಅಲ್ಲಿ ಬೀದರ್‌ಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ರಾತ್ರಿ 8.58ರ ಹೊತ್ತಿಗೆ ಬಳ್ಳಾರಿಯಲ್ಲಿ ಇಳಿದಿದ್ದ. ಇಲ್ಲಿಯವರೆಗಿನ ಬಾಂಬರ್ ಚಲನವಲನಗಳು ಹಲವೆಡೆ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಓಡಾಡುವ, ಬಸ್ಸಲ್ಲಿ ಕುಳಿತು ಸಾಗಿರುವ ಮತ್ತು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಓಡಾಡೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ಮುಂದೆ ಎಲ್ಲಿ ಹೋದ ಎಂಬ ಸುಳಿವು ಸಿಕ್ಕಿಲ್ಲ. ಬಳ್ಳಾರಿಯಲ್ಲಿಯೇ ತಲೆ ಮರೆಸಿಕೊಂಡಿದ್ದಾನಾ? ಅಥವಾ ಬೇರೆ ರಾಜ್ಯಕ್ಕೆ ಹೋಗಿದ್ದಾನಾ ಎಂಬ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ.

  • ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ

    ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ

    ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬ್ಲಾಸ್ಟ್‌ನ ಶಂಕಿತ ಉಗ್ರನ (Suspected Terrorist) ಸುಳಿವು ಕೊಟ್ಟರೆ 10 ಲಕ್ಷ ನಗದು ಬಹುಮಾನ ಕೊಡುವುದಾಗಿ ಬಾಂಬರ್‌ನ ಸಿಸಿಟಿವಿ ಫೋಟೋವೊಂದನ್ನು ಬುಧವಾರ ಎನ್‌ಐಎ (NIA) ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ ಸಿಸಿಬಿ (CCB) ಪೊಲೀಸರು ಬಾಂಬರ್‌ನ ಮತ್ತೊಂದು ರೇಖಾಚಿತ್ರವನ್ನು (Sketch) ಬಿಡುಗಡೆ ಮಾಡಿದ್ದಾರೆ.

    ಸಿಸಿಟಿವಿಯಲ್ಲಿ ಬಾಂಬರ್ ದೃಶ್ಯ ಸಮರ್ಪಕವಾಗಿ ಸೆರೆಯಾಗದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದರು. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವನ್ನು ಆಧಾರವಾಗಿ ಇಟ್ಟುಕೊಂಡು ಸಿಸಿಬಿ ಶಂಕಿತ ಉಗ್ರನ ರೇಖಾಚಿತ್ರ ತಯಾರಿ ಮಾಡಿದೆ. ಈಗಾಗಲೇ ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬಂದಿವೆ. ಆರೋಪಿಯನ್ನು ನೋಡಿದ್ದಾಗಿ ಕರೆಗಳು ಬರುತ್ತಿದ್ದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿಸಿಬಿ ತಯಾರಿ ನಡೆಸಿತ್ತು. ಇದನ್ನೂ ಓದಿ: ತೆಪ್ಪ ಮಗುಚಿಬಿದ್ದು ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಸಾವು

    ಖ್ಯಾತ ಸ್ಕೆಚ್ ಆರ್ಟಿಸ್ಟ್‌ನಿಂದ ಬಾಂಬರ್‌ನ ಇಮ್ಯಾಜಿನರಿ ಸ್ಕೆಚ್ ಬಿಡಿಸಲಾಗಿದೆ. ಸ್ಕೆಚ್ ಆರ್ಟಿಸ್ಟ್ ಎನ್‌ಐಎ ಬಿಡುಗಡೆ ಮಾಡಿದ ಸಿಸಿಟಿವಿ ಫೋಟೋವನ್ನು ಆಧರಿಸಿ ಸಂಪೂರ್ಣ ಮುಖದ ಇಮ್ಯಾಜಿನರಿ ಸ್ಕೆಚ್ ಮಾಡಿದ್ದಾರೆ. ಆರ್ಟಿಸ್ಟ್ ಹರ್ಷ ಅವರು ಈ ರೇಖಾಚಿತ್ರವನ್ನು ಬಿಡಿಸಿದ್ದಾರೆ. ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ಮಾಸ್ಕ್ ಇಲ್ಲದೇ ಟೋಪಿ ಕನ್ನಡಕ ಧರಿಸಿದ ರೇಖಾಚಿತ್ರವನ್ನು ಬಿಡಿಸಲಾಗಿದೆ. ಇದೇ ರೀತಿ ಬಾಂಬರ್ ಇರಬಹುದು ಎಂದು ಕಲ್ಪಿಸಿ ಕಲಾವಿದ ಹರ್ಷ ಈ ರೇಖಾಚಿತ್ರ ಬಿಡಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ – ಬಾಂಬರ್‌ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳಿರುವ ಶಂಕೆ

  • ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ – ಬಾಂಬರ್‌ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳಿರುವ ಶಂಕೆ

    ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ – ಬಾಂಬರ್‌ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳಿರುವ ಶಂಕೆ

    ಬೆಂಗಳೂರು/ ಬಳ್ಳಾರಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

    ಬೆಂಗಳೂರಿನ (Bengaluru) ಸುಜಾತ ಸರ್ಕಲ್‌ನಲ್ಲಿ ಬಾಂಬರ್ ಬಸ್ ಹತ್ತಿ ತುಮಕೂರಿನಲ್ಲಿ (Tumakauru) ಇಳಿದಿದ್ದಾನೆ. ತುಮಕೂರಿನಿಂದ ಬಳ್ಳಾರಿಗೆ (Ballari) ಬಸ್‌ನಲ್ಲಿ ಬಂದು ನಂತರ ಮಂತ್ರಾಲಯ- ಗೋಕರ್ಣ ಬಸ್‌ ಹತ್ತಿ ಭಟ್ಕಳಕ್ಕೆ (Bhatkal) ತೆರಳಿರುವ ಶಂಕೆ ವ್ಯಕ್ತವಾಗಿದೆ.

    ಈ ವಿಚಾರ ತಿಳಿಯುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ (NIA)  ಬಳ್ಳಾರಿ ಮತ್ತು ತುಮಕೂರು ಬಸ್‌ ನಿಲ್ದಾಣಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದೆ. ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್‌ಐಎ ತಂಡ ಮಾಹಿತಿ ಪಡೆದಿದ್ದು ಬಳ್ಳಾರಿ ಮತ್ತು ತುಮಕೂರು ಪೊಲೀಸರು ಸಹಕಾರ ನೀಡಿದ್ದಾರೆ. ಬೆಂಗಳೂರಿಂದ ಎರಡು ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.  ಇದನ್ನೂ ಓದಿ: ವಿಶ್ವಪ್ರಸಿದ್ಧ ಯಾಣದಲ್ಲಿ ದೇಶದ ಮೊದಲ WiFi-7 ಸೇವೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ (Suspected Terrorist) ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ (Reward) ಘೋಷಣೆ ಮಾಡಲಾಗಿದೆ. ಎನ್‌ಐಎ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದು, ಶಂಕಿತನ ಸುಳಿವು ನೀಡಿದವರ ಹೆಸರು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ. ಇಲ್ಲಿಯವರೆಗೆ ಆರೋಪಿ ಚಹರೆ ಕಾಣುವ ಫೋಟೋ ಇರಲಿಲ್ಲ. ಎನ್‌ಐಎ ಬಿಡುಗಡೆ ಮಾಡಿರುವ ಫೋಟೋದಲ್ಲಿ ಅಲ್ಪ ಸ್ವಲ್ಪ ಮುಖ ಕಾಣಿಸುತ್ತದೆ.

     

    ಭಟ್ಕಳದ ನೆಲೆಸಿಗದ ಮಂದಿಗೂ ಉಗ್ರರ ಜೊತೆ ನಂಟು ಇರುವುದು ಹೊಸದೆನಲ್ಲ.  ಹಲವು ಮಂದಿಗೆ ಈ ಹಿಂದೆ ಉಗ್ರರ ಜೊತೆ ಸಂಪರ್ಕ ಇರುವುದು ತನಿಖೆಯಿಂದ ದೃಢಪಟ್ಟಿತ್ತು. ಈ ಹಿಂದೆ ಭಟ್ಕಳ​ ಸಹೋದರರಾದ ರಿಯಾಜ್​ ಮತ್ತು ಇಕ್ಬಾಲ್ ಅವರನ್ನು ಕೇಂದ್ರ ಸರ್ಕಾರ ಉಗ್ರರ ಪಟ್ಟಿಗೆ ಸೇರಿಸಿತ್ತು. ಇದನ್ನೂ ಓದಿ: ಅತ್ತೆ ಬೇಗ ಸಾಯಬೇಕು- 50 ರೂ. ನೋಟ್ ಮೇಲೆ ಹರಕೆ ಬರೆದ ಸೊಸೆ!

    ಇದೇ ಜನವರಿ ಕೊನೆಯ ವಾರದಲ್ಲಿ ಮುಂಬೈನಲ್ಲಿ ಬಂಧನವಾದ ಶಂಕಿತ ಉಗ್ರನೋರ್ವನ ಜತೆ ನಂಟು ಹೊಂದಿರುವ ಆರೋಪದಡಿ ಭಟ್ಕಳದ ಮಹಿಳೆಯ ಮನೆಯ ಮೇಲೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರದ ದಳ ಮಾಡಿ ವಶಕ್ಕೆ ಪಡೆದಿತ್ತು.

     

  • ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

    ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

    ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ (Suspected Terrorist) ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ (Reward) ಘೋಷಣೆ ಮಾಡಲಾಗಿದೆ.

    ಎನ್‌ಐಎಯಿಂದ (NIA) 10 ಲಕ್ಷ ಬಹುಮಾನ ಘೋಷಣೆ ಮಾಡಿದ್ದು, ಶಂಕಿತನ ಸುಳಿವು ನೀಡಿದವರ ಹೆಸರು ಗೌಪ್ಯವಾಗಿ ಇಡುವುದಾಗಿ ಎನ್‌ಐಎ ತಿಳಿಸಿದೆ. ಶಂಕಿತ ಉಗ್ರನ ಸುಳಿವು ಸಿಕ್ಕಲ್ಲಿ 08029510900, 8904241100 ನಂಬರಿಗೆ ಕರೆ ಮಾಡುವಂತೆ ಸೂಚನೆ ನೀಡಲಾಗಿದೆ. ಎನ್‌ಐಎ ಟ್ವಿಟ್ಟರ್‌ನಲ್ಲಿ (Twitter) ಶಂಕಿತ ಬಾಂಬರ್‌ನ ಫೋಟೋ ರಿವೀಲ್ ಮಾಡಿದ್ದು, ರಾಮೇಶ್ವರಂ ಬಾಂಬ್ ಬ್ಲಾಸ್ಟ್ ರುವಾರಿಯ ಸುಳಿವು ನೀಡಿದವರಿಗೆ 10 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಇದನ್ನೂ ಓದಿ: ಅತ್ತೆ ಬೇಗ ಸಾಯಬೇಕು- 50 ರೂ. ನೋಟ್ ಮೇಲೆ ಹರಕೆ ಬರೆದ ಸೊಸೆ!

    ಮುಖಕ್ಕೆ ಮಾಸ್ಕ್ ಇಲ್ಲದೇ ಇರುವ ಹತ್ತಿರದ ಫೋಟೋವೊಂದನ್ನು ಎನ್‌ಐಎ ರಿಲೀಸ್ ಮಾಡಿದೆ. ಎನ್‌ಐಎ ಇಂದ ಆರೋಪಿಗಾಗಿ ತೀವ್ರ ತಲಾಷ್ ನಡೆಯುತ್ತಿದೆ. ಇದುವರೆಗೂ ಆರೋಪಿ ಹೋಲುವ ಫೋಟೋ ಇರಲಿಲ್ಲ. ಎನ್‌ಐಎ ಬಿಡುಗಡೆ ಮಾಡಿರುವ ಫೋಟೋದಲ್ಲಿ ಅಲ್ಪ ಸ್ವಲ್ಪ ಮುಖ ಚಹರೆ ಪತ್ತೆಯಾಗಿದೆ. ಇದನ್ನೂ ಓದಿ: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?