Tag: ಎನ್‍ಐಎ ದಾಳಿ

  • ಕೊಯಮತ್ತೂರು ಕಾರು ಸ್ಫೋಟ ಪ್ರಕರಣ – 45ಕ್ಕೂ ಹೆಚ್ಚು ಕಡೆ NIA ದಾಳಿ

    ಕೊಯಮತ್ತೂರು ಕಾರು ಸ್ಫೋಟ ಪ್ರಕರಣ – 45ಕ್ಕೂ ಹೆಚ್ಚು ಕಡೆ NIA ದಾಳಿ

    ಚೆನ್ನೈ: ಕೊಯಮತ್ತೂರಿನಲ್ಲಿ (Coimbatore) ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ (Cylinder Car Blast) ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಚೆನ್ನೈನ 45ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ.

    ಸ್ಫೋಟಕ್ಕೆ ಸಂಬಂಧಿಸಿದ ಶಂಕಿತರು ಮತ್ತು ಬೆಂಬಲಿಗರ ಆಸ್ತಿಗಳನ್ನು ಎನ್‍ಐಎ (National Investigation Agency) ಪರಿಶೀಲನೆ ನಡೆಸುತ್ತಿದ್ದು, ಚೆನ್ನೈನ ಪುದುಪೇಟ್, ಮನ್ನಾಡಿ, ಜಮಾಲಿಯಾ ಮತ್ತು ಪೆರಂಬೂರ್‌ನಲ್ಲಿ ದಾಳಿ ನಡೆಸಿದೆ. ಇಷ್ಟೇ ಅಲ್ಲದೇ, ಕೊಯಮತ್ತೂರಿನ ಕೊಟ್ಟೈಮೇಡು, ಉಕ್ಕಡಂ, ಪೊನ್ವಿಜ ನಗರ ಮತ್ತು ರಥಿನಪುರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇದನ್ನೂ ಓದಿ: ಬಸ್‍ಗಳ ನಡುವೆ ಡಿಕ್ಕಿ – ಭೀಕರ ಅಪಘಾತದಲ್ಲಿ ಮೂವರು ಸಾವು, 12 ಮಂದಿಗೆ ಗಾಯ

    ಅಕ್ಬೋಬರ್ 23ರ ಭಾನುವಾರ ದೀಪಾವಳಿ ಸಮಯದಲ್ಲಿ ಮುಂಜಾನೆ 4.20ರ ಸುಮಾರಿಗೆ ತಮಿಳುನಾಡಿನ ಕೊಯಮತ್ತೂರಿನ ಈಶ್ವರನ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎಲ್‍ಪಿಜಿ ಸಿಲಿಂಡರ್ ಅಳವಡಿಸಿದ್ದ ಮಾರುತಿ 800 ಕಾರೊಂದು ಸ್ಫೋಟಗೊಂಡಿತ್ತು. ಈ ವೇಳೆ 25 ವರ್ಷದ ಜಮೀಶಾ ಮುಬಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದನು. ಈ ಕುರಿತಂತೆ ತನಿಖೆ ನಡೆಸಿದ ಪೊಲೀಸರು ಜಮೀಶಾ ಮುಬಿನ್ ಮನೆಯಲ್ಲಿ ದೇಶಿ ನಿರ್ಮಿತ ಮದ್ದುಗುಂಡುಗಳು ಮತ್ತು ಕೆಲವು ಐಸಿಸ್ ಬೆಂಬಲಿತ ಬರಹಗಳನ್ನು ವಶಪಡಿಸಿಕೊಂಡಿದ್ದರು.

    ಅಕ್ಟೋಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆಯು ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವ ಜವಾಬ್ದಾರಿ ಹೊತ್ತುಕೊಂಡಿದೆ. ಎನ್‍ಐಎ ಭಾರತದ ಪ್ರಾಥಮಿಕ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯಾಗಿದೆ. ಇದನ್ನೂ ಓದಿ: ನಮ್ಮ ಮೆಟ್ರೋಗೆ ಹೈಟೆಕ್ ಟಚ್ – ನಿಲ್ದಾಣದ ಒಳಗೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಪ್ಲ್ಯಾನ್

    Live Tv
    [brid partner=56869869 player=32851 video=960834 autoplay=true]