Tag: ಎನ್‍ಐಎ ಕೋರ್ಟ್

  • ಅನೇಕ ಕೇಸ್‌ಗಳಲ್ಲಿ ಸಾಕ್ಷಿಯಿದ್ದರೂ ತದ್ವಿರುದ್ಧವಾಗಿ ತೀರ್ಪು ಬಂದಿವೆ – ಪ್ರಿಯಾಂಕ್ ಖರ್ಗೆ

    ಅನೇಕ ಕೇಸ್‌ಗಳಲ್ಲಿ ಸಾಕ್ಷಿಯಿದ್ದರೂ ತದ್ವಿರುದ್ಧವಾಗಿ ತೀರ್ಪು ಬಂದಿವೆ – ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಅನೇಕ ಕೇಸ್‌ಗಳಲ್ಲಿ ಸಾಕ್ಷಿಗಳಿದ್ದರೂ ಕೂಡ ತದ್ವಿರುದ್ಧವಾಗಿ ತೀರ್ಪು ಬಂದಿರುವ ಉದಾಹರಣೆಗಳು ಇವೆ. ಮಾಲೆಗಾಂವ್ ಕೇಸ್‌ನಲ್ಲೂ (Malegaon Case) ಹೀಗೆ ಆಗಿದೆ ಎಂದು ಎನ್‌ಐಎ ಕೋರ್ಟ್ ತೀರ್ಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.ಇದನ್ನೂ ಓದಿ: ಸಚಿವ ರಾಜಣ್ಣ ಹನಿಟ್ರ‍್ಯಾಪ್ ಕೇಸ್ ಬಗ್ಗೆ ನನಗೇನು ಗೊತ್ತಿಲ್ಲ: ಡಿಕೆ ಶಿವಕುಮಾರ್

    ಮಾಲೆಗಾಂವ್ ಕೇಸ್‌ನಲ್ಲಿ ಆರೋಪಿಗಳ ಖುಲಾಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆದೇಶದ ಬಗ್ಗೆ ನಾನು ಸಂಪೂರ್ಣವಾಗಿ ನೋಡಿಲ್ಲ. ಆದರೆ ಇತ್ತೀಚೆಗೆ ಯಾವ ರೀತಿಯ ತೀರ್ಪುಗಳು ಬರುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಸಾಕ್ಷಿಗಳಿದ್ದರೂ ಕೂಡಾ ತದ್ವಿರುದ್ಧವಾಗಿ ತೀರ್ಪು ಬರುತ್ತಿವೆ. ಈ ರೀತಿ ತೀರ್ಪು ಬಂದಿರೋದು ಇದೇ ಮೊದಲಲ್ಲ. ವಿಶೇಷವಾಗಿ ಇಂತಹ ಕೇಸ್‌ಗಳಲ್ಲಿ ವಿರುದ್ಧವಾದ ತೀರ್ಪು ಬರುತ್ತಿವೆ ಎಂದು ವಾಗ್ದಾಳಿ ನಡೆಸಿದರು.

    2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳಿಗೂ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂದು ಎನ್‌ಐಎ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ 7 ಜನ ಆರೋಪಿಗಳ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಕೇಸ್‌ನಿಂದ ನನ್ನ ಜೀವನವೇ ಹಾಳಾಯ್ತು: ಪ್ರಜ್ಞಾ ಠಾಕೂರ್

  • ಶರಣಾದ ನಕ್ಸಲರಿಗೆ ಜ.30ರ ವರೆಗೆ ನ್ಯಾಯಾಂಗ ಬಂಧನ

    ಶರಣಾದ ನಕ್ಸಲರಿಗೆ ಜ.30ರ ವರೆಗೆ ನ್ಯಾಯಾಂಗ ಬಂಧನ

    – ಪರಪ್ಪನ ಅಗ್ರಹಾರ ಜೈಲಿಗೆ ಆರೋಪಿಗಳು

    ಬೆಂಗಳೂರು: ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ಮಂದಿ ನಕ್ಸಲರಿಗೆ (Naxals) ಜ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಎನ್‌ಐಎ ಕೋರ್ಟ್ (NIA Court) ಆದೇಶ ಹೊರಡಿಸಿದೆ.

    ಬುಧವಾರ ಸಿಎಂ ಮುಂದೆ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆಯಿತು. ಮಹಿಳಾ ಸಾಂತ್ವನ ಕೇಂದ್ರದಿಂದ ಶರಣಾದ ನಕ್ಸಲರನ್ನು ಮಡಿವಾಳ ಎಫ್‌ಎಸ್‌ಎಲ್‌ಗೆ ಗುರುವಾರ ಪೊಲೀಸರು ಕರೆತಂದರು. ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಾಲ್ವರು ಮಹಿಳೆಯರು ಮತ್ತು ಮತ್ತಿಬ್ಬರು ಪುರುಷರನ್ನ ಮಡಿವಾಳದ ಎಫ್‌ಎಸ್‌ಎಲ್ ಸ್ಪೆಷಲ್ ಸೆಲ್‌ನಲ್ಲಿ ಇರಿಸಲಾಗಿತ್ತು. ಬಳಿಕ ಎಲ್ಲರನ್ನೂ ಅಲ್ಲಿಂದ ಮೆಡಿಕಲ್ ಪರೀಕ್ಷೆಗೆ ಕರೆದೊಯ್ಯಲಾಯಿತು. ಇದನ್ನೂ ಓದಿ: ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

    ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ವಸಂತ ಟಿ.ಎನ್, ಜಿಶಾ ಎಲ್ಲರನ್ನೂ ಎನ್‌ಐಎ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್‌ಗೆ ಹಾಜರು ಪಡಿಸುವ ಮೊದಲು ನಕ್ಸಲ್ ನಿಗ್ರಹ ದಳ ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಂಡಿತು. ಶಸ್ತ್ರಾಸ್ತ್ರಗಳ ಬಗ್ಗೆಯೂ ಸಾಕ್ಷ್ಯ ಕಲೆ ಹಾಕಿತು.

    ಕೊನೆಗೆ ನಕ್ಸಲರನ್ನು ಕೋರ್ಟ್‌ಗೆ ಚಿಕ್ಕಮಗಳೂರು ಪೊಲೀಸರು ಹಾಜರುಪಡಿಸಿದರು. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಐಎ ಕೋರ್ಟ್‌ನ ನ್ಯಾಯಾಧೀಶ ಗಂಗಾಧರ್ ಅವರ ಮುಂದೆ ಎಲ್ಲರನ್ನೂ ಹಾಜರುಪಡಿಸಲಾಯಿತು. ಇದನ್ನೂ ಓದಿ: ನಕ್ಸಲ್ ಶರಣಾಗತಿ – ಮುಂಡಗಾರು ಲತಾ ಟೀಂನ ರವೀಂದ್ರ ಮಿಸ್ಸಿಂಗ್?

    ನ್ಯಾಯಾಧೀಶರ ಮುಂದೆ ಒಬ್ಬೊಬ್ಬರಾಗಿ ತಮ್ಮ ಕುರಿತು ನಕ್ಸಲರು ಮಾಹಿತಿ ನೀಡಿದರು. ಕೋರ್ಟ್ನಲ್ಲಿ ನಕ್ಸಲರಿಂದ ವಕಾಲತು ಪ್ರತಿಗೆ ವಕೀಲರು ಸಹಿ ಪಡೆದರು. ತಮ್ಮ ಕೇಸ್ ನಡೆಸಲು ನಕ್ಸಲರು ವಕೀಲರನ್ನು ನೇಮಕ ಮಾಡಿಕೊಂಡರು. ಅಂತಿಮವಾಗಿ ಕೋರ್ಟ್ ಎಲ್ಲ ನಕ್ಸಲರಿಗೂ ಜ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

  • 12 ವರ್ಷದ ಹಿಂದಿನ ಕೇಸ್: ಐವರು ನಕ್ಸಲರನ್ನು ಅಪರಾಧಿಗಳೆಂದು ಘೋಷಿಸಿದ ಎನ್‍ಐಎ ಕೋರ್ಟ್

    12 ವರ್ಷದ ಹಿಂದಿನ ಕೇಸ್: ಐವರು ನಕ್ಸಲರನ್ನು ಅಪರಾಧಿಗಳೆಂದು ಘೋಷಿಸಿದ ಎನ್‍ಐಎ ಕೋರ್ಟ್

    ದಿಸ್ಪುರ್: 12 ವರ್ಷಗಳ ಹಿಂದಿನ ಪ್ರಕರಣದಲ್ಲಿ ಐವರು ನಕ್ಸಲರನ್ನು ದೋಷಿಗಳೆಂದು ಗುವಾಹಟಿಯ (Guwahati) ಎನ್‍ಐಎ ವಿಶೇಷ ಕೋರ್ಟ್ (Special NIA court) ಬುಧವಾರ ತೀರ್ಪು ಪ್ರಕಟಿಸಿದೆ.

    ಮಣಿಪುರದ ದಿಲೀಪ್ ಸಿಂಗ್, ಅಸ್ಸಾಂನ (Assam) ಸೆಂಜಮ್ ಧೀರೇನ್ ಸಿಂಗ್, ಅರ್ನಾಲ್ಡ್ ಸಿಂಗ್, ಪಶ್ಚಿಮ ಬಂಗಾಳದ ಇಂದ್ರನೀಲ್ ಚಂದಾ ಮತ್ತು ಅಮಿತ್ ಬಾಗ್ಚಿ ಶಿಕ್ಷೆಗೊಳಗಾದ ಅಪರಾಧಿಗಳು. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

    ಪೀಪಲ್ಸ್ ಲಿಬರೇಶನ್ ಆರ್ಮಿ ನಕ್ಸಲ್ ಸಂಘಟನೆ ಸಂಬಂಧದ ಪ್ರಕರಣದಲ್ಲಿ ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದರು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಐಪಿಸಿ ಸೆಕ್ಷನ್ (Indian Penal Code) 121 ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (Unlawful Activities Prevention) ಕಾಯಿದೆ 1967 ರ ಸೆಕ್ಷನ್ 18, 18 ಎ ಮತ್ತು 39 ರ ಆರೋಪದಡಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿದೆ.

    ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಪಿಎಲ್‍ಎ (PLA) ಸಹಾಯದಿಂದ ಸಿಪಿಐ (ಮಾವೋವಾದಿ) ನಕ್ಸಲರು ದೇಶವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದೆ ಎಂಬ ಮಾಹಿತಿ ಮೇರೆಗೆ 2011ರ ಜು. 1ರಂದು ಎನ್‍ಐಎ (NIA) ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು.

    ತನಿಖೆಯ ವೇಳೆ ಕೋಲ್ಕತ್ತಾದಲ್ಲಿ ಪಿಎಲ್‍ಎ ಕಚೇರಿ ತೆರೆದಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ 2010 ರಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದಿದ್ದಕ್ಕಾಗಿ ಪಿಎಲ್‍ಎನ ಅಧ್ಯಕ್ಷ ಸಿಪಿಐ (Maoist) ಪ್ರಧಾನ ಕಾರ್ಯದರ್ಶಿಯನ್ನು ಅಭಿನಂದಿಸಿದ್ದಾರೆ ಎಂಬುದು ತಿಳಿದು ಬಂದಿತ್ತು.

    ಪಿಎಲ್‍ಎ, ಮಾವೋವಾದಿ ಕಾರ್ಯಕರ್ತರಿಗೆ ಬೆಂಬಲ ನೀಡಿದೆ. ನಿರಂತರವಾಗಿ ಇಮೇಲ್ ಮೂಲಕ ಸಂಪರ್ಕದಲ್ಲಿವೆ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಅಲ್ಲದೆ ಅಪರಾಧಿಗಳು ಭಾರತದ ಒಳಗೆ ಮತ್ತು ಹೊರಗೆ ವಿವಿಧ ಸ್ಥಳಗಳಿಗೆ ನಕಲಿ ಗುರುತಿನ ಚೀಟಿಗಳನ್ನು ಬಳಸಿ ಪ್ರಯಾಣಿಸಿದ್ದಾರೆ. ಅಲ್ಲದೆ ಅವುಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದ್ದ ಎನ್‍ಐಎ 2012 ರ ಮೇ 21 ಮತ್ತು ನವೆಂಬರ್ 16 ರಂದು ಹಾಗೂ ಜುಲೈ 31, 2014 ರಂದು ಗುವಾಹಟಿಯ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ಆರೋಪ ಪಟ್ಟಿಗಳನ್ನು ಸಲ್ಲಿಸಿತ್ತು. ಇದನ್ನೂ ಓದಿ: ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು