Tag: ಎನ್ಆರ್ ಸಿ

  • ನಾನೇನು ಕ್ರೈಂ ಮಾಡಿದ್ದೀನಾ- ದೇಶದ್ರೋಹಿ ಅಮೂಲ್ಯ ಪೊಲೀಸರಿಗೆ ಮರುಪ್ರಶ್ನೆ

    ನಾನೇನು ಕ್ರೈಂ ಮಾಡಿದ್ದೀನಾ- ದೇಶದ್ರೋಹಿ ಅಮೂಲ್ಯ ಪೊಲೀಸರಿಗೆ ಮರುಪ್ರಶ್ನೆ

    ಬೆಂಗಳೂರು: ನಾನೇನು ಕ್ರೈಂ ಮಾಡಿದ್ದೀನಾ ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ದೇಶದ್ರೋಹಿ ಅಮೂಲ್ಯಾ ಲಿಯೋನಾ ಪೊಲೀಸರಿಗೆ ಮರುಪ್ರಶ್ನೆ ಮಾಡಿದ್ದಾಳೆ.

    ಪಾಕಿಸ್ತಾನ ಪರ ಘೋಷಣೆ ಕೂಗಿ ಪೊಲೀಸ್ ವಶದಲ್ಲಿರುವ ಅಮೂಲ್ಯಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬುಧವಾರ ಬೆಳಗ್ಗೆಯಿಂದ ಆರೋಪಿ ಅಮೂಲ್ಯಾಳನ್ನು ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ಪೊಲೀಸರಿಗೆ ಮರುಪ್ರಶ್ನೆ ಮಾಡುತ್ತಿದ್ದು, ನಾನೇನು ಕ್ರೈಂ ಮಾಡಿದ್ದೀನಾ ನಿಮ್ಮ ಕೆಲಸವನ್ನು ನೀವು ಮಾಡಿ ಎಂದು ಉತ್ತರ ನೀಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

    ಅಷ್ಟೇ ಅಲ್ಲ ಆರೋಪಿ ಅಮೂಲ್ಯ ಪೊಲೀಸ್ ಠಾಣೆಯನ್ನು ಅರಮನೆಯನ್ನಾಗಿ ಮಾಡಿಕೊಂಡಿದ್ದು, ಬೆಳಗ್ಗೆ ಎಂಟು ಗಂಟೆಗೆ ಎದ್ದಿದ್ದಾಳೆ. ಸದ್ಯ ಆರೋಪಿ ಅಮೂಲ್ಯ ಲಿಯೋನಾಳನ್ನು ವಿಚಾರಣೆ ನಡೆಸಲಾಗುತ್ತಿದೆ.

    ಫ್ರೀಡಂ ಪಾರ್ಕಿನಲ್ಲಿ ನಡೆದ ಸಿಎಎ, ಎನ್‍ಆರ್ ಸಿ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿ ದೇಶದ್ರೋಹದ ಆರೋಪದಡಿ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಪರಪ್ಪನ ಅಗ್ರಹಾರ ಸೇರಿದ್ದಳು. ಅಮೂಲ್ಯ ಲಿಯೋನಾಳನ್ನು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದ್ದು, ಹೀಗಾಗಿ ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಐದು ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಅಲ್ಲದೆ ಆರೋಪಿ ಅಮೂಲ್ಯಾ ವಾಸವಿದ್ದ ಪಿ.ಜಿ.ಯನ್ನು ಪೊಲೀಸರು ಮಂಗಳವಾರ ರಾತ್ರಿ ಸ್ಪಾಟ್ ಮಹಜರು ಮಾಡಿದ್ದಾರೆ.

  • ಶಾಹಿನ್‍ಬಾಗ್ ಮಾದರಿಯಲ್ಲಿಯೇ ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪೌರತ್ವ ಸತ್ಯಾಗ್ರಹ

    ಶಾಹಿನ್‍ಬಾಗ್ ಮಾದರಿಯಲ್ಲಿಯೇ ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪೌರತ್ವ ಸತ್ಯಾಗ್ರಹ

    ಉಡುಪಿ: ನಗರದಲ್ಲಿ ಶಾಹಿನ್‍ಬಾಗ್ ಮಾದರಿ ಸತ್ಯಾಗ್ರಹಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳ ನಡೆಯುತ್ತಿದ್ದು, ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ.

    ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಶಾಹಿನ್‍ಬಾಗ್ ಎಂದು ಹೆಸರಿಡಲಾಗಿದೆ. ಶಾಹಿನ್‍ಬಾಗ್ ಸಂಯೋಜನಾ ಸಮಿತಿ ಸತ್ಯಾಗ್ರಹವನ್ನು ಆಯೋಜನೆ ಮಾಡಿದೆ. ಸಂವಿಧಾನ ಸಂರಕ್ಷಕಾ ಸಮಿತಿ ಬೆಂಬಲ ನೀಡಿದೆ. ಇಂದು ಸಂಜೆ 5.30 ಸುಮಾರಿಗೆ ಸತ್ಯಾಗ್ರಹಕ್ಕೆ ಚಾಲನೆ ಸಿಗಲಿದೆ.

    ಮಸೀದಿ ರಸ್ತೆಯ ಖಾಸಗಿ ಜಮೀನಿನಲ್ಲಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಲಾಗಿದ್ದು, ತಯಾರಿ ನಡೆಯುತ್ತಿದೆ. ಸಂವಿಧಾನ ಹಾಗು ಪೌರತ್ವ ರಕ್ಷಣೆ ಉದ್ದೇಶ ಇಟ್ಟುಕೊಂಡು ಸತ್ಯಾಗ್ರಹಕ್ಕೆ ಸಿದ್ಧತೆ ನಡೆಯುತ್ತಿದ್ದು, ಮೂರು ಪಾಳಿಯಲ್ಲಿ ಹಲವಾರು ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

     

  • CAA, NRCಗೆ ಜೆಡಿಎಸ್ ಯಾವತ್ತೂ ವಿರೋಧ: ಹೆಚ್‍ಡಿಕೆ ಸ್ಪಷ್ಟನೆ

    CAA, NRCಗೆ ಜೆಡಿಎಸ್ ಯಾವತ್ತೂ ವಿರೋಧ: ಹೆಚ್‍ಡಿಕೆ ಸ್ಪಷ್ಟನೆ

    ಬೆಂಗಳೂರು : ಸಿಎಎ, ಎನ್.ಆರ್.ಸಿ. ಮತ್ತು ಎನ್.ಪಿ.ಆರ್.ಗೆ ಜೆಡಿಎಸ್ ಯಾವತ್ತು ವಿರೋಧ ಮಾಡುತ್ತೆ. ಕಾಯ್ದೆ ಜಾರಿಗೆ ಜೆಡಿಎಸ್ ಪ್ರಬಲ ವಿರೋಧ ಮಾಡುತ್ತೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನ ಖುದಾಸ್ ಸಾಹೇಬ್ ಈದ್ಗಾ ಹಾಲ್ ನಲ್ಲಿ ಜಾಯಿಂಟ್ ಆಕ್ಷನ್ ಕಮಿಟಿ ಕರ್ನಾಟಕ ಆಯೋಜನೆ ಮಾಡಿದ್ದ ಸಿಎಎ ವಿರೋಧಿ ಸಭೆಯಲ್ಲಿ, ಮುಸ್ಲಿಂ ಮುಖಂಡರು ಜೊತೆ ಸಭೆ ಬಳಿಕ ಅವರು ನಾವು ಕೊನೆವರೆಗೂ ಮುಸ್ಲಿಂ ಸಮುದಾಯದ ಜೊತೆ ಇರುತ್ತೇವೆ ಅಂತ ಹೇಳಿದರು.

    ಇಡೀ ಸಭೆಯಲ್ಲಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದರು. ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿ, ಆರ್.ಎಸ್.ಎಸ್ ಕೊಡುಗೆ ಏನು ಇಲ್ಲ. ಕೇವಲ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಬಿಜೆಪಿ ಕೆಲಸ ಮಾಡ್ತಿದೆ. ಈಗ ಬಿಜೆಪಿ ಸಿಎಎ ಜಾರಿಗೆ ತರೋ ಮೂಲಕ ಮುಸ್ಲಿಂ ವಿರುದ್ಧ ಕೆಲಸ ಮಾಡುತ್ತಿದೆ ಅಂತ ಆಕ್ರೋಶ ಹೊರ ಹಾಕಿದ್ರು.

    ಈ ಕಾಯ್ದೆ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಮುಸ್ಲಿಂ ಸಮುದಾಯದ ಮೇಲೆ ಕೆಟ್ಟು ಹೆಸರು ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿ ಒಂದು ಸಮುದಾಯವನ್ನ ಟಾರ್ಗೆಟ್ ಮಾಡಲು ಹೀಗೆ ಮಾಡುತ್ತಿದೆ ಎಂದು ಆರೋಪಿಸಿದರು.

    ಪ್ರಧಾನಿ ಮೋದಿ ಅವರು ಜಿಯಾ ವುಲ್ಲಾ ಮಾದರಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈ ಕಾಯ್ದೆ ಜಾರಿಯಾದ್ರೆ ದೇಶದಾದ್ಯಂತ 7.5 ಕೋಟಿ ಜನರಿಗೆ ಅನ್ಯಾಯ ಆಗುತ್ತೆ. ಸಂವಿಧಾನವನ್ನು ತಿರುಚುವ ಕೆಲಸ ಬಿಜೆಪಿ ಮಾಡುತ್ತಿದ್ದು, ಇದಕ್ಕೆ ಜೆಡಿಎಸ್ ಬೆಂಬಲ ಕೊಡಲ್ಲ. ಸಿಎಎ ವಿರೋಧಿ ಹೋರಾಟಕ್ಕೆ ಜೆಡಿಎಸ್ ಸದಾ ಬೆಂಬಲ ನೀಡುತ್ತೆ ಅಂತ ಭರವಸೆ ನೀಡಿದರು.

  • ಸಾವರ್ಕರ್ ಬದಲು ಗೋಡ್ಸೆಗೆ ಭಾರತರತ್ನ ಕೊಡಿ: ಹೆಚ್‍ಡಿಕೆ ವಿವಾದ

    ಸಾವರ್ಕರ್ ಬದಲು ಗೋಡ್ಸೆಗೆ ಭಾರತರತ್ನ ಕೊಡಿ: ಹೆಚ್‍ಡಿಕೆ ವಿವಾದ

    ಬೆಂಗಳೂರು : ಸಿಎಎ, ಎನ್‍ಆರ್ ಸಿ ವಿರೋಧ ಪ್ರತಿಭಟನೆಗಳು, ಸಭೆಗಳು ಹೊಸ ಹೊಸ ವಿವಾದಗಳಿಗೆ ಎಡೆ ಮಾಡಿಕೊಡುತ್ತಿದೆ. ನಿನ್ನೆ ಸಿಎಎ, ಎನ್‍ಆರ್ ಸಿ  ವಿರೋಧಿ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

    ಬೆಂಗಳೂರಿನ ಖುದಾಸ್ ಸಾಹೇಬ್ ಈದ್ಗಾ ಹಾಲ್ ನಲ್ಲಿ ಮುಸ್ಲಿಂ ಮುಖಂಡರು ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಗಾಂಧೀಜಿ ಹಂತಕನಿಗೆ ಭಾರತ ರತ್ನ ಕೊಡಿ ಅಂತ ವಿವಾದದ ಹೇಳಿಕೆ ನೀಡಿದರು.

    ಜಾಯಿಂಟ್ ಆಕ್ಷನ್ ಕಮಿಟಿ ಕರ್ನಾಟಕ ಆಯೋಜನೆ ಮಾಡಿದ್ದ ಸಭೆಯಲ್ಲಿ ಮಾತನಾಡಿ ಕುಮಾರಸ್ವಾಮಿ, ಬಿಜೆಪಿ ಒಂದು ಸಮುದಾಯ ತುಳಿಯಲು ಸಿಎಎ, ಎನ್‍ಆರ್ ಸಿ ಜಾರಿಗೆ ತಂದಿದೆ. ಮುಸ್ಲಿಮರ ಶಕ್ತಿ ಕುಂದಿಸುವ ಕೆಲಸ ಬಿಜೆಪಿ ಮಾಡ್ತಿದೆ. ಮುಸ್ಲಿಮರ ವಿರುದ್ಧ ಹಿಡನ್ ಅಜೆಂಡಾ ಇಟ್ಟುಕೊಂಡು ಬಿಜೆಪಿ ಕೆಲಸ ಮಾಡ್ತಿದೆ ಅಂತ ಕಿಡಿಕಾರಿದ್ರು. ಈ ವೇಳೆ ಸಾವರ್ಕರ್ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ ಸಾವರ್ಕರ್ ಭಾರತ ರತ್ನ ಕೊಡೋದಕ್ಕೆ ಬಿಜೆಪಿ ಮುಂದಾಗಿದೆ. ಸಾವರ್ಕರ್ ಗೆ ಭಾರತರತ್ನ ಕೊಡೋ ಬದಲು ನಾಥೂರಾಮ್ ಗೋಡ್ಸೆಗೆ ಬಿಜೆಪಿ ಅವರು ಭಾರತರತ್ನ ಕೊಡಲಿ ಅಂತ ವಿವಾದಾತ್ಮಕ ಹೇಳಿಕೆ ಕೊಟ್ಟರು.

  • ಸರ್ವಾಧಿಕಾರಿಯೊಬ್ಬ ಕ್ರೂರಿಯಾಗಿ ಬದಲಾಗುತ್ತಾನೆ: ಸಿದ್ದರಾಮಯ್ಯ

    ಸರ್ವಾಧಿಕಾರಿಯೊಬ್ಬ ಕ್ರೂರಿಯಾಗಿ ಬದಲಾಗುತ್ತಾನೆ: ಸಿದ್ದರಾಮಯ್ಯ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ಸರ್ವಾಧಿಕಾರಿಯಾಗಿದ್ದು, ಕ್ರೂರಿಯಾಗಿ ಬದಲಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ, ಸಿಎಎ ಮತ್ತು ಎನ್.ಆರ್.ಸಿ ವಿಚಾರದಲ್ಲಿ ಮೋದಿ ಹಾಗೂ ಅಮಿತ್ ಶಾ ಇಬ್ಬರು ಸುಳ್ಳು ಹೇಳುತ್ತಿದ್ದಾರೆ. ಒಂದೊಂದು ವೇದಿಕೆಯಲ್ಲಿ ಒಂದೊಂದು ರೀತಿ ಮಾತನಾಡುತ್ತಾರೆ. ಯಾರು ಸತ್ಯ ಹೇಳುತ್ತಿದ್ದಾರೆ ಅಂತಾ ಅವರೇ ಹೇಳಬೇಕು. ನಾನು ಹುಟ್ಟಿದ ದಿನಾಂಕವೇ ನನಗೆ ಗೊತ್ತಿಲ್ಲ. ನನ್ನ ಹುಟ್ಟಿದ ದಿನಾಂಕವನ್ನಾ ನನ್ನ ಶಾಲೆ ಟೀಚರ್ ಬರೆದಿದ್ದು. ಇನ್ನು ನಮ್ಮ ಅಪ್ಪ – ಅವ್ವ ಹುಟ್ಟಿದ ದಿನಾಂಕವನ್ನು ಎಲ್ಲಿ ತರೋದು. ಒಬ್ಬ ಸರ್ವಾಧಿಕಾರಿ ಕ್ರೂರಿಯಾಗಿ ಬದಲಾಗುತ್ತಾನೆ. ಹಿಟ್ಲರ್ ಕೂಡ ತನ್ನ ಕೊನೆ ದಿನಗಳಲ್ಲಿ ಕ್ರೂರಿಯಾಗಿ ಬದಲಾಗಿದ್ದ ಎಂದರು.

    ಜೆಎನ್‍ಯು ದಾಳಿ ಸರ್ಕಾರಿ ಪ್ರಯೋಜಿತ ಅಟ್ಯಾಕ್. ಯಾರು ಏಟು ತಿಂದಿದ್ದಾರೋ ಅವರ ಮೇಲೆ ಎಫ್ ಐಆರ್ ಮಾಡಿದ್ದಾರೆ. ಸಿಎಎ ಮತ್ತು ಎನ್‍ಆರ್ ಸಿಯಲ್ಲಿ ಸತ್ತಿದ್ದು ಕೇವಲ ಮುಸ್ಲಿಂಮರಲ್ಲ ಹಿಂದೂಗಳು ಸತ್ತಿದ್ದಾರೆ. ಸಿಎಎ ವಿರೋಧಿಸುತ್ತಾರೋ ಅಂತಹವರ ಚಲನಚಿತ್ರಗಳನ್ನು ನೋಡಬೇಡಿ ಅಂತಾ ಪ್ರಚಾರ ಮಾಡುತ್ತಿದ್ದಾರೆ. ಜನರೇನೂ ಕ್ರೂರಿಗಳ ಮಾತನ್ನು ಕೇಳಿ ಬೀಡುತ್ತಾರಾ ಎಂದು ವಾಗ್ದಾಳಿ ನಡೆಸಿದರು.

  • FACT CHECK- ಫೋಟೋ ಹಿಂದಿನ ಅಸಲಿ ಸತ್ಯ ಬಯಲು

    FACT CHECK- ಫೋಟೋ ಹಿಂದಿನ ಅಸಲಿ ಸತ್ಯ ಬಯಲು

    ಳೆದ ಕೆಲ ದಿನಗಳಿಂದ ಮಹಿಳಾ ಪೊಲೀಸ್ ಪೇದೆ ಪರೋಕ್ಷವಾಗಿ ಪೌರತ್ವ ಕಾಯ್ದೆ (ಸಿಎಎ) ಪರವಾಗಿ ಭಿತ್ತಿ ಪತ್ರ ಹಿಡಿದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವರು ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಬಹುತೇಕರು ಈ ಫೋಟೋವನ್ನು ತಮ್ಮ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸುತ್ತಿದ್ದಾರೆ.

    ನಕಲಿ ಫೋಟೋದಲ್ಲಿ ಏನಿದೆ?: ಜನಸಂದಣಿಯಲ್ಲಿ ಮಹಿಳಾ ಪೇದೆಯೊಬ್ಬರು ಭಿತ್ತಿ ಪತ್ರವೊಂದನ್ನು ತೋರಿಸುತ್ತಿದ್ದಾರೆ. ಎಡಿಟ್ ಮಾಡಲಾಗಿರುವ ಫೋಟೋದಲ್ಲಿ, “ಇಂದು ಅಕ್ರಮ ವಲಸಿಗರನ್ನೇ ಓಡಿಸಲೊಪ್ಪದ ಆ ಪಕ್ಷ, ಅಂದು ಬ್ರಿಟಿಷರನ್ನು ಓಡಿಸಿತ್ತು ಎಂದರೆ ನಂಬಬಹುದೇ?!!!” ಎಂದು ಬರೆಯಲಾಗಿದೆ.

    ಫೋಟೋ ಅಸಲಿ ಕಹಾನಿ: ನವೆಂಬರ್ ನಲ್ಲಿ ದೆಹಲಿ ಪೊಲೀಸರು ಮತ್ತು ವಕೀಲರ ನಡುವೆ ಸಂಘರ್ಷ ಉಂಟಾಗಿತ್ತು. ಅಂದು ದೆಹಲಿಯ ವಕೀಲರು ರಸ್ತೆಗಿಳಿದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇತ್ತ ಪೊಲೀಸರು ಸಹ ಶಾಂತಿಯುತವಾಗಿ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಇದೇ ಮಹಿಳಾ ಪೊಲೀಸ್ ಪೇದೆ, ದೆಹಲಿ ಹೈಕೋರ್ಟ್ ಆವರಣದಲ್ಲಿ ಪೊಲೀಸರ ಮೇಲಿನ ಹಲ್ಲೆ ಖಂಡಿಸಿ ಭಿತ್ತಿ ಪತ್ರ ಹಿಡಿದಿದ್ದರು.

    ಇಂದು ಅದೇ ಫೋಟೋವನ್ನು ಎಡಿಟ್ ಮಾಡಲಾಗಿದ್ದು, ಭಿತ್ತಿ ಪತ್ರದಲ್ಲಿಯ ಸಾಲುಗಳನ್ನು ಬದಲಾಯಿಸಲಾಗಿದೆ. ಫೋಟೋದ ಸತ್ಯವನ್ನು ಅರಿಯದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ನವೆಂಬರ್ 5ರಂದು ಈ ಫೋಟೋ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು.

     

    ಏನಿದು ಗಲಾಟೆ: ನವೆಂಬರ್ 2, 2019ರಂದು ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಪೊಲೀಸರು ಮತ್ತು ವಕೀಲರ ಮಧ್ಯೆ ಸಂಘರ್ಷ ಉಂಟಾಗಿತ್ತು. ಈ ಗಲಾಟೆಯಲ್ಲಿ ಪೊಲೀಸರ ಗುಂಡೇಟಿಗೆ ಓರ್ವ ವಕೀಲ ಗಾಯಗೊಂಡಿದ್ದರು. ಪೊಲೀಸರ ನಡೆಯನ್ನು ಖಂಡಿಸಿ ದೆಹಲಿ ಪೊಲೀಸರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ತದನಂತರ ವಕೀಲರ ಗುಂಪೊಂದು ಪೊಲೀಸ್ ಅಧಿಕಾರಿಯನ್ನು ಥಳಿಸಿರುವ ವಿಡಿಯೋ ವೈರಲ್ ಆಗಿತ್ತು. ಇತ್ತ ದೆಹಲಿ ಪೊಲೀಸರು ‘ನಮಗೆ ರಕ್ಷಣೆ ಕೊಡಿ, ನಾವು ಕೂಡ ಮನುಷ್ಯರು’ ಎಂದು ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟಿಸಿದ್ದರು.

  • ಪೌರತ್ವ ಕಾಯ್ದೆ ವಿರುದ್ಧ ನಿಲ್ಲದ ಪ್ರತಿಭಟನೆಗಳು

    ಪೌರತ್ವ ಕಾಯ್ದೆ ವಿರುದ್ಧ ನಿಲ್ಲದ ಪ್ರತಿಭಟನೆಗಳು

    ರಾಯಚೂರು: ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಸಹ ಪ್ರತಿಭಟನೆಗಳು ನಡೆದವು. ನಗರದ ಶಾಹೀ ಜಾಮೀಯಾ ಮಸೀದಿಯಿಂದ ಮೆರವಣಿಗೆ ಬಂದ ಪ್ರತಿಭಟನಾಕಾರರು ತೀನ್ ಕಂದಿಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಮಾಜ್ ಬಳಿಕ ಪ್ರತಿಭಟನೆಗೆ ಮುಂದಾದ ಮುಸ್ಲಿಂ ಸಂಘಟನಕಾರರನ್ನ ಪೊಲೀಸರು ಬಂಧಿಸಿ ಕರೆದೊಯ್ದರು.

    ಪ್ರತಿಭಟನೆಗೆ ಅವಕಾಶ ಮಾಡಿಕೊಡದ ಪೋಲಿಸರು ಹೋರಾಟ ನಡೆಸದಂತೆ ಮುನ್ನೆಚ್ಚರಿಕೆ ನೀಡಿದ್ದರು. ಆದರೂ ಹೋರಾಟಗಾರರು ಪ್ರತಿಭಟನೆಗಿಳಿದ ಹಿನ್ನೆಲೆಯಲ್ಲಿ ಸುಮಾರು 20 ಜನರನ್ನು ಬಂಧಿಸಿದರು. ಸ್ಥಳದಲ್ಲಿ ಸೇರಿದ್ದ ಉಳಿದ ಪ್ರತಿಭಟನಾಕಾರರನ್ನು ಪೋಲಿಸರು ಚದುರಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿರವಾರ ಪಟ್ಟಣದಲ್ಲೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುಸ್ಲಿಂ ಹಾಗೂ ದಲಿತಪರ ಸಂಘಟನೆಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದವು. ಧರ್ಮಾಧಾರಿತ ಕಾಯ್ದೆ ಬೇಡ ಎಂದು ಘೋಷಣೆ ಕೂಗಿ ಹೋರಾಟಗಾರರು ಪ್ರತಿಭಟನೆ ನಡೆಸಿದರು.

  • ರಾಜಕೀಯಗೋಸ್ಕರ ಆತ್ಮ ವಂಚನೆ ಮಾಡಿಕೊಳ್ಳಲ್ಲ: ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್ ಮಾನ್ಪಡೆ

    ರಾಜಕೀಯಗೋಸ್ಕರ ಆತ್ಮ ವಂಚನೆ ಮಾಡಿಕೊಳ್ಳಲ್ಲ: ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್ ಮಾನ್ಪಡೆ

    ತುಮಕೂರು : ನಾನು ರಾಜಕೀಯಕ್ಕಾಗಿ ನನ್ನ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಎನ್‍ಆರ್ ಸಿ ಹಾಗೂ ಸಿಎಎ ಕಾಯ್ದೆಯಿಂದ ನನ್ನ ಭಾರತೀಯ ಕುಲ ಬಾಂಧವರಿಗೆ ಯಾವುದೇ ತೊಂದರೆ ಇಲ್ಲ ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್ ಮಾನ್ಪಡೆ ಸ್ಪಷ್ಟನೆ ನೀಡಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎನ್‍ಆರ್ ಸಿ ಹಾಗೂ ಸಿಎಎ ಯಿಂದ ಒಳ್ಳೆಯದಾಗುತ್ತದೆಯೇ ಹೊರತು ಕೆಟ್ಟದಾಗಲ್ಲ. ಕಾಂಗ್ರೆಸ್‍ನವರ ಹೇಳಿಕೆಗೆ ಮುಸ್ಮಿಂ ಬಾಂಧವರು ಕಿವಿಗೊಡಬೇಡಿ. ಕಾಂಗ್ರೆಸ್‍ನವರು ಮುಸ್ಲಿಮರಲ್ಲಿ ತಪ್ಪು ಮಾಹಿತಿ ನೀಡುವುದರ ಜೊತೆಗೆ ವಿಷ ತುಂಬುತ್ತಿದ್ದಾರೆ ಎಂದು ಮಾನ್ಪಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಯ್ದೆ ಕುರಿತ ವಿವರವಾದ ಅಂಶ ಗೆಜೆಟ್ ನೋಟಿಫಿಕೇಷನ್‍ನಲ್ಲಿ ಪ್ರಕಟವಾಗಲಿದೆ. ಗೆಜೆಟ್ ಬಂದ ಬಳಿಕ ಎಲ್ಲಾ ಪತ್ರಿಕೆಗಳಲ್ಲೂ ವಿವರವಾದ ಜಾಹೀರಾತನ್ನ ಬಿಜೆಪಿ ನೀಡಲಿದೆ. ಈ ಮೂಲಕ ಜನರಲ್ಲಿರುವ ತಪ್ಪು ಅಭಿಪ್ರಾಯ ಹಾಗೂ ಕಾಂಗ್ರೆಸ್‍ನ ತಪ್ಪು ಆಪಾದನೆಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.

    ದಾಖಲೆ ಇಲ್ಲ ಎಂದು ಭಯಪಡುವುದು ಬೇಡ. ಒಂದಲ್ಲಾ ಒಂದು ಕಡೆ ದಾಖಲೆ ಸಿಕ್ಕೆ ಸಿಗುತ್ತದೆ. ಸ್ವತಃ ಅಧಿಕಾರಿಗಳೇ ತಮ್ಮ ಬಳಿ ಬಂದು ಅರಿವು ಮೂಡಿಸಲಿದ್ದಾರೆ. ಕಾಯ್ದೆ ಬಗ್ಗೆ ಇರುವ ಭಯ ಬಿಟ್ಟು ನೆಮ್ಮದಿಯಿಂದ ಇರುವಂತೆ ಅನ್ವರ್ ಮನ್ಪಾಡೆ ವಿನಂತಿಸಿಕೊಂಡಿದ್ದಾರೆ.

  • ‘ಪೌರತ್ವ’ ಕಾಯ್ದೆಯನ್ನು ಸ್ವಾಗತಿಸಿದ ಚಿದಾನಂದ ಮೂರ್ತಿ

    ‘ಪೌರತ್ವ’ ಕಾಯ್ದೆಯನ್ನು ಸ್ವಾಗತಿಸಿದ ಚಿದಾನಂದ ಮೂರ್ತಿ

    – ಗೋಲಿಬಾರ್ ಮಾಡಿದ್ದು ತಪ್ಪು

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ಜಾರಿ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಎಲ್ಲೆಡೆ ಪ್ರತಿಭಟನೆ ಜೋರಾಗಿದ್ದು, ರಾಜ್ಯದಲ್ಲೂ ಗೋಲಿಬಾರ್ ನಡೆದು ಇಬ್ಬರು ಮೃತ ಪಟ್ಟಿದ್ದಾರೆ. ಪರ ವಿರೋಧ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರು ಪ್ರತಿಕ್ರಿಯಿಸಿದ್ದು, ಪೌರತ್ವ ಕಾಯ್ದೆಯ ಜಾರಿ ಮಾಡಿರುವುದನ್ನು ಸ್ವಾಗತ ಮಾಡಿದ್ದಾರೆ.

    ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಮುಗಿಸಿ ಟೌನ್ ಹಾಲ್ ಬಳಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಯನ್ನು ಸ್ವಾಗತಿಸುತ್ತೇನೆ. ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಗೆ ಸಂಪೂರ್ಣ ಬೆಂಬಲವಿದೆ. ಯಾವುದೇ ಧರ್ಮದವರಿಗೆ ಅನ್ಯಾಯ ಮಾಡುವ ಕ್ರಮ ಈ ಕಾಯ್ದೆಯದ್ದಲ್ಲ. ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಕ್ರೈಸ್ತ ಮತ್ತು ಪಾರ್ಸಿಗಳಿಗೆ ಪೌರತ್ವ ಕೊಡುವುದು ಸರಿಯಾದ ಕ್ರಮ. ಇದನ್ನು ವಿರೋಧಿಸುವುದು ಸರಿಯಲ್ಲ ಎಂದರು.

    ಇನ್ನೂ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಕೆಲವರು ಈ ಬಗ್ಗೆ ತಿಳಿಯದೇ ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲೂ ಕೂಡ ಹಿಂಸಾತ್ಮಕವಾಗಿ ಹೋರಾಟ ಮಾಡಬಾರದು. ಅಲ್ಲದೇ ರಾಜ್ಯದಲ್ಲಿ ಗೋಲಿಬಾರ್ ಆಗಿದ್ದು ಕೂಡ ತಪ್ಪೇ. ಗೋಲಿಬಾರ್ ಮಾಡಬಾರದಿತ್ತು. ಪ್ರತಿಭಟನೆ ಮಾಡುವುದಾದರೆ ಹಿಂಸಾತ್ಮಕ ನಡೆ ಸಲ್ಲದು ಅಹಿಂಸಾತ್ಮಕ ಹೋರಾಟ ಮಾಡಲಿ ಎಂದರು.

  • ರಾಹುಲ್‍ಗಾಂಧಿ ಪಾಕಿಸ್ತಾನದ ಮೂಲದ ಏಜೆಂಟ್: ಯತ್ನಾಳ್

    ರಾಹುಲ್‍ಗಾಂಧಿ ಪಾಕಿಸ್ತಾನದ ಮೂಲದ ಏಜೆಂಟ್: ಯತ್ನಾಳ್

    ವಿಜಯಪುರ: ರಾಷ್ಟ್ರೀಯ ಪೌರತ್ವ ಕಾಯ್ದೆ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿರುವ ಕೆಲಸವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೂಲ ಪಾಕಿಸ್ತಾನವಾಗಿದ್ದು, ಅವರು ಪಾಕ್ ಏಜೆಂಟ್‍ರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

    ಕ್ಷೇತ್ರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಂತಹವರಿಗೆ ಆಶ್ರಯ ನೀಡಲು ಪ್ರಧಾನಿಗಳು, ಗೃಹ ಸಚಿವ ಅಮಿತ್ ಶಾ ಚಿಂತನೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಹಾಗೂ ಕೆಲ ಜಾತ್ಯಾತೀತ ಎನ್ನುವ ಕೋಮುವಾದಿ ಪಕ್ಷಗಳು ಒಂದು ಕೋಮಿನ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಆದ್ದರಿಂದ ಪೌರತ್ವ ಕಾನೂನು ಪರ ನಗರದಲ್ಲಿ ಇದೇ ಶನಿವಾರ ಬೃಹತ್ ರ್ಯಾಲಿ ನಡೆಸುತ್ತೇವೆ ಎಂದು ತಿಳಿಸಿದರು.

    ನಾನು ಹಿಂದೆ ಕುಂತು ಆಟ ಆಡುವ ರಾಜಕಾರಣಿ ಅಲ್ಲ. ಅಭಿಮಾನಿಗಳನ್ನು ಮುಂದೆ ಬಿಟ್ಟು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು. ಆ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವವರಿಗೆ ಟಾಂಗ್ ನೀಡಿದರು. ಸಚಿವ ಸ್ಥಾನ ನೀಡುವುದು ಸಿಎಂ ಮತ್ತು ಹೈಕಮಾಂಡ್‍ಗೆ ಬಿಟ್ಟಿದ್ದು. ಉಪಚುನಾವಣೆಯಲ್ಲಿ ನಾನು ಪ್ರವಾಸ ಮಾಡಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಸೋಲು ಕಾಣುತ್ತಿದ್ದ ಕ್ಷೇತ್ರಗಳಲ್ಲಿ ಬಾರಿ ಗೆಲವು ಸಿಕ್ಕಿದೆ. ಪರಿಣಾಮ ಸ್ಥಿರ ಸರ್ಕಾರ ಲಭಿಸಿದ್ದು, ಇದನ್ನು ಪಕ್ಷ ಗಮನಿಸುತ್ತಿದೆ ಎಂದು ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂಬುವುದನ್ನು ತಿಳಿಸಿದರು.

    ವಾಜಪೇಯಿ ಸರ್ಕಾರದಲ್ಲಿ ನನ್ನನ್ನು ಕರೆದು ಕೇಂದ್ರಮಂತ್ರಿ ಮಾಡಿದ್ದರು. ನನಗೆ ಪಕ್ಷ ಹಾಗೂ ಸರ್ಕಾರ ಮುಖ್ಯ. ನಾವು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದರೆ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತೆ. ಸರ್ಕಾರದ ಹಿತದೃಷ್ಟಿಯಿಂದ ಮಂತ್ರಿ ಎಂದು ಕೇಳಲ್ಲ. ಸದ್ಯ ಸಮರ್ಥವಾಗಿ ಶಾಸಕ ಸ್ಥಾನ ನಿಭಾಯಿಸುತ್ತಿದ್ದೇವೆ ಎಂದರು.

    ಇದೇ ವೇಳೆ ಶ್ರೀರಾಮುಲು ಪರ ಪರೋಕ್ಷವಾಗಿ ಬ್ಯಾಟ್ ಮಾಡಿದ ಯತ್ನಾಳ್, ಶ್ರೀರಾಮುಲು ಬಹಳ ವರ್ಷಗಳಿಂದ ಪಕ್ಷವನ್ನು ಕಟ್ಟಿದ್ದಾರೆ. ಅವರು ಡಿಸಿಎಂ ಆಗಬೇಕು ಎಂಬುವುದು ಅವರ ಅಭಿಮಾನಿಗಳ ಒತ್ತಾಯವಿದೆ. ಆದರೆ ಅವರು ಎಲ್ಲಿಯೂ ಡಿಸಿಎಂ ಸ್ಥಾನ ಬೇಕು ಎಂದಿಲ್ಲ. ಇನ್ನು 5-10 ಡಿಸಿಎಂ ಮಾಡಿದರೆ ಆ ಸ್ಥಾನಕ್ಕೆ ಗೌರವಿರುವುದಿಲ್ಲ. ಉಪಮುಖ್ಯಮಂತ್ರಿಗಳ ಗೌರವ ಕಡಿಮೆ ಆಗುವ ಕೆಲಸ ಮಾಡಬಾರದು. ನನಗೆ ಸಿಎಂ ಒಬ್ಬರು, ಉಳಿದವರು ಮಂತ್ರಿಗಳಿದ್ದರೆ ಸಾಕು ಎನಿಸುತ್ತಿದೆ ಎಂದು ಡಿಸಿಎಂ ಸ್ಥಾನಕ್ಕೆ ವಿರೋಧ ವ್ಯಕ್ತಪಡಿಸಿದರು.

    ಇತ್ತ ರಾಷ್ಟ್ರೀಯ ಪೌರತ್ವ ಕಾಯಿದೆ (ಎನ್.ಆರ್.ಸಿ)ಯನ್ನು ವಿರೋಧಿಸಿ ಇಂದು ವಿಜಯಪುರ ಎಂಎಂಸಿ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಜುಮ್ಮಾ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಸಿ ಕೂಡಲೇ ಕಾಯ್ದೆಯನ್ನು ಕೈ ಬಿಡಲು ಆಗ್ರಹಿಸಿದರು. ಈ ವೇಳೆ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಮುಶ್ರಿಫ್, ಸಾಮಾಜಿಕ ಹೋರಾಟಗಾರರಾದ ಪೀಟರ್ ಅಲೆಕ್ಸಾಂಡರ್, ಭೀಮಶಿ ಕಲಾದಗಿ, ಅಡಿವೆಪ್ಪ ಸಾಲಗಲ, ಶ್ರೀನಾಥ ಪೂಜಾರಿ, ಜಿತೇಂದ್ರ ಕಾಂಬಳೆ ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗಿ ಆಗಿದ್ದರು.