Tag: ಎನ್‌ಆರ್‌ ರಮೇಶ್‌

  • ಬೆಂಗಳೂರಿನಲ್ಲಿ 12 ಎಕ್ರೆ ಜಾಗ ಗುತ್ತಿಗೆ, 29 ವರ್ಷಗಳಿಂದ ಕೋಟ್ಯಂತರ ಲಾಭ – ರಾಹುಲ್‌ ಆಪ್ತ ಪಿತ್ರೋಡಾ ವಿರುದ್ಧ ಬೃಹತ್‌ ಭೂ ಹಗರಣ ಆರೋಪ

    ಬೆಂಗಳೂರಿನಲ್ಲಿ 12 ಎಕ್ರೆ ಜಾಗ ಗುತ್ತಿಗೆ, 29 ವರ್ಷಗಳಿಂದ ಕೋಟ್ಯಂತರ ಲಾಭ – ರಾಹುಲ್‌ ಆಪ್ತ ಪಿತ್ರೋಡಾ ವಿರುದ್ಧ ಬೃಹತ್‌ ಭೂ ಹಗರಣ ಆರೋಪ

    – ಲೋಕಾಯುಕ್ತ, ಇಡಿಗೆ ದೂರು ನೀಡಿದ ಎನ್‌ಆರ್‌ ರಮೇಶ್‌
    – ಪಿತ್ರೋಡಾ ಸೇರಿ 6 ಮಂದಿ ವಿರುದ್ಧ ದೂರು
    – ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರೂ ಇನ್ನೂ ಸರ್ಕಾರದ ವಶಕ್ಕೆ ಬಂದಿಲ್ಲ

    ಬೆಂಗಳೂರು: ರಾಹುಲ್ ಗಾಂಧಿ ಅತ್ಯಾಪ್ತ ಹಾಗೂ ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಅವರು ಬೃಹತ್ ಭೂ ಹಗರಣದಲ್ಲಿ (Land Scam) ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್. ಆರ್. ರಮೇಶ್ (NR Ramesh) ಅವರು ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

    ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ (Forest Department) ಸುಮಾರು 150 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಅತ್ಯಮೂಲ್ಯ ಸರ್ಕಾರಿ ಸ್ವತ್ತನ್ನು ಸ್ಯಾಮ್ ಪಿತ್ರೋಡಾ ರವರು ಕಾನೂನು ಬಾಹಿರವಾಗಿ ಕಳೆದ 14 ವರ್ಷಗಳಿಂದ ತಮ್ಮ ಸ್ವಾಧೀನದಲ್ಲಿಟ್ಟುಕೊಂಡು ಆ ಸ್ವತ್ತಿನಲ್ಲಿ ಪ್ರತೀ ವರ್ಷ ಕೋಟ್ಯಂತರ  ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಒಡಿಶಾ ಮೂಲದ ಸ್ಯಾಮ್ ಪಿತ್ರೋಡಾ ಅಲಿಯಾಸ್ ಸತ್ಯನಾರಾಯಣ್ ಗಂಗಾರಾಂ ಪಿತ್ರೋಡಾ ಮುಂಬೈ ಮಹಾನಗರದ ರಿಜಿಸ್ಟ್ರಾರ್ ಆಫ್ ಕೋ – ಆಪರೇಟಿವ್ ಸೊಸೈಟೀಸ್ ಕಛೇರಿಯಲ್ಲಿ ಅಕ್ಟೋಬರ್‌ 23, 1991 ರಂದು “Foundation for Revitalisation of Local Health Traditions” (FRLHT) ಎಂಬ ಸಂಸ್ಥೆಯನ್ನು ನೊಂದಣಿ ಮಾಡಿಸುತ್ತಾರೆ ಹಾಗೂ ಖುದ್ದು ಸ್ಯಾಮ್ ಪಿತ್ರೋಡಾ ಅವರ ಲಿಖಿತ ರೂಪದ ಮನವಿಯಂತೆ FRLHT ಸಂಸ್ಥೆಯ ನೊಂದಣಿಯನ್ನು 2010 ರಲ್ಲಿ ರದ್ದುಗೊಳಿಸಲಾಗುತ್ತದೆ.

    ಇದಾದ ನಂತರ 2008 ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ “Foundation for Revitalisation of Local Health Traditions”ಹೆಸರಿನ Trust Deed ಅನ್ನು ಸೆಪ್ಟೆಂಬರ್‌ 05, 2008 ರಂದು ನೊಂದಣಿ ಮಾಡಿಸುತ್ತಾರೆ. ಇದರ ನಡುವೆ – “ಗಿಡ ಮೂಲಿಕೆ ಔಷಧಿ ಸಸಿಗಳ ಸಂರಕ್ಷಣೆ ಮತ್ತು ಸಂಶೋಧನೆ ಕಾರ್ಯ”ಕ್ಕೆ ಮೀಸಲು ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ನೀಡುವಂತೆ 1996 ರಲ್ಲಿ ಸ್ಯಾಮ್ ಪಿತ್ರೋಡಾ ಮನವಿ ಸಲ್ಲಿಸುತ್ತಾರೆ.

    ಸ್ಯಾಮ್ ಪಿತ್ರೋಡಾ ಅವರ ಮನವಿಯಂತೆ ಅವರ ಅಧ್ಯಕ್ಷತೆಯ FRLHT ಸಂಸ್ಥೆಗೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಬೆಂಗಳೂರಿನ ಯಲಹಂಕ ಬಳಿಯ ಜಾರಕಬಂಡೆ ಕಾವಲ್‌ನ ‘ಬಿ’ಬ್ಲಾಕ್ ನಲ್ಲಿ 5 ಹೆಕ್ಟೇರ್ (12.35 ಎಕರೆ) ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶವನ್ನು 5 ವರ್ಷಗಳ ಗುತ್ತಿಗೆಗೆ ನೀಡುತ್ತದೆ. ಇದಕ್ಕೆ ಕೇಂದ್ರದ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆಯೂ ಸಹ ಅನುಮೋದನೆ ನೀಡಿರುತ್ತದೆ.

    ಸದರಿ FRLHT ಸಂಸ್ಥೆಗೆ ನೀಡಿದ್ದ 5 ವರ್ಷಗಳ ಗುತ್ತಿಗೆ ಅವಧಿಯು ಮುಕ್ತಾಯವಾಗಿದ್ದರಿಂದ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು 2001 ರಲ್ಲಿ 10 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಮುಂದುವರೆಸಿ ಆದೇಶಿಸಿರುತ್ತದೆ. ಡಿಸೆಂಬರ್‌ 02, 2011ಕ್ಕೆ ಸ್ಯಾಮ್ ಪಿತ್ರೋಡಾ ಅವರ FRLHT ಸಂಸ್ಥೆಗೆ ನೀಡಿದ್ದ ಗುತ್ತಿಗೆ ಅವಧಿಯು ಮುಕ್ತಾಯಗೊಂಡಿರುತ್ತದೆ ಹಾಗೂ ಇದಾದ ನಂತರ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗಿರುವುದಿಲ್ಲ.

    FRLHT ಸಂಸ್ಥೆಗೆ ನೀಡಿದ್ದ ಗುತ್ತಿಗೆ ಅವಧಿಯು ಮುಕ್ತಾಯಗೊಂಡ ನಂತರ 150 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ 12.35 ಎಕರೆ ವಿಸ್ತೀರ್ಣದ ಈ ಅತ್ಯಮೂಲ್ಯ ಸರ್ಕಾರಿ ಸ್ವತ್ತನ್ನು ರಾಜ್ಯ ಅರಣ್ಯ ಇಲಾಖೆಯು ತನ್ನ ವಶಕ್ಕೆ ಪಡೆದುಕೊಳ್ಳಬೇಕಿತ್ತು. ಆದರೆ ಸ್ಯಾಮ್ ಪಿತ್ರೋಡಾ ಎಂಬ ಅತ್ಯಂತ ಪ್ರಭಾವೀ ರಾಜಕಾರಣಿ / ಉದ್ಯಮಿಯಿಂದ ತಿನ್ನಬಾರದ್ದನ್ನು ತಿಂದಿದ್ದ ರಾಜ್ಯ ಅರಣ್ಯ ಇಲಾಖೆಯ ಮುಖ್ಯಸ್ಥರು ಈ ಅತ್ಯಮೂಲ್ಯ ಸರ್ಕಾರಿ ಸ್ವತ್ತನ್ನು ಇಲಾಖೆಯ ವಶಕ್ಕೆ ತೆಗೆದುಕೊಳ್ಳುವ ಸಣ್ಣ ಪ್ರಯತ್ನವನ್ನೂ ಸಹ ಕಳೆದ 14 ವರ್ಷಗಳಿಂದಲೂ ಮಾಡಿಲ್ಲ.

    ಪ್ರಸ್ತುತ ಸುಮಾರು 150 ಕೋಟಿ ರೂಪಾಯಿಗಳಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಈ ಅತ್ಯಮೂಲ್ಯ ಸರ್ಕಾರಿ ಸ್ವತ್ತನ್ನು ಕಳೆದ 29 ವರ್ಷಗಳಿಂದ ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿರುವ ಸ್ಯಾಮ್ ಪಿತ್ರೋಡಾ ಸಾಮಾನ್ಯ ವ್ಯಕ್ತಿಯಲ್ಲ. ಭಾರತದ ಪ್ರಧಾನಮಂತ್ರಿಗಳಾಗಿದ್ದ ದಿ.ರಾಜೀವ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರುಗಳಿಗೆ ಭಾರತದ ದೂರ ಸಂಪರ್ಕ ಇಲಾಖೆಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

    ಬೆಂಗಳೂರು ಯಲಹಂಕ ಬಳಿಯ ಜಾರಕಬಂಡೆ ಕಾವಲ್‌ನ 12.35 ಎಕರೆ ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶದಲ್ಲಿ “ಗಿಡಮೂಲಿಕೆ ಔಷಧಿ ಸಸಿಗಳ ಸಂರಕ್ಷಣೆ ಮತ್ತು ಸಂಶೋಧನೆ”ಹೆಸರಿನಲ್ಲಿ ನೂರಾರು ವಿಧದ ಅಪರೂಪದ ಗಿಡಮೂಲಿಕೆ ಸಸಿಗಳನ್ನು ಬೆಳೆಯುತ್ತಿರುವ ಸ್ಯಾಮ್ ಪಿತ್ರೋಡಾ ಅವರ FRLHT ಸಂಸ್ಥೆಯು ಅವುಗಳ ಉತ್ಪನ್ನಗಳ ಮಾರಾಟದಿಂದ ಕಳೆದ 29 ವರ್ಷಗಳಿಂದಲೂ ಪ್ರತೀ ವರ್ಷ ಕೋಟ್ಯಂತರ ರೂಪಾಯಿ ಹಣ ಗಳಿಸುತ್ತಿದ್ದಾರೆ.  ಇದನ್ನೂ ಓದಿ: ಮುಸ್ಲಿಮರು ಪುರುಸೊತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಾರೆ ಅನ್ನೋದು ಪ್ರಚೋದನೆನಾ? – ಪ್ರತಾಪ್‌ ಸಿಂಹ

    ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸ್ಯಾಮ್ ಪಿತ್ರೋಡಾ ಅವರ ರಾಜಕೀಯ ಮತ್ತು ಆರ್ಥಿಕ ಪ್ರಭಾವಕ್ಕೆ ಒಳಗಾಗಿರುವ ರಾಜ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು – FRLHT ಯ ಗುತ್ತಿಗೆ ಅವಧಿ ಡಿಸೆಂಬರ್‌ 02, 2011ರಲ್ಲೇ ಮುಕ್ತಾಯಗೊಂಡಿರುವ ಮಾಹಿತಿಯನ್ನು ಈವರೆಗೆ ಕೇಂದ್ರದ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆಗೆ ನೀಡದೇ ಗಂಭೀರ ಅಪರಾಧ ಎಸಗಿದ್ದಾರೆ.

    ಸ್ಯಾಮ್ ಪಿತ್ರೋಡಾ ಅವರ ಆರ್ಥಿಕ / ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಕರ್ನಾಟಕ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯ ಮಾಜಿ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೇದ್ ಅಖ್ತರ್ ( ಪ್ರಸ್ತುತ ಅಧ್ಯಕ್ಷರು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ), ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್‌.ಕೆ ಸಿಂಗ್ ಮತ್ತು ಸಂಜಯ್ ಮೋಹನ್, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎನ್‌. ರವೀಂದ್ರ ಕುಮಾರ್ ಮತ್ತು ಎಸ್‌ಎಸ್‌ ರವಿಶಂಕರ್ ಅವರುಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಅಡಿಯಲ್ಲಿ ವಂಚನೆ, ಭ್ರಷ್ಟಾಚಾರ, ಸರ್ಕಾರಿ ಭೂ ಕಬಳಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ.

     

  • ಪ್ರಭಾವಿ ವ್ಯಕ್ತಿಯಿಂದ 1.30 ಕೋಟಿ ಕಿಕ್‌ಬ್ಯಾಕ್ – ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ

    ಪ್ರಭಾವಿ ವ್ಯಕ್ತಿಯಿಂದ 1.30 ಕೋಟಿ ಕಿಕ್‌ಬ್ಯಾಕ್ – ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ಪ್ರಭಾವಿ ವ್ಯಕ್ತಿಗಳಿಂದ ಹಣ ಪಡೆದಿರುವುದಾಗಿ ಬಿಜೆಪಿ ಮುಖಂಡ (BJP Leader) ಎನ್.ಆರ್ ರಮೇಶ್ (NR Ramesh) ಆರೋಪಿಸಿದ್ದಾರೆ.

    ನಗರದಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸೋಮವಾರ ಲೋಕಾಯುಕ್ತಕ್ಕೆ (Karnataka Lokayukta) ದೂರು ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವೀಕೆಂಡ್ ಪಂಚಾಯಿತಿಯಲ್ಲಿ ಸಾನ್ಯಗೆ ಸುದೀಪ್ ಖಡಕ್ ಕ್ಲಾಸ್

    ಸಿದ್ದರಾಮಯ್ಯ ಸಿಎಂ ಆದ ವೇಳೆ ಪ್ರಭಾವಿ ವ್ಯಕ್ತಿಯಿಂದ ಹಣ ಪಡೆದಿದ್ದಾರೆ. ಕಿಂಗ್ಸ್ ಕೋರ್ಟ್‌ನ ಎಲ್.ವಿವೇಕಾನಂದ ಅವರಿಂದ 1.30 ಕೋಟಿ ಚೆಕ್ ಮೂಲಕ ಹಣ ಪಡೆದಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.

    ಬೆಂಗಳೂರು ಟರ್ಫ್ ಕ್ಲಬ್  (Bangalore Turf Club) ಉತ್ಸುವಾರಿ ಹುದ್ದೆಗೆ 2014 ರಲ್ಲಿ ವಿವೇಕಾನಂದ ಅವರನ್ನ ನೇಮಕ ಮಾಡಲಾಗಿತ್ತು. ಅವರನ್ನ 3 ವರ್ಷದ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (Election Commission) ವಿವೇಕಾನಂದ ಅವರಿಂದ ಸಾಲ ಪಡೆದಿರೋದಾಗಿ ಸುಳ್ಳು ಮಾಹಿತಿ ನೀಡಿದ್ದರು ಎಂದು ದೂರಿದ್ದಾರೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಕೇಸ್ – ಕಣ್ಣೂರು ಶ್ರೀ, ಯುವತಿ ಅರೆಸ್ಟ್

    ಕೇಂದ್ರ ಗೃಹ ಇಲಾಖೆ ನಿಯಮದ ಪ್ರಕಾರ ಹುದ್ದೆ ನೀಡಿ ಉಡುಗೊರೆ (Gift), ಚೆಕ್ ಪಡೆಯುವಂತಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಾಲಂ 7, 8, 9, 10, 13ರ ಅಡಿಯಲ್ಲಿ ಹಣ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಹಾಗಾಗಿ ಈ ಬಗ್ಗೆ ನಾಳೆ ಲೋಕಾಯುಕ್ತಕ್ಕೆ (Karnataka Lokayukta) ದೂರು ನೀಡಲಿದ್ದೇನೆ. ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ವಂಚನೆ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

    ಈ ಬಗ್ಗೆ ಸಿಬಿಐ, ಸಿಐಡಿ, ನ್ಯಾಯಾಂಗ ತನಿಖೆಯಾಗಬೇಕು. ಈಗಾಗಲೇ ಸಿಎಂ ಗಮನಕ್ಕೆ ಈಗಾಗಲೇ ತರಲಾಗಿದೆ. ಸಿಎಂ ಈ ಬಗ್ಗೆ ಸೂಕ್ತ ತನಿಖೆಗೆ ವಹಿಸೋ ನಂಬಿಕೆ ಇದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]