Tag: ಎದೆ ಹಾಲು

  • ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ

    ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ

    ಲಂಡನ್: ಮಹಿಳೆಯರು ಆಭರಣ ಪ್ರಿಯರು, ಡ್ರೆಸ್‍ಗೆ ತಕ್ಕಂತೆ ಹೇರ್ ಸ್ಟೈಲ್, ಬಳೆ, ಮೆಕಪ್ ಮಾಡಿಕೊಳ್ಳುವ ಮಹಿಳೆಯರು ತಾವು ತೊಡುವ ಆಭರಣಗಳಿಗೂ ಅಷ್ಟೇ ಮಹತ್ವವನ್ನು ಕೊಡುತ್ತಾರೆ. ಗೋಲ್ಡ್, ಪ್ಲಾಸ್ಟಿಕ್ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಆಭರಣ ತಯಾರಿಸುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಎದೆ ಹಾಲಿನಿಂದ ಆಭರಣ ತಯಾರಿಸುತ್ತಾಳೆ.

    ತಾಯಿ ಎದೆ ಹಾಲಿನಿಂದ ಆಭರಣ ಮಾಡುವ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಲಂಡನ್ ಮೂಲದ ಸಾಫಿಯಾ ರಿಯಾದ್ ಎದೆ ಹಾಲಿನಿಂದ ಆಭರಣ ತಯಾರಿ ಮಾಡುತ್ತಿದ್ದಾರೆ. ರಿಯಾದ್ ಮೂರು ಮಕ್ಕಳ ತಾಯಿಯಾಗಿದ್ದಾರೆ. ಆಭರಣ ತಯಾರಿಸುವ ನನ್ನ ಈ ಕೆಲಸಕ್ಕೆ ನನ್ನ ಪತಿ ಆದಂ ಅವರ ಬೆಂಬಲವೂ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೇಕಿದ್ರೆ ʻದಿ ಕಾಶ್ಮೀರ್‌ ಫೈಲ್ಸ್‌ʼನ್ನು ಯೂಟ್ಯೂಬ್‌ಗೆ ಹಾಕಲಿ: ತೆರಿಗೆ ವಿನಾಯಿತಿ ಕೇಳಿದ ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್

    ವಿಶೇಷ ಸಂದರ್ಭದಲ್ಲಿ ನಾವು ತಾಯಿ ಎದೆ ಹಾಲನ್ನು ಗಟ್ಟಿಯಾಗಿಸಿ ಉಂಗುರುದ ಹರಳು, ಸರದ ಡಾಲರ್, ಕಿವಿ ಒಲೆ ಸೇರೆದಂತೆ ಅನೇಕ ರೀರಿತ ಆಭರಣ ಮಾಡಿದ್ದೇವೆ. ಇದರ ಬೆಲೆ ಬಹಳ ದುಬಾರಿಯಾಗಿದೆ. 2023ರ ಒಳಗಾಗಿ ಆಭರಣಗಳಿಂದ ಕನಿಷ್ಟ 15 ಕೋಟಿಯಾದರೂ ಗಳಿಸಬಹುದು ಎಂದು ಅಂದಾಜು ಇದೆ ಎಂದು ತಯಾರಕರು ಹೇಳಿದ್ದಾರೆ.

  • ಬೆಕ್ಕಿಗೆ ಎದೆಹಾಲು ಕುಡಿಸಿದ ಮಹಿಳೆ

    ಬೆಕ್ಕಿಗೆ ಎದೆಹಾಲು ಕುಡಿಸಿದ ಮಹಿಳೆ

    ಹಿಳೆಯೊಬ್ಬರು ತಾನು ಸಾಕಿರುವ ಬೆಕ್ಕಿಗೆ ಎದೆಹಾಲು ಕುಡಿಸಿದ ಘಟನೆ ನ್ಯೂಯಾರ್ಕ್‍ನಿಂದ ಅಟ್ಲಾಂಟ್‌ಗೆ ಚಲಿಸುತ್ತಿದ್ದ ವಿಮಾನದಲ್ಲಿ ನಡೆದಿದೆ.

    ಈ ಘಟನೆಯಿಂದ ಸಹ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಚಕಿತಗೊಂಡಿದ್ದಾರೆ. ಹಾಲು ಕುಡಿಸುವುದನ್ನು ನಿಲ್ಲಿಸುವಂರೆ ವಿಮಾನ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಆಕೆ ಮಾತ್ರ ಸಿಬ್ಬಂದಿ ಮಾತನ್ನು ನಿರಾಕರಿಸಿ ಬೆಕ್ಕಿಗೆ ತನ್ನ ಎದೆ ಹಾಲು ಕುಡಿಸಿದ್ದಾಳೆ. ಇದನ್ನೂ ಓದಿ:   ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!

    ಮಹಿಳೆ ಸಾಕಿರುವ ಬೆಕ್ಕಿಗೆ ರೋಮ ಇರಲಿಲ್ಲ, ಹೀಗಾಗಿ ಬೆಕ್ಕು ನೋಡಲು ಮಗುವಿನಂತೆ  ಕಾಣುತ್ತಿತ್ತು. ಮಹಿಳೆ ಸಿಬ್ಬಂದಿಗೆ ಯಾಮಾರಿಸಿ ವಿಮಾನದಲ್ಲಿ ತೆಗೆದುಕೊಂಡು ಹೋಗಿದ್ದಾಳೆ. ಮಗುಗೆ ಹಾಲು ಕುಡಿಸಿದಂತೆ ಬೆಕ್ಕಿಗೆ ಹಾಲು ನೀಡುತ್ತಿರುವುದನ್ನಮು ಕಂಡಿರುವ ಸಿಬ್ಬಂದಿ, ಈ ಕುರಿತಾಗಿ ವಿಮಾನ ಸಿಬ್ಬಂದಿ ನಿಲ್ದಾಣಕ್ಕೆ ಕಳುಹಿಸಿರುವ ಸಂದೇಶ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಹಿಳೆ ಹಿಂದೆ ಒಮ್ಮೆ ಬೆಕ್ಕನ್ನು ಮಗುವಿನಂತೆ ಒಟ್ಟೆಯಲ್ಲಿ ಸುತ್ತಿ ಮುದ್ದಿಸುತ್ತಿದ್ದ ವೀಡಿಯೋ ಈ ಹಿಂದೆ ವೈರಲ್ ಆಗಿತ್ತು. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

  • ಗಂಡು ಮಗುವೇ ನಮ್ಮದು ಎಂದು ಪಟ್ಟು – ತಾಯಂದಿರ ಜಗಳಕ್ಕೆ ಕೂಸುಗಳಿಗಿಲ್ಲ ಎದೆಹಾಲು

    ಗಂಡು ಮಗುವೇ ನಮ್ಮದು ಎಂದು ಪಟ್ಟು – ತಾಯಂದಿರ ಜಗಳಕ್ಕೆ ಕೂಸುಗಳಿಗಿಲ್ಲ ಎದೆಹಾಲು

    ಕಲಬುರಗಿ: ಹೆತ್ತ ತಾಯಂದಿರೇ ಗಂಡು ಮಗುವಿಗಾಗಿ ಜಿದ್ದಿಗೆ ಬಿದ್ದು ಕರುಳ ಕುಡಿಗಳಿಗೆ ಎದೆಹಾಲು ಕೊಡ್ತಿಲ್ಲ.

    ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ದಿನಗಳ ಹಿಂದೆ ಮಕ್ಕಳು ಅದಲು ಬದಲು ಪ್ರಕರಣ ನಡೆದಿತ್ತು. ಆ ಪ್ರಕರಣ ಇಂದಿಗೂ ಇತ್ಯರ್ಥವಾಗದ ಹಿನ್ನಲೆಯಲ್ಲಿ ಎರಡು ಕಂದಮ್ಮಗಳು ತಾಯಿಯ ಹಾಲಿಗಾಗಿ ಪರಿದಾಡುತ್ತಿವೆ. ಸಮಸ್ಯೆಗೆ ಪರಿಹರಿಸಬೇಕಾದ ವೈದ್ಯರು ಇದೀಗ ಪೊಲೀಸರತ್ತ ಬೊಟ್ಟು ಮಾಡಿದ್ದಾರೆ.

    ಎದೆಹಾಲಿನಿಂದ ವಂಚಿತವಾಗಿ ಅಳುತ್ತಾ ಮಲಗಿರುವ ಕಂದಮ್ಮಗಳು, ಮತ್ತೊಂದೆಡೆ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟಿನಿಂದ ಮಕ್ಕಳಿದ್ದರೂ ಸಹ ಮಕ್ಕಳನ್ನ ಕಳೆದುಕೊಂಡ ತಾಯಂದಿರು. ಈ ದೃಶ್ಯ ಕಂಡು ಬಂದಿದ್ದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ. ಡಿಸೆಂಬರ್ 14ರಂದು ರಾತ್ರಿ 10.20ಕ್ಕೆ ನಂದಮ್ಮ ಮತ್ತು 10.25ಕ್ಕೆ ನಾಜ್ಮಿನ್ ಎಂಬ ಇಬ್ಬರು ಮಹಿಳೆಯರ ಹೆರಿಗೆಯಾಗಿದೆ.

    ನಂತರ ಪೊಷಕರಿಗೆ ಮಗು ತೋರಿಸುವಾಗ ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿ ಎರಡು ಕಡೆಯವರಿಗೆ ಇಕಟ್ಟಿಗೆ ಸಿಲುಕಿಸಿದ್ದಾರೆ. ಆದ್ರೆ ಗಂಡು ಮಗು ನಮ್ಮದು ಅಂತಾ ನಂದಮ್ಮ ಮತ್ತು ನಾಜ್ಮಿನ್ ಕುಟುಂಬದವರು ಪಟ್ಟು ಹಿಡಿದಿದ್ದು, ಇಬ್ಬರೂ ಸಹ ಕಂದಮ್ಮಗಳಿಗೆ ಕಳೆದ ಐದು ದಿನಗಳಿಂದ ಹಾಲುಣಿಸುತ್ತಿಲ್ಲ. ಹೀಗಾಗಿ ಈ ತಾಯಂದಿರ ಜಗಳದಲ್ಲಿ ಕಂದಮ್ಮಗಳು ಅನಾಥವಾಗಿವೆ.

    ಈಗಾಗಲೇ ಎರಡು ಕಂದಮ್ಮಗಳ ರಕ್ತ ಪರೀಕ್ಷೆ ನಡೆಸಿ ಗಂಡು ಮಗು ನಾಜ್ಮಿನ್‍ಗೆ ಸೇರಿದ್ದು ಅಂತಾ ವೈದ್ಯರು ಹೇಳಿದ್ದಾರೆ. ಆದರೆ ನಂದಮ್ಮ ಕುಟುಂಬವದರು ಗಂಡು ಮಗು ನಮಗೆ ಸೇರಿದ್ದು ಅಂತಾ ಪಟ್ಟು ಹಿಡಿದಿದ್ದಾರೆ. ಇದು ವೈದ್ಯರಿಗೆ ತಲೆ ನೋವಾಗಿದ್ದು ಪ್ರಕರಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಇನ್ನು ಈ ಕುರಿತು ಕಲಬುರಗಿ ಎಸ್‍ಪಿ ಎನ್.ಶಶಿಕುಮಾರ್ ಇನ್ನೊಮ್ಮೆ ಬೇರೆಡೆ ರಕ್ತ ಪರೀಕ್ಷೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದ್ದಾಗಿ ಹೇಳುತ್ತಿದ್ದಾರೆ.

    ಆಸ್ಪತ್ರೆ ಸಿಬ್ಬಂದಿಯ ಮಹಾ ಎಡವಟ್ಟಿನಿಂದ ಇದೀಗ ಆ ಎರಡು ಮಕ್ಕಳು ತಾಯಿಯ ಎದೆಹಾಲಿನಿಂದ ವಂಚಿತವಾಗಿವೆ.