Tag: ಎತ್ತುಗಳು

  • ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಧಾರವಾಡ: ಉಳವಿ ಜಾತ್ರೆಯಿಂದ ಧಾರವಾಡಕ್ಕೆ ಎತ್ತಿನ ಚಕ್ಕಡಿ ಕೇವಲ 13 ಗಂಟೆಯಲ್ಲಿ 135 ಕಿಲೋ ಮೀಟರ್ ಬಂದಿದ್ದು, ಅವುಗಳಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

    ಎತ್ತಿನ ಚಕ್ಕಡಿಗಳನ್ನ ತೆಗೆದುಕೊಂಡು ಜಾತ್ರೆಗೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ. ಗ್ರಾಮೀಣ ಪ್ರದೇಶಗಳಲ್ಲಿ ಚಕ್ಕಡಿಗೆ ಕೊಲ್ಲಾರಿ ಕಟ್ಟಿಕೊಂಡು ಜಾತ್ರೆಗೆ ಹೋಗುವ ಪದ್ಧತಿ ಇನ್ನೂ ಜೀವಂತವಾಗಿದೆ. ಜಾತ್ರೆಗೆ ಅನೇಕರು ಟ್ರ್ಯಾಕ್ಟರ್, ಬೈಕ್ ತೆಗೆದುಕೊಂಡು ಹೋಗುತ್ತಾರೆ. ಆದರೆ ಧಾರವಾಡದ ಎರಡು ಎತ್ತುಗಳು ಉತ್ತರ ಕನ್ನಡ ಜಿಲ್ಲೆಯ ಉಳವಿ ಜಾತ್ರೆಯಿಂದ ಧಾರವಾಡಕ್ಕೆ 13 ಗಂಟೆಯಲ್ಲಿ ಬಂದು ಸೈ ಎನಿಸಿಕೊಂಡಿವೆ. ಇದನ್ನೂ ಓದಿ: 2019ರಲ್ಲಿ ಕಾಣೆಯಾದ ಬಾಲಕಿ, ಮೆಟ್ಟಿಲುಗಳ ರಹಸ್ಯ ಕೋಣೆಯಲ್ಲಿ ಪತ್ತೆ!

    ಏನಿದರ ವಿಶೇಷತೆ?
    ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಮುತ್ತು ಬ್ಯಾಳಿ ರೈತರಿಗೆ ಸೇರಿದ ಜೋಡೆತ್ತುಗಳು. ಇವು 135 ಕಿಲೋ ಮೀಟರ್ ದೂರದ ಉಳವಿಯಿಂದ ಕೇವಲ 13 ಗಂಟೆಗಳಲ್ಲಿ ಧಾರವಾಡದ ಮಂಗಳಗಟ್ಟಿ ಗ್ರಾಮಕ್ಕೆ ಬಂದು ತಲುಪಿವೆ. ಈ ಚಕ್ಕಡಿ ಅಲ್ಲಿಂದ ಖಾಲಿ ಬಂದಿಲ್ಲ.

    ಜಾತ್ರೆ ಮುಗಿಸಿಕೊಂಡು ಕಡಿಮೆ ಅವಧಿಯಲ್ಲಿ 135 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಊರಿಗೆ ಬಂದ ಎತ್ತುಗಳನ್ನು ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬರಮಾಡಿಕೊಂಡರು. ಹೆಂಗಳೆಯರು ಜೋಡೆತ್ತುಗಳಿಗೆ ಆರತಿ ಬೆಳಗಿದರು. ಅಲ್ಲದೆ ಎತ್ತನ್ನು ಡಿಜೆ ಹಾಕಿ ಮೆರವಣಿಗೆ ಮಾಡಿದ್ದು, ಯುವಕರು ಆ ಸಾಂಗ್ ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದನ್ನೂ ಓದಿ: ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್

  • ಜೋಡೆತ್ತುಗಳ ಮೇಲೆ ತಡರಾತ್ರಿ ಮಾರಣಾಂತಿಕ ಹಲ್ಲೆ: ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ

    ಜೋಡೆತ್ತುಗಳ ಮೇಲೆ ತಡರಾತ್ರಿ ಮಾರಣಾಂತಿಕ ಹಲ್ಲೆ: ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ

    ಕಲಬುರಗಿ: ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ನಡೆದಿದೆ.

    ಬಳೂರ್ಗಿ ಗ್ರಾಮದ ರೈತ ಇರಸಂಗಪ್ಪ ಬಾಲಕುಂದಿ ಅವರಿಗೆ ಸೇರಿದ ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ನಿನ್ನೆ ರಾತ್ರಿ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಭಾರತ ದೇಶ ಪಾತಾಳಕ್ಕೆ ಕುಸಿಯಲು ಕಾಂಗ್ರೆಸ್ ಕಾರಣ: ಶ್ರೀ ರಾಮುಲು

    ರಾತ್ರಿ ಸುಮಾರು 12 ಗಂಟೆಗೆ ಯಾರೂ ಇಲ್ಲದ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಎತ್ತುಗಳಿಗೆ ದುಷ್ಕರ್ಮಿಗಳು ಬಡಿಗೆಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಹಲ್ಲೆಯಿಂದ ಒಂದು ಎತ್ತಿನ ಮೂಗು, ಮೈಮೇಲೆ ರಕ್ತ ಬಂದಿದೆ. ಇನ್ನೊಂದು ಎತ್ತು ಸಂಪೂರ್ಣವಾಗಿ ಕುಸಿದು ಬಿದ್ದು ಮೇವನ್ನು ಸಹ ತಿನ್ನದಂತಾಗಿದೆ. ಇದನ್ನೂ ಓದಿ: ಸ್ಪೈಡರ್ ಮ್ಯಾನ್‍ನಂತೆ ಗೋಡೆ ಹತ್ತುವ ಬಾಲಕಿ – ವೀಡಿಯೋ ವೈರಲ್

    ಸ್ಥಳಕ್ಕೆ ಪಶು ವೈದ್ಯರು ಬಂದು ಚಿಕಿತ್ಸೆ ನೀಡಿದರೂ ಸದ್ಯ ಜೋಡೆತ್ತುಗಳ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎತ್ತುಗಳ ಸ್ಥಿತಿಯನ್ನು ನೋಡಿ ರೈತ ಇರಸಂಗಪ್ಪ ಕಣ್ಣೀರು ಹಾಕುತ್ತಿದ್ದಾರೆ.

    ನಾನು ಎತ್ತುಗಳನ್ನೇ ನಂಬಿಕೊಂಡು ಬದುಕುತ್ತಿದ್ದೇನೆ. 2 ಲಕ್ಷ ಬೆಲೆಬಾಳುವ ಎತ್ತುಗಳಿಗೆ ಜೀವ ಹೋಗುವಂತೆ ಉದ್ದೇಶಪೂರ್ವಕವಾಗಿಯೇ ಹೊಡೆದಿದ್ದಾರೆ. ಮನುಷ್ಯರಿಗೆ ನೋವಾದರೆ ಹೇಳಿಕೊಳ್ಳುತ್ತಾರೆ. ಮೂಕ ಪ್ರಾಣಿಗಳು ತಮ್ಮ ವೇದನೆಯನ್ನು ಯಾರ ಮುಂದೆಯೂ ಹೇಳಿಕೊಳ್ಳಲಾಗದು. ಈ ಕೂಡಲೇ ಎತ್ತುಗಳ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

  • 14.55 ಟನ್ ಕಬ್ಬು ಹೊತ್ತ ಗಾಡಿಯನ್ನು ಎಳೆದ ಜೋಡೆತ್ತುಗಳು

    14.55 ಟನ್ ಕಬ್ಬು ಹೊತ್ತ ಗಾಡಿಯನ್ನು ಎಳೆದ ಜೋಡೆತ್ತುಗಳು

    – ಜೋಡೆತ್ತುಗಳ ಬಲಕ್ಕೆ ನೆಟ್ಟಿಗರು ಫಿದಾ

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಕಬ್ಬಿಗೆ ಪ್ರಸಿದ್ಧ. ಆದರೆ ಎತ್ತಿನಗಾಡಿಯಲ್ಲಿ 5 ರಿಂದ 8 ಟನ್ ಕಬ್ಬನ್ನು ಮಾತ್ರ ಸಾಗಿಸುತ್ತಾರೆ. ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯ ಬಳಗದ ಯುವಕರು ಎತ್ತಿನಗಾಡಿಗೆ 14.55 ಟನ್ ಕಬ್ಬು ತುಂಬಿದ್ದಾರೆ. ಮಾತ್ರವಲ್ಲ ಈ ಕಬ್ಬಿನ ಗಾಡಿಯನ್ನು ಜೋಡೆತ್ತುಗಳು ನಿರಾಯಾಸವಾಗಿ ಎಳೆದು ನೋಡುಗರನ್ನು ನಿಬ್ಬೆರಗು ಮಾಡಿವೆ.

    ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದು ಗಾಡಿಗೆ 12 ಟನ್ ತುಂಬುಲಾಗಿತ್ತು. ಆದರೆ ಮಲ್ಲಿಗೆರೆಯ ಯುವಕರ ತಂಡ 14.55 ಟನ್ ಕಬ್ಬು ತುಂಬಿ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇಷ್ಟು ಟನ್ ಕಬ್ಬು ತುಂಬಿದ ಎತ್ತಿನ ಗಾಡಿಯನ್ನು ಹುರುಗಲವಾಡಿ ಗ್ರಾಮದ ಶರತ್ ಅವರ ಜೋಡೆತ್ತುಗಳು ಮೂರು ಕಿಲೋಮೀಟರ್ ಎಳೆದು ಸೈ ಎನಿಸಿಕೊಂಡಿವೆ. ಈ ಜೋಡೆತ್ತುಗಳನ್ನು ಶರತ್ ಅವರು ಕಳೆದ ತಿಂಗಳಷ್ಟೇ 2.90 ಲಕ್ಷ ರೂ.ಗೆ ಖರೀದಿ ಮಾಡಿದ್ದಾರು.

    ಶನಿವಾರ 14.55 ಟನ್ ಕಬ್ಬಿನ ಗಾಡಿಯನ್ನು ಈ ಜೋಡೆತ್ತುಗಳು ಎಳೆಯುವಾಗ ಜನರು ಶಿಳ್ಳೆ ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಇಷ್ಟು ಬಲಶಾಲಿ ಎತ್ತುಗಳು ಇವೆಯಾ ಎಂದು ಎಲ್ಲರೂ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಈ ಜೋಡೆತ್ತುಗಳು ಎತ್ತಿನಗಾಡಿ ಎಳೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  • ಕಾರಿಗೆ ಎತ್ತಿನಗಾಡಿ ಡಿಕ್ಕಿ – ಪಲ್ಟಿ ಹೊಡೆದ ರಾಸುಗಳು

    ಕಾರಿಗೆ ಎತ್ತಿನಗಾಡಿ ಡಿಕ್ಕಿ – ಪಲ್ಟಿ ಹೊಡೆದ ರಾಸುಗಳು

    ಚಿಕ್ಕಮಗಳೂರು: ಜಾತ್ರೆ ಮುಗಿಸಿಕೊಂಡು ಊರಿಗೆ ಹಿಂದಿರುಗುವ ವೇಳೆ ವೇಗವಾಗಿದ್ದ ಎತ್ತಿನಗಾಡಿ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತುಗಳು ಕಾರಿನ ಮೇಲಿಂದ ಹಾರಿ ಪಲ್ಟಿಯಾಗಿ ಬಿದ್ದಿವೆ.

    ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಈ ಅವಘಡ ನಡೆದಿದ್ದು, ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ಪಾರಾದಂತಾಗಿದೆ. ಚಿಕ್ಕಮಗಳೂರು-ಚಿತ್ರದುರ್ಗ ಗಡಿ ಭಾಗದ ಸುಪ್ರಸಿದ್ಧ ಅಂತಘಟ್ಟೆ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು, ಎರಡು ಜೋಡೆತ್ತುಗಳು ಗಂಭೀರವಾಗಿ ಗಾಯಗೊಂಡಿವೆ.

    ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಸ್ಪರ್ಧೆಗೆ ಬಿದ್ದ ಎರಡು ಎತ್ತಿನಗಾಡಿ ಚಾಲಕರು ವೇಗವಾಗಿದ್ದ ಎತ್ತಿನ ಬಾಲವನ್ನು ತಿರುವಿ ಎತ್ತುಗಳನ್ನು ಬೆದರಿಸಿದರು. ಪರಿಣಾಮ ವೇಗದಲ್ಲಿದ್ದ ಎತ್ತುಗಳು ಗಾಬರಿಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿವೆ.

    ಈ ವೇಳೆ ನೊಗದ ಹಗ್ಗಕ್ಕೆ ಸಿಲುಕಿ ಪಲ್ಟಿ ಹೊಡೆದಿದ್ದ ಎತ್ತುಗಳನ್ನು ಕುಣಿಕೆಯಿಂದ ಬಿಡಿಸಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಕಾರಿನ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿಯಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಳೆದ ನಾಲ್ಕೈದು ದಿನಗಳಿಂದ ಜಾತ್ರೆಗೆ ಸಾವಿರಾರು ಜೋಡೆತ್ತಿನ ಗಾಡಿಗಳಲ್ಲಿ ಭಕ್ತರು ಆಗಮಿಸಿದ್ದರು. ಈ ಜಾತ್ರೆಗೆ ಎಷ್ಟೇ ಶ್ರೀಮಂತರಾಗಿದ್ರು ಕೆಲವರು ಗಾಡಿಯಲ್ಲೇ ಬಂದು ಇಲ್ಲೇ ವಾಸ್ತವ್ಯ ಹೂಡಿ ಜಾತ್ರೆಯಲ್ಲಿ ಪಾಲ್ಗೊಳ್ತಾರೆ. ಜಾತ್ರೆ ಮುಗಿಸಿ ಹಿಂದಿರುಗುವಾಗ ನಡೆದ ಅಪಘಾತಕ್ಕೆ ಜನ ಆತಂಕಕ್ಕೀಡಾಗಿದ್ದಾರೆ.

  • ಹುಲಿ ದಾಳಿಗೆ ರೈತ ಬಲಿ

    ಹುಲಿ ದಾಳಿಗೆ ರೈತ ಬಲಿ

    ಚಾಮರಾಜನಗರ: ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ.

    ಈ ಘಟನೆ ಕಳೆದ ರಾತ್ರಿ ನಡೆದಿದ್ದು, ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ (55) ಹುಲಿದಾಳಿಗೆ ಬಲಿಯಾಗಿದ್ದಾರೆ. ಎತ್ತುಗಳೊಂದಿಗೆ ಕಾಡಂಚಿನಲ್ಲಿ ಬರುತ್ತಿದ್ದಾಗ ಹುಲಿ ದಾಳಿ ಮಾಡಿದೆ.

    ಎತ್ತುಗಳನ್ನು ಹೊಡೆದುಕೊಂಡು ಕಾಡಿನಲ್ಲಿ ಬರುತ್ತಿದ್ದ ಶಿವಮಾದಯ್ಯ ಮೇಲೆ ಹುಲಿ ದಾಳಿ ಮಾಡಿದೆ. ಇದರಿಂದ ಭಯಗೊಂಡ ಎತ್ತುಗಳು ಓಡಿಹೋಗಿ ಮನೆ ಸೇರಿವೆ. ಶಿವಮಾದಯ್ಯ ಇಲ್ಲದೇ ಕೇವಲ ಎತ್ತುಗಳೇ ಬಂದಿರುವುದರಿಂದ ಗಾಬರಿಗೊಂಡ ಗ್ರಾಮಸ್ಥರು ರೈತನನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಕಾಡಿನಲ್ಲಿ ಮೈಮೇಲೆ ಹುಲಿ ದಾಳಿಯ ಗಾಯಗಳಿಂದ ಕೂಡಿದ ಶಿವಮಾದಯ್ಯನ ಶವ ಪತ್ತೆಯಾಗಿದೆ.

  • ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ – ಕಾರ್ಯಕ್ರಮ ವೀಕ್ಷಣೆಗೆ ಬಂದವನಿಗೆ ತಿವಿದ ಹೋರಿ

    ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ – ಕಾರ್ಯಕ್ರಮ ವೀಕ್ಷಣೆಗೆ ಬಂದವನಿಗೆ ತಿವಿದ ಹೋರಿ

    – ಸಾವು ಮುಚ್ಚಿ ಹಾಕಲು ಯತ್ನಿಸಿದ ಜನ

    ಹಾವೇರಿ: ಉತ್ತರ ಕರ್ನಾಟಕದಲ್ಲಿ ಜಾನಪದ ಕ್ರೀಡೆ ಅಂದ್ರೆ ಅದು ಹೋರಿ ಓಡಿಸುವ ಸ್ಪರ್ದೆ. ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯನ್ನ ಮೀರಿಸುವಂತೆ ನಮ್ಮ ರಾಜ್ಯದಲ್ಲಿ ಹೋರಿ ಬೆದರಿಸವು ಸ್ಪರ್ಧೆಯನ್ನ ಆಯೋಜನೆ ಮಾಡಲಾಗುತ್ತದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮಾಸಣಗಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯನ್ನ ನೋಡಲು ಬಂದ ಯುವಕನಿಗೆ ಹೋರಿ ತಿವಿದ್ದರಿಂದ ಓರ್ವ ಸಾವನ್ನಪ್ಪಿದ್ದಾನೆ.

    ಮೃತ ಯುವಕನನ್ನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಮಳವಳ್ಳಿ ಗ್ರಾಮದ ನಿವಾಸಿ 19 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದಲ್ಲಿ ಬಿ.ಎಸ್ಸಿ ಪ್ರಥಮ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಮಾಸಣಗಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನ ವೀಕ್ಷಣೆ ಮಾಡಲು ಬಂದಿದ್ದ. ಅರುಣ್ ಅಖಾಡದಲ್ಲಿ ನಿಂತಿದ್ದ. ಆ ವೇಳೆಯಲ್ಲಿ ಹೋರಿ ಅಡ್ಡಾ-ದಿಡ್ಡಿಯಾಗಿ ಓಡಿ ಬಂದು ಯುವಕನಿಗೆ ಕೊಂಬಿನಿಂದ ಬಲವಾಗಿ ತಿವಿದಿದೆ. ಬಲವಾಗಿ ತಿವಿದ ದೃಶ್ಯ ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿದೆ.

    ಕೊಬ್ಬರಿ ಹೋರಿಗಳನ್ನ ಸ್ಪರ್ಧೆಗಾಗಿ ಭರ್ಜರಿ ತಯಾರಿ ಮಾಡಿರುತ್ತಾರೆ. ಎತ್ತಿನ ಮಾಲೀಕ ಸ್ಪರ್ದೆಯಲ್ಲಿ ಭಾಗವಹಿಸೋ ಎತ್ತುಗಳನ್ನ ಕಟ್ಟು ಮಸ್ತಾಗಿ ಜನರ ಕೈಗೆ ಸಿಗದಂತೆ ಓಡುವ ಬಗ್ಗೆ ತರಬೇತಿ ನೀಡಿರುತ್ತಾರೆ. ಎತ್ತುಗಳನ್ನ ಹಿಡಿಯಲು ಪ್ರಯತ್ನಿಸೋ ವೇಳೆ ಎತ್ತು ಯಾರ ಕೈಗೂ ಸಿಗದಂತೆ ಓಡುವಾಗ ಕೆಲ ಸಣ್ಣಪುಟ್ಟ ಅವಾಂತರಗಳು ಸಂಭವಿಸುತ್ತವೆ. ಮಾಸಣಗಿ ಗ್ರಾಮದಲ್ಲಿ ಪ್ರಾರಂಭವಾದ ಸ್ಪರ್ಧೆಯಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದವು. ಸಂಜೆ ವೇಳೆ ವೇಳೆ ಹೋರಿ ಬೆದರಿಸುವ ಸ್ಪರ್ಧೆ ರಂಗು ಪಡೆದಿತ್ತು. ಅಖಾಡದಲ್ಲಿ ಓಡಿ ಬಂದ ಹೋರಿ ಕೊಂಬಿನಿಂದ ತಿವಿದ್ದರಿಂದ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.

    ಇಂತಹ ಘಟನೆಗಳು ನಡೆಯಬಾರದು ಅನ್ನೋ ಉದ್ದೇಶಕ್ಕಾಗಿ ಜಿಲ್ಲಾಡಳಿತ ಈ ಸ್ಪರ್ಧೆಗಳಿಗೆ ಅನುಮತಿ ನೀಡಿರುವುದಿಲ್ಲ. ಜಾನಪದ ಕ್ರೀಡೆಯ ಅಭಿಮಾನಕ್ಕಾಗಿ ಗ್ರಾಮಸ್ಥರು ಹಾಗೂ ಯುವಕರು ಸ್ಪರ್ಧೆಯನ್ನ ಆಯೋಜನೆ ಮಾಡಿದ್ದರು. ಯುವಕ ಅರುಣ್ ಮೃತಪಟ್ಟ ವಿಷಯ ಮುಚ್ಚಿ ಹಾಕುವ ಪ್ರಯತ್ನ ಕೂಡಾ ನಡೆದಿದೆ. ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ಅನುಮತಿ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡರೆ ಮಾತ್ರ ಸಾವು-ನೋವುಗಳನ್ನ ತಪ್ಪಿಸಬಹುದಾಗಿದೆ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಲೀಕರ ಸೂಚನೆಯಿಲ್ಲದೆ ಚಕ್ಕಡಿಗಾಡಿ ಹೊತ್ತು ಸಾಗಿದ ಎತ್ತುಗಳು: ವಿಡಿಯೋ ವೈರಲ್

    ಮಾಲೀಕರ ಸೂಚನೆಯಿಲ್ಲದೆ ಚಕ್ಕಡಿಗಾಡಿ ಹೊತ್ತು ಸಾಗಿದ ಎತ್ತುಗಳು: ವಿಡಿಯೋ ವೈರಲ್

    ತುಮಕೂರು: ಮಾಲೀಕರ ಸೂಚನೆ ಇಲ್ಲದೆ ಎತ್ತುಗಳು ತಮ್ಮ ಪಾಡಿಗೆ ತಾವೇ ಚಕ್ಕಡಿಗಾಡಿ ಹೊತ್ತು ಸಾಗಿದ ದೃಶ್ಯವೊಂದು ತುಮಕೂರು ಜಿಲ್ಲೆಯ ಪಾವಗಡ- ಚೆಳ್ಳಕೆರೆ ರಸ್ತೆಯಲ್ಲಿ ನಡೆದಿದೆ.

    ಒಟ್ಟು ಮೂರು ಜೋಡಿಯ ಎತ್ತುಗಳು ಮಾಲೀಕರ ಸೂಚನೆ ಇಲ್ಲದೆ ರಸ್ತೆಯಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗಿದೆ. ಎತ್ತುಗಳು ತಮ್ಮ ಪಾಡಿಗೆ ಹೋಗುತ್ತಿದ್ದರೆ, ಎತ್ತಿನಗಾಡಿಯ ಹಿಂಬದಿಯಲ್ಲಿ ರೈತರು ನಿದ್ದೆ ಮಾಡುತ್ತಿರುವುದು ಕಂಡು ಬಂದಿದೆ.

    ವೈರಲ್ ಆಗಿರುವ ಈ ವಿಡಿಯೋದಲ್ಲಿ ಯಾರು ಕೂಡ ಮೂಗು ದಾರ ಹಿಡಿದು ಎತ್ತುಗಳನ್ನು ಓಡಿಸುತ್ತಿಲ್ಲ. ಎತ್ತುಗಳ ಜೋಡಿ ತಮ್ಮ ಪಾಡಿಗೆ ರಸ್ತೆ ಒಂದು ಬದಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ರಸ್ತೆಯಲ್ಲಿ ಬಸ್, ಲಾರಿ ಹಾಗೂ ಬೈಕ್‍ಗಳು ಬಂದರೂ ಕ್ಯಾರೆ ಎನ್ನದೇ ಎತ್ತುಗಳು ರಸ್ತೆಯಲ್ಲಿ ಸಾಗಿವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎತ್ತಿನಗಾಡಿಗೆ ಮಿನಿ ಬಸ್ ಡಿಕ್ಕಿ- ಓರ್ವನಿಗೆ ಗಂಭೀರ ಗಾಯ, ಚಿಕಿತ್ಸೆ ಸಿಗದೆ ನರಳಾಡುತ್ತಿರುವ ಎತ್ತುಗಳು

    ಎತ್ತಿನಗಾಡಿಗೆ ಮಿನಿ ಬಸ್ ಡಿಕ್ಕಿ- ಓರ್ವನಿಗೆ ಗಂಭೀರ ಗಾಯ, ಚಿಕಿತ್ಸೆ ಸಿಗದೆ ನರಳಾಡುತ್ತಿರುವ ಎತ್ತುಗಳು

    ಮಂಡ್ಯ: ಎತ್ತಿನಗಾಡಿ ಮತ್ತು ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಎತ್ತುಗಳು ರಸ್ತೆಯಲ್ಲಿ ನರಳಾಡುತ್ತಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ತಾಲೂಕಿನ ಪಣಕನಹಳ್ಳಿ ಬಳಿ ಇಂದು ಬೆಳಗ್ಗೆ ಮಿನಿ ಬಸ್ ಮತ್ತು ಎತ್ತಿನಗಾಡಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎತ್ತಿನಗಾಡಿ ಮಾಲೀಕ ಹೊಳಲು ಗ್ರಾಮದ ಕೃಷ್ಣ ಗಾಯಗೊಂಡಿದ್ದಾರೆ. ಮೈಸೂರಿನ ಇಲವಾಲ ಮೂಲದವರು ಬೀಗರ ಊಟಕ್ಕೆಂದು ಹೊಳಲಿನ ದೇವಸ್ಥಾನಕ್ಕೆಂದು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

    ಸ್ಥಳದಲ್ಲಿದ್ದ ಜನರು ಗಾಯಾಳು ಕೃಷ್ಣ ಅವ್ರನ್ನ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲು ರವಾನಿಸಿದ್ರು. ಆದ್ರೆ ಎತ್ತುಗಳನ್ನು ಕರೆದುಕೊಂಡು ಹೋಗಲು ವಾಹನದ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಎತ್ತುಗಳು ಅಲ್ಲಿಯೇ ನರಳುವಂತಾಗಿದೆ. ಘಟನೆ ಸಂಬಂಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=OxCoWc2NcIY