Tag: ಎತ್ತಿನ ಬಂಡಿ

  • ಆರ್ ಶಂಕರ್ ತವರಿನಲ್ಲಿ ಸ್ಯಾಂಡ್ ಮಾಫಿಯಾ – ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳಲ್ಲೇ ಮರಳು ಶಿಫ್ಟ್..!

    ಆರ್ ಶಂಕರ್ ತವರಿನಲ್ಲಿ ಸ್ಯಾಂಡ್ ಮಾಫಿಯಾ – ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳಲ್ಲೇ ಮರಳು ಶಿಫ್ಟ್..!

    ಹಾವೇರಿ: ಲಾರಿ ಕ್ಯಾಂಟರ್, ಟ್ರ್ಯಾಕ್ಟರ್‌ಗಳಲ್ಲಿ ಮರಳನ್ನ ಸಾಗಾಟ ಮಾಡ್ತಿರೋದನ್ನು ನೋಡಿರ್ತೀರಾ. ಆದರೆ ನೂತನ ಸಚಿವ ಆರ್ ಶಂಕರ್ ತವರಿನಲ್ಲಿ ದಂಧೆಕೋರರು ಅದಕ್ಕೂ ಒಂದು ಹೆಜ್ಜೆ ಮುಂದೋಗಿದ್ದಾರೆ. ಎತ್ತಿನ ಬಂಡಿಗಳಲ್ಲೇ ಅಕ್ರಮವಾಗಿ ಮರಳು ಸಾಗಿಸಲಾಗ್ತಿದೆ.

    ಹೌದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೀಲದಹಳ್ಳಿ, ಮೆಡ್ಲೇರಿ, ಕೋಣನತಂಬಗಿ ಸೇರಿದಂತೆ ತುಂಗಭದ್ರಾ ನದಿ ಪಾತ್ರದ ಹಲವು ಗ್ರಾಮಗಳಲ್ಲಿ ಎತ್ತಿನ ಬಂಡಿಗಳ ಮೂಲಕವೇ ಮರಳು ಸಾಗಾಣಿಕೆ ಮಾಡಲಾಗ್ತಿದೆ. ನದಿಗೆ ಬಂಡಿಗಳನ್ನ ಇಳಿಸಿ, ಮರಳು ತುಂಬಿಕೊಂಡು ಹೋಗಲಾಗ್ತಿದೆ. ಎತ್ತಿನ ಬಂಡಿಯಲ್ಲಿ ತಂದ ಮರಳನ್ನ ಸ್ಟಾಕ್ ಮಾಡಿ ನಂತರ ಲಾರಿ, ಕ್ಯಾಂಟರ್, ಟ್ರ್ಯಾಕ್ಟರ್ ಗಳ ಮೂಲಕ ರವಾನಿಸ್ತಿದ್ದಾರೆ.

    ಹಗಲು ರಾತ್ರಿ ಎನ್ನದೆ ಎತ್ತಿನ ಬಂಡಿಗಳಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸಲಾಗ್ತಿರೋದ್ರಿಂದ ತುಂಗಭದ್ರಾ ಮತ್ತು ವರದಾ ನದಿಯ ಒಡಲು ಸಂಪೂರ್ಣ ಬರಿದಾಗ್ತಿದೆ. ಕೆಲವೆಡೆಯಂತೂ ಮರಳು ತರೋಕೆ ಅಂತಲೆ ಎತ್ತಿನ ಟೈರ್ ಬಂಡಿಗಳನ್ನ ತರಲಾಗಿದೆ ಅಂತೆ. ಪ್ರತಿದಿನ ಒಂದೊಂದು ಎತ್ತಿನ ಬಂಡಿಯಲ್ಲಿ ಹದಿನೈದು, ಇಪ್ಪತ್ತು ಟ್ರಿಪ್ ಮರಳು ತುಂಬಲಾಗ್ತಿದೆ. ಹಗಲು ಎತ್ತಿನ ಗಾಡಿಗಳ ಆರ್ಭಟವಿದ್ರೆ ರಾತ್ರಿ ವೇಳೆಯಲ್ಲಿ ಲಾರಿ, ಕ್ಯಾಂಟರ್ ಮತ್ತು ಟ್ರ್ಯಾಕ್ಟರ್‌ಗಳ ಸದ್ದು ಜೋರಾಗಿರುತ್ತದೆ. ಜೆಸಿಬಿಯಲ್ಲೂ ಮರಳು ಅಗೆಯಲಾಗ್ತಿದೆ.

    ಈ ಬಗ್ಗೆ ಅದೆಷ್ಟೋ ಬಾರಿ ಅಕ್ರಮ ಮರಳುಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ್ರೂ ಗಣಿ ಮತ್ತು ಭುವಿಜ್ಞಾನ ಇಲಾಖೆ, ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇದಕ್ಕೆಲ್ಲಾ ಯಾವಾಗ ಬ್ರೇಕ್ ಬೀಳುತ್ತಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

  • ಬಸ್ ಕಾಣದ ಬಿಸಿಲನಾಡಿನ ಕುಗ್ರಾಮ-ತುರ್ತು ಪರಿಸ್ಥಿತಿಯಲ್ಲೂ ಎತ್ತಿನ ಬಂಡಿಯೇ ಗತಿ

    ಬಸ್ ಕಾಣದ ಬಿಸಿಲನಾಡಿನ ಕುಗ್ರಾಮ-ತುರ್ತು ಪರಿಸ್ಥಿತಿಯಲ್ಲೂ ಎತ್ತಿನ ಬಂಡಿಯೇ ಗತಿ

    ರಾಯಚೂರು: ಜಿಲ್ಲೆಯನ್ನ ಹಿಂದುಳಿದ ಪ್ರದೇಶ ಅಂತ ಕರೆಯೋದಕ್ಕೆ ಸಾಕ್ಷಿಯಂಬಂತೆ ಇಲ್ಲೊಂದು ಗ್ರಾಮ ಇದೆ. ಈ ಗ್ರಾಮ ಹುಟ್ಟಿದಾಗಿನಿಂದ ಬಸ್ ಮುಖವನ್ನೇ ನೋಡಿಲ್ಲ. ಈಗಲೂ ಜನ ಎತ್ತಿನ ಬಂಡಿಯಲ್ಲೇ ಓಡಾಡುತ್ತಿದ್ದಾರೆ. ಅವಸರದ ಕೆಲಸಗಳು ಏನಾದ್ರೂ ಇದ್ರೆ ಪಟ್ಟಣಕ್ಕೆ ಬರುವುದು ಕಷ್ಟವೇ ಸರಿ. ಸಿರವಾರ ತಾಲೂಕಿನ ಕೆ.ತುಪ್ಪದೂರು ಗ್ರಾಮ ಈಗಲೂ ಐವತ್ತು ವರ್ಷ ಹಿಂದಿದೆ.

    ಸುಮಾರು ಒಂದು ಸಾವಿರ ಜನ ವಾಸವಾಗಿರುವ ಈ ಗ್ರಾಮ ಇದುವರೆಗೆ ಬಸ್ ಕಂಡಿಲ್ಲ. ಇಲ್ಲಿ ಉತ್ತಮ ರಸ್ತೆಗಳು, ಹಳ್ಳಕ್ಕೆ ಸೇತುವೆಯೂ ಇಲ್ಲ. ಹೀಗಾಗಿ ಬಸ್‍ಗಳನ್ನ ಬಿಡಲು ಸಾರಿಗೆ ಇಲಾಖೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ರಸ್ತೆ ನಿರ್ಮಿಸಲು ಜನಪ್ರತಿನಿಧಿಗಳು ಇದುವರೆಗೂ ಇಚ್ಛಾಶಕ್ತಿಯನ್ನ ತೋರಿಲ್ಲ. ಬಸ್ ವ್ಯವಸ್ಥೆ ಇಲ್ಲದೆ ಹೈರಾಣಾದ ಜನ ಅನಾರೋಗ್ಯ ಪೀಡಿತರನ್ನ ಪಟ್ಟಣ ಪ್ರದೇಶಕ್ಕೆ ಕೊಂಡೊಯ್ಯಲು ಹರಸಾಹಸವೇ ಮಾಡಬೇಕಾಗುತ್ತದೆ.

    ಗರ್ಭಿಣಿ ಹಾಗೂ ವೃದ್ಧರಿಗೆ ಎತ್ತಿನ ಬಂಡಿಯಲ್ಲೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಎತ್ತಿನ ಬಂಡಿ ಕಟ್ಟಿಕೊಂಡೇ ರೋಗಿಗಳನ್ನು ಆಸ್ಪತ್ರೆಗೆ ಒಯ್ಯಲಾಗುತ್ತೆ. ಎಮರ್ಜೆನ್ಸಿ ಇದ್ರೆ ಅಂಬುಲೆನ್ಸ್ ಸಹ ಈ ಊರಿಗೆ ಬರುವುದು ಅಷ್ಟು ಸುಲಭದ ಮಾತಲ್ಲ. ಮಳೆಗಾಲದಲ್ಲಂತೂ ಇಲ್ಲಿನ ರಸ್ತೆ ಕೆಸರಿನಂತಾಗಿ ಜನರು ನಡೆದಾಡಲೂ ಕಷ್ಟವಾಗುತ್ತೆ. ತುಪ್ಪದೂರು ಗ್ರಾಮಕ್ಕೆ ಇದುವರೆಗೂ ಬಸ್ ಕಲ್ಪಿಸದಿರುವುದಕ್ಕೆ ಗ್ರಾಮದ ಜನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆ.ತುಪ್ಪದೂರು ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಂಪೂರ್ಣ ವಿಫಲರಾಗಿದ್ದಾರೆ. ದೊಡ್ಡಗಾಡಿಗಳು ಬಂದರೆ ಹಳ್ಳದ ಸೇತುವೆ ಕುಸಿದು ಬೀಳುವ ಹಂತದಲ್ಲಿದೆ. ಈವರೆಗೂ ಯಾವೊಬ್ಬ ಅಧಿಕಾರಿ ನಮ್ಮ ಕಷ್ಟ ಕೇಳಲು ತುಪ್ಪದೂರು ಗ್ರಾಮಕ್ಕೆ ಭೇಟಿ ನೀಡಿಲ್ಲ ಅಂತ ಗ್ರಾಮಸ್ಥರ ಆರೋಪಿಸಿದ್ದಾರೆ.

    ಕೇವಲ ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಆಶ್ವಾಸನೆ ಕೊಡುವ ರಾಜಕಾರಣಿಗಳು ಗೆದ್ದಮೇಲೆ ಇತ್ತ ತಲೆಹಾಕಿಯು ಮಲಗುವುದಿಲ್ಲ. ನಾವು ಬಸ್‍ನ್ನೆ ನೋಡಿಲ್ಲ ಅಂತ ಇಲ್ಲಿನ ವಯೋವೃದ್ಧರು ಬೇಸರ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಈಗಲಾದ್ರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.

  • ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಎತ್ತಿನಬಂಡಿ!

    ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಎತ್ತಿನಬಂಡಿ!

    ರಾಯಚೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಜನರ ಸಮೇತ ಎತ್ತಿನ ಬಂಡಿಯೊಂದು ಕೊಚ್ಚಿ ಹೋಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಈ ಘಟನೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ.

    ನಾಲ್ವರು ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು ತುಂಬಿ ಹರಿಯುತ್ತಿದ್ದ ಹಳ್ಳದ ಮೂಲಕ ಹೊಲಕ್ಕೆ ಹೋಗುತ್ತಿದ್ದರು. ಈ ವೇಳೆ ನೀರಿನ ರಭಸಕ್ಕೆ ಎತ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜೊತೆಗೆ ಎತ್ತಿನ ಬಂಡಿಯಲ್ಲಿದ್ದ ನಾಲ್ವರು ಕೂಡ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅವರ ರಕ್ಷಣೆಗೆ ಧಾವಿಸಿದ್ದಾರೆ.

    ನಾಲ್ವರ ಜೊತೆಗೆ ಎತ್ತುಗಳು ಕೂಡ ಸುರಕ್ಷಿತವಾಗಿ ದಡ ಸೇರಿವೆ. ಬಂಡಿಯಲ್ಲಿ ಓರ್ವ ಮಹಿಳೆ ಹಾಗೂ ಮೂವರು ಪುರುಷರು ಇದ್ದರು. ಬಂಡಿಯಲ್ಲಿ ಗೊಬ್ಬರ ತಗೊಂಡು ಹೊಲಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

    ಯರಗೇರಾ ಹಾಗೂ ಪುಚ್ಚಲದಿನ್ನಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಕೆರೆ ಕೋಡಿ ತುಂಬಿದ್ದು, ಅಪಾರ ಪ್ರಮಾಣದ ನೀರು ಹಳ್ಳದಿಂದ ಹರಿಯುತ್ತಿವೆ. ಇದೇ ರಸ್ತೆಯನ್ನ ದಾಟಿ ಜಮೀನುಗಳಿಗೆ ಹೋಗುವ ಅನಿವಾರ್ಯತೆ ರೈತರಿಗಿದೆ.

  • ತೂಗುದೀಪ ಫಾರ್ಮ್ ಹೌಸ್‍ನಲ್ಲಿ ‘ಸಾರಥಿ’ಯ ಎತ್ತಿನ ಬಂಡಿ ಸವಾರಿ

    ತೂಗುದೀಪ ಫಾರ್ಮ್ ಹೌಸ್‍ನಲ್ಲಿ ‘ಸಾರಥಿ’ಯ ಎತ್ತಿನ ಬಂಡಿ ಸವಾರಿ

    ಮೈಸೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ತೂಗುದೀಪ  ಫಾರ್ಮ್ ಹೌಸ್‍ನಲ್ಲಿ ವಿರಾಮದ ಸಮಯ ಕಳೆಯುತ್ತಿದ್ದಾರೆ. ಸದ್ಯ ಫಾರ್ಮ್ ಹೌಸ್‍ನಲ್ಲಿ ದರ್ಶನ್ ಎತ್ತಿನ ಬಂಡಿ ಸವಾರಿ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

    ವಿಡಿಯೋದಲ್ಲಿ ದರ್ಶನ್ ತಮ್ಮ ಆಪ್ತರೊಂದಿಗೆ ಎತ್ತಿನ ಬಂಡಿ ಸವಾರಿ ಮಾಡಿರುವುದನ್ನು ಕಾಣಬಹುದುದಾಗಿದೆ. ಅಲ್ಲದೇ ಸವಾರಿಯ ಬಳಿಕ ಎತ್ತುಗಳು ಮಸ್ತ್ ಆಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗಷ್ಟೇ ಧಾರವಾಡಕ್ಕೆ ಭೇಟಿ ನೀಡಿದ್ದ ನಟ ದರ್ಶನ್, ಮಾಜಿ ಸಚಿವ ವಿನಯ ಕುಲಕರ್ಣಿ ಹಾಲಿನ ಡೈರಿಗೆ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಿ ಚಕ್ಕಡಿ ಸವಾರಿ ಮಾಡಿದ್ದರು. ಹಲವು ವರ್ಷಗಳಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ದರ್ಶನ್ ಸ್ನೇಹರಾಗಿದ್ದು, ಈ ಹಿನ್ನೆಲೆಯಲ್ಲಿ ಆಗಾಗ ದರ್ಶನ್ ಇಲ್ಲಿಗೆ ಭೇಟಿ ನೀಡುತ್ತಾರೆ. ಧಾರವಾಡ ನಗರದ ಹೊರ ವಲಯದಲ್ಲಿ ವಿನಯ ಕುಲಕರ್ಣಿ ಅವರ ಡೈರಿ ಇದೆ. ದರ್ಶನ್ ತಮ್ಮ ಭೇಟಿ ವೇಳೆ ವಿನಯ ಡೈರಿಯಿಂದ ಅವರು ಹಸು, ಮೇಕೆಗಳನ್ನು ಖರೀದಿ ಮಾಡಲು ಆಗಮಿಸಿರುವುದಾಗಿ ತಿಳಿಸಿದ್ದರು.

  • ಟ್ರಾಫಿಕ್ ಫೈನ್-ಎತ್ತಿನ ಬಂಡಿಗೂ 1 ಸಾವಿರ ದಂಡ

    ಟ್ರಾಫಿಕ್ ಫೈನ್-ಎತ್ತಿನ ಬಂಡಿಗೂ 1 ಸಾವಿರ ದಂಡ

    ಲಕ್ನೋ: ಪೊಲೀಸರು ಎತ್ತಿನ ಬಂಡಿ ಮಾಲೀಕನಿಗೆ ಒಂದು ಸಾವಿರ ರೂ. ದಂಡದ ಬಿಲ್ ನೀಡಿದ್ದಾರೆ.

    ಹೊಸ ಮೋಟಾರ್  ವಾಹನ ಕಾಯ್ದೆ ಅನ್ವಯವಾದಾಗಿನಿಂದ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಾರ್ವಜನಿಕರು ಭಾರೀ ಮೊತ್ತದ ದಂಡವನ್ನು ಪಾವತಿಸುತ್ತಿದ್ದಾರೆ. ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯ ಸಾಹಸಪುರ ಗ್ರಾಮದಲ್ಲಿ ಎತ್ತಿನ ಬಂಡಿಗೆ ಪೊಲೀಸರು 1 ಸಾವಿರ ರೂ. ದಂಡ ವಿಧಿಸಿದ್ದಾರೆ.

    ರೈತ ರಿಯಾಜ್ ಹಸನ್ ತಮ್ಮ ಜಮೀನಿನ ಪಕ್ಕದಲ್ಲಿ ಬಂಡಿಯನ್ನು ನಿಲ್ಲಿಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸಬ್‍ಇನ್ ಸ್ಪೆಕ್ಟರ್ ಪಂಕಜ್ ಕುಮಾರ್ ಮತ್ತು ಅವರ ತಂಡ ರಸ್ತೆ ಬದಿ ನಿಲ್ಲಿಸಿದ ಎತ್ತಿನ ಬಂಡಿ ನೋಡಿದ್ದಾರೆ. ಬಂಡಿ ಬಳಿ ಯಾರು ಇಲ್ಲದಿದ್ದನ್ನು ಕಂಡು ಗ್ರಾಮಸ್ಥರಿಗೆ ಕೇಳಿದಾಗ, ಅದು ರಿಯಾಜ್ ಹಸನ್ ಅವರದೆಂದು ತಿಳಿದಿದೆ. ಪೊಲೀಸರು ಎತ್ತಿನ ಬಂಡಿ ತೆಗೆದುಕೊಂಡು ಹಸನ್ ಮನೆಗೆ ಹೋಗಿ ವಿಮೆ ಮಾಡಿಸದ ವಾಹನ ಎಂದು 1 ಸಾವಿರ ರೂ. ದಂಡದ ಬಿಲ್ ನೀಡಿ ಹೋಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಿಯಾಜ್ ಹಸನ್, ನನ್ನ ಜಮೀನಿನ ಪಕ್ಕದಲ್ಲಿ ಬಂಡಿ ನಿಲ್ಲಿಸಿದ್ದಕ್ಕೆ ಪೊಲೀಸರು ದಂಡ ಹಾಕಿದ್ದಾರೆ. ಮೋಟಾರ್ ವಾಹನ ಕಾಯ್ದೆಯಡಿ ಹೇಗೆ ದಂಡ ಹಾಕಿದ್ರು ಎಂಬುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಶನಿವಾರ ದಂಡ ಹಾಕಿದ್ದ ಪೊಲೀಸರು ಭಾನುವಾರ ರದ್ದು ಮಾಡಿದ್ದಾರೆ.

    ಗಸ್ತು ತಿರುಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಕಬೇಕು ಎಂದು ಸೂಚಿಸಲಾಗಿತ್ತು. ಸಾಹಸಪುರ ಠಾಣಾ ವ್ಯಾಪ್ತಿಯಲ್ಲಿ ಎತ್ತಿನ ಬಂಡಿ ಮೂಲಕವೇ ಮರಳು ಸಾಗಾಟ ಮಾಡಲಾಗುತ್ತದೆ. ಹಸನ್ ಸಹ ಬಂಡಿ ಮೂಲಕ ಮರಳು ಸಾಗಿಸುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರಿಗೆ ಮೋಟಾರ್ ವಾಹನ ಕಾಯ್ದೆ ಮತ್ತು ಬೇರೆ ಅಪರಾಧಕ್ಕೆ ವಿಧಿಸುವ ದಂಡದ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಮೋಟರ ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಿದ್ದಾರೆ ಎಂದು ಸಾಹಸಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪಿ.ಡಿ.ಭಟ್ಟ ಸ್ಪಷ್ಟನೆ ನೀಡಿದ್ದಾರೆ.

  • ಎತ್ತಿನ ಬಂಡಿ ಓಡಿಸುವಾಗ ಆಯತಪ್ಪಿ ಬಿದ್ದ ಯುವಕರು!

    ಎತ್ತಿನ ಬಂಡಿ ಓಡಿಸುವಾಗ ಆಯತಪ್ಪಿ ಬಿದ್ದ ಯುವಕರು!

    ಕೊಪ್ಪಳ: ಎತ್ತಿನ ಬಂಡಿ ಓಡಿಸುವಾಗ ಯುವಕರು ಆಯತಪ್ಪಿ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ತಹಶೀಲ್ದಾರ್ ಕಚೇರಿ ಬಳಿ ನಡೆದಿದೆ.

    ಕಾರ ಹುಣ್ಣಿಮೆ ನಿಮಿತ್ತ ಗುರುವಾರ ಎತ್ತಿನ ಬಂಡಿ ಓಟ ಆಯೋಜಿಸಲಾಗಿತ್ತು. ಈ ವೇಳೆ ಯುವಕರ ಗುಂಪೊಂದು ಎತ್ತುಗಳನ್ನು ಓಡಿಸುತ್ತಾ ಬರುತ್ತಿದ್ದರು.  ನಗರದ ತಹಶೀಲ್ದಾರ್ ಕಚೇರಿ ಬಳಿ ಎತ್ತುಗಳನ್ನು ಓಡಿಸುವ ಬರದಲ್ಲಿ ಇಬ್ಬರು ಯುವಕರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಬಿರುಸಾಗಿ ಓಡುತ್ತಿದ್ದ ಎತ್ತಿನ ಕಾಲಡಿಯಲ್ಲಿ ಸಿಲುಕಿದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಇಬ್ಬರು ಯುವಕರು ಪಾರಾಗಿದ್ದಾರೆ.

    ಎತ್ತು ಓಡಿಸುವಾಗ ಯುವಕರು ಬಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಎತ್ತು ಓಡಿಸುವಾಗ ಕ್ಷಣಕಾಲ ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಂಭವಿಸಬಹುದಾಗಿದ್ದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.