Tag: ಎಣ್ಣೆ ಪಾರ್ಟಿ

  • ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್

    ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್

    ಚಿತ್ರದುರ್ಗ: ಡಿಡಿಪಿಐ ಕಚೇರಿಯಲ್ಲೇ (DDPI Office) ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ (Party) ನಡೆದಿರುವ ಆರೋಪ ಚಿತ್ರದುರ್ಗದಲ್ಲಿ (Chitradurga) ಕೇಳಿಬಂದಿದೆ. ಕಚೇರಿಯ ಸಿಬ್ಬಂದಿಯೋರ್ವ ಹೊಸ ಕಾರು ಖರೀದಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಎಣ್ಣೆ ಪಾರ್ಟಿ ನಡೆಸಿರೊ ವೀಡಿಯೋ ವೈರಲ್ ಆಗಿದೆ.

    20 ಲೀಟರ್‌ನ ವಾಟರ್ ಕ್ಯಾನ್‌ಗೆ ಉಪನಿರ್ದೇಶಕರ ಕಾರಿನ ಚಾಲಕ ಮದ್ಯ ಬೆರೆಸಿದ್ದು, ಇನ್ನಿತರೆ ಸಿಬ್ಬಂದಿ ಅಯ್ಯಪ್ಪ ಸ್ವಾಮಿಗೆ ಬಂಗಾರ ಮೀಸಲು ಹೋಗುತ್ತಲ್ಲ ಹಾಗಾಯ್ತು ಇದು ಅಂತ ಸಂಭಾಷಣೆ ನಡೆಸಿದ್ದಾರೆ. ಹೀಗಾಗಿ ಇಡೀ ಸಮಾಜಕ್ಕೆ ಮಾದರಿಯಾಗಿರಬೇಕಿದ್ದ ಶಿಕ್ಷಣ ಇಲಾಖೆ ಸಿಬ್ಬಂದಿ ಕಚೇರಿಯನ್ನೇ ಎಣ್ಣೆ ಪಾರ್ಟಿಗೆ ದುರ್ಬಳಕೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅ.18ರವರೆಗೆ ಭಾರೀ ಮಳೆ – ಇಂದು ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಹಾಗೆಯೇ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಕುಡಿದು ಮೋಜು ಮಸ್ತಿ ಮಾಡಿರುವ ವೀಡಿಯೋ ವೈರಲ್ ಆದ ಪರಿಣಾಮ ಜಿಲ್ಲೆಯಾದ್ಯಂತ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: 1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ಬರ್ತಾರೆ ಹುಷಾರ್‌ – ಬೆಂಗಳೂರಲ್ಲೊಂದು ಖತರ್ನಾಕ್ ಲೇಡಿ ಗ್ಯಾಂಗ್

  • ‘ಎಣ್ಣೆ ಪಾರ್ಟಿ’ಗೆ ಮುಂದಾದ ದ್ವಂದ್ವ ಟೀಮ್

    ‘ಎಣ್ಣೆ ಪಾರ್ಟಿ’ಗೆ ಮುಂದಾದ ದ್ವಂದ್ವ ಟೀಮ್

    ಶಸ್ವಿ ’ದ್ವಂದ್ವ’ ಚಿತ್ರತಂಡದಿಂದ ಈಗ ’ಎಣ್ಣೆ ಪಾರ್ಟಿ’ (Enne Party) ಸಿನಿಮಾವೊಂದು ಸೆಟ್ಟೇರಿದೆ. ಶುಕ್ರವಾರ ಶುಭದಿನದಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಆಚರಿಸಿಕೊಂಡಿದೆ. ಕಾಮನ್ ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಪ್ರದೀಪ್ ಕುಮಾರ್.ಕೆ ನಿರ್ಮಾಣ ಮಾಡುತ್ತಿದ್ದಾರೆ. ಹಿಂದಿನ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಧನಂಜಯ್‌ನಾಗರಾಜು ಕೆಲಸವನ್ನು ಮೆಚ್ಚಿದ ನಿರ್ದೇಶಕ ಭರತ್.ಎಲ್ ಈ ಬಾರಿ ತಮ್ಮೊಂದಿಗೆ ಆಕ್ಷನ್ ಕಟ್ ಹೇಳಲು ಸೇರಿಸಿಕೊಂಡಿದ್ದಾರೆ.

    ಪ್ರೀತಿ ಎನ್ನುವುದು ವಿಶ್ವದಾದ್ಯಂತ ಇರುತ್ತದೆ. ಅದೇ ರೀತಿ ಎಣ್ಣೆ ಸಹ ಯೂನಿವರ್ಸಲ್ ಆಗಿದೆ. ನಾಲ್ಕು ಯುವ ಜೋಡಿಗಳ ಸುತ್ತ ಕಥೆಯು ಸಾಗುತ್ತದೆ. ಶ್ರೀಮಂತರು, ಬಡವರು ಎಣ್ಣೆಯನ್ನು ಕುಡಿತಾರೆ. ಆದರೆ ಒಳಗಡೆ ಹೋದಾಗ ಅವರುಗಳು ಯಾವ ರೀತಿ ವರ್ತಿಸುತ್ತಾರೆ. ಕುಡಿತ ಒಳ್ಳೇದು, ಕೆಟ್ಟದು ಅಂತ ವಿಶ್ಲೇಷಿಸದೆ, ಮಿತಿಯೊಳಗೆ ಸೇವಿಸಿದರೆ ಅನಾಹುತ ಸಂಭವಿಸುದಿಲ್ಲ. ಮೀರಿದರೆ ಏನಾಗುತ್ತದೆ ಎನ್ನುವಂತಹ ಅಂಶಗಳನ್ನು ಹೆಕ್ಕಿಕೊಂಡು ಮನರಂಜನೆ, ಹಾಸ್ಯ, ಥ್ರಿಲ್ಲರ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಕುಡಿಯೊದೇ ಜೀವನ ಅಂತ ಕೆಲವರ ನಂಬಿಕೆ. ಅಂತರಾಳದಲ್ಲಿ ಹೊಕ್ಕಾಗ ಕುಡಿತದಲ್ಲಿ ಬದುಕು ಇರುತ್ತದೆ ಎಂಬ ಸಂದೇಶವನ್ನು ಹೇಳಲಾಗುತ್ತಿದೆ. ಶೀರ್ಷಿಕೆ ಇಟ್ಟುಕೊಂಡು ಅದಕ್ಕೆ ಹೊಂದುವಂತಹ ಕಥೆಯನ್ನು ನಿರ್ದೇಶಕರುಗಳು ಸಿದ್ದಪಡಿಸಿಕೊಂಡಿದ್ದಾರಂತೆ.

    ಹೊಸ ಪ್ರತಿಭೆಗಳಾದ ಶೋಬನ್, ಸಂತೋಷ್, ಪ್ರೀತಿ, ಮಂಜುಳಾ, ವರುಣ್, ಮಂಜು ಸುವರ್ಣ, ರಾಮು ಕೊನ್ನಾರ್, ಅಪ್ಪು ರಾಜ್, ರಶ್ಮಿ, ಗ್ರೀಷ್ಮ, ದಿವ್ಯ, ವೈಶಾಖ ಇನ್ನಿತರರು ತಾರಬಳಗದಲ್ಲಿ ಇದ್ದಾರೆ. ನಾಲ್ಕು ಎಣ್ಣೆ ಹಾಡುಗಳಿಗೆ ಆಕಾಶ್ ಪರ್ವ ಸಂಗೀತ, ರಾಜ್‌ಕಾಂತ್.ಕೆ ಛಾಯಾಗ್ರಹಣ ಇರಲಿದೆ. ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

  • ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ

    ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ

    ತುಮಕೂರು: ಕೆಲವು ಪುಂಡರು ಸರ್ಕಾರಿ ಶಾಲೆ ಬಾಗಿಲು ಮುರಿದು ಎಣ್ಣೆ ಪಾರ್ಟಿ ಮಾಡಿದ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

    ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಕರ್ನಾಟಕ ಪಬ್ಲಿಕ್ ಉರ್ದು ಶಾಲೆಯಲ್ಲಿ ಘಟನೆ ನಡೆದಿದ್ದು, ಈ ಶಾಲೆ ಪುಂಡರು, ಕುಡುಕರ ತಾಣವಾಗಿದೆ. ನಿನ್ನೆ ರಾತ್ರಿ ಕೆಲವು ಪುಂಡರು ಶಾಲೆಯ ಬಾಗಿಲು ಮುರಿದು ಕೊಠಡಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ಮಾನವನಿಗೆ ಹೆಚ್3ಎನ್8 ಹಕ್ಕಿಜ್ವರ – ಚೀನಾದಲ್ಲಿ ಮೊದಲ ಪ್ರಕರಣ ಪತ್ತೆ

    ಈ ಉರ್ದು ಶಾಲೆಯೂ ಉಪ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿಯೇ ಇದ್ರೂ ಈ ರೀತಿ ಘಟನೆ ನಡೆದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯೂ ಕುಡುಕರ ಅನೈತಿಕ ಚಟುವಟಿಕೆಗೆ ತಾಣವಾಗುತ್ತಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಘಟನೆ ನೋಡಿ ರೋಚಿಗೆದ ಸಾರ್ವಜನಿಕರು ಪುಂಡರ ಅನೈತಿಕ ಚಟುವಟಿಕೆಗಳಿಗೆ ಕೂಡಲೇ ತಡೆಯಬೇಕು ಎಂದು ಪೊಲೀಸರಿಗೆ ಗ್ರಾಮಸ್ಥರ ಒತ್ತಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಪತ್ನಿ ಸಂಬಳ ನೀಡದಿದ್ದಕ್ಕೆ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ಪತಿಯಿಂದ ಹಲ್ಲೆ

  • ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲವೆಂದು ಸ್ನೇಹಿತನನ್ನೇ ಚುಚ್ಚಿ ಕೊಂದ

    ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲವೆಂದು ಸ್ನೇಹಿತನನ್ನೇ ಚುಚ್ಚಿ ಕೊಂದ

    – ಬಾತು ಕೋಳಿ ಮಾಂಸಕ್ಕಾಗಿ ಕೊಲೆ
    – ಜಮೀನಿನಲ್ಲಿ ಪಾರ್ಟಿ ಮಾಡುತ್ತಾ ಜಗಳ

    ಚೆನ್ನೈ: ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಕೊಲೆ ಮಾಡಿದ ಆರೋಪಿಯನ್ನು ವಾಸು(38) ಎಂದು ಗುರುತಿಸಲಾಗಿದ್ದು, ವಿನಯಗಂ(43) ಕೊಲೆಯಾದ ದುರ್ದೈವಿಯಾಗಿದ್ದಾನೆ. ತಮಿಳುನಾಡಿನ ಚೆಂಗಲ್ಪಟ್ಟುವಿನ ಗುಡುವಾಂಚೇರಿ ಪಟ್ಟಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ವಾಸು ಹಾಗೂ ವಿನಯಗಂ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಹೂವು ಮಾರುವುದು, ಕ್ಯಾಬ್ ಓಡಿಸುವುದು ಹಾಗೂ ರಿಯಲ್ ಎಸ್ಟೇಟ್ ಬ್ರೋಕರ್ಸ್ ಆಗಿದ್ದರು. ಲಾಕ್‍ಡೌನ್ ಸಡಿಲಿಕೆ ಆಗಿ ಮದ್ಯ ಮಾರಾಟ ಆರಂಭವಾದ ಹಿನ್ನೆಲೆ ಇಬ್ಬರು ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಲು ನಿರ್ಧರಿಸಿದರು. ಆದ್ರೆ ಎಣ್ಣೆ ನಾನು ತರುತ್ತೇನೆ, ಸೈಡ್ಸ್ ಗೆ ಬಾತುಕೋಳಿ ಮಾಂಸ ತೆಗೆದುಕೊಂಡು ಬಾ ಎಂದು ವಾಸು ವಿನಯಗಂ ಬಳಿ ಹೇಳಿದ್ದನು.

    ವಾಸು ಮದ್ಯ ತಂದ ತಕ್ಷಣ ಇಬ್ಬರೂ ತೋಟವೊಂದರಲ್ಲಿ ಎಣ್ಣೆ ಪಾರ್ಟಿ ಮಾಡಲು ಹೋದರು. ಆದರೆ ಕುಡಿಯುತ್ತಿದ್ದ ವೇಳೆ ವಾಸು ಸೈಡ್ಸ್ ಎಲ್ಲಿ ಎಂದು ಕೇಳಿದನು. ಆಗ ವಿನಯಗಂ ಅಯ್ಯೊ ಬಾತುಕೋಳಿ ಮಾಂಸ ತರೋದನ್ನ ಮರೆತುಬಿಟ್ಟೆ ಎಂದಾಕ್ಷಣ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಜಗಳ ತಾರಕ್ಕಕ್ಕೇರಿ ಸಿಟ್ಟಿಗೆದ್ದ ವಾಸು ತನ್ನ ಬಳಿಯಿದ್ದ ಚಾಕುವಿನಿಂದ ವಿನಯಗಂ ಮೇಲೆ ಹಲ್ಲೆ ಮಾಡಿದ್ದಾನೆ. ಆತನಿಗೆ ಚುಚ್ಚಿ ಕೊಲೆಗೈದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

    ಈ ವೇಳೆ ಜಮೀನಿನ ದಾರಿಯಲ್ಲಿ ಹೋಗುತ್ತಿದ್ದವರು ಗಲಾಟೆ ಸದ್ದು ಕೇಳಿ ಸ್ಥಳಕ್ಕೆ ಹೋಗುವಷ್ಟರಲ್ಲಿ ವಾಸು ವಿನಯಗಂ ಅನ್ನು ಕೊಲೆ ಮಾಡಿ ಓಡಿ ಹೋಗಿದ್ದನು. ಹೀಗಾಗಿ ತಕ್ಷಣ ಪೊಲೀಸರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ಕಿಡಿಗೇಡಿಗಳಿಂದ ಎಣ್ಣೆ ಬಾಟಲ್ ಇಟ್ಟು ವಿಡಿಯೋ: ಅಧಿಕಾರಿಗಳ ಪರ ರೇವಣ್ಣ ಬ್ಯಾಟಿಂಗ್

    ಕಿಡಿಗೇಡಿಗಳಿಂದ ಎಣ್ಣೆ ಬಾಟಲ್ ಇಟ್ಟು ವಿಡಿಯೋ: ಅಧಿಕಾರಿಗಳ ಪರ ರೇವಣ್ಣ ಬ್ಯಾಟಿಂಗ್

    ಹಾಸನ: ಸರ್ಕಾರಿ ಪ್ರವಾಸಿ ಮಂದಿರ (ಐಬಿ)ಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಹೊಳೇನರಸೀಪುರ ತಹಶೀಲ್ದಾರ್ ಪರ ಮಾಜಿ ಸಚಿವ ಎಚ್.ಡಿ.ರೇವಣ್ಣ ಬ್ಯಾಟ್ ಬೀಸಿದ್ದಾರೆ.

    ಐಬಿಯಲ್ಲಿ ಅಧಿಕಾರಿಗಳ ಎಣ್ಣೆ ಪಾರ್ಟಿ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಹೊಳೇನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ಪ್ರಾಮಾಣಿಕ ವ್ಯಕ್ತಿ. ಅವರು ಮದ್ಯ ಸೇವನೆ ಮಾಡುವುದಿಲ್ಲ. ಅಧಿಕಾರಿಗಳು ಒಟ್ಟಿಗೆ ಕುಳಿತು ಊಟ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಐಬಿಯಲ್ಲಿ ಹಾಸನ ತಹಶೀಲ್ದಾರ್​ಗಳ ಗುಂಡು ತುಂಡು ಪಾರ್ಟಿ

    ಸಂಸದರು ಅಧಿಕಾರಿಗಳ ಸಭೆ ಕರೆದಿದ್ದರು. ಸಭೆಯ ಬಳಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾರೋ ಇಬ್ಬರು ಮದ್ಯ ಸೇವಿಸಿ ಐಬಿಗೆ ನುಗ್ಗಿದ್ದರು. ಅಷ್ಟೇ ಅಲ್ಲದೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಸಂಬಂಧ ತಹಶೀಲ್ದಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದುರುದ್ದೇಶದಿಂದ ಯಾರೋ ಹೀಗೆ ಮಾಡಿದ್ದಾರೆ ಎಂದು ದೂರಿದರು.

    ಮರಳು ಅಕ್ರಮ ಸಾಗಾಣಿಕೆ ಶ್ರೀನಿವಾಸ್ ಅವರು ಅವಕಾಶ ನೀಡಲ್ಲ. ತಾಲೂಕಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಬ್ಲಾಕ್‍ಮೇಲ್ ಮಾಡಲು ಕೆಲವು ಎಣ್ಣೆ ಬಾಟಲಿ ಇಟ್ಟು ವಿಡಿಯೋ ಮಾಡಿದ್ದಾರೆ. ಈ ಸಂಬಂಧ ತನಿಖೆ ಆಗಬೇಕಿದೆ ಎಂದು ಹೊಸ ಬಾಂಬ್ ಸಿಡಿಸಿದರು.

  • ಪೊಲೀಸ್ ಕ್ವಾಟರ್ಸ್ ನಲ್ಲಿ ಪೇದೆ, ರೌಡಿಗಳಿಂದ ಎಣ್ಣೆ ಪಾರ್ಟಿ?

    ಪೊಲೀಸ್ ಕ್ವಾಟರ್ಸ್ ನಲ್ಲಿ ಪೇದೆ, ರೌಡಿಗಳಿಂದ ಎಣ್ಣೆ ಪಾರ್ಟಿ?

    ಶಿವಮೊಗ್ಗ: ಪೊಲೀಸ್ ಕ್ವಾಟರ್ಸ್ ನಲ್ಲಿ ಓರ್ವ ಪೇದೆ ಹಾಗೂ ರೌಡಿಗಳು ಸ್ನೇಹಿತರಂತೆ ಒಟ್ಟಿಗೆ ಎಣ್ಣೆ ಪಾರ್ಟಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

    ಇಲ್ಲಿನ ವಿನೋಬಾ ನಗರದ ಮೊದಲನೇ ತಿರುವಿನಲ್ಲಿರುವ ಸಿವಿಲ್ ಪೊಲೀಸ್ ಕ್ವಾಟರ್ಸ್ ನ 101ನೇ ಮನೆಯಲ್ಲಿ ಸಂಚಾರ ಪೊಲೀಸ್ ಠಾಣೆಯ ಪೇದೆ ಪುನೀತ್ ವಾಸವಾಗಿದ್ದಾರೆ. ಪುನೀತ್ ಅವರು ಕೆಲ ದಿನಗಳ ಹಿಂದೆ ಕೋಕಾ ಕಾಯ್ದೆಯಡಿ ಬಂಧಿತನಾಗಿದ್ದ ಕುಖ್ಯಾತ ರೌಡಿ ನವುಲೆ ಆನಂದ್, ಕೊಕ್ಕರೆ ಶಾಮ ಸೇರಿದಂತೆ ಕೆಲವು ರೌಡಿಗಳ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿದ ಎಸ್‍ಪಿ ಅಭಿನವ್ ಖರೆ ಅವರು, ರೌಡಿಗಳು ಕಳೆದ ನಾಲ್ಕೈದು ದಿನಗಳಿಂದ ಪುನೀತ್ ಅವರ ಮನೆಗೆ ಬಂದು ನಡುರಾತ್ರಿವರೆಗೂ ಪಾರ್ಟಿ ಮಾಡಿದ್ದಾರೆ ಅಂತ ಸ್ಥಳೀಯರು ದೂರು ನೀಡಿದ್ದರು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ನಾನು ಪರಿಶೀಲನೆ ನಡೆಸಿದ್ದೇನೆ. ಆಗ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಸರ್ಕಲ್ ಇನ್‍ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚುವಂತೆ ಸೂಚನೆ ನೀಡುವೆ ಎಂದು ಮಾಹಿತಿ ನೀಡಿದರು.

    ರೌಡಿಗಳು ಯಾಕೆ ಬಂದಿದ್ದರು ಎನ್ನುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಕೆಲವೊಮ್ಮೆ ಕ್ರೈಂ ಪೊಲೀಸರನ್ನು ರೌಡಿಗಳು ಭೇಟಿ ಆಗುತ್ತಾರೆ. ಒಂದು ವೇಳೆ ಸರ್ಕಾರಿ ಕ್ವಾಟರ್ಸ್ ನಲ್ಲಿ ಹಾಗೂ ಸ್ವಂತ ಮನೆಯಲ್ಲಿ ರೌಡಿಗಳ ಜೊತೆಗೆ ಪಾರ್ಟಿ ಮಾಡಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿದ ಮತ್ತಲ್ಲಿ ಅಪರಿಚಿತನಿಂದ ವ್ಯಕ್ತಿಗೆ ಚಾಕು ಇರಿತ

    ಕುಡಿದ ಮತ್ತಲ್ಲಿ ಅಪರಿಚಿತನಿಂದ ವ್ಯಕ್ತಿಗೆ ಚಾಕು ಇರಿತ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಅಪರಿಚಿತನೊಬ್ಬ ವ್ಯಕ್ತಿಗೆ ಚಾಕು ಇರಿದು ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಭೈರನಹಳ್ಳಿ ಕ್ರಾಸ್ ಬಳಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ. ಚಾಕು ಇರಿತಕ್ಕೊಳಗಾದ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಪರಮೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಮೇಶ್ ತನ್ನ ಸ್ನೇಹಿತರಾದ ನರಸಿಂಹಮೂರ್ತಿ ಹಾಗೂ ಕಿರಣ ಜೊತೆಗೆ ಪಾರ್ಟಿ ಮಾಡಲು ಬಂದ ವೇಳೆ ಘಟನೆ ನಡೆದಿದೆ.

    ಭೈರಸಂದ್ರ ಕ್ರಾಸ್ ಬಳಿಯ ಬಾರ್‍ವೊಂದರಲ್ಲಿ ಎಣ್ಣೆ ಪಾರ್ಟಿ ಮಾಡಿ ಹೊರಗಡೆ ಬಂದು ಪರಮೇಶ್ ಮೊಬೈಲ್ ನಲ್ಲಿ ಮಾತಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಬಂದು ಚಾಕುವಿನಿಂದ ಇರಿದಿದ್ದಾನೆ.

    ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.