Tag: ಎಡ್ ವೆಸ್ಟ್‌ವಿಕ್

  • ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಆ್ಯಮಿ ಜಾಕ್ಸನ್ ಮದುವೆ

    ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಆ್ಯಮಿ ಜಾಕ್ಸನ್ ಮದುವೆ

    ನ್ನಡದ ‘ವಿಲನ್’ ( The Villain) ಚಿತ್ರದ ನಟಿ ಆ್ಯಮಿ ಜಾಕ್ಸನ್ (Amy Jackson) ಅವರು ಗೆಳೆಯ ಎಡ್ ವೆಸ್ಟ್‌ವಿಕ್ (Ed Westwick) ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇಟಲಿಯಲ್ಲಿ (Italy) ಅದ್ಧೂರಿಯಾಗಿ ನಟಿಯ ಮದುವೆ ನಡೆಯಲಿದೆ. ಇದನ್ನೂ ಓದಿ:‘ಸ್ತ್ರೀ 2’ ನಟಿಗೆ ಹೆಚ್ಚಿದ ಬೇಡಿಕೆ- ಹೃತಿಕ್ ರೋಷನ್‌ಗೆ ಶ್ರದ್ಧಾ ಕಪೂರ್ ಜೋಡಿ

    ಭಾವಿ ಪತಿಗೆ ಆ್ಯಮಿ ಲಿಪ್‌ಲಾಕ್ ಮಾಡುತ್ತಿರುವ ಫೋಟೋ ಶೇರ್ ಮಾಡಿ, ನಾವು ಮದುವೆಯಾಗೋಣ ಬೇಬಿ ಎಂದು ಅಡಿಬರಹ ನೀಡಿದ್ದಾರೆ. ಈ ಮೂಲಕ ಮದುವೆಯಾಗುವ ಬಗ್ಗೆ ನಟಿ ಸುಳಿವು ನೀಡಿದ್ದಾರೆ.

     

    View this post on Instagram

     

    A post shared by Amy Jackson (@iamamyjackson)

    ಬ್ರಿಟಿಷ್ ನಟಿ ಆ್ಯಮಿ ಮದುವೆ ಇಟಲಿಯಲ್ಲಿ ನಡೆಯಲಿದೆ ಎಂಬುದಷ್ಟೇ ರಿವೀಲ್ ಆಗಿದೆ. ಯಾವ ದಿನಾಂಕದಂದು ಮದುವೆ ಎಂಬುದನ್ನು ನಟಿ ಗೌಪ್ಯವಾಗಿಟ್ಟಿದ್ದಾರೆ. ಇದನ್ನೂ ಓದಿ:ನಾನು ಸೆಲೆಬ್ರಿಟಿಯೇ ಹೊರತು ಸಾರ್ವಜನಿಕರ ಆಸ್ತಿಯಲ್ಲ- ಟ್ರೋಲಿಗರಿಗೆ ತಾಪ್ಸಿ ಪನ್ನು ವಾರ್ನಿಂಗ್

    ಅಂದಹಾಗೆ, ಎಂಗೇಜ್‌ಮೆಂಟ್ ಬಳಿಕ ಜೂನ್‌ನಲ್ಲಿ ನಟಿ ಬ್ಯಾಚುರಲ್ ಪಾರ್ಟಿ ಮಾಡಿದ್ದರು. ಖಾಸಗಿ ಜೆಟ್‌ನಲ್ಲಿ ನಡೆಯ ಪಾರ್ಟಿ ಫೋಟೋಗಳನ್ನು ಆ್ಯಮಿ ಹಂಚಿಕೊಂಡಿದ್ದರು.

    2019ರಲ್ಲಿ ನಟ ಜಾರ್ಜ್ ಎಂಬುವವರ ಜೊತೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದರು. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಜಾರ್ಜ್ ಜೊತೆ ನಟಿ ಬ್ರೇಕಪ್ ಮಾಡಿಕೊಂಡರು. ಜಾರ್ಜ್ ಜೊತೆಗಿನ ಅಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಬಳಿಕ ಮಾಜಿ ಬಾಯ್ ಫ್ರೆಂಡ್‌ಗೆ ಮಗನ ಜವಾಬ್ದಾರಿಯನ್ನು ಬಿಟ್ಟು ಕೊಡದೇ ತಾವೇ ನೋಡಿಕೊಳ್ತಿದ್ದಾರೆ.

    ಇನ್ನೂ ಶಿವರಾಜ್‌ ಕುಮಾರ್‌, ಸುದೀಪ್‌ ನಟನೆಯ ‘ದಿ ವಿಲನ್‌’ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಚಿತ್ರಕ್ಕೆ ಜೋಗಿ ಪ್ರೇಮ್‌ ನಿರ್ದೇಶನ ಮಾಡಿದರು.

  • ಗುಡ್ ನ್ಯೂಸ್ ಕೊಟ್ಟ ‘ದಿ ವಿಲನ್’ ನಟಿ

    ಗುಡ್ ನ್ಯೂಸ್ ಕೊಟ್ಟ ‘ದಿ ವಿಲನ್’ ನಟಿ

    ನ್ನಡದ ‘ದಿ ವಿಲನ್’ (The Villain) ಸಿನಿಮಾ ಮೂಲಕ ಗಮನ ಸೆಳೆದ ಆ್ಯಮಿ ಜಾಕ್ಸನ್ (Amy Jackson) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಗೆ ನಟಿ ರೆಡಿಯಾಗಿದ್ದಾರೆ. ಸದ್ಯ ಅದ್ಧೂರಿಯಾಗಿ ಬ್ಯಾಚುರಲ್ ಪಾರ್ಟಿ ಮಾಡಿದ್ದಾರೆ. ಇದರ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.

    ಈ ವರ್ಷ ಜನವರಿಯಲ್ಲಿ ನಟ ಎಡ್ ವೆಸ್ಟ್‌ವಿಕ್ (Ed Westwick) ಜೊತೆ ಎಂಗೇಜ್ ಆಗಿರೋದಾಗಿ ಅಧಿಕೃತವಾಗಿ ನಟಿ ಘೋಷಿಸಿದರು. 2022ರಿಂದ ಇಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ. ಈಗ ಹೊಸ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಮಲಯಾಳಂ ನಟಿ ರಚನಾ

    ಇದೀಗ ಫ್ರಾನ್ಸ್‌ನಲ್ಲಿ ಸ್ನೇಹಿತರ ಜೊತೆ ಬ್ಯಾಚುರಲ್ ಪಾರ್ಟಿ ಮಾಡಿದ್ದಾರೆ. ಖಾಸಗಿ ಜೆಟ್‌ನಲ್ಲಿ ಪಾರ್ಟಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಧು ಎಂದು ಅಡಿಬರಹ ನೀಡಿದ್ದಾರೆ.

    ಬ್ಯಾಚುರಲ್ ಪಾರ್ಟಿ ಮಾಡುತ್ತಿರುವ ನಟಿ ಆ್ಯಮಿ ಮದುವೆ ಯಾವಾಗ? ಎಂಬುದು ಇನ್ನೂ ರಿವೀಲ್ ಆಗಿಲ್ಲ. ಸದ್ಯ ದಿ ವಿಲನ್‌ ನಾಯಕಿಯ ಖಾಸಗಿ ಬದುಕಿನ ಬಗ್ಗೆ ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ.

    ಅಂದಹಾಗೆ, 2019ರಲ್ಲಿ ನಟ ಜಾರ್ಜ್ ಎಂಬುವವರ ಜೊತೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದರು. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದರು.

    ಕೆಲ ಮನಸ್ತಾಪಗಳಿಂದ 2021ರಲ್ಲಿ ಜಾರ್ಜ್ ಜೊತೆ ನಟಿ ಬ್ರೇಕಪ್ ಮಾಡಿಕೊಂಡರು. ಜಾರ್ಜ್ ಜೊತೆಗಿನ ಅಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಬಳಿಕ ಮಾಜಿ ಬಾಯ್ ಫ್ರೆಂಡ್‌ಗೆ ಮಗನ ಜವಾಬ್ದಾರಿಯನ್ನು ಬಿಟ್ಟು ಕೊಡದೇ ತಾವೇ ನೋಡಿಕೊಳ್ತಿದ್ದಾರೆ.

  • ಇಂಡಿಯಾ ಗೇಟ್ ಮುಂದೆ ಬಾಯ್‌ಫ್ರೆಂಡ್‌ಗೆ ‘ದಿ ವಿಲನ್’ ನಾಯಕಿ ಲಿಪ್‌ಲಾಕ್

    ಇಂಡಿಯಾ ಗೇಟ್ ಮುಂದೆ ಬಾಯ್‌ಫ್ರೆಂಡ್‌ಗೆ ‘ದಿ ವಿಲನ್’ ನಾಯಕಿ ಲಿಪ್‌ಲಾಕ್

    ನ್ನಡದ ‘ದಿ ವಿಲನ್’ (The Villain) ಸಿನಿಮಾದ ನಾಯಕಿ ಆ್ಯಮಿ ಜಾಕ್ಸನ್ (Amy Jackson) 5 ವರ್ಷಗಳ ನಂತರ ಕಳದೆ ಮೂರು ದಿನಗಳ ಹಿಂದೆ ಭಾರತಕ್ಕೆ ಕಾಲಿಟ್ಟಿದ್ದಾರೆ. ಫಾರಿನ್‌ನಲ್ಲಿ ಬೀಡು ಬಿಟ್ಟಿದ್ದ ನಟಿ ಈಗ ಮತ್ತೆ ಭಾರತಕ್ಕೆ (India) ಮರಳಿದ್ದಾರೆ. ಸದ್ಯ ಮುಂಬೈ ಬೀದಿಯಲ್ಲಿ ಬಾಯ್‌ಫ್ರೆಂಡ್ ಎಡ್ ವೆಸ್ಟ್ವಿಕ್ ಜೊತೆ ಸುತ್ತಾಡುತ್ತಿದ್ದಾರೆ. ಗೆಳೆಯನಿಗೆ ಲಿಪ್ ಕಿಸ್ ಕೊಟ್ಟಿರೋ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ತಾಕತ್ತಿದ್ದರೆ ‘ಮಣಿಪುರ ಫೈಲ್ಸ್’ ಮಾಡಿ: ವಿವೇಕ್ ಅಗ್ನಿಹೋತ್ರಿಗೆ ಸವಾಲು

    2018ರಲ್ಲಿ ‘ದಿ ವಿಲನ್’ ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾದ ಆ್ಯಮಿ ಜಾಕ್ಸನ್ ಅವರು ಸುದೀಪ್- ಶಿವಣ್ಣ ಅವರ ಜುಗಲ್‌ಬಂದಿಯ ನಡುವೆಯೂ ನಟಿ ಹೈಲೆಟ್ ಆಗಿದ್ರು. ‘ನೋಡವಳಂದಾವ’ ಸಾಂಗ್‌ನಲ್ಲಿ ಆ್ಯಮಿ ಬ್ಯೂಟಿಯನ್ನ ಬಣ್ಣಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಕನ್ನಡದ ಜೊತೆ ಹಿಂದಿ, ತಮಿಳು, ಇಂಗ್ಲೀಷ್ ಸಿನಿಮಾಗಳಲ್ಲೂ ಆ್ಯಮಿ ಜಾಕ್ಸನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ಇದೀಗ ಬಿಟ್ರನ್ ಗೆಳೆಯ ಎಡ್ ವೆಸ್ಟ್ವಿಕ್ (Ed Westwick) ಜೊತೆ ನೆನ್ನೆ ಮುಂಬೈನ ಇಂಡಿಯಾ ಗೇಟ್‌ಗೆ (India Gate) ವಿಸಿಟ್ ಮಾಡಿದ್ದಾರೆ. ಬರೀ ಭೇಟಿ ಕೊಡೋದಲ್ದೇ ಇಂಡಿಯಾ ಮುಂದೆಯೇ ಹಸಿ – ಬಿಸಿ ಚುಂಬನವನ್ನೂ ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅಭಿಮಾನಿಗಳು ಉಬ್ಬೇರಿಸುವಂತೆ ಮಾಡಿದ್ದಾರೆ. ಬ್ರಿಟಿಷ್ ಆಕ್ಟರ್ ಆಗಿತೋ ಎಡ್ ಗಾಸಿಪ್ ಗರ್ಲ್ ಅನ್ನೋ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇದೀಗ ಗೆಳೆತಿ ಆ್ಯಮಿ ಜೊತೆ ಇಂಡಿಯಾಗೆ ಬಂದಿರೋ ಎಡ್ ಮತ್ತಷ್ಟು ಪ್ರಸಿದ್ಧ ಭಾಗಗಳನ್ನು ನೋಡೋ ಕೌತುಕದಲ್ಲಿದ್ದಾರೆ.

    ಇನ್ನೂ ಫಾರಿನ್‌ನಲ್ಲಿ ಆ್ಯಮಿ ಸೆಟಲ್ ಆಗಿದ್ರು. ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ನಟಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ರು. ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಸುದ್ದಿ, ಮದುವೆಯಾಗದೇ ಮಗು ಬಗ್ಗೆ ಅನೌನ್ಸ್ ಮಾಡಿದ್ದ ಆ್ಯಮಿ , ಈಗ ಹೊಸ ಬಾಯ್‌ಫ್ರೆಂಡ್ ಎಡ್ ವೆಸ್ಟ್ವಿಕ್ ಜೊತೆ ಎಂಗೇಜ್ ಆಗಿದ್ದಾರೆ. ಅಂದ್ಹಾಗೆ ಈಗ ಆ್ಯಮಿ ಜಾಕ್ಸನ್ ಕುರಿತು ಹೊಸ ಚರ್ಚೆ ಏನಂದ್ರೆ, ಸುಮಾರು ಐದು ವರ್ಷಗಳ ನಂತ್ರ ಆ್ಯಮಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಈ ಭೇಟಿ ಬಗ್ಗೆ ಆ್ಯಮಿ ಕೂಡ ಖುದ್ದಾಗಿ ಖುಷಿ ಹಂಚಿಕೊಂಡಿದ್ದು, ವರ್ಷಗಳ ನಂತ್ರ ಭಾರತಕ್ಕೆ ಬಂದಿರೋದು ಖುಷಿಕೊಟ್ಟಿದೆ ಎಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಜಿ ಪ್ರಿಯಕರನಿಂದ ಮಗು ಪಡೆದು ಬ್ರೇಕಪ್: ಬ್ರಿಟನ್ ನಟನ ಜೊತೆ `ದಿ ವಿಲನ್’ ನಟಿ ಸುತ್ತಾಟ

    ಮಾಜಿ ಪ್ರಿಯಕರನಿಂದ ಮಗು ಪಡೆದು ಬ್ರೇಕಪ್: ಬ್ರಿಟನ್ ನಟನ ಜೊತೆ `ದಿ ವಿಲನ್’ ನಟಿ ಸುತ್ತಾಟ

    ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಕಲಾವಿದೆ. ಅದರಲ್ಲೂ ಸುದೀಪ್ ಜೊತೆ `ದಿ ವಿಲನ್’ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದರು. ಈಗ ಸಿನಿಮಾಗಿಂತ ತಮ್ಮ ವಯಕ್ತಿಕ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಮಾಜಿ ಬಾಯ್‌ಫ್ರೆಂಡ್‌ನಿಂದ ಮಗು ಪಡೆದು, ಬ್ರೇಕಪ್ ನಂತರ ಬ್ರಿಟನ್ ನಟನ ಜತೆ ಏಂಗೇಜ್ ಆಗಿದ್ದಾರೆ.

    ಆ್ಯಮಿ ಜಾಕ್ಸನ್ ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿವ ನಾಯಕಿ, ಸತತ ೮ ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಚಾರಕ್ಕಿಂತ ತಮ್ಮ ವಯಕ್ತಿಕ ವಿಚರವಾಗಿ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಬ್ರಿಟಿಷ್ ಉದ್ಯಮಿ ಜಾರ್ಜ್ ಜತೆ ಆ್ಯಮಿ ರಿಲೇಷನ್‌ಶಿಪ್‌ನಲ್ಲಿದ್ದರು. ಜಾರ್ಜ್ ಪ್ರೀತಿಗೆ ಬ್ರೇಕ್ ಹಾಕಿ, ಇದೀಗ ಬ್ರಿಟನ್ ನಟ ಎಡ್ ವೆಸ್ಟ್‌ವಿಕ್ ಜತೆ ಎಂಗೇಜ್ ಆಗಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ತಂದೆಯನ್ನೂ ಕೊಲ್ಲುವ ಬೆದರಿಕೆ : ಎಫ್.ಐ.ಆರ್ ದಾಖಲು, ಹೆಚ್ಚಿದ ಭದ್ರತೆ

    ಬ್ರಿಟಿಷ್ ಉದ್ಯಮಿ ಜತೆ ಪ್ರೀತಿಯಲ್ಲಿದ್ದ ಆ್ಯಮಿಗೆ ನಂತರ ಗರ್ಭಿಣಿಯಾದರು. ಬಳಿಕ ಆಪ್ತರ ಸಮ್ಮುಖದಲ್ಲಿ ಏಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಬಳಿಕ 2019ರಲ್ಲಿ ಗಂಡು ಮಗುವಿಗೆ ತಾಯಿಯಾದ ಆ್ಯಮಿ ನಂತರ 2021ರಲ್ಲಿ ಜಾರ್ಜ್ ಬ್ರೇಕಪ್ ಮಾಡಿಕೊಂಡರು. ಈಗ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಈ ಕುರಿತು ಇನ್ಸಾ÷್ಟಗ್ರಾಂ ಖಾತೆಯಲ್ಲೂ ಆ್ಯಮಿ ಖಚಿತಪಡಿಸಿದ್ದರು. ಆಗಾಗ ರೊಮ್ಯಾಂಟಿಕ್ ಫೋಟೋ ಹಾಕುವ ಮೂಲಕ ಆ್ಯಮಿ ಸಖತ್ ಸುದ್ದಿಯಲ್ಲಿರುತ್ತಾರೆ.

     

    View this post on Instagram

     

    A post shared by Amy Jackson (@iamamyjackson)

    ಪ್ರೇಮ್ ನಿರ್ದೇಶನದ `ದಿ ವಿಲನ್’ ಚಿತ್ರದ ನಂತರ 2.0 ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದರು. ಈಗ ವಯಕ್ತಿಕ ಜೀವನದಲ್ಲಿ ಬ್ಯುಸಿಯಾದ ಮೇಲೆ ಬ್ರಿಟನ್‌ನಲ್ಲೇ ನೆಲೆಸಿದ್ದಾರೆ. ಮತ್ತೆ ಸಿನಿಮಾಗಳತ್ತ ಕಾಣಿಸಿಕೊಳ್ಳತ್ತಾರಾ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.