Tag: ಎಡಿಸಿ

  • ರಾಜ್ಯಪಾಲರ ಎಡಿಸಿ (ಮಿಲಿಟರಿ)ಯಾಗಿ ಸಂದೀಪ್ ಶರ್ಮಾ ಅಧಿಕಾರ ಸ್ವೀಕಾರ

    ರಾಜ್ಯಪಾಲರ ಎಡಿಸಿ (ಮಿಲಿಟರಿ)ಯಾಗಿ ಸಂದೀಪ್ ಶರ್ಮಾ ಅಧಿಕಾರ ಸ್ವೀಕಾರ

    ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಎಡಿಸಿ(ಮಿಲಿಟರಿ) ಆಗಿ ಸಂದೀಪ್ ಶರ್ಮಾ ಅಧಿಕಾರ ವಹಿಸಿಕೊಂಡಿದ್ದಾರೆ.

    ರಾಜಭವನದಲ್ಲಿ ಇಂದು ಅವರು ಎಡಿಸಿ( ಮಿಲಿಟರಿ) ಯಾಗಿ ವಹಿಸಿಕೊಂಡಿದ್ದಾರೆ. ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಆಗಿರುವ ಸಂದೀಪ್ ಶರ್ಮಾ, ರಾಜ್ಯಪಾಲರು ಇಬ್ಬರು ಎಡಿಸಿ ಗಳ ಪೈಕಿ ಮಿಲಿಟರಿ ಪ್ರತಿನಿಧಿಯಾಗಿರುತ್ತಾರೆ. ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಸಂದೀಪ್ ಶರ್ಮಾ ಅವರಿಗೆ ಕರ್ತವ್ಯಕ್ಕೆ ನಿಯೋಜಿಸಿ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ

    ರಾಜ್ಯಪಾಲರ ಭದ್ರತೆ, ಎಲ್ಲ ಚಲನವಲನ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಸಂದೀಪ್‌ ಅವರದ್ದಾಗಿದೆ. ಇಂದಿನಿಂದ ಅವರು ರಾಜ್ಯಪಾಲರ ಎಡಿಸಿ(ಮಿಲಿಟರಿ) ಯಾಗಿ ಕಾರ್ಯಭಾರ ನಿರ್ವಹಿಸಲಿದ್ದಾರೆ.

    ರಾಜ್ಯಪಾಲರ ಭದ್ರತೆ, ಎಲ್ಲಾ ಚಲನವಲನ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಇವರದ್ದಾಗಿದೆ. ಇಂದಿನಿಂದ ಸಂದೀಪ್ ಶರ್ಮಾ ರಾಜ್ಯಪಾಲರ ಎಡಿಸಿ(ಮಿಲಿಟರಿ) ಯಾಗಿ ಕಾರ್ಯಭಾರ ನಿರ್ವಹಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿಗೆ ಕೊರೊನಾ ಪಾಸಿಟಿವ್

    ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿಗೆ ಕೊರೊನಾ ಪಾಸಿಟಿವ್

    ರಾಮನಗರ: ಕಳೆದ ಎರಡು ದಿನದಿಂದ ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿ ಜವರೇಗೌಡಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

    ಶನಿವಾರ ಪಾದಯಾತ್ರೆ ನಡೆಸಬೇಡಿ ಎಂದು ಮನವಿ ಮಾಡಲು ಎಡಿಸಿ ಬಂದಿದ್ದರು. ನಿನ್ನೆ ಬೆಳಗ್ಗೆಯೂ ಕೊರೊನಾ ನಿಯಮ ಪಾಲಿಸಿ ಎಂದು ಹೇಳಿದ್ದರು. ಬಳಿಕ ಸಂಜೆ ಡಿಕೆಶಿ ಬಳಿ ಬಂದು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕೂಡ ಹೇಳಿದ್ದರು. ಈ ವೇಳೆ ಎಡಿಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೈದಿದ್ದರು. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್

    ಇತ್ತ ಪಾದಯಾತ್ರೆ ಬಳಿ ಹೋಗಿದ್ದ ಕಾರಣ ಎಡಿಸಿ ಇಂದು ಬೆಳಗ್ಗೆ ಟೆಸ್ಟ್ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಸದ್ಯ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇದನ್ನೂ ಓದಿ: ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತ ಎನ್.ಎಸ್.ದೇವಿಪ್ರಸಾದ್ ನಿಧನ

  • ಕೊರೊನಾದಿಂದ ವ್ಯಕ್ತಿ ಮೃತ- ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಎಡಿಸಿ

    ಕೊರೊನಾದಿಂದ ವ್ಯಕ್ತಿ ಮೃತ- ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಎಡಿಸಿ

    ಚಾಮರಾಜನಗರ: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಕೊರೊನಾ ವಾರಿಯರ್ಸ್ ಗೆ ನೈತಿಕ ಸ್ಥೈರ್ಯ ತುಂಬಿದರು.

    ಬುಧವಾರ ರಾತ್ರಿ ಚಾಮರಾಜನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಕೊಳ್ಳೇಗಾಲ ತಾಲೂಕಿನ ಬಸ್ತೀಪುರ ಗ್ರಾಮದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟರು. ಇವರ ಅಂತ್ಯಕ್ರಿಯೆ ಇಂದು ಚಾಮರಾಜನಗರದ ಹೊರವಲಯದಲ್ಲಿರುವ ಯಡಬೆಟ್ಟ ಸಮೀಪ ಜಿಲ್ಲಾಡಳಿತ ನಿಗದಿಪಡಸಿರುವ ಭೂಮಿಯಲ್ಲಿ ನಡೆಯಿತು.

    ಶವಾಗಾರದಿಂದ ಮೃತದೇಹ ಸಾಗಿಸಿ ಯಡಬೆಟ್ಟ ಸಮೀಪ ಅಂತ್ಯಕ್ರಿಯೆ ನೆರವೇರಿಸುವ ತನಕ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪಿ.ಎಫ್.ಐ ಕಾರ್ಯಕರ್ತರೊಂದಿಗೆ ಸೇರಿಕೊಂಡು ಸಿ.ಎಲ್.ಆನಂದ್ ಮೃತನ ಅಂತ್ಯಕ್ರಿಯೆ ನೆರವೇರಿಸಿದರು.

  • ಶಾಸಕರ ಹೆಸರಲ್ಲಿ ನಕಲಿ ಪಾಸ್- ಎಡಿಸಿಗೆ ಸಿಕ್ಕಿಬಿದ್ದ ಕಾರು ಚಾಲಕ

    ಶಾಸಕರ ಹೆಸರಲ್ಲಿ ನಕಲಿ ಪಾಸ್- ಎಡಿಸಿಗೆ ಸಿಕ್ಕಿಬಿದ್ದ ಕಾರು ಚಾಲಕ

    ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ ಗದಗ ಜಿಲ್ಲೆಯಿಂದ ಹಾವೇರಿಗೆ ಪ್ರವೇಶ ಮಾಡುತ್ತಿದ್ದ ಕಾರು ಚಾಲಕ ಅಪರ ಜಿಲ್ಲಾಧಿಕಾರಿ(ಎಡಿಸಿ) ಯೋಗೇಶ್ವರ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಕಲಿ ಪಾಸ್ ಸೃಷ್ಟಿಕರ್ತನ ಮೇಲೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.

    ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಮಾಡಲಾಗಿದ್ದು, ವೈದ್ಯಕೀಯ ಹಾಗೂ ತುರ್ತು ಸೇವೆ ಹೊರತುಪಡಿಸಿ ಇತರ ವಾಹನಗಳ ಓಡಾಟಕ್ಕೆ ನಿರ್ಬಂಧ ಹೆರಲಾಗಿದೆ. ವೈದ್ಯಕೀಯ ಹಾಗೂ ತುರ್ತು ಕಾರಣಗಳಿದ್ದರೆ ಅಧಿಕೃತ ಪಾಸ್ ಪಡೆದು ಪ್ರಯಾಣಿಸಬಹುದು. ಆದರೆ ಚಾಲಕ ದಿಲೀಪ್ ಬಂಕಾಪುರ ಮಾರುತಿ ಸುಜುಕಿ ಬ್ರೆಜ್ಜಾ (ಕೆಎ-27 ಎನ್ 4122) ಕಾರಿಗೆ ಬ್ಯಾಡಗಿ ಶಾಸಕರು ಎಂಬಂತೆ ನಕಲಿ ಪಾಸ್ ಅಂಟಿಸಿಕೊಂಡು ಕುಟುಂಬದೊಂದಿಗೆ ಲಕ್ಷ್ಮೇಶ್ವರದಿಂದ ರಾಣೇಬೆನ್ನೂರಿಗೆ ತೆರಳುತ್ತಿದ್ದ.

    ಚೆಕ್ ಪೋಸ್ಟ್ ಗಳ ತಪಾಸಣೆ ವೇಳೆ ಈ ಕಾರು ಗಮನಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಕಾರು ತಡೆದು ವಿಚಾರಣೆ ನಡೆಸಿದ್ದಾರೆ. ಕಾರಿನ ಮೇಲಿದ್ದ ಶಾಸಕರ ಹೆಸರಿನ ಪಾಸ್ ಕುರಿತು ಸಹ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಿಕ್ಕಿಬಿದ್ದಿದ್ದಾನೆ.

    ಕಾರಿನ ಮೇಲಿದ್ದ ಶಾಸಕರ ಹೆಸರಿನ ಬಣ್ಣದ ಪಾಸ್ ಕುರಿತು ಸಂಶಯಗೊಂಡು ಸ್ಥಳದಲ್ಲೇ ಶಾಸಕರಿಗೆ ಕರೆಮಾಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆಯಲ್ಲಿ ಶಾಸಕರು ಯಾರಿಗೂ ಪಾಸ್ ನೀಡಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಆಗ ನಕಲಿ ಪಾಸ್ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮೊಕದ್ದಮೆ ದಾಖಲಿಸಿ ಕಾರು ವಶಪಡಿಸಿಕೊಳ್ಳಲು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.