Tag: ಎಡಿಜಿಪಿ ಚಂದ್ರಶೇಖರ್

  • ಒಂದು ದಿನವಾದ್ರೂ ನನ್ನನ್ನ ಜೈಲಿಗೆ ಕಳಿಸಲು ರಾಜ್ಯ ಸರ್ಕಾರದಿಂದ ಸಂಚು – ಹೆಚ್‌ಡಿಕೆ ಗಂಭೀರ ಆರೋಪ

    ಒಂದು ದಿನವಾದ್ರೂ ನನ್ನನ್ನ ಜೈಲಿಗೆ ಕಳಿಸಲು ರಾಜ್ಯ ಸರ್ಕಾರದಿಂದ ಸಂಚು – ಹೆಚ್‌ಡಿಕೆ ಗಂಭೀರ ಆರೋಪ

    – ಒಬ್ಬ ಅಧಿಕಾರಿ ಬಂದು ನಿಮ್ಮನ್ನ ಕ್ರಿಮಿನಲ್ ಅಂದ್ರೆ ಏನ್‌ ಮಾಡ್ತೀರಿ ಸಿದ್ಧರಾಮಯ್ಯನವರೇ?
    – ನಾನು ಬೇಲ್ ತೆಗೆದುಕೊಂಡಿದ್ದೇನೆ, ಆ ಅಧಿಕಾರಿ ಸ್ಟೇ ತೆಗೆದುಕೊಂಡಿದ್ದಾರೆ ಎಂದ ಕೇಂದ್ರ ಸಚಿವ

    ನವದೆಹಲಿ: ಹಿಂದೆ ಇದೇ ಸಿದ್ದರಾಮಯ್ಯ (Siddaramaiah) ಅವರ ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಹೂಡಿತ್ತು. ಈಗಿರುವ ಅವರ ಪಟಾಲಂ ಕೂಡ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದರು.

    ದೆಹಲಿಯಲ್ಲಿ (New Delhi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಬಗ್ಗೆ ಮಾತಾಡಿದ್ದೆ. ಮಾಧ್ಯಮಗಳ ಮುಂದೆ ಅವರ ಕಥೆಯನ್ನು ಬಯಲು ಮಾಡಿದ್ದೆ. ಆದರೆ, ಅವರು ನನ್ನನ್ನ ಜೈಲಿಗೆ ಕಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಎಲ್ಲಿ ಯಾರ ಚೇಂಬರ್ ನಲ್ಲಿ ಕುಳಿತು ಮಾತಾಡಿದ್ದಾರೆ ಎನ್ನುವ ಮಾಹಿತಿ ನನಗೆ ಇದೆ. ಒಂದು ದಿನವಾದರೂ ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕು ಕಳಿಸಬೇಕೆಂದು ಚರ್ಚೆ ಮಾಡಲಾಗಿದೆ ಆರೋಪ ಮಾಡಿದರು.

    ನಾನು ಜಾಮೀನು ತೆಗೆದುಕೊಂಡಿದ್ದೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಸರ್ಕಾರದ ಕೆಟ್ಟ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆ ಎಂದು ನನ್ನ ವಕೀಲರು ಜಾಮೀನು ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಅದಕ್ಕೆ ಜಾಮೀನು ಪಡೆದಿದ್ದೇನೆ ಎಂದು ಅವರು ಹೇಳಿದರು. ಇದನ್ನೂ ಓದಿ: ರೇಪ್‌ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು

    ಕಳೆದ 3-4 ತಿಂಗಳಿಂದ ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. 80 ಕೋಟಿ ರೂ. ಗುಳುಂ ಮಾಡಿರೋ ಪ್ರಕರಣದಲ್ಲಿ ಏನಾಯಿತು? ಎಸ್‌ಐಟಿ ಯಾರನ್ನೋ ಬಂಧನ ಮಾಡಿದ್ದರು. ಯಾರೋ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಪ್ರಕರಣದಲ್ಲಿ ಸೇರಿಸಿದಿರಿ. ನಾನು ಯಾವುದೇ ಅಧಿಕಾರಿಯನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ನಾನು ಆ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ನನ್ನ ಕೇಸ್ ಬಗ್ಗೆ ಅಲ್ಲ. ರಾಜ್ಯಪಾಲರ ಕಚೇರಿ ತನಿಖೆ ಮಾಡುವುದಕ್ಕೆ ಅವಕಾಶ ಕೇಳಿ ಪತ್ರ ಬರೆದು, ಒಂದು ಖಾಸಗಿ ಚಾನೆಲ್‌ಗೆ ಲೀಕ್ ಮಾಡಿರುವ ಹಿನ್ನೆಲೆಯಲ್ಲಿ ನಾನು ಪ್ರಶ್ನೆ ಮಾಡಿದ್ದು ಎಂದು ಅವರು ಹೇಳಿದರು.

    ನಾನು ಆ ಪೋಲಿಸ್ ಅಧಿಕಾರಿಯ ಉದ್ಧಟನವನ್ನು ಖಂಡಿಸಿದ್ದೆ. ಆ ಅಧಿಕಾರಿಯ ಹಿನ್ನೆಲೆ ಏನಿದೆ ಎನ್ನುವುದನ್ನು ಹೇಳಿದ್ದೇನೆ. ಬೆಂಗಳೂರಿನ ಲ್ಯಾಂಡ್ ಮಾಫಿಯಾ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಜೊತೆ ಅವರ ನೇರ ನಂಟಿದೆ. ಸಮಾಜ ವಿದ್ರೋಹಿ ಶಕ್ತಿಗಳಿಗೆ ಸಾಥ್ ನೀಡಲು ಈ ವ್ಯಕ್ತಿಗೆ ಐಪಿಎಸ್ ಸ್ಥಾನ ಕೊಟ್ಟಿದ್ದಾರಾ? ಕ್ರಿಮಿನಲ್ ಪ್ರಕರಣದಲ್ಲಿ (Criminal Case) ಅಧಿಕಾರಿಯೇ ಆರೋಪಿ ನಂಬರ್ 2 ಆಗಿದ್ದಾರೆ. ಸದ್ಯ ಜಾಮೀನು ಮೇಲೆ ಹೊರಗಡೆ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಇದನ್ನೂ ಓದಿ: ಅಣ್ಣನಿಗೆ ಆಗದೇ ಇರೋರು ಹಗರಣ ಮಾಡಿದ್ದಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು: ಸಿಎಂ ಸಹೋದರ

    ನಿಮ್ಮನ್ನ ಕ್ರಿಮಿನಲ್‌ ಅಂದ್ರೆ ಏನ್‌ ಮಾಡ್ತೀರಿ?
    ಅಧಿಕಾರಿಗಳು ಸಿಎಂ ಬಳಿ ಬಂದು ನೀವು ಕ್ರಿಮಿನಲ್ ಸಿಎಂ ಅಂದ್ರೆ ಏನು ಮಾಡುತ್ತೀರಿ? ಶನಿವಾರ ಕಚೇರಿಗೆ ರಜೆ ಇದ್ದರೂ ಸಹೋದ್ಯೋಗಿಗಳಿಗೆ ಪತ್ರ ಬರೆಯುವ ನೆಲದಲ್ಲಿ ನನ್ನ ಬಗ್ಗೆ ಅಶ್ಲೀಲ ಭಾಷೆ ಬಳಕೆ ಮಾಡಿದ್ದಾರೆ. ಅದು ಕಚೇರಿ ಮೆಮೊ ಅಲ್ಲ, ಅದರಲ್ಲಿ ಸೀಲ್ ಇಲ್ಲ, ಆ ಇಲಾಖೆಯ ಎಂಬಲಂ ಇಲ್ಲ ಎಂದು ಸಚಿವರು ಹೇಳಿದರು.

    ಇಂಥ ಅಧಿಕಾರಿಗಳು ಸರ್ಕಾರವನ್ನು ಮೆಚ್ಚಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಸಲುವಾಗಿ ಜಾಮೀನು ತೆಗೆದುಕೊಂಡೆ. ಆ ಅಧಿಕಾರಿ ಮೇಲೆಯೂ ಪ್ರಕರಣ ಇದೆ. ಅವರು ಆರೋಪಿ ನಂಬರ್ 2, ಹೈಕೋರ್ಟ್ ನಲ್ಲಿ ತನಿಖೆಗೆ ಸ್ಟೇ ತಗೊಂಡಿದ್ದಾರೆ. ನಾನು ಬರೀ ಜಾಮೀನು ತಗೊಂಡಿದ್ದೇನೆ. ಸ್ಟೇ ತೆಗೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು. ಇದನ್ನೂ ಓದಿ: ರೇಪ್‌ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು

    ಗೃಹ ಸಚಿವ ಡಾ.ಪರಮೇಶ್ವರ್‌ ಶದ್ಧ ಪಂಡಿತರು. ನನ್ನ ಹೆಸರು ಉಲ್ಲೇಖಿಸಿಲ್ಲ ಅಂತಾರೆ. ಸಿಎಂ ಮೇಲೂ ಆರೋಪ ಇದೆ, ನಾಳೆ ಬೆಳಗ್ಗೆ ಬಂದು ನಿಮ್ಮ ಅಧಿಕಾರಿ ನಿಮ್ಮನ್ನು ಕ್ರಿಮಿನಲ್ ಮುಖ್ಯಮಂತ್ರಿ ಅಂತಾ ಕರೆದರೆ ಏನು ಮಾಡುತ್ತೀರಿ? ನನ್ನ ವಿರುದ್ಧ ಬರೆದ ಪತ್ರ ಹೇಗೆ ಹಂಚಲಾಯಿತು? ನನ್ನ ವಿರುದ್ಧ ಸಿಎಂ ಕಚೇರಿಯಿಂದ ಸೋಮವಾರ ರಾತ್ರಿ ಮತ್ತೊಂದು ಪತ್ರ ದಾಖಲೆಗಳು ಹೋಗಿವೆ. ಪತ್ರದಲ್ಲಿ ಉಲ್ಲೇಖಿಸಿರುವ ಕಿಶೋರ್ ಕುಮಾರ ಅವರನ್ನು ಇವರು ಎಲ್ಲಿಗೆ ಕರೆಸಿಕೊಂಡಿದ್ದರು? ಎಂದು ಅವರು ಪ್ರಶ್ನಿಸಿದರು.

  • ಎಡಿಜಿಪಿ ಕುಮಾರಸ್ವಾಮಿಯನ್ನ ಹಂದಿ ಎಂದಿದ್ದಾರಾ? – ಸಿದ್ದರಾಮಯ್ಯ ಪ್ರಶ್ನೆ

    ಎಡಿಜಿಪಿ ಕುಮಾರಸ್ವಾಮಿಯನ್ನ ಹಂದಿ ಎಂದಿದ್ದಾರಾ? – ಸಿದ್ದರಾಮಯ್ಯ ಪ್ರಶ್ನೆ

    – ಸ್ನೇಹಮಹಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ ಎಂದ ಸಿಎಂ
    – ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ

    ಮೈಸೂರು: ಎಡಿಜಿಪಿ ಚಂದ್ರಶೇಖರ್‌ (ADGP Chandrasekhar) ಮತ್ತು ಕುಮಾರಸ್ವಾಮಿ ನಡುವೆ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ (Siddaramaiah) ಅವರು, ಕುಮಾರಸ್ವಾಮಿಯನ್ನು ಎಡಿಜಿಪಿ ಹಂದಿ ಎಂದು ಕರೆದಿದ್ದಾರಾ? ಇಲ್ಲಾ ತಾನೇ. ಅವರು ಇಂಗ್ಲೀಷ್‌ನ ಬರ್ನಾಡ್ ಶಾರ ವ್ಯಾಕ್ಯವನ್ನ ಉಲ್ಲೇಖಿಸಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳಿಕ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಮತ್ತು ಕುಮಾರಸ್ವಾಮಿ ನಡುವೆ ಜಟಾಪಟಿ ವಿಚಾರ ಉತ್ತರಿಸಿದರು. ಕುಮಾರಸ್ವಾಮಿಯನ್ನು ಎಡಿಜಿಪಿ ಹಂದಿ ಎಂದು ಕರೆದಿದ್ದಾರಾ? ಇಲ್ಲಾ ತಾನೇ. ಅವರು ಇಂಗ್ಲೀಷ್‌ನ ಬರ್ನಾಡ್ ಶಾರ ವ್ಯಾಕ್ಯವನ್ನ ಉಲ್ಲೇಖಿಸಿದ್ದಾರೆ ಅಷ್ಟೇ. ಕುಮಾರಸ್ವಾಮಿ ಎಡಿಜಿಪಿ ಮೇಲೆ ಕೆಲವೊಂದಿಷ್ಟು ಆರೋಪ ಮಾಡಿದ್ದರು. ಅದಕ್ಕೆ ಕೆಲವು ಉತ್ತರಗಳನ್ನ ಕೊಟ್ಟಿದ್ದಾರೆ. ಹಂದಿ ಎನ್ನುವ ಪದವನ್ನು ಕುಮಾರಸ್ವಾಮಿ ಅವರಿಗೆ ಬಳಸಿದ್ದಾರೆ ಎಂದು ಹೇಗೆ ಹೇಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

    ನಾನು ಈ ವಿಚಾರದ ಬಗ್ಗೆ ಸುದೀರ್ಘ ವಿವರಣೆ ನೀಡುವುದಿಲ್ಲ. ಅದರಲ್ಲೂ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದ್ದೇನೆ. ಕುಮಾರಸ್ವಾಮಿ ತಪ್ಪು ಮಾಡಿ ಬಿಟ್ಟಿದ್ದಾರೆ. ಹೀಗಾಗಿ ಬೇರೆಯವರ ಮೇಲೆ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 136 ಶಾಸಕರಿಗೆ 1 ರೂಪಾಯಿ ಅನುದಾನ ಕೊಟ್ಟಿಲ್ಲ, ಇನ್ನೂ ಚನ್ನಪಟ್ಟಣಕ್ಕೆ 500 ಕೋಟಿ ಎಲ್ಲಿಂದ ಬರುತ್ತೆ?- ನಿಖಿಲ್

    ಗ್ಯಾರಂಟಿ ನಿಲ್ಲಿಸಲ್ಲ:
    ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಎಲ್ಲಿಯವರೆಗೂ ನಿಮ್ಮ ಆಶೀರ್ವಾದ ಇರುತ್ತೆ ಯಾರು ಏನು ಮಾಡಲು ಸಾಧ್ಯವಿಲ್ಲ. ಸ್ವಲ್ಪ ದಿನ ತೊಂದರೆ ಕೊಡಬಹುದು ಅಷ್ಟೇ. ನಾನು ಯಾರಿಗೂ ಹೆದರಲ್ಲ ಜಗಲ್ಲ, ಬಗ್ಗಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ನಾನು ಕ್ಲಿಯರ್ ಇದ್ದೇನೆ. ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಈ ವೇಳೆ ಸಿಎಂ ಮಾತು ಕೇಳಿ ಹೌದು ಹುಲಿಯಾ ಅಂತ ಜನ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಜಮೈಕಾ ಪ್ರಧಾನಿ ಭಾರತ ಪ್ರವಾಸ – ಸೋಮವಾರದಿಂದ 4 ದಿನಗಳ ಭೇಟಿ

    ಇದೇ ವೇಳೆ ಮೈಸೂರಿನ ಹೊರವಲಯದಲ್ಲಿ ನಡೆದಿರುವ ಪಾರ್ಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಎಸ್ಪಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲಿಸರು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು ಚುನಾವಣಾ ಬಾಂಡ್‌ಗೆ 570 ಕೋಟಿ ಹಣ ನೀಡಿವೆ – ಪ್ರಿಯಾಂಕ್‌ ಖರ್ಗೆ

    ನನಗೆ ಸ್ನೇಹಮಹಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ:
    ಇದೇ ವೇಳೆ ಸ್ನೇಹಮಯಿ ಕೃಷ್ಣ ಇಡಿಗೆ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಸ್ನೇಹಮಹಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ. ನಾನು ಇವತ್ತಿನವರೆಗೂ ಅವರನ್ನ ನೋಡಿಯೇ ಇಲ್ಲ. ಅವರ ಮೇಲೆ ಏನೇನು ಕೇಸ್ ಗಳಿದೆ ಅದು ನನಗೆ ಗೊತ್ತಿಲ್ಲ. ಅವರು ಇಡಿ ಕೇಸ್ ಕೊಟ್ಟಿರಬಹುದು, ಕೊಡಲಿ ಬಿಡಿ. ಕೇಸ್ ಕೊಟ್ಟ ತಕ್ಷಣ ಅದು ತನಿಖೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಮುಡಾ ವಿಚಾರ ನ್ಯಾಯಾಲಯದಲ್ಲಿದೆ, ಇದರ ಬಗ್ಗೆ ಹೆಚ್ಚು ಕಾಮೆಂಟ್ ಮಾಡುವುದಿಲ್ಲ ಎಂದು ಉತ್ತರಿಸಿದರು.

  • ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ

    ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ

    – ಸಿದ್ದರಾಮಯ್ಯ ಜಾಯಮಾನ ನನ್ನದಲ್ಲ, ಅವರಂತೆ ಸುಳ್ಳು ಹೇಳಿಲ್ಲ

    ಬೆಂಗಳೂರು: ಈ ರೀತಿಯ ಬ್ಲ್ಯಾಕ್‌ಮೇಲರ್ ಬೆಂಗಳೂರು ನಗರದ ಸುತ್ತ ಯಾರ ಜತೆ ಸೇರಿ ಯಾವ ರೀತಿ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ, ಇದಕ್ಕೆ ದಾಖಲೆ ಇದೆ ಎಂದು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದರು.

    ನಗರದಲ್ಲಿ ಮಾತನಾಡಿದ ಅವರು, ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಉತ್ತರ ಕೊಡಬೇಕು. ವಿಷ್ಯ ಕ್ರೋಢೀಕರಿಸದೇ ಮಾತಾಡಲ್ಲ ನಾನು. ಆ ಲೆಟರ್ ಚೆನ್ನಾಗಿ ಪ್ರಿಪೇರ್ ಮಾಡಿದ್ದಾರೆ. ನಿನ್ನೆ ಸಂಜೆ ಎಲ್ಲಿ ಹೋಗಿದ್ರು ಅವರು ಅದೂ ಗೊತ್ತಿದೆ. ಯಾವ ರೀತಿ ಲೆಟರ್ ರೆಡಿ ಮಾಡಬೇಕೋ ಆ ರೀತಿ ಮಾಡಿ ಬಿಟ್ಟಿದ್ದಾರೆ. ನಾನು ದಾಖಲೆ ಇಟ್ಕೊಂಡೇ ನಿನ್ನೆ ಮಾತಾಡಿದ್ದೆ. ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿ 25 ವರ್ಷಗಳಿಂದ ಇಲ್ಲಿದ್ದಾರೆ. ಯಾರ‍್ಯಾರನ್ನು ಹಿಡಿದು ಇಲ್ಲಿಗೆ ಬಂದ್ರು ಅಂತಾ ಗೊತ್ತಿದೆ. ಅವರ ಬಗ್ಗೆ ಮಾತಾಡಿ ಅವರನ್ನು ಯಾಕೆ ದೊಡ್ಡವರಾಗಿ ಮಾಡಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು: ಸಿ.ಟಿ.ರವಿ

    ಈ ಥರದ ಭಾಷೆ ಬಳಕೆ ಅವರ ಸಂಸ್ಕೃತಿ ತೋರಿಸುತ್ತೆ. ಯರ‍್ಯಾರ ಜತೆ ಇವರ ಸಂಬಂಧ ಇದೆ ಗೊತ್ತಿಲ್ವಾ? ಒಬ್ಬ ಕೇಂದ್ರದ ಮಂತ್ರಿ ಜತೆ ಹೇಗೆ ಮಾತಾಡಬೇಕು ಇವರು? ಸರ್ಕಾರ ಮೆಚ್ಚಿಸಲು ಇಂಥ ಅಧಿಕಾರಿಗಳನ್ನು ಇಟ್ಕೊಂಡಿದ್ದಾರೆ. ದ್ವೇಷದ ರಾಜಕೀಯ ಅನ್ನೋದು ಸಿದ್ದರಾಮಯ್ಯ ಆಡಳಿತದಲ್ಲಿ ಎಲ್ಲಿಗೆ ಹೋಗಿದೆ ಎಂದು ಎಡಿಜಿಪಿ ವಿರುದ್ಧ ಕಿಡಿಕಾರಿದರು. ನನ್ನ ರಾಜೀನಾಮೆ ಕೇಳ್ತಿದ್ದಾರೆ ಸಿದ್ದರಾಮಯ್ಯ (Siddaramaiah). ಅವರ ಮೆಚ್ಚಿಸಲು ನಾನು ರಾಜೀನಾಮೆ ಕೊಡಬೇಕಾ? ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿಲ್ಲ ಅಂದ್ಮೇಲೆ ರಾಜೀನಾಮೆ ಯಾಕೆ ಕೊಡಲಿ? ಸುಳ್ಳು ಹೇಳ್ತಿರೋದು ನಾನಲ್ಲ, ಸಿದ್ದರಾಮಯ್ಯ. ನನಗೂ ಅವರಿಗೂ ಇರುವ ವ್ಯತ್ಯಾಸ ಇಷ್ಟೇ. ನಾವು ದೇವರಿಗೆ ಹೆದರಿ ಜೀವನ ಮಾಡ್ತಿರೋರು ಎಂದು ಟಾಂಗ್ ಕೊಟ್ಟರು.

    ನಾನು ಆ ಅಧಿಕಾರಿ ಬರೆದ ಪತ್ರಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ. ನಾನು ಕ್ರಿಮಿನಲ್ಲೋ, ಆರೋಪಿಯೋ ಅಂತಾ ಅಂಥವರಿಂದ ಯಾಕೆ ಸರ್ಟಿಫಿಕೇಟ್ ತಗೊಳ್ಳಲಿ? ನಾನು ನಿನ್ನೆ ಮಾತಾಡಿದ ವಿಷಯಕ್ಕೆ ದಾಖಲೆ ಇದೆ. ಒಬ್ಬ ಈ ರೀತಿಯ ಬ್ಲ್ಯಾಕ್‌ಮೇಲರ್ ಬೆಂಗಳೂರು ನಗರದ ಸುತ್ತ ಯಾರ ಜತೆ ಸೇರಿ ಯಾವ ರೀತಿ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ. ಇದಕ್ಕೆ ದಾಖಲೆ ಇದೆ. ಆಂಧ್ರದ ಮನುಷ್ಯ ಹಿಮಾಚಲ ಪ್ರದೇಶದ ಕೇಡರ್. ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡದೇ ಕೆಲವರ ಮೂಲಕ ಇಲ್ಲಿದ್ದಾರೆ. ಅಲ್ಲಿಯ ವಾತಾವರಣ ಸೆಟ್ ಆಗಲ್ಲ ಅಂತಾ ಇಲ್ಲಿ ಇದ್ದಾರೆ. ಅಂಥವರ ಬಗ್ಗೆ ಚರ್ಚೆ ಮಾಡೋದು ಅನಾವಶ್ಯಕ, ಅವರನ್ಯಾಕೆ ದೊಡ್ಡವರಾಗಿ ಮಾಡಲಿ ಎಂದು ಎಡಿಜಿಪಿ ಚಂದ್ರಶೇಖರ್ (ADGP Chandrashekhar) ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ; ತಾಯಿ ದರ್ಶನಕ್ಕೆ ನಿರ್ಬಂಧ

    ಚುನಾವಣಾ ಬಾಂಡ್ ಪಾಲಿಟಿಕ್ಸ್ ಬಗ್ಗೆ ಮಾತನಾಡಿ, ಆಯಾ ರಾಜ್ಯಗಳಿಗೆ ಹೋಗಿ ಎಲ್ಲ ಕೇಂದ್ರ ಸಚಿವರ ಮೇಲೂ ಎಫ್‌ಐಆರ್ ಹಾಕಿಸಿ. ಎಲ್ಲರೂ ರಾಜೀನಾಮೆ ಕೊಡಬೇಕು ಅಂತಾ ಹೇಳಿ. ಈ ಥರದ ಹೊಸ ಸಂಪ್ರದಾಯ ಶುರು ಮಾಡಿ, ಚೆನ್ನಾಗಿರುತ್ತೆ ಎಂದು ತಿರುಗೇಟು ನೀಡಿದರು.

    ನಾನು ಏಕಾಂಗಿ ಹೋರಾಟ ಮಾಡ್ತಿದ್ದೀನಿ, ಯಾರನ್ನೂ ಸಹಾಯಕ್ಕೆ ಇಟ್ಕೊಂಡಿಲ್ಲ. ಅವರು ಎಷ್ಟು ಜನ ಮಂತ್ರಿಗಳು, ವಕೀಲರನ್ನು ಇಟ್ಕೊಂಡಿದ್ದಾರೆ ಗೊತ್ತಾ? ಸಿದ್ದರಾಮಯ್ಯ ನಿರಂತರವಾಗಿ ಮುಡಾ ಪ್ರಕರಣದಲ್ಲಿ ಸುಳ್ಳು ಹೇಳ್ಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಜಾಯಮಾನ ನನಗೆ ಗೊತ್ತಿಲ್ವಾ? ನಾನು ಗಂಗೇನಹಳ್ಳಿ ಪ್ರಕರಣದಲ್ಲಿ ಇರೋದನ್ನೇ ಹೇಳಿದೀನಿ. ಸಿದ್ದರಾಮಯ್ಯ ಥರ ಸುಳ್ಳು ಹೇಳಿಲ್ಲ ಎಂದು ತಿರುಗೇಟು ನೀಡಿದರು.

  • ಹೆಚ್‌ಡಿಕೆ ಆರೋಪಕ್ಕೆ ಪತ್ರದ ಮೂಲಕ ಕೌಂಟರ್ ಕೊಟ್ಟ ಎಡಿಜಿಪಿ ಚಂದ್ರಶೇಖರ್

    ಹೆಚ್‌ಡಿಕೆ ಆರೋಪಕ್ಕೆ ಪತ್ರದ ಮೂಲಕ ಕೌಂಟರ್ ಕೊಟ್ಟ ಎಡಿಜಿಪಿ ಚಂದ್ರಶೇಖರ್

    ಬೆಂಗಳೂರು: ಐಪಿಎಸ್ ಅಧಿಕಾರಿ ಚಂದ್ರಶೇಖರ್ (ADGP Chandrashekar) ಮೇಲೆ ಅಕ್ರಮ ಆಸ್ತಿ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ (HD Kumaraswamy) ಪತ್ರದ ಮೂಲಕ ಸ್ಪಷ್ಟನೆ ಕೊಟ್ಟು ಎಡಿಜಿಪಿ ಚಂದ್ರಶೇಖರ್ ಕೌಂಟರ್ ಕೊಟ್ಟಿದ್ದಾರೆ.

    ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ಪ್ರಕರಣ ಒಂದರ ಆರೋಪಿ ಎಂದು ಚಂದ್ರಶೇಖರ್ ಪತ್ರ ಆರಂಭಿಸಿದ್ದಾರೆ. ನನ್ನ ಮೇಲೆ ಹೆಚ್‌ಡಿಕೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ. ಎಸ್‌ಐಟಿ (SIT) ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಮಂಜೂರಾತಿ ಕೋರಿದೆ. ಆರೋಪಿ ಹೆಚ್.ಡಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ನಮ್ಮನ್ನ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ನಮ್ಮಲ್ಲಿ ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಅವನು ಎಷ್ಟೇ ಉನ್ನತ ಸ್ಥಾನದಲ್ಲಿದಲ್ಲಿದ್ದರೂ ಆತನೊಬ್ಬ ಆರೋಪಿ. ಇಂತಹ ಆರೋಪ ಮತ್ತು ಬೆದರಿಕೆಗಳಿಂದ ನಾವು ನಿರಾಶೆಗೊಳ್ಳಬಾರದು. ಎಸ್‌ಐಟಿ ಮುಖ್ಯಸ್ಥನಾಗಿ ನಾನು ಭಯವಿಲ್ಲದೇ ಕೆಲಸ ಮಾಡುತ್ತೇನೆ. ಪ್ರಕರಣದ ಸತ್ಯಾಸತ್ಯತೆ ಹೊರಗೆ ತರುತ್ತೇನೆ. ಎಲ್ಲಾ ಬಾಹ್ಯ ಪ್ರಭಾವದಿಂದ ನಿಮ್ಮನ್ನ ರಕ್ಷಿಸುತ್ತೇನೆ ಎಂದು ಎಸ್‌ಐಟಿ ಅಧಿಕಾರಿ ಸಿಬ್ಬಂದಿಗಳಿಗೆ ಚಂದ್ರಶೇಖರ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ FIR ಪಾಲಿಟಿಕ್ಸ್ | ಚುನಾವಣಾ ಬಾಂಡ್‌ ಹೆಸ್ರಲ್ಲಿ ವಸೂಲಿ ಆರೋಪ – ಬಿಜೆಪಿಗೆ ಶಾಕ್!

    ಪತ್ರದಲ್ಲಿ ಜಾರ್ಜ್ ಬರ್ನಾರ್ಡ್ ಷಾ ಅವರ ಪ್ರಸಿದ್ಧ ಇಂಗ್ಲಿಷ್ ವಾಕ್ಯವನ್ನು ಉಲ್ಲೇಖಿಸಲಾಗಿದೆ. ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ. ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತದೆ. ಆದರೆ ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ. ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸುವ ಅಪರಾಧಿಗಳು ಮತ್ತು ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಏಕೆಂದರೆ ಸತ್ಯವು ಯಾವಾಗಲೂ ಜಯಗಳಿಸುತ್ತದೆ. ಸತ್ಯ, ದೇವರು ಮತ್ತು ನಮ್ಮ ಕಾನೂನಿನಲ್ಲಿ ನಂಬಿಕೆ ಇರಲಿ. ಸತ್ಯಮೇವ ಜಯತೆ ಎಂದು ಪತ್ರದ ಮೂಲಕ ಎಡಿಜಿಪಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠಾಪನೆ `ನಾಚ್ ಗಾನಾ’ ಕಾರ್ಯಕ್ರಮವಾಗಿತ್ತು – ರಾಗಾ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ