Tag: ಎಟಿಸಿ

  • ಚೀತಾ ಹೆಲಿಕಾಪ್ಟರ್ ಪತನ – ಭಾರತೀಯ ಸೇನೆಯ ಇಬ್ಬರು ಪೈಲಟ್‌ಗಳು ಹುತಾತ್ಮ

    ಚೀತಾ ಹೆಲಿಕಾಪ್ಟರ್ ಪತನ – ಭಾರತೀಯ ಸೇನೆಯ ಇಬ್ಬರು ಪೈಲಟ್‌ಗಳು ಹುತಾತ್ಮ

    ಇಟಾನಗರ: ಅರುಣಾಚಲ ಪ್ರದೇಶದಲ್ಲಿ (Arunachal Pradesh) ಸಂಭವಿಸಿದ ಚೀತಾ ಹೆಲಿಕಾಪ್ಟರ್ (Cheetah Helicopter) ದುರಂತದಲ್ಲಿ ಭಾರತೀಯ ಸೇನೆಯ (Indian Army) ಇಬ್ಬರು ಪೈಲಟ್‌ಗಳು (Pilots) ಹುತಾತ್ಮರಾಗಿದ್ದಾರೆ.

    ಪೈಲಟ್ ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಮತ್ತು ಮೇಜರ್ ಜಯಂತ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ

    ಅರುಣಾಚಲ ಪ್ರದೇಶದ ಬೊಮ್ಡಿಲಾ ಪಟ್ಟಣದ ಪಶ್ಚಿಮದಲ್ಲಿರುವ ಮಂಡಲ ಪ್ರದೇಶದ ಬಳಿ ಆರ್ಮಿ ಏವಿಯೇಷನ್‌ನ ಚೀತಾ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸುತ್ತಿತ್ತು. ಜಿಲ್ಲೆಯ ಸಂಗೆ ಗ್ರಾಮದಿಂದ ಬೆಳಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ಟೇಕಾಫ್ ಆಗಿದ್ದು, ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಮಿಸ್ಸಮರಿ ಕಡೆಗೆ ತೆರಳುತ್ತಿತ್ತು. ಬೆಳಗ್ಗೆ 9.15ಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ (ATC) ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಮಂಡಲ ಪ್ರದೇಶದಲ್ಲಿ ಅಪಘಾತ ಸಂಭವಿಸಿತ್ತು ಎಂದು ಗುವಾಹಟಿ ರಕ್ಷಣಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ದೃಢಪಡಿಸಿದ್ದರು.

    ಘಟನೆ ಬಳಿಕ ಸಶಸ್ತç ಸೀಮಾ ಬಾಲ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸೇರಿದಂತೆ ಭಾರತೀಯ ಸೇನಾಪಡೆಯ ಐದು ತಂಡಗಳು ಕಾರ್ಯಾಚರಣೆ ನಡೆಸಿತ್ತು. ಕೆಲ ಗಂಟೆಗಳ ಬಳಿಕ ಮಂಡಲದ ಪೂರ್ವ ಗ್ರಾಮದ ಬಂಗ್ಲಾಜಾಪ್ ಬಳಿ ವಿಮಾನ ಅವಶೇಷಗಳು ಪತ್ತೆಯಾಗಿದ್ದು, ಅಪಘಾತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚಲು ಆದೇಶಿಸಲಾಗಿದೆ. ಇದನ್ನೂ ಓದಿ: ಕೊಲೆ ಆರೋಪಿಗಳ ಜಮೀನಿಗೆ ನುಗ್ಗಿದ ಬುಲ್ಡೋಜರ್ – ಬೆಳೆಗಳು ನೆಲಸಮ

    ಹೆಲಿಕಾಪ್ಟರ್ ಅಪಘಾತಕ್ಕೀಡಾದ ಪ್ರದೇಶದಲ್ಲಿ ಮೊಬೈಲ್ ಸಂಪರ್ಕ ಸಾಧ್ಯವಿಲ್ಲ. ಅಲ್ಲದೇ ಹೆಚ್ಚಾಗಿ ಮಂಜಿನಿಂದ ಕೂಡಿತ್ತು ಎಂದು ವಿಶೇಷ ತನಿಖಾ ಕೋಶದ (SIC) ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ತಿಳಿಸಿದ್ದಾರೆ.

  • ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ

    ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ

    ಇಟಾನಗರ: ಭಾರತೀಯ ಸೇನೆಯ (Indian Army) ಚೀತಾ ಹೆಲಿಕಾಪ್ಟರ್ (Cheetah Helicopter) ಅರುಣಾಚಲ ಪ್ರದೇಶದಲ್ಲಿ (Arunachal Pradesh) ಗುರುವಾರ ಪತನಗೊಂಡಿದೆ.

    ಮಾಹಿತಿ ಪ್ರಕಾರ, ರಾಜ್ಯದ ಬೊಮ್ಡಿಲಾ ಪಟ್ಟಣದ ಪಶ್ಚಿಮದಲ್ಲಿರುವ ಮಂಡಲ ಪ್ರದೇಶದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಇದನ್ನೂ ಓದಿ: 8 ವರ್ಷ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವಕ ಅರೆಸ್ಟ್

    ಚೀತಾ ಹೆಲಿಕಾಪ್ಟರ್ ಗುರುವಾರ ಬೆಳಗ್ಗೆ ಸುಮಾರು 9.15 ಗಂಟೆಗೆ ಏರ್ ಟ್ರಾಫಿಕ್ ಕಂಟ್ರೋಲ್ (Air Traffic Control)ನೊಂದಿಗೆ ಸಂಪರ್ಕ ಕಳೆದುಕೊಂಡಿದೆ ಎಂದು ಗುವಾಹಟಿ ರಕ್ಷಣಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ದೃಢಪಡಿಸಿದ್ದಾರೆ.

    ಘಟನೆ ಬಳಿಕ ಇಬ್ಬರು ಪೈಲಟ್‌ಗಳು ನಾಪತ್ತೆಯಾಗಿದ್ದು, ಸೇನೆಯಿಂದ ಶೋಧ ಕಾರ್ಯ ನಡೆದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಡಿ.ಕೆ ಶಿವಕುಮಾರ್ ಸ್ಪರ್ಧಿಸಲಿ – ಸ್ಥಳೀಯ ಕಾಂಗ್ರೆಸ್ ನಾಯಕರ ಮನವಿ 

  • 14 ನಿಮಿಷ ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ

    14 ನಿಮಿಷ ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ

    ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ 14 ನಿಮಿಷ ರಾಡಾರ್ ಸಂಪರ್ಕ ಕಳೆದುಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

    ಶನಿವಾರ ಮಧ್ಯಾಹ್ನ 2.08ಕ್ಕೆ ಸುಷ್ಮಾ ಸ್ವರಾಜ್ ಭಾರತೀಯ ವಾಯುಪಡೆಯ ಎಂಬ್ರೆಯರ್ 135 ವಿಮಾನದಲ್ಲಿ ಪ್ರಯಾಣ ಆರಂಭಿಸಿದ್ದರು. ತಿರುವನಂತಪುರದಿಂದ ಪ್ರಯಾಣ ಆರಂಭಿಸಿದ ಸುಷ್ಮಾ ಅವರು ಮಾರಿಷಸ್‍ಗೆ ತರಳುತ್ತಿತ್ತು. ವಿಮಾನ ಸಂಜೆ 4.44ಕ್ಕೆ ಮಾಲೆಯ ಎಟಿಸಿ(ವಿಮಾನ ಸಂಚಾರ ನಿಯಂತ್ರಣ)ಯೊಂದಿಗೆ ಸಂಪರ್ಕ ಪಡೆದುಕೊಂಡಿತ್ತು. ನಂತರ ಮಾಲೆ ಎಟಿಸಿಯನ್ನು ಮಾರಿಷಸ್‍ಗೆ ವರ್ಗಾಯಿಸಿತ್ತು.

    ಮಾಲೆಯಿಂದ ಮಾರಿಷಸ್‍ಗೆ ಎಟಿಸಿ ವರ್ಗಾಯಿಸುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಒಂದು ವೇಳೆ ಎಟಿಸಿ ಸಂಪರ್ಕ ಕಳೆದುಕೊಂಡಾಗ ಅಧಿಕಾರಿಗಳು 30 ನಿಮಿಷಗಳವರೆಗೆ ಕಾಯುತ್ತಾರೆ. ಆದ್ರೆ ವಿಮಾನದಲ್ಲಿ ಗಣ್ಯ ವ್ಯಕ್ತಿ ಪ್ರಯಾಣಿಸುತ್ತಿದ್ದ ಕಾರಣದಿಂದ ಭಯಗೊಂಡ ಮಾರಿಷಸ್‍ನ ಸಿಬ್ಬಂದಿ ಅಲಾರಂ ಒತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

    ಸಂಪರ್ಕ ಕಳೆದುಕೊಂಡ ಬರೋಬ್ಬರಿ 14 ನಿಮಿಷಗಳ ಬಳಿಕ ವಿಮಾನ ಮಾರಿಷಸ್ ಎಟಿಸಿಯೊಂದಿಗೆ ಸಂಪರ್ಕ ಸಾಧಿಸಿದೆ ಎಂದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.