Tag: ಎಟಿರಾಮಸ್ವಾಮಿ

  • ಹಾಸನ ರಾಜಕೀಯ ದೊಂಬರಾಟಕ್ಕೆ ರೇವಣ್ಣ ಕಾರಣ: ಎ.ಟಿ.ರಾಮಸ್ವಾಮಿ

    ಹಾಸನ ರಾಜಕೀಯ ದೊಂಬರಾಟಕ್ಕೆ ರೇವಣ್ಣ ಕಾರಣ: ಎ.ಟಿ.ರಾಮಸ್ವಾಮಿ

    ಹಾಸನ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಡೊಂಬರಾಟಕ್ಕೆಲ್ಲ ಮಾಜಿ ಸಚಿವ ರೇವಣ್ಣ (HD Revanna) ಅವರೇ ನೇರ ಕಾರಣ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ (AT Ramaswamy) ತೀವ್ರ ವಾಗ್ದಾಳಿ ನಡೆಸಿದರು.

    ಹಾಸನ (Hassan) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ತಮ್ಮ ಸ್ವಾರ್ಥಕ್ಕೆ ಯಾರನ್ನಾದರೂ ಬಲಿ ಕೊಡುತ್ತಾರೆ, ಅವರನ್ನ ನಂಬಬೇಡಿ ಎನ್ನುವ ಮೂಲಕ ಪರೋಕ್ಷವಾಗಿ ರೇವಣ್ಣ ವಿರುದ್ಧ ಗರಂ ಆದರು. ದೇವೇಗೌಡರನ್ನು (HD Devegowda) ಜಿಲ್ಲೆಯಿಂದ ಹೊರಗಟ್ಟಿ, ಇಳಿವಯಸ್ಸಿನಲ್ಲೂ ಸೋಲುವಂತೆ ಮಾಡಿದ್ದು ನೋವಿನ ವಿಷಯ. ಅವರನ್ನೇ ಹೊರ ಹಾಕಿದವರಿಗೆ ನಾವು ಯಾವ ಲೆಕ್ಕ, ದೇವೇಗೌಡರ ತಪಸ್ಸು, ಜಪ ಹಾಗೂ ಅವರ ಹೆಸರಿನಿಂದ ಮೇಲೆ ಬಂದ ನಂತರ ಏಣಿ ಒದ್ದರು, ಇಳಿವಯಸ್ಸಿನಲ್ಲೂ ನೋವು ಕೊಟ್ಟರು. ಹಿರಿಯ ಜೀವ ಈಗ ನೋವಿನಿಂದ ನರಳುತ್ತಿದೆ ಎಂದು ಮರುಗಿದರು.

    ಜಿಲ್ಲೆಯಲ್ಲಿ ಏನೇನು ನಡೆಯುತ್ತಿದೆ, ಡೊಂಬರಾಟ, ರಾಜಕೀಯ ಬಿಕ್ಕಟ್ಟಿಗೆ ಹೊರಗಿನವರು ಕಾರಣಾನಾ ಎಂದು ಪ್ರಶ್ನಿಸಿದ ಅವರು, ಇದಕ್ಕೆಲ್ಲ ರೇವಣ್ಣನ ಮನೆಯವರೇ ಕಾರಣ ಎಂದು ನೇರ ಆರೋಪ ಮಾಡಿದರು. ರಾಮಸ್ವಾಮಿಯವರೇ ನೀವು ಪ್ರಾಮಾಣಿಕರು, ದೇವೇಗೌಡರಿಗೆ ಸಮಾನರಾದವರು, ನೀವು ರಾಜಕೀಯದಲ್ಲಿ ಇರಬೇಕು, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ನಿಮ್ಮನ್ನು ಮಂತ್ರಿ ಮಾಡಲಾಗುವುದು ಎಂದೆಲ್ಲ ಹೇಳಿ, ಈಗ ಅವಹೇಳನ ಮಾಡಿ ಹೊರ ಓಡಿಸಿದ್ರಲ್ಲ, ನಾನು ಮಾಡಿದ ಅಪರಾಧ ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಕೋಮು ಪ್ರಚೋದನೆ ನೀಡಿದವರ ಮೇಲೆ ಕೇಸ್, ಅರೆಸ್ಟ್

    ಇಂತಹ ಚಟುವಟಿಕೆಗಳಿಂದ ಬೇಸತ್ತು ನಾನು ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನಿಂದ ದೂರ ಉಳಿದಿದ್ದೆ, ಆದರೆ ಶಾಸಕಾಂಗ ಸಭೆಗೆ ಬಂದಿಲ್ಲ ಎಂದು ಕುಮಾರಸ್ವಾಮಿ ಮಾಡಿರುವ ಆರೋಪ ಸುಳ್ಳು. ಪುಸ್ತಕ ತೆರೆದು ನೋಡಲಿ. ಯಾವುದೇ ಕಾರಣಕ್ಕೂ ಸತ್ಯ ಮರೆಮಾಚಬಾರದು ಎಂದರು. ಇದನ್ನೂ ಓದಿ: ದೊಡ್ಡಗೌಡರ ಖಡಕ್ ವಾರ್ನಿಂಗ್ – ಪ್ರತಿಭಟನೆ ಅರ್ಧಕ್ಕೆ ಕೈಬಿಟ್ಟ ಜೆಡಿಎಸ್ ಕಾರ್ಯಕರ್ತರು