Tag: ಎಚ್.ಸಿ ಮಹಾದೇವಪ್ಪ

  • ಜನಾಭಿಪ್ರಾಯಕ್ಕಾಗಿ ಬಿಜೆಪಿ ಅದರ ಅಂಗ ಸಂಸ್ಥೆಗಳಿಂದ ಧರ್ಮಾಧಾರಿತ ರಾಜಕಾರಣ: ಎಚ್.ಸಿ.ಮಹಾದೇವಪ್ಪ

    ಜನಾಭಿಪ್ರಾಯಕ್ಕಾಗಿ ಬಿಜೆಪಿ ಅದರ ಅಂಗ ಸಂಸ್ಥೆಗಳಿಂದ ಧರ್ಮಾಧಾರಿತ ರಾಜಕಾರಣ: ಎಚ್.ಸಿ.ಮಹಾದೇವಪ್ಪ

    ಬೆಂಗಳೂರು: ಶೂದ್ರ ಸಮಾಜ ಸಂಘಟನಾತ್ಮಕವಾಗಿ ಹೋರಾಟವನ್ನು ನಡೆಸಬೇಕು. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ಮುಂದಿಟ್ಟುಕೊಂಡು ಕೋಮುವಾದ ಮತ್ತು ಜಾತಿವಾದವನ್ನು ಹಿಮ್ಮೆಟ್ಟಿಸಿ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.

    ಕರ್ನಾಟಕ ರಾಜ್ಯ ಅತೀ ಹಿಂದುಳಿದ ಜಾಗೃತ ವೇದಿಕೆ ವತಿಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ ನಡೆದ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಾಭಿಪ್ರಾಯವನ್ನು ಪಡೆಯಲು ನಮ್ಮ ದೇಶದ ಬಹುತ್ವ ಮತ್ತು ಸೌಹಾರ್ದತೆಯನ್ನು ನಾಶ ಮಾಡಲು ಧರ್ಮಾಧಾರಿತ ರಾಜಕಾರಣವನ್ನು ಬಿಜೆಪಿ ಮತ್ತು ಅದರ ಪಳೆಯುಳಿಕೆಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

    HC Mahadevappa

    ಅಂಬೇಡ್ಕರ್ ಜಯಂತಿ ರಾಜಕೀಯ ಹುಟ್ಟುಹಬ್ಬದ ಆಚರಣೆಯಲ್ಲ. ಭಾರತದಲ್ಲಿ ಪ್ರತಿ ಹೋರಾಟಗಳನ್ನು ನಿರೂಪಿಸುವಂತಹ ಅತ್ಯಂತ ಮಹತ್ವದ ದಿನ. 21ನೇ ಶತಮಾನ ಸವಾಲಿನಿಂದ ಕೂಡಿದೆ. ಈ ಸವಾಲು, ಭಾಷೆ, ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಇಡೀ ಸಂವಿಧಾನಕ್ಕೆ ಸವಾಲು ಎಸೆಯುವಂತಹ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: SSLC ಮೌಲ್ಯಮಾಪನದಲ್ಲಿ ಲೋಪ ಮಾಡಿದ್ರೆ ಶಿಕ್ಷಕರು ಕಪ್ಪು ಪಟ್ಟಿಗೆ

    ಸಂವಿಧಾನದ ಸುಖೀ ರಾಜ್ಯ ಮತ್ತು ಮೌಲ್ಯ, ಧರ್ಮ, ಜಾತಿ, ಪ್ರದೇಶಗಳಲ್ಲಿ ತಾರಾತಮ್ಯ ಮಾಡದೇ ಎಲ್ಲರಿಗೂ ಸಮಾನತೆ ಮತ್ತು ಸಮನಾವಕಾಶಗಳನ್ನು ಒದಗಿಸಿಕೊಟ್ಟು ಸಮ ಸಮಾಜವನ್ನು ನಿರ್ಮಾಣ ಮಾಡಬೇಕು. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ. ನಾವು ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿ ಸಂವಿಧಾನದ ರಕ್ಷಣೆಯನ್ನು ಮಾಡಬೇಕು ಎಂದು ಹೇಳಿದರು. ಇದೇ ವೇಳೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಚಂದ್ರಶೇಖರ್ ಕಂಬಾರ, ಮಠಾಧೀಶರು, ಧರ್ಮಗುರುಗಳು, ಸಾಹಿತಿಗಳನ್ನು ಕರ್ನಾಟಕ ರಾಜ್ಯ ಅತೀ ಹಿಂದೂಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಮ್. ಸಿ. ವೇಣುಗೋಪಾಲ್ ಅವರು ಸನ್ಮಾನಿಸಿದರು. ಇದನ್ನೂ ಓದಿ: ಮಾಜಿ ಪ್ರೇಯಸಿ ಆಲಿಯಾ ವೈವಾಹಿಕ ಜೀವನಕ್ಕೆ ಶುಭ ಹಾರೈಸಿದ ಸಿದ್ಧಾರ್ಥ್ ಮಲ್ಹೋತ್ರಾ

    ಈ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಚಂದ್ರಶೇಖರ್ ಕಂಬಾರ, ಕರ್ನಾಟಕ ರಾಜ್ಯ ಅತೀ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಮ್. ಸಿ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಮಂಜುನಾಥ್, ಪ್ರಜಾವಾಣಿ ದಿನ ಪತ್ರಿಕೆಯ ಸಂಪಾದಕರಾದ ರವೀಂದ್ರ ಭಟ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಮಠಾಧೀಶರು, ಧರ್ಮಗುರುಗಳು, ಸಾಹಿತಿಗಳು, ವಕೀಲರು, ಹಿಂದುಳಿದ ಸಮುದಾಯಗಳ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಬೆಂಗಳೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನಟರಾಜ್ ಹುಳಿಯಾರ್ ಅವರು ಉಪನ್ಯಾಸ ನೀಡಿದರು.

  • ಚುನಾವಣೆಯಲ್ಲಿ ಸೋತ ಸರ್ಕಾರದ ಟಾಪ್ ಮಂತ್ರಿಗಳು

    ಚುನಾವಣೆಯಲ್ಲಿ ಸೋತ ಸರ್ಕಾರದ ಟಾಪ್ ಮಂತ್ರಿಗಳು

    ಬೆಂಗಳೂರು: ಈ ಬಾರಿ ನಾವೇ ಅಧಿಕಾರಕ್ಕೆ ಏರುತ್ತೇವೆ ಎಂದು ಹೇಳಿದ್ದ ಘಟಾನುಘಟಿ ಕೈ ನಾಯಕರು ಈ ಚುನಾವಣೆಯಲ್ಲಿ ಸೋತಿದ್ದಾರೆ.

    ದೇವೇಗೌಡರ ವಿರೋಧ ಕಟ್ಟಿಕೊಂಡು ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರೆ ಬದಾಮಿಯಲ್ಲಿ ಗೆದ್ದಿದ್ದಾರೆ. ಲಿಂಗಾಯತ ಧರ್ಮದ ಪರ ಹೋರಾಟ ನಡೆಸಿದ ಪ್ರಮುಖ ಸಚಿವರ ಪೈಕಿ ಶರಣ ಪ್ರಕಾಶ್ ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ ಸೋತಿದ್ದಾರೆ.

    ಕರಾವಳಿಯ ಬಿಜೆಪಿಯ ಹಿಂದುತ್ವದ ಅಲೆಯಿಂದಾಗಿ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಅಭಯಚಂದ್ರ ಜೈನ್ ಸೋತಿದ್ದಾರೆ. ಗುಂಡ್ಲುಪೇಟೆಯಲ್ಲಿ ಗೀತಾ ಮಹಾದೇವ ಪ್ರಸಾದ್, ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಸೋತಿದ್ದಾರೆ.

    ಎಸ್‍ಎಸ್ ಮಲ್ಲಿಕಾರ್ಜುನ, ಎಚ್.ಸಿ ಮಹಾದೇವಪ್ಪ, ಸಂತೋಷ್ ಲಾಡ್, ರುದ್ರಪ್ಪ ಲಮಾಣಿ, ಉಮಾಶ್ರೀ ಸೋತಿದ್ದಾರೆ.