Tag: ಎಚ್.ಸಿ.ಬಾಲಕೃಷ್ಣ

  • ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡ್ತೇವೆ: ಬಾಲಕೃಷ್ಣ

    ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡ್ತೇವೆ: ಬಾಲಕೃಷ್ಣ

    ಬೆಂಗಳೂರು: ರಾಮನಗರ (Ramanagar) ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ನಾಮಕರಣ ಮಾಡೋ ಚರ್ಚೆ ಆಗುತ್ತಿದೆ. ಡಿಕೆ ಶಿವಕುಮಾರ್ (D.K Shivakumar) ಅವರು ಇದನ್ನೇ ಹೇಳಿದ್ದಾರೆ. ಕನಕಪುರವನ್ನ (Kanakapura) ಬೆಂಗಳೂರಿಗೆ ಸೇರಿಸಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮಾಡೋ ಪ್ಲ್ಯಾನ್ ಇದೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ (MLA HC Balakrishna) ತಿಳಿಸಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡಿಕೆಶಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕನಕಪುರವನ್ನ ಬೆಂಗಳೂರಿಗೆ ಸೇರಿಸುತ್ತೇವೆ ಅನ್ನೋದು ಅಲ್ಲ. ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡ್ ನೇಮ್ ಇದೆ. ಮೊದಲು ನಮ್ಮದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂತ ಇತ್ತು. ಅದೇ ಬೆಂಗಳೂರು ಅನ್ನೋ ಹೆಸರನ್ನ ಇಟ್ಟುಕೊಂಡ್ರೆ ನಮ್ಮನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತಾರೆ. ಹೀಗಾಗಿ ಅದನ್ನ ಬದಲಾವಣೆ ಮಾಡಬೇಕು ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕನಕಪುರವನ್ನ ಬೆಂಗಳೂರಿಗೆ ಸೇರಿಸೋಕೆ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಮನಗರ ಇಬ್ಭಾಗ, ಬೆಂಗಳೂರಿಗೆ ಕನಕಪುರ – ಏನಿದು ಡಿಕೆಶಿ ಲೆಕ್ಕಾಚಾರ?

    ಕುಮಾರಸ್ವಾಮಿ ಹೇಳಿಕೆಗೆ ಬೆಲೆ ಕೊಡೋ ಅವಶ್ಯಕತೆ ಇಲ್ಲ. ಅವರು ಹತಾಶೆಯಿಂದ ಮಾತಾಡ್ತಿದ್ದಾರೆ. ನಾವು ಶಾಸಕರಾಗಿರೋದು ಕುಮಾರಸ್ವಾಮಿಗೆ ಇಷ್ಟ ಇಲ್ಲ. ಹೀಗಾಗಿ ಕುಮಾರಸ್ವಾಮಿ ಮಾತಿಗೆ ಬೆಲೆ ಕೊಡಬೇಕಿಲ್ಲ. ಕನಕಪುರದಲ್ಲಿ ಕುಮಾರಸ್ವಾಮಿ ಆಸ್ತಿ ಇಲ್ಲ. ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಅಲ್ಲ ಎಂದು ಹೆಚ್‍ಡಿಕೆ ವಿರುದ್ಧ ಶಾಸಕರು ಕಿಡಿಕಾರಿದ್ದಾರೆ.

    ರಾಮನಗರ ಜಿಲ್ಲೆಯನ್ನೇ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ನಾಮಕರಣ ಮಾಡ್ತೀವಿ. ಈಗ ಸಾರ್ವಜನಿಕ ಚರ್ಚೆಗೆ ಬಿಟ್ಟಿದ್ದಾರೆ. ಸಾರ್ವಜನಿಕರು ಹೇಳಿದಂತೆ ಮುಂದೆ ಮಾಡ್ತೀವಿ. ಕುಮಾರಸ್ವಾಮಿಗೆ ನಮ್ಮನ್ನು ಕಂಡ್ರೆ ಆಗಲ್ಲ. ನಾವು ಕರಿ ಕಾಗೆ ಅಂದ್ರೆ ಅವರು ಬಿಳಿ ಕಾಗೆ ಅಂತಾರೆ. ಅವರು ನಾವು ಏನೇ ಮಾತಾಡಿದ್ರು ವಿರೋಧ ಮಾಡ್ತಾರೆ. ಇದಕ್ಕೆ ನಾವು ಬೆಲೆ ಕೊಡೊ ಅವಶ್ಯಕತೆ ಇಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮಾಡೋಕೆ ನಾವೇ ಒತ್ತಡ ಮಾಡಿದ್ವಿ. ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋಕೆ ನಮ್ಮ ಒಪ್ಪಿಗೆ ಇದೆ ಎಂದರು.

    ಒಟ್ಟಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಬೇಕು ಅನ್ನೋದು ಈಗ ಚರ್ಚೆಗೆ ಬಿಟ್ಟಿದ್ದಾರೆ. ಚರ್ಚೆ ಆಗಲಿ, ಸಾರ್ವಜನಿಕರು ಏನ್ ಅಭಿಪ್ರಾಯ ಕೊಡ್ತಾರೋ ಅದರ ಮೇಲೆ ಮುಂದಿನ ತೀರ್ಮಾನ ಆಗುತ್ತವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಲಸ ಮಾಡ್ಬೇಕು ಅಂದ್ರೆ ವೋಟ್ ಹಾಕ್ಬೇಕು ಅನ್ನೋದರಲ್ಲಿ ತಪ್ಪೇನಿದೆ?: ಬಾಲಕೃಷ್ಣ ಸಮರ್ಥನೆ

    ಕೆಲಸ ಮಾಡ್ಬೇಕು ಅಂದ್ರೆ ವೋಟ್ ಹಾಕ್ಬೇಕು ಅನ್ನೋದರಲ್ಲಿ ತಪ್ಪೇನಿದೆ?: ಬಾಲಕೃಷ್ಣ ಸಮರ್ಥನೆ

    ರಾಮನಗರ: ಜನ ವೋಟ್ ಹಾಕೋದು ನಮ್ಮ ಕೆಲಸ ಮಾಡಲಿ ಅಂತ. ಕೆಲಸ ಮಾಡಬೇಕು ಅಂದ್ರೆ ವೋಟ್ ಹಾಕಬೇಕು ಅಂತಾ ಹೇಳುವುದರಲ್ಲಿ ತಪ್ಪೇನಿದೆ ಎಂದು ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ (H C Balakrishna) ಸಮರ್ಥಿಸಿಕೊಂಡಿದ್ದಾರೆ.

    ನಾನು ಕೆಲಸ ಮಾಡಲ್ಲ ಅಂತ ಹೇಳಿದ್ದೀನಾ..?, ನಾನು ವೋಟ್ ಹಾಕದೇ ಇರೋರಿಗೆ ಕೆಲಸ ಮಾಡಲ್ಲ ಅಂತ ನಾನು ಹೇಳಿಲ್ಲ. ಆಲೋಚನೆ ಮಾಡ್ತೇನೆ ಅಂತ ಹೇಳಿದ್ದೀನಿ. ಹೆಚ್ಚು ಲೀಡ್ ಕೊಡೊ ಬೂತ್‍ಗೆ ಹೆಚ್ಚು ಆಸಕ್ತಿ ವಹಿಸುತ್ತೇವೆ. ಕಡಿಮೆ ಲೀಡ್ ಕೊಡೋ ಬೂತ್‍ಗೆ ಕಡಿಮೆ ಆಸಕ್ತಿ ವಹಿಸುತ್ತೇವೆ. ಇದರಲ್ಲಿ ದ್ವೇಷ ರಾಜಕಾರಣ ಏನಿದೆ.? ನಾನೇನು ಜಗಳ ಮಾಡೋಕೆ ಹೋಗಿದ್ದೀನಾ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಮತ ಹಾಕದಿದ್ರೆ ಅಭಿವೃದ್ಧಿ ಮಾಡಲ್ಲ- ಬಾಲಕೃಷ್ಣ ಪರೋಕ್ಷ ಹೇಳಿಕೆಗೆ ಭಾರೀ ಆಕ್ರೋಶ

    ಶಾಸಕರು ಹೇಳಿದ್ದೇನು..?: ಬಿಜೆಪಿ-ಜೆಡಿಎಸ್ (BJP- JDS) ಮೈತ್ರಿಯಿಂದ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ. ಕಾಂಗ್ರೆಸ್ (Congress) ಮತಗಳು ವಿಭಜನೆ ಆಗಲ್ಲ. ರಾಜ್ಯದಲ್ಲಿ ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತೆ. ಬೂತ್ ಲೆಕ್ಕಾಚಾರದ ಮೇಲೆ ಎಲೆಕ್ಷನ್ ಆಗುತ್ತೆ. ಯಾವ್ ಬೂತ್ ನಲ್ಲಿ ಹೆಚ್ಚು ನಮಗೆ ವೋಟ್ ಬರುತ್ತೋ ಅಲ್ಲಿ ಕೆಲಸ ಮಾಡ್ತೀವಿ. ವೋಟ್ ಹಾಕದಿದ್ರೆ ಅಂತಹ ಬೂತ್ ಗಳ ಬಗ್ಗೆ ಆಲೋಚನೆ ಮಾಡ್ತೀವಿ. ಹಾಗಾಗಿ ಇದನ್ನ ಜನ ಯೋಚನೆ ಮಾಡಬೇಕು ಎಂದು ಶಾಸಕರು ಹೇಳಿದ್ದರು. ಶಾಸಕರ ಈ ಬೇಜಾವಾಬ್ದಾರಿ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ ದ್ವೇಷದ ರಾಜಕಾರಣಕ್ಕೆ ಶಾಸಕರು ಮುಂದಾದ್ರಾ ಎಂಬ ಪ್ರಶ್ನೆಯೂ ಎದ್ದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಳುವ ಗಂಡಸನ್ನು ನಗುವ ಹೆಂಗಸನ್ನು ನಂಬಬಾರದು: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ವ್ಯಂಗ್ಯ

    ಅಳುವ ಗಂಡಸನ್ನು ನಗುವ ಹೆಂಗಸನ್ನು ನಂಬಬಾರದು: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ವ್ಯಂಗ್ಯ

    ರಾಮನಗರ: ಅಳುವ ಗಂಡಸನ್ನ, ನಗುವ ಹೆಂಗಸನ್ನ ನಂಬಬಾರದು ಕಣ್ರೀ. ಗಂಡಸಾದವನು ಎಂತಹ ಸಂದರ್ಭದಲ್ಲೂ ಧೈರ್ಯ, ಶಕ್ತಿ ತುಂಬಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಎಚ್.ಡಿ ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ವಿರುದ್ಧ ಎಚ್.ಸಿ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

    ರಾಮನಗರ ತಾಲೂಕಿನ ಬಿಡದಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ, ಒಳ್ಳೆಯ ಎಂಎಲ್‍ಎ ನನ್ನು ಕರ್ಕೊಂಡ್ ಹೋಗ್ಬಿಟ್ರಿ ಅಂತಾ ಜೆಡಿಎಸ್‍ನವರು ಹೇಳಿದ್ರೆ, ಅಲ್ಲಿನ ಕೆಲವರು ಹಲ್ಲು ಹಲ್ಲು ಕಡಿದುಕೊಂಡು ಕೂತವರೇ ಎಂದು ತಿಳಿಸಿದ್ರು.

    ಜೆಡಿಎಸ್‍ನಲ್ಲಿ ಟಿಕೆಟ್ ಗೊಂದಲದ ಬಗ್ಗೆ ಮಾತನಾಡಿದ ಅವರು, ಇದು ರಾಜಕಾರಣ ಏನ್ರೀ? ಇಂತಹ ರಾಜಕಾರಣದ ಅವಶ್ಯಕತೆ ಇದೆಯೇನ್ರೀ. ಶಿಡ್ಲಘಟ್ಟದಲ್ಲಿ ಟಿಕೆಟ್ ತಗೊಂಡು ನಿಂತಿರುವವರ ಮನೆ ಹಾಳಾಗೋದಿಲ್ವೆನ್ರೀ. ದೇವನಹಳ್ಳಿಯಲ್ಲಿ ಒಬ್ಬನಿಗೆ ಬಿ ಫಾರಂ ಕೊಡ್ತಾರೆ, ಇನ್ನೊಬ್ಬನಿಗೆ ಸಿ ಫಾರಂ ಕೊಡ್ತಾರೆ. ಅವರ ಕುಟುಂಬದವರು ಸೂಸೈಡ್ ಮಾಡ್ಕೊಬೇಕೇನ್ರೀ? ಇವರನ್ನ ನಂಬಿಕೊಂಡು ಸಾಯಂಕಾಲ ಬರ್ತಾರೆ ನಿಮ್ಮ ಮುಂದೆ ಕಣ್ಣೀರು ಹಾಕ್ತಾರೆ ನೋಡಿ ಎಂದು ವ್ಯಂಗ್ಯವಾಡಿದ್ರು.

  • ಸಿಡಿ ಬಿಡುಗಡೆ ಮಾಡ್ತೀನಿ ಎಂದಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

    ಸಿಡಿ ಬಿಡುಗಡೆ ಮಾಡ್ತೀನಿ ಎಂದಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

    ರಾಮನಗರ: ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ನನ್ನ ವಿರುದ್ಧ ಸಿಡಿ ಬಿಡುಗಡೆ ಮಾಡುತ್ತೀನಿ ಎಂದಿದ್ದು ಬಹುಶಃ `ಜಾಗ್ವಾರ್’ ಚಿತ್ರದ ಸಿಡಿ ಇರಬೇಕು ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೆಚ್ ಸಿ ಬಾಲಕೃಷ್ಣಗೆ ಟಾಂಗ್ ಕೊಟ್ಟಿದ್ದಾರೆ.

    ಮಾಗಡಿಯಲ್ಲಿ ಮಾತನಾಡಿದ ನಿಖಿಲ್, ನಾನು ಸಿಡಿ ಬಿಡುಗಡೆ ಮಾಡಿಸಿಕೊಳ್ಳುವ ಕೆಲಸವೇನು ಮಾಡಿಲ್ಲ. ಇಂತಹ ದೊಡ್ಡ ಕುಟುಂಬದಲ್ಲಿ ಹುಟ್ಟಿದ್ದು, ಗೌರವಯುತವಾಗಿ ಬದುಕುತ್ತಿದ್ದೇನೆ. ಯಾವುದೇ ಸಿಡಿಗಾಗಿ ನಾನು ಹೆದರಲ್ಲ. ಯಾವುದೇ ಮಾಡಿದರೂ ಅದರಲ್ಲಿ ಸತ್ಯಾಂಶ ಇರಬೇಕು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣಗೆ ಸವಾಲ್ ಎಸೆದ ನಟ ನಿಖಿಲ್ ಕುಮಾರಸ್ವಾಮಿ

    ಶ್ಯಾನಭೋಗನಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ್ದ ಎಚ್.ಸಿ ಬಾಲಕೃಷ್ಣ ರವರು ನಿಖಿಲ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಿನಿಮಾ ನಟರು ಬಂದು ನಾವು ಬೆನ್ನಿಗೆ ಚೂರಿ ಹಾಕ್ತಾರೆ ಅಂತಾ ಹೇಳ್ತಾರೆ. ಅವರು ಬಂದು ಕೇವಲ ಪ್ರಚಾರ ಮಾಡಿಕೊಂಡು ಮತ ಕೇಳಿಕೊಂಡು ಹೋಗಬೇಕು. ಅದನ್ನ ಬಿಟ್ಟು ಅವರೇನಾದರೂ ಮಾತನಾಡಿದರೆ, ನಮ್ಮ ಬಳಿ ಬೇಜಾನ್ ಕ್ಯಾಸೆಟ್‍ಗಳಿವೆ ನಾನು ಹೊರಗೆ ತೆಗೆಯುತ್ತೇನೆ ಎಂದು ಹೇಳಿದ್ದರು.

    ಆದ್ರೆ ಬಳಿಕ ಬಿಡದಿ ಹೋಬಳಿಯಲ್ಲಿ ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ವೇಳೆ ಮಾತನಾಡಿದ ಬಾಲಕೃಷ್ಣ, ಚುನಾವಣೆ ಮುಗಿಯುವರೆಗೂ ಸಹ ಸಿಡಿ ವಿಚಾರವಾಗಿ ನಾನು ಮಾತನಾಡಲ್ಲ. ಚುನಾವಣೆ ಮುಗಿದ ಬಳಿಕ ಅದರ ಬಗ್ಗೆ ಮಾತನಾಡುತ್ತೇನೆ. ಉತ್ತರ ಕೊಡ್ತೀನಿ. ಹೀಗಾಗಿ ಈಗ ಅದರ ಅವಶ್ಯಕತೆ ಇಲ್ಲ. ನಿಖಿಲ್ ಕುಮಾರಸ್ವಾಮಿ ಒಬ್ಬ ಫಿಲಂ ಆಕ್ಟರ್, ಫಿಲಂ ಆಕ್ಟರ್ ತರಹ ಡೈಲಾಗ್ ಹೊಡೆದುಕೊಂಡು ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ರು.

  • ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ

    ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ

    ರಾಮನಗರ: ಮಾಗಡಿ ಪುರಸಭೆ ಅದ್ಯಕ್ಷ ಚುನಾವಣೆಯಲ್ಲಿ ದಲಿತರಿಗೆ ಮಾತು ಕೊಟ್ಟು ಬೇರೆಯವರಿಗೆ ಮಣೆ ಹಾಕಿದ್ದಕ್ಕೆ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.

    ಇಂದು ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಿತ್ತು. ಚುನಾವಣೆಗೆ ಮುನ್ನ ದಲಿತ ಮುಖಂಡರಾದ ರಂಗಹನುಮಯ್ಯನವರ ಪತ್ನಿಗೆ ಅಧ್ಯಕ್ಷ ಸ್ಥಾನದ ಭರವಸೆ ನೀಡಲಾಗಿತ್ತು. ಆದ್ರೆ ಇಂದು ನಡೆದ ಚುನಾವಣೆಯಲ್ಲಿ ಕುರುಬ ಸಮುದಾಯದ ಮಂಜುನಾಥ್ ಗೆ ಅಧ್ಯಕ್ಷ ಪಟ್ಟ ನೀಡಲಾಯ್ತು.

    ದಲಿತ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ತಪ್ಪಿದ್ದರಿಂದ ದಲಿತರು ಪುರಸಭೆಯಿಂದ ಹೊರಟಿದ್ದ ಶಾಸಕ ಬಾಲಕೃಷ್ಣರ ಕಾರನ್ನು ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇನ್ನೂ ಕಾರಿಗೆ ಹಾಕಿದ್ದ ಹೂವಿನ ಹಾರವನ್ನು ಕಿತ್ತೆಸೆದರು. ನಂತರ ಮುಂದೆ ಸಾಗುತ್ತಿದ್ದ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ. ಆದ್ರೆ ಕಾರು ಮುಂದೆ ಸಾಗಿದ್ರಿಂದ ದೂರದಲ್ಲಿ ಚಪ್ಪಲಿ ಬಿದ್ದಿದೆ. ಬಾಲಕೃಷ್ಣರಿಗೆ ಮಾತ್ರವಲ್ಲದೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಸಂಸದ ಡಿ.ಕೆ ಸುರೇಶ್ ವಿರುದ್ಧ ಧಿಕ್ಕಾರ ಕೂಗಿ, ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    https://www.youtube.com/watch?v=LenMxp3xZrU