Tag: ಎಚ್. ವಿಸ್ವನಾಥ್

  • ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದು ಅಂಬೇಡ್ಕರ್‌ಗೆ ಮಾಡಿದ ಅಪಮಾನ: ವಿಶ್ವನಾಥ್

    ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದು ಅಂಬೇಡ್ಕರ್‌ಗೆ ಮಾಡಿದ ಅಪಮಾನ: ವಿಶ್ವನಾಥ್

    -ವಿರೋಧ ಪಕ್ಷದ ನಾಯಕನೆಂದು ಎಲ್ಲವನ್ನೂ ವಿರೋಧಿಸಲ್ಲ

    ಮೈಸೂರು: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತ ಅನ್ನೋದು ದಾದಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ವತಃ ಮಾಜಿ ಡಿಸಿಎಂ ಪರಮೇಶ್ವರ್ ಅವರೇ ನಮ್ಮ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯದಿಂದ ಆಗಿರುವ ದಾಳಿ ಅಲ್ಲ ಎಂದಿದ್ದಾರೆ. ಆದರೆ ಕೆಲವರು ಇದು ರಾಜಕೀಯ ಪ್ರೇರಿತ ಎನ್ನುತ್ತಿದ್ದಾರೆ. ಎಲ್ಲದಕ್ಕೂ ರಾಜಕೀಯವನ್ನು ಬೆರೆಸುವುದು ತಪ್ಪು. ಮಾಜಿ ಸಿಎಂ ಸಿದ್ಧರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಎಂದು ಎಲ್ಲವನ್ನೂ ವಿರೋಧಿಸಬಾರದು. ನೀವು ಈ ಹಿಂದೆಯೂ ವಿರೋಧ ಪಕ್ಷದ ನಾಯಕರಾಗಿ, ಮಾಜಿ ಸಿಎಂ ಆಗಿ ಕೆಲಸ ಮಾಡಿದ್ದೀರಿ. ನಿಮಗೆ ಒಳ್ಳೆಯ ಅನುಭವವಿದೆ. ಆದರೆ ಎಲ್ಲವನ್ನು ವಿರೋಧಿಸಿಕೊಂಡು ಬಂದರೆ ನಿಮ್ಮ ದೊಡ್ಡ ವ್ಯಕ್ತಿತ್ವ ಏರಲ್ಲ, ಕುಗ್ಗತ್ತೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ:ಮೈಸೂರು ವಿಭಜನೆ ಆಗಬೇಕು- ಹೆಚ್ ವಿಶ್ವನಾಥ್

    ಐಟಿ ದಾಳಿಗಳನ್ನು ಸುಖಾ ಸುಮ್ಮನೆ ರಾಜಕೀಯ ಪ್ರೇರಿತ ಅನ್ನೋದು ತಪ್ಪಾಗುತ್ತದೆ. ಕಾನೂನು ರೂಪಿಸುವ ರಾಜಕಾರಣಿಗಳೇ ಕಾನೂನಿಗೆ ಬೆಲೆ ಕೊಡದೆ ಇದ್ದರೆ ಹೇಗೆ? ತಪ್ಪು ಮಾಡಿಲ್ಲವೆಂದಾದರೆ ಕಾನೂನಿನಲ್ಲಿ ಯಾರಿಗೂ ಶಿಕ್ಷೆಯಾಗಲ್ಲ. ಹೀಗಾಗಿ ಐಟಿ ದಾಳಿಗಳನ್ನ ರಾಜಕೀಯಕ್ಕೆ ಮಿಶ್ರಣ ಮಾಡೋದು ಸರಿಯಲ್ಲ ಎಂದು ಹೇಳಿದರು.