Tag: ಎಚ್ ಡಿ ದೇವೇ ಗೌಡ

  • ಮನವೊಲಿಸಲು ಯತ್ನಿಸಿದ ಡಿಸಿಎಂಗೆ ಮುದ್ದಹನುಮೇಗೌಡ ಖಡಕ್ ಉತ್ತರ

    ಮನವೊಲಿಸಲು ಯತ್ನಿಸಿದ ಡಿಸಿಎಂಗೆ ಮುದ್ದಹನುಮೇಗೌಡ ಖಡಕ್ ಉತ್ತರ

    ತುಮಕೂರು: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಹಾಲಿ ಸಂಸದ ಮುದ್ದಹನುಮೇಗೌಡ ಅವರನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ ಪರಂ ಮಾತಿಗೆ ಹಾಲಿ ಸಂಸದರು ಒಪ್ಪಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹೌದು. ಮುದ್ದಹನುಮೇಗೌಡ ಅವರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಕಾಂಗ್ರೆಸ್ ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ, ಅಲ್ಲದೆ ಈ ಬಗ್ಗೆ ಇಂದು ನಾಮಪತ್ರ ಕೂಡ ಸಲ್ಲಿಸುವುದಾಗಿ ಹೇಳಿದ್ದರು. ಆದ್ರೆ ಈ ಮಧ್ಯೆ ಡಿಸಿಎಂ ಅವರು ಭಾನುವಾರ ತಡರಾತ್ರಿ ಮುದ್ದಹನುಮೇಗೌಡ ಅವರಿಗೆ ಪೋನ್ ಕರೆ ಮಾಡಿ ಮನವೊಲಿಕೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.


    ನಿಮ್ಮ ಅಸಮಾಧಾನ ಬಿಟ್ಟುಬಿಡಿ ನಮ್ಮ ಜೊತೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಪರಮೇಶ್ವರ್ ಮನವೊಲಿಕೆಗೆ ಪಟ್ಟು ಬಿಡದ ಮುದ್ದುಹನುಮೇಗೌಡ, ಸ್ಪರ್ಧಿಸಿಯೇ ಸ್ಪರ್ಧಿಸುತ್ತೇನೆ. ಏನ್ ಮಾಡ್ಕೊತ್ತೀರಾ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಇತ್ತೀಚೆಗೆ ನಡೆದ ಹೆಬ್ಬೂರಿನ ತೋಟದ ಮನೆಯಲ್ಲಿ ಕಾರ್ಯಕರ್ತರ ಜೊತೆ ಮುದ್ದಹನುಮೇಗೌಡ ಅವರು ಸಭೆ ನಡೆಸಿದ್ದರು. ಸಭೆಯಲ್ಲಿ ಮಾತನಾಡಿದ ಗೌಡರು, ನನಗಾಗಿ ಅನೇಕ ಹೃದಯಗಳು ಮಿಡಿದಿವೆ. ಅವರಿಗೆ ನನ್ನ ಅಭಿನಂದನೆ ಸಲ್ಲಿಸುತ್ತಿದ್ದೇನೆ. 30 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನಾನು 10 ದಿನಗಳ ಹಿಂದೆ ಈ ಸಭೆ ನಡೆಸುತ್ತೇನೆ ಎಂಬ ಅರಿವಿರಲಿಲ್ಲ. ನೀತಿ ಸಂಹಿತೆ ಜಾರಿಗೆ ಬರುವವರೆಗೂ ಲೋಕಸಭೆ ಸದಸ್ಯನಾಗಿ ಕೆಲಸ ಮಾಡಿದೆ. ಒಂದೇ ಒಂದು ಕಾರಣ ಹೇಳಿಲ್ಲ. ನನ್ನನ್ನೇ ಯಾಕೆ ಬಲಿಪಶು ಮಾಡುತ್ತೀರಾ ಎಂದು ಪ್ರಶ್ನಿಸಿದ್ದ ಅವರು, ಇನ್ನೂ ಕಾಲ ಮಿಂಚಿಲ್ಲ. ಒಂದು ಅವಕಾಶ ಕೊಡಿ. ನನಗೆ ಟಿಕೆಟ್ ಕೊಟ್ರೆ ಇತಿಹಾಸ ಸೃಷ್ಟಿಯಾಗುತ್ತದೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಜನರ ನ್ಯಾಯಾಲಯದಲ್ಲಿ ಹೋಗುತ್ತೇನೆ. ಸೀಟ್ ಗೋಸ್ಕರ ಅಂಗಲಾಚುವ ಪರಿಸ್ಥಿತಿ ಬರಲಿದೆ ಅಂದು ನಿರೀಕ್ಷೆ ಮಾಡಿಲ್ಲ. ಯಾರ ಬಗ್ಗೆನೂ ಟೀಕೆ ಮಾಡಿಲ್ಲ. ಮನವಿ ಮಾಡಿದ್ದೇನೆ ಅಷ್ಟೆ ಎಂದು ಹೇಳಿದ್ದರು.

    ಇದೇ ವೇಳೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದ್ರು. ಅಯ್ಯಯ್ಯೊ ಅನ್ಯಾಯ.. ನ್ಯಾಯ ಬೇಕು ಎಂದು ಘೋಷಣೆ ಮಾಡಿದ್ದರು. ಸ್ಪರ್ಧೆ ಮಾಡದೇ ಇದ್ದರೆ ವಿಷ ಕುಡಿಯುವುದಾಗಿ ಅಭಿಮಾನಿಗಳಿಂದ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಿಂದಾಗಿ ಮುದ್ದಹನುಮೇಗೌಡರು ಸ್ಪರ್ಧಿಸಲು ನಿರ್ಧರಿಸಿದ್ದಾರೆ.

    ತಮ್ಮ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರದಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಂಡಾಯ ಜೋರಾಗಿದೆ.

  • `ದೇವೇಗೌಡರ ಕ್ರಿಕೆಟ್ ಟೀಂ’ – ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

    `ದೇವೇಗೌಡರ ಕ್ರಿಕೆಟ್ ಟೀಂ’ – ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

    ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಟಿಕೆಟ್ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಈ ಮಧ್ಯೆ ಕುಟುಂಬ ರಾಜಕಾರಣದ ಬಗ್ಗೆ ಭಾರೀ ಚರ್ಚೆಗಳಾಗುತ್ತಿವೆ.

    ಹೌದು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ದೇವೇಗೌಡರು ಟೀಂ ಇಂಡಿಯಾ ಕಟ್ಟುತ್ತಿದ್ದರೆ ಅವರ ಇಡೀ ಕುಟುಂಬ ಟೀಂ ಇಂಡಿಯಾದಲ್ಲಿರುತ್ತಿತ್ತು ಎಂದು ಹೇಳುವಂತಹ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಫೋಟೋದಲ್ಲಿ ಟೀಂ ಇಂಡಿಯಾ ಆಟಗಾರರ ಫೋಟೋಗೆ ದೇವೇಗೌಡರ ಕುಟುಂಬದವರ ಫೋಟೋ ಎಡಿಟ್ ಮಾಡಿ `ದೇವೇಗೌಡರ ಕ್ರಿಕೆಟ್ ಟೀಂ’ ಎಂದು ಬರೆಯಲಾಗಿದೆ. ಇದೀಗ ಈ ಎಡಿಟೆಡ್ ಫೋಟೋ ವೈರಲ್ ಆಗುತ್ತಿದೆ. ದೊಡ್ಡಗೌಡ್ರು ಇಂಡಿಯಾ ಟೀಂ ಸೇರಿದ್ದಿದ್ರೆ ಇಷ್ಟೊತ್ತಿಗೆ ಫುಲ್ ಟೀಂನಲ್ಲಿ ಅವರ ಕುಟುಂಬದವ್ರೇ ಇರುತ್ತಿದ್ದರು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಜೆಡಿಎಸ್‍ನಲ್ಲಿ ಯಾವ ಕಾರ್ಯಕರ್ತರಿಗೂ `ಟಿಕೆಟ್’ ಕೊಡಲ್ಲ. ಪಕ್ಷಕ್ಕಾಗಿ ದುಡಿದು ದುಡಿದು ಅವರೇ `ಟಿಕೆಟ್’ ತಗೋಬೇಕು ಎಂದು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿಶೇಷ ಏನೆಂದರೆ ಜೆಡಿಎಸ್ ಕಾರ್ಯಕರ್ತರೇ ಈ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರ ಕೆಡವಲು ಯತ್ನಿಸುತ್ತಿರೋ ಬಿಎಸ್‍ವೈಗೆ ಎಚ್‍ಡಿಡಿ ಶಾಕ್

    ಸರ್ಕಾರ ಕೆಡವಲು ಯತ್ನಿಸುತ್ತಿರೋ ಬಿಎಸ್‍ವೈಗೆ ಎಚ್‍ಡಿಡಿ ಶಾಕ್

    ಮೈಸೂರು: `ಆಪರೇಷನ್ ಕಮಲ’ ಮೂಲಕ ತಮ್ಮ ಕಿರಿ ಮಗನ ಸರ್ಕಾರವನ್ನು ಕೆಡವಲು ಯತ್ನಿಸಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ ಮಾಜಿ ಪ್ರಧಾನಿ ದೇವೇಗೌಡರು ಶಾಕ್ ಕೊಟ್ಟಿದ್ದಾರೆ.

    ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಇತಿಶ್ರೀ ಹಾಡಿರುವ ಗೌಡರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆಗೆ ನಿರ್ಧರಿಸಿದ್ದಾರೆ. ಈ ಮೂಲಕ ಕೈಗೆ ಬಂದ ಅಧಿಕಾರದ ತುತ್ತು ಬಿಜೆಪಿ ಬಾಯಿಯಿಂದ ತಪ್ಪಿದೆ. ಜೆಡಿಎಸ್‍ಗೆ ಅಧ್ಯಕ್ಷ ಸ್ಥಾನ, ಕಾಂಗ್ರೆಸ್‍ಗೆ ಉಪಾಧ್ಯಕ್ಷ ಸ್ಥಾನ ದಕ್ಕಲಿದ್ದು, ಇಂದು ಚುನಾವಣೆ ನಡೆಯಲಿದೆ.

    ವಿಧಾನಸೌಧದಲ್ಲಿರುವ ಮೈತ್ರಿ ಧರ್ಮವನ್ನು ಸಿದ್ದರಾಮಯ್ಯ ಊರಲ್ಲೂ ಪಾಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಮತ್ತು ಸಚಿವ ಸಾರಾ ಮಹೇಶ್‍ಗೆ ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲೂ ಜೊತೆಗೆ ಇರ್ತೀರಾ ಬಿಡಿ: ಸಾರಾ ಮಹೇಶ್ ಕಾಲೆಳೆದ ಪ್ರತಾಪ್ ಸಿಂಹ

    ಮೈಸೂರು ಜಿ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಬಿಜೆಪಿಯವರಿಗೆ ಮಾತು ಕೊಟ್ಟಿದ್ದೇವೆ. ಅದಕ್ಕಾಗಿ ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಮೈಸೂರು ಜಿಲ್ಲಾಪಂಚಾಯ್ತಿ ಹೊಂದಾಣಿಕೆ ಬಗ್ಗೆ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದರು.

    ನಾನು ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಮಾತನಾಡಿದ್ದೇನೆ. ಸ್ಥಳೀಯ ಮಟ್ಟದ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಈ ಸಂದರ್ಭದಲ್ಲಿ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ಸದಸ್ಯರ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡು ನಾವು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಅಂದು ಕಾಂಗ್ರೆಸ್ ಜೊತೆಗಿನ ಸಂಬಂಧ ಹಾಳಾಗಿದ್ದ ಸಂಧರ್ಬದಲ್ಲಿ ತೆಗೆದುಕೊಂಡ ನಿರ್ಧಾರ ಮಾಡಿರೋದು. ಯಾರು ಅಧ್ಯಕ್ಷ ಉಪಾಧ್ಯಕ್ಷ ಅದು ಸಹ ನಿರ್ಣಯ ಆಗಿದೆ ಎಂದು ಸಚಿವರು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಕಾಶ ಸಿಕ್ಕರೆ ಖಂಡಿತ ಎಚ್‍ಡಿಡಿ ಆಸೆ ನೆರವೇರಿಸುತ್ತೇನೆ- ಪ್ರಜ್ವಲ್ ರೇವಣ್ಣ

    ಅವಕಾಶ ಸಿಕ್ಕರೆ ಖಂಡಿತ ಎಚ್‍ಡಿಡಿ ಆಸೆ ನೆರವೇರಿಸುತ್ತೇನೆ- ಪ್ರಜ್ವಲ್ ರೇವಣ್ಣ

    ಹಾಸನ: ಲೋಕಸಭೆಗೆ ಸ್ಪರ್ಧಿಸುವ ಕುರಿತು ಎಚ್‍ಡಿಡಿ ಅವರು ನನ್ನ ಬಳಿ ಏನೂ ಹೇಳಿಲ್ಲ. ದೇವರ ಪೂಜೆ ಮಾಡಿಸಿ ಹೊರ ಬರುತ್ತಿದ್ದಂತೆಯೇ ಒಳ್ಳೆಯ ಸುದ್ದಿ ಕೇಳಿದ್ದೇನೆ. ಒಂದು ವೇಳೆ ಅಂತಹ ಸಂದರ್ಭ ಬಂದ್ರೆ ಖಂಡಿತವಾಗಿಯೂ ಅವರ ಆಸೆ ನೆರವೇರಿಸುತ್ತೇನೆ ಅಂತ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

    ನಗರದ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರ ಎನ್ನುವುದರ ಕುರಿತು ಇದುವರೆಗೂ ಯಾವುದೇ ಚರ್ಚೆ ಆಗಿಲ್ಲ. ಯಾವ ಕ್ಷೇತ್ರವೇ ಆಗಲಿ. ದೇವೇಗೌಡ ಅವರು ಏನು ಆಶೀರ್ವಾದ ಮಾಡುತ್ತಾರೆಯೋ ಅದನ್ನು ಸ್ವೀಕರಿಸಲು ನಾನು ತಯಾರಾಗಿದ್ದೇನೆ. ಅವರು ಏನೇ ಅವಕಾಶ ಕೊಟ್ಟರೂ ಈ ರಾಜ್ಯದ ಜನತೆಗೋಸ್ಕರ ದುಡಿಯುತ್ತೇನೆ ಅಂದ್ರು.

    ಪುರಸಭೆ ಚುನಾವಣೆಯಲ್ಲಿ ಅತೀ ಹೆಚ್ಚಿನ ಸೀಟುಗಳನ್ನು ಪಡೆದು ಬಹುತ ಸಾಧಿಸಬೇಕೆಂಬುದು ನಮ್ಮ ಆಶಯವಾಗಿದೆ. ಪ್ರತಿಯೊಂದು ಚುನಾವಣೆಯೂ ನಮಗೆ ಅತಿ ಮುಖ್ಯವಾದುದಾಗಿದೆ. ವಿಧಾಸನಭೆ, ಪುರಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಥವಾ ಸಂಸದರ ಚುನಾವಣೆಯೇ ಇರಬಹುದು. ಹೀಗೆ ಪ್ರತಿಯೊಂದು ಚುನಾವಣೆಯೂ ಬಹುಮುಖ್ಯವಾಗಿದ್ದು, ಇದಕ್ಕಾಗಿ ಶ್ರಮ ವಹಿಸುತ್ತೇನೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಸಮರ – ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ನಿಶ್ಚಿತ

    ಇದೇ ವೇಳೆ ಮಂಡ್ಯದಲ್ಲಿ ಜನರು ಪ್ರಜ್ವಲ್ ರೇವಣ್ಣ ಅವರು ಇಲ್ಲೇ ಸ್ಪರ್ಧಿಸಬೇಕೆಂದು ಕೇಳಿಕೊಳ್ಳುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಜನತೆಗೆ ಮೊದಲು ನಾನು ಧನ್ಯವಾದ ತಿಳಿಸುತ್ತೇನೆ. ಯಾಕಂದ್ರೆ ನಾನು ಆ ಜಿಲ್ಲೆಗೆ ಅಥವಾ ಕ್ಷೇತ್ರಕ್ಕೆ ಸಂಬಂಧಪಡದೇ ಇದ್ದರೂ ಕೂಡ ಅಲ್ಲಿನ ಜನತೆ 7 ಸೀಟು ಕೊಟ್ಟು ಇಂದು ನಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಜಿಲ್ಲೆಯ ಜನತೆಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ. ಒಂದು ವೇಳೆ ಅದೇ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೇ ಅದು ನನ್ನ ಪುಣ್ಯ, ಖಂಡಿತವಾಗಿಯೂ ಅದನ್ನು ನಾನು ಸ್ವೀಕರಿಸುತ್ತೇನೆ ಅಂತ ಹೇಳಿದ್ರು.

    ಒಟ್ಟಿನಲ್ಲಿ ದೊಡ್ಡವರ ನಿರ್ಧಾರಕ್ಕೆ ನಾನು, ನಮ್ಮ ನಾಯಕರು ಹಾಗೂ ಕಾರ್ಯಕರ್ತರೆಲ್ಲರೂ ಬದ್ಧರಾಗಿರುತ್ತೇವೆ ಅಂತ ಅವರು ತಿಳಿಸಿದ್ರು. ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=PPxd3hiJGY4

  • ನಾನು ವಿಷಕಂಠ ಎಂಬ ಸಿಎಂ ಮಾತಿಗೆ ಮಾಜಿ ಸಚಿವ ಎ.ಮಂಜು ತಿರುಗೇಟು

    ನಾನು ವಿಷಕಂಠ ಎಂಬ ಸಿಎಂ ಮಾತಿಗೆ ಮಾಜಿ ಸಚಿವ ಎ.ಮಂಜು ತಿರುಗೇಟು

    ಮೈಸೂರು: ಕಾಂಗ್ರೆಸ್ ಪಕ್ಷ ಎಚ್.ಡಿ ಕುಮಾರಸ್ವಾಮಿ ಅವರಿಗೆ ವಿಷ ನೀಡಿಲ್ಲ. ಅವರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದೇವೆ. ಎಲ್ಲಾ ರೀತಿಯ ಸ್ವತಂತ್ರವನ್ನೂ ಅವರಿಗೆ ಕೊಟ್ಟಿದ್ದೇವೆ ಅಂತ ಮಾಜಿ ಸಚಿವ ಎ ಮಂಜು ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿಯವರಿಗೆ ಬೇಕಾದಂತಹ ಎಲ್ಲಾ ಖಾತೆಗಳನ್ನು ನೀಡಿದ್ದೇವೆ. ಹಣಕಾಸು ಖಾತೆ ಕೂಡ ಅವರ ಬಳಿಯೇ ಇದೆ. ಅದನ್ನ ಅರಿತುಕೊಂಡು ರಾಜ್ಯದ ಪರಿಸ್ಥಿತಿಯನ್ನು ಚೆನ್ನಾಗಿ ಮಾಡುವಂತಹ ಜವಾಬ್ದಾರಿ ಅವರಿದಾಗಿರಬೇಕೇ ಹೊರತು ಕಾಂಗ್ರೆಸ್ ಪಕ್ಷದಲ್ಲ ಅಂತ ಟಾಂಗ್ ನೀಡಿದ್ದಾರೆ.

    ಕುಮಾರಸ್ವಾಮಿಯವರು ಇವತ್ತು ಮಾತಾಡುವ ರೀತಿ ನೋಡಿದ್ರೆ ಬೇಸರವಾಗುತ್ತದೆ. ಕಾಂಗ್ರೆಸ್ ಪಕ್ಷದ ಮುಖಂಡರು ಅಥವಾ ಕಾರ್ಯಕರ್ತರು, ಶಾಸಕರುಗಳು ತಪ್ಪು ಮಾಡಿದ ರೀತಿಯಲ್ಲಿ ಮಾತಾಡ್ತಿರೋದು ಕಾಂಗ್ರೆಸ್ ನ ಮುಖಂಡನಾಗಿರೋ ನನಗೆ ನೋವು ತಂದಿದೆ ಅಂದ್ರು.

    ಇಂದು ಸಿಎಂ ಕುರ್ಚಿ ಪಡೆದುಕೊಂಡ ನಾನು ಅದರಿಂದ ವಿಜೃಂಭಿಸುತ್ತಿಲ್ಲ. ಅದರಿಂದ ಖುಷಿ ಪಡೋಕೆ ಆಗ್ತಾ ಇಲ್ಲ ಅನ್ನೋ ಮಾತನ್ನು ಸಿಎಂ ಅವರು ಪದೇ ಪದೇ ಹೇಳುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡರೆ ಕುಮಾರಸ್ವಾಮಿಯವರಿಗೆ ಕೊಟ್ಟಂತಹ ಅವಕಾಶ ಬೇರೆ ಯಾವ ಮುಖ್ಯಮಂತ್ರಿಗೂ ಸಿಕ್ಕಿಲ್ಲ. ರಾಜ್ಯದ ರೈತರ ಕಣ್ಣೀರು ಒರೆಸುವಂತಹ ಹಾಗೂ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸ ಮುಖ್ಯಮಂತ್ರಿಯ ಜವಾಬ್ದಾರಿಯಾಗಬೇಕೆ ಹೊರತು ಮುಖ್ಯಮಂತ್ರಿ ಕಣ್ಣೀರು ಒರೆಸುವ ಕೆಲಸ ರೈತರ ಅಥವಾ ರಾಜ್ಯದ 6 ಕೋಟಿ ಜನರ ಅಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ರು.

    ಎಚ್‍ಡಿಡಿ ಪ್ರೋತ್ಸಾಹ ಸರಿ ಅಲ್ಲ:
    ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂಗೆ ಪತ್ರ ಬರೆಯೋದನ್ನೆ ತಪ್ಪು ಎಂಬಂತೆ ಬಿಂಬಿಸುವುದು ಸರಿ ಇಲ್ಲ. ಈ ರೀತಿಯ ವರ್ತನೆಯನ್ನು ನೀವು ಬಿಡಬೇಕು. ಈ ರೀತಿ ವರ್ತಿಸುವುದು ಸರ್ಕಾರ ನಡೆಸುವ ಸರಿಯಾದ ವಿಧಾನ ಅಲ್ಲ. ಕಾಂಗ್ರೆಸ್ ವರ್ಚಿಸಿಗೆ ಧಕ್ಕೆ ತರುವ ರೀತಿ ಸಿಎಂ ವರ್ತಿಸಬಾರದು. ಅಲ್ಲದೇ ಮಗ ಕಣ್ಣೀರು ಹಾಕುವುದನ್ನು ತಂದೆ ದೇವೇಗೌಡರು ಪ್ರೋತ್ಸಾಹಿಸಬಾರದಿತ್ತು. ಅನ್ನಭಾಗ್ಯ ಅಕ್ಕಿ ಕಡಿತ ಮಾಡಿದ್ದನ್ನು ಪ್ರಶ್ನೆ ಮಾಡಿದ್ದರಲ್ಲಿ ತಪ್ಪೇನೂ ಇದೆ ಅಂತ ಇದೇ ವೇಳೆ ಮಾಜಿ ಸಚಿವರು ಸಿಎಂ ಅವರನ್ನು ಪ್ರಶ್ನಿಸಿದ್ದಾರೆ.

  • ಮಸ್ತಕಾಭಿಷೇಕ ಕಾಮಗಾರಿಯಲ್ಲಿ ಕಮಿಷನ್ ಪಡೆದ ಆರೋಪ- ಎಚ್‍ಡಿಡಿಗೆ ಸಚಿವ ಮಂಜು ತಿರುಗೇಟು

    ಮಸ್ತಕಾಭಿಷೇಕ ಕಾಮಗಾರಿಯಲ್ಲಿ ಕಮಿಷನ್ ಪಡೆದ ಆರೋಪ- ಎಚ್‍ಡಿಡಿಗೆ ಸಚಿವ ಮಂಜು ತಿರುಗೇಟು

    ಹಾಸನ: ಮಸ್ತಕಾಭಿಷೇಕ ಕಾಮಗಾರಿಯಲ್ಲಿ ಕಮೀಷನ್ ಪಡೆದಿರುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಆರೋಪಕ್ಕೆ ಸಚಿವ ಎ ಮಂಜು ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ತಕಾಭಿಷೇಕ ಕಾಮಗಾರಿಯಲ್ಲಿ ನಾನು ಕಮೀಷನ್ ಪಡೆದಿರುವುದಾಗಿ ಮಾಜಿ ಪ್ರಧಾನಿಯವರು ಹೇಳಿದ್ದಾರೆ. ಮಾಜಿ ಪ್ರಧಾನಿ ಆರೋಪ ನನಗೆ ಅತೀವ ನೋವು ತಂದಿದೆ. 2006 ಮಸ್ತಕಾಭಿಷೇಕ ಕಾಮಗಾರಿ ದಾಖಲೆಯನ್ನು ಅವರು ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ ಮಂಜು, ಈ ಕುರಿತು ನಾನು ಬೆಂಗಳೂರಿನಲ್ಲೇ ಸುದ್ದಿಗೋಷ್ಠಿ ನಡೆಸಿ ಕಾಮಗಾರಿಯ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಅಂತ ಸಚಿವರು ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ನಾನು ನಡೆದು ಬಂದ ದಾರಿ, ಹಿನ್ನೆಲೆ ಎಲ್ಲಾ ಹೇಳುವೆ. ಚುನಾವಣೆ ಸಂದರ್ಭದಲ್ಲಿ ಸಣ್ಣ ವಿಷಯಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ. ನಾನು ರಾಜಕೀಯದಲ್ಲಿದ್ದಾಗ ಕುಮಾರಸ್ವಾಮಿ ರಾಜಕೀಯದಲ್ಲಿ ಇರಲಿಲ್ಲ. ಅನಾಗರಿಕನಾಗಿ ನಾನು ಮಾತನಾಡಿಲ್ಲ, ಅವರಂತೆ ಛಿ, ಥೂ ಅಂತ ಮಾತನಾಡಿಲ್ಲ. ಇದು ದೇಶಕ್ಕೆ, ಮತದಾರರಿಗೆ ನಾಚಿಗೇಡಿನ ವಿಷಯವಾಗಿದೆ. ದೇವೇಗೌಡರು ಬಾರದೇ ಹೋದ್ರೆ ಮಸ್ತಕಾಭಿಷೇಕ ನಿಂತು ಹೋಗುತ್ತಾ? ಇಂಥ ಮಾತಾಡುವುದನ್ನು ನಿಲ್ಲಿಸಬೇಕು. ಇಲ್ಲವಾದ್ರೆ ನನಗೂ ಮಾತನಾಡುವುದು ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

    ಡಿಸಿ ವರ್ಗ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಅಧಿಕಾರಿ ಸರಕಾರದ ಸೇವಕರು, ಹುದ್ದೆ ಮುಖ್ಯವಲ್ಲ, ಕಾರ್ಯ ನಿರ್ವಹಣೆ ಮುಖ್ಯ ಅಂತ ಅವರು ತಿಳಿಸಿದ್ರು.

  • ದೇವೇಗೌಡರ ಬಗ್ಗೆ ಮಿಮಿಕ್ರಿ ವಿಚಾರ- ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದು ಹೀಗೆ

    ದೇವೇಗೌಡರ ಬಗ್ಗೆ ಮಿಮಿಕ್ರಿ ವಿಚಾರ- ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದು ಹೀಗೆ

    ಬೆಂಗಳೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರ ಮೇಲೆ ನನಗೆ ಅಪಾರ ಗೌರವವಿದೆ. ನಾನು ಅವರ ವಿರುದ್ಧ ಒಂದೇ ಒಂದು ಪದವನ್ನೂ ಮಾತನಾಡಿಲ್ಲ ಅಂತಾ ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ.

    ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಬಗ್ಗೆ ಮಿಮಿಕ್ರಿ ಮಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ನಟ ಜಗ್ಗೇಶ್, ಪರಿಷತ್ ಸದಸ್ಯ ಶರವಣಗೆ ಸಂದೇಶ ಕಳುಹಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ಜೆಡಿಎಸ್ ಗೆ ಮತಹಾಕಿ ಎಂದು ದೇವೇಗೌಡರು ಕೇಳಿಕೊಂಡರೂ ಮಸಾಲೆ ಜಯರಾಮ್ ಮತಹಾಕಿ. ಕಾರಣ ಮಸಾಲೆ ಜಯರಾಮ್ ಕೂಡಾ ಒಕ್ಕಲಿಗರು ಅಂತಾ ಪಕ್ಷದ ಕಾರ್ಯಕರ್ತನಾಗಿ ಹೇಳಿದ್ದೇನೆ. ಆದ್ರೆ, ಒಂದೇ ಒಂದು ಎಚ್‍ಡಿ ದೇವೇಗೌಡರ ವಿರುದ್ಧದ ಹೇಳಿಕೆಯನ್ನ ನಾನು ನೀಡಿಲ್ಲ ಅಂತಾ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಯಾರ್ ಅಡ್ಡ ಬಂದ್ರೂ ಬಿಎಸ್‍ವೈ ಸಿಂಹಾಸನ ತಪ್ಪಿಸಲು ಆಗಲ್ಲ: ನಟ ಜಗ್ಗೇಶ್

    1990 ರಿಂದಲೂ ನಾನು ಎಚ್‍ಡಿದೇವೇಗೌಡರ ಅಭಿಮಾನಿ. ಕುಮಾರಣ್ಣ ನಮ್ಮ ನಿರ್ಮಾಪಕರು ಅಂತಾ ಶರವಣಗೆ ವಾಟ್ಸಾಪ್‍ನಲ್ಲಿ ಸಂದೇಶ ಕಳುಹಿಸಿದ್ದಾರೆ. ಈ ಸಂಬಂಧ ಫೇಸ್‍ಬುಕ್‍ನಲ್ಲಿ ಹಾಕಿಕೊಂಡಿರೋ ಪರಿಷತ್ ಸದಸ್ಯ ಶರವಣ, ನಿಮ್ಮ ಪ್ರತಿಕ್ರಿಯೆಗೆ ಕೃತಜ್ಞತೆಗಳು ಅಂತಾ ತಿಳಿಸಿದ್ದಾರೆ.

    https://www.youtube.com/watch?v=SNoiqIjPvUw