Tag: ಎಚ್.ಡಿ. ದೇವೇಗೌಡ

  • ಸಂಪುಟ ವಿಸ್ತರಣೆಗಿಂತಲೂ ಜೆಡಿಎಸ್‍ಗೆ `ಪಟ್ಟ’ದ ಟೆನ್ಶನ್!

    ಸಂಪುಟ ವಿಸ್ತರಣೆಗಿಂತಲೂ ಜೆಡಿಎಸ್‍ಗೆ `ಪಟ್ಟ’ದ ಟೆನ್ಶನ್!

    ಬೆಂಗಳೂರು: ದಳಪತಿ ಸಾಮ್ರಾಜ್ಯದಲ್ಲೀಗ ಯುವರಾಜನ ಪಟ್ಟದ ಸಾರಥಿ ಯಾರಾಗುತ್ತಾರೆ ಅನ್ನೋ ಕುತೂಹಲ ಮೂಡಿದೆ. ಮಂಡ್ಯ ಕದನದ ಬಳಿಕ ನಿಖಿಲ್ ಬಣ್ಣದ ಜಗತ್ತಿಗೆ ಗುಡ್ ಬೈ ಹೇಳುವಂತೆ ಅಭಿಮಾನಿಗಳ ಒತ್ತಡ ಹಾಕುತ್ತಿದ್ದಾರೆ. ಹಾಗಾದರೆ ಯುವರಾಜನ ಕಿರೀಟ ಸೋತಿರುವ ಗೌಡ್ರ ಗಿಫ್ಟ್ ನಿಖಿಲ್‍ಗಾ, ಗೆದ್ದು ಬೀಗಿದ ಪ್ರಜ್ವಲ್‍ಗಾ ಅನ್ನೋ ಸ್ಪೆಷಲ್ ಸ್ಟೋರಿ ಇಲ್ಲಿದೆ.

    ಹೌದು. ಒಂದೇ ಒಂದು ಸೀಟು, ತನ್ನ ಸೋಲು ಮೊಮ್ಮಗನ ಪರಾಭವ ಇವೆಲ್ಲವೂ ಮಾಜಿ ಪ್ರಧಾನಿ ದೇವೇಗೌಡ್ರನ್ನು ಕಂಗೆಡಿಸಿದೆ. ಪಕ್ಷದ ಬಲವರ್ಧನೆಯ ಬಗ್ಗೆ ಚಿಂತೆ ಮಾಡುತ್ತಿರುವ ಗೌಡ್ರು ಈಗ ದಳಪತಿ ಸಾಮ್ರಾಜ್ಯದ ಯುವರಾಜ ಪಟ್ಟವನ್ನು ಮಧುಬಂಗಾರಪ್ಪರ ಬದಲು ಮೊಮ್ಮಕ್ಕಳಿಗೆ ನೀಡಲು ಉತ್ಸುಕತೆ ತೋರಿದ್ದಾರೆ. ಆದರೆ ಇದೀಗ ನಿಖಿಲ್ ಅಥವಾ ಪ್ರಜ್ವಲ್ ಇಬ್ಬರಲ್ಲಿ ಯಾರಿಗೆ ಯುವಘಟಕದ ಅಧ್ಯಕ್ಷ ಸ್ಥಾನ ನೀಡೋದು ಅನ್ನೋದು ಪ್ರಶ್ನೆಯಾಗಿದೆ.

    ಪಕ್ಷ ಸಂಘಟನೆಯಲ್ಲಿ ಪ್ರಜ್ವಲ್ ಆಸಕ್ತಿ ತೋರಿರುವುದರಿಂದ ಪ್ರಜ್ವಲ್ ಹೆಸರು ಚಾಲ್ತಿಯಲ್ಲಿದ್ದರೂ ಸೋತು ಧೃತಿಗೆಟ್ಟ ಮೊಮ್ಮಗ ನಿಖಿಲ್ ಭವಿಷ್ಯವೂ ಗೌಡ್ರ ಕಣ್ಣಮುಂದಿದೆ. ಹೀಗಾಗಿ ಗೌಡ್ರು ಅದ್ಯಾರಿಗೆ ಕಿರೀಟವನ್ನು ಹಾಕೋದು ಅನ್ನುವ ಬಗ್ಗೆ ಕುಟುಂಬ ಹಾಗೂ ಜೆಡಿಎಸ್ ಆಪ್ತನಾಯಕರ ಬಳಿ ಸಮಾಲೋಚನೆಗೈದಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

    ಬಣ್ಣದ ಜಗತ್ತಿಗೆ ಗುಡ್ ಬೈ!
    ಸೋತಬಳಿಕವೂ ನಿಖಿಲ್ ಸುಮಲತಾ ಹಾಗೂ ಅಭಿಷೇಕ್‍ಗೆ ಹಾರೈಸಿದ ಪರಿ, ಮಂಡ್ಯದ ಜನರ ಜೊತೆ ಸದಾ ಇರುತ್ತೇನೆ ಅಂದಿರುವ ಭರವಸೆ ನಿಖಿಲ್ ಇಮೇಜ್ ಬದಲಾಯಿಸಿದೆ. ನಿಖಿಲ್ ನಡೆ ಒಬ್ಬ ಪ್ರಬುದ್ಧ ರಾಜಕಾರಣಿಯಂತಿದೆ. ನೀವು ಸಿನಿಮಾ ಬಿಟ್ಟಾಕಿ, ರಾಜಕೀಯದ ಅಖಾಡದಲ್ಲಿ ಫುಲ್ ಟೈಂ ತೊಡಗಿಸಿಕೊಳ್ಳಿ ಎಂದು ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಬೆಂಬಲಿಗರ ಮನವಿಯನ್ನು ನಿಖಿಲ್ ಸಿರಿಯಸ್ ಆಗಿ ತೆಗೆದುಕೊಂಡರೆ, ಜೆಡಿಎಸ್ ಯುವ ಸಾರಥಿಯಾದರೆ ಕುರುಕ್ಷೇತ್ರ ಕೊನೆಯ ಸಿನಿಮಾವಾಗಲಿದೆ. ನಿಖಿಲ್ ಸಂಪೂರ್ಣವಾಗಿ ಬಣ್ಣದ ಜಗತ್ತಿನಿಂದ ಹೊರಬರುತ್ತಾರೆ ಎಂಬ ಸುದ್ದಿ ಹರಿದಾಡಿದೆ.

    ಒಟ್ಟಿನಲ್ಲಿ ಕುಟುಂಬ ರಾಜಕಾರಣದ ಇಮೇಜ್‍ನಿಂದ ಜೆಡಿಎಸ್ ಸಾಮ್ರಾಜ್ಯ ಹೊರಬರೋದು ಅಸಾಧ್ಯ ಅನ್ನುವ ವಿಶ್ಲೇಷಣೆ ಮಧ್ಯೆ ಈಗ ಯುವ ಘಟಕದ ಸಾಮ್ರಾಜ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯ ನಿಖಿಲ್ ನಡೆ ಏನು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

  • ಸೋಲಿನಿಂದ ಯಾರೂ ಕೆಂಗೆಟ್ಟಿಲ್ಲ, ಎಚ್‍ಡಿಡಿ ಫಿನಿಕ್ಸ್‌ನಂತೆ ಎದ್ದು ಬರ್ತಾರೆ: ಜಿಟಿಡಿ

    ಸೋಲಿನಿಂದ ಯಾರೂ ಕೆಂಗೆಟ್ಟಿಲ್ಲ, ಎಚ್‍ಡಿಡಿ ಫಿನಿಕ್ಸ್‌ನಂತೆ ಎದ್ದು ಬರ್ತಾರೆ: ಜಿಟಿಡಿ

    ಬೆಂಗಳೂರು: ಲೋಕಸಭಾ ಚುನಾವಣಾ ಸೋಲಿನಿಂದ ಯಾರೂ ಕೆಂಗೆಟ್ಟಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಫಿನಿಕ್ಸ್‌ನಂತೆ ಎದ್ದು ಬರುತ್ತಾರೆ ಎಂದು ಅಂತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಚುನಾವಣೆಯಲ್ಲಿ ಸೋತವನು ನಾನು. ಮತ್ತೆ ಪಕ್ಷ ಕಟ್ಟುತ್ತೇನೆ ಎಂದು ಎಚ್.ಡಿ.ದೇವೇಗೌಡ ಅವರು ಚಾಲೆಂಜ್ ಮಾಡಿದ್ದಾರೆ. ಅವರು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತಾರೆ. ನಿನ್ನೆಯ ಸಭೆಯಲ್ಲಿ ದೇವೇಗೌಡರು ಇದನ್ನೇ ಹೇಳಿದ್ದಾರೆ ಎಂದು ಹೇಳಿದರು.

    ಪ್ರಜ್ವಲ್ ರೇವಣ್ಣ ಕೂಡಾ ರಾಜೀನಾಮೆ ಕೊಡಲ್ಲ. ಈ ಸಂಬಂಧ ದೇವೇಗೌಡರು ಪ್ರಜ್ವಲ್ ಅವರ ಜೊತೆ ಮಾತನಾಡಿದ್ದಾರೆ. ನನ್ನ ಆಶೀರ್ವಾದದಿಂದ ಗೆದ್ದಿದ್ದೀಯ. ನೀನು ಕ್ಷೇತ್ರ ಅಭಿವೃದ್ಧಿ ಮಾಡಬೇಕು ಅಂತ ಸಲಹೆ ನೀಡಿದ್ದಾರೆ. ಹೀಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದರು.

    ನಿಖಿಲ್ ಕುಮಾರಸ್ವಾಮಿ ಅವರು ಕೂಡ ಯಾವುದೇ ನೋವಿನಲ್ಲಿ ಇಲ್ಲ. ಸೋತರೂ ಉತ್ಸಾಹದಿಂದ ನಮ್ಮ ಜೊತೆ ಮಾತಾಡುತ್ತಿದ್ದಾರೆ. ಸೋಲೇ ಗೆಲುವಿನ ಮೆಟ್ಟಿಲು ಅಂತ ತಿಳಿದು ಉತ್ಸಾಹದಿಂದ ಇದ್ದಾರೆ ಎಂದು ಹೇಳಿದರು.

    ಪ್ರಜಾಪ್ರಭುತ್ವದಲ್ಲಿ ಜನರೇ ತೀರ್ಪೇ ಅಂತಿಮ. ಸೋಲು ನಾವು ಒಪ್ಪಿಕೊಂಡಿದ್ದೇವೆ. ಪ್ರಧಾನಿ ಮೋದಿ ಅವರಿಗೆ ಶುಭಾಶಯ ಕೋರಿದ್ದೇವೆ. ಸೋಲಿನಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಸರ್ಕಾರ ಶೇ. 100 ಸೇಫ್ ಆಗಿದೆ. ಸರ್ಕಾರಕ್ಕೆ ಏನು ತೊಂದರೆ ಇಲ್ಲ. ಈ ಸೋಲು ಎಲ್ಲರಿಗೂ ಒಂದು ದೊಡ್ಡ ಪಾಠವಾಗಿದೆ. ಜನರು ಉತ್ತಮ ಸರ್ಕಾರ ನಡೆಸಲು ನಮಗೆ ಚಾಟಿ ಏಟು ನೀಡಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಂಡು ನಾಲ್ಕು ವರ್ಷ ಕೆಲಸ ಮಾಡಬೇಕು ಎಂದು ಮೈತ್ರಿ ನಾಯಕರಿಗೆ ಕಿವಿ ಮಾತು ಹೇಳಿದರು.

  • ಜೆಡಿಎಸ್ ಅಭಿಮಾನಿಯಿಂದ ದೇವರಿಗೆ ವಿನೂತನ ಕೋರಿಕೆ!

    ಜೆಡಿಎಸ್ ಅಭಿಮಾನಿಯಿಂದ ದೇವರಿಗೆ ವಿನೂತನ ಕೋರಿಕೆ!

    ಬೆಂಗಳೂರು: ಜೆಡಿಎಸ್ ಅಭಿಮಾನಿಯೊಬ್ಬ ನಿಖಿಲ್ ಗೆಲುವಿಗಾಗಿ ದೇವರಿಗೆ ವಿನೂತನವಾಗಿ ಕೋರಿಕೆ ಸಲ್ಲಿಕೆ ಮಾಡಿದ ಘಟನೆ ನಡೆದಿದೆ.

    ಶನಿವಾರ ನಡೆದ ಮಾಗಡಿ ಸಾವನದುರ್ಗದ ಪ್ರತಿಷ್ಠಿತ ನರಸಿಂಹಸ್ವಾಮಿ ತೇರಿನ ಸಮಯದಲ್ಲಿ ಈ ದೃಶ್ಯ ಕಂಡು ಬಂದಿದೆ ನಿಖಿಲ್ ಗೆಲ್ಲಪ್ಪ, ಹ್ಯಾಪಿ ಬರ್ತ್ ಡೇ ದೇವೇಗೌಡರೇ ಹಾಗೂ ಎಚ್ ಎಮ್ ಟಿ ವಿನ್ ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರ ತೇರಿಗೆ ಕೋರಿಕೆ ಸಲ್ಲಿಸಿದ್ದಾರೆ.

    ಬಾಳೆಹಣ್ಣಿನ ಮೇಲೆ ತಮ್ಮ ಮನದಿಂಗಿತ ಬರೆದು ತೇರಿನ ಮೇಲೆ ಎಸೆಯೋದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ನಿಖಿಲ್ ಗೆಲುವಿಗಾಗಿ ಈ ಮೂಲಕ ಪ್ರಾರ್ಥನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಲಕ್ಷ್ಮೀ ವೆಂಕಟೇಶ್ವರ ಜಾತ್ರೆ ನಡೆದಿದ್ದು, ರಥೋತ್ಸವ ವೇಳೆ ತೇರಿಗೆ ಬಾಳೆಹಣ್ಣು ಮತ್ತು ಖರ್ಜೂರ ಎಸೆಯುವಾಗ ಯುವಕರು `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಘೋಷಣೆ ಕೂಗಿದ್ದರು. ಒಬ್ಬರು ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೂಗಿದರೆ ಆತನಿಗೆ ಉತ್ತರಿಸುವಂತೆ ಅನೇಕ ಯುವಕರು `ಅಪ್ಪ ರಾಮದುರ್ಗ ಜಾತ್ರೆಯಲ್ಲಿ ಇದ್ದೀನಿ ಅಪ್ಪ’ ಎಂದು ಹೇಳಿದ್ದರು. ಯುವಕರು ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ದೇವೇಗೌಡರಿಗೆ ಶುಭಕೋರಿದ ಸುಮಲತಾ ಅಂಬರೀಶ್

    ದೇವೇಗೌಡರಿಗೆ ಶುಭಕೋರಿದ ಸುಮಲತಾ ಅಂಬರೀಶ್

    ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಸುಮಲತಾ ಅಂಬರೀಶ್ ಅವರು ಶುಭಾಶಯ ಕೋರಿದ್ದಾರೆ.

    ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ದೇವೇಗೌಡರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. “ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ ಸೇರಿದಂತೆ ಅನೇಕರು ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಚರಾದ ಎಚ್.ಡಿ. ದೇವೇಗೌಡ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ರೈತರು, ಗ್ರಾಮ ಭಾರತದ ಬಗೆಗಿನ ಅವರ ಕಾಳಜಿ ಹಾಗೂ ಇಳಿವಯಸ್ಸಿನಲ್ಲಿಯೂ ದಣಿವರಿಯದ ಹೋರಾಟದ ಕೆಚ್ಚು ನನಗೆ ಸದಾ ಪ್ರೇರಣೆ. ಅವರಿಗೆ ಆರೋಗ್ಯ, ಆಯುಷ್ಯವನ್ನು ಹಾರೈಸುತ್ತೇನೆ” ಎಂದು ಸಿದ್ದರಾಮಯ್ಯ ಶುಭ ಕೋರಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರು ಇಂದು 87ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದಿದ್ದಾರೆ. ಅಲ್ಲಿಂದ ವಾಪಸ್ಸಾದ ಬಳಿಕ ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆಯನ್ನು ಮಾಡಿಸಿದ್ದಾರೆ.

  • ಮೋದಿ 2ನೇ ಬಾರಿ ಪ್ರಧಾನಿಯಾಗಲ್ಲ- ದೇವೇಗೌಡ್ರಿಗೆ ಮತ್ತೊಮ್ಮೆ ಒಲಿಯುತ್ತಾ ಪ್ರಧಾನಿ ಪಟ್ಟ?

    ಮೋದಿ 2ನೇ ಬಾರಿ ಪ್ರಧಾನಿಯಾಗಲ್ಲ- ದೇವೇಗೌಡ್ರಿಗೆ ಮತ್ತೊಮ್ಮೆ ಒಲಿಯುತ್ತಾ ಪ್ರಧಾನಿ ಪಟ್ಟ?

    ತುಮಕೂರು: ಕೊನೆಯ ಹಂತದ ಚುನಾವಣೆ ನಾಳೆ ನಡೆಯಲಿದ್ದು, ರಿಸಲ್ಟ್ ಗೆ ಇನ್ನೈದು ದಿನ ಮಾತ್ರ ಬಾಕಿ ಇದೆ. ಹೀಗಿರೋವಾಗ ಅತಂತ್ರ ಪರಿಸ್ಥಿತಿ ಬಂದರೆ ಪ್ರಧಾನಿ ಹುದ್ದೆಗೇರಲು ಹಲವು ನಾಯಕರು ಹವಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ದೇವೇಗೌಡರಿಗೆ ಮತ್ತೆ ಪ್ರಧಾನಿಯಾಗುವ ಯೋಗ ಇದೆ. ಮೋದಿ ಈ ಬಾರಿ ಪ್ರಧಾನಿ ಹುದ್ದೆಗೇರಲ್ವಾ ಅನ್ನೋ ಪ್ರಶ್ನೆ ಮೂಡಿದೆ.

    ಹೌದು. ತಿಪಟೂರು ತಾಲೂಕಿನ ದಸರೀಘಟ್ಟದ ಚೌಡೇಶ್ವರಿ ಅಮ್ಮನವರ ಕ್ಷೇತ್ರ ಕಳಸ ಬರಹದ ಭವಿಷ್ಯಕ್ಕೆ ಖ್ಯಾತಿ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಲಿರುವ ಭವಿಷ್ಯವನ್ನು ಚೌಡೇಶ್ವರಿ ದೇವಿ ನುಡಿದಿತ್ತು. ಅದೇ ರೀತಿ ಗೌಡರು ಪ್ರಧಾನಿ ಹುದ್ದೆಯಲ್ಲಿರುವಾಗ ಶ್ರೀಕ್ಷೇತ್ರದ ಉತ್ಸವಕ್ಕೆ ಗೈರಾಗಿದ್ದಕ್ಕೆ ಚೌಡೇಶ್ವರಿ ಅಮ್ಮ ಮುನಿಸಿಕೊಂಡಿದ್ದರಂತೆ. ಪರಿಣಾಮ ಅಕ್ಕಿಯ ಮೇಲೆ ಕಳಸದಿಂದ ಬರೆದ ದೇವಿ, ದೇವೇಗೌಡರು 11 ತಿಂಗಳ ಬಳಿಕ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿತ್ತಂತೆ.

    ಅಷ್ಟೇ ಅಲ್ಲ ಮೋದಿ ಪ್ರಧಾನಿ ಆಗುತ್ತಾರೆ ಅನ್ನೋದನ್ನು ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಚೌಡೇಶ್ವರಿ ಅಮ್ಮ ಕಳಸ ಬರಹದ ಮೂಲಕ ಹೇಳಿತ್ತು. ನಂತರ ಸ್ವತಃ ಮೋದಿಯವರೇ ಅಮ್ಮನವರ ಕಳಸ ಹೊತ್ತಿದ್ದರು. ಅಮ್ಮನವರ ಹೇಳಿಕೆಯಂತೆ ಮೋದಿ ಪ್ರಧಾನಿಯಾದರು ಎಂದು ಚೌಡೇಶ್ವರಿ ಸೇವಕ ಕೃಷ್ಣೆಗೌಡ ಹೇಳಿದರು.

    ಆದರೆ ಮೋದಿಯವರು ಪ್ರಧಾನಿ ಆದ ಬಳಿಕ 3 ಬಾರಿ ತುಮಕೂರು ಜಿಲ್ಲೆಗೆ ಬಂದು ಹೋಗಿದ್ದಾರೆ. ಒಮ್ಮೆಯೂ ಶ್ರೀಕ್ಷೇತ್ರ ದಸರೀಘಟ್ಟಕ್ಕೆ ಭೇಟಿಕೊಟ್ಟಿಲ್ಲ. ಹಾಗಾಗಿ ದೇವೇಗೌಡರಂತೆ ಮೋದಿಯವರೂ ಅವಕೃಪೆಗೆ ಒಳಗಾಗಬಹುದು ಎಂಬ ಚರ್ಚೆ ಶುರುವಾಗಿದೆ. ಇನ್ನೊಂದೆಡೆ ದಸರಿಘಟ್ಟ ಕ್ಷೇತ್ರದ ಶ್ರೀಗಳಾದ ಚಂದ್ರಶೇಖರನಂದನಾಥ ಸ್ವಾಮಿಜಿಗಳ ಪ್ರಕಾರ ಈ ಬಾರಿ ದೇವೇಗೌಡರ ಯೋಗ ಚೆನ್ನಾಗಿದೆ. ಹಾಗಾಗಿ ಉನ್ನತಮಟ್ಟಕ್ಕೆ ಮತ್ತೆ ಏರುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.

    ಇಟ್ಟಿನಲ್ಲಿ ಚೌಡೇಶ್ವರಿ ಅಮ್ಮನವರ ಪೀಠ ಈಗ ವಿಶ್ರಾಂತಿಯಲ್ಲಿದೆ. ಹಾಗಾಗಿ ಯಾವುದೇ ಪ್ರಶ್ನೆ ಕೇಳಲು ಸಾಧ್ಯವಾಗುತ್ತಿಲ್ಲ. ಮೇ 21ರಂದು ಮೋದಿ ಕುರಿತು ಪ್ರಶ್ನೆ ಕೇಳಲು ಸನ್ನಿಧಾನದವರು ಮುಂದಾಗಿದ್ದಾರೆ.

  • ಸೋನಿಯಾಗೆ ಎಚ್‍ಡಿಡಿ ಬರೆದ ಪತ್ರದಿಂದ ದೋಸ್ತಿಗಳಲ್ಲಿ ದಂಗಲ್ ಆರಂಭ?

    ಸೋನಿಯಾಗೆ ಎಚ್‍ಡಿಡಿ ಬರೆದ ಪತ್ರದಿಂದ ದೋಸ್ತಿಗಳಲ್ಲಿ ದಂಗಲ್ ಆರಂಭ?

    – ಸಿದ್ದರಾಮಯ್ಯ ವಿರುದ್ಧ 18 ಪುಟಗಳ ಪತ್ರದಲ್ಲಿ ದೂರು
    – ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅಡ್ಡಿ
    – ಮಾಜಿ ಸಿಎಂಗೆ ಕಡಿವಾಣ ಹಾಕಿ
    – ಪತ್ರದ ವಿಚಾರ ಗೊತ್ತಾಗುತ್ತಿದ್ದಂತೆ ಸಿದ್ದರಾಮಯ್ಯ ಕೆಂಡಾಮಂಡಲ

    ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರ ಮಧ್ಯೆ ವಿರೋಧ ಇದ್ದರೂ ಕೈ, ತೆನೆ ನಾಯಕರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಪ್ರಚಾರ ಮಾಡಿದ್ದರು. ಆದರೆ ಈಗ ಫಲಿತಾಂಶಕ್ಕೂ ಮುನ್ನವೇ ನಾಯಕರ ನಡುವೆ ವಾಕ್ಸಮರ ಜೋರಾಗಿದ್ದು, ಈ ವಾಕ್ಸಮರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಬರೆದ ಪತ್ರ ಕಾರಣವಂತೆ.

    ಹೌದು. ದೇವೇಗೌಡರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ 18 ಪುಟಗಳ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಹೇಗೆ ಅಡ್ಡಿ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರ ಹೈ ಕಮಾಂಡ್ ನಿಂದ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳಿಂದ ತಿಳಿದು ಬಂದಿದೆ.

    ಗೌಡರ ಆರೋಪಗಳೇನು?:
    ಸುಮಾರು 18 ಪುಟಗಳ ಪತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಆರೋಪಗಳು ಸುರಿಮಳೆಯನ್ನೇ ಸುರಿಸಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಯಶಸ್ವಿಯಾಗಿದ್ದರೆ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಅವಕಾಶವಿತ್ತು. ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ.

    ಸರ್ಕಾರವನ್ನ ದುರ್ಬಲಗೊಳಿಸಿ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ದೋಸ್ತಿಗಳಿಗೆ ಕಮ್ಮಿ ಸೀಟು ಬಂದರೆ ಅದಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣರಾಗಿರುತ್ತಾರೆ. ಸಿದ್ದರಾಮಯ್ಯ ತಂತ್ರದಿಂದಾಗಿಯೇ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಮೈತ್ರಿ ಫಲಕೊಟ್ಟಿಲ್ಲ. ಜೆಡಿಎಸ್‍ನಲ್ಲಿದ್ದಾಗ ಅಹಿಂದ ಚಟುವಟಿಕೆ ನಡೆಸಿ ಆ ಬಳಿಕ ಅವರು ಕಾಂಗ್ರೆಸ್‍ಗೆ ಬಂದು ಮುಖ್ಯಮಂತ್ರಿಯಾದರು. ಹೀಗಾಗಿ ಸಮ್ಮಿಶ್ರ ಸರ್ಕಾರ ಉಳಿಯಬೇಕಾದರೆ ನೀವು ಸಿದ್ದರಾಮಯ್ಯರನ್ನು ನಿಯಂತ್ರಿಸಲೇಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಆಪ್ತರಿಂದ ಮತ್ತೆ ಅಭಿಯಾನ:
    ದೇವೇಗೌಡರ ಪತ್ರದ ಬಗ್ಗೆ ಕೇಳಿ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಇದರ ಬೆನ್ನಲ್ಲೇ `ಮತ್ತೆ ಸಿದ್ದರಾಮಯ್ಯ ಸಿಎಂ’ ಅಭಿಯಾನಕ್ಕೆ ಆಪ್ತರು ಮತ್ತೆ ಚಾಲನೆ ನೀಡಿದ್ದಾರೆ. ಈ ಮೂಲಕ `ಸಮ್ಮಿಶ್ರ ಸರ್ಕಾರ ಸ್ಥಿರವಾಗಿಲ್ಲ’ ಎಂಬ ಜನಾಭಿಪ್ರಾಯ ಮೂಡಿಸುವ ಯತ್ನ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಆಪ್ತರು ಕೂಡ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎನ್ನುವ ಮೂಲಕ ದೋಸ್ತಿ ನಾಯಕರ ನೆಮ್ಮದಿ ಕೆಡಿಸಿದ್ದಾರೆ. ಹೀಗೆ ಗೊಂದಲ ಮೂಡಿಸಿ ಸಮ್ಮಿಶ್ರ ಸರ್ಕಾರ ಸ್ಥಿರವಾಗಿಲ್ಲ ಎಂಬ ಜನಾಭಿಪ್ರಾಯ ಮೂಡಿಸುವ ದಾಳವನ್ನ ಸಿದ್ದರಾಮಯ್ಯ ಉರುಳಿಸುತ್ತಿದ್ದಾರೆ ಎನ್ನಲಾಗಿದೆ.

    ಪತ್ರ ಬರೆದಿದ್ದು ಯಾಕೆ?:
    ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ನಾವು ವಿರೋಧ ಪಕ್ಷದಲ್ಲಿ ಕುಳಿತರೆ ಮಾತ್ರ ಮುಂದಿನ ಬಾರಿ ಕಾಂಗ್ರೆಸ್ಸಿಗೆ ಅವಕಾಶ ಹೆಚ್ಚು ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸೋನಿಯಾ ಗಾಂಧಿಗೆ ದೇವೇಗೌಡರು 18 ಪುಟಗಳ ಪತ್ರ ಬರೆದು ದೂರು ಕೊಟ್ಟಿದ್ದಾರೆ.

    ಫುಲ್ ಗರಂ:
    ಹಿಂದೆ ತನ್ನ ವಿರುದ್ಧ ಜೆಡಿಎಸ್ ನಾಯಕರು ಮಾತನಾಡಿದ್ದರೂ ಸಿದ್ದರಮಯ್ಯ ಬಹಿರಂಗವಾಗಿ ಜಾಸ್ತಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಮೋದಿ ಮತ್ತು ಬಿಜೆಪಿ ನಾಯಕರನ್ನು ಟೀಕಿಸಲು ಟ್ವಿಟ್ಟರ್ ಖಾತೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಭಿನ್ನಾಭಿಪ್ರಾಯದ ಬಗ್ಗೆ ಮಾಧ್ಯಮಗಳು ಕೇಳಿದಾಗ, ಈ ವಿಚಾರವನ್ನು ಸಮನ್ವಯ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿ ಅಲ್ಲಿಗೆ ಮುಗಿಸುತ್ತಿದ್ದರು. ಆದರೆ ಈ ಬಾರಿ ಬಹಿರಂಗವಾಗಿಯೇ ಮಾಧ್ಯಮಗಳ ಜೊತೆ ಮತ್ತು ಟ್ವಿಟ್ಟರ್ ನಲ್ಲಿ ಖಾರವಾದ ಪದಗಳನ್ನು ಬಳಸಿ ಟೀಕೆ ಮತ್ತು ಟಾಂಗ್ ನೀಡುತ್ತಿದ್ದಾರೆ. ದೇವೇಗೌಡರು ಬರೆದ ಪತ್ರಕ್ಕೆ ಸಿದ್ದರಾಮಯ್ಯ ಸಿಟ್ಟಾಗಿದ್ದು, ಈ ಸಿಟ್ಟಿನ ಫಲವೇ ಸರಣಿ ಟ್ವೀಟ್ ಗಳು ಎನ್ನಲಾಗುತ್ತಿದೆ.

     

  • ಕೋಟ ಅಮೃತೇಶ್ವರಿ ದೇವಿಗೆ ಎಚ್‍ಡಿಡಿ ದಂಪತಿಯಿಂದ ಪೂಜೆ

    ಕೋಟ ಅಮೃತೇಶ್ವರಿ ದೇವಿಗೆ ಎಚ್‍ಡಿಡಿ ದಂಪತಿಯಿಂದ ಪೂಜೆ

    ಉಡುಪಿ: ಜಿಲ್ಲೆಯ ಕಾಪು ತಾಲೂಕು ಮೂಳೂರಿನ ಸಾಯಿರಾಧಾ ರೆಸಾರ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ನಡುವೆ ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ಧಾರ್ಮಿಕ ಪ್ರವಾಸವನ್ನು ಮಾಡುತ್ತಿದ್ದು, ಇಂದು ಇಬ್ಬರು ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು.

    ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನದ ಮಹಾಪೂಜೆ ಸಂದರ್ಭ ತೆರಳಿದ ಜೆಡಿಎಸ್ ವರಿಷ್ಠ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಪೂಜೆಗೆ ಕೊಟ್ಟ ಹಣ್ಣುಕಾಯಿ ತಟ್ಟೆಯಲ್ಲಿ ಮೊಮ್ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಕೊಟ್ಟಿದ್ದಾರೆ.

    ದೇವಿಯ ಮುಂದಿಟ್ಟು ಆಮಂತ್ರಣ ಪತ್ರಿಕೆಗೆ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ದೇವೇಗೌಡರ ಪುತ್ರಿ ಶೈಲಜ ಅವರ ಮಗ ಡಾ. ಅಮೋಘ್ ಅವರ ಮದುವೆ ಪತ್ರಿಕೆ ಇದಾಗಿದ್ದು, ಭೇಟಿ ಕೊಟ್ಟ ಕ್ಷೇತ್ರದಲ್ಲಿ ಅಜ್ಜ ತಮ್ಮ ಮೊಮ್ಮಗನಿಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ.

    ಮೇ 16ರ ವರೆಗೆ ಕಾಪುವಿನಲ್ಲಿ ತಂಗಲಿರುವ ದೇವೇಗೌಡ ದಂಪತಿ ಉಡುಪಿಯ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಮಾಡಲಿದೆ. ಅರ್ಚನೆ, ಮಹಾಪೂಜೆ ಸಂದರ್ಭ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುವಂತೆ, ಕೇಂದ್ರದಲ್ಲಿ ಮಹಾಮೈತ್ರಿ ಸರ್ಕಾರ ರಚನೆಯಾಗುವಂತೆ ದೊಡ್ಡಗೌಡರು ಪ್ರಾರ್ಥನೆ ಮಾಡುತ್ತಿದ್ದಾರೆ.

  • ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

    ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

    – ಬಿಎಸ್‍ವೈಗೆ ತಿರುಗೇಟು ನೀಡಿದ ಸಚಿವರು
    – ಸುಮ್ಮನೆ ಪ್ರಚಾರ ಕೊಟ್ರೆ ಬೇಡ ಅನ್ನೋಕೆ ಆಗುತ್ತಾ?

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೊಮ್ಮಕ್ಕಳ ಗೆಲುವಿಗಾಗಿ ಪೂಜೆ ಮಾಡಿಸಿಲ್ಲ. ಅವರ ತಾಯಂದಿರಿಗೆ ಸದ್ಗತಿ ಸಿಗಲೆಂದು ದೇವರ ಮೊರೆಹೋಗಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ದೇವೇಗೌಡರಿಗೆ ಇಬ್ಬರು ತಾಯಂದಿರು. ಅವರು ಪ್ಲೇಗ್‍ನಿಂದ ಮೃತಪಟ್ಟಿದ್ದರು. 60-70 ವರ್ಷವಾದರೂ ಪೂಜೆ ಮಾಡಿಸಿರಲಿಲ್ಲವಂತೆ. ಹೀಗಾಗಿ ತಾಯಂದಿರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಚಿಕ್ಕಮಗಳೂರಿನ ಕಾಪು ಬಳಿ ಪೂಜೆ ಮಾಡಿಸಿದ್ದಾರೆ ಎಂದು ಹೇಳಿದರು.

    ರೇವಣ್ಣ ಎಲ್ಲಾ ಕೆಲಸದಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಅಳಿಯನನ್ನೆ ಹಾಕಿಕೊಟ್ಟಿದ್ದೇನೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕೇಳಿದವರನ್ನು ಕೇಳಿದ ಜಾಗಕ್ಕೆ ಹಾಕಿಕೊಟ್ಟಿದ್ದೇನೆ. ಬೇಕಾದರೆ ಅವರನ್ನೇ ಕೇಳಿ. ಬಿ.ಎಸ್.ಯಡಿಯೂರಪ್ಪನವರಿಗೆ ಅರಳು-ಮರಳು. ಪಾಪ ಅವರಿಗೆ ವಯಸ್ಸಾಗಿದೆ. ಅದಕ್ಕೆ ಏನೇನು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.

    ನಾನು ಯಾವುದೇ ಕಳ್ಳ ವೋಟ್ ಹಾಕಿಸಿಲ್ಲ. ದೇವರಾಜ್ ಎಂತಹ ವ್ಯಕ್ತಿ ಅಂತ ತಿಳಿದುಕೊಂಡು ಮಾತನಾಡಿ. ದೂರು ಕೊಟ್ಟವರ ಮೇಲೆ ಎರಡು ಪ್ರಕರಣ ದಾಖಲಾಗಿವೆ. ಮತದಾನ ದಿನ ನಾನು ಮಾಧ್ಯಮಗಳ ಜೊತೆಗಿದ್ದೆ. ಸೂರಜ್ ಮಗನ ಕೈಯಲ್ಲಿ ವೋಟ್ ಹಾಕಿಸಿದ್ದಾರೆ ಅಂತ ಹೇಳಿದ್ದಾರೆ. ಸೂರಜ್‍ಗೆ ಮಗನೇ ಇಲ್ಲ. ಈ ಸಂಬಂಧ ಯಾವುದೇ ನೊಟೀಸ್ ಆಯೋಗದಿಂದ ಬಂದಿಲ್ಲ. ಯಾವುದೇ ತನಿಖೆ ಮಾಡಿಕೊಳ್ಳಲಿ. ನಾನು ತಪ್ಪು ಮಾಡಿಲ್ಲ ಎಂದು ಹೇಳಿದರು.

    ನಾನು ಕಳ್ಳ ವೋಟ್ ಹಾಕಿಸಿದ ವಿಡಿಯೋ ಇದ್ದರೆ ಕೊಡಲಿ. ಕುಟುಂಬ ಸಮೇತ ಬಂದು ಮತದಾನ ಮಾಡಿದ್ದೇನೆ. ಬೂತ್‍ನಲ್ಲಿ ಕೇಂದ್ರ ಮೀಸಲು ಪಡೆಯಿತ್ತು. ಕಳ್ಳ ವೋಟ್ ಹಾಕಿಸುತ್ತಿದ್ದರೆ ಅವರ ಮೂಲಕ ನಮ್ಮನ್ನ ತಡೆಯಬಹುದಿತ್ತು. ಯಾಕೆ ತಡೆಯಲಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.

    ಹೆಚ್‍ಎಂಟಿ (ಹಾಸನ, ಮಂಡ್ಯ, ತುಮಕೂರು) ಬಗ್ಗೆ ಮಾತಾಡದೆ ಕೆಲವರಿಗೆ ಸಮಾಧಾನ ಆಗುವುದಿಲ್ಲ. ಸುಮ್ಮನೆ ಪ್ರಚಾರ ಕೊಟ್ಟರೆ ಬೇಡ ಎನ್ನುವುದಕ್ಕೆ ಆಗುತ್ತಾ? ಈ ವಿಷಯದಲ್ಲಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೆಚ್‍ಎಂಟಿ ದೆಹಲಿಗೆ ಹೋಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.

  • ಉಡುಪಿ ಸಾಯಿರಾಧಾ ರೆಸಾರ್ಟಿಗೆ ಹಸಿರು ಬೇಲಿ!

    ಉಡುಪಿ ಸಾಯಿರಾಧಾ ರೆಸಾರ್ಟಿಗೆ ಹಸಿರು ಬೇಲಿ!

    ಉಡುಪಿ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಗರದ ಸಾಯಿರಾಧಾ ರೆಸಾರ್ಟ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ರೆಸಾರ್ಟ್ ಸುತ್ತ ಹಸಿರು ಬೇಲಿ ಹಾಕುವಂತೆ ಸಿಎಂ ಸೂಚನೆ ನೀಡಿದ್ದಾರೆ.

    ಹೌದು. ಇಂದು ಸಿಎಂ ಹಾಗೂ ಮಾಜಿ ಪ್ರಧಾನಿಗೆ ಎರಡನೇ ದಿನದ ಪಂಚಕರ್ಮ ಚಿಕಿತ್ಸೆ ಮುಂದುವರಿದಿದೆ. ಯೋಗ, ಧ್ಯಾನದಲ್ಲಿ ಜೆಡಿಎಸ್ ವರಿಷ್ಠರು ಮಗ್ನರಾಗಿದ್ದಾರೆ. ಹೀಗಾಗಿ ರೆಸಾರ್ಟ್ ಸುತ್ತ ಮಾಧ್ಯಮದವರಿಗೆ ನಿಷೇಧ ಹೇರಿದ್ದಾರೆ.


    ಕಾಪು ತಾಲೂಕಿನ ಮೂಳೂರಿನ ಸಾಯಿರಾಧಾ ಹೆಲ್ತ್ ರೆಸಾರ್ಟ್‍ನ ಬೀಚ್ ಆವರಣದಲ್ಲಿ ಸೋಮವಾರ ಶಾಸಕ ಭೋಜೇಗೌಡ ಹಾಗೂ ಸಚಿವ ಸಾರಾ ಮಹೇಶ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಆವರಣ ಕಾಣದಂತೆ ಸುತ್ತಲೂ ಹಸಿರು ಪರದೆ ಬೇಲಿ ಹಾಕುವಂತೆ ರೆಸಾರ್ಟ್ ಸಿಬ್ಬಂದಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

  • ದುರಂತ ನಾಯಕನಾಗಿ ಇರುತ್ತೇನೆಯೇ ಹೊರತು, ಪಕ್ಷಕ್ಕೆ ದ್ರೋಹ ಮಾಡಲ್ಲ: ಮುದ್ದಹನುಮೇಗೌಡ

    ದುರಂತ ನಾಯಕನಾಗಿ ಇರುತ್ತೇನೆಯೇ ಹೊರತು, ಪಕ್ಷಕ್ಕೆ ದ್ರೋಹ ಮಾಡಲ್ಲ: ಮುದ್ದಹನುಮೇಗೌಡ

    ತುಮಕೂರು: ನಾನು ದುರಂತ ನಾಯಕನಾಗಿ ಇರುತ್ತೇನೆಯೇ ಹೊರತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಸಂಸದ ಮುದ್ದಹನುಮೇಗೌಡ ಹೇಳಿದ್ದಾರೆ.

    ತುಮಕೂರಿನ ಮದ್ದೂರಿನಲ್ಲಿ ಮಾತನಾಡಿದ ಸಂಸದರು, ನನ್ನ ರಾಜಕೀಯದ ಜೀವನದಲ್ಲಿ ಹಲವು ಬಾರಿ ಎ ಫಾರಂ ಹಾಗೂ ಬಿ ಫಾರಂ ಬಗ್ಗೆ ಅರಿತಿದ್ದೇನೆ. ನನಗೆ ಬಿ ಫಾರಂ ಸಿಗದಿದ್ದಾಗ ಕೆಲ ವಿಕೃತ ಮನಸ್ಸುಗಳು ಸಂಭ್ರಮಿಸಿರಬಹುದು ಎಂದ ಅವರು, ಕಾಂಗ್ರೆಸ್-ಜೆಡಿಎಸ್‍ನವರು ಒಟ್ಟಾಗಿ ಚುನಾವಣೆಯಲ್ಲಿ ಶ್ರಮಿಸಬೇಕಿದೆ. ಪ್ರಾಮಾಣಿಕವಾಗಿ ಪ್ರಯತ್ನ ಮೂಲಕ ನಾವು ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರನ್ನು ಗೆಲ್ಲಿಸೋಣ ಎಂದು ಮನವಿ ಮಾಡಿಕೊಂಡರು.

    ತುಮಕೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಐದು ವರ್ಷಗಳ ಕಾಲ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಕ್ಷೇತ್ರದಲ್ಲಿ ಹಗಲಿರುಳು ಜನರ ಜೊತೆಗಿದ್ದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಾಗಿದ್ದರೂ ನಾನು ಪುನಃ ಸ್ಪರ್ಧೆ ಮಾಡುವ ಅವಕಾಶ ಒದಗಿ ಬರಲಿಲ್ಲ ಎನ್ನುವ ವಿಚಾರ ನಿಮಗೆ ಗೊತ್ತಿದೆ. ಅದನ್ನು ಪುನರಾವರ್ತನೆ ಮಾಡುವುದಿಲ್ಲ. ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‍ಗೆ ಮನವಿ ಮಾಡಿಕೊಂಡೆ. ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಈ ಸೀಟು ಬಿಟ್ಟುಕೊಡುವಂತೆ ಅವರು ಹೇಳಿದರು. ಹೀಗಾಗಿ ಬಿಟ್ಟುಕೊಟ್ಟಿದ್ದೇನೆ ಎಂದರು.

    ದಂಡಿನ ಮಾರಮ್ಮನ ಸನ್ನಿಧಿಯಲ್ಲಿ ಹೇಳುತ್ತೇನೆ, ನಾನು ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿಯಲು ನನ್ನ ಕೈಯನ್ನು ಶುದ್ಧವಾಗಿ ಇರಿಸಿಕೊಂಡಿದ್ದೇನೆ. ಯಾರಿಂದಲೂ ಹಣ ಪಡೆದಿಲ್ಲ. ಮಾಧ್ಯಮದಲ್ಲಿ ಬಂದ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದರು.