Tag: ಎಚ್.ಡಿ. ದೇವೇಗೌಡ

  • ಅಭೂತಪೂರ್ವ ಸಾಧನೆ ಮಾಡಿದ್ರೆ ಕ್ಷೇತ್ರದ ಜನ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆ ಮಾಡ್ತಾರೆ: ಮಂಜುನಾಥ್

    ಅಭೂತಪೂರ್ವ ಸಾಧನೆ ಮಾಡಿದ್ರೆ ಕ್ಷೇತ್ರದ ಜನ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆ ಮಾಡ್ತಾರೆ: ಮಂಜುನಾಥ್

    ಬೆಂಗಳೂರು: ಕೆಲವೊಂದು ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ್ರೆ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯನ್ನು ಜನ ಮಾಡಿಯೇ ಮಾಡುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ನೂತನ ಸಂಸದ ಡಾ. ಮಂಜುನಾಥ್ (Dr C.N Manjunath) ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಸ್ಥಾನದ ಬಯಕೆ ವ್ಯಕ್ತಪಡಿಸಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರು ಆಗ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಕೆಲವೊಂದು ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ್ರೆ ಜನ ನಿರೀಕ್ಷೆ ಮಾಡಿಯೇ ಮಾಡುತ್ತಾರೆ ಎಂದು ಹೇಳಿದರು. ಇದೇ ವೇಳೆ ಒಂದು ವೇಳೆ ಸಚಿವರನ್ನಾಗಿ ಮಾಡಿದ್ರೆ ನಿಭಾಯಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನು ಅಂತಾ ದೊಡ್ಡ ಸಮಸ್ಯೆ ಏನಲ್ಲ ಅಂದ್ರು. ಅಲ್ಲದೇ ಆರೋಗ್ಯ ಸಚಿವರನ್ನಾಗಿ ಮಾಡ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಜನರು ನಿರೀಕ್ಷೆ ಮಾಡ್ತಾರೆ ನೋಡೋಣ ಅಂದ್ರು.

    ದೇವೇಗೌಡರು ನನ್ನ ಗೆಲುವನ್ನ ಖುಷಿ ಪಟ್ಟಿದ್ದಾರೆ. ದೇವೇಗೌಡರು (H.D Devegowda) ನನ್ನ ಮಂಜು ಅಂತಾ ಕರೆಯುತ್ತಾರೆ. ನನ್ನ ಕೈ ಹಿಡಿದುಕೊಂಡು ಮಂಜು ಪಾರ್ಲಿಮೆಂಟ್ ಗೆ ಹೋಗ್ತಾ ಇದ್ದೀಯಾ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು. ಇದನ್ನೂ ಓದಿ: ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌

    ನಮ್ಮ ಅತ್ತೆ ಚನ್ನಮ್ಮ ನನ್ನ ತಲೆ ಸವರಿ, ಕೈ ಹಿಡಿದು ಆರ್ಶೀವಾದ ಮಾಡಿ ಖುಷಿಪಟ್ಟರು. ಹೈವೋಲ್ಟೇಜ್, ಪ್ರತಿಷ್ಠಿತ ಕ್ಷೇತ್ರ ಅಂತಾ ಮಹತ್ವ ಪಡೆದುಕೊಂಡಿತ್ತು. ಹೀಗಾಗಿ ಕುಮಾರಸ್ವಾಮಿ ಅವರು ತಮ್ಮ ಗೆಲುವಿಗಿಂತ ನಿಮ್ಮ ಗೆಲುವನ್ನ ಸಂಭ್ರಮ ಪಟ್ಟಿದ್ದಾರೆ ಎಂದರು.

    ನಮ್ಮ ಕಾರ್ಯಕರ್ತರಿಗೆ, ಮತದಾರರಿಗೆ ಎಷ್ಟು ಖುಷಿಯಾಗಿದೆಯೋ ಅಷ್ಟೇ ಖುಷಿ ನನಗೆ ಆಗಿದೆ. ಇದರ ಬಗ್ಗೆ ಬೀದಿ ಬೀದಿಯಲ್ಲಿ ಚರ್ಚೆ ಆಗಿದೆ. ಮೂಲೆ ಮೂಲೆಯಲ್ಲಿ, ಮಾಧ್ಯಮಗಳಲ್ಲಿ ವಿಮರ್ಶೆ ಆಗಿದೆ. ಇದೀಗ ನನ್ನ ಗೆಲುವು ಖುಷಿ ಕೊಟ್ಟಿದೆ. ರಾಜಕೀಯಕ್ಕೆ ಇದು ಮೊದಲನೇ ಹೆಜ್ಜೆ ದೇವೇಗೌಡರ ಸಲಹೆ ಸಹಕಾರ ಕೂಡ ಇರುತ್ತೆ ಎಂದು ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಅಭಿವೃದ್ಧಿಗೆ ಏನು ಯೋಜನೆಗಳು ಎಂಬ ಪ್ರಶ್ನೆಗೆ, ಕೂಲಂಕುಷವಾಗಿ ಪಟ್ಟಿ ಮಾಡಬೇಕು, ಪಟ್ಟಿ ಮಾಡಿದ ಬಳಿಕ ತಿಳಿಸುತ್ತೇನೆ. ಆದರೆ ದೆಹಲಿಯಿಂದ ಇನ್ನೂ ಕರೆಬಂದಿಲ್ಲ ಬರಬಹುದು. ಸರ್ಕಾರ ರಚನೆ ಆದ ನಂತರ ಎಲ್ಲಾ ಸಮಾಲೋಚನೆ ಮಾಡಿ ಸಂಸದರನ್ನ ಕರೆಯುತ್ತಾರೆ, ಕರೆದಾಗ ಹೋಗುತ್ತೇನೆ ಎಂಜುನಾಥ್ ಹೇಳಿದರು.

  • ರಾಮನಿಗೂ ಅಶ್ವಥ್ ನಾರಾಯಣಗೂ ಏನು ಸಂಬಂಧ, ತುಂಬಾ ಮಾತನಾಡುವುದು ಬೇಡ: HDD ವಾರ್ನಿಂಗ್‌

    ರಾಮನಿಗೂ ಅಶ್ವಥ್ ನಾರಾಯಣಗೂ ಏನು ಸಂಬಂಧ, ತುಂಬಾ ಮಾತನಾಡುವುದು ಬೇಡ: HDD ವಾರ್ನಿಂಗ್‌

    ರಾಯಚೂರು: ರಾಮನಿಗೂ (Rama) ಸಚಿವ ಅಶ್ವಥ್ ನಾರಾಯಣಗೂ (Dr. Ashwathnarayan) ಏನು ಸಂಬಂಧ, ಅಶ್ವಥ್ ನಾರಾಯಣ ತುಂಬಾ ಮಾತನಾಡುವುದು ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D Devegowda) ಕಿಡಿಕಾರಿದ್ದಾರೆ.

    ರಾಯಚೂರಿನ ಮಾನ್ವಿಯಲ್ಲಿ ಶಾಸಕ ವೆಂಕಟಪ್ಪ ನಾಯಕ್ ಸಹೋದರನ ಮದುವೆ, ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡ್ತೀವಿ ಅನ್ನೋ ವಿಚಾರದ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ಅಶ್ವಥ್ ನಾರಾಯಣ ಬಗ್ಗೆ ಅವರ ವಿಚಾರಗಳ ಬಗ್ಗೆ ವಿಧಾನಸೌಧದಲ್ಲಿ ಸಾಕಷ್ಟು ಚರ್ಚೆ ಆಗಿವೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು

    ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಎಲ್ಲಿಂದ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅನ್ನೋ ವಿಚಾರವಾಗಿ ಮಾತನಾಡಿ, ಜನ ಈ ಬಗ್ಗೆ ತಿರ್ಮಾನ ಮಾಡ್ತಾರೆ. ಅವನಿಗೆ B ಫಾರ್ಮ್ ಕೊಡುವವನು ನಾನು. ಮಂಡ್ಯದಲ್ಲಿ ಸ್ಪರ್ಧೆ ಮಾಡ್ತಾನೆ, ಕನಕಪುರ ಅದೆಲ್ಲಾ ಊಹಾಪೋಹಗಳು. ಜನ ಪ್ರೀತಿಯಿಂದ ಹೇಳುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ

    ಚುನಾವಣೆ ಮುಂದೆ ಇಟ್ಟುಕೊಂಡೆ ಈ ವಯಸ್ಸಿನಲ್ಲಿ ಓಡಾಡುತ್ತಿದ್ದೇನೆ. ಇಲ್ಲಿವರೆಗೆ ಏನೇನು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ಸಾರ್ವಜನಿಕವಾಗಿ ಹೇಳಬೇಕಿದೆ. ಹಾಗಾಗಿ ಪಂಚರತ್ನ ಕಾರ್ಯಕ್ರಮ ಮಾಡಿದ್ದೇವೆ. ನಮ್ಮ ಯೋಜನೆಗಳನ್ನು ಜನರ ಮುಂದೆ ಇಟ್ಟಿದ್ದೀವಿ. ಕುಮಾರಸ್ವಾಮಿಗೆ ತುಮಕೂರು ಜಿಲ್ಲೆಯಲ್ಲಿ ಕಾರ್ಯಕ್ರಮ ಇದೆ. ನನಗೆ ಮಾನ್ವಿ ತಾಲೂಕಿಗೆ ಹೋಗಬೇಕು. ಇಲ್ಲಿಗೆ ಬರಲೇ ಬೇಕು ಅಂತ ಬಂದಿದ್ದೇನೆ. ನಿಖಿಲ್ ಬರಬೇಕಿತ್ತು, ಬೇರೆ ಕಾರಣದಿಂದ ಬರಲು ಆಗಲಿಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ನವರು ದೇವೇಗೌಡರಿಗೆ ತುಮಕೂರಿನಲ್ಲಿ ವಿಷ ಕೊಟ್ಟರು: ಸಿಎಂ ಇಬ್ರಾಹಿಂ

    ಕಾಂಗ್ರೆಸ್‍ನವರು ದೇವೇಗೌಡರಿಗೆ ತುಮಕೂರಿನಲ್ಲಿ ವಿಷ ಕೊಟ್ಟರು: ಸಿಎಂ ಇಬ್ರಾಹಿಂ

    ತುಮಕೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನವರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಸೋಲಿಸಿ ವಿಷ ಕೊಟ್ಟರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

    ತುಮಕೂರಿನಲ್ಲಿ ಜನತಾಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡಿದಾಗ ಸಿಎಂ ಕುಮಾರಸ್ವಾಮಿಗೆ ಬಿಜೆಪಿಗಿಂತ ಕಾಂಗ್ರೆಸ್‍ನವರೇ ಹೆಚ್ಚು ಕಾಟ ಕೊಟ್ಟರು. ಹಾಗಾಗಿ ಅಧಿಕಾರದಿಂದ ಕೆಳಗೆ ಇಳಿಯುವಂತಾಯಿತು. ಮುಕ್ಕಣ್ಣಿಗೆ ಮೂರನೇ ಕಣ್ಣಿರುವಂತೆ ಮುಂದಿನ ಬಾರಿ ಜನತಾದಳ ಶಿವನ ಮೂರನೇ ಕಣ್ಣಿನಂತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ರಾಜಕಾರಣಿಗಳಿಗೆ ದಿವ್ಯಾ ಜಾಲ – ಘಟಾನುಘಟಿಗಳೊಂದಿಗಿನ ಫೋಟೋಸ್ ವೈರಲ್

    ಪರಮೇಶ್ವರ್‌ಗೆ ಕೇಳ್ತೀನಿ ಕುಮಾರಸ್ವಾಮಿಯನ್ನು ತೆಗೆದು ಯಡಿಯೂರಪ್ಪನ ತಂದವರು ಯಾರೆಂದು ನಿಜ ಹೇಳಿ. ಸಿದ್ದಗಂಗಾ ಮಠದಲ್ಲಿ ಪ್ರಮಾಣ ಮಾಡಬೇಕು. ನೀವು ಬಿಜೆಪಿ ಸರ್ಕಾರ ತಂದು ಜೆಡಿಎಸ್‍ನ್ನು ಬಿಜೆಪಿ ʼಬಿʼ ಟೀಂ ಎನ್ನುತ್ತಿದ್ದೀರಿ. ದೇವೇಗೌಡರನ್ನು ಬಲವಂತವಾಗಿ ತುಮಕೂರಿಗೆ ಕರೆದುಕೊಂಡು ಬಂದು ವಿಷ ಹಾಕಿದ್ರಿ. ಮುಂದೆ 123 ಸೀಟ್ ಗೆಲ್ತೀವಿ ಅಷ್ಟೆ ಅಲ್ಲ ಲೋಕಸಭೆಯಲ್ಲೂ ಬಹುಮತ ತರ್ತೀವಿ. ತುಮಕೂರಿನಲ್ಲಿ 11 ಸ್ಥಾನ ಜನತಾದಳ ಗೆಲ್ಲಲಿದೆ ಎಂದರು. ಇದನ್ನೂ ಓದಿ: ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ – ಅಶ್ವತ್ಥ್ ನಾರಾಯಣ್ ವಿರುದ್ಧ ರೇವಣ್ಣ ಕಿಡಿ

  • ಬಿಜೆಪಿಯನ್ನ ಬಿಜೆಪಿಯಂತನೋ, ಮೋದಿ ಪಕ್ಷ ಅಂತಾ ಕರೀಬೇಕಾ ಗೊತ್ತಿಲ್ಲ: ಹೆಚ್‍ಡಿಡಿ

    ಬಿಜೆಪಿಯನ್ನ ಬಿಜೆಪಿಯಂತನೋ, ಮೋದಿ ಪಕ್ಷ ಅಂತಾ ಕರೀಬೇಕಾ ಗೊತ್ತಿಲ್ಲ: ಹೆಚ್‍ಡಿಡಿ

    ಕಲಬುರಗಿ: ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದರು.

    ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಇನ್ನೂ ಶಕ್ತಿ ತುಂಬಬೇಕು. 2023 ಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‍ನವರು ಜೆಡಿಎಸ್ ಪಕ್ಷವನ್ನ ಸಂಪೂರ್ಣ ನಾಶ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಕ್ಕೆ ಶಕ್ತಿ ಕಡಿಮೆ ಇದೆ. ಕಾಂಗ್ರೆಸ್ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿ ಇದೆ. 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಬೆಳೆಯುತ್ತೆ ಅನ್ನೋದು ಹೇಳೋಕೆ ಆಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಈಗ ಯಾವ ರಾಜ್ಯದಲ್ಲಿಯೂ ಇಲ್ಲ. ಇದಕ್ಕೆ ಕಾರಣ ಯಾರು ಅಂತಾ ಅವರೇ ಹುಡುಕಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಇವತ್ತು ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ. ಯಾಕೆಂದರೆ ಬಿಜೆಪಿ ಪಕ್ಷದಲ್ಲಿದ್ದವರು ಮೋದಿ ಹೆಸರಿನಲ್ಲೇ ಚುನಾವಣೆ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಮೋದಿ ಪಾರ್ಟಿ ಅಂತಾ ಕರೆಯುತ್ತೇನೆ. ಒಬ್ಬ ವ್ಯಕ್ತಿಯ ಸಕ್ಸಸ್ ನಲ್ಲಿ ಪಾರ್ಟಿ ನಡೆಯುತ್ತಿದೆ. ಆದರೆ ಮುಂದೇನು ಆಗುತ್ತೋ ಅದು ನನಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.

    ಜೆಡಿಎಸ್‍ನ ಪಂಚರತ್ನ ಕಾರ್ಯಕ್ರಮ ಎಲ್ಲರ ಒಳ್ಳೆಯದಕ್ಕಾಗಿ ರೂಪಿಸಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರು ಮಾಡಿರುವ ಭಾಗ್ಯ ಯೋಜನೆಗಳಿಗೆ ಟಚ್ ಮಾಡಬಾರದು ಅಂತಾ ಹೇಳಿದ್ದರು. ಈ ಯೋಜನೆಗಳಿಗೂ ಹಣ ಒದಗಿಸಿ ಸಾಲಮನ್ನಾ ಮಾಡಿದ್ದರು ಎಂದರು.

    ರಾಮನಗರದಲ್ಲಿ ಬಿಜೆಪಿ ಸಚಿವ ಹಾಗೂ ಕಾಂಗ್ರೆಸ್ ಸಂಸದರ ಜಟಾಪಟಿ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಎರಡು ರಾಷ್ಟ್ರೀಯ ಪಕ್ಷಗಳು ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಹೇಳಿದರು.

    ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಪ್ರಿಂಕೋರ್ಟ್ ನಲ್ಲಿ ಈ ಕುರಿತು ದಿನಾಂಕ ನಿಗದಿ ಮಾಡಿದ್ದಾರೆ ಅಂತಾ ಕೇಳಿದ್ದೀನಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಪ್ರಾವಿಜನಲ್ ಕ್ಲಿಯರೆನ್ಸ್ ಮಾಡಿದ್ದರು. ಅದಾದ ಮೇಲೆ ತಮಿಳುನಾಡಿನವರು ಖ್ಯಾತೆ ತೆಗೆದಿದ್ದರು. ನಾಲ್ಕು ರಾಜ್ಯಗಳ ನೀಲುವು ತೆಗೆದುಕೊಂಡು ಅಂತಿಮ ಜಡ್ಜ್‍ಮೆಂಟ್ ಬರಲಿ. ಅದು ಏನು ಬರುತ್ತೆ ಅನ್ನೋದು ಗೊತ್ತಿಲ್ಲ ಎಂದು ನುಡಿದರು.

    ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್‍ನ ಪಾದಯಾತ್ರೆ ಹೋರಾಟ ಎಷ್ಟು ಯಶಸ್ವಿಯಾಗುತ್ತೋ ಗೊತ್ತಿಲ್ಲ. ಈ ಹೋರಾಟದಲ್ಲಿ ಬಿಜೆಪಿಯವರು ಕಾಂಗ್ರೆಸ್ ಮುಗಿಸಬೇಕು ಅಂತಾ ನಿಂತಿದ್ದಾರೆ. ಕಾಂಗ್ರೆಸ್ ಕಳೆದು ಹೋಗಿರುವ ವರ್ಚಸ್ಸು ಬೆಳೆಸಬೇಕು ಅಂತಾ ನಿಂತಿದ್ದಾರೆ ಎಂದು ಹೇಳಿದರು.

    ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದಾಗ ಏನ್ ಆಯ್ತು? ನಾವು ಬಿಜೆಪಿಯ ಬಿ ಟೀಮ್ ಅಂತಾ ಆರು ತಿಂಗಳ ಕಾಲ ಹೇಳಿದ್ದರು. 130 ಕ್ಕಿದ್ದ ಕಾಂಗ್ರೆಸ್ ಈಗ 78 ಕ್ಕೆ ಬಂತು ನಿಂತಿದೆ. ಇವರ ಹೋರಾಟದಿಂದ ಫಲ ಸಿಗುತ್ತದೆ ಅಂದರೆ ಅದಷ್ಟು ಸುಲಭವಲ್ಲ. ಜೆಡಿಎಸ್‍ಗೂ 20% ಮತಗಳು ಇವೆ. 2024 ರಲ್ಲಿ ಲೋಕಸಭೆಯಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ಕಷ್ಟ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಹಳ ಸ್ಟ್ರಾಂಗ್ ಲೀಡರ್ ಇದ್ದು, ಮೈನಸ್ ಕಾಂಗ್ರೆಸ್ ನಾವು ಮಾಡಬೇಕು ಅಂತಾ ಹೇಳುತ್ತಾರೆ ಎಂದು ನುಡಿದರು. ಇದನ್ನೂ ಓದಿ:  ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗಲ್ಲ, ಗಂಟಲಲ್ಲಿ ಮಾತ್ರ ಇರುತ್ತೆ: ಸುಧಾಕರ್

    ಮಲ್ಲಿಕಾರ್ಜುನ ಖರ್ಗೆಯವರು ಮೊದಲ ಬಾರಿಗೆ ಲೋಕಸಭೆಯಲ್ಲಿ ಗೆಲ್ಲಲಿಲ್ಲ. ಹಾಗಾಗಿ ಕಾಂಗ್ರೆಸ್ ಸ್ಥಿತಿಗತಿ ಏನಿದೆ ಅಂತಾ ಯೋಚನೆ ಮಾಡಲಿ ಎಂದರು.

  • ಹಳೆ ಮೈಸೂರು ಭಾಗದಲ್ಲಿ ಇನ್ನೂ ಜೆಡಿಎಸ್ ಶಕ್ತಿ ಇದೆ: ಸಾರಾ ಮಹೇಶ್

    ಹಳೆ ಮೈಸೂರು ಭಾಗದಲ್ಲಿ ಇನ್ನೂ ಜೆಡಿಎಸ್ ಶಕ್ತಿ ಇದೆ: ಸಾರಾ ಮಹೇಶ್

    ಮೈಸೂರು: ಸಂದೇಶ್ ನಾಗರಾಜ್ ಕುಟುಂಬಕ್ಕೆ ಜೆಡಿಎಸ್ ಯಾವುದೇ ಮೋಸ ಮಾಡಿಲ್ಲ. ಅವರು ಯಾಕೆ ನಮ್ಮ ಪಕ್ಷವನ್ನು ದೂರುತ್ತಿದ್ದಾರೆ ಗೊತ್ತಿಲ್ಲ ಎಂದು ಜೆಡಿಎಸ್‌ನ ಮಾಜಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

    ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಯಾರೂ ಅನಿವಾರ್ಯವಲ್ಲ. ಜೆಡಿಎಸ್ ನಮಗೆ ಅನಿವಾರ್ಯ. ಹಾಗೆಯೇ ನಮಗೇ ಹೆಚ್.ಡಿ ದೇವೆಗೌಡರೇ ಯಾವತ್ತಿದ್ದರೂ ನಾಯಕ. ನೀವು ನೆನಪಿಟ್ಟುಕೊಳ್ಳಿ ಪಕ್ಷದ ಕಾರ್ಯಕರ್ತರ ದುಡಿಮೆಯಿಂದ ನೀವು ಶಾಸಕರಾಗಿರುವುದು. ನಿಮ್ಮ ಅವಧಿ ಮುಗಿಯೋವರೆಗೂ ನೀವು ಪಕ್ಷದ ಪರವಾಗಿ ಇರಿ ಎಂದು ಜಿ.ಟಿ ದೇವೆಗೌಡರಿಗೆ ಸಾರಾ ಮಹೇಶ್ ತಿರುಗೇಟು ಕೊಟ್ಟಿದ್ದಾರೆ.

    ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಮತದಾನದಿಂದ ವಂಚಿತರಾಗಿದ್ದಾರೆ ನಿಜ. ಆದರೆ ಕೆಲ ವ್ಯಕ್ತಿಗಳಿಂದ ನಮಗೆ ಗೆಲುವು ಕಷ್ಠ ಆಯಿತು ಎಂಬುವುದು ಸುಳ್ಳು. ಜೆಡಿಎಸ್ ಶಕ್ತಿ ಹಳೆ ಮೈಸೂರು ಭಾಗದಲ್ಲಿ ಇನ್ನೂ ಇದೇ. ಮುಂದಿನ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ದೂರ ಇರಬೇಕೋ ಅಥವಾ ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುವುದು ಹೆಚ್.ಡಿ ದೇವೇಗೌಡ ಮಾಡುತ್ತಾರೆ. ಆದರೆ ಎರಡು ಪಕ್ಷಗಳಿಂದ ದೂರ ಇರಬೇಕು ಎಂಬುವುದು ನನ್ನ ವೈಯುಕ್ತಿಕ ತೀರ್ಮಾನ ಎಂದು ತಿಳಿಸಿದರು. ಇದನ್ನೂ ಓದಿ: ನಾಳೆ ಹೆಚ್‍ಡಿಕೆ ಹುಟ್ಟುಹಬ್ಬ- ಕಾರ್ಯಕರ್ತರಲ್ಲಿ ಮಾಜಿ ಸಿಎಂ ಮನವಿ

    ವಿಧಾನ ಪರಿಷತ್‌ನಲ್ಲಿ ಗೆದ್ದ ಅಭ್ಯರ್ಥಿಯು ಜೆಡಿಎಸ್ ವರಿಷ್ಠಿಗೆ ವರದಿ ಕೊಡುತ್ತಾರೆ. ಬಳಿಕ ವರದಿಯ ಅನುಸಾರವಾಗಿ ನಮ್ಮ ಪಕ್ಷದ ಶಾಸಕರಿಂದಲೇ ಆದ ತೊಂದರೆ ಬಗ್ಗೆಯೂ ವಿವರಿಸಿ ಜೆಡಿಎಸ್ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ಸಾರಾ ಮಹೇಶ್ ಹೇಳಿದ್ದಾರೆ. ಇದನ್ನೂ ಓದಿ: ಸುಧಾಕರ್ ನಮ್ಮ ಲೀಡರ್ ಅಲ್ಲ, ಮಂಡ್ಯದ ಬಗ್ಗೆ ಅವರಿಗೇನ್ ಮಾಹಿತಿ ಇದೆ?: ನಾರಾಯಣ ಗೌಡ

  • ರಮೇಶ್‌ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ: ಸುಧಾಕರ್

    ರಮೇಶ್‌ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ: ಸುಧಾಕರ್

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್‌ಕುಮಾರ್ ನೀತಿ ಹೇಳಲಷ್ಟೇ ಲಾಯಕ್. ಅವರು ಅದನ್ನು ಎಂದಿಗೂ ಕಾರ್ಯಾಚರಣೆಗೆ ತಂದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಟೀಕಿಸಿದರು.

    ಚಿಕ್ಕಬಳ್ಳಾಪುರ ತಾಲ್ಲೂಕಿನ ಗೋಪಿನಾಥ ಬೆಟ್ಟದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ. ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದರಲ್ಲೆ ಇಡೀ ಜೀವನವನ್ನು ಕಳೆದುಬಿಡುತ್ತಾರೆ. ಇಂಥವರು ಇವತ್ತು ನೀತಿ ಪಾಠ ಹೇಳಿಕೊಡುತ್ತಿದ್ದಾರೆ. ಅವರು ಹೇಳಿದ್ದಂತೆ ನಿಜ ಜೀವನದಲ್ಲಿ ಎಂದಿಗೂ ನಡೆದುಕೊಂಡಿಲ್ಲ. ರಮೇಶ್ ಕುಮಾರ್ ಏನು ಎಂದು ಇಡೀ ಜಗತ್ತಿಗೆ ಅರ್ಥ ಆಗಿದೆ. ಅವರು ಕೇವಲ ನೀತಿ ಪಾಠ ಹೇಳೋದು ಆ ರೀತಿ ನಡೆದುಕೊಳ್ಳಲ್ಲ ಎಂದರು.

    ದೇವರಾಜು ಅರಸು ಬಿಟ್ಟು ಹೋದಾಗ ರಮೇಶ್ ಕುಮಾರ್ ಅವರ ಹಿಂದೆ ಹೋಗಿದ್ದರಾ? ದೇವೇಗೌಡರು ಅವರನ್ನು ಸ್ಪೀಕರ್ ಮಾಡಿದ್ದರು. ದೇವೇಗೌಡರು ಪದವಿ ಇಳಿದಾಗ ಎತ್ತ ಸಾಗಿದ್ದರು. ಇದರಿಂದ ರಮೇಶ್ ಕುಮಾರ್ ಫಕೀರ ಅಲ್ಲ. ಫಕೀರ ಆಗಲು ಯೋಗ್ಯತೆ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಮೊಟ್ಟೆ ವಿತರಣೆಗೆ ಕೆಲವರ ವಿರೋಧ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ವಿಚಾರಕ್ಕೆ ಧಕ್ಕೆ ತರುವಂತೆ ಸರ್ಕಾರ ಯಾರಿಗೂ ಒತ್ತಾಯ ಮಾಡುವುದಿಲ್ಲ. ಕೆಲವರು ಮೊಟ್ಟೆ ತಿನ್ನಲ್ಲ, ಕೆಲವರು ಹಾಲು ಕುಡಿಯೋದಿಲ್ಲ. ಅದು ಅವರವರ ಆಹಾರ ಪದ್ಧತಿಯಾಗಿದೆ. ಮೊಟ್ಟೆ ಪೌಷ್ಟಿಕಾಂಶವುಳ್ಳ ಆಹಾರ. ಆದರೆ ನಾವು ಯಾರಿಗೂ, ಯಾವುದನ್ನೂ ಬಲವಂತ ಮಾಡೋದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ:  ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

  • ರೈತರ ಹೋರಾಟಕ್ಕೆ ಬೆಲೆ ಕೊಟ್ಟ ಸರ್ಕಾರದ ನಿರ್ಧಾರಕ್ಕೆ ಸ್ವಾಗತ:  ಎಚ್‌ಡಿಡಿ

    ರೈತರ ಹೋರಾಟಕ್ಕೆ ಬೆಲೆ ಕೊಟ್ಟ ಸರ್ಕಾರದ ನಿರ್ಧಾರಕ್ಕೆ ಸ್ವಾಗತ: ಎಚ್‌ಡಿಡಿ

    ಬೆಂಗಳೂರು: ಕೇಂದ್ರ ಸರ್ಕಾರ ವಿವಾದಿತ 3 ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್ ಮಾಡಿ ಕೇಂದ್ರದ ನಿರ್ಧಾರಕ್ಕೆ ಸ್ವಾಗತ ಕೋರಿದ್ದಾರೆ.

    ನಾನು ಪ್ರಧಾನಿಯನ್ನು ಸ್ವಾಗತಿಸುತ್ತೇನೆ. ರೈತರ ಹೋರಾಟಕ್ಕೆ ಬೆಲೆ ಕೊಟ್ಟ ಸರ್ಕಾರದ ನಿರ್ಧಾರ ಸ್ವಾಗತ ಮಾಡೋದಾಗಿ ಟ್ವೀಟ್ ಮಾಡಿ ಶುಭ ಕೊರಿದ್ದಾರೆ. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವೇಳೆ ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುತ್ತಿದ್ದು, 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರ ಒಳಿತಿಗಾಗಿಯೇ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಈ 3 ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದ್ದವು. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿ ಮಾಡಲಾಗಿತ್ತು. ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದರೆ ಕೆಲವು ರೈತರು ಕಾಯ್ದೆಯನ್ನು ಅವರ ಸಲಹೆ ಒಪ್ಪಿಕೊಂಡಿದ್ದರೂ ವಿರೋಧಿಸುತ್ತಿದ್ದಾರೆ. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಕೃಷಿ ಮಾರುಕಟ್ಟೆ ಆಧುನೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು. ಕೃಷಿ ಬಜೆಟ್ ಮೊದಲಿಗಿಂತ 5 ಪಟ್ಟು ಹೆಚ್ಚಿಸಿದ್ದೇವೆ. ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡ್ ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

  • ಸಿಎಂ, ಖರ್ಗೆ ಮೈತ್ರಿಗಾಗಿ ಕೇಳಿದ್ದಾರೆ, ಗೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸುತ್ತೇವೆ: ಎಚ್‍ಡಿಡಿ

    ಸಿಎಂ, ಖರ್ಗೆ ಮೈತ್ರಿಗಾಗಿ ಕೇಳಿದ್ದಾರೆ, ಗೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸುತ್ತೇವೆ: ಎಚ್‍ಡಿಡಿ

    – ಕಲಬುರಗಿ ಮೇಯರ್ ಚುನಾವಣೆ ವಿಚಾರ ಬಗ್ಗೆ ಎಚ್‍ಡಿಕೆ ತೀರ್ಮಾನಿಸುತ್ತಾರೆ

    ಹಾಸನ: ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

    ಜಿಲ್ಲೆಯ ಉಡುವಾರೆ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಸನ್ನಿವೇಶ ನೋಡಿಕೊಂಡು ತೀರ್ಮಾನ ಮಾಡುತ್ತಾರೆ. ಇನ್ನೂ ಎಲೆಕ್ಷನ್ ನೋಟಿಫಿಕೇಷನ್ ಆಗಿಲ್ಲ. ಕಾಂಗ್ರೆಸ್ ಗೆ ಅಧಿಕಾರ ನೀಡುವಂತೆ ಖರ್ಗೆಯವರು ಮಾತಾಡಿದ್ದು ನಿಜ. ಸಿಎಂ ಬೊಮ್ಮಾಯಿಯವರೂ ಕುಮಾರಸ್ವಾಮಿಯವರ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಅಲ್ಲಿಯ ಮುಖಂಡರು, ಗೆದ್ದಿರುವ ಸದಸ್ಯರು ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಜೆಡಿಎಸ್ ಜೊತೆಗೆ ಒಟ್ಟಿಗೆ ಹೋಗೋಣ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಹೇಳುತ್ತಾರೆ ಅದು ಬೇರೆ ವಿಚಾರ. ಖರ್ಗೆಯವರು ನಮಗೆ ಹೇಳಿಲ್ವೇ? ನಾವು ಗೆದ್ದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸಬೇಕು. ಇಬ್ಬರು ಮುಸ್ಲಿಮರು ಗೆದ್ದಿದ್ದಾರೆ. ಒಂದು ಶೆಡ್ಯೂಲ್ ಕಾಸ್ಟ್, ಒಬ್ಬರು ರೆಡ್ಡಿ ಸಮುದಾಯದವರು ಗೆದ್ದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಮ್ಮ ಮನಸ್ಸೋ ಇಚ್ಛೆ ತೀರ್ಮಾನ ಮಾಡೋದು ಸರಿಯಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.

  • ಕಲಬುರಗಿ ಪಾಲಿಕೆ ಮೈತ್ರಿ ವಿಚಾರವಾಗಿ ಖರ್ಗೆ ನನಗೆ ಕಾಲ್ ಮಾಡಿದ್ರು: ಎಚ್‍ಡಿಡಿ

    ಕಲಬುರಗಿ ಪಾಲಿಕೆ ಮೈತ್ರಿ ವಿಚಾರವಾಗಿ ಖರ್ಗೆ ನನಗೆ ಕಾಲ್ ಮಾಡಿದ್ರು: ಎಚ್‍ಡಿಡಿ

    ಬೆಂಗಳೂರು: ಪಾಲಿಕೆ ಚುನಾವಣೆಯ ಫಲಿತಾಂಶದ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ. ಕುಮಾರಸ್ವಾಮಿ ಬಳಿಯೂ ಮಾತನಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

    ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ಖರ್ಗೆ ಮಾತನಾಡಿರುವುದು ಸತ್ಯ. ಆದರೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ತೀರ್ಮಾನ ಮಾಡಬಾರದು ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರ ಜೊತೆ ಸಿಎಂ ಮಾತುಕತೆ

    ಬಿಜೆಪಿಯವರು ಯಾರೂ ನನ್ನ ಜೊತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ ದೇವೇಗೌಡರು, ಖರ್ಗೆ ಅವರು ಪಕ್ಷದವರನ್ನೇ ಸಂಪರ್ಕಿಸಿ ಮಾತಾಡಿದ್ದಾರೆ ಅನ್ನಿಸುತ್ತೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಅವರು ಕೂತು ಮಾತನಾಡುತ್ತಾರೆ ನೋಡೋಣ. ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತಾಡಿರಬಹುದು, ನನ್ನ ಜೊತೆ ಬಿಜೆಪಿಯ ಯಾವ ನಾಯಕರೂ ಮಾತನಾಡಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

    ಕಲಬುರಗಿಯಲ್ಲಿ ನಾಲ್ಕು ಸೀಟ್ ಬಂದಿವೆ. ನಾಲ್ಕು ಸೀಟ್ ಬರುತ್ತವೆ ಎಂದು ನಾನು ಅಂದುಕೊಂಡಿರಲಿಲ್ಲ. ಹೆಚ್‍ಡಿಕೆ ಹೋಗಿ ಪ್ರಚಾರ ಮಾಡಿದ್ದರು. ಎಲ್ಲಿಯೂ ಇಲ್ಲವೇ ಇಲ್ಲ ಅನ್ನುವ ಸ್ಥಿತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ನಮ್ಮ ಸ್ಥಿತಿ ಚೆನ್ನಾಗಿ ಇರಲಿಲ್ಲ. ಅಲ್ಲಿ ಬಿಜೆಪಿ ಸ್ವೀಪ್ ಮಾಡಿದೆ, ಕಾಂಗ್ರೆಸ್ ಬಗ್ಗೆ ಮಾತಾಡಲು ಹೋಗಲ್ಲ. ಹುಬ್ಬಳ್ಳಿ ಧಾರವಾಡದಲ್ಲಿ ಮೂರ್ನಾಲ್ಕು ಸೀಟ್ ನಿರೀಕ್ಷೆ ಮಾಡಿದ್ದೇವು, ಒಂದು ಸೀಟ್ ಬಂದಿದೆ, ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲ ಕಡೆ ಪೈಪೋಟಿ ಕೊಟ್ಟಿದ್ದೇವೆ ಎಂದರು.

    ಸ್ಥಳೀಯ ಸಂಸ್ಥೆ ಫಲಿತಾಂಶದ ಬಗ್ಗೆ ಯಾರೂ ನಿರಾಶೆಯಾಗಬೇಕಿಲ್ಲ, ನಾವು ಹೆಚ್ಚಿನ ಸದಸ್ಯತ್ವ ನೋಂದಣಿ ಬಗ್ಗೆ ಗಮನ ಕೊಡುತ್ತೇವೆ. ಪಕ್ಷ ಕಟ್ಟುವ ಕಡೆ ಹೆಚ್ಚು ಗಮನ ಕೊಡುತ್ತೇವೆ. ನಾನು ಮತ್ತು ಪಕ್ಷದ ಎಲ್ಲ ನಾಯಕರು ಒಳಗೊಂಡಂತೆ ಪಕ್ಷ ಕಟ್ಟುವ ಕೆಲಸಕ್ಕೆ ಆದ್ಯತೆ ಕೊಡುತ್ತೇವೆ. ಒಟ್ಟಾಗಿ ಐಕ್ಯತೆಯಿಂದ ಪಕ್ಷ ಸಂಘಟನೆ ಮಾಡುತ್ತೇವೆ. ಸೋಲು- ಗೆಲುವು ಎಂದು ನೋಡಿ ಕುಳಿತುಕೊಳ್ಳಲು ಆಗುವುದಿಲ್ಲ. ಸೋಲು-ಗೆಲುವು, ಸಿಹಿ-ಕಹಿ ನೋಡಿದ್ದೇವೆ ಎಂದರು.

  • ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ: ಎಚ್.ಕೆ.ಕುಮಾರಸ್ವಾಮಿ

    ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ: ಎಚ್.ಕೆ.ಕುಮಾರಸ್ವಾಮಿ

    – ಸಿಎಂ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ

    ಹಾಸನ: ಬಿಜೆಪಿ ಸರ್ಕಾರವು ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ.

    ಮಂತ್ರಿಮಂಡಲ ರಚನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿಮಂಡಲವು ಅತ್ಯಂತ ಅಸಮತೋಲನದಿಂದ ಕೂಡಿದೆ. 30 ಜನ ಮಂತ್ರಿಗಳಿದ್ದರೂ 17 ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಅದು ಅಲ್ಲದೇ ಆರೋಪ ಇರೋರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇವರು ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ ಸರ್ಕಾರವೆಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಕಿಡಿಕಾರಿದರು.

    ಸರ್ಕಾರವು ಹೆಚ್ಚು ಸಂಖ್ಯೆಯಿರುವ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಮಹಿಳೆಯರಿಗೂ ಸಹ ಸರಿಯಾದ ಪ್ರಾತಿನಿಧ್ಯ ಕೊಟ್ಟಿಲ್ಲ. ಗೊಲ್ಲ ಸಮಾಜದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಚುನಾವಣೆ ವೇಳೆ ಶಿರಾದ ಗೊಲ್ಲ ಸಮುದಾಯಕ್ಕೆ ನಿಗಮ ಸ್ಥಾಪಿಸುತ್ತೇವೆ ಎಂದಿದ್ದರು. ಆದರೆ ಆ ಕಡೆ ಗಮನವೇ ಕೊಟ್ಟಿಲ್ಲ. ರಾಜಕಾರಣಿಗಳು ಸಂದರ್ಭಕ್ಕೆ ತಕ್ಕಂತೆ ಏನಾದ್ರು ಆಶ್ವಾಸನೆ ಕೊಡುತ್ತೇವೆ. ಆದರೆ ಅದನ್ನು ಈಡೇರಿಸುವುದಿಲ್ಲ ಎಂದು ಟೀಕಿಸಿದ್ದಾರೆ.

    ಹಾಸನದಲ್ಲಿನ ಪ್ರವಾಹ ಕುರಿತು ಮಾತನಾಡಿದ ಅವರು, ಇಲ್ಲಿ 4 ವರ್ಷಗಳಿಂದ ಮಳೆಯಾಗುತ್ತಿದೆ. ಸಚಿವರು, ಅಧಿಕಾರಿಗಳು ಮಳೆ ಬಂದಾಗ ಬಂದು ಸಮೀಕ್ಷೆ ಮಾಡುತ್ತಿದ್ದಾರೆ. ಆ ಸಮೀಕ್ಷೆಗೆ ತಕ್ಕಂತೆ ಹಣವನ್ನು ಸಹ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. 2017 ರಲ್ಲಿ 321 ಕೋಟಿ ರೂ. 2018 ರಲ್ಲಿ 178 ಕೋಟಿ ರೂ. 2019 ರಲ್ಲಿ 160 ಕೋಟಿ ರೂ. 2021 ರಲ್ಲಿ 78 ಕೋಟಿ ರೂ ನಷ್ಟ ಎಂದು ಜಿಲ್ಲಾಡಳಿತ ಸಮೀಕ್ಷೆ ಮಾಡಿದೆ ಎಂದು ತಿಳಿಸಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರವಾರಕ್ಕೆ ಪ್ರವಾಹ ವಿಚಾರವಾಗಿ ಹೋಗಿ ಬಂದಿದ್ದಾರೆ. ಅದೇ ರೀತಿ ಎಲ್ಲ ಜಿಲ್ಲೆಗೂ ಸಿಎಂ ಬಂದು ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಸಕಲೇಶಪುರಕ್ಕೂ ಬರಬೇಕು ನಾವು ಸ್ವಾಗತ ಮಾಡುತ್ತೇವೆ. ಅವರು ಇಲ್ಲಿಗೆ ಬಂದಾಗ ಅನುಕೂಲ ಹೆಚ್ಚಾಗುತ್ತೆ. ಮಳೆಯಿಂದ ಕಾಫಿ, ಏಲಕ್ಕಿ, ಮೆಣಸು, ಭತ್ತದ ಬೆಳೆಗಳು ಸಾಕಷ್ಟು ಹಾನಿಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ 225 ಕಿಲೋಮೀಟರ್ ರಸ್ತೆ ಹಾಳಾಗಿದೆ. ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕನಿಷ್ಠ ನೂರು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಕೆ.ಜಿ.ಬೋಪಯ್ಯ ಅವರು ಆರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ನಮಗೂ ಬೇಜಾರಾಗಿದೆ, ಹಾಸನ ಜಿಲ್ಲೆಗೆ, ಕೊಡಗಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಹೆಚ್‍ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು? ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಸಿಎಂ ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ. ಅದನ್ನು ಸ್ವಾಗತ ಮಾಡುತ್ತೇನೆ. ಅದು ಅಲ್ಲದೇ ದೇವೇಗೌಡರು ಅತ್ಯಂತ ಹಿರಿಯ ರಾಜಕಾರಣಿ, ಮಾಜಿಪ್ರಧಾನಮಂತ್ರಿಯಾಗಿದ್ದವರು. ರಾಜ್ಯದ ಹಿತದೃಷ್ಟಿಯಿಂದ ದೇವೇಗೌಡರ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರ ಸಲಹೆ ಎಲ್ಲರಿಗೂ ಅಗತ್ಯವಿದೆ. ಅದನ್ನು ಪ್ರಶ್ನೆ ಮಾಡುವುದು ಸಣ್ಣತನ, ಅಲ್ಪತನ, ಅನುಭವದ ಕೊರತೆ ಇರುವವರು ಮಾತ್ರ ಆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಶಾಸಕ ಪ್ರೀತಂಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು