Tag: ಎಚ್.ಕೆ.ಕುಮಾರಸ್ವಾಮಿ

  • ಒಂದು ದಿನದ ಬಂದ್ ಮಾಡಿದ್ರೆ ತಪ್ಪೇನು ಆಗಲ್ಲ: ಎಚ್‍ಕೆ ಕುಮಾರಸ್ವಾಮಿ

    ಒಂದು ದಿನದ ಬಂದ್ ಮಾಡಿದ್ರೆ ತಪ್ಪೇನು ಆಗಲ್ಲ: ಎಚ್‍ಕೆ ಕುಮಾರಸ್ವಾಮಿ

    – ಬಂದ್‍ನಿಂದ ಕನ್ನಡಿಗರಿಗೆ ಕಷ್ಟ ಆಗುತ್ತದೆ ಎಂದಿದ್ದ ಎಚ್‍ಡಿಕೆ
    – ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಬಂದ್ ಅಗತ್ಯವಿದೆ

    ಹಾಸನ: ಮಾಜಿ ಸಿಎಂ ಕುಮಾರಸ್ವಾಮಿ ಬಂದ್‍ನಿಂದ ಕನ್ನಡಿಗರಿಗೆ ಕಷ್ಟ ಆಗುತ್ತದೆ ಎಂದು ಹೇಳಿದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಒಂದು ದಿನ ತೀವ್ರ ತರವಾದ ಬಂದ್ ಮಾಡಿದರೆ ತಪ್ಪೇನು ಆಗಲ್ಲ ಎಂದು ಹೇಳುವ ಮೂಲಕ ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಡಿ.31 ಕರ್ನಾಟಕ ಬಂದ್ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಕನ್ನಡಪರ ಚಳುವಳಿಗಾರರು ಬಂದ್‍ಗೆ ಕರೆ ಕೊಟ್ಟಿದ್ದಾರೆ. ಅದು ಒಂದು ದಿನ ತೀವ್ರ ತರವಾದ ಬಂದ್ ಮಾಡಿದರೆ ತಪ್ಪೇನು ಆಗಲ್ಲ. ಏಕೆಂದರೆ ನಾವು ಪ್ರತಿದಿನ ಏನು ಬಂದ್ ಮಾಡಲ್ಲ ಎಂದು ಉತ್ತರಿಸಿದ ಅವರು, ಎಂಇಎಸ್, ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಬಂದ್ ಅಗತ್ಯವಿದೆ. ಬಂದ್‍ಗೆ ಜೆಡಿಎಸ್ ಬೆಂಬಲವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ

    ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಎಚ್‍ಡಿಕೆ, ಡಿ. 31ಕ್ಕೆ ಕರ್ನಾಟಕ ಬಂದ್ ಮಾಡುವುದಕ್ಕೆ ವಿವಿಧ ಸಂಘಟನೆಗಳು ಕರೆ ನೀಡಿದೆ. ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ರಾಜ್ಯದ ಜನರಿಗೆ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಕಷ್ಟದ ಬಗ್ಗೆ ಚಿಂತಿಸಬೇಕು. ಬಂದ್‍ಗೆ ಕರೆ ನೀಡಿದವರು ಕೂಡ ಈ ಬಗ್ಗೆ ಯೋಚಿಸಬೇಕು ಎಂದಿದ್ದರು.

    ಡಿ.28 ರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕಫ್ರ್ಯೂ ಜಾರಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಕೆ ಕುಮಾರಸ್ವಾಮಿ, ಜನರು ಇನ್ನೂ ಕೂಡ ಜಾಗೃತರಾಗಿಲ್ಲ. ಕೊರೊನಾ ಅನೇಕ ರೂಪಾಂತರಿಗಳನ್ನು ಹೊಂದಿದೆ. ಈಗ ಓಮಿಕ್ರಾನ್ ಬಂದಿದ್ದು, ಹೆಚ್ಚಾಗುತ್ತಿದೆ. ಸರ್ಕಾರದ ಕಾನೂನುಗಳನ್ನು ಜನರು ಪಾಲಿಸಬೇಕು. ಒಂದಿಷ್ಟು ಜನ ಸೇರಬಹುದು ಎಂದು ಮಾಡಿರುವುದು ತಪ್ಪು. ಮೊದಲಿನಂತೆ ಬಿಗಿಯಾಗಬೇಕು. ಜನರ ದಿನಚರಿಗೆ ತೊಂದರೆಯಾಗದಂತೆ ನಿಯಮಗಳನ್ನು ತರಬೇಕು ಎಂದರು. ಇದನ್ನೂ ಓದಿ: ಕರ್ನಾಟಕ ಬಂದ್‌ನಿಂದ ಕನ್ನಡಿಗರಿಗೆ ಕಷ್ಟ: ಎಚ್‌ಡಿಕೆ

    ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧ ಮಾಡಿದ್ದೇವೆ. ದೇಶದಲ್ಲಿ ಎಲ್ಲರೂ ಕೂಡ ಒಂದೇ, ಯಾವುದೇ ಧರ್ಮ ಅನುಸರಿಸಲಿ ಎಲ್ಲ ಕೂಡ ಒಂದೇ. ಮಹಾತ್ಮ, ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಮತಾಂತರವಾಗಿದ್ರು. ಅದು ಅವರವರ ಇಚ್ಛೇ. ಆದರೆ ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಈಗಾಗಲೇ ಸಂವಿಧಾನದಲ್ಲಿ ಅವಕಾಶವಿದೆ, ಆದ್ದರಿಂದ ಇವೆಲ್ಲವನ್ನೂ ತರುವ ಅಗತ್ಯವಿಲ್ಲ. ಭಾವನಾತ್ಮಕ ವಿಚಾರಗಳನ್ನು ತಂದು ಪಕ್ಷಕ್ಕೆ ಅನೂಕೂಲ ಮಾಡಿಕೊಳ್ಳುವ ದೃಷ್ಟಿಯಿಂದ ಬಿಜೆಪಿ ಸರ್ಕಾರ ಈ ರೀತಿ ಮಾಡಿದೆ. ನಾವು ವಿರೋಧ ಮಾಡಿದ್ದೀವಿ, ಕಾಂಗ್ರೆಸ್ ವಿರೋಧ ಮಾಡಿದೆ, ಜನಸಾಮಾನ್ಯರು ವಿರೋಧ ಮಾಡಿದ್ದಾರೆ ಎಂದು ಹೇಳಿದರು.

  • ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ

    ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ

    ಹಾಸನ: ಹೊರಗಡೆ ನಾಯಿಗಳು ಇದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ? ಹಾಗಂತ ಮಕ್ಕಳನ್ನು ತಡೆಯುವುದೋ, ನಾಯಿಗಳನ್ನೋ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಅತ್ಯಂತ ಖಂಡನೀಯವಾದದ್ದು ವೈಯಕ್ತಿಕವಾಗಿ ಪಕ್ಷದ ಪರವಾಗಿ ಉಗ್ರವಾಗಿ ಖಂಡಿಸುತ್ತೇನೆ. ನೈತಿಕತೆ ಇದ್ದರೆ ಗೃಹ ಸಚಿವರು ಪ್ರಕರಣ ಸಂಬಂಧ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯ ಹೊಣೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹೊರಬೇಕಾಗುತ್ತದೆ. ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ದೆಹಲಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ರೀತಿ ನಡೆದಿದೆ. ಈ ಘಟನೆ ರಾಜ್ಯಕ್ಕೆ ಹಾಗೂ ಮೈಸೂರಿಗೆ ದೊಡ್ಡ ಕಪ್ಪುಚುಕ್ಕೆ ಎಂದ ಅವರು ಪ್ರಕರಣ ಸಂಬಂಧ ಪೊಲೀಸರನ್ನು ಗೃಹಸಚಿವರು ಸಮರ್ಥಿಸಿಕೊಳ್ಳುತ್ತಿರುವುದು ಹೇಸಿಗೆ ತರುತ್ತಿದೆ ಅವರ ವೈಯಕ್ತಿಕ ಲಾಭಕ್ಕಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವಂತಹದ್ದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಅರಗ ಜ್ಞಾನೇಂದ್ರ ನೆಗೆಟಿವ್ ಆಗಿ ಹೇಳಿಕೆ ಕೊಟ್ಟಿಲ್ಲ: ಪೂರ್ಣಿಮಾ ಶ್ರೀನಿವಾಸ್

    ಹೆಣ್ಣುಮಕ್ಕಳು ಸಂಜೆ 7 ಮೇಲೆ ಹೊರಬರಬಾರದು ಎಂದಾದರೆ, ಸಂಜೆ 6:00 ರ ಮೇಲೆ ಹೆಣ್ಣು ಮಕ್ಕಳು ಹೊರ ಬಾರದಂತೆ ಆದೇಶ ಹೊರಡಿಸಲಿ. ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತ್ತಿನಲ್ಲಿ ಇಡಬೇಕಿತ್ತು ಘಟನೆ ನಡೆದ ಸ್ಥಳ ನಗರ ಪ್ರದೇಶದಿಂದ ಆರೇಳು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಪೊಲೀಸರ ಗಸ್ತು ಮಾಡುವುದು ಕಷ್ಟಕರವಲ್ಲ ಎಂದಿದ್ದಾರೆ.

    ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ತಿಂದು ಅನಾಗರಿಕವಾಗಿ ವರ್ತಿಸುತ್ತಿದ್ದಾರೆ. ಪೊಲೀಸರು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಬಿಜೆಪಿ ಸರ್ಕಾರ ಬಂದ ಮೇಲೆ ದಲಿತರು ಮಹಿಳೆಯರು ಮಕ್ಕಳು ಅಸಹಾಯಕರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದೆ. ನಿರ್ಭಯಾ ಪ್ರಕರಣದಲ್ಲಿ ದೆಹಲಿ ಸರ್ಕಾರ ಹೇಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಶಿಕ್ಷೆ ನೀಡಿತು. ಅದೇ ರೀತಿ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

  • ಜಿಟಿಡಿ ನೈತಿಕತೆಗಿಂತ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಯುತ್ತಿದ್ದಾರೆ: ಜೆಡಿಎಸ್ ರಾಜ್ಯಾಧ್ಯಕ್ಷ

    ಜಿಟಿಡಿ ನೈತಿಕತೆಗಿಂತ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಯುತ್ತಿದ್ದಾರೆ: ಜೆಡಿಎಸ್ ರಾಜ್ಯಾಧ್ಯಕ್ಷ

    ಹಾಸನ: ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದು ಶಾಸಕರಾಗಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ನಂತರ ಮಾತನಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಜಿ.ಟಿ.ದೇವೇಗೌಡರು ಪಕ್ಷ ಬಿಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ನಮ್ಮ ಬಳಿ ರಾಜೀನಾಮೆ ಬಗ್ಗೆ ಮಾತನಾಡಿಲ್ಲ. ದೇವೇಗೌಡರ ಬಳಿ ಮಾತನಾಡಿರಬಹುದು. ಆದರೂ ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದು ಶಾಸಕರಾಗಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು, ನಂತರ ಮಾತನಾಡಲಿ. ಪಕ್ಷದಲ್ಲಿ ಇದ್ದುಕೊಂಡು ಮಾತನಾಡುವುದು ಬೇಡ. ನಾವೇನು ಅವರನ್ನು ಕಳುಹಿಸುತ್ತಿಲ್ಲ, ನಾವು ಯಾರನ್ನೂ ಕಳುಹಿಸುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

    ಅವರು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ನೈತಿಕತೆಗಿಂತ ಅವರ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಯುತ್ತಿದ್ದಾರೆ. ನಮಗೆ ದೇವೇಗೌಡರು ಒಬ್ಬರೇ ಹೈಕಮಾಂಡ್. ಅಸಮಾಧಾನವಿದ್ದರೆ ಅವರ ಬಳಿ ಮಾತನಾಡಲಿ. ಅವರಿಗೆ ಸಚಿವ ಸ್ಥಾನ ನೀಡಿದ್ದೇವೆ. ಒಂದೇ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಿದೆ. ಈಗಲೂ ಕಾಲ ಮಿಂಚಿಲ್ಲ, ದೇವೇಗೌಡರ ಬಳಿ ಬಂದು ಮಾತನಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

  • ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ: ಎಚ್.ಕೆ.ಕುಮಾರಸ್ವಾಮಿ

    ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ: ಎಚ್.ಕೆ.ಕುಮಾರಸ್ವಾಮಿ

    – ಸಿಎಂ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ

    ಹಾಸನ: ಬಿಜೆಪಿ ಸರ್ಕಾರವು ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ.

    ಮಂತ್ರಿಮಂಡಲ ರಚನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿಮಂಡಲವು ಅತ್ಯಂತ ಅಸಮತೋಲನದಿಂದ ಕೂಡಿದೆ. 30 ಜನ ಮಂತ್ರಿಗಳಿದ್ದರೂ 17 ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಅದು ಅಲ್ಲದೇ ಆರೋಪ ಇರೋರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇವರು ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ ಸರ್ಕಾರವೆಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಕಿಡಿಕಾರಿದರು.

    ಸರ್ಕಾರವು ಹೆಚ್ಚು ಸಂಖ್ಯೆಯಿರುವ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಮಹಿಳೆಯರಿಗೂ ಸಹ ಸರಿಯಾದ ಪ್ರಾತಿನಿಧ್ಯ ಕೊಟ್ಟಿಲ್ಲ. ಗೊಲ್ಲ ಸಮಾಜದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಚುನಾವಣೆ ವೇಳೆ ಶಿರಾದ ಗೊಲ್ಲ ಸಮುದಾಯಕ್ಕೆ ನಿಗಮ ಸ್ಥಾಪಿಸುತ್ತೇವೆ ಎಂದಿದ್ದರು. ಆದರೆ ಆ ಕಡೆ ಗಮನವೇ ಕೊಟ್ಟಿಲ್ಲ. ರಾಜಕಾರಣಿಗಳು ಸಂದರ್ಭಕ್ಕೆ ತಕ್ಕಂತೆ ಏನಾದ್ರು ಆಶ್ವಾಸನೆ ಕೊಡುತ್ತೇವೆ. ಆದರೆ ಅದನ್ನು ಈಡೇರಿಸುವುದಿಲ್ಲ ಎಂದು ಟೀಕಿಸಿದ್ದಾರೆ.

    ಹಾಸನದಲ್ಲಿನ ಪ್ರವಾಹ ಕುರಿತು ಮಾತನಾಡಿದ ಅವರು, ಇಲ್ಲಿ 4 ವರ್ಷಗಳಿಂದ ಮಳೆಯಾಗುತ್ತಿದೆ. ಸಚಿವರು, ಅಧಿಕಾರಿಗಳು ಮಳೆ ಬಂದಾಗ ಬಂದು ಸಮೀಕ್ಷೆ ಮಾಡುತ್ತಿದ್ದಾರೆ. ಆ ಸಮೀಕ್ಷೆಗೆ ತಕ್ಕಂತೆ ಹಣವನ್ನು ಸಹ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. 2017 ರಲ್ಲಿ 321 ಕೋಟಿ ರೂ. 2018 ರಲ್ಲಿ 178 ಕೋಟಿ ರೂ. 2019 ರಲ್ಲಿ 160 ಕೋಟಿ ರೂ. 2021 ರಲ್ಲಿ 78 ಕೋಟಿ ರೂ ನಷ್ಟ ಎಂದು ಜಿಲ್ಲಾಡಳಿತ ಸಮೀಕ್ಷೆ ಮಾಡಿದೆ ಎಂದು ತಿಳಿಸಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರವಾರಕ್ಕೆ ಪ್ರವಾಹ ವಿಚಾರವಾಗಿ ಹೋಗಿ ಬಂದಿದ್ದಾರೆ. ಅದೇ ರೀತಿ ಎಲ್ಲ ಜಿಲ್ಲೆಗೂ ಸಿಎಂ ಬಂದು ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಸಕಲೇಶಪುರಕ್ಕೂ ಬರಬೇಕು ನಾವು ಸ್ವಾಗತ ಮಾಡುತ್ತೇವೆ. ಅವರು ಇಲ್ಲಿಗೆ ಬಂದಾಗ ಅನುಕೂಲ ಹೆಚ್ಚಾಗುತ್ತೆ. ಮಳೆಯಿಂದ ಕಾಫಿ, ಏಲಕ್ಕಿ, ಮೆಣಸು, ಭತ್ತದ ಬೆಳೆಗಳು ಸಾಕಷ್ಟು ಹಾನಿಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ 225 ಕಿಲೋಮೀಟರ್ ರಸ್ತೆ ಹಾಳಾಗಿದೆ. ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕನಿಷ್ಠ ನೂರು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಕೆ.ಜಿ.ಬೋಪಯ್ಯ ಅವರು ಆರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ನಮಗೂ ಬೇಜಾರಾಗಿದೆ, ಹಾಸನ ಜಿಲ್ಲೆಗೆ, ಕೊಡಗಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಹೆಚ್‍ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು? ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಸಿಎಂ ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ. ಅದನ್ನು ಸ್ವಾಗತ ಮಾಡುತ್ತೇನೆ. ಅದು ಅಲ್ಲದೇ ದೇವೇಗೌಡರು ಅತ್ಯಂತ ಹಿರಿಯ ರಾಜಕಾರಣಿ, ಮಾಜಿಪ್ರಧಾನಮಂತ್ರಿಯಾಗಿದ್ದವರು. ರಾಜ್ಯದ ಹಿತದೃಷ್ಟಿಯಿಂದ ದೇವೇಗೌಡರ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರ ಸಲಹೆ ಎಲ್ಲರಿಗೂ ಅಗತ್ಯವಿದೆ. ಅದನ್ನು ಪ್ರಶ್ನೆ ಮಾಡುವುದು ಸಣ್ಣತನ, ಅಲ್ಪತನ, ಅನುಭವದ ಕೊರತೆ ಇರುವವರು ಮಾತ್ರ ಆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಶಾಸಕ ಪ್ರೀತಂಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು

  • ಜಮೀರ್ ಜೊತೆ ಶ್ರೀಲಂಕಾಗೆ ಹೋಗಿದ್ದು ನಿಜ, ಕ್ಯಾಸಿನೋಗೆ ಹೋಗಿಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ

    ಜಮೀರ್ ಜೊತೆ ಶ್ರೀಲಂಕಾಗೆ ಹೋಗಿದ್ದು ನಿಜ, ಕ್ಯಾಸಿನೋಗೆ ಹೋಗಿಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ

    ಹಾಸನ: ಶಾಸಕ ಜಮೀರ್ ಅಹ್ಮದ್ ಜೊತೆ ಶ್ರೀಲಂಕಾಕ್ಕೆ ಹೋಗಿದ್ದು ನಿಜ. ಆದರೆ ನಾವು ಯಾರೂ ಅವರ ಜೊತೆ ಕ್ಯಾಸಿನೋಗೆ ಹೋಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯ ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಜೊತೆ ಶ್ರೀಲಂಕಾಗೆ ಹೋಗಿದ್ದ ಸಮಯದಲ್ಲಿ ನಾನೂ ಶಾಸಕನಾಗಿದ್ದೆ. ಆದರೆ ನಾವ್ಯಾರೂ ಅವರ ಜೊತೆ ಕ್ಯಾಸಿನೋಗೆ ಹೋಗಿಲ್ಲ. ನಾವು ಶ್ರೀಲಂಕಾದಲ್ಲಿ ಇದ್ದಿದ್ದು ಎರಡೇ ದಿನ. ಅಲ್ಲಿ ಉಳಿದುಕೊಂಡಿದ್ದು ಒಂದೇ ರಾತ್ರಿ. ಸಾಮಾನ್ಯ ಹೋಟೆಲ್‍ನಲ್ಲಿ ಉಳಿದುಕೊಂಡು ವಾಪಸ್ಸಾಗಿದ್ದೇವೆ ಎಂದು ಜಮೀರ್ ಹೇಳಿಕೆಗೆ ತಿರುಗೇಟು ನೀಡಿದರು.

    ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 650 ಕೋಟಿ ರೂ. ಹಣ ಮಂಜೂರು ಮಾಡಿದ್ದರು. ಇಲ್ಲಿಯವರೆಗೆ ಹಣ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ನಿಗದಿಯಾದ ಹಣ ಕೂಡ ಬಿಡುಗಡೆಯಾಗಿಲ್ಲ. ಅದನ್ನು ಕೇಳಲು ಹೋಗಿದ್ದರು. ಇದನ್ನು ಬಿಟ್ಟು ಭೇಟಿ ಹಿಂದೆ ಬೇರೆ ಯಾವ ರಾಜಕೀಯವೂ ಇಲ್ಲ, ಬೇರೆ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

  • ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ- ಜೆಡಿಎಸ್ ರಾಜ್ಯಾಧ್ಯಕ್ಷ

    ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ- ಜೆಡಿಎಸ್ ರಾಜ್ಯಾಧ್ಯಕ್ಷ

    ಮಡಿಕೇರಿ: ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ, ಸರ್ಕಾರವನ್ನು ಬೀಳಿಸಿದರೆ ಸಂತ್ರಸ್ತರಿಗೆ ತೊಂದರೆಯಾಗಲಿದೆ. ಹೀಗಾಗಿ ಸರ್ಕಾರ ಬೀಳಿಸಲು ಹೋಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಸರ್ಕಾರವನ್ನು ಬೀಳಿಸಿದರೆ ಸಂತ್ರಸ್ತರಿಗೆ ತಂದರೆಯಾಗಲಿದೆ. ಹೀಗಾಗಿ ಸರ್ಕಾರ ಬೀಳಿಸಲು ಹೋಗುವುದಿಲ್ಲ ಎಂದು ಕುಮಾರಸ್ವಾಮಿಯವರು ಹೇಳಿದ್ದಾರಷ್ಟೇ. ಆದರೆ ಬಿಜೆಪಿ ಸರ್ಕಾರಕ್ಕೆ ಸಪೋರ್ಟ್ ಮಾಡುವುದಿಲ್ಲ ಎಂದರು.

    ಎಂಎಲ್ಸಿಗಳು ಪಕ್ಷ ಬಿಡುವುದಿಲ್ಲ ಅಸಮಾಧಾನದಿಂದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ ಅಷ್ಟೇ. ಅವರು ಪಕ್ಷ ತೊರೆಯುತ್ತೇವೆ ಎಂದು ಹೇಳಿಲ್ಲ, ಏನೇ ಸಮಸ್ಯೆ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಬೇಕು. ಬೀದಿಯಲ್ಲಿ ಮಾತನಾಡಬಾರದು. ಉಪಚುನಾವಣೆ ನಂತರ ರಾಜಕೀಯ ವ್ಯವಸ್ಥೆ ಬದಲಾವಣೆಯಾಗಲಿದೆ ಎಂದರು.

    ಪಠ್ಯದಿಂದ ತೆಗೆದ ಕೂಡಲೇ ಇತಿಹಾಸ ಬದಲಾಗುವುದಿಲ್ಲ. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಂತಾದವರು ಟಿಪ್ಪು ಜಯಂತಿ ಆಚರಿಸಿದ್ದಾರೆ. ಸರ್ಕಾರ ಬದಲಾದ ಕೂಡಲೇ ನಿಲುವು ಬದಲಾಗಿದ್ದೇಕೆ, ಅವರ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಟಿಪ್ಪು ಜಯಂತಿ ಆಚರಿಸಬೇಕು. ಪಠ್ಯ ಪುಸ್ತಕದಿಂದಲೂ ಇತಿಹಾಸ ತೆಗೆಯಬಾರದು ಎಂದರು.

    ರಾಜ್ಯದಲ್ಲಿ ಹಲವು ಜಿಲ್ಲೆಯಲ್ಲಿ ಪ್ರವಾಹವಾಗಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯವನ್ನು ಸಂಪೂರ್ಣ ಕಡೆಗಣಿಸಿದೆ. ಕೊಡಗು ಜಿಲ್ಲೆ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದೆ. ಆದರೆ ರಾಜ್ಯದಿಂದ ಕೊಡಗಿಗೆ ಹೊಸದಾಗಿ ಯಾವುದೇ ಅನುದಾನ ಬರಲಿಲ್ಲ. ಹೀಗಾಗಿ ಕೊಡಗಿನಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಲ್ನಡಿಗೆ ಜಾಥಾ ಆರಂಭಿಸಿದ್ದೇವೆ ಎಂದರು.