Tag: ಎಚ್.ಎಂ.ರೇವಣ್ಣ

  • ಪಾದಯಾತ್ರೆಯಲ್ಲಿದ್ದ ಎಚ್.ಎಂ.ರೇವಣ್ಣಗೆ ಸೋಂಕು – ಕಾಂಗ್ರೆಸ್‍ನಿಂದ ರಾಜ್ಯಕ್ಕೆ ಕೊರೊನಾ ರಫ್ತು ಎಂದ ಬಿಜೆಪಿ

    ಪಾದಯಾತ್ರೆಯಲ್ಲಿದ್ದ ಎಚ್.ಎಂ.ರೇವಣ್ಣಗೆ ಸೋಂಕು – ಕಾಂಗ್ರೆಸ್‍ನಿಂದ ರಾಜ್ಯಕ್ಕೆ ಕೊರೊನಾ ರಫ್ತು ಎಂದ ಬಿಜೆಪಿ

    ಬೆಂಗಳೂರು: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ಎಚ್.ಎಂ ರೇವಣ್ಣ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.

    ಈ ವಿಚಾರವನ್ನು ಪ್ರಸ್ತಾಪ ಮಾಡಿದ ಬಿಜೆಪಿ, ಕಾಂಗ್ರೆಸ್ ಪ್ರಾಯೋಜಿತ ಸುಳ್ಳಿನಜಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಾಂಗ್ರೆಸ್ ಬೆಂಗಳೂರಿಗೆ ನೀರು ಕೊಡುತ್ತೇವೆ ಹೇಳಿ, ಈಗ ಬೆಂಗಳೂರಿಗೆ ಕೋವಿಡ್ ಸೋಂಕು ಹಂಚುತ್ತಿದೆ. ಡಿಕೆಶಿ ಅವರೇ ಕೋವಿಡ್‍ಯಾತ್ರೆ ಮುಂದುವರೆಸಿ ಬೆಂಗಳೂರನ್ನು ಕೋವಿಡ್ ಹಬ್ ಮಾಡುವ ಯೋಜನೆಯಿದೆಯೇ ಎಂದು ಪ್ರಶ್ನಿಸಿದೆ.

    ಭಾನುವಾರ ಎಚ್‍ಎಂ ರೇವಣ್ಣ ನಗಾರಿ ಹೊಡೆಯುವ ಮೂಲಕ ಮೆಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ್ದರು. ಈ ವಿಚಾರವನ್ನೇ ಬಿಜೆಪಿ ಪ್ರಸ್ತಾಪಿಸಿ ಡಿಕೆ ಶಿವಕುಮಾರ್ ಅವರನ್ನು ಕುಟುಕಿದೆ.

    ಮೊದಲನೇ ಅಲೆಯ ವೇಳೆ ದೇಶಾದ್ಯಂತ ಸುದ್ದಿಯಾಗಿದ್ದ ತಬ್ಲಿಘಿಗಳಿಗೆ ಕಾಂಗ್ರೆಸ್ಸನ್ನು ಹೋಲಿಸಿದೆ. ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣವಾದರೆ ಕಾಂಗ್ರೆಸ್ ತಬ್ಲಿಘಿಗಳೇ ನೇರ ಹೊಣೆ. ಕಾಂಗ್ರೆಸ್ ಪಾದಯಾತ್ರೆ ತಬ್ಲಿಘಿ ಸಮ. ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣರಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ.

    ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಸುಳ್ಳಿನಜಾತ್ರೆ ಈಗ ಕೊರೋನಾ ಮೂರನೇ ಅಲೆಯ ಸೂಪರ್ ಸ್ಪ್ರೆಡರ್ ಆಗುತ್ತಿದೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ದೇಶವನ್ನು ಕಾಡಿದ್ದ ತಬ್ಲಿಘಿಗಳ ರೀತಿ ಈಗ ಡಿಕೆಶಿ ಸೋದರರು ಪಾದಯಾತ್ರೆಯ ನೆಪದಲ್ಲಿ ರಾಜ್ಯದಲ್ಲಿ ಕೊರೋನಾ ಹಂಚುತ್ತಿದ್ದಾರೆ. ಕೋವಿಡ್ ಸೂಪರ್ ಸ್ಪ್ರೆಡರ್ ಕಾಂಗ್ರೆಸ್ ಎಂದು ಟ್ವೀಟ್ ಮಾಡಿದೆ.

    ಟ್ವೀಟ್‍ನಲ್ಲಿ ಏನಿದೆ?:
    ಕೊರೋನಾ ಸ್ಪ್ರೆಡರ್ ಡಿಕೆ ಸೋದರರೇ ನಿಮ್ಮ ಸುಳ್ಳಿನಜಾತ್ರೆ ಪ್ರಹಸನದಲ್ಲಿ ಇಪ್ಪತ್ತು ನಿಮಿಷ, ಅರ್ಧಗಂಟೆಯ ನಡಿಗೆ ನಾಟಕವಾಡುತ್ತಿರುವ ಕಾಂಗ್ರೆಸ್ ಪುಡಾರಿಗಳು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಅವರೆಲ್ಲರೂ ಕೋವಿಡ್ ಸೋಂಕಿನ ಸಂಭಾವ್ಯ ವಾಹಕಗಳು. ರಾಜಧಾನಿಗೆ ಕೊರೊನಾ ಹಬ್ಬಿಸುವುದು ನಿಮ್ಮ ಉದ್ದೇಶವೇ? ಇದನ್ನೂ ಓದಿ: ಜನವರಿ ಅಂತ್ಯಕ್ಕೆ ನಿತ್ಯ 60 ಸಾವಿರ ಪ್ರಕರಣಗಳು ಪತ್ತೆ ಸಾಧ್ಯತೆ – ದೆಹಲಿಯಲ್ಲಿ ಖಾಸಗಿ ಕಚೇರಿಗಳು ಬಂದ್

    ಬೆಂಗಳೂರಿಗೆ ನೀರು ಹಂಚುವುದಕ್ಕಾಗಿ ಈ ಪಾದಯಾತ್ರೆ ಎಂದು ಸುಳ್ಳಿನಜಾತ್ರೆ ಮಾಡುತ್ತಿರುವ ಕಾಂಗ್ರೆಸ್, ವಾಸ್ತವದಲ್ಲಿ ಬೆಂಗಳೂರಿಗೆ ಕೋವಿಡ್ ರಫ್ತು ಮಾಡುತ್ತಿದೆ. ಈ ಮೂಲಕ ಕೋವಿಡ್ ಸೋಂಕಿತ ಕಾಂಗ್ರೆಸಿಗರು ಊರಿಗೆಲ್ಲ ಸೋಂಕು ಹಂಚುತ್ತಿದ್ದಾರೆ. ಇದನ್ನೂ ಓದಿ: ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್‌ಗೆ ಕೊರೊನಾ – ಐಸಿಯುವಿನಲ್ಲಿ ಚಿಕಿತ್ಸೆ

  • ಎಚ್.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನ – ಅಭಿನಂದನೆ, ಗೃಂಥಗಳ ಬಿಡುಗಡೆ ಸಮಾರಂಭ

    ಎಚ್.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನ – ಅಭಿನಂದನೆ, ಗೃಂಥಗಳ ಬಿಡುಗಡೆ ಸಮಾರಂಭ

    ಬೆಂಗಳೂರು : ಐದು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಹಿರಿಯ ಜನನಾಯಕ ಎಚ್.ಎಂ.ರೇವಣ್ಣ ಅವರ ಜೀವನ ಮತ್ತು ಸಾಧನೆಗಳ ವಿವರಗಳುಳ್ಳ ಪರಿಚಯ ಗ್ರಂಥ, ಅವರ ಜೀವನದ ಪ್ರಮುಖ ಘಟಕಗಳ ದಾಖಲೆ ಹೊಂದಿರುವ ಚಿತ್ರಕೋಶ ಮತ್ತು ಅವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ಮಾರ್ಚ್ 21 ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಕನ್ ವೆನ್ಷನ್ ಸೆಂಟರ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ರೇವಣ್ಣ ಅವರ ಐದು ದಶಕಗಳ ಸೇವೆಯನ್ನು ಸಾರ್ವಜನಿಕ ವಾಗಿ ಅಭಿನಂದಿಸಲಾಗುತ್ತದೆ.

    ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಂ.ವೀರಪ್ಪ ಮೊಯಿಲಿ ಅವರು ಅಧ್ಯಕ್ಷತೆ ವಹಿಸುವರು.

    ‘ಸಂಗತ’ ಗ್ರಂಥವನ್ನು ಮಾಜಿ ರಾಜ್ಯಪಾಲರು ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬಿಡುಗಡೆ ಮಾಡಲಿದ್ದಾರೆ. ‘ದೃಶ್ಯಯಾನ’ ಚಿತ್ರಗುಚ್ಛವನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಮಾಜಿ ಕೇಂದ್ರ ಸಚಿವರಾದ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಲೋಕಾರ್ಪಣೆ ಮಾಡುವರು. ‘ಇಟ್ಟ ಹೆಜ್ಜೆ ದಿಟ್ಟ ನಿಲುವು’ ಕಿರುಚಿತ್ರವನ್ನು ಕರ್ನಾಟಕ ವಿಧಾನ ಪರಿಷತ್ ನ ಸಭಾಪತಿ ಬಸವರಾಜ್ ಹೊರಟ್ಟಿ ಬಿಡುಗಡೆಗೊಳಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಶ್ರೀರಾಮಲಿಂಗಾರೆಡ್ಡಿ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ.

    ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕೆ.ಎಂ.ನಾಗರಾಜ್ ಹಾಗೂ ಹಿರಿಯ ಕವಿ ಹಾಗೂ ವಿಧಾನ ಪರಿಷತ್ ನ ಮಾಜಿ ಸದಸ್ಯ ಡಾ.ಸಿದ್ದಲಿಂಗಯ್ಯ ಅವರು ಅಭಿನಂದನಾ ನುಡಿಗಳನ್ನು ಆಡುವರು. ಮಾಜಿ ಸಚಿವೆ ಮತ್ತು ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾ ನಾಯಕ್ ಅವರು ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ. ಸಮಾರಂಭದಲ್ಲಿ ಗ್ರಂಥ ಸಂಪಾದಕರುಗಳಾದ ಕಾ.ತ.ಚಿಕ್ಕಣ್ಣ ಮತ್ತು ಲಕ್ಷ್ಮಣ ಕೊಡಸೆ, ಕಿರುಚಿತ್ರ ನಿರ್ದೇಶಕ ಹುಲಿ ಚಂದ್ರಶೇಖರ ಉಪಸ್ಥಿತ ಇರಲಿದ್ದಾರೆ.

  • ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

    ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

    ಬೆಂಗಳೂರು: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರದ್ದು ನಾಲಿಗೆಯಾ ಅಥವಾ ಬೇರೆನಾ? ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಪಕ್ಷ ಜನನಾಯಕನನ್ನಾಗಿ ಮಾಡಿದೆ. ಮಾತನಾಡುವುದಕ್ಕೂ ಮುನ್ನ ಒಮ್ಮೆ ಅವರು ಬೆಳೆದು ಬಂದ ರೀತಿಯನ್ನು ನೋಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ತಲಘಟ್ಟಪುರದಲ್ಲಿ ಎಸ್.ಟಿ.ಸೋಮಶೇಖರ್ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾನು ಜನಪ್ರತಿನಿಧಿಯಾಗಿದ್ದು ಹೇಗೆ ಎಂಬುದನ್ನು ಮೊದಲು ಅವರು ಅರಿಯಬೇಕು. ಯಾವುದೇ ಜನನಾಯಕನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಗೆ ಈ ಸ್ಥಾನ ನೀಡಿದ್ದು, ಪಕ್ಷ, ಜನತೆ. ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಬಿಟ್ಟರು ಎಂದು ಸ್ಪಷ್ಟಪಡಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಅನುದಾನ ಕೊಡದಿದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತಿರಲಿಲ್ಲ. ಹಣ ಸಿಗುತ್ತಿರಲಿಲ್ಲ ಎನ್ನುತ್ತಿದ್ದವರು ಇಂದು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಾತನಾಡುವುದಕ್ಕೂ ಮೊದಲು ಏನಾಗಿದ್ದರು ಎಂಬುದನ್ನು ಅರಿಯಬೇಕು. ಬಿಡಿಎ ಸದಸ್ಯರಾಗಿ, ಅಧ್ಯಕ್ಷತೆಯೇ ಬೇಕು ಎಂದು ಪಟ್ಟು ಹಿಡಿದು, ಪಡೆದಿದ್ದರು. ಬಿಡಿಎನಲ್ಲಿ ಏನೇನು ಮಾಡಿದ್ದೀರಿ ನೋಡಬೇಕಿದೆ. ಗುಂಡೂರಾವ್ ಅವರ ಮಗ ಎಂಬ ಕಾರಣಕ್ಕಾಗಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಸಂಘಟನೆ ಮಾಡಿ, ರಾಜ್ಯಾದ್ಯಂತ ಪ್ರಚಾರ ಮಾಡಿ ರಾಜ್ಯಾಧ್ಯಕ್ಷರಾದರು. ಮಾತನಾಡುವ ಮೊದಲು ಹಿಂದೆ ಏನಾಗಿದ್ದೆ ಎಂಬುದನ್ನು ಅರಿಯಬೇಕು. ಒಬ್ಬ ಸಾಮಾನ್ಯ ಟಿಕೆಟ್ ಏಜೆಂಟ್ ಅಗಿದ್ದವರು ಜನಪ್ರತಿನಿಧಿಯಾಗಿ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ ಎಂಬುದನ್ನು ಅರಿಯಬೇಕು ಎಂದರು.

    ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್‍ಬಿಎಂ ಮೂವರು ಆಡಿದ ಆಟ ಗೊತ್ತಿಲ್ಲವೇ, ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಆಡಿದ್ದ ಆಟ ನಾವೂ ನೋಡಿದ್ದೇವೆ. ಮೊದಲು ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿದ್ದವರ ನಾಲಿಗೆ ಈಗ ಏನಾಗಿದೆ? ಎಲ್ಲ ಅಧಿಕಾರ ಅನುಭವಿಸಿ ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದೀರಲ್ಲ, ನಿಮಗೇನಾದರೂ ಮಾನ ಮರ್ಯಾದೆ ಇದೆಯಾ? ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಈಗ ಅವರ ವಿರುದ್ಧವೇ ಮಾತನಾಡುತ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯನವರ ಮನೆಗೆ ಬಂದರೆ ನಿಮಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತಿತ್ತು. ಈಗ ಅವರ ಬಗ್ಗೆಯೇ ಮಾತನಾಡುತ್ತೀರಲ್ಲ ನಾಚಿಕೆ ಆಗಲ್ವಾ? ಕೃಷ್ಣ ಭೈರೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆ ಅಂದಿದ್ದರಲ್ಲ ಈಗ ನಿಮ್ಮ ನಾಲಿಗೆಗೆ ಏನಾಗಿದೆ. ಬಹಳ ದಿನ ನಿಮ್ಮ ಆಟ ನಡೆಯುವುದಿಲ್ಲ. ಮುಂದೆ ನಿಮಗೆ ಮಾರಿಹಬ್ಬ ಇದೆ ಎಂದು ಹರಿಹಾಯ್ದರು.

  • ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣರಲ್ಲ- ಎಚ್.ಎಂ.ರೇವಣ್ಣ

    ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣರಲ್ಲ- ಎಚ್.ಎಂ.ರೇವಣ್ಣ

    ಬೆಂಗಳೂರು: ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಖಂಡಿತ ಕಾರಣ ಅಲ್ಲ, ಸರ್ಕಾರ ಬೀಳಲು ಎರಡೂ ಪಕ್ಷಗಳೂ ಕಾರಣ. ಆಡಳಿತ ನಡೆಸುವವರು ಸರಿಯಾಗಿ ನಡೆಸಬೇಕಿತ್ತು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೆಪಿಎಸ್‍ಸಿ ಸದಸ್ಯರಾಗಿ ಮಾಡಿ ಎಂದು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದರು. ಆದರೆ ಕುಮಾರಸ್ವಾಮಿ ಮಾಡಲಿಲ್ಲ. ಬಜೆಟ್ ಅನುದಾನವನ್ನು ಯಾರಿಗೆ ಎಷ್ಟು ನೀಡಿದ್ದಾರೆ ಎಂದು ಪರಿಶೀಲಿಸಿಕೊಳ್ಳಲಿ. ಬಜೆಟ್ ಅನುದಾನ ಕಾಂಗ್ರೆಸ್‍ನವರಿಗಿಂತ ಜೆಡಿಎಸ್ ಶಾಸಕರಿಗೆ ಹೆಚ್ವು ಸಿಕ್ಕಿದೆ. ಸಿದ್ದರಾಮಯ್ಯ ಶಾಸಕರನ್ನು ಮುಂಬೈಗೆ ಕಳುಹಿಸಿಲ್ಲ. ಅವರೇ ಶಾಸಕರನ್ನು ಮುಂಬೈಗೆ ಕಳುಹಿಸಿದ್ದಾರೆ ಎನ್ನುವುದಾದರೆ, ಜೆಡಿಎಸ್ ಶಾಸಕರನ್ನೂ ಅವರೇ ಕಳುಹಿಸಿದ್ದಾರಾ ಎಂದು ಪ್ರಶ್ನಿಸಿದರು.

    ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಅಲ್ಲ, ಆಡಳಿತ ನಡೆಸೋರು ಸರಿಯಾಗಿ ನಡೆಸಬೇಕಿತ್ತು. ಅವರು ಸರಿಯಾಗಿ ಆಡಳಿತ ನಡೆಸಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ. ಶಾಸಕರು ಮುಂಬೈಗೆ ಹೋಗುವ ಕುರಿತು ಕುಮಾರಸ್ವಾಮಿಯವರಿಗೆ ಮಾಹಿತಿ ಇತ್ತಲ್ಲ. ಅವರೇಕೆ ತಡೆಯಲಿಲ್ಲ, ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಅವರು ಸಿದ್ದರಾಮಯ್ಯ ಆಪ್ತರಲ್ಲ. ಸೋಮಶೇಖರ್ ಮೊದಲಿಂದಲೂ ಕಾಂಗ್ರೆಸ್‍ನಲ್ಲಿದ್ದವರು. ಶಾಸಕ ಮುನಿರತ್ನ ಬಿ.ಕೆ.ಹರಿಪ್ರಸಾದ್ ಬೆಂಬಲಿಗರು ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.

    ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯರನ್ನು ಸಿದ್ದರಾಮಯ್ಯ ಕಳಿಸಿದ್ದಾರಾ, ಕುಮಾರಸ್ವಾಮಿಗೆ ಹೇಳೋದಕ್ಕೇನು ಎಲ್ಲವನ್ನೂ ಹೇಳುತ್ತಾರೆ. ಲೋಕಸಭೆ ಚುನಾವಣೆ ನಂತರ ಜಾತ್ಯಾತೀತ ಪಕ್ಷಗಳು ಒಂದಾಗಬೇಕು ಎಂದು ಮೈತ್ರಿ ಮಾಡಿಕೊಂಡೆವು. ಬಳಿಕ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳು, ವ್ಯತ್ಯಾಸಗಳಾದವು. ಅವುಗಳನ್ನು ಸರಿಪಡಿಸಿಕೊಳ್ಳಬೇಕಿತ್ತು. ಆದರೆ ಸರಿಪಡಿಸಿಕೊಳ್ಳಲಿಲ್ಲ, ಹೀಗಾಗಿ ಅದು ಕೈಮೀರಿ ಹೋಗಿ ಸರ್ಕಾರ ಬೀಳುವ ಹಂತ ತಲುಪಿತು ಎಂದು ತಿಳಿಸಿದರು.

  • ಅನಾರೋಗ್ಯದ ನಡುವೆಯೂ ಬಂದು ಮತ ಹಾಕಿದ ಮಾಜಿ ಸಚಿವ

    ಅನಾರೋಗ್ಯದ ನಡುವೆಯೂ ಬಂದು ಮತ ಹಾಕಿದ ಮಾಜಿ ಸಚಿವ

    ಬೆಂಗಳೂರು: ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಅನಾರೋಗ್ಯದ ನಡುವೆಯೂ ಬಂದು ಮತದಾನ ಮಾಡಿದ್ದಾರೆ.

    ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಎಚ್. ಎಂ ರೇವಣ್ಣ ವಿಕ್ರಮ್ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದಾರೆ. ರೇವಣ್ಣ ಅವರು ಮಹಾಲಕ್ಷ್ಮಿ ಲೇಔಟ್‍ನ 141 ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ.

    ಈ ವೇಳೆ ಮಾತನಾಡಿದ ಎಚ್. ಎಂ ರೇವಣ್ಣ, “ನಂಗೆ ಸ್ಪೈನಲ್ ಕಾರ್ಡ್ ತೊಂದರೆ ಇದೆ. ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಮತದಾನ ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಚಿಕಿತ್ಸೆ ನಡುವೆ ಮತದಾನಕ್ಕೆ ಬಂದೆ. ಯಾರು ಕೂಡ ಮತದಾನ ಮಾಡೋದನ್ನು ತಪ್ಪಿಸಿಕೊಳ್ಳಬಾರದು. ನಾನು ಒಬ್ಬ ರಾಜಕೀಯ ವ್ಯಕ್ತಿಯಾಗಿ ವೋಟ್ ಮಾಡದೇ ಇದ್ದರೆ ತಪ್ಪಾಗುತ್ತೆ” ಎಂದರು.

    ನಗರದ ಜನಕ್ಕಿಂತ ಹಳ್ಳಿ ಜನರು ಹೆಚ್ಚಾಗಿ ವೋಟ್ ಮಾಡುತ್ತಿದ್ದಾರೆ. ನಗರದ ಜನರು ಹೆಚ್ಚು ವೋಟ್ ಮಾಡಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವಂತೆ ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಬೆಂಗಳೂರು: ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಕಾಂಗ್ರೆಸ್‍ನ ಕೆಲವು ಮುಖಂಡರು ಪ್ರಶ್ನಿಸಿದ್ದರು ಹಾಗೂ ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಬೆಳವಣಿಗೆಗೆ ಗುರುವಾರ ಜಯಮಾಲಾ ಉತ್ತರ ನೀಡಿದ್ದಾರೆ.

    ಜಗತ್ತನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ಕಾಂಗ್ರೆಸ್ ಸಚಿವ ಎಚ್.ಎಂ.ರೇವಣ್ಣ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಜಯಮಾಲಾ ಟಾಂಗ್ ನೀಡಿದ್ದಾರೆ. ಇದನ್ನು ಓದಿ:  ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಜಯಮಾಲಾ ಸೇವೆ ಪಕ್ಷದ ನಾಯಕರಿಗೆ ಇಷ್ಟವಾಗಿದೆ ಎಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಿರುಗೇಟು ನೀಡಿದ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಪದ ಪ್ರಯೋಗ ನನಗೆ ಸರಿ ಅನಿಸಲಿಲ್ಲ. ಅವರ ಮಾತುಗಳು ರಾಹುಲ್ ಗಾಂಧಿಯವರ ನಿರ್ಧಾರವನ್ನೇ ಪ್ರಶ್ನಿಸುವಂತಿದೆ ಎಂದಿದ್ದಾರೆ.

    ಸಂವಿಧಾನ ಇಲ್ಲದಿದ್ದರೇ ಕೇವಲ ಪುರುಷರು ಮಾತ್ರ ದೇಶವನ್ನು ಆಳುತ್ತಿದ್ದರು. ನಮ್ಮನ್ನ ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕುತ್ತಿದ್ದರು. ಕಾಂಗ್ರೆಸ್ಸಿಗೆ ಧ್ವನಿಪೆಟ್ಟಿಯಾಗಿದ್ದು ಹೆಣ್ಣು, ಇಂದಿರಾ ಗಾಂಧಿ ಪಕ್ಷಕ್ಕೆ ಬಲ ತುಂಬಿದ್ದರು. ಅಧಿನಾಯಕಿ ಸೋನಿಯಾ ಗಾಂಧಿ ಪಕ್ಷಕ್ಕೆ ಮರು ಚೇತನ ನೀಡಿದ್ದಾರೆ. ನನಗೆ ವಿಧಾನ ಪರಿಷತ್ ಸಭಾ ನಾಯಕಿಯಾಗಿ ಕೆಲಸ ಮಾಡುವ ಶಕ್ತಿಯಿದೆ. ನಾನು ಏನು ಗೊತ್ತಿಲ್ಲದೇ ರಾಜಕೀಯಕ್ಕೆ ಬಂದಿಲ್ಲ ಎಂದು ಟಾಂಗ್ ನೀಡಿದರು.

  • ಕಾಂಗ್ರೆಸ್ ಹೈಕಮಾಂಡ್ ಗೆ ಹೆಚ್.ಎಂ ರೇವಣ್ಣ ಎಚ್ಚರಿಕೆ

    ಕಾಂಗ್ರೆಸ್ ಹೈಕಮಾಂಡ್ ಗೆ ಹೆಚ್.ಎಂ ರೇವಣ್ಣ ಎಚ್ಚರಿಕೆ

    ಪಬ್ಲಿಕ್ ಟಿವಿ

    ಬೆಂಗಳೂರು: ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಎಚ್ ಎಂ ರೇವಣ್ಣ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಮಂಗಳವಾರ ರಾತ್ರಿ 11 ಗಂಟೆ ವರೆಗೆ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ ಮಧ್ಯರಾತ್ರಿ ವೇಳೆಗೆ ಬದಲಾಗಿದೆ. ನಾನು ಕುರುಬ ಸಮಾಜ ಹಾಗು ಪಕ್ಷ ಕಟ್ಟಲು ಪ್ರಾಮಾಣಿಕವಾಗಿ ದುಡಿದಿದ್ದಕ್ಕೆ ಪಕ್ಷ ನನಗೆ ನೀಡಿದ ಗೌರವ ಎಂದು ತಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೊರ ಹಾಕಿದ್ದಾರೆ.

    ಕುಮಾರಸ್ವಾಮಿ ಸಂಪುಟದಲ್ಲಿ ಕುರುಬ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣೆನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕುರುಬ ಸಮುದಾಯದ ಶಾಸಕರು ಸಿಡಿದೆದ್ದು ಆಕ್ರೋಶ ವ್ಯಕ್ತಡಿಸಿದ್ದಾರೆ. ಕುರುಬರಿಗೆ ಅನ್ಯಾಯ ಮಾಡಲಾಗಿದೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಗೆ ನೀಡಿದ್ದಾರೆ. ಅಲ್ಲದೇ ಮುಂದೇನು ಮಾಡಬೇಕೆಂಬ ಬಗ್ಗೆ ಚಿಂತನೆ ನಡೆಸಲು ಸದ್ಯದಲ್ಲೇ ಸಭೆ ನಡೆಸಲು ತಿರ್ಮಾನಿಸಿದ್ದಾರೆ.

    ಕುರುಬ ಹಾಗೂ ಮುಸ್ಲಿಂ ಸಮುದಾಯ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪರವಾಗಿ ಮತ ನೀಡಿದೆ. ಈ ಎರಡೂ ಸಮುದಾಯಗಳಿಗೆ ಸಚಿವ ಸ್ಥಾನ ದೊರಕದಿರುವುದು ಅತೃಪ್ತಿ ತಂದಿದೆ. ಈ ಎರಡು ಸಮಾಜಗಳನ್ನು ತುಳಿಯಲು ಕಾಣದ ಕೈಗಳು ಕೆಲಸ ಮಾಡಿವೆ. ಕುರುಬ ಹಾಗೂ ಮುಸ್ಲಿಂ ಸಮುದಾಯಗಳಿಗೆ ಈ ಬೆಳವಣಿಗೆ ಆಘಾತ ತಂದಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಪಕ್ಷದ ಗತಿಯೇನು ಎಂದು ರೇವಣ್ಣ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ಬಲು ಮಾತಾಡ್ತಿಯಾ, ಮುಚ್ಚೋ ಬಾಯಿ- ಮಂಡ್ಯದಲ್ಲಿ ಗರಂ ಆದ ಸಾರಿಗೆ ಸಚಿವ

    ಬಲು ಮಾತಾಡ್ತಿಯಾ, ಮುಚ್ಚೋ ಬಾಯಿ- ಮಂಡ್ಯದಲ್ಲಿ ಗರಂ ಆದ ಸಾರಿಗೆ ಸಚಿವ

    ಮಂಡ್ಯ: ತಡಿಲಾ ಗೌಡ, ಬಲು ಮಾತಾಡ್ತಿಯಾ ಕಣ್ಲ ನೀನು. ನಿನ್ನಂತವರು ನನ್ನತ್ರಾನೂ ಇದ್ದಾರೆ. ಸ್ವಲ್ಪ ಸುಮ್ನಿರ್ಲಾ. ಹೀಗಂತ ವ್ಯಕ್ತಿಯೊಬ್ಬರ ವಿರುದ್ಧ ಸಾರಿಗೆ ಸಚಿವ ಹೆಚ್‍ಎಂ ರೇವಣ್ಣ ಗರಂ ಆಗಿದ್ದಾರೆ.

    ಮಂಡ್ಯದ ಮದ್ದೂರಿನ ಕೊಪ್ಪ ಸಾರಿಗೆ ಬಸ್ಸ್ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಸಚಿವರು ಭಾಷಣ ಪ್ರಾರಂಭಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಗಲಾಟೆ ಮಾಡಲು ಶುರು ಮಾಡಿದ್ದ. ಕೋಪಗೊಂಡ ಸಚಿವರು ಮೊದಲೆರಡು ಬಾರಿ ಸಮಾಧಾನವಾಗಿಯೇ ತಡಿಲಾ ಗೌಡ, ಬಲು ಮಾತಾಡ್ತಿಯ ಕಣ್ಲಾ ನೀನು ಅಂತ ಹೇಳಿದ್ರು.

    ಆದ್ರೂ ಆತ ಸುಮ್ಮನಿರದಿದ್ದಾಗ ಗರಂ ಆದ ಸಚಿವರು, ಅಯ್ಯೋ ನಿನ್ನ ಅವಾಗ್ಲಿಂದ ನೀನ್ ಒಬ್ಬನೆ ಮಾತಾಡ್ತಿದ್ದೀಯಾ. ಮುಚ್ಚೋ ಬಾಯಿ, ಸಭೆಯನ್ನ ಹಾಳು ಮಾಡಬಾರದು ಅಂತ ಸ್ಟ್ರಾಂಗ್ ಆಗಿ ಗದರಿದ್ರು.

  • ಸಚಿವ ಅನಂತ್ ಕುಮಾರ್ ಹೆಗ್ಡೆಯನ್ನು ರೂಟ್ ನಂ.4ರ ಬಸ್ ಹತ್ತಿಸ್ಬೇಕು – ರೇವಣ್ಣ ಕಿಡಿ

    ಸಚಿವ ಅನಂತ್ ಕುಮಾರ್ ಹೆಗ್ಡೆಯನ್ನು ರೂಟ್ ನಂ.4ರ ಬಸ್ ಹತ್ತಿಸ್ಬೇಕು – ರೇವಣ್ಣ ಕಿಡಿ

    ಬೆಂಗಳೂರು: ಸಾಹಿತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಸಾರಿಗೆ ಸಚಿವ ಎಚ್ ಎಂ ರೇವಣ್ಣ ಕಿಡಿಕಾರಿದ್ದಾರೆ.

    ವಿವಿಧ ಬೇಡಿಕೆ ಈಡೇರಿಸಿ ನಾಳೆ ರಾಜ್ಯ ರಸ್ತೆ ಸಾರಿಗೆ ನೌಕಕರರ ಸಂಘ (ಸಿಐಟಿಯು) ದಿಂದ ಪ್ರತಿಭಟನೆ ಹಿನ್ನಲೆಯಲ್ಲಿ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಇತ್ತೀಚೆಗೆ ಮಾತಾಡೊದನ್ನ ನಿಲ್ಲಿಸಿದ್ರು ಈಗ ಮತ್ತೆ ಸಾಹಿತಿಗಳ ಬಗ್ಗೆ ಮಾತಾಡಿದ್ದಾರೆ. ಹೀಗಾಗಿ ಅವರನ್ನು ರೂಟ್ ನಂಬರ್ 4ರ ಬಸ್ ಹತ್ತಿಸಬೇಕು. ರೂಟ್ ನಂಬರ್ 4 ಅಂದ್ರೆ ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಅಂತ ಸಿಡಿಮಿಡಿಗೊಂಡಿದ್ದಾರೆ.

    ಮಂಗಳೂರು-ಪುತ್ತೂರು ವಿಭಾಗಕ್ಕೆ ನೇಮಕಾತಿ:
    ಪುತ್ತೂರು-ಮಂಗಳೂರು ವಿಭಾಗದಲ್ಲಿ ಚಾಲಕರು, ನಿರ್ವಾಹಕರ ಕೊರತೆ ಇದೆ. ಆ ಭಾಗದಲ್ಲಿ ಕೆಲಸ ಮಾಡುತ್ತಿರುವವರು ವರ್ಗಾವಣೆ ಕೇಳಿದ್ದಾರೆ. ಆದರೆ ಅಲ್ಲಿ ಕೆಲಸ ಮಾಡಲು ಸಿಬ್ಬಂದಿ ಇಲ್ಲ. ಅಲ್ಲಿನವರು ಪ್ರಪಂಚದಾದ್ಯಂತ ಕೆಲಸ ಮಾಡ್ತಾರೆ. ಆದ್ರೆ ಚಾಲಕ, ನಿರ್ವಾಹಕ ವೃತ್ತಿಗೆ ಬರುವವರು ಕಡಿಮೆ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ. ಈ ಎಲ್ಲಾ ಕಾರಣದಿಂದ ಮಂಗಳೂರು-ಪುತ್ತೂರು ವಿಭಾಗಕ್ಕೆ ತಕ್ಷಣವೇ ನೇಮಕಾತಿಗೆ ಚಾಲನೆ ಕೊಟ್ಟಿದ್ದೇವೆ. ಇನ್ನು ರಾಜ್ಯ ರಸ್ತೆ ಸಾರಿಗೆ ನಿಗಮದ 4 ನಿಗಮಗಳು ಲಾಸ್ ನಲ್ಲಿ ನಡೀತಿದೆ. ಈಶಾನ್ಯ ಸಾರಿಗೆ ಹೆಚ್ಚು ಲಾಸ್ ನಲ್ಲಿ ನಡೀತಿದೆ ಅಂತ ತಿಳಿಸಿದ್ರು.

    ಪ್ರತಿಭಟನೆ ವಾಪಸ್:
    ಪ್ರತಿಭಟನೆ ಕುರಿತು ಮಾತನಾಡಿದ ಅವರು, ಈಗಾಗಲೇ ಸಂಘಟನೆಯವರ ಜೊತೆ ಮಾತುಕತೆ ನಡೆಸಲಾಗಿದೆ. 1.30 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನ ಹೊಂದಿರುವ ಇಲಾಖೆ ಇದು. ಈಗಾಗಲೇ ಸಂಘಟನೆಯ ಬಹುತೇಕ ಬೇಡಿಕೆ ಈಡೇರಿಸಲಾಗಿದೆ. 6 ಬೇಡಿಕೆಗಳ ಬಗ್ಗೆ ಸಂಘಟನೆಯವರು ಇಲಾಖೆ ಮುಂದೆ ಇಟ್ಟಿದ್ರು. ಇದ್ರಲ್ಲಿ ಬಹುತೇಕ ಬೇಡಿಕೆ ಈಡೇರಿಸಿದ್ದೇವೆ. ಕೆಲವು ಬೇಡಿಕೆ ಈಡೇರಿಕೆಗೆ ಸಮಯ ಕೇಳಿದ್ದೇವೆ. ಈಗಾಗಲೇ ಸರ್ಕಾರ 4 ರಸ್ತೆ ಸಾರಿಗೆ ನಿಗಮದ ನೌಕರರಿಗೆ 12.5% ವೇತನ ಹೆಚ್ಚಳ ಮಾಡಲಾಗಿದೆ. ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ಹೀಗಾಗಿ ಸಂಘಟನೆಯವರು ಪ್ರತಿಭಟನೆ ಮಾಡೋದು ಬೇಡ ಅಂತ ಮನವಿ ಮಾಡಿದ್ದೇವೆ. ಹೀಗಾಗಿ ಪ್ರತಿಭಟನೆಯನ್ನ ಸಂಘಟನೆಯವರು ವಾಪಸ್ ಪಡೆದಿದ್ದಾರೆ ಎಂದು ಅವರು ಹೇಳಿದ್ರು.

    ಚುನಾವಣೆಯಲ್ಲಿ ಸ್ಫರ್ಧೆ:
    ಇದೇ ವೇಳೆ ಮಹಾಲಕ್ಷ್ಮಿ ಲೇಔಟ್ ನಿಂದ ಚುನಾವಣೆಗೆ ಸ್ಪರ್ಧೆ ವಿಚಾರದ ಕುರಿತು ಮಾತನಾಡಿ, ನನ್ನ ಮನೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇದೆ. ದಿನ ಹೋಗಿ ಬರ್ತಿನಿ. ಹೆಬ್ಬಾಳ, ಮಾಗಡಿ ಕ್ಷೇತ್ರ ಈಗಾಗಲೇ ಬಿಟ್ಟಿದ್ದೇನೆ. ಹೈಕಮಾಂಡ್ ನಿರ್ಧಾರ ಮಾಡಿದ್ರೆ ಸ್ಪರ್ಧೆ ಮಾಡ್ತೀನಿ. ನನಗೆ ಇನ್ನು ಎರಡೂವರೆ ವರ್ಷ ಎಂಎಲ್‍ಸಿ ಅವಧಿ ಇದೆ. ನಾನೇನು ತಲೆಕೆಡಿಸಿಕೊಂಡಿಲ್ಲ. ಹೈಕಮಾಂಡ್ ಹೇಳಿದ್ರೆ ಎಲ್ಲಿಂದ ಬೇಕಾದ್ರು ಸ್ಪರ್ಧೆ ಮಾಡ್ತೀನಿ ಅಂತ ಸ್ಪಷ್ಟಪಡಿಸಿದ್ರು.

    ಅನಂತ್ ಕುಮಾರ್ ಹೆಗ್ಡೆ ಏನ್ ಹೇಳಿದ್ದರು?:
    ಸೋ ಕಾಲ್ಡ್ ಬುದ್ಧಿ ಜೀವಿಗಳು ಬರಿದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯ, ಅರ್ಥವೂ ಇರೋದಿಲ್ಲಾ, ತಲೆ, ಬುಡವೂ ಇರೋದಿಲ್ಲ. ಅವರಿಗೆ ಯಾವುದು ಇಂದು ಸರ್ಕಾರಿ ಸೈಟ್ ಬೇಕಾಗಿರುತ್ತೆ, ಅದಕ್ಕೆ ವಿಚಾರವಾದಿಗಳ ಪಟ್ಟ ಕಟ್ಟಿಕೊಂಡಿರುತ್ತಾರೆ. ನಾವು ಮಾನವರಾಗಬೇಕು ಎಂದು ಸ್ಪಷ್ಟನೆ ಇಲ್ಲದವರು ಏನಾಗಬೇಕು ಎಂದು ಕೇಳಿದಾಗ ಮಾನವರಾಗಬೇಕು ಅಂತಾರೆ. ಹಾಗಾದ್ರೆ ನಾವು ದನಾನಾ ಎಂದು ಪ್ರಶ್ನಿಸಿದ ಅವರು, ನಾವು ಪ್ರಾಣಿಗಳ ತರಾ ಇದ್ದಿವಾ? ನಾವು ಹುಟ್ಟಿದ್ದೆ ಮಾನವರಾಗಿ. ಇನ್ನು ಆಗಬೇಕಾಗಿರುವುದು ದೇವರಾಗಿ. ಮನುಷ್ಯ ದೇವರಾಗಲು ಪ್ರಯತ್ನ ಮಾಡಬೇಕು. ಆದ್ರೆ ಕಲಿತಿರುವ ಸೋ ಕಾಲ್ಡ್ ಬುದ್ಧಿ ಜೀವಿಗಳು ಹೇಳ್ತಾರೆ ನಾವು ಮಾನವರಾಗಬೇಕು. ಅವರ ದೃಷ್ಟಿಯಲ್ಲಿ ನಾವು ಹೆಂಗೆ ಕಂಡಿದ್ದೇವೆ ಗೊತ್ತಿಲ್ಲ. ಅವರಿಗೆ ದೃಷ್ಟಿ ದೋಷ ಆಗಿರಬೇಕು ಅಂತ ಹೇಳಿದ್ದರು.

    https://www.youtube.com/watch?v=4JKXmwu0JR0

  • ಸಿಎಂ ಸಿದ್ದರಾಮಯ್ಯರನ್ನ ಕಾಂಗ್ರೆಸ್‍ಗೆ ಕರೆ ತಂದಿದ್ದು ನಾನಲ್ಲ: ಎಚ್.ಎಂ ರೇವಣ್ಣ

    ಸಿಎಂ ಸಿದ್ದರಾಮಯ್ಯರನ್ನ ಕಾಂಗ್ರೆಸ್‍ಗೆ ಕರೆ ತಂದಿದ್ದು ನಾನಲ್ಲ: ಎಚ್.ಎಂ ರೇವಣ್ಣ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್‍ಗೆ ಕರೆ ತಂದಿದ್ದು ನಾನಲ್ಲ ಎಂದು ಸಾರಿಗೆ ಸಚಿವ ಎಚ್.ಎಂ ರೇವಣ್ಣ ಹೇಳಿದ್ದಾರೆ.

    ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ನವರು ಕಾಂಗ್ರೆಸ್ ಪಕ್ಷಕ್ಕೆ ಬರುವ ಅಭಿಲಾಷೆ ಅವರಿಗೆ ಇತ್ತು. ಅನೇಕ ಮುಖಂಡರು ಕರೆತರುವಲ್ಲಿ ಇದ್ದರು ಅದರಲ್ಲಿ ನಾನು ಒಬ್ಬ ಅಷ್ಟೇ. ನಾನು ಕುರುಬ ಜನಾಂಗಕ್ಕೆ ಸೀಮಿತನಾಗಿಲ್ಲ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಹೇಳಿದರು.

    ಫೋನ್ ಕದ್ದಾಲಿಕೆ ವಿಚಾರದಲ್ಲಿ ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುವ ವಿಚಾರವಲ್ಲ. ಕೇಂದ್ರ ಸರ್ಕಾರಕ್ಕೆ ಯಾರ ಬಗ್ಗೆ ಮಾಹಿತಿ ಬೇಕಾಗುತ್ತದೆ ಅವರ ವಿಚಾರಣೆ ಇರಬಹುದು. ಇದು ಗೃಹ ಇಲಾಖೆಗೆ ಸಂಬಂಧಿಸಿದ ವಿಚಾರ ನನಗೂ ಅದಕ್ಕೆ ಸಂಬಂಧಿಸಿದ ವಿಚಾರ ಅಲ್ಲ ಎಂದರು.