Tag: ಎಚ್ ಆರ್ ಶ್ರೀ ನಾಥ್

  • ಶಾಸಕ ಇಕ್ಬಾಲ್ ಅನ್ಸಾರಿಗೆ ದಾವೂದ್ ಇಬ್ರಾಹಿಂ ಜೊತೆ ನಂಟಿದೆ- ಮಾಜಿ ಎಂಎಲ್‍ಸಿ ಎಚ್.ಆರ್ ಶ್ರೀನಾಥ್

    ಶಾಸಕ ಇಕ್ಬಾಲ್ ಅನ್ಸಾರಿಗೆ ದಾವೂದ್ ಇಬ್ರಾಹಿಂ ಜೊತೆ ನಂಟಿದೆ- ಮಾಜಿ ಎಂಎಲ್‍ಸಿ ಎಚ್.ಆರ್ ಶ್ರೀನಾಥ್

    ಗಂಗಾವತಿ: ಶಾಸಕ ಇಕ್ಬಾಲ್ ಅನ್ಸಾರಿಗೆ ದಾವೂದ್ ಇಬ್ರಾಹಿಂ ಜೊತೆಗೆ ನಂಟಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ್ ಗಂಭೀರ ಆರೋಪ ಮಾಡಿದ್ದಾರೆ.

    ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಅವರು ಶಾಸಕ ಇಕ್ಬಾಲ್ ಅನ್ಸಾರಿ ದುಬೈನಲ್ಲಿನ ದಾವೂದ್ ಇಬ್ರಾಹಿಂ ಜೊತೆಗೆ ನೇರ ಸಂಪರ್ಕ ಹೊಂದಿದ್ದಾರೆ. ಅಲ್ಲದೇ ಅವರು ನೇರವಾಗಿ ದುಬೈನಲ್ಲಿ ಬಂಡವಾಳ ಹೂಡುತ್ತಾರೆ. ಅಲ್ಲಿನ ಅನೇಕ ಸಂಸ್ಥೆಗಳೊಂದಿಗೆ ಅವರಿಗೆ ನಂಟಿದೆ. ಅನ್ಸಾರಿ ಒಬ್ಬ ದೇಶದ್ರೋಹಿ ಎಂದು ಶ್ರೀನಾಥ್ ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೂ ಪತ್ರ ಬರೆಯುತ್ತೇನೆ. 1992 ರಿಂದ ಶಾಸಕ ಇಕ್ಬಾಲ್ ಅನ್ಸಾರಿ ಫೋನ್ ಕಾಲ್ ಪರಿಶೀಲನೆ ನಡೆಸಿ ತನಿಖೆ ನಡೆಸಬೇಕು. ಆಗ ಸತ್ಯ ಹೊರಬರಲಿದೆ. ಕೂಡಲೇ ಅವರನ್ನು ಬಂಧನ ಮಾಡಬೇಕೆಂದು ಎಂದು ಎಚ್.ಆರ್ ಶ್ರೀನಾಥ್ ಒತ್ತಾಯಿಸಿದ್ದಾರೆ.

    ಇಂದು ಬೆಳ್ಳಗೆಯಾಷ್ಟೇ ಕೊಪ್ಪಳದ ಗಂಗಾವತಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಶಾಸಕ ಇಕ್ಬಾಲ್ ಅನ್ಸಾರಿ, ರಾಜಕೀಯದಲ್ಲಿ ಶ್ರೀನಾಥ್ ಬಚ್ಚಾ. ನಿನಗೆ ಧಮ್ ಇದ್ರೆ ಬಾರಲೇ ಶ್ರೀನಾಥ್. ಕಾಂಗ್ರೆಸ್ ಪಕ್ಷದಲ್ಲಿ ಎಚ್.ಆರ್ ಶ್ರೀನಾಥ್ ಮತ್ತು ಎಚ್. ಜಿ.ರಾಮುಲು ನಾಲಾಯಕ್‍ಗಳು. ಲೇ ಬೇಕೂಫ್ ನೀನು ತೋಳೆರಿಸಿದ್ರೆ ನಾನೂ ತೋಳೆರೆಸ್ತೀನಿ. ನೀನು ಲಕ್ಷ ಪ್ರೆಸ್ ಮೀಟ್ ಮಾಡಿ, ನನ್ನ ವಿರುದ್ಧ ಮಾತನಾಡಿದ್ರೆ, ನಾನು ಲಕ್ಷದ ಮೇಲೆ ಒಂದು ಪ್ರೆಸ್ ಮೀಟ್ ಮಾಡಿ ನಿನ್ನ ಬಂಡವಾಳ ಬಯಲು ಮಾಡ್ತೀನಿ. ಧಮ್ ಇದ್ರೆ ನನ್ನ ಮನೆ ಮುಂದೆ ಬಂದು ಪ್ರೆಸ್ ಮೀಟ್ ಮಾಡು ಎಂದು ಶ್ರೀನಾಥ್‍ಗೆ ಪಂಥಾಹ್ವಾನ ನೀಡಿದ್ದರು.

    ಶಾಸಕ ಇಕ್ಬಾಲ್ ಅನ್ಸಾರಿ ಅವರ ಆರೋಪಗಳ ಬೆನ್ನಲ್ಲೇ ಶ್ರೀನಾಥ್ ಅವರು ಇಕ್ಬಾಲ್ ಅನ್ಸಾರಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.

    ಇದನ್ನೂ ಓದಿ: ಧಮ್ ಇದ್ರೆ ಬಾರಲೇ ಶ್ರೀನಾಥ್- ಪರಿಷತ್ ಮಾಜಿ ಸದಸ್ಯರ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

     

  • ಧಮ್ ಇದ್ರೆ ಬಾರಲೇ ಶ್ರೀನಾಥ್- ಪರಿಷತ್ ಮಾಜಿ ಸದಸ್ಯರ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

    ಧಮ್ ಇದ್ರೆ ಬಾರಲೇ ಶ್ರೀನಾಥ್- ಪರಿಷತ್ ಮಾಜಿ ಸದಸ್ಯರ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

    ಕೊಪ್ಪಳ: ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಆರ್ ಶ್ರೀನಾಥ್ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ಅವಾಚ್ಯ ಶಬ್ದದಿಂದ ವಾಗ್ದಾಳಿ ನಡೆಸಿದ್ದಾರೆ. ಧಮ್ ಇದ್ರೆ ಬಾರಲೇ ಶ್ರೀನಾಥ್ ಅಂತ ಬಹಿರಂಗವಾಗಿ ಅವಾಜ್ ಹಾಕಿದ್ದಾರೆ.

    ಕೊಪ್ಪಳದ ಗಂಗಾವತಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಶಾಸಕ ಇಕ್ಬಾಲ್ ಅನ್ಸಾರಿ, ರಾಜಕೀಯದಲ್ಲಿ ಶ್ರೀನಾಥ್ ಬಚ್ಚಾ ಅಂತ ಪುನರುಚ್ಛರಿಸಿದ್ದಾರೆ. ನಿನಗೆ ಧಮ್ ಇದ್ರೆ ಬಾರಲೇ ಶ್ರೀನಾಥ್. ಕಾಂಗ್ರೆಸ್ ಪಕ್ಷದಲ್ಲಿ ಎಚ್.ಆರ್ ಶ್ರೀನಾಥ್ ಮತ್ತು ಎಚ್. ಜಿ.ರಾಮುಲು ನಾಲಾಯಕ್‍ಗಳು. ಲೇ ಬೇಕೂಫ್ ನೀನು ತೋಳೆರಿಸಿದ್ರೆ ನಾನೂ ತೋಳೆರೆಸ್ತೀನಿ. ನೀನು ಲಕ್ಷ ಪ್ರೆಸ್ ಮೀಟ್ ಮಾಡಿ, ನನ್ನ ವಿರುದ್ಧ ಮಾತನಾಡಿದ್ರೆ, ನಾನು ಲಕ್ಷದ ಮೇಲೆ ಒಂದು ಪ್ರೆಸ್ ಮೀಟ್ ಮಾಡಿ ನಿನ್ನ ಬಂಡವಾಳ ಬಯಲು ಮಾಡ್ತೀನಿ. ಧಮ್ ಇದ್ರೆ ನನ್ನ ಮನೆ ಮುಂದೆ ಬಂದು ಪ್ರೆಸ್ ಮೀಟ್ ಮಾಡು ಎಂದು ಶ್ರೀನಾಥ್‍ಗೆ ಪಂಥಾಹ್ವಾನ ನೀಡಿದ್ದಾರೆ.

    ಅಷ್ಟೇ ಅಲ್ಲ ನೀನು ಎಲ್ಲಿಗೆ ಹೇಳುತ್ತಿಯೋ ಅಲ್ಲಿಗೆ ಬರ್ತಿನಿ ಅಂತಾ ಎಚ್. ಆರ್. ಶ್ರೀನಾಥ್ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿದ್ರು. ಸುಮಾರು 1 ಗಂಟೆ ಸುದ್ದಿಗೋಷ್ಠಿ ನಡೆಸಿದ ಶಾಸಕ ಅನ್ಸಾರಿ, ಸುದ್ದಿಗೋಷ್ಠಿಯುದ್ದಕ್ಕೂ ಲೇ ಮಗನೇ ಶ್ರೀನಾಥ ಎಂದೇ ಸಂಬೋಧಿಸಿ ವಾಗ್ದಾಳಿ ನಡೆಸಿದರು.