Tag: ಎಚ್ ಆರ್ ರಂಗನಾಥ್

  • ಮೆಟ್ರೋ ಕಾಸ್ಟ್ ಇಂಡಿಯಾದ ನೂತನ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

    ಮೆಟ್ರೋ ಕಾಸ್ಟ್ ಇಂಡಿಯಾದ ನೂತನ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

    ಬೆಂಗಳೂರು: ಅತಿ ದೊಡ್ಡ ಕೇಬಲ್ ನೆಟ್ವರ್ಕ್ ಸಂಸ್ಥೆಯಾಗಿರುವ ಮೆಟ್ರೋ ಕಾಸ್ಟ್ ಇಂಡಿಯಾದ ನೂತನ ಕಚೇರಿ ಬೆಂಗಳೂರಿನ ಮಾಧವನಗರದಲ್ಲಿಂದು ಉದ್ಘಾಟನೆಗೊಂಡಿತು. ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಸಂಸ್ಥೆಯ ನೂತನ ಕಚೇರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

    ಮೆಟ್ರೋ ಕಾಸ್ಟ್ ಇಂಡಿಯಾ ಸಂಸ್ಥೆಯ ನೂತನ ಕಚೇರಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾಗಿರುವ ಎಚ್.ಆರ್ ರಂಗನಾಥ್ ಮತ್ತು ಸಿಇಒ ಅರುಣ್ ಅವರು ಭೇಟಿ ನೀಡಿ ಸಂಸ್ಥೆಯ ಮಾಲೀಕರಾದ ನಾಗೇಶ್ ಛಾಬ್ರಿಯಾ ಮತ್ತು ನಿಶಾ ಛಾಬ್ರಿಯಾರಿಗೆ ಶುಭ ಕೋರಿದರು. ಇದನ್ನೂ ಓದಿ: UAE T20 ಲೀಗ್‍ನ ಕ್ರಿಕೆಟ್ ತಂಡ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

    ಮೆಟ್ರೋ ಕಾಸ್ಟ್ ಮೂರು ದಶಕಗಳಿಗಿಂತ ಹೆಚ್ಚು ಕೇಬಲ್ ಸೇವೆ ಒದಗಿಸುತ್ತಿರುವ ಸಂಸ್ಥೆಯಾಗಿದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಕೇಬಲ್ ಸೇವೆ ಒದಗಿಸುತ್ತಿದೆ. ಇನ್ಮುಂದೆ ಬೆಂಗಳೂರಿನಿಂದಲೇ ಎಲ್ಲಾ ಕಡೆಗೂ ಸೇವೆ ಒದಗಿಸಲು ಮೆಟ್ರೋ ಕಾಸ್ಟ್ ಮುಂದಾಗಿದೆ. ಬೆಂಗಳೂರಿನಲ್ಲೇ ಸರ್ವರ್ ರೂಂ ಸ್ಥಾಪಿಸಿ ಸೇವೆ ನೀಡಲು ಸಂಸ್ಥೆ ಮುಂದಾಗಿದ್ದು, ಈಗಾಗಲೇ 5 ಲಕ್ಷ ಗ್ರಾಹಕರನ್ನು ಹೊಂದಿದೆ. ಇನ್ಮುಂದೆ ಕರ್ನಾಟಕದಲ್ಲಿ 1000 ಚಾನೆಲ್ ಗಳನ್ನು ನೀಡುವ ಯೋಜನೆಯನ್ನೂ ರೂಪಿಸಿದ್ದು, 1000 ಚಾನೆಲ್ ಗಳ ಜೊತೆಗೆ ಉತ್ಕೃಷ್ಟ ಗುಣಮಟ್ಟದ ಸೇವೆ ನೀಡುವ ಗುರಿ ಇಟ್ಟುಕೊಂಡಿದೆ. ಇದನ್ನೂ ಓದಿ: ಇತಿಹಾಸದಲ್ಲಿಯೇ ಮೊದಲಬಾರಿಗೆ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

    OTT ಸರ್ವೀಸ್, IPTV ಸರ್ವೀಸ್, ಬ್ರಾಂಡ್ ಬ್ಯಾಂಡ್ ಸೇವೆಗಳನ್ನು ಬೆಂಗಳೂರು ಕಚೇರಿಯಿಂದಲೇ ನೀಡಲು ಸಂಸ್ಥೆ ತೀರ್ಮಾನ ಮಾಡಿದೆ. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೆಟ್ರೋ ಕಾಸ್ಟ್ ನೆಟ್ ವರ್ಕ್ ಇಂಡಿಯಾ ಪ್ರೈ. ಲಿಮಿಟೆಡ್‍ನ ಸಂಸ್ಥಾಪಕರಾದ ನಾಗೇಶ್ ಛಾಬ್ರಿಯಾ, ನಿಶಾ ಛಾಬ್ರಿಯಾ ಇನ್ನಿತರ ಗಣ್ಯರು ಭಾಗವಹಿಸಿದ್ದರು.  ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ನಾವು ರಾಜೀಯಾಗುವುದಿಲ್ಲ: ಅಮೀರ್‌ಗೆ ರಾಕಿಬಾಯಿ ಯಶ್ ಉತ್ತರ

  • ಹೊಸ ಶಿಕ್ಷಣ ನೀತಿಯಲ್ಲಿ ಕಾಂಬಿನೇಶನ್‍ನಿಂದ ಕೋರ್ಸ್, ಸಬ್ಜೆಕ್ಟ್‌ಗೆ ಬದಲಾಯಿಸಲಾಗಿದೆ: ಅಶ್ವಥ್ ನಾರಾಯಣ್

    ಹೊಸ ಶಿಕ್ಷಣ ನೀತಿಯಲ್ಲಿ ಕಾಂಬಿನೇಶನ್‍ನಿಂದ ಕೋರ್ಸ್, ಸಬ್ಜೆಕ್ಟ್‌ಗೆ ಬದಲಾಯಿಸಲಾಗಿದೆ: ಅಶ್ವಥ್ ನಾರಾಯಣ್

    – ಪಬ್ಲಿಕ್ ಟಿವಿ ವಿದ್ಯಾಪೀಠದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಾಹಿತಿ

    ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಾಧುನಿಕವಾಗಿದ್ದು, ಈಗಿನ ವ್ಯವಸ್ಥೆಗೆ ತಕ್ಕಂತೆ ರೂಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

    ಪ್ಯಾಲೆಸ್ ಗ್ರೌಂಡ್ಸ್ ನ ಗಾಯತ್ರಿ ವಿಹಾರದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಪಬ್ಲಿಕ್ ಟಿವಿಯ ವಿದ್ಯಾಪೀಠ ಮೇಳಕ್ಕೆ ಇಂದು ಚಾಲನೆ ದೊರೆತಿದೆ. ಕಾರ್ಯಕ್ರಮದಲ್ಲಿ ಭಾವಹಿಸಿ, ಹೊಸ ಶಿಕ್ಷಣ ನೀತಿ ಕುರಿತು ಅಶ್ವಥ್ ನಾರಾಯಣ್ ಅವರು ವಿವರಿಸಿದರು. ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಕೋರ್ಸ್‍ಗೆ ಕಾಂಬಿನೇಶನ್ ಇದೆ. ಆದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೋರ್ಸ್ ಆ್ಯಂಡ್ ಕಾಂಬಿನೇಶನ್‍ನಿಂದ ಕೋರ್ಸ್ ಆ್ಯಂಡ್ ಸಬ್ಜೆಕ್ಟ್ ಗೆ ಬದಲಾಯಿಸಿದ್ದೇವೆ. ಕೋರ್ಸ್‍ಗಳಲ್ಲಿ ಮೊದಲು ಕಾಂಬಿನೇಶನ್ ಆಫರ್ ಮಾಡುತ್ತಿದ್ದರು. ಆದರೆ ಇದೀಗ ಹೊಸ ಶಿಕ್ಷಣ ನೀತಿಯಲ್ಲಿ ಕೋರ್ಸ್‍ಗಳಲ್ಲಿನ ವಿಷಯಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

    ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡಲು ಏನು ಬೇಕೆಂಬುದು ತಿಳಿದಿದೆ. ಆದರೂ ನಾವು ಕೇವಲ ಅಕಾಡೆಮಿಕ್ ದೃಷ್ಟಿಕೋನದಲ್ಲಿ ಮಾತ್ರ ನೋಡುತ್ತಿದ್ದೆವು. ಇದರಲ್ಲೂ ಸಾಕಷ್ಟು ಮಿತಿಗಳಿದ್ದವು. ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಳ್ಳುವ ಬದಲು ಸಂಸ್ಥೆಯನ್ನು ಕೇಂದ್ರವಾಗಿರಿಸಿಕೊಂಡಿದ್ದೆವು. ಹೀಗೆ ಹಳೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದೆವು. ಆದರೆ ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಅಮೂಲಾಗ್ರ ಬದಲಾವಣೆ ತರುತ್ತಿದ್ದೇವೆ ಎಂದರು.

    ಕಲಾ ವಿಭಾಗದವರು, ವಿಜ್ಞಾನ ಓದುವ ಹಾಗಿಲ್ಲ, ವಿಜ್ಞಾನ ವಿಭಾಗದವರು ಕಲಾ ವಿಭಾಗಕ್ಕೆ ಹೋಗಂಗಿಲ್ಲ ಎಂಬ ಬೇಧವನ್ನು ತೊಡೆದಿದ್ದೇವೆ. ಈಗ ಯಾರು ಯಾವ ವಿಷಯ ಬೇಕಿದ್ದರೂ ಓದಬಹುದು. ಅಲ್ಲದೆ ಈ ಹಿಂದೆ ಎನ್‍ಸಿಸಿ, ಎನ್‍ಎಸ್‍ಎಸ್, ಸೇರಿದಂತೆ ಇತರೆ ಚಟುವಟಿಕೆಗಳು ಬೇರೆಯಾಗಿದ್ದವು. ಆದರೆ ಇದೀಗ ಇವೆಲ್ಲವನ್ನೂ ಒಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಮಾಡಿದ್ದೇವೆ. ವಿದ್ಯಾರ್ಥಿ ವಿಷಯಗಳನ್ನು ಬ್ರಾಡ್ ಆಗಿ, ಡೀಪ್ ಆಗಿ ಯಾವುದೇ ರೀತಿಯಲ್ಲಿ ಕಲಿಯಲು ಅವಕಾಶ ನೀಡಲಾಗಿದೆ. ಒಂದು, ಎರಡು ವಿಷಯಗಳನ್ನು ಮೇಜರ್ ಸಬ್ಜೆಕ್ಟ್ ಆಗಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಒಂದೇ ವಿಷಯವನ್ನು ಡೀಪ್ ಆಗಿ ಅಧ್ಯಯನ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಚಾಲನೆ

    ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ಅಂದರೆ ಯಾವುದೇ ವಿದ್ಯಾರ್ಥಿ ಪದವಿಗೆ ಸೇರಿ ಕಾರಾಣಾಂತರಗಳಿಂದ ಒಂದೇ ವರ್ಷ ಪದವಿ ಓದಿ ಡ್ರಾಪ್ ಔಟ್ ಆಗುತ್ತಾರೆ. ಹೀಗೆ ಹೊರಗೆ ಹೋದಾಗ ಆ ವಿದ್ಯಾರ್ಥಿಗೆ ಏನೂ ಸಿಗಲ್ಲ. ಆದರೆ ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿ ಕಲಿತಿದ್ದಕ್ಕೆ ಮಾನ್ಯತೆ ಸಿಗುತ್ತದೆ. ಒಂದು ವರ್ಷ ಕಲಿತಿದ್ದಕ್ಕೂ ಸರ್ಟಿಫಿಕೇಟ್ ಸಿಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಚಾಲನೆ – ಇಂದಿನ ಕಾರ್ಯಕ್ರಮಗಳು ಏನು?

    ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಮಾತನಾಡಿ, ಕೊರೊನಾ ಕಾರಣದಿಂದ ಶಿಕ್ಷಣ ವಲಯ ನಲುಗಿದೆ. ನಾವು ಮರಳಿ ಪುಟಿದೇಳಬೇಕಿದೆ. ಎಷ್ಟೋ ಶಿಕ್ಷಣ ಸಂಸ್ಥೆಗಳು ಸಿಬ್ಬಂದಿಗೆ ಸಂಬಳ ಕೊಡಲು ಆಸ್ತಿಗಳನ್ನು ಮಾರಿವೆ. ಮಕ್ಕಳು ಸಹ ತುಂಬಾ ಕಷ್ಟದಲ್ಲಿ ಸಿಲುಕಿದ್ದಾರೆ. ಒಂದು ಕಡೆ ಹಣದ ಸಮಸ್ಯೆಯಾದರೆ, ಇನ್ನೊಂದೆಡೆ ಏನು ಮಾಡಬೇಕೆಂಬ ಸ್ಪಷ್ಟತೆಯೇ ಸಿಗುತ್ತಿಲ್ಲ. ಎರಡೂ ಕಡೆ ಸವಾಲುಗಳಿವೆ. ಈ ಕೊರೊನಾ ಪರಿಸ್ಥಿತಿಯನ್ನು ನಾವು ಎದುರಿಸಲೇಬೇಕಿದೆ. ಹೀಗಾಗಿಯೇ ಇಂತಹ ಕಷ್ಟದ ಸಂದರ್ಭದಲ್ಲಿಯೂ ವಿದ್ಯಾಪೀಠ 4ನೇ ಆವೃತ್ತಿಯನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.

  • ಮಕ್ಕಳು ಟ್ಯಾಬ್‍ಗಳನ್ನು ಉಪಯುಕ್ತವಾಗುವಂತೆ ಬಳಸಿ: ವೀರೇಂದ್ರ ಹೆಗ್ಗಡೆ

    ಮಕ್ಕಳು ಟ್ಯಾಬ್‍ಗಳನ್ನು ಉಪಯುಕ್ತವಾಗುವಂತೆ ಬಳಸಿ: ವೀರೇಂದ್ರ ಹೆಗ್ಗಡೆ

    ಬೆಂಗಳೂರು: ಮಕ್ಕಳು ವಿದ್ಯೆಗೆ ಸಹಕಾರಿಯಾಗುವಂತೆ ಟ್ಯಾಬ್ ಬಳಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಿಳಿಸಿದರು.

    ‘ಜ್ಞಾನ ದೀವಿಗೆ’ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳು ಇಂದು ಯಾವುದೇ ಕಾರಣದಿಂದ ಹಿಂದೆ ಬಿದ್ದಿಲ್ಲ. ಬೆಳ್ತಂಗಡಿ ತಾಲೂಕು ಹಾಗೂ ಇತರ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ಎಂಬ ಬೇಧ ತೊರೆದು ಎಲ್ಲರೂ ಒಂದೇ ಭಾವದಲ್ಲಿರಬೇಕು ಎಂದರು.

    ಗ್ರಾಮೀಣ ಪ್ರದೇಶದ ಜನತೆಗೆ ಫೋನ್, ಲ್ಯಾಪ್‍ಟಾಪ್, ಟ್ಯಾಬ್ ಬಳಕೆ ತಿಳಿದಿಲ್ಲ. ಹೀಗಾಗಿ ನಿರ್ಲಕ್ಷಿಸುತ್ತಿದ್ದಾರೆ. ಅಲ್ಲದೆ ವಿದ್ಯೆಗೆ ಖರ್ಚು ಮಾಡುವ ಬದಲು ಇನ್ಯಾವುದಕ್ಕೋ ಖರ್ಚು ಮಾಡುತ್ತೇವೆ. ವಿದ್ಯೆಗೆ ಸಂಬಂಧಿಸಿದ ವಸ್ತುಗಳಿಗೆ ಖರ್ಚು ಮಾಡಲು ಹಣವಿಲ್ಲ ಎನ್ನುತ್ತೇವೆ. ಆದರೆ ಇದೀಗ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆಯ ಈ ಕೆಲಸದಿಂದ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ

    ಯಾರು ಕೂಡ ಟ್ಯಾಬ್ ದುರುಪಯೋಗಪಡಿಸಿಕೊಳ್ಳದೆ, ಇದರ ಗಂಭೀರತೆಯನ್ನು ಅರಿತು ಮಕ್ಕಳ ಉಪಯೋಗಕ್ಕೆ ಮಾತ್ರ ಮೀಸಲಿಡಬೇಕು. ಇತರೆ ಮನರಂಜನೆಯನ್ನು ಬಿಟ್ಟು, ಟ್ಯಾಬ್ ನ್ನು ಸರಿಯಾಗಿ ಬಳಸಬೇಕು. ಲ್ಯಾಪ್‍ಟಾಪ್ ಹಾಗೂ ಟ್ಯಾಬ್‍ಗಳ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ನಾವೂ ಸಹ ಸುಮಾರು 20 ಸಾವಿರ ಟ್ಯಾಬ್ ಹಾಗೂ 10 ಸಾವಿರ ಟ್ಯಾಪ್‍ಟಾಪ್ ಖರೀದಿಸಿದ್ದೇವೆ. ಸೋಮವಾರ ಮುಖ್ಯಮಂತ್ರಿಗಳು ರಾಜ್ಯದ ವಿವಿಧೆಡೆ ವಿತರಿಸಲಿದ್ದಾರೆ ಎಂದರು. ಇದನ್ನೂ ಓದಿ: ವಿವಿಧ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ

    ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಹೆಚ್ಚು ಮಾಹಿತಿ ಇದೆ. ಮೊಬೈಲ್‍ನಲ್ಲೇ ಎಲ್ಲ ಮಾಹಿತಿ ಸಿಗುತ್ತದೆ. ಹೀಗಾಗಿ ಮಕ್ಕಳಿಗೆ ಮೊಬೈಲ್ ಬಳಕೆ ಕುರಿತು ಅರಿವು ಮೂಡಿಸಬೇಕು. ಬದುಕಿಗೆ ಉಪಯುಕ್ತವಾದ ವಸ್ತು ಎಂದು ತಿಳಿದು ಇದನ್ನು ಬಳಸಬೇಕು.

    ಸಚಿವರು ಸಹ ತುಂಬಾ ಪ್ರಾಕ್ಟಿಕಲ್ ಆಗಿ ಕಳೆದ ಆರು ತಿಂಗಳಿಂದ ವ್ಯವಸ್ಥೆ ಮಾಡಿದ್ದಾರೆ. ಒಳ್ಳೆಯ ರೀತಿಯಲ್ಲಿ ಎಲ್ಲ ಕೆಲಸಗಳು ನಡೆಯಲಿ. ತುಂಬಾ ಕಷ್ಟದ ಇಲಾಖೆ ಶಿಕ್ಷಣ ಇಲಾಖೆ. ಸಚಿವರು ತುಂಬಾ ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ

    ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ

    ಬೆಂಗಳೂರು: ನಿಮ್ಮ ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ‘ಜ್ಞಾನ ದೀವಿಗೆ’ ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೀಗ ನಟ ಶಿವರಾಜ್ ಕುಮಾರ್ ಅವರು ಕೈ ಜೋಡಿಸಿ, 100 ಟ್ಯಾಬ್‍ಗಳನ್ನು ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಶಕ್ತಿ ಇರುವವರು ಒಂದು ಟ್ಯಾಬ್ ಆದರೂ ನೀಡಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.

    ‘ಜ್ಞಾನ ದೀವಿಗೆ’ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉತ್ತಮ ಕೆಲಸ ಮಾಡುತ್ತಿದ್ದೀರಿ, ರೋಟರಿ ಸಂಸ್ಥೆ ಜೊತೆ ಸೇರಿ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕೊರೊನಾ ಬಂದ ಮೇಲೆ ನಾವೆಲ್ಲ ಸ್ವಾರ್ಥಿಗಳಾಗಿದ್ದೇವೆ. ಇಡೀ ಪ್ರಪಂಚಕ್ಕೆ ಈ ಸಮಸ್ಯೆ ಆವರಿಸಿದೆ. ಏನೇ ಸಮಸ್ಯೆ ಬಂದರೂ ಸಹಾಯದ ಮನೋಭಾವವಿದ್ದರೆ ಯಾರು ಬೇಕಾದರೂ ಮಾಡಬಹುದು ಎಂದು ಕರೆ ನೀಡಿದರು. ಇದನ್ನೂ ಓದಿ: ವಿವಿಧ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ

    ವಿದ್ಯಾದಾನ ಶ್ರೇಷ್ಠ ದಾನ. ಇದಕ್ಕೆ ಸಹಾಯ ಮಾಡುವುದು ಸಹ ನಮ್ಮ ಜವಾಬ್ದಾರಿ. ಪಬ್ಲಿಕ್ ಟಿವಿಯಲ್ಲಿ ಈ ಅಭಿಯಾನ ಕಾರ್ಯಕ್ರಮ ನೋಡಿ, ಪತ್ನಿ ಗೀತಾ ಅವರು ನಾವೂ ಸಹಾಯ ಮಾಡಬೇಕು ಎಂದು ಹೇಳಿದರು. ಅಲ್ಲದೆ ಎಸ್‍ಎಸ್‍ಎಲ್‍ಸಿ ಎನ್ನುವುದು ವಿದ್ಯಾರ್ಥಿಗಳ ಜೀವನದ ಟರ್ನಿಂಗ್ ಪಾಯಿಂಟ್, ಹೀಗಾಗಿ ನಾನು ಇದಕ್ಕೆ ಕೈ ಜೋಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ

    ಈ ಅಭಿಯಾನ ದೊಡ್ಡ ಅಲೆ, ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು. ನನ್ನ ಕಡೆಯಿಂದ ಸಣ್ಣ ಸಹಾಯ ಎಂಬಂತೆ 100 ಟ್ಯಾಬ್‍ಗಳನ್ನು ನೀಡಲು ನಿರ್ಧರಿಸಿದ್ದೇನೆ. ರಾಜ್ಯದ ಜನತೆ ಎಲ್ಲರೂ ಸಾಧ್ಯವಾದರೆ ಒಂದೊಂದು ಟ್ಯಾಬ್ ನೀಡಿ ಸಹಾಯ ಮಾಡಿ. ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ನಾವು ಮಾಡಿ ಇತರರಿಗೆ ಹೇಳಬೇಕು. ಹೀಗಾಗಿ ನಾನು ಈ ಕೆಲಸ ಮಾಡಿದೆ. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿ. ಒಂದು ಕೈಯಿಂದ ಹತ್ತು, ನೂರು, ಸಾವಿರ, ಲಕ್ಷ, ಕೋಟಿ ಹೀಗೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಹೇಳಿದರು.

  • ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ

    ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ

    ಬೆಂಗಳೂರು: ಬೆಳಕಿನ ಹಬ್ಬದ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳ ಬಾಳಿಗೆ ‘ಜ್ಞಾನದೀವಿಗೆ’ ಅಭಿಯಾನದ ಮೂಲಕ ಬೆಳಕು ನೀಡುತ್ತಿದ್ದೀರಿ ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

    ಜ್ಞಾನ ದೀವಿಗೆ ಕಾರ್ಯಕ್ರಮದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತುಂಬಾ ಉತ್ತಮ ಕಾರ್ಯ, ಈ ಹಿಂದೆ ನೆರೆ ಹಾವಳಿ ಬಂದಾಗ ನೀವೂ ಯಾವ ರೀತಿ ಸಹಾಯ ಮಾಡಿದ್ದೀರೋ, ಅದೇ ರೀತಿ ಜನ ಸಹ ಸ್ಪಂದಿಸಿದರು. ಇದೀಗ ಜ್ಞಾನ ದೀವಿಗೆ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಕೊಡುಗೆ ನೀಡುತ್ತಿದ್ದೀರಿ. ಕಳೆದ ಎಂಟು ತಿಂಗಳಿಂದ ಶಾಲೆ ತರಗತಿ ಇಲ್ಲದೆ ಮಕ್ಕಳು ವಂಚಿತರಾಗಿದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಮನಗಂಡು ನೀವು ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಟ್ಯಾಬ್ ವಿತರಣೆ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಎಂದರು. ಇದನ್ನೂ ಓದಿ: ರಂಗನಾಥ್ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ: ಸಿಎಂ

    ಅನೇಕ ಮಕ್ಕಳು ಶಿಕ್ಷಣದಿಂದ ಲಕ್ಷಾಂತರ ಮಕ್ಕಳು ವಂಚಿತರಾಗಿದ್ದರು. ಅವರ ಬದುಕಿಗೆ ನೀವೂ ಬೆಳಕಾಗುತ್ತಿದ್ದೀರಿ. ಈ ಮೂಲಕ ಬೆಳಕಿನ ಹಬ್ಬದ ಸಂದರ್ಭದಲ್ಲಿ ಅವರ ಬದುಕಿಗೆ ಬೆಳಕನ್ನು ನೀಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಜ್ಞಾನದೀವಿಗೆ’ ಸದಾ ಉರಿಯುತ್ತಿರಬೇಕು. ಆದರೆ ಕಳೆದ ಎಂಟು ತಿಂಗಳಿಂದ ಅದು ಆರುವ ಹಂತ ತಲುಪಿತ್ತು. ಅದು ಆರದಿರುವ ಹಾಗೆ ಉರಿಸುವಂತಹ ಕೆಲಸ ಮಾಡುತ್ತಿದ್ದೀರಿ, ಉರಿಯುವಂತೆ ಮಾಡಿದ್ದೀರಿ. ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ‘ಜ್ಞಾನದೀವಿಗೆ’ ಕಾರ್ಯಕ್ರಮಕ್ಕೆ ಚಾಲನೆ

    ಎಲ್ಲ ಇಲಾಖೆಗಳಿಂತ ಶಿಕ್ಷಣ ಇಲಾಖೆ ತುಂಬಾ ಅನಿಶ್ಚಿತತೆಯಲ್ಲಿದೆ. ಯಾವಾಗ ಶಾಲೆ ಆರಂಭಿಸಬೇಕು, ಮಕ್ಕಳಿಗೆ ಏನು ಮಾಡಬೇಕು ಎಂಬ ದುಗುಡ ಶಿಕ್ಷಣ ಸಚಿವರಲ್ಲಿದೆ. ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ. ಅಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೋಂಕು ತಗುಲಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಯಾವ ರೀತಿ ಮಾಡಬೇಕೆಂಬ ಸವಾಲು ಕಾಡುತ್ತಿದೆ. ಅಲ್ಲದೆ ಅಧ್ಯಯನ ಯೋಗ್ಯವಾಗಿದೆ. ನಮ್ಮ ಶಿಕ್ಷಣ ಸಚಿವರು ಸಹ ತುಂಬಾ ಶ್ರಮಪಡುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ರೀತಿಯೇ ಇದಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಷ್ಟದಲ್ಲಿದ್ದವರಿಗೆ ಅವರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ಇಂದೂ ಸಹ ಪಬ್ಲಿಕ್ ಟಿವಿ ಜೊತೆಗೆ ಕೈ ಜೋಡಿಸಿ, ಮಕ್ಕಳಿಗೆ ಟ್ಯಾಬ್ ಮುಟ್ಟಿಸಲು ಸಾಥ್ ನೀಡಿರುವುದು ಸಂತಸದ ವಿಷಯ. ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ ಎಂದು ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

  • ರಂಗನಾಥ್ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ: ಸಿಎಂ

    ರಂಗನಾಥ್ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ: ಸಿಎಂ

    ಬೆಂಗಳೂರು: ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರು ಪ್ರಯತ್ನಿಸಿದರೆ ಯಾವುದು ಅಸಾಧ್ಯವಲ್ಲ ಎಂಬುದು ತಿಳಿದಿರುವ ಸಂಗತಿ. ತುಂಬಾ ಚಿಂತನೆ ಮಾಡಿ ‘ಜ್ಞಾನ ದೀವಿಗೆ’ ಅಭಿಯಾನ ಆರಂಭಿಸಿದ್ದೀರಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

    ಜ್ಞಾನದೀವಿಗೆ ಕಾರ್ಯಕ್ರಮ ಸಂಬಂಧ ಮಾತನಾಡಿದ ಅವರು, ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಡಿಜಿಟಲ್ ಶಿಕ್ಷಣ ಪಡೆಯಲು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅವರು ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದರು.

    ಈ ಅಭಿಯಾನಕ್ಕೆ ಸರ್ಕಾರದ ಸಂಪೂರ್ಣ ಸಹಕಾರ ಇದೆ. ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ. ನಿಮ್ಮೊಂದಿಗೆ ನಾನು ವೈಯಕ್ತಿಕವಾಗಿ ಸಹ ಮಾತನಾಡುತ್ತೇನೆ. ಈ ಅಭಿಯಾನವನ್ನು ಸಮರ್ಥವಾಗಿ ಜಾರಿಗೆ ತರುವ ಪ್ರಯತ್ನ ಮಾಡೋಣ ಎಂದು ಅಭಯ ನೀಡಿದರು.

    ಕೊರೊನಾದಿಂದಾಗಿ ರಾಜ್ಯದ ಆರ್ಥಿಕತೆ ಹಿನ್ನಡೆ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗೆಯೇ ಶಿಕ್ಷಣ ಕ್ಷೇತ್ರದ ಮೇಲೂ ಪರಿಣಾಮ ಬೀರಿದ್ದು, ಪರ್ಯಾಯ ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ ಆನ್‍ಲೈನ್ ಶಿಕ್ಷಣ ಕ್ರಮ ಸಹ ಒಂದು. ಆದರೆ ಅಂತರ್ಜಾಲ ಸಮಸ್ಯೆಯಿಂದ ಆನ್‍ಲೈನ್ ಶಿಕ್ಷಣದಿಂದ ಮಕ್ಕಳು ವಂಚಿತರಾಗಿತ್ತಿದ್ದಾರೆ. ಹೀಗಾಗಿ ಆನ್‍ಲೈನ್ ಶಿಕ್ಷಣ ವಂಚಿತ ಮಕ್ಕಳಿಗೆ ರೋಟರಿ ಸಂಸ್ಥೆ ಹಾಗೂ ಪಬ್ಲಿಕ್ ಟಿವಿ ‘ಜ್ಞಾನ ದೀವಿ’ಗೆ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಕ್ಕಳಿಗೆ ಉಚಿತ ಟ್ಯಾಬ್‍ಗಳನ್ನು ನೀಡಲಾಗುತ್ತಿರುವುದು ಶ್ಲಾಘನೀಯ.

    ಇದರಿಂದ ಆನ್‍ಲೈನ್ ಶಿಕ್ಷಣ ವಂಚಿತ ಮಕ್ಕಳಿಗೆ ಸಹಾಯವಾಗಲಿದೆ. ಪ್ರತಿ ಇಬ್ಬರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಒಂದರಂತೆ ಟ್ಯಾಬ್ ವಿತರಿಸುತ್ತಿರುವುದು ಅಭಿನಂದನೀಯ. ಅಂದಾಜು 2.68 ಲಕ್ಷ ಮಕ್ಕಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯದ ಎಲ್ಲ 30 ಜಿಲ್ಲೆಗಳ ಬಹುತೇಕ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳು ಈ ಅಭಿಯಾನದ ವ್ಯಾಪ್ತಿಗೆ ಬರಲಿವೆ. ಕೊರೊನಾ ನಿರ್ವಹಣೆ ಸಂದರ್ಭದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ.

    ರೋಟರಿ ಸಂಸ್ಥೆ ಹಾಗೂ ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಹಮ್ಮಿಕೊಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗುತ್ತಿರುವುದು ಶ್ಲಾಘನೀಯ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಕೈ ಜೋಡಿಸುವ ಮೂಲಕ ಸಮಾಜದ ಏಳಿಗೆಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

  • ಪಬ್ಲಿಕ್ ಟಿವಿ ಕಾರ್ಯನಿರ್ವಾಹಕ ಸಂಪಾದಕರಾಗಿ ದಿವಾಕರ್

    ಪಬ್ಲಿಕ್ ಟಿವಿ ಕಾರ್ಯನಿರ್ವಾಹಕ ಸಂಪಾದಕರಾಗಿ ದಿವಾಕರ್

    ಬೆಂಗಳೂರು: ಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ದಿವಾಕರ್ ಸಿ ನೇಮಕವಾಗಿದ್ದಾರೆ. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಅವರು ಇಂದು ಈ ವಿಷಯವನ್ನು ಸಂಪಾದಕೀಯ ಮಂಡಳಿಯ ಸಭೆಯಲ್ಲಿ ಪ್ರಕಟಿಸಿದರು. ರೈಟ್‍ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‍ನ ಸಿಇಒ ಅರುಣ್ ಕುಮಾರ್, ಮ್ಯಾನೇಜಿಂಗ್ ಎಡಿಟರ್ ಮೊಹಮದ್ ಅಜ್ಮತ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

    ಸಭೆ ಮೊಹಮದ್ ಅಜ್ಮತ್ ಅವರ 3 ವರ್ಷಕ್ಕೂ ದೀರ್ಘ ಕಾಲದ ಸೇವೆಯನ್ನು ಶ್ಲಾಘಿಸಲಾಯಿತು. ದಿವಾಕರ್ ಅವರು ಈ ಹಿಂದೆ ರಾಜ್ಯದ ಕನ್ನಡದ ಪ್ರಮುಖ ಚಾನೆಲ್‍ಗಳಲ್ಲಿ 15 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

  • ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಟೆಸ್ಟ್ ಸಿಗ್ನಲ್ ಆರಂಭ

    ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಟೆಸ್ಟ್ ಸಿಗ್ನಲ್ ಆರಂಭ

    ಬೆಂಗಳೂರು: ಪಬ್ಲಿಕ್ ಟಿವಿ ಸಮೂಹದ ಮೂರನೇ ಚಾನಲ್ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಫೆಬ್ರವರಿ 12ರಿಂದ ನಿಮ್ಮ ಮುಂದೆ ಬರಲಿದೆ. ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಟೆಸ್ಟ್ ಸಿಗ್ನಲ್ ಆರಂಭವಾಗಿದೆ.

    ಈ ಹಿನ್ನೆಲೆಯಲ್ಲಿಂದು ಪಬ್ಲಿಕ್ ಟಿವಿ ಕಚೇರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಸಿಇಒ ಅರುಣ್ ಕುಮಾರ್, ಸಿಒಒ ಸಿ.ಕೆ.ಹರೀಶ್ ಕುಮಾರ್ ಸೇರಿದಂತೆ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಪೂಜೆಯಲ್ಲಿ ಭಾಗಿಯಾಗಿದ್ದರು.

    ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಆರಂಭವಾದ ಪಬ್ಲಿಕ್ ಟಿವಿ ಕೂಡಾ ಫೆಬ್ರವರಿ 12ರಂದು 6ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. 2012ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ ಲೋಕಾರ್ಪಣೆಗೊಂಡಿತ್ತು. ಬಳಿಕ 2014ರ ಸೆಪ್ಟೆಂಬರ್ 28ರಂದು ಪಬ್ಲಿಕ್ ಮ್ಯೂಸಿಕ್ ವಾಹಿನಿ ಆರಂಭಗೊಂಡಿತ್ತು.

    2012ರಲ್ಲಿ ಆರಂಭಗೊಂಡ ಪಬ್ಲಿಕ್ ಟಿವಿ ಹಾಗೂ 2014ರಲ್ಲಿ ಆರಂಭಗೊಂಡ ಪಬ್ಲಿಕ್ ಮ್ಯೂಸಿಕ್ ವಾಹಿನಿ ರಾಜ್ಯದ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದೆ. ಇದಕ್ಕೆ ಕಾರಣೀಕರ್ತರಾದ ಜನರಿಗೆ ನಾವು ಆಭಾರಿ. ಈ ಹಿಂದೆ ಎರಡು ಚಾನೆಲ್‍ಗಳನ್ನು ಕೈ ಹಿಡಿದಂತೆಯೇ ಪಬ್ಲಿಕ್ ಮೂವೀಸ್ ವಾಹಿನಿಯನ್ನು ಕೂಡಾ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಮೇಲೆ ವಿಶ್ವಾಸವಿಟ್ಟ ಎಲ್ಲಾ ಕನ್ನಡಿಗರಿಗೂ ಧನ್ಯವಾದ ಎಂದು ಪಬ್ಲಿಕ್ ಟಿವಿ, ಮ್ಯೂಸಿಕ್ ಚಾನೆಲ್ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿದ್ದಾರೆ.

    ಈಗಾಗಲೇ ನಿಖರ ಸುದ್ದಿ, ಮನಸ್ಸಿಗೆ ಮುದ ನೀಡುವ ಸಂಗೀತದ ಮೂಲಕ ನಿಮ್ಮ ಮನಗೆದ್ದಿರುವ ಪಬ್ಲಿಕ್ ಟಿವಿ, ಈಗ ಸಿನಿಮಾದ ಮೂಲಕ ನಿಮ್ಮ ಮನರಂಜಿಸಲು ಆಗಮಿಸುತ್ತಿದೆ.

    ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ನಲ್ಲಿ ನೀವು 24 ಗಂಟೆಗಳ ಕಾಲವೂ ಕನ್ನಡ ಸಿನೆಮಾಗಳನ್ನು ನೋಡಿ ಆನಂದಿಸಬಹುದು. ನಿಮ್ಮೂರಲ್ಲಿ ಚಾನೆಲ್ ವೀಕ್ಷಣೆಗೆ ಲಭ್ಯವಾಗದಿದ್ದರೆ ನೀವು ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಬಹುದು.

     

  • ಎಚ್‍ಆರ್ ರಂಗನಾಥ್‍ಗೆ ಪಿತೃ ವಿಯೋಗ

    ಎಚ್‍ಆರ್ ರಂಗನಾಥ್‍ಗೆ ಪಿತೃ ವಿಯೋಗ

    ಮೈಸೂರು: ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಅವರ ತಂದೆ ಎಚ್.ಕೆ. ರಾಮಕೃಷ್ಣಯ್ಯ (92) ಶುಕ್ರವಾರ ಸಂಜೆ ನಿಧನರಾಗಿದ್ದಾರೆ.

    ಮೈಸೂರಿನ ವಿಜಯನಗರದ ರೈಲ್ವೆ ಲೇ ಔಟ್‍ನ ಎರಡನೇ ಮೇನ್‍ನಲ್ಲಿರುವ ನಿವಾಸದಲ್ಲಿ ರಾಮಕೃಷ್ಣಯ್ಯ ನಿಧನರಾಗಿದ್ದಾರೆ.

    ರೈಲ್ವೇ ಇಲಾಖೆಯ ನಿವೃತ್ತ ನೌಕರರಾಗಿದ್ದ ರಾಮಕೃಷ್ಣಯ್ಯ ಪತ್ನಿ ಲೀಲಾ ಹಾಗೂ ನಾಲ್ಕು ಹೆಣ್ಣು, ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 11 ಗಂಟೆಗೆ ಗೋಕುಲಂ ನಲ್ಲಿರುವ ಸ್ಮಶಾನದಲ್ಲಿ ನಡೆಯಲಿದೆ.

  • ಹೋರಾಟಗಾರರ ಭಾಷಣದಂತೆ ಮಾತನಾಡ್ತೀರಿ: ಸತ್ಯನಾರಾಯಣ

    ಬೆಂಗಳೂರು: ಹೋರಾಟಗಾರರು ಹೇಗೆ ಭಾಷಣ ಮಾಡುತ್ತಾರೋ ಅದೇ ರೀತಿ ನೀವು ಬಿಗ್ ಬುಲೆಟಿನ್‍ನಲ್ಲಿ ಮಾಡುತ್ತಿದ್ದೀರಿ ಎಂದು ಹಿರಿಯ ಪತ್ರಕರ್ತ ಸತ್ಯನಾರಾಯಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯ ವಿಶೇಷ ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ ಅವರು, ಕ್ಯಾಮೆರಾ ನಿಮ್ಮದು, ಮೈಕ್ ನಿಮ್ಮ ಬಳಿಯೇ ಇದೆ. ಚರ್ಚೆಯಲ್ಲಿ ಬೇರೆ ಅವರಿಗೆ ಮಾತನಾಡಲು ಅವಕಾಶ ನೀಡದ ಕಾರಣ ಸತ್ಯದ ದರ್ಶನಕ್ಕೆ ಅಪಚಾರವಾಗಬಹುದು ಎನ್ನುವ ಶಂಕೆ ನನ್ನದು ಎಂದು ಅವರು ಹೇಳಿದರು.

    ರಾಜಕೀಯ ವ್ಯಕ್ತಿಗಳಿಗೆ ಮಾತನಾಡಲು ಅವಕಾಶ ನೀಡದೇ ಇದ್ದರೆ, ಜನರಿಗೆ ತಪ್ಪು ಮಾಹಿತಿ ರವಾನಿಸಿದಂತೆ ಆಗುತ್ತದೆ. ಕೆಲವೊಮ್ಮೆ ಆಕ್ರೋಶ ಇರಬೇಕು ಎಂದು ತಿಳಿಸಿದರು.

    ಬೇರೆಯವರ ಧ್ವನಿ ಕೇಳಲ್ಲ: ನಿಮ್ಮ ಮತನಾಡುವ ಭಾಷೆ ವಾಕ್ಯಗಳು ಚೆನ್ನಾಗಿದೆ. ನಿಮ್ಮ ಧ್ವನಿ ಮಾತ್ರ ಕೇಳುತ್ತದೆ, ಬೇರೆಯವರ ಧ್ವನಿ ಸ್ಪಷ್ಟವಾಗಿ ಕೇಳುವುದಿಲ್ಲ ಯಾಕೆ ಎಂದು ಹಿರಿಯ ನಟಿ ಅರುಂಧತಿ ನಾಗ್ ಎಚ್.ಆರ್.ರಂಗನಾಥ್ ಅವರಲ್ಲಿ ಪ್ರಶ್ನಿಸಿದರು.

    ಇದಕ್ಕೆ ಉತ್ತರ ನೀಡಿದ ರಂಗನಾಥ್, ನಮ್ಮದು ಸ್ಟುಡಿಯೋದ ಜೊತೆ ನೇರಸಂಪರ್ಕ ಇರುತ್ತದೆ. ಬೇರೆಯವರ ಮಾತನಾಡುವ ಸಿಗ್ನಲ್ ಸಮಸ್ಯೆಯಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ದೃಶ್ಯ, ಆಡಿಯೋ ಸರಿಯಾಗಿ ಬರುವುದಿಲ್ಲ ಎಂದು ತಿಳಿಸಿದರು.

    ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದರು.

    ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

    ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

    https://www.youtube.com/watch?v=gExNvrRr3zI

    https://www.youtube.com/watch?v=2T6LZpEtf6o

    https://www.youtube.com/watch?v=LZjrhKNgCDY

    https://www.youtube.com/watch?v=A3EdUMpeOwI