Tag: ಎಚ್ ವಿಶ್ವನಾಥ್

  • ರಸ್ತೆ ಅಪಘಾತದಲ್ಲಿ ಮಾಜಿ ಸಂಸದರ ಪುತ್ರ ಪಾರು

    ರಸ್ತೆ ಅಪಘಾತದಲ್ಲಿ ಮಾಜಿ ಸಂಸದರ ಪುತ್ರ ಪಾರು

    ಮೈಸೂರು: ರಸ್ತೆ ಅಪಘಾತದಲ್ಲಿ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಪುತ್ರ ಅಪಾಯದಿಂದ ಪಾರಾಗಿದ್ದಾರೆ.

    ಮಂಗಳವಾರ ತಡರಾತ್ರಿ ಕಾರ್ ಕಾಗೂ ಆಟೋ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮಾಜಿ ಸಂಸದರ ಪುತ್ರ ಪೂರ್ವಜ್ ವಿಶ್ವನಾಥ್ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕೆ.ಆರ್.ನಗರ ಪಟ್ಟಣ ಹೊರವಲಯದ ಬಸವೇಶ್ವರ ದೇವಾಲಯ ಬಳಿ ಸಂಭವಿಸಿದೆ.

    ಕಾರ್ಯನಿಮಿತ್ತ ಚಾಂದಗಾಲು ಗ್ರಾಮಕ್ಕೆ ಪೂರ್ವಜ್ ತಮ್ಮ ಕಾರಿನಲ್ಲಿ ಹೊರಟಿದ್ದ ವೇಳೆ ಆಲೂಗಡ್ಡೆ ತುಂಬಿದ್ದ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಎರಡೂ ವಾಹನಗಳು ಸಂಪೂರ್ಣ ಜಖಂ ಆಗಿದೆ. ಅರಕಲಗೂಡು ಮಂಜುನಾಥ್ ಎಂಬವರಿಗೆ ಸೇರಿದ ಆಟೋ ಇದಾಗಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಕೆಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=LH0pNdW7o3U

     

  • ಸಿಎಂ ಸಿದ್ದರಾಮಯ್ಯ ಚೈಲ್ಡ್ ಆಗಿ ವರ್ತಿಸ್ತಿದ್ದಾರೆ: ಎಚ್ ವಿಶ್ವನಾಥ್

    ಸಿಎಂ ಸಿದ್ದರಾಮಯ್ಯ ಚೈಲ್ಡ್ ಆಗಿ ವರ್ತಿಸ್ತಿದ್ದಾರೆ: ಎಚ್ ವಿಶ್ವನಾಥ್

    ಕೊಪ್ಪಳ: ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರು ಚೈಲ್ಡ್ ಆಗಿ ವರ್ತಿಸುತ್ತಾರೆ. ಇಡೀ ಉತ್ತರ ಕರ್ನಾಟಕವನ್ನು ಸರ್ಕಾರ ಹಾಳು ಮಾಡಿದೆ ಎಂದು ಜೆಡಿಎಸ್ ಮುಖಂಡ ಎಚ್ ವಿಶ್ವನಾಥ್ ಅವರು ವಾಗ್ದಾಳಿ ನಡೆಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊಪ್ಪಳ ಸಣ್ಣ ನೀರಾವರಿ ಇಲಾಖೆಯಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಅವರದು ಭ್ರಷ್ಟ ಸರ್ಕಾರ ಎಂದು ಟೀಕಿಸಿದರು.

    ರಾಜ್ಯ ಸರ್ಕಾರದ ಪ್ರಾಯೋಜಿತವಾಗಿ ಸಿ ಫೋರ್ ಸಮೀಕ್ಷೆ ನಡೆಸಿದೆ. ಅಪೌಷ್ಠಿಕತೆಯಲ್ಲಿ ಕೊಪ್ಪಳ ದೇಶದಲ್ಲೇ ಮೊಲದ ಸ್ಥಾನದಲ್ಲಿದೆ. ಆದರೆ ಇದು ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಕಾಣುತ್ತಿಲ್ಲ. ವೈದ್ಯರ ಕೊರತೆಯಿಂದ ಮಕ್ಕಳು ಸಾಯುತ್ತಿವೆ. ಸರ್ಕಾರ ಇದೆಯೋ ಅಥವಾ ಇಲ್ಲವೋ ಎಂದು ತಿಳಿಯಬೇಕಿದೆ ಎಂದು ಹೇಳಿದರು.

  • `ಕೈ’ ಬಿಟ್ಟ ಹಳ್ಳಿ ಹಕ್ಕಿ! – ಸಿಂಹಗೆ ಎದುರಾಗ್ತಾರಾ ಬ್ರಿಜೇಶ್?

    `ಕೈ’ ಬಿಟ್ಟ ಹಳ್ಳಿ ಹಕ್ಕಿ! – ಸಿಂಹಗೆ ಎದುರಾಗ್ತಾರಾ ಬ್ರಿಜೇಶ್?

    ಕೆ.ಪಿ.ನಾಗರಾಜ್
    ಮೈಸೂರು: ಪತ್ರಕರ್ತ ಕಂ ಸಂಸದ ಆಗಿರೋ ಪ್ರತಾಪ್ ಸಿಂಹಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಕೀಲ ಕಂ ರಾಜಕಾರಣಿ ಆಗಿರೋ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗುತ್ತಾರಾ..?. ಇಂಥದ್ದೊಂದು ಪ್ರಶ್ನೆ ಈಗ ಮೈಸೂರು – ಕೊಡಗು ಭಾಗದಲ್ಲಿ ಹುಟ್ಟಿಕೊಂಡಿದೆ. ಯಾವಾಗ ಮಾಜಿ ಸಂಸದ ಎಚ್. ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಮನೆ ಸೇರಿದ್ರೋ ಅಲ್ಲಿಗೆ ಕಾಂಗ್ರೆಸ್‍ನಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯೋರು ಯಾರು ಎಂಬ ಚರ್ಚೆ ಶುರುವಾಗಿದೆ. ಆರಂಭಿಕ ಚರ್ಚೆಯಲ್ಲಿ ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿರುವ ಮೊದಲ ಹೆಸರೇ ಬ್ರಿಜೇಶ್ ಕಾಳಪ್ಪ..!

    ಕೊಡಗು ಮೂಲದ ಬ್ರಿಜೇಶ್ ಕಾಳಪ್ಪ, ಸುಪ್ರೀಂಕೋರ್ಟ್‍ನಲ್ಲಿ ವಕೀಲರು. ಕಾಂಗ್ರೆಸ್ ಜೊತೆ ಬಹು ವರ್ಷದ ಸಾಂಗತ್ಯ ಬೆಳೆಸಿಕೊಂಡಿರೋ ಬ್ರಿಜೇಶ್, ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಕೂಡ. ಸುಪ್ರೀಂ ಕೋರ್ಟ್‍ನಲ್ಲಿ ರಾಜ್ಯದ ನದಿ ನೀರಿನ ವಿವಾದ ಕೇಸ್ ಗಳ ವಕೀಲರ ಟೀಂನಲ್ಲಿ ಸಕ್ರಿಯರಾಗಿದ್ದು ಕೊಂಡೇ ಎಐಸಿಸಿಯ ಮಾಧ್ಯಮ ವಕ್ತಾರರಾಗಿದ್ದಾರೆ. ಕಾಂಗ್ರೆಸ್ ಎಷ್ಟೇ ಇರುಸು ಮುರಿಸಿನ ಸ್ಥಿತಿಯಲ್ಲಿದ್ದರೂ ಪಕ್ಷವನ್ನು ಮಾಧ್ಯಮಗಳಲ್ಲಿ ಸಮರ್ಥಿಸುತ್ತಾ ಹೈಕಮಾಂಡ್ ಕಣ್ಣಿಗೂ ಹತ್ತಿರವಾಗಿದ್ದಾರೆ.

    ಯಾವಾಗ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ವಿಶ್ವನಾಥ್, ಪ್ರತಾಪ್ ಸಿಂಹ ಎದುರು ಸೋತರೋ ಅವತ್ತಿನಿಂದಲೇ ಬ್ರಿಜೇಶ್ ಕಾಳಪ್ಪ, ತಮ್ಮ ಒಂದು ಕಣ್ಣನ್ನು ಮೈಸೂರು ಲೋಕಸಭಾ ಕ್ಷೇತ್ರದ ಮೇಲೆ ಇಟ್ಟಿದ್ದರು. ಬ್ಯಾಕ್ ಟು ಬ್ಯಾಕ್ ಮೈಸೂರಿಗೆ ಬರುತ್ತಾ ಇಲ್ಲಿನ ಕಾರ್ಯಕರ್ತರ ಜೊತೆ ಸ್ನೇಹ ಬೆಳೆಸಿಕೊಂಡು ಮಾಧ್ಯಮದಲ್ಲೂ ಕಾಣಿಸಿಕೊಳ್ಳೋಕೆ ಶುರು ಮಾಡಿದ್ದರು. ಈಗ, ವಿಶ್ವನಾಥ್ ಅವರೇ ಪಕ್ಷದಿಂದ ಹೊರ ಹೋಗಿರೋ ಕಾರಣ ಬ್ರಿಜೇಶ್ ಕಾಳಪ್ಪ ಹಾದಿ ಸುಲಭವಾದಂತೆ ಕಾಣುತ್ತಿದೆ.

    60 ವರ್ಷಗಳ ಹಿಂದೆ ಕೊಡಗು ಮೂಲದ ಸಿ.ಎಂ. ಪೊನ್ನಚ್ಚ ಅವರಿಗೆ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. ಆನಂತರ, ಕೊಡಗು ಮೂಲದವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ. 2009ರ ಚುನಾವಣೆಯಲ್ಲೇ ಬ್ರಿಜೇಶ್ ಕಾಳಪ್ಪ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ, 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಎಚ್. ವಿಶ್ವನಾಥ್ ಅವರು 2009ರ ಲೋಕಸಭಾ ಚುನಾವಣೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ, ಒಂದು ಹಂತದಲ್ಲಿ ಬ್ರಿಜೇಶ್ ಕ್ಷೇತ್ರದ ಆಸೆಯೇ ಬಿಟ್ಟು ರಾಜ್ಯಸಭಾ ಸ್ಥಾನದ ಕಡೆ ಕಣ್ಣಿಟ್ಟು ಕುಳಿತಿದ್ದರು. ಈಗ, ಯಾರು ಅವರ ಟಿಕೆಟ್‍ಗೆ ಬಲವಾದ ಅಡ್ಡಿಯಾಗಿದ್ದರೋ ಅವರೇ ಪಕ್ಷ ತೊರೆದಿರೋ ಕಾರಣ ಮತ್ತೆ ಅಖಾಡ ಪ್ರವೇಶಕ್ಕೆ ಮುಂದಾಗಿದ್ದಾರೆ.

    ಹೈಕಮಾಂಡ್ ಗೂ ಹತ್ತಿರ ಹತ್ತಿರ: ಕಾಂಗ್ರೆಸ್ ಹೈಕಮಾಂಡ್ ಜೊತೆ ಅದರಲ್ಲೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಹಲವು ಕಾಂಗ್ರೆಸ್‍ನ ಘಟಾನುಘಟಿ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ಬ್ರಿಜೇಶ್ ಕಾಳಪ್ಪ, ಲೋಕಸಭಾ ಕ್ಷೇತ್ರದ ಟಿಕೆಟ್ ಸುಲಭವಾಗಿಯೇ ಗಿಟ್ಟಿಸುತ್ತಾರೆ ಅನ್ನೋ ಮಾತು ಕಾಂಗ್ರೆಸ್ ವಲಯದಲ್ಲಿದೆ. ಅಲ್ಲದೆ, ಲೋಕಸಭಾ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರು ಕೂಡಾ ಇದುವರೆಗೂ ಕ್ಷೇತ್ರದಲ್ಲಿ ಓಡಾಡದೆ ಇರೋದು ಕೂಡ ಬ್ರಿಜೇಶ್ ಕಾಳಪ್ಪಗೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ.

    ಈ ಎಲ್ಲಾ ಲೆಕ್ಕಚಾರ ಸರಿಯಾದರೆ ಪ್ರತಾಪ್ ಸಿಂಹಗೆ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗೋದು ನಿಶ್ಚಿತ. ಟಿವಿ ಡಿಬೇಟ್ ಗಳಲ್ಲಿ ಪರಸ್ಪರ ಮುಖಾಮುಖಿಯಾಗಿ ನಾನೋ ನೀನೋ ಎಂಬಂತೆ ವಾದಿಸುವ ಈ ಇಬ್ಬರು ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾದರೆ ಅದರ ಖದರ್ ಇನ್ನೂ ಹೆಚ್ಚಾಗುತ್ತೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರ ಗೆಲುವಿಗೆ ದೊಡ್ಡ ಕೊಡುಗೆ ಕೊಟ್ಟಿದ್ದು ಕೊಡಗು. ಅದೇ ಕೊಡಗು ಮೂಲದ ಬ್ರಿಜೇಶ್ ಕಾಳಪ್ಪ, ಅಖಾಡ ಪ್ರವೇಶ ಮಾಡಿದರೆ ಅಲ್ಲಿನ ಮತದಾರನ ಪ್ರೀತಿ ಯಾರ ಮೇಲೆ ಇರುತ್ತೆ ಅನ್ನೋ ಕೂತುಹಲ ಕೂಡಾ ಇರುತ್ತೆ.

    ಇದರ ಜೊತೆಗೆ ಜೆಡಿಎಸ್ ಯಾರಿಗೆ ಪಟ್ಟ ಕಟ್ಟುತ್ತೆ ಅನ್ನೋದು ಕೂಡ ಮುಖ್ಯ. ಎಚ್. ವಿಶ್ವನಾಥ್ ಅವರನ್ನು ತೆಕ್ಕೆಗೆ ತೆಗೆದುಕೊಂಡಿರೋ ಜೆಡಿಎಸ್ ಸದ್ಯಕ್ಕೆ ವಿಧಾನಸಭಾ ಚುನಾವಣೆಗೆ ಮಾತ್ರ ರಣತಂತ್ರ ಸಿದ್ಧ ಮಾಡುತ್ತಿದೆ. ಹೀಗಾಗಿ, ಲೋಕಸಭಾ ಚುನಾವಣೆಯ ಅಭ್ಯರ್ಥಿ ಬಗ್ಗೆ ಇಲ್ಲಿ ಇನ್ನೂ ಎಳೆಯಷ್ಟು ಚರ್ಚೆ ಕೂಡಾ ಶುರುವಾಗಿಲ್ಲ. ಎಚ್. ವಿಶ್ವನಾಥ್ ಪಕ್ಷ ಬಿಟ್ಟ ಕಾರಣ ಕಾಂಗ್ರೆಸ್ ನಲ್ಲಿ ಖಾಲಿಯಾದ ಲೋಕಸಭಾ ಚುನಾವಣಾ ಅಭ್ಯರ್ಥಿ ಸೀಟಿಗೆ ಚರ್ಚೆ ಶುರುವಾಗಿ ಚುನಾವಣೆಗೆ ಇನ್ನೂ ಎರಡು ವರ್ಷ ಮುಂಚೆಯೇ ಲೆಕ್ಕಚಾರಗಳು ಆರಂಭವಾಗಿಬಿಟ್ಟಿವೆ. ಇವತ್ತು ಇರೋ ರಾಜಕಾರಣ ನಾಳೆ ಇರಲ್ಲ. ಅಂತಹದರಲ್ಲಿ ಇದು ಇನ್ನೂ ಎರಡು ವರ್ಷದ ನಂತರದ ಮಾತು. ಅಷ್ಟರಲ್ಲಿ ಇನ್ನೂ ಯಾರ್ಯಾರು ಯಾವ ಯಾವ ಪಕ್ಷ ಸೇರುತ್ತಾರೋ, ಯಾರ್ಯಾರೂ ಆಕಾಂಕ್ಷಿಗಳಾಗಿ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕೆ ಮಾತ್ರ ದೂರದ ದೆಹಲಿಯಲ್ಲಿ ಕಪ್ಪು ಕೋಟು ಹಾಕಿ ಕುಳಿತಿರೋ ಬ್ರಿಜೇಶ್ ಕಾಳಪ್ಪ ಮಾತ್ರ ಮೈಸೂರು – ಕೊಡಗಿನ ಮೇಲೆ ಪ್ರೀತಿ ಹೆಚ್ಚಿಸಿಕೊಂಡಿದ್ದಾರೆ.

  • ಝಂಡಾ ಬದಲಾದ್ರೂ ಜಾತ್ಯಾತೀತ ಅಜೆಂಡಾವನ್ನು ಮುಂದುವರಿಸ್ತೇನೆ: ವಿಶ್ವನಾಥ್

    ಝಂಡಾ ಬದಲಾದ್ರೂ ಜಾತ್ಯಾತೀತ ಅಜೆಂಡಾವನ್ನು ಮುಂದುವರಿಸ್ತೇನೆ: ವಿಶ್ವನಾಥ್

    ಬೆಂಗಳೂರು: ತೆನೆಹೊತ್ತ ಮಹಿಳೆಯನ್ನು ಕೊರಳಿಗೆ ಸುತ್ತಿಕೊಂಡಿದ್ದೇನೆ. ಇದು ಇಡೀ ರಾಜ್ಯಾದ್ಯಂತ ಸುತ್ತಿಕೊಳ್ಳುವಂತೆ ಆಗಬೇಕು ಎಂದು ಮಾಜಿ ಸಂಸದ ಎಚ್ ವಿಶ್ವನಾಥ್ ಹೇಳಿದ್ದಾರೆ.

    ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್‍ಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾದರೂ ಪ್ರಧಾನ ಮಂತ್ರಿಯನ್ನು ಕೊಟ್ಟ ಪಕ್ಷ ಜೆಡಿಎಸ್. ಮುಖ್ಯಮಂತ್ರಿಗಳನ್ನ ಮಾಡಿದ್ದು ಜೆಡಿಎಸ್. ಇದು ಹುಡುಗಾಟವಲ್ಲ. ಮುಂದೆ ದೇವೇಗೌಡರ ನೆರಳಾಗಿ, ಕುಮಾರಸ್ವಾಮಿ ಸ್ನೇಹಿತರಾಗಿ ನಿಮ್ಮಲ್ಲರ ಜೊತೆ ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದರು.

    ಹರಿಯುವ ನೀರು: ನನ್ನ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ತಿರುವು ಇದು. ಬೆಳಗ್ಗೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಬಂದಿದ್ದೇನೆ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದೇನೆ. ಹಾಗಾಗಿ ರಾಜಕಾರಣ ನಿಂತ ನೀರಲ್ಲ. ರಾಜಕಾರಣ ಹರಿಯುವ ನೀರು ಎಂದರು.

    ಝಂಡಾ ಬದಲಾಗಿದೆ: ಸನ್ನಿವೇಶ, ಸಮಯಗಳು ನಡುವೆ ಹೊಸ ಮನೆಗೆ ಪಾದಾರ್ಪಣೆ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷದಲ್ಲಿ ಕಲಿತ ಕೆಲಸ ಜೆಡಿಎಸ್‍ನಲ್ಲೂ ಮುಂದುವರೆಸುತ್ತೇನೆ. ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಿಕ್ಕೆ ತರಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಇವತ್ತಿನಿಂದ ನನ್ನ ಝಂಡಾ ಬದಲಾಗಿದೆ. ತೆನೆ ಹೊತ್ತ ಮಹಿಳೆ ಝಂಡಾ ಹಿಡಿದುಕೊಂಡಿದ್ದೇನೆ. ಆದರೆ ನನ್ನ ಜಾತ್ಯಾತೀತ ಅಜೆಂಡಾವನ್ನು ಜೆಡಿಎಸ್ ನಲ್ಲೂ ಮುಂದುವರೆಸುತ್ತೇನೆ ಎಂದರು.

    ಲಾಭ ಇಲ್ಲ: ಪಕ್ಷ ಪರಿಸ್ಥಿತಿ ಸನ್ನಿವೇಶ ಇದನ್ನೇ ಪ್ರಶ್ನಿಸುತ್ತಿದ್ದರೆ ಯಾವ ಲಾಭವೂ ಇಲ್ಲ. ಇಂದು ಹೊಸ ಮನೆಗೆ ಬಂದಿದ್ದೇನೆ. ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ದುಡಿದ್ದೇನೋ ಅದೇ ಉತ್ಸಾಹದಿಂದ ಜೆಡಿಎಸ್ ನಲ್ಲಿ ದುಡಿಯುವೆ. 2006ರಲ್ಲಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಬಗ್ಗೆ ವಿಧಾನಸೌಧದಲ್ಲಿ ಮೆಚ್ಚುಗೆ ಮಾತನಾಡಿದ್ದೆ. ಈಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೇವೇಗೌಡರು ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಅಂತವರ ಜೊತೆ, ನಿಮ್ಮೆಲ್ಲರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಯೋಗ. ಮುಖಂಡರ ಜೊತೆ ಕುಳಿತು ಚರ್ಚಿಸಿ, ತಂತ್ರಗಾರಿಕೆ ಮಾಡಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಎಂದು ವಿಶ್ವನಾಥ್ ಹೇಳಿದರು.

    ಪ್ರಾಮಾಣಿಕ ರಾಜಕಾರಣಿ: ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ಎಚ್. ವಿಶ್ವನಾಥ್ ಪ್ರಾಮಾಣಿಕ ರಾಜಕಾರಣಿ. ತಮ್ಮ ಬೆಂಬಲಿಗರ ಜೊತೆ ಪಕ್ಷಕ್ಕೆ ಸೇರಿದ್ದಾರೆ. ಕಳೆದ ಹಲವಾರು ತಿಂಗಳಿನಲ್ಲಿ ಮಾಧ್ಯಮದವರು ವಿಶ್ವನಾಥ್ ಸೇರ್ಪಡೆ ಬಗ್ಗೆ ಕೇಳ್ತಿದ್ರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ವಿಶ್ವನಾಥ್ ಪಕ್ಷ ಸೇರಲು ಮೈಸೂರು ಜಿಲ್ಲೆಯ ನಮ್ಮ ಶಾಸಕರೇ ಕಾರಣ ಎಂದು ಹೇಳಿದರು.

    10ರಲ್ಲಿ ಜಯ: ವಿಶ್ವನಾಥ್ ಅವರು ಮನಸ್ಸಿನಲ್ಲಿ ಎಷ್ಟು ನೊಂದಿದ್ದಾರೆ ಅನ್ನೊದು ನನಗೆ ಗೊತ್ತಿದೆ. 40 ವರ್ಷದ ದುಡಿಮೆ ಮಾಡಿಕೊಂಡ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಬರೋದು ಎಷ್ಟು ಕಷ್ಟ ಗೊತ್ತು. ವಿಶ್ವನಾಥ್ ಸೇರ್ಪಡೆಯಿಂದ ಮೈಸೂರು ಭಾಗದ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸ ಇದೆ. ದೇವೇಗೌಡರಿಂದ ಅನೇಕ ಜನ ಬೆಳೆದಿದ್ದಾರೆ. ಪಕ್ಷದಲ್ಲಿ ಬೆಳೆದವರೇ ಪಕ್ಷ ನಾಶ ಮಾಡಬೇಕು ಅಂತ ಓಡಾಡುತ್ತಿದ್ದಾರೆ. ಇಂತಹವರಿಗೇ ನೀವೇ ಪಾಠ ಕಲಿಸಬೇಕು ಎಂದು ಹೇಳುವ ಮೂಲಕ ಜೆಡಿಎಸ್ ಬಂಡಾಯ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಜೆಡಿಎಸ್ ಪಕ್ಷದಲ್ಲಿ ಬೆಳೆದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆದರು. ಅವರು ಕಾಂಗ್ರೆಸ್ ಸೇರಲು ಪ್ರೇರೇಪಿಸಿದ್ದು ವಿಶ್ವನಾಥ್. 130 ವರ್ಷಗಳ ಇತಿಹಾಸದ ಬಗ್ಗೆ ಇವತ್ತು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯ ಮಾಡುತ್ತಾರೆ. ನಾನೇನು ಸಿಎಂ ಆಗುವ ಕನಸು ಕಾಣ್ತಿಲ್ಲ. ಅಧಿಕಾರದ ಆಸೆ ನಮಗೆ ಇಲ್ಲ. ರಾಜ್ಯದ ಜನರ ಹಿತ ಕಾಯಲು ಜೆಡಿಎಸ್ ಗೆ ಅಧಿಕಾರ ಬೇಕು ಅಷ್ಟೇ. ಇದು ಅಪ್ಪಮಕ್ಕಳ ಪಕ್ಷ ಅಲ್ಲ. ಎಲ್ಲ ಸಮುದಾಯದವರು ಇಲ್ಲಿ ನಾಯಕರಾಗಿದ್ದಾರೆ ಎಂದರು.

    ಯಾರು ಏನೇ ಸಮೀಕ್ಷೆ ಮಾಡಲಿ. ಜೆಡಿಎಸ್ ಕೂಡಾ ಸಮೀಕ್ಷೆ ಮಾಡಿದೆ. ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದು ಗೊತ್ತಿದೆ. ಈ ಬಾರಿ ಅಷ್ಟು ಸುಲಭವಲ್ಲ. ಜೆಡಿಎಸ್ ಬಗ್ಗೆ ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಎಚ್‍ಡಿಕೆ ತಿಳಿಸಿದರು.

    ಎಚ್.ವಿಶ್ವನಾಥ್ ಜೊತೆ ಅವರ ಹಲವು ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಜೆಡಿಎಸ್‍ಗೆ ಸೇರ್ಪಡೆಯಾದರು. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಬಾವುಟ, ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ವಿಶ್ವನಾಥ್ ಅವರ ಮಗ ಅಮಿತ್ ವಿಶ್ವನಾಥ್ ಕೂಡಾ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಶಾಸಕ ಜಿ.ಟಿ.ದೇವೆಗೌಡ, ಮಧು ಬಂಗಾರಪ್ಪ, ಮಾಜಿ ಶಾಸಕ ಬಂಡೇಪ್ಪ ಕಾಶಂಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಕೇಂದ್ರದ ಫಸಲ್ ಭೀಮಾ ರೈತರ ಹಗಲು ದರೋಡೆಯ ಯೋಜನೆ: ಎಚ್‍ಡಿಕೆ

    ಕೇಂದ್ರದ ಫಸಲ್ ಭೀಮಾ ರೈತರ ಹಗಲು ದರೋಡೆಯ ಯೋಜನೆ: ಎಚ್‍ಡಿಕೆ

    – ಯೋಜನೆಯಿಂದ ರೈತರಿಗೆ ಅನುಕೂಲ

    ವಿಜಯಪುರ: ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿದ್ದು, ಇದು ಹಗಲು ದರೋಡೆ ಮಾಡುವ ಯೋಜನೆಯಾಗಿದೆ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಪ್ರಧಾನಮಂತ್ರಿ ಮೋದಿ ಸರ್ಕಾರದ ಮೂರು ವರ್ಷದ ಸಂಭ್ರಮದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದಿಂದ 2015ರಲ್ಲಿ ಸ್ಮಾರ್ಟ್ ಸಿಟಿ ಘೋಷಣೆ ಆಗಿದ್ದು, ಈ ಯೋಜನೆಗೆ 46 ಸಾವಿರ ಕೋಟಿ ಹಣ ನೀಡುವುದಾಗಿ ಮೋದಿಜೀ ಹೇಳಿದ್ರು. ಆದ್ರೆ ನನ್ನ ಮಾಹಿತಿ ಪ್ರಕಾರ ಕೇಂದ್ರ ಇದುವರೆಗೂ 200 ಕೋಟಿನೂ ಕೊಟ್ಟಿಲ್ಲ. ಅದಕ್ಕಾಗಿ ಮೋದಿಯವರ ಮೂರು ವರ್ಷದ ಸಾಧನೆ ಏನೂ ಇಲ್ಲ ಎಂದ್ರು.

    ಅಲ್ಲದೇ, ಕಾಂಗ್ರೆಸ್ ಮುಖಂಡ ಎಚ್ ವಿಶ್ವನಾಥ್ ಮಾನಸಿಕವಾಗಿ ಜೆಡಿಎಸ್ ನಲ್ಲಿದ್ದಾರೆ. ಮುಂದಿನ ತಿಂಗಳು ಅಧಿಕೃತವಾಗಿ ಜೆಡಿಎಸ್ ಸೆರಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಶ್ವನಾಥ ಪರ್ಯಾಯವಲ್ಲ, ಅವರು ಹಿರಿಯ ಮತ್ತು ಪ್ರಬುದ್ಧ ರಾಜಕಾರಣಿ. ಹೀಗಾಗಿ ಅವರು ಜೆಡಿಎಸ್ ಸೇರಿದರೆ ಅಪ್ಪ ಮಕ್ಕಳ ಪಕ್ಷ ಅನ್ನೋದಾದರು ಕಡಿಮೆ ಅಗುತ್ತೆ ಅಂತಾ ಹೇಳಿದ್ರು.

    ಇದನ್ನೂ ಓದಿ: ಯಾವ ವಿಕಾಸವೂ ಆಗಿಲ್ಲ, ಅಚ್ಛೇ ದಿನ್ ಎಲ್ಲಿದೆ: ಡಿಕೆ ಶಿವಕುಮಾರ್ ಪ್ರಶ್ನೆ

    ಇದೇ ವೇಳೆ ಬಿಜೆಪಿ ಪಕ್ಷ ರಾಜ್ಯದಲ್ಲಿ ಈ ಬಾರಿ ಆಡಳಿತಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ,ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ ಮಾಡ್ತೇನೆ ಅಂತಾ ಹೇಳಿದ್ರು. ಆದ್ರೆ, ಅಧಿಕಾರಕ್ಕೆ ಬಂದ ಮೇಲೆ ಯಡ್ಡಿಯೂರಪ್ಪ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಾ ಎಂದು ವಿಧಾನ ಸಭೆಯ ಕಲಾಪದಲ್ಲಿ ಹೇಳಿದ್ರು. ಈಗ ಮತ್ತೆ ಅದೇ ರೀತಿ ರಾಗ ಎಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

    ಅಲ್ಲದೇ, ಈ ಬಾರಿಯಾದರೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ನಿಜವಾಗಿ ರೈತರ ಸಾಲ ಮನ್ನಾ ಮಾಡ್ತಾರಾ ಇಲ್ವಾ ಅನ್ನೋದು ಜನರಿಗೆ ಸ್ಪಷ್ಟಪಡಿಸಬೇಕೆಂದು ಎಚ್‍ಡಿಕೆ ಸವಾಲು ಹಾಕಿದ್ರು.

  • ಉಪ ಚುನಾವಣೆ ಗೆಲುವಿನ ಬಳಿಕ ಸಿಎಂ ಮನುಷ್ಯರ ರೀತಿ ವರ್ತಿಸುತ್ತಿಲ್ಲ: ಮಾಜಿ ಸಂಸದ ವಿಶ್ವನಾಥ್ ಟೀಕೆ

    ಉಪ ಚುನಾವಣೆ ಗೆಲುವಿನ ಬಳಿಕ ಸಿಎಂ ಮನುಷ್ಯರ ರೀತಿ ವರ್ತಿಸುತ್ತಿಲ್ಲ: ಮಾಜಿ ಸಂಸದ ವಿಶ್ವನಾಥ್ ಟೀಕೆ

    ಮೈಸೂರು: ನಾನು ರಾಜ್ಯ ಕಾಂಗ್ರೆಸ್ ನಾಯಕರ ನೆರವಿಲ್ಲದೆ ಕಾಂಗ್ರೆಸ್ ಸೇರಿದ್ದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದ ಮಾಜಿ ಸಂಸದ ಎಚ್. ವಿಶ್ವನಾಥ್, ಉಪ ಚುನಾವಣೆ ಗೆಲುವಿನ ನಂತರ ಅವರು ಮನುಷ್ಯರ ರೀತಿ ವರ್ತಿಸುತ್ತಿಲ್ಲ. ನಾನು ಎಂಬ ಅಹಂಕಾರ ಅವರನ್ನು ತುಂಬಿದೆ ಅಂತಾ ಹೇಳಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಂತಹ ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಾನೊಬ್ಬ ದೊಡ್ಡಸುಳ್ಳುಗಾರ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕರ ಸಮ್ಮತಿ ಇಲ್ಲದೆ ಯಾರು ಪಕ್ಷ ಸೇರುವುದಕ್ಕೆ ಸಾಧ್ಯವಿಲ್ಲ ಅನ್ನೋದು ಕಾಮನ್‍ಸೆನ್ಸ್. ಸಿಎಂಗೆ ಕಾಮನ್‍ಸೆನ್ಸ್ ಕೂಡ ಇಲ್ವಾ ಎಂದು ಟೀಕಿಸಿದರು. ಕೃತಜ್ಞತೆ ಅನ್ನೋದನ್ನೆ ಸಿದ್ದರಾಮಯ್ಯ ಮರೆತಿದ್ದಾರೆ ಅಂತಾ ತಿರುಗೇಟು ನೀಡಿದರು.

    ನಾನು ಸಿದ್ದರಾಮಯ್ಯ ಅವರಿಗಿಂತಾ ರಾಜಕೀಯದಲ್ಲಿ ಹಿರಿಯ. 1978 ರಲ್ಲಿ ನಾನು ಶಾಸಕನಾದೆ. ಆ ವೇಳೆ ಸಿದ್ದರಾಮಯ್ಯನವರು ತಾಲೂಕು ಬೋರ್ಡ್ ಮೆಂಬರ್ ಆಗಿದ್ದರು. ಬಹುತೇಕ ವರ್ಷ ನಾವಿಬ್ಬರು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ರಾಜಕೀಯ ಮಾಡಿದವರು. ನಂತರ, ಅವರು ಕಾಂಗ್ರೆಸ್ ಸೇರಿ ಪರಸ್ಪರ ಜೊತೆಯಾದೆವು. ರಾಜ್ಯದ ಕಾಂಗ್ರೆಸ್ ನಾಯಕರ ಶಿಫಾರಸ್ಸಿನ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದು. ಇದು ಕಾಮನ್ ಸೆನ್ಸ್, ನಿಮಗೆ ಕಾಮನ್ ಸೆನ್ಸ್ ಇದೆಯಾ ಇಲ್ಲ ನನಗೆ ಗೊತ್ತಿಲ್ಲ ಎಂದರು.

    ಆಪರೇಷನ್ ಕಮಲದಲ್ಲಿ ಸಿದ್ದರಾಮಯ್ಯ ಪಾತ್ರ ಏನೂ, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಒಂದು ಬಾರಿ ಹೆಲಿಕಾಪ್ಟರ್ ನಲ್ಲಿ ಜೊತೆಯಾಗಿ ಸುತ್ತೂರಿಗೆ ಬರುವಾಗ ಏನೇನೂ ಮಾತಾಡಿದ್ದರು ಅನ್ನೋದು ಗೊತ್ತಿದೆ. ಮುಂದಿನ ದಿನದಲ್ಲಿ ಅದು ಬಹಿರಂಗವಾಗುತ್ತೆ ಅಂತಾ ಕೂಡ ಹೊಸ ಬಾಂಬ್ ಸಿಡಿಸಿದರು.

    ಇದನ್ನೂ ಓದಿ: ಬೈ ಎಲೆಕ್ಷನ್ ಬಳಿಕ ನೀವು ಫುಲ್ ಆಕ್ಟೀವ್ ಆಗಿದ್ದೀರಿ ಎಂದು ಕೇಳಿದ್ದಕ್ಕೆ ಸಿಎಂ ಉತ್ತರಿಸಿದ್ದು ಹೀಗೆ

  • ಡಿಸೆಂಬರ್‍ನಲ್ಲಿ ಕಾಂಗ್ರೆಸ್‍ನಲ್ಲಿ ಮಹಾ ಸ್ಫೋಟವಾಗುತ್ತೆ: ಶೋಭಾ ಕರಂದ್ಲಾಜೆ

    ಡಿಸೆಂಬರ್‍ನಲ್ಲಿ ಕಾಂಗ್ರೆಸ್‍ನಲ್ಲಿ ಮಹಾ ಸ್ಫೋಟವಾಗುತ್ತೆ: ಶೋಭಾ ಕರಂದ್ಲಾಜೆ

    ಉಡುಪಿ: ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ಗೆ ಕರೆದುಕೊಂಡು ಬಂದು ಸಿಎಂ ಮಾಡಿದ್ದೇ ಎಚ್. ವಿಶ್ವನಾಥ್. ಆದ್ರೆ ಸಿದ್ದರಾಮಯ್ಯ ಏರಿದ ಏಣಿಯನ್ನು ತುಳಿಯುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸೆಂಬರ್ ನಂತರ ಕಾಂಗ್ರೆಸ್- ಜೆಡಿಎಸ್‍ನ ಹಲವು ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್‍ನ ಹಲವು ಶಾಸಕರೂ ಸಂಪರ್ಕ ಮಾಡಿದ್ದು, ಕಾಂಗ್ರೆಸ್‍ನೊಳಗೆ ಮಹಾಸ್ಫೋಟವಾಗಲಿದೆ ಎಂದು ಬಾಂಬ್ ಹಾಕಿದ್ರು.

    ಚುನಾವಣೆಗೆ ಇನ್ನೂ ಒಂದು ವರ್ಷ ಇರುವುದರಿಂದ ಬರುವ ನಾಯಕರ ಹಸರನ್ನು ಹೆಸರು ಬಹಿರಂಗಪಡಿಸುವುದಿಲ್ಲ. ಪ್ರಧಾನಿ ನರೇಂದ್ರಮೋದಿ- ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಾಯಕತ್ವ ಒಪ್ಪಿ ಪಕ್ಷಕ್ಕೆ ಒಪ್ಪಿ ಬರಲು ಹಲವರು ತಯಾರಾಗಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

    ಇದನ್ನೂ ಓದಿ- ರಾಷ್ಟ್ರ ರಾಜಕಾರಣಕ್ಕೆ ರಮ್ಯಾ: ಎಐಸಿಸಿಯಲ್ಲಿ ಸಿಕ್ತು ಹೊಸ ಹುದ್ದೆ

    ಇದೇ ಸಂದರ್ಭ ರೌಡಿ ನಾಗ ತಲೆಮರೆಸಿಕೊಂಡಿರುವ ವಿಚಾರದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಸರ್ಕಾರದಲ್ಲಿ ರೌಡಿಗಳದ್ದೇ ಮೇಲುಗೈ. ರೌಡಿಗಳು ಮತ್ತು ವಿಚಿತ್ರಕಾರಿ ಶಕ್ತಿಗಳು ಲೂಟಿ ಮಾಡಿದ ಹಣದಲ್ಲಿ ದಂಧೆ ನಡೆಯುತ್ತಿದೆ. ದಂಧೆಯ ಒಂದು ಮೂಲ ಮಾತ್ರ ರೌಡಿ ನಾಗ. ರೌಡಿ ನಾಗನಿಗೆ ರಾಜ್ಯ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕು. ಇಡಿ ಮತ್ತು ಸಿಬಿಐ ತನಿಖೆ ಮಾಡಿದರೆ ಮಾತ್ರ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.

    ಸಿಎಂ ಸಿದ್ದರಾಮಯ್ಯ- ಗೃಹಸಚಿವ ಪರಮೇಶ್ವರ್ ಸೇರಿದಂತೆ ಹಲವು ನಾಯಕರ ಹೆಸರು ರೌಡಿ ನಾಗನ ಬಾಯಲ್ಲಿ ಬಹಿರಂಗವಾಗಿದೆ. ರೌಡಿ ನಾಗನಿಗೆ ಯಾರೆಲ್ಲಾ ಬೆಂಬಲವಾಗಿ ನಿಂತಿದ್ದಾರೆ ಎಂಬ ಎಲ್ಲಾ ಸತ್ಯಗಳು ಬಹಿರಂಗವಾಗಬೇಕು ಎಂದು ಅವರು ಒತ್ತಾಯ ಮಾಡಿದರು.

  • ವಿಶ್ವನಾಥ್ ನನ್ನ ಜೊತೆ ಮಾತಾಡಿಲ್ಲ, ನಾನೂ ಅವರ ಬಳಿ ಮಾತಾಡಲ್ಲ: ಸಿಎಂ

    ವಿಶ್ವನಾಥ್ ನನ್ನ ಜೊತೆ ಮಾತಾಡಿಲ್ಲ, ನಾನೂ ಅವರ ಬಳಿ ಮಾತಾಡಲ್ಲ: ಸಿಎಂ

    ಮೈಸೂರು: ಕಾಂಗ್ರೆಸ್ ತೊರೆಯಲು ತುದಿಗಾಲಲ್ಲಿ ನಿಂತಿರುವ ಮಾಜಿ ಸಂಸದ ಎಚ್. ವಿಶ್ವನಾಥ್ ಜೊತೆ ಯಾವುದೇ ಮಾತುಕತೆ, ಸಂಧಾನ ನಡೆಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಸಿಎಂ, ವಿಶ್ವನಾಥ್ ಕೂಡ ನನ್ನ ಜೊತೆ ಮಾತಾಡಿಲ್ಲ. ನಾನೂ ಕೂಡ ವಿಶ್ವನಾಥ್ ಜೊತೆ ಮಾತಾಡಲ್ಲ. ಅವರ ರಾಜಕೀಯ ನಡೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.

    ತಮ್ಮ ವರ್ತನೆ ಸರಿ ಇಲ್ಲ ಎಂದು ವಿಶ್ವನಾಥ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ವರ್ತನೆ, ನಡವಳಿಕೆ ಸರಿ ಇದೆಯೋ ಇಲ್ಲವೋ ಎಂಬುದನ್ನು ಹೈಕಮಾಂಡ್ ಹೇಳುತ್ತೆ. ನನ್ನ ಮೇಲೆ ವಿಶ್ವನಾಥ್ ಮಾಡಿರುವ ಆರೋಪಗಳಿಗೆ ನೋ ಕಾಮೆಂಟ್ಸ್ ಅಂದ್ರು.

    ಇದೇ ವೇಳೆ ಅವರು, ತಮ್ಮ ಪುತ್ರ ಡಾ. ಯತೀಂದ್ರ ವಿರುದ್ಧ ಅದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಿರೋ ಬಗ್ಗೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತವಾದ ಸುಳ್ಳು ದೂರು. ನನ್ನ ಮಗ ಮೊದಲ ವಿದೇಶ ಪ್ರವಾಸ ಮಾಡಿದ್ದಾನೆ. ಮೊದಲ ಪ್ರವಾಸದಲ್ಲೇ ಆತ ಹೋಗಿ ಅಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾನೆ ಎಂದು ಹೇಳುವುದರಲ್ಲಿ ಅರ್ಥವಿದೆಯಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.